Connect with us

ಕ್ರೀಡೆ

ಟ್ರೋಲ್ ಆದ ಆಸ್ಟ್ರೇಲಿಯಾ ಕ್ರಿಕೆಟಿಗರು; ಈ ವಿಡಿಯೋ ನೀವು ನೋಡಲೇ ಬೇಕು !!

Published

on

ಸುದ್ದಿದಿನ ಡೆಸ್ಕ್ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ, ಉಪ ನಾಯಕರ ತಲೆದಂಡ ಆಗಿರುವುದು ಸದ್ಯ ಹಳೇ ಸುದ್ದಿ. ಆದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಆಟಗಾರರನ್ನು ಟ್ರೋಲ್ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಆಸ್ಟ್ರೇಲಿಯದ ರೇಡಿಯೊ ಸ್ಟೇಷನ್ ಒಂದು ತಮ್ಮ ದೇಶದ ಕ್ರಿಕೆಟ್ ತಂಡದ ಕುರಿತು ಮೇಕಿಂಗ್ ಮಾಡಿರುವ ವಿಡಿಯೋ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡಗರನ್ನು ನಗೆಗಡಲಿಗೆ ತಳ್ಳುತ್ತಿದೆ.

ಆಸ್ಟ್ರೇಲಿಯಾ ಆಟಗಾರರ ಆಟದ ವೈಖರಿ ಕುರಿತು ಹಾಸ್ಯಮಯಾಗಿ ವಿಡಿಯೋ ದಲ್ಲಿ ಟೀಕಿಸಲಾಗಿದ್ದು, ಹಲವು ಹಳೇ ಸಂಗತಿಗಳ ಕುರಿತು ಗಮನ ಸೆಳೆದಿದೆ. 1981 ರಲ್ಲಿ ವಿವಾದ ಸೃಷ್ಟಿಸಿದ್ದ ಅಂಡಾಮ್ ಬೌಲಿಂಗ್‌ ಕುರಿತು ವಿಡಿಯೋ ದಲ್ಲಿ ಆಸ್ಟ್ರೇಲಿಯಾ ಆಟಗಾರರ ಕಾಲೆಳೆಯಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಕ್ರಮಣಕಾರಿ ಬೌಲಿಂಗ್ ಮಾಡಲು ನಾಯಕ ಗ್ರೆಗ್ ಚಾಪೆಲ್ ತನ್ನ ಸಹೋದರ ಟ್ರೆವರ್ ಗೆ ಸೂಚನೆ ನೀಡಿದ ಪ್ರಸಂಗ ಕೂಡ ವಿಡಿಯೋ ದಲ್ಲಿ ಹೇಳಲಾಗಿದೆ.

ಏನಿದು ಪ್ರಕರಣ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಬ್ಯಾನ್​ಕ್ರೋಫ್ಟ್ ಚೆಂಡು ವಿರೂಪಗೊಳಿಸಿದ್ದರು. ಇದು ದೊಡ್ಡ ಮಟ್ಟದ ಸುದ್ದಿಯಾಗಿ ಕೊನೆಗೆ ನಾಯಕ ಸ್ಮಿತ್ ಸತ್ಯ ಒಪ್ಪಿಕೊಂಡಿದ್ದರು. ನಂತರ ಆಸ್ಟ್ರೇಲಿಯಾ ಸರ್ಕಾರದ ಕ್ರೀಡಾ ಸಮಿತಿ (ಎಎಸ್ ಸಿ) ನಿರ್ದೇಶನದಂತೆ ಇಬ್ಬರು ಆಟಾಗರರ ತಲೆದಂಡವಾಗಿತ್ತು.

ಸದ್ಯ ಟಿಮ್ ಪೈನ್ ಅವರಿಗೆ ತಾತ್ಕಾಲಿಕವಾಗಿ ನಾಯಕನ ಜವಾಬ್ದಾರಿ ನೀಡಲಾಗಿದೆ. ಇನ್ನು ಕೋಚ್ ಡರೇನ್ ಲೆಹ್ಮನ್ ಹಾಗೂ ಆಟಗಾರ ಬ್ಯಾನ್ ಕ್ರಾಫ್ಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಎಲ್ಲಾ ವಿಚಾರಗಳು ಸ್ವತಃ ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿವೆ. ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ವೈಖರಿ ಟೀಕಿಸುವ ವಿಡಿಯೋ ಬಂದಿದ್ದು, ಟಾಪ್ ಟ್ರೆಂಡಿಂಗ್ ನಲ್ಲಿದೆ.

ಇದನ್ನು ಓದಿ: ಚಂಡು ವಿರೂಪಗೊಳಿಸಿದ ‘ಸ್ಟೀವ್ ಸ್ಮಿತ್’ ಗೆ ಶಿಕ್ಷೆ

English summary: hilarious video mocking australian cricket team over ball tampering row goes viral

 

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಕ್ರೀಡೆ

ಐಪಿಎಲ್ ಜ್ವರ | ಕ್ರಿಕೆಟ್ ಅಭಿಮಾನಿಗಳ ಕಾತುರ..!

Published

on

ಸುದ್ದಿದಿನ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಶನಿವಾರದಿಂದ ಪ್ರಾರಂಭವಾಗಲಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ‌ ನಿಂತಿರುವುದಂತೂ ಸತ್ಯ. ಸಿಎಸ್ಕೆ ವರ್ಸಸ್ ಎಂಐ ಆರಂಭಿಕ ಪಂದ್ಯವು ಶನಿವಾರ ಸಂಜೆ 7:30 ಕ್ಕೆ ಶುರುವಾಗಲಿದೆ. ಪಂದ್ಯಕ್ಕೆ ಕೇವಲ ಕೆಲವೇ ಗಂಟೆಗಳು ಮಾತ್ರ ಉಳಿದಿವೆ.

ಐಪಿಎಲ್ ಅನ್ನು‌ ಈ ಬಾರಿ ಕೊರೋನಾ ಕಾರಣಕ್ಕೆ ದೇಶದ ಹೊರಗೆ ಆಯೋಜಿಸಲಾಗಿದ್ದರೂ, ಜಾಗತಿಕ ಸಾಂಕ್ರಾಮಿಕ ರೋಗದ ಮದ್ಯೆಯೂ ಕ್ರಿಕೆಟ್ ಅಭಿಮಾನಿಗಳು ತಮ್ಮ ಮನೆಗಳಲ್ಲಿಯೇ ಕೂತು ನೋಡುವ ಸಂತಸಕ್ಕೆ ಕಾಯುತ್ತಿದ್ದಾರೆ.

ಸಂಜೆ ಟೂರ್ನಮೆಂಟ್ ಓಪನರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

Continue Reading

ಕ್ರೀಡೆ

ಸತತ ಮೂರನೇ ವರ್ಷ ಮೈಸೂರಿನ ಝೂನಲ್ಲಿ ಚಿರತೆ ದತ್ತು ಪಡೆದ ವೇದಾ ಕೃಷ್ಣಮೂರ್ತಿ; ಟೀಂ ಇಂಡಿಯಾ ಆಟಗಾರ್ತಿಗೆ ಸೈ ಎಂದ ನೆಟ್ಟಿಗರು

Published

on

ಮೈಸೂರು: ಸತತ ಮೂರನೇ ವರ್ಷ ಕೂಡ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿನ ಚಿರತೆಯೊಂದನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ದತ್ತು ಪಡೆದಿದ್ದಾರೆ.

ಈ ಕುರಿತು ವೇದಾ ಕೃಷ್ಣಮೂರ್ತಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರು ಮೃಗಾಲಯಕ್ಕೆ ಇತ್ತೀಚೆಗೆ ಅವರು ಭೇಟಿ ನೀಡಿದ್ದರು. ಆಗ ಚಿರತೆಯೊಂದನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದ ಕ್ರೀಡಾ ಪೋಷಕರನ್ನು ಗುರುತಿಸಿ ಗೌರವಿಸಲು ಅವರಿಗೆ “ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ” ಯನ್ನು ನೀಡಲಾಗುತ್ತಿದೆ.

ಅರ್ಹ ಕ್ರೀಡಾ ಪೋಷಕರು ಸೆ.16 ರೊಳಗೆ ಅರ್ಜಿಯನ್ನು ಕಚೇರಿಗೆ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ದೂ.ಸಂ: 08192-237480ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ9 mins ago

ರೂತ್ ಗ್ರಿನ್ಸ್ ಬರ್ಗ್ : ಸಾವಿನಲ್ಲೂ ಪಡೆದ ಸ್ತ್ರೀ ಸಮಾನತೆ..!

ಸಿ.ಎಸ್.ದ್ವಾರಕಾನಾಥ್ ಇದೇ ಸಪ್ಟೆಂಬರ್ 18 ನೇ ತಾರೀಖು ಬೆಳಿಗ್ಗೆ ಆರು ಗಂಟೆಗೆಲ್ಲ ಅಮೆರಿಕದಿಂದ ರೆಡ್ಡಿ ಪೋನ್ ಮಾಡಿ ಸುಮ್ಮನೇ ಒಂದೇ ಸಮ ಬೈಯ್ಯತೊಡಗಿದ!? ಇಲ್ಲಿನ ಬೆಳಿಗ್ಗೆ ಅಮೆರಿಕದಲ್ಲಿ...

ದಿನದ ಸುದ್ದಿ8 hours ago

ದಾವಣಗೆರೆ | ಸಿಎಂ‌‌ ಯಡಿಯೂರಪ್ಪ ಫೋಟೋ ಗೆ ಚಪ್ಪಲಿಯಿಂದ ಹೊಡೆಯುವುದರ ಮೂಲಕ ರೈತ ಸಂಘಟನೆಗಳ ಆಕ್ರೋಶ : ವಿಡಿಯೋ ನೋಡಿ

ಸುದ್ದಿದಿನ, ದಾವಣಗೆರೆ : ಎಪಿಎಂಸಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧ ಬಂದ್‌ ಹಿನ್ನೆಲೆ ಸೋಮವಾರ ನಗರದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡಿಸಿದವು. ಸಿಎಂ ಯಡಿಯೂರಪ್ಪ ಅವರ ಫೋಟೋಗೆ...

ದಿನದ ಸುದ್ದಿ10 hours ago

ಅಂತರ್ರಾಷ್ಟ್ರೀಯ ರೇಬೀಸ್ ದಿನಾಚರಣೆ 2020: ಸಹಯೋಗದೊಂದಿಗೆ ಲಸಿಕೆ ಹಾಕಿಸಿ ತಡೆಗಟ್ಟೋಣ

ಡಾ||.ಕಮಲೇಶ್ ಕುಮಾರ್ ಕೆ ಎಸ್, ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ ರೇಬೀಸ್ (Rabies) ಒಂದು ವೈರಾಣುವಿನಿಂದ (Virus) ಹರಡುವ ಮಾರಕ ಖಾಯಿಲೆಯಾಗಿದ್ದು ಇದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು...

ದಿನದ ಸುದ್ದಿ14 hours ago

ಹೊಳಲ್ಕೆರೆ | ಎರಡು ವರ್ಷದ ಕಂದಮ್ಮನ ಹೊಡೆದು ಕೊಂದ ಮಂತ್ರವಾದಿ ; ಅಮಾನವೀಯ ಕೃತ್ಯ ಎಸಗಿದ ಪಾಪಿ..!

ಸುದ್ದಿದಿನ,ಹೊಳಲ್ಕೆರೆ: ಅಪ್ಪ,‌ ಅಮ್ಮನ ಮಡಿಲಿನಲ್ಲಿ ಸುಖವಾಗಿದ್ದ ಎರಡು ವರ್ಷದ ಕಂದಮ್ಮ ಮಂತ್ರವಾದಿಯ ಅಮಾನವೀಯ ಕೃತ್ಯಕ್ಕೆ ಬಲಿಯಾಗಿದೆ. ಎರಡು ವರ್ಷದ ಹೆಣ್ಣು ಮಗುವನ್ನು ಮಂತ್ರವಾದಿ ಕೊಲಿನಿಂದ ಹೊಡೆದು ಸಾಯಿಸಿದ್ದು,...

ಅಂತರಂಗ1 day ago

ಅಬ್ಬಬ್ಬಾ..! ಇದು ಭಾರತೀಯ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಕಾದಂಬರಿ

ರವಿ ಕೃಷ್ಣ ರೆಡ್ಡಿ “ಹಿಂದೂ: ಬದುಕಿನ ಸಮೃದ್ಧ ಅಡಕಲು“. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮರಾಠಿ ಲೇಖಕ ಡಾ.ಭಾಲಚಂದ್ರ ನೇಮಾಡೆ’ಯವರ 600+ ಪುಟಗಳ ದೀರ್ಘ ಕಾದಂಬರಿ, ಉದ್ಗ್ರಂಥ....

ದಿನದ ಸುದ್ದಿ1 day ago

ನೀಲು ಕಾವ್ಯ

ಪಿ. ಲಂಕೇಶ್ 1 ಹೃದಯದ ಗುಟ್ಟುಗಳನ್ನು ಇನಿಯನಿಗೆ ಕೂಡ ಬಿಟ್ಟುಕೊಡಲಾರದ ನನ್ನ ಕಣ್ಣುಗಳನ್ನು ವಂಚಿಸಿ ನನ್ನ ಲೇಖನಿ ಹಾಡಿ ಕುಣಿಯುವುದು 2 ಪ್ರೀತಿಸುವ ಇಬ್ಬರು ಮೌನವಾಗಿ ಕೂತು...

ದಿನದ ಸುದ್ದಿ1 day ago

‘ಪೈಸಾ ವಸೂಲ್’ ಕಲಾಪ..!

ದಿನೇಶ್ ಅಮಿನ್ ಮಟ್ಟು , ಹಿರಿಯ ಪತ್ರಕರ್ತರು ನಾನು ಕಳೆದ ಏಳು ವರ್ಷಗಳಲ್ಲಿ , ಅದರಲ್ಲಿ ಮುಖ್ಯವಾಗಿ ಮೊದಲ ಐದು ವರ್ಷ ವಿಧಾನಮಂಡಲದ ಕಲಾಪಗಳನ್ನು ಸಮೀಪದಿಂದ ನೋಡಿದ್ದೇನೆ,...

ದಿನದ ಸುದ್ದಿ2 days ago

ಕೆಟಿಜೆ ನಗರದಲ್ಲಿ ಪೊಲೀಸ್ ಉಪಠಾಣೆ ಮಾಡಲು ಮನವಿ

ಸುದ್ದಿದಿನ, ದಾವಣಗೆರೆ : ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುತ್ತಿದ್ದ ಪ.ಜಾತಿ. ಪ.ಪಂಗಡದ ಕುಂದುಕೊರತೆ ಸಭೆಯನ್ನು ಉಪವಿಭಾಗ ಮಟ್ಟದಲ್ಲಿ ನಡೆಸಲಾಗುವುದು ಎಂದು ಎಸ್.ಪಿ ಹನುಮಂತರಾಯ ತಿಳಿಸಿದರು. ಶನಿವಾರ ಸಭೆಯ ಪ್ರಾರಂಭದಲ್ಲಿ...

ದಿನದ ಸುದ್ದಿ2 days ago

ಅನಧಿಕೃತ ಮದ್ಯದಂಗಡಿಗಳ ತೆರವಿಗೆ ಕ್ರಮ : ಎಸ್.ಪಿ ಹನುಮಂತರಾಯ

ಸುದ್ದಿದಿನ ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುತ್ತಿದ್ದ ಪ.ಜಾತಿ. ಪ.ಪಂಗಡದ ಕುಂದುಕೊರತೆ ಸಭೆಯನ್ನು ಉಪವಿಭಾಗ ಮಟ್ಟದಲ್ಲಿ ನಡೆಸಲಾಗುವುದು ಎಂದು ಎಸ್.ಪಿ ಹನುಮಂತರಾಯ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ...

ದಿನದ ಸುದ್ದಿ2 days ago

ದಾವಣಗೆರೆ | ಕೋವಿಡ್ ಭಯಬೇಡ ಎಚ್ಚರವಿರಲಿ ಜಾಗೃತಿ ಟ್ಯಾಬ್ಲೋಗೆ ಜಿಲ್ಲಾಧಿಕಾರಿ ಚಾಲನೆ

ಸುದ್ದಿದಿನ,ದಾವಣಗೆರೆ : ಶನಿವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಕೊರೊನಾ ಬಗ್ಗೆ ಜಾಗೃತಿ...

Trending