Connect with us

ಕ್ರೀಡೆ

ವೆಸ್ಟ್ ಇಂಡೀಸ್ ಪ್ರವಾಸದಿಂದ ಎಂ.ಎಸ್.ಧೋನಿ ಔಟ್ : ಮೂವರು ಕನ್ನಡಿಗರಿಗೆ ಸಿಕ್ತು ಚಾನ್ಸ್..!

Published

on

ಸುದ್ದಿದಿನ,ಮುಂಬೈ : ಆಗಸ್ಟ್ 3ರಿಂದ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಎರಡು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಿಗಾಗಿ ಭಾರತೀಯ ತಂಡವನ್ನು ಇಂದು ಪ್ರಕಟಿಸಲಾಗಿದೆ.

ವಿರಾಟ್ ಕೊಹ್ಲಿ ಈ ತಂಡವನ್ನು ಮುನ್ನಡೆಸಲಿದ್ದು, ಧೋನಿ ರಜೆಯಲ್ಲಿರುವ ಕಾರಣ ರಿಷಭ್ ಪಂತ್ ಅವರಿಗೆ ವಿಕೆಟ್ ಕೀಪರ್ ಸ್ಥಾನ ನೀಡಲಾಗಿದೆ.
ವೇಗಿ ಜಸ್ಪ್ರೀತ್ ಬೂಮ್ರಾಗೆ ಏಕದಿನ ಹಾಗೂ ಟಿ-20 ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ.

ಟೆಸ್ಟ್ ಮ್ಯಾಚ್

ವಿರಾಟ್ ಕೊಹ್ಲಿ ( ನಾಯಕ) ರಹಾನೆ ( ಉಪನಾಯಕ) ಮಾಯಾಂಕ್ ಅಗರ್ ವಾಲ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಬ್ ಪಂತ್ ( ವಿಕೆಟ್ ಕೀಪರ್ ) ವೃದ್ದಿಮನ್ ಸಹಾ ( ವಿಕೆಟ್ ಕೀಪರ್ ) ಆರ್. ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪೀತ್ ಬೂಮ್ರಾ, ಉಮೇಶ್ ಯಾದವ್

ಏಕದಿನ ಪಂದ್ಯ

ವಿರಾಟ್ ಕೊಹ್ಲಿ ( ನಾಯಕ ) ರೋಹಿತ್ ಶರ್ಮಾ ( ಉಪನಾಯಕ) ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ಸ್ ಅಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್ ( ವಿಕೆಟ್ ಕೀಪರ್ ) ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಕೇದಾರ್ ಜಾದವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ , ನವದೀಪ್ ಸೈನಿ

ಟಿ-20 ಪಂದ್ಯಗಳಿಗೆ ಟೀಂ ಇಂಡಿಯಾ

ವಿರಾಟ್ ಕೊಹ್ಲಿ ( ನಾಯಕ ) ರೋಹಿತ್ ಶರ್ಮಾ ( ಉಪನಾಯಕ) ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ಸ್ ಅಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್ ( ವಿಕೆಟ್ ಕೀಪರ್ ) ಕೃನಾಲ್ ಪಾಂಡೆ, ಜಡೇಜಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಾಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಾಹರ್, ನವದೀಪ್ ಸೈನಿ.

ಕೃಪೆ : ಜಸ್ಟ್ ನ್ಯೂಸ್ ಕನ್ನಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಐಪಿಎಲ್ ಜ್ವರ | ಕ್ರಿಕೆಟ್ ಅಭಿಮಾನಿಗಳ ಕಾತುರ..!

Published

on

ಸುದ್ದಿದಿನ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಶನಿವಾರದಿಂದ ಪ್ರಾರಂಭವಾಗಲಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ‌ ನಿಂತಿರುವುದಂತೂ ಸತ್ಯ. ಸಿಎಸ್ಕೆ ವರ್ಸಸ್ ಎಂಐ ಆರಂಭಿಕ ಪಂದ್ಯವು ಶನಿವಾರ ಸಂಜೆ 7:30 ಕ್ಕೆ ಶುರುವಾಗಲಿದೆ. ಪಂದ್ಯಕ್ಕೆ ಕೇವಲ ಕೆಲವೇ ಗಂಟೆಗಳು ಮಾತ್ರ ಉಳಿದಿವೆ.

ಐಪಿಎಲ್ ಅನ್ನು‌ ಈ ಬಾರಿ ಕೊರೋನಾ ಕಾರಣಕ್ಕೆ ದೇಶದ ಹೊರಗೆ ಆಯೋಜಿಸಲಾಗಿದ್ದರೂ, ಜಾಗತಿಕ ಸಾಂಕ್ರಾಮಿಕ ರೋಗದ ಮದ್ಯೆಯೂ ಕ್ರಿಕೆಟ್ ಅಭಿಮಾನಿಗಳು ತಮ್ಮ ಮನೆಗಳಲ್ಲಿಯೇ ಕೂತು ನೋಡುವ ಸಂತಸಕ್ಕೆ ಕಾಯುತ್ತಿದ್ದಾರೆ.

ಸಂಜೆ ಟೂರ್ನಮೆಂಟ್ ಓಪನರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

Continue Reading

ಕ್ರೀಡೆ

ಸತತ ಮೂರನೇ ವರ್ಷ ಮೈಸೂರಿನ ಝೂನಲ್ಲಿ ಚಿರತೆ ದತ್ತು ಪಡೆದ ವೇದಾ ಕೃಷ್ಣಮೂರ್ತಿ; ಟೀಂ ಇಂಡಿಯಾ ಆಟಗಾರ್ತಿಗೆ ಸೈ ಎಂದ ನೆಟ್ಟಿಗರು

Published

on

ಮೈಸೂರು: ಸತತ ಮೂರನೇ ವರ್ಷ ಕೂಡ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿನ ಚಿರತೆಯೊಂದನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ದತ್ತು ಪಡೆದಿದ್ದಾರೆ.

ಈ ಕುರಿತು ವೇದಾ ಕೃಷ್ಣಮೂರ್ತಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರು ಮೃಗಾಲಯಕ್ಕೆ ಇತ್ತೀಚೆಗೆ ಅವರು ಭೇಟಿ ನೀಡಿದ್ದರು. ಆಗ ಚಿರತೆಯೊಂದನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದ ಕ್ರೀಡಾ ಪೋಷಕರನ್ನು ಗುರುತಿಸಿ ಗೌರವಿಸಲು ಅವರಿಗೆ “ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ” ಯನ್ನು ನೀಡಲಾಗುತ್ತಿದೆ.

ಅರ್ಹ ಕ್ರೀಡಾ ಪೋಷಕರು ಸೆ.16 ರೊಳಗೆ ಅರ್ಜಿಯನ್ನು ಕಚೇರಿಗೆ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ದೂ.ಸಂ: 08192-237480ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ3 hours ago

ಯುಪಿಯಲ್ಲಿ ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ-ಕೊಲೆ : ಇಬ್ಬರ ಬಂಧನ

ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಇನ್ನೊಂದು ಜಿಲ್ಲೆಯಾದ ಬಲರಾಮ್‍ಪುರದಲ್ಲಿ ಮತ್ತೋರ್ವ ದಲಿತ ಯುವತಿ ಅತ್ಯಾಚಾರಕ್ಕೊಳಗಾಗಿ, ತೀವೃ ಗಾಯಗಳೊಂದಿಗೆ ಮೃತಪಟ್ಟಿದ್ದಾಳೆ. ಬಲರಾಮ್ ಪುರದ ಗ್ರೈಸಿ ಪೋಲಿಸ್ ಠಾಣೆಯ...

ದಿನದ ಸುದ್ದಿ4 hours ago

ನಮ್ಮ ನ್ಯಾಯಾಲಯಗಳು ಇತರೆ ಚಿಲ್ಲರೆ ಕೇಸುಗಳಲ್ಲಿ ಎಷ್ಟು ಜಬರ್ದಸ್ತ್ ಆಗಿರುತ್ತವೆ ನೋಡಿ..!

ಪಂಜು‌ ಗಂಗ್ಗೊಳ್ಳಿ, ವ್ಯಂಗ್ಯ ಚಿತ್ರಕಾರರು ಮುಂಬೈಯ ಕುರ್ಲಾದ 19 ವರ್ಷ ಪ್ರಾಯದ ಆಲೀಂ ಪಟೇಲ್ ಮಾಹೀಂ ಎಂಬಲ್ಲಿ ಕಾರು ಸೀಟುಗಳನ್ನು ಹೊಲಿಯುವ ಕೆಲಸ ಮಾಡಿ ಅವನ ಕುಟುಂಬದ...

ದಿನದ ಸುದ್ದಿ4 hours ago

ಕೊರೋನಾ ಪಾಸಿಟಿವ್ ವರದಿ ಕೊಟ್ಟ ಲ್ಯಾಬ್ ಟೆಕ್ನೀಶಿಯನ್ ಮೇಲೆ ಸೋಂಕಿತನಿಂದ ಹಲ್ಲೆ

ಸುದ್ದಿದಿನ, ಹಾಸನ : ಜಿಲ್ಲೆಯ, ಅರಸೀಕೆರೆ ತಾಲೂಕಿನ ದೊಡ್ಡ ಮೇಟಿಕುರ್ಕಿ ಗ್ರಾಮದಲ್ಲಿ ಸೆಪ್ಟೆಂಬರ್ 17 ನೇ ತಾರೀಖಿನಂದು ಗ್ರಾಮದ ಮಂಜುನಾಥ್‍‌ ಎಂಬುವವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ,...

ದಿನದ ಸುದ್ದಿ5 hours ago

ಕವಿತೆ | ಚರಗ ಚಲ್ಲುತ್ತಿದ್ದಾರೆ..!

ಸುರೇಶ ಎನ್ ಶಿಕಾರಿಪುರ ಅವಳು ಸಾಕ್ಷಿ ಹೇಳಬಾರದಲ್ಲ? ಅದಕ್ಕೆ, ಅವಳ ನಾಲಗೆ ಕತ್ತರಿಸಿ ಎಸೆದರು. ಅವಳು ತಮ್ಮ ಹೆಸರು ಬರೆಯಬಾರದಲ್ಲ? ಅದಕ್ಕೇ, ಅವಳ ಕೋಮಲ ಕೈಗಳನ್ನು ಲಟಲಟನೆ...

ದಿನದ ಸುದ್ದಿ5 hours ago

ಪೊಲೀಸರಿಂದ ಕಾನೂನಿನ ಅತ್ಯಾಚಾರ

ದಿನೇಶ್ ಅಮಿನ್ ಮಟ್ಟು ಹತ್ರಾಸ್ ನಲ್ಲಿ ಮೇಲ್ಜಾತಿಯ ದುರುಳರಿಂದ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಯುವತಿಯ ಅಂತ್ಯಕ್ರಿಯೆಯನ್ನು ಪೊಲೀಸರು ತಂದೆ-ತಾಯಿಗೆ ಮಗಳ ಮುಖವನ್ನೂ ನೋಡಲು ಅವಕಾಶ ನೀಡದೆ ಅವಸರದಲ್ಲಿ ನಡುರಾತ್ರಿಯೇ...

ದಿನದ ಸುದ್ದಿ6 hours ago

ದಾವಣಗೆರೆ ವಿವಿ 7ನೇ ವಾರ್ಷಿಕ ಘಟಿಕೋತ್ಸವ :56 ಪಿಹೆಚ್‍ಡಿ-62 ಚಿನ್ನದ ಪದಕ

ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದ 7ನೇ ವಾರ್ಷಿಕ ಘಟಿಕೋತ್ಸವ ಬುಧವಾರ ಇಲ್ಲಿನ ವಿವಿ ಕ್ಯಾಂಪಸ್‍ನ ಶಿವಗೊಂಗೋತ್ರಿ ಆವರಣದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ ಸರಳವಾಗಿ ನಡೆಯಿತು. ಸಮಾರಂಭದಲ್ಲಿ 56...

ದಿನದ ಸುದ್ದಿ7 hours ago

ಸಿಎಂ ಮಗನ ಭ್ರಷ್ಟಾಚಾರದ ವೃತ್ತಾಂತ : ಪವರ್ ಟಿವಿ ಬಂದ್ ಹಿಂದಿನ ಒಳ ರಾಜಕೀಯ

ದಿನೇಶ್ ಅಮೀನ್ ಮಟ್ಟು ಪವರ್ ಟಿವಿ ಚಾನೆಲ್ ಗೆ ಸಂಬಂಧಿಸಿದ ಬೆಳವಣಿಗೆಗಳಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಚಾನೆಲ್ ವರದಿ ಮಾಡಿರುವ ಭ್ರಷ್ಟಾಚಾರದ ಹಗರಣ, ಎರಡನೆಯದು ಟಿವಿ ಚಾನೆಲ್...

ದಿನದ ಸುದ್ದಿ9 hours ago

ದಾವಣಗೆರೆ | ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಸುದ್ದಿದಿನ,ದಾವಣಗೆರೆ: ಕರ್ನಾಟಕ ವಿಧಾನಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಸಂಬಂಧ ವೇಳಾಪಟ್ಟಿಯನ್ನು ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಿಸಿದ್ದಾರೆ. ವಿಧಾನಪರಿಷತ್ತಿನ ಕರ್ನಾಟಕ ಆಗ್ನೇಯ...

ಅಂತರಂಗ9 hours ago

ಮನಿಶಾ : ಅನ್ಯಾಯದ ಘೋರ ಸಾವು

ಡಾ.ಎಚ್.ಎಸ್.ಅನುಪಮಾ ಸಾವಿರ ಕನಸುಗಳಿದ್ದ ತರುಣಿ ಮನಿಶಾಳ ದೇಹದ ಮೇಲೆ ನಡೆದ ಅತಿ ಘೋರ ಹಿಂಸೆ, ಆ ಅನ್ಯಾಯದ ಸಾವು, ಬಡಹೆಣ್ಣುಗಳ ಬಗೆಗೆ ರಕ್ಷಕ ವ್ಯವಸ್ಥೆಗಿರುವ ಕಣ್ಣಿಗೆ ರಾಚುವಂತಹ...

ದಿನದ ಸುದ್ದಿ20 hours ago

ಹೋರಾಟದ ಕಿಚ್ಚು ಈಗಷ್ಟೇ ಆರಂಭವಾಗಿದೆ, ಇದು ಇಲ್ಲಿಗೆ ನಿಲ್ಲುವುದಿಲ್ಲ : ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ

ಸುದ್ದಿದಿನ,ಬೆಂಗಳೂರು : ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಈ ಕ್ಷೇತ್ರಗಳಿಗೆ ಪಕ್ಷದ ಪರವಾಗಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು,...

Trending