Connect with us

ಕ್ರೀಡೆ

‘ವಿದ್ಯಾರ್ಥಿ ಮಿತ್ರ ಕಿರಣ್’ ಕಂಡಂತೆ ಕ್ರಿಸ್ ಗೇಲ್!

Published

on

ಮ್ ಕಾವೇರಿ ಕೂಲ್ ಆಗಿದ್ಲು ಆದ್ರೆ ಈ ಭದ್ರಾ ಮಾತ್ರ ಭಯಂಕರ ಬಿಸಿ.. ಏನು ಅಂತಿರಾ , ಸಿಲ್ಕ್ ಸಿಟಿ ಇಂದ ಮ್ಯಾಂಚೆಸ್ಟರ್‌ ಸಿಟಿ ಗೆ ಕೆಲಸ ಹುಡಿಕೊಂಡು ಬಂದಿದಾಯ್ತು.. ಅಲ್ಲಿನ್ ತಂಪಾಗಿರೋ ನೆಲಕ್ಕು ಇಲ್ಲಿನ್ ಬಿಸಿಲಿನ್ ನೆಲಕ್ಕೂ ಅಡ್ಜಸ್ಟ್ ಆಗಕ್ಕೆ ನಂಗೆ ಟೈಮ್ ಬೇಕು.. ಇವತ್ ಯಾಕೋ ಕಾಣೆ ಸ್ವಲ್ಪವೇ ಸ್ವಲ್ಪಮಟ್ಟಿಗೆ ಬೇಜಾರ್ ಆಗ್ತಿತ್ತು.. ದಿನಕ್ ಎರಡೆರಡು ಸರಿ ಸ್ನಾನ ಮಾಡ್ಬೇಕು ಅಂತಾನೋ ಅಥವಾ ದಾವಣಗೆರೆ ಬಿಸಿಲಲ್ಲಿ ಎಲ್ಲೂ ಅಲ್ಯಕ್ಕೆ ಆಗಲ್ಲ ಅಂತಾನೋ ಗೊತ್ತಿಲ್ಲ…

ಹಿಂಗೆ ಫ್ರೆಂಡ್ ಜೊತೆ ಆಚಿಗ್ ಬಂದಿದ್ ಆಯ್ತು, ಗೂಡಲ್ಲೇ ಇದ್ದ ಗುಬ್ಬಿ ಮರಿ ತರ ಒಳಗಡೆನೆ ಇದ್ದೆ.. ಬೆಣ್ಣೆನಗರಿ ಕನ್ನಡ ಪುಸ್ತಕದ ಮಳಿಗೆಗೆ ಅಂಗೆ ಬೇಡದ್ ಮನಸಲ್ಲಿ ಒಳಗಡೆ ಹೋಗಿದ್ ಆಯ್ತು.. ಆದ್ರೆ ಅಲ್ಲಿನ್ ಹುಡುಗರು ಬುಕ್ಸ್ ವ್ಯಾಪಾರ ಮಾಡದ್ ಬಿಟ್ಟು ಐಪಿಎಲ್ ಮ್ಯಾಚ್ ನೋಡ್ಕೊಂಡು ಕುಂತಿದ್ರು.. ನಾನು ಇರ್ಲಿ ನಂದು ಒಂದು ಅಂತಾ ಆ ಕಡೆನೆ ಕಣ್ಣಾಯ್ಸ್ದೆ… ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮ್ಯಾಚ್..

ನಮ್ ಮಾಗಡಿ ಹುಡುಗ ಕೆ ಎಲ್ ರಾಹುಲ್ ಬ್ಯಾಟ್ ಇಡ್ಕೊಂಡು ಕ್ರೀಸ್ ಗೆ ಎಂಟ್ರಿ ಆದ ಜೊತೆಲೆ ಬ್ಲಾಕ್ ಬೆರ್ರಿ, ಆರಡಿ ಕಟೌಟ್ ಕೂಡ ಒಂಟಿ ಸಲಗದ ತರ ಕಾಣಿಸ್ತಿತ್ತು…
ಮ್ಯಾಚ್ ಸ್ಟಾರ್ಟ್ ಆದಾಗ ಇವನ್ ಯಾಕ್ ಬಂದ ಗುರು ಅಂತಾ ಬೈಯ್ಕೋತ್ತಿದ್ದೆ.. ಆದ್ರೆ 4ನೇ ಓವರ್ ನಲ್ಲಿ ವಿಕೇಟ್ ಕೀಪರ್ ಒಂದ್ ಲೈಪ್ ಜಾಕೇಟ್ ಕೊಟ್ಮೇಲೆ ಶುರುವಾಯ್ತು ನೋಡಿ.. ಬಾರ್ಸಿದೆಲ್ಲಾ ಸೀರುಂಡೆನೇ…

ಅವನ್ ಹೊಡ್ಯೋ ಬಾಲು ಬೌಡರಿ ದಾಡುತ್ತ ಅಂತ ಅನ್ಕೊತ್ತಿದ್ದೆ ಆದ್ರೆ ಆ ಒಂದೊಂದು ಶಾಟ್ಸ್ ಕೂಡ ನಿಂತಿದ್ ಅಂಪೈರ್ ಎರಡು ಕೈನೂ ಆಕಾಶ ನೋಡ್ತಿತ್ತು… ಆಹಾ ಪಾಪ ಅದೇನ್ ಪಾಪ ಮಾಡಿದ್ರೊ ಈ ಬೌಲರ್ ಗಳು ಇವತ್ತು ಯಾರೆ ಬರ್ಲಿ ಬಂದೋರ್ಗೆಲ್ಲಾ ಬಾರ್ಸಿದೆಲ್ಲಾ ಸಿಕ್ಸರ್ ಗಳೆ…

ನಂಬರ್ ಒನ್ ಟಿ 2೦ ಸ್ಪಿನ್ ಬೌಲರ್ ಅಂತಾ ಕರ್ಸ್ಕೊಂಡಿದ್ ರಶಿದ್ ಖಾನ್ ಅಂತು ಇವತ್ ಫುಲ್ ರೋಸಿ ಹೋದ್ರು…

ಹಾಕೊ ಬಾಲ್ ನೆಲ್ಲಾ ಆನ್ ಸೈಡ್ ಗೆ ಸಿಕ್ಸರ್ ಆಗೆ ಹೋಗ್ತಿದ್ದೋ… ಬ್ಯಾಟ್ ಎತ್ತಿ ಬಿಸ್ದಾ ಅಂದ್ರೆ ಮುಗಿತ್ತು…ಸ್ಟ್ರೈಟ್ ಹಿಟ್ ಸಿಕ್ಸರ್ ಗಳ ಸುರಿಮಳೆನೆ ಇವತ್ತಿನ್ ಮ್ಯಾಚ್ ನಲ್ಲೂ ಕೂಡ ಆಗಿದ್ದು ಅದೇನೆ…
ಬರೀ ಸಿಕ್ಸರ್ ಗಳ ಮಳೆ..

ಲಾಸ್ಟ್ ಸೀಸನ್ ಐಪಿಎಲ್ ನಲ್ಲಿ ಸರ್ಯಾಗ್ ಆಡ್ಲಿಲ್ಲ ಅಂತಾ ಈ ಟೈಮ್ ಬಿಕಾರಿನೆ ಆಗಿರ್ಲಿಲ್ಲಾ.. ಆದ್ರೆ ಲಾಸ್ಟ್ ಬಟ್ ನಾಟ್ ಲೀಸ್ಟ್ ಅನ್ನೋ ತರ ಪ್ರೀತಿ ಕಣ್ಣಿಗ್ ಬಿದ್ದ … ಇವತ್ತಿನ್ ಮ್ಯಾಚ್ನಲ್ಲಿ ಯಾರು ತಿಳಿಯರು ನನ್ನ ಭುಜ ಬಲದ ಪರಾಕ್ರಮ ಅಂತಾ , ಅವತ್ ನೆಗ್ಲೇಟ್ ಮಾಡಿದ್ದೋರ್ಗೆಲ್ಲಾ ಬ್ಯಾಟ್ ನಿಂದಲ್ಲೆ ಮುಟ್ ನೋಡ್ಕೋಳಂಗೆ ಕೊಟ್ರು…

ಆರಂಭದಲ್ಲಿ ಅಬ್ಬರ ಮಾಡ್ಲಿಲ್ಲ ಆದ್ರೆ ಸಿಕ್ಕಿದ್ ಒಂದ್ ಲೈಪ್‌ನಲ್ಲಿ, ನಮ್ ಕನ್ನಡದ ಹುಡುಗ , ರಾಹುಲ್ ಜೊತೆ ಇನ್ನಿಂಗ್ ಸ್ಟಾರ್ಟ್ ಮಾಡಿ, ಇನ್ನೊಬ್ಬ ನಮ್ ಹುಡುಗ ಕರುಣ್ ಜೊತೆ ಹೈದರಾಬಾದ್ ಬೌಲರ್ ಗಳಿಗೆ ಬೆವರಿಳಿಸಿದ್ರು.. 11 ಹಿಟ್ ಸಿಕ್ಸರ್ , ಸಿಂಗಲ್ ಬೌಡರಿ ಜೊತೆ 58ಬಾಲ್ನಲ್ಲಿ ಸೆಂಚುರಿ ಸಿಡ್ಸುದ್ರು… ಆಡಿದ್ 63ಬಾಲ್ ನಲ್ಲಿ 104 ರನ್ ಸ್ಟಿಲ್ ಮೋಸ್ಟ್ ವಾಂಟೆಡ್ ನಾಟೌಟ್ …

ಸಿಕ್ಸರ್ ನಲ್ಲಿ ಬಾರ್ಸಿದ್ ರನ್ನಿಂದನೆ ಹಾಪ್ ಸೆಂಚುರಿ ರೆಕಾರ್ಡ್ ಇತ್ತು… ..
ಇನ್ನೂ ಇವರ್ ಯಾರು ಅಂತಾ ನಾನ್ ಹೇಳಿಲ್ಲ ಅಂದ್ರೂ ನಿಮ್ಗೆ ಗೊತ್ತಾಗಿರುತ್ತೆ ಬಿಡಿ…ಇವರೆ.. ಒನ್ ಅಂಡ್ ಓನ್ಲಿ ಯುನಿವರ್ಸಲ್ ಬಾಸ್ , ಕೆರಿಬಿಯನ್ ಕಿಂಗ್ ಕೋಬ್ರಾ ಕ್ರಿಸ್ ಗೇಲ್.‌‌….

1979 ಸೆಪ್ಟೆಂಬರ್ 21 ರಲ್ಲಿ ಜಮೈಕಾದ ಬಡ ಕುಟುಂಬದಲ್ಲಿ ಭೂಮಿ ಗೆ ಕಾಲಿಟ್ರು ಈ ಆರಡಿ ಕಟೌಟ್ .. ಸ್ಕೂಲ್ ಡೇಸ್ ಇಂದಾನು ಬಾಸ್ ಗೆ ಇವರ್ದೆ ಆದ ಕ್ರಿಕೆಟ್ ಸ್ಟೈಲ್… ಫೈನಲಿ 19 ವರ್ಷ ಕ್ಕೆ 1998ರಲ್ಲಿ ಟೀಮ್ ಇಂಡಿಯಾ ವಿರುದ್ದನೇ ಕ್ರಿಕೆಟ್ ಗೆ ತಮ್ ಎಡಗೈ ಇಟ್ರು ನೋಡಿ… ಇವಾಗ್ಲೂ ಕೂಡ್ ಇಂಡಿಯಾನೆ ನನ್ ಎರಡನೆ ತವರು ಮನೆ ಅಂತಾ ಹೇಳಿದ್ದುಂಟು…

ಸ್ಪಾನ್ಸರ್ ಷಿಪ್ ಮಾತಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ನ‌ ಕೆಂಗಣ್ಣಿಗೆ ಬಿದ್ದಿದ್ ಗೇಲ್ ಕಣ್ಣಿಗ್ ಬಿದ್ದಿದ್ ಇದೆ ನಮ್ ಮದರ್ ಇಂಡಿಯಾ…

ಐಪಿಎಲ್ ನಲ್ಲಿ ಸಿಕ್ಸ್ ಸೆಂಚುರಿ ಬಾರ್ಸಿರೋ ಕೆರಿಬಿಯನ್‌ ಸಿದ್ದು ನ ಕೈ ಹಿಡಿದಿದ್ದು ಇದೆ ಇಂಡಿಯನ್ ಪ್ರೀಮಿಯರ್ ಲೀಗ್‌… ಕೇವಲ ಕ್ರಿಸ್ ಗೇಲ್ ಮಾತ್ರ ಅಲ್ಲ ಎಸ್ಟೋ ವೆಸ್ಟ್ ಇಂಡೀಸ್ ಆಟಗಾರರು ಕೂಡ ಇವತ್ ಇಂಡಿಯಾನ ನೆನಿತಾರೆ.. ಕಿರಾನ್ ಪೊಲಾರ್ಡ, ಬ್ರಾವೋ,ಇಂತ ಎಷ್ಟೋ ಜನದ್‌ ಲೈಪ್ ನೀಡಿದ್ದು ಇದೆ ಐಪಿಎಲ್..

ಅವಾಗ ಕ್ರಿಸ್ ಗೇಲ್ ಹೇಳಿಕೊಳ್ಳೊ ಮ್ಯಾಚ್ ಸ್ಟಾರ್ಟ್ ರ್ ಆಗಿಲ್ಲ ಅಂದ್ರು ಕೂಡ ಬರ್ತಾ ಬರ್ತಾ ಓಪನರ್ ಆಗಿ ತಮ್ಮ ರನ್ ಖಾತೆನ ಓಪನ್ ಮಾಡಿದ್ರು…

ಇನ್ನು ಹೇಳನ್ನ ಅಂದ್ರೆ ಟೈಪಿಂಗ್ ಸಾಲಲ್ಲ ಆದ್ರೂ ಸಾರ್ಟ್ ಹಾಗೆ ಆಗಿ ಹೇಳ್ತೀನಿ‌ ಕೇಳಿ .

ಟೆಸ್ಟ್ ಮ್ಯಾಚ್‌ನಲ್ಲಿ ಫಸ್ಟ್ ಬಾಲ್ ನಲ್ಲೆ ಫಸ್ಟ್ ಸಿಕ್ಸರ್ ಬಾರ್ಸಿದ್ ಮಾಂತ್ರಿಕ ಇದೆ ಕೆರಿಬಿಯನ್‌ ಕಲಿ..

ಟೆಸ್ಟ್‌ ಮ್ಯಾಚ್ ನಲ್ಲಿ ತ್ರಿಬಲ್ ಸೆಂಚುರಿ… ಇಲ್ಲಿ ತನಕ ಬಾರ್ಸಿರದು ಕೇವಲ ನಾಲ್ಕೇ ಜನ ಅದ್ರಲ್ಲಿ ಈ ಆರಡಿ ಕೂಡ ಒಂದು…

ವರ್ಡ್ ಕಪ್‌ನ ಒನ್ ಡೇ ಮ್ಯಾಚ್ ನಲ್ಲಿ , ಡಬಲ್ ಸೆಂಚುರಿ ಸಿಡ್ಸಿದ್ ಫಸ್ಟ್ ಬ್ಯಾಟ್ಸ್ ಮ್ಯಾನ್ ..

ಚೋಟಾ ಬಾಂಬ್ ಟಿ 20 ವಿಶ್ವ ಕಪ್ ನಲ್ಲಿ ನಲ್ಲಿ ಮೊದಲ ಸೆಂಚುರಿ ಪೇರ್ಸಿದ್ದು ಇದೆ ಸಿಕ್ಸರ್ ಸಿದ್ದು…

ಆಡಿದ್ ಮೂರು ಫಾರ್ಮಾಟ್ ನಲ್ಲೂ ಸೆಂಚುರಿ ಬಾರ್ಸಿರೋ ದಾಂಡಿಗ್ರಲ್ಲಿ ಗೇಲ್ ಕೂಡ ಒಬ್ಬ ಕ್ರಿಕೇಟ್ ನ ಗ್ಯಾಂಗ್ ಸ್ಟಾರ್…

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಗೆ ಬಂದ್ ಮೇಲೆ ಸ್ಪಲ್ಪ ಜಾಸ್ತಿ ಕಾಣಿಸ್ಕೊಂಡ್ರು ಅದ್ರಲ್ಲೂ ಆಂಗ್ರಿ ಯಂಗ್ ಮ್ಯಾನ್ ವಿರಾಟ್ ಜೊತೆ ಓಪನ್ ಮಾಡ್ತಿದ್ ಗೇಲ್ ನ , ಅದೆ ಬೆಂಗಳೂರನ ಮಲ್ಯ ಬಿಟ್ಟಂಗೆ ಆರ್ ಸಿಬಿ ಇಂದಾನೆ ಇವತ್ ಗೇಲ್ ನ ಕೈ ಬಿಟ್ಟಿದ್ರು…

ಒಂದು ಟಿ20 ಮ್ಯಾಚ್ ಸ್ಕೋರ್‌ನ ಐಪಿಎಲ್ ನಲ್ಲಿ ಒಬ್ನೆ ಹಸಿದ ಹೆಬ್ಬುಲಿ ತರ 175*ರನ್ ಬಾರ್ಸಿದ್ದು ಇದೆ ಯುನಿವರ್ಸ ಬಾಸ್ ಕ್ರಿಸ್ ಗೇಲ್ …

ಗ್ರೌಂಡಲ್ಲಿ ಕೇವಲ ಸಿಕ್ಸ ಹೊಡ್ಯಕ್ ಮಾತ್ರ ಬರುತ್ತೆ ಅನ್ಕೋ ಬೇಡಿ , ತನ್ನದೆ ಸಿಗ್ನೇಚರ್ ಸ್ಟೇಪ್ಸ್ ಇಂದ ಆನ್ ಗ್ರೌಡಲ್ಲೇ ಡ್ಯಾನ್ಸ್ ಮಾಡಿ ಕ್ರಿಕೆಟ್ ಲವರ್ಸಗಳನ ರಂಜಿಸಿದ್ದಾರೆ… ಏನೆ ಆಗ್ಲಿ ರೀ ಇಂಗೆ ಕ್ರಿಕೆಟ್ ನೆ ದೇವರು ಅನ್ಕೊಂಡು ಪೂಜೆ ಮಾಡ್ತಿರೋ ಹುಡುಗರ್ಗೆಲ್ಗೆಲ್ಲಾ ಹಿಂಗೇ ಎಂಟರ್ಟೈನ್ಮೆಂಟ್ ನೀಡ್ಲಿ ಅನ್ನದೆ ನನ್ ಆಶಯ…

ವಿದ್ಯಾರ್ಥಿಮಿತ್ರಕಿರಣ್  ಪತ್ರಕರ್ತ,ಮಾಗಡಿ

 

 

 

ಕ್ರೀಡೆ

ಐಪಿಎಲ್ ಜ್ವರ | ಕ್ರಿಕೆಟ್ ಅಭಿಮಾನಿಗಳ ಕಾತುರ..!

Published

on

ಸುದ್ದಿದಿನ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಶನಿವಾರದಿಂದ ಪ್ರಾರಂಭವಾಗಲಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ‌ ನಿಂತಿರುವುದಂತೂ ಸತ್ಯ. ಸಿಎಸ್ಕೆ ವರ್ಸಸ್ ಎಂಐ ಆರಂಭಿಕ ಪಂದ್ಯವು ಶನಿವಾರ ಸಂಜೆ 7:30 ಕ್ಕೆ ಶುರುವಾಗಲಿದೆ. ಪಂದ್ಯಕ್ಕೆ ಕೇವಲ ಕೆಲವೇ ಗಂಟೆಗಳು ಮಾತ್ರ ಉಳಿದಿವೆ.

ಐಪಿಎಲ್ ಅನ್ನು‌ ಈ ಬಾರಿ ಕೊರೋನಾ ಕಾರಣಕ್ಕೆ ದೇಶದ ಹೊರಗೆ ಆಯೋಜಿಸಲಾಗಿದ್ದರೂ, ಜಾಗತಿಕ ಸಾಂಕ್ರಾಮಿಕ ರೋಗದ ಮದ್ಯೆಯೂ ಕ್ರಿಕೆಟ್ ಅಭಿಮಾನಿಗಳು ತಮ್ಮ ಮನೆಗಳಲ್ಲಿಯೇ ಕೂತು ನೋಡುವ ಸಂತಸಕ್ಕೆ ಕಾಯುತ್ತಿದ್ದಾರೆ.

ಸಂಜೆ ಟೂರ್ನಮೆಂಟ್ ಓಪನರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

Continue Reading

ಕ್ರೀಡೆ

ಸತತ ಮೂರನೇ ವರ್ಷ ಮೈಸೂರಿನ ಝೂನಲ್ಲಿ ಚಿರತೆ ದತ್ತು ಪಡೆದ ವೇದಾ ಕೃಷ್ಣಮೂರ್ತಿ; ಟೀಂ ಇಂಡಿಯಾ ಆಟಗಾರ್ತಿಗೆ ಸೈ ಎಂದ ನೆಟ್ಟಿಗರು

Published

on

ಮೈಸೂರು: ಸತತ ಮೂರನೇ ವರ್ಷ ಕೂಡ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿನ ಚಿರತೆಯೊಂದನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ದತ್ತು ಪಡೆದಿದ್ದಾರೆ.

ಈ ಕುರಿತು ವೇದಾ ಕೃಷ್ಣಮೂರ್ತಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರು ಮೃಗಾಲಯಕ್ಕೆ ಇತ್ತೀಚೆಗೆ ಅವರು ಭೇಟಿ ನೀಡಿದ್ದರು. ಆಗ ಚಿರತೆಯೊಂದನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದ ಕ್ರೀಡಾ ಪೋಷಕರನ್ನು ಗುರುತಿಸಿ ಗೌರವಿಸಲು ಅವರಿಗೆ “ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ” ಯನ್ನು ನೀಡಲಾಗುತ್ತಿದೆ.

ಅರ್ಹ ಕ್ರೀಡಾ ಪೋಷಕರು ಸೆ.16 ರೊಳಗೆ ಅರ್ಜಿಯನ್ನು ಕಚೇರಿಗೆ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ದೂ.ಸಂ: 08192-237480ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ3 hours ago

ಮನಿಷಾ ಅತ್ಯಚಾರ-ಕೊಲೆ : ಆದಿತ್ಯನಾಥನ ಸರ್ಕಾರದಲ್ಲಿ ಹೆಚ್ಚುತ್ತಿವೆ ಅಪರಾಧಗಳು

ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಹತ್ರಾಸ್ ನಗರದಲ್ಲಿ 19 ವರ್ಷದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಮೇಲೆ ನಾಲ್ಕು ಮಂದಿ ಸವರ್ಣೀಯ ಯುವಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಆಕೆ...

ದಿನದ ಸುದ್ದಿ13 hours ago

ಕೊರೋನ ಕಾಲದಲ್ಲಿ ಹೃದಯವನ್ನು ಕಾಪಾಡಿ..!

ಶ್ರೀನಿವಾಸ ಕಕ್ಕಿಲಾಯ ಕೊರೋನ ಸೋಂಕಿನ ನೆಪದಲ್ಲಿ ಆಗಿರುವ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಕೊರೋನ ಸೋಂಕಿಗೆ ಹೊರತಾದ ಇತರ ಸಮಸ್ಯೆಗಳನ್ನು ಹೊಂದಿರುವವರಿಗೆ, ಅದರಲ್ಲೂ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಆದವರಿಗೆ, ತುರ್ತು...

ದಿನದ ಸುದ್ದಿ13 hours ago

ಪವರ್ ಟಿವಿ ಪ್ರಸಾರ ಸ್ಥಗಿತ : ರಾಜ್ಯ ಸರ್ಕಾರದ ವಿರುದ್ಧ ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘ ಆಕ್ರೋಶ

ಸುದ್ದಿದಿನ,ದಾವಣಗೆರೆ : ಪವರ್ ಟಿವಿ ಮೇಲೆ ದಬ್ಬಾಳಿಕೆ ಹಿನ್ನಲೆ ದಾವಣಗೆರೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಉಪವಿಭಾಗ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯನಿರತ...

ದಿನದ ಸುದ್ದಿ20 hours ago

ಮಾಧ್ಯಮ ಸ್ವಾತಂತ್ರ್ಯದ ಗುಂಗಿನಲ್ಲಿ

ನಾ ದಿವಾಕರ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ಹಿಂಜರಿಯುವಷ್ಟು ಮಟ್ಟಿಗೆ ಸುದ್ದಿ ಮಾಧ್ಯಮಗಳು ತಮ್ಮ ಬೌದ್ಧಿಕ ನೆಲೆಯನ್ನು ಕಳೆದುಕೊಂಡಿವೆ. ಯಾವುದೇ ಸಂದರ್ಭದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲದೆ...

ದಿನದ ಸುದ್ದಿ1 day ago

ಸುದ್ದಿಮನೆಯ ಪ್ರಾಮಾಣಿಕತೆ, ಸರ್ಕಾರದ ಭ್ರಷ್ಟಾಚಾರ

ನಾ ದಿವಾಕರ ಕನ್ನಡದ ಸುದ್ದಿಮನೆಗಳು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹತೆ ಕಳೆದುಕೊಂಡಿವೆ ಎಂದರೆ ಅವುಗಳು ಬಿತ್ತರಿಸುವ ವಾಸ್ತವಗಳನ್ನೂ ಜನರು ನಂಬುವುದಿಲ್ಲ. ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಅಧಿಕಾರ...

ದಿನದ ಸುದ್ದಿ2 days ago

ಟಿ. ನರಸೀಪುರ : ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ

ಸುದ್ದಿದಿನ,ಟಿ. ನರಸೀಪುರ: ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೋರಣೆಯನ್ನು ಖಂಡಿಸಿ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದ ಹಿನ್ನಲೆ ಪಟ್ಟಣದಲ್ಲಿ ಉತ್ತಮ...

ದಿನದ ಸುದ್ದಿ2 days ago

ಎಲ್ಲ ರೀತಿಯಿಂದ ದೊಡ್ಡವರು ‘ಜಿ.ಎಸ್.ಆಮೂರ’

ಜಿ ಎಸ್ ಆಮೂರ ಎಲ್ಲ ರೀತಿಯಿಂದಲೂ ದೊಡ್ಡವರು. ಕಳೆದ ಮೇ ತಿಂಗಳಲ್ಲಿ 95 ಮುಗಿಸಿ ನೂರರೆಡೆಗೆ ಹೆಜ್ಜೆ ಹಾಕುತ್ತಿದ್ದರು. ಕನ್ನಡಕ್ಕೆ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ (ಸಂಬಂಧ, ಕೊಡುಗೆ,...

ದಿನದ ಸುದ್ದಿ2 days ago

ರೂತ್ ಗ್ರಿನ್ಸ್ ಬರ್ಗ್ : ಸಾವಿನಲ್ಲೂ ಪಡೆದ ಸ್ತ್ರೀ ಸಮಾನತೆ..!

ಸಿ.ಎಸ್.ದ್ವಾರಕಾನಾಥ್ ಇದೇ ಸಪ್ಟೆಂಬರ್ 18 ನೇ ತಾರೀಖು ಬೆಳಿಗ್ಗೆ ಆರು ಗಂಟೆಗೆಲ್ಲ ಅಮೆರಿಕದಿಂದ ರೆಡ್ಡಿ ಪೋನ್ ಮಾಡಿ ಸುಮ್ಮನೇ ಒಂದೇ ಸಮ ಬೈಯ್ಯತೊಡಗಿದ!? ಇಲ್ಲಿನ ಬೆಳಿಗ್ಗೆ ಅಮೆರಿಕದಲ್ಲಿ...

ದಿನದ ಸುದ್ದಿ2 days ago

ದಾವಣಗೆರೆ | ಸಿಎಂ‌‌ ಯಡಿಯೂರಪ್ಪ ಫೋಟೋ ಗೆ ಚಪ್ಪಲಿಯಿಂದ ಹೊಡೆಯುವುದರ ಮೂಲಕ ರೈತ ಸಂಘಟನೆಗಳ ಆಕ್ರೋಶ : ವಿಡಿಯೋ ನೋಡಿ

ಸುದ್ದಿದಿನ, ದಾವಣಗೆರೆ : ಎಪಿಎಂಸಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧ ಬಂದ್‌ ಹಿನ್ನೆಲೆ ಸೋಮವಾರ ನಗರದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡಿಸಿದವು. ಸಿಎಂ ಯಡಿಯೂರಪ್ಪ ಅವರ ಫೋಟೋಗೆ...

ದಿನದ ಸುದ್ದಿ2 days ago

ಅಂತರ್ರಾಷ್ಟ್ರೀಯ ರೇಬೀಸ್ ದಿನಾಚರಣೆ 2020: ಸಹಯೋಗದೊಂದಿಗೆ ಲಸಿಕೆ ಹಾಕಿಸಿ ತಡೆಗಟ್ಟೋಣ

ಡಾ||.ಕಮಲೇಶ್ ಕುಮಾರ್ ಕೆ ಎಸ್, ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ ರೇಬೀಸ್ (Rabies) ಒಂದು ವೈರಾಣುವಿನಿಂದ (Virus) ಹರಡುವ ಮಾರಕ ಖಾಯಿಲೆಯಾಗಿದ್ದು ಇದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು...

Trending