Connect with us

ಕ್ರೀಡೆ

ಟೀಂ ಇಂಡಿಯಾ ಟೆಸ್ಟ್‌ ತಂಡಕ್ಕೆ ‘ಪೃಥ್ವಿ ಶಾ’ ಆಯ್ಕೆ

Published

on

ಸುದ್ದಿದಿನ, ನವದೆಹಲಿ : ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮುಂಬೈನ ಯುವ ಬ್ಯಾಟ್ಸ್ ‌ಮನ್ ಪೃಥ್ವಿ ಶಾ ಇದೇ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೈದರಾಬಾದ್‌ನ ಆಟಗಾರ ಹನುಮ ವಿಹಾರಿ ಕೂಡ ಭಾರತ ತಂಡದಲ್ಲಿ ಮೊದಲ ಬಾರಿ ಸ್ಥಾನ ಸಂಪಾದಿಸಿದ್ದಾರೆ. ಮೊದಲೆರಡು ಟೆಸ್ಟ್ ಗಳಲ್ಲಿ ಎಡವಿದ್ದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಅವರನ್ನು ತಂಡದಿಂದ ಕೈಬಿಡಲಾಗಿದೆ. 3 ನೇ ಟೆಸ್ಟ್‌ ನಲ್ಲಿ ವಿಜಯ್ ಬದಲು ಶಿಖರ್ ಧವನ್, ರಾಹುಲ್ ರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಇಂಗ್ಲೆಂಡ್ ವಿರುದ್ಧದ 4 ಮತ್ತು 5ನೇ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ

ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್ ರಾಹುಲ್, ಶಿಖರ್ ಧವನ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಜಸ್‌ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಹನುಮ ವಿಹಾರಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗೆ ಹೃದಯಾಘಾತ..!

Published

on

ಸುದ್ದಿದಿನ, ದೆಹಲಿ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಹೃದಯಾಘಾತವಾಗಿದ್ದು, ಅವರು ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಪಿಲ್ ದೇವ್ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿರು ಮಾಹಿತಿ ದೊರೆತಿದೆ. ಅವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳು ಇನ್ನು ಲಭ್ಯವಾಗಬೇಕಾಗಿದೆ. ಮಾಜಿ ನಾಯಕ ಕಪಿಲ್ ದೇವ್ ಅವರು 1983ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ತಂದು ಕೊಟ್ಟಿದ್ದರು. ಕಪಿಲ್ ದೇವ್ 131 ಟೆಸ್ಟ್ ಪಂದ್ಯದಲ್ಲಿ 434 ವಿಕೆಟ್ ಪಡೆದ ಭಾರತದ ಕ್ರಿಕೆಟ್ ತಂಡದ ಮುಖ್ಯ ವೇಗಿಯಾಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಸಿ ಬಿ ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು

Published

on

ಸುದ್ದಿದಿನ,ಅಬುಧಾಬಿ: 2020 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗ 3ನೇ ಭರ್ಜರಿ ಗೆಲುವು ಸಾಧಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್‍ಗಳ ಭರ್ಜರಿ ಗೆಲುವು ಪಡೆದಿದ್ದು, ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6 ಪಾಯಿಂಟ್ ಗಳಿಸಿ ಮೊದಲ‌ ಸ್ಥಾನಕ್ಕೆ ಏರಿದೆ.

ಪಡಿಕ್ಕಲ್ (63 ರನ್), ವಿರಾಟ್ ಕೊಹ್ಲಿ (72 ರನ್) ಅರ್ಧ ಶತಕದ ನೆರವಿನಿಂದ 155 ರನ್‍ಗಳ ಗುರಿಯನ್ನು 5 ಎಸೆತ ಬಾಕಿ ಇರುವಂತೆಯೇ ಆರ್‌ಸಿಬಿ ಗುರಿ ಮುಟ್ಟಿತು. 19.1 ಓವರ್ ನಲ್ಲಿ ಕೊಹ್ಲಿ ಪಡೆ 2 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಐವರ ಬಂಧನ, ನಗದು, ಮೊಬೈಲ್ ವಶ

Published

on

ಸುದ್ದಿದಿನ,ಗದಗ : ನಗರದ ರಿಂಗ್ ರಸ್ತೆ ಬಾಲಾಜಿ ನಗರ ಕ್ರಾಸ್ ಹತ್ತಿರ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದ ಐವರನ್ನು ಸೆ.30 ರಂದು ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1.55 ಲಕ್ಷ ರೂ. ನಗದು ಹಾಗೂ ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಲಾಜಿ ನಗರದ ಶ್ರೀನಿವಾಸ ವಿಶ್ವನಾಥಸಾ ಹಬೀಬ, ಕೇಶವ ನಗರದ ಅಲ್ತಾಫ್ ಮಾಬುಸಾಬ ತಹಶೀಲ್ದಾರ, ಕಿಲ್ಲಾ ಓಣಿಯ ಸಾಗರ ನಾರಾಯಣಸಾ ಪವಾರ, ದಾಸರ ಓಣಿಯ ವಿನಾಯಕ ಭೀಮಸೇನಸಾ ಶಿದ್ಲಿಂಗ್, ಒಕ್ಕಲಗೇರಿ ಓಣಿಯ ಪ್ರಕಾಶ ಲಕ್ಷö್ಮಣಸಾ ಬದಿ ಬಂಧಿತ ಆರೋಪಿಗಳು.

ಬಂಧಿತರು ಸೆ.30 ರಂದು ಸಂಜೆ ನಡೆದ ರಾಜಸ್ತಾನ ರಾಯಲ್ಸ್ ಹಾಗೂ ಕೆಕೆಆರ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಸ್ಕೋರ್ ಮತ್ತು ಫಲಿತಾಂಶದ ಮೇಲೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಡಿಎಸ್‌ಪಿ ಪ್ರಲ್ಹಾದ ಎಸ್.ಕೆ. ಮಾರ್ಗದರ್ಶನದಲ್ಲಿ ಗದಗ ಶಹರ ಸಿಪಿಐ ಪಿ.ವ್ಹಿ.ಸಾಲಿಮಠ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ, ಸಿಬ್ಬಂದಿಗಳ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ

ದಲಿತ ಯುವತಿ ಅತ್ಯಾಚಾರ-ಕೊಲೆ | ಹೊಳಲ್ಕೆರೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆ

https://www.suddidina.com/daily-news/protest-in-holalkere/

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ3 hours ago

ಆಡಳಿತದಲ್ಲಿ ಪಾರದರ್ಶಕತೆಗೆ ಚಿತ್ರೀಕರಣ ಮಾಡಿ ಸಭೆ; ಮೆಚ್ಚುಗೆ ವ್ಯಕ್ತ

ಸುದ್ದಿದಿನ,ಬಳ್ಳಾರಿ : ರೈತರು ಹಾಗೂ ಪ್ರಾಧಿಕಾರದ ಸಹಯೋಗದೊಂದಿಗೆ 50:50 ಅನುಪಾತದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ 101.98 ಎಕರೆ ನಿವೇಶನ ಯೋಜನೆಗೆ ಕಲಂ19(1) ಅನ್ವಯ ಅಂತಿಮ...

ದಿನದ ಸುದ್ದಿ4 hours ago

ವಸತಿ ಶಾಲೆಗಳಲ್ಲಿ ಖಾಲಿ ಉಳಿದ ಸೀಟುಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಂತ ಕಟ್ಟಡ ಹೊಂದಿರುವ ಮೊರಾರ್ಜಿ...

ದಿನದ ಸುದ್ದಿ5 hours ago

‘ಬದುಕು ಬೆತ್ತಲಾದಾಗ’ ಒಂದು ರೋಚಕ ಕಥಾನಕ ಕಾದಂಬರಿ ; ಪುಸ್ತಕ ನಿಮ್ಮದಾಗಿಸಿಕೊಂಡು ಓದಿ

ಶಾಹುಲ್ ಕಾಸಿಮ್ ಮನುಷ್ಯನ ಜೀವನದಲ್ಲಿ ಕಾಲೇಜು ಜೀವನ ಅತ್ಯಂತ ಮಹತ್ವದ ಘಟ್ಟ.ವಿಧ್ಯಾಭ್ಯಾಸ ಪೂರ್ತಿಗೊಳಿಸಿ ಜೀವನದ ದಿಕ್ಕನ್ನು‌ ಬದಲಿಸಬೇಕಾದ ವಿದ್ಯಾರ್ಥಿಗಳಿಬ್ಬರು ಪ್ರೀತಿಯ‌ ಬಲೆಗೆ ಬಿದ್ದು ಕೆಟ್ಟ ಚಟಗಳ ದಾಸರಾಗಿ...

ದಿನದ ಸುದ್ದಿ1 day ago

ಯಜಮಾನಿಕೆ ಮತ್ತು ಯಜಮಾನರ ಅಧಿಪತ್ಯ

ಪ್ರತಾಪ್ ಭಾನು ಮೆಹ್ತಾ ( ಇಂಡಿಯನ್ ಎಕ್ಸ್ ಪ್ರೆಸ್ 18-11-20), ಅನುವಾದ : ನಾ ದಿವಾಕರ ರಾಜ್ಯಶಾಸ್ತ್ರದ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಬರ್ಬರತೆ ಎಂಬ ಪದವನ್ನು ಬಳಸಲಾಗುತ್ತದೆ....

ದಿನದ ಸುದ್ದಿ2 days ago

1100 ಕೋಟಿ ವೆಚ್ಚದಲ್ಲಿ ಧಾರವಾಡ ಜಿಲ್ಲೆಗೆ ಮಲಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಸುದ್ದಿದಿನ,ಹುಬ್ಬಳ್ಳಿ : ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಹಾಗೂ ರಾಜ್ಯ ಸರ್ಕಾರದ ಜಲಧಾರೆ ಯೋಜನೆಯಡಿ 1100 ಕೋಟಿ ವೆಚ್ಚದಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಮಲಪ್ರಭಾ ನದಿಯಿಂದ ಕುಡಿಯುವ ನೀರು...

ದಿನದ ಸುದ್ದಿ3 days ago

ಲೆದರ್ ಎಂಪೋರಿಯಂ ತೆರೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ಜಿಲ್ಲೆಯಲ್ಲಿ ಪ್ರಾಂಚೈಸಿ ಮೂಲಕ ಲಿಡಕರ್ ಲೆದರ್ ಎಂಪೋರಿಯಂ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಚರ್ಮ ಕುಶಲಕರ್ಮಿ ಕುಟುಂಬಗಳಿಗೆ...

ದಿನದ ಸುದ್ದಿ4 days ago

ನವಿಲೇಹಾಳ್ | ನಾಳೆ ಬಾರಾ ಇಮಾಮ್ ಮಕಾನ್ ” ಕಟ್ಟಡದ ‘ ಗುದ್ದಲಿ ಪೂಜೆ’

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್ ಗ್ರಾಮದಲ್ಲಿ “ಬಾರಾ ಇಮಾಮ್ ಮಕಾನ್ ” ಕಟ್ಟಡದ ‘ ಗುದ್ದಲಿ ಪೂಜೆ’ ಕಾರ್ಯಕ್ರಮ ದಿನಾಂಕ: 21-11-2020 ರಂದು ಶನಿವಾರ...

ಸಿನಿ ಸುದ್ದಿ5 days ago

ವಿಡಿಯೋ | ಮೂರು ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ ಕಿಚ್ಚನ ‘ಪಟಾಕಿ ಪೋರಿಯೋ’ ಹಾಡು..!

ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನೆಮಾ ‘ಕೋಟಿಗೊಬ್ಬ -3’. ಈ ಸಿನೆಮಾದ ಲಿರಿಕಲ್ ಹಾಡು ‘ಪಟಾಕಿ ಪೋರಿಯೊ’ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಮೂರು...

ದಿನದ ಸುದ್ದಿ5 days ago

ಒಂದೇ ಸೂರಿನಡಿ 750 ಸರ್ಕಾರಿ ಸೇವೆಗಳು ಗ್ರಾಮ-ಒನ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

ಸುದ್ದಿದಿನ ,ದಾವಣಗೆರೆ : ಗ್ರಾಮೀಣ ಭಾಗದ ನಾಗರೀಕರಿಗೆ ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗ್ರಾಮ-ಒನ್ ಸೇವಾ ವೇದಿಕೆಗೆ ಮಾನ್ಯ ಮುಖ್ಯಮಂತ್ರಿಗಳು ಇಂದು(ಗುರುವಾರ) ಚಾಲನೆ ನೀಡಿದರು. ದಾವಣಗೆರೆ...

ದಿನದ ಸುದ್ದಿ6 days ago

ನ. 19 ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ದಾವಣಗೆರೆ ಜಿಲ್ಲಾ ಪ್ರವಾಸ

ಸುದ್ದಿದಿನ,ದಾವಣಗೆರೆ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಸುರೇಶ್‍ಕುಮಾರ್ ಇವರು ನ.19 ರಂದು ದಾವಣಗೆರೆ ಜಿಲ್ಲಾ...

Trending