Connect with us

ರಾಜಕೀಯ

ದಾವಣಗೆರೆ ಮತದಾರ ಹೊಸ ಮುಖ ಬಯಸಿದ್ರೆ ‘ಹೊನ್ನಾಳಿ ಹೊಡೆತ’ ಗ್ಯಾರೆಂಟಿ.. !

Published

on

ಸುದ್ದಿದಿನ,ದಾವಣಗೆರೆ: ನಿರಂತರ ಮೂರು ಸೋಲು, ಮೂರು ಗೆಲುವಿಗೆ ವೇದಿಕೆಯಾದ ದಾವಣಗೆರೆ ಲೋಕಸಭಾ ಕ್ಷೇತ್ರ, ಇದೀಗ ಹೊಸ ಮುಖ ಬಯಸಿದರೆ ರಾಜ್ಯದ ಜನತೆಗೆ ‘ಹೊನ್ನಾಳಿ ಹೊಡೆತ’ ಇನ್ನಷ್ಟು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು, ಇದೀಗ ನಾಲ್ಕನೇ ಬಾರಿಗೆ ಆಯ್ಕೆ ಬಯಸಿರುವ ಜಿಎಂ ಸಿದ್ದೇಶ್ವರ್ ಅವರಿಗೆ ಸಾಂಪ್ರದಾಯಿಕ ಎದುರಾಳಿ ಎಸ್ ಎಸ್ ಮಲ್ಲಿಕಾರ್ಜನ್ ಕಣದಲ್ಲಿ ಇಲ್ಲ. ಕಳೆದ ಮೂರು ಭಾರಿ ಆಯ್ಕೆಯಲ್ಲೂ ಅಲೆಗಳ ಮೇಲೆ ಗೆದ್ದವರು ಎನ್ನುವುದು ಜನಜನಿತ. ಒಮ್ಮೆ ತಂದೆಯ ಸಾವಿನ ಅನುಕಂಪದ ಅಲೆ, ಇನ್ನೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂಪ್ಪ ಅವರ ಅಲೆ ಹಾಗೂ ಮೂರನೇ ಬಾರಿ ಪ್ರಧಾನಿ ಮೋದಿಯವರ ಅಬ್ಬರದ ಅಲೆಯಲ್ಲಿ ಹ್ಯಾಟ್ರಿಕ್ ಮಾಡಿದರು. ಅಲ್ಲದೆ ಕೇಂದ್ರ ಸಚಿವರು ಆಗಿದ್ದರು. ಅಷ್ಟೇ ಬೇಗ ಸ್ಥಾನವನ್ನೂ ಕಳೆದುಕೊಂಡರು ಎನ್ನುವುದು ಈಗ ಇತಿಹಾಸ.‌ ಆದರೆ, ಇದೀಗ ನಾಲ್ಕನೇ ಬಾರಿಯೂ ಜನ ಕೈ ಹಿಡಿಯುವ ಸಾಧ್ಯತೆ ಕಡಿಮೆ ಎನ್ನುವ ಉದ್ದೇಶದಿಂದ ಹಳ್ಳಿ ಸುತ್ತಿದ್ದಾರೆ. ಅಬ್ಬರದ ಪ್ರಚಾರವೂ ಕೈಗೊಂಡಿದ್ದಾರೆ.

ಎಸ್. ಎಸ್. ಮಲ್ಲಿಕಾರ್ಜುನ್ ಕಣದಿಂದ ಹಿಂದಕ್ಕೆ

ಮೂರು ಬಾರಿ ಹ್ಯಾಟ್ರಿಕ್ ಸೋಲಿಂದ ಧೃತಿಗೆಡದೆ ಕೊನೆ ಪ್ರಯತ್ನಕ್ಕೆ ಮುಂದಾದ ಎಸ್ ಎಸ್ ಎಂ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ, ಅವರ ಆಪ್ತ ಎಚ್ ಬಿ ಮಂಜಪ್ಪ ಅವರನ್ನು ಕಣಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇತ್ತ ಸಿದ್ದೇಶ್ವರ್ ನನಗೆ ಪೈಪೋಟಿ ನೀಡುವ ಎದುರಾಳಿ ಇಲ್ಲ, ಎಸ್ ಎಸ್ ಎಂ ಎದುರಾಳಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಊರು ಸುತ್ತಿದ್ದು ನಷ್ಟವಾಯಿತು ಎನ್ನುವಂತ ಸ್ಥಿತಿಗೆ ಬಂದಿದ್ದು ಸುಳ್ಳಲ್ಲ.

ಹೊನ್ನಾಳಿ ಹೊಡೆತ ?

ಅತಿಯಾದ ಆತ್ಮವಿಶ್ವಾಸದಿಂದ ಒಂದು ಹಂತದಲ್ಲಿ ಸುತ್ತಾಟ ಕಡಿಮೆ ಮಾಡಿದ ಬಿಜೆಪಿ ಅಭ್ಯರ್ಥಿಗೆ ಎಚ್ ಬಿ ಮಂಜಪ್ಪ ಸುತ್ತಾಟ, ಅವರ ತಂತ್ರ, ಮೈತ್ರಿ ಧರ್ಮ, ಅಹಿಂದ ಸಂಘಟನೆ ರಾಜಕೀಯ ವಿಶ್ಲೇಷಕರು, ಇಂಟಲಿಜೆನ್ಸ್ ವರದಿಗಳು ಹೊನ್ನಾಳಿ ಹೊಡೆತದ ಸೂಚನೆ ನೀಡಿದ್ದು ಮತ್ತೆ ಪ್ರಚಾರ ಚುರುಕುಗೊಳಿಸುವಂತೆ ಮಾಡಿದೆ.

ಮಂಜಪ್ಪ ಕಡಿಮೆ ಅವಧಿಯಲ್ಲಿ ಜಿಲ್ಲಾದ್ಯಂತ ಪ್ರವಾಸ ಮಾಡುವುದನ್ನೆ ಸವಾಲಾಗಿ ಸ್ವೀಕರಿದ್ದಾರೆ. ಇನ್ನು ಟಿಕೆಟ್ ಘೋಷಣೆ ಆರಂಭದಿಂದಲೇ ಹಣ ಬಲದ ವಿರುದ್ಧ ಬಡವನ ಹೋರಾಟ, ಅಹಿಂದ, ಮೈತ್ರಿ ತಂತ್ರದಡಿ ಅಲ್ಪಸಂಖ್ಯಾತ, ಹಿಂದುಳಿದ ದಲಿತ ಸಮುದಾಯಗಳ ವಿಶ್ವಾಸಕ್ಕೆ ಪಡೆಯುವ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಹರಿಹರದಲ್ಲಿ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್, ಹಾಲಿ ಶಾಸಕ ರಾಮಪ್ಪ ಒಂದೇ ವೇದಿಕೆಯಲ್ಲಿ ಸುತ್ತಾಡುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಜೆಡಿಎಸ್ ಮುಖಂಡ ಕೊಟ್ರೇಶ್, ದಿ. ಎಂಪಿ ರವೀಂದ್ರ ಅಭಿಮಾನಿಗಳು, ಜಗಳೂರಲ್ಲಿ ಎಚ್ ಪಿ ರಾಜೇಶ್, ಮೈತ್ರಿ ಟೀಮ್, ಚನ್ನಗಿರಿಯಲ್ಲಿ ವದ್ದಿಗೆರೆ ರಮೇಶ್, ವಡ್ನಾಳ್ ರಾಜಣ್ಣ, ಮಯಕೊಂಡದಲ್ಲಿ ಬಸವಂತಪ್ಪ, ಹೊನ್ನಾಳಿಯಲ್ಲಿ ಶಾಂತನಗೌಡ್ರು ಹಾಗೂ ಮೈತ್ರಿ ಟೀಮ್ ಹಾಗೂ ಸ್ಥಳೀಯ ಎನ್ನುವ ತಂತ್ರ ಪ್ರಯೋಗ ಮಾಡಲಾಗುತ್ತಿದೆ. ಸಿದ್ದೇಶ್ವರ್ ಹೊರಗಿನವರು, ಮಂಜಪ್ಪ ಸ್ಥಳೀಯ ಎನ್ನುವ ವಿಷಯ ಮುನ್ನೆಲೆಗೆ ಬಂದಿದೆ. ಸಿದ್ದೇಶ್ವರ್ ಗೆ ೧೫ ವರ್ಷ ಅಧಿಕಾರ ಕೊಟ್ಟಿದ್ದೀರಿ. ಈ ಬಾರಿ ಸ್ಥಳೀಯ ಮಂಜಪ್ಪನಿಗೆ ಅವಕಾಶ ಮಾಡಿಕೊಡುವಂತೆ ಒತ್ತಿ ಒತ್ತಿ ಪ್ರಚಾರ ಮಾಡಲಾಗುತ್ತಿದೆ.

ಮಂಜಪ್ಪ ಸಹಿತ ಮೈತ್ರಿ ತಂಡ ತಾಲೂಕುವಾರು ಸುತ್ತಾಟ ಮಾಡುತ್ತಿದ್ದರೆ, ಇತ್ತ ಎಸ್ ಎಸ್ ಎಂ, ಎಸ್ಎಸ್ ದಾವಣಗೆರೆ ನಗರದಲ್ಲಿ ಆಯ್ದ ಗ್ರಾಮಗಳಲ್ಲೂ ರೋಡ್ ಶೋ ಮಾಡುತ್ತಿದ್ದಾರೆ. ಕಾರ್ಮಿಕ ಮುಖಂಡ ಎಚ್ ಕೆ ರಾಮಚಂದ್ರಪ್ಪ, ಜೆಡಿಎಸ್ ಗುಡ್ಡಪ್ಪ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಅಹಿಂದ ಮುಖಂಡರು ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರು ವಾರ್ಡವಾರು, ತಮ್ಮ ಭೂತ್ ಮಟ್ಟದಲ್ಲಿ ಸಕ್ರಿಯವಾಗಿರುವುದು ಎದುರಾಳಿ ನಿದ್ದೆ ಕೆಡಿಸುವಂತಾಗಿದೆ.

ಮತದಾರರೇ ಹಣ ಕೊಟ್ರು…!

ಮಂಜಪ್ಪ ಊರು ಸುತ್ತಲು ವಾಹನ ವ್ಯವಸ್ಥೆ, ಚುನಾವಣಾ ಖರ್ಚಿಗೆ ಮತದಾರರೇ ಹಣ ನೀಡುತ್ತಿರುವುದು ಇನ್ನೊಂದು ವಿಶೇಷವಾಗಿದ್ದು, ಬಿಜೆಪಿಯಲ್ಲಿ ಹಣದ ಕೊರತೆ ಇಲ್ಲ, ಆದರೆ, ದೂರವಿದ್ದ ನಾಯಕರು ಮುನ್ನೆಲೆಗೆ ಬಂದಿದ್ದಾರೆ. ಮಂಜಪ್ಪ ಅಭ್ಯರ್ಥಿ ಆದ ಕೂಡಲೇ ಅದೇ ಸಮಾಜ ಹಾಗೂ ಅಹಿಂದ ಮುಖಂಡರಾದ ಬಿ ಎಂ ಸತೀಶ್, ಜಯಪ್ರಕಾಶ್, ಲಿಂಗರಾಜ್, ಶಿವಕುಮಾರ್ ರಂಥ ಆನೇಕರು ಮುನ್ನೆಲೆಗೆ ಬರುತ್ತಿದ್ದಾರೆ. ಒಟ್ಟಾರೆ ಏಕಮುಖವಾದ ಕಣ ಇದೀಗ ನೇರ ಹಣಾಹಣಿಯಾಗಿದೆ. ಬಿಜೆಪಿ, ಕಾಂಗ್ರೆಸ್ ಯಾರೇ ಗೆದ್ದರೂ ಅಲ್ಪ ಅಂತರವಷ್ಟೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಿಸಾನ್ ಸಮ್ಮಾನ್ ಯೋಜನೆ : 17 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ

Published

on

ಸುದ್ದಿದಿನ,ದೆಹಲಿ: ಕೃಷಿ ವಲಯಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಕೃಷಿ ಮೂಲಸೌಕರ್ಯ ನಿಧಿಗೆಯಡಿ ಅನುದಾನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ರೈತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ 1 ಲಕ್ಷ ಕೋಟಿ ರೂಪಾಯಿಯ ಈ ಯೋಜನೆಗೆ ಚಾಲನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ ಪ್ರಧಾನಿ ಮೋದಿ ಇದಲ್ಲದೆ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 6ನೇ ಕಂತು ಸಹ ಬಿಡುಗಡೆ ಮಾಡಿದರು. 8.55 ಕೋಟಿ ರೈತರಿಗೆ 6ನೇ ಕಂತಿನ 17,100 ಕೋಟಿ ರೂಪಾಯಿ ಹಣವನ್ನ ಬಿಡುಗಡೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ..? : ಆಸ್ಪತ್ರೆಯಲ್ಲಿದ್ದುಕೊಂಡೇ ಸರ್ಕಾರವನ್ನ ಪ್ರಶ್ನಿಸಿದ ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು: ಕಳೆದರಡು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ, ಏರುತ್ತಿರುವ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕಾಗಿರುವ ಸರ್ಕಾರ‌ ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬೆಂಗಳೂರಿನ ಮಣಿಪಾಲ್ ಆಸತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಅವರು, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲಿಯೂ ಮಳೆಯಿಂದಾಗಿ ಜನ ಪ್ರವಾಹದ ಭೀತಿಯಲ್ಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅವರಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಎಚ್ಚರಿಸಿದ್ದಾರೆ.

ಆಸ್ಪತ್ರೆಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಹಿರಿಯ ಸಹದ್ಯೋಗಿಗಳಿಗೆ ಜವಾಬ್ದಾರಿ ಹಂಚಿ ಅತಿವೃಷ್ಟಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಲು ವ್ಯವಸ್ಥೆ ಮಾಡಬೇಕು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕಳಿಸಿ ಪ್ರತ್ಯಕ್ಷದರ್ಶಿ ವರದಿಯನ್ನು ತರಿಸಿಕೊಳ್ಳಬೇಕು ಎಂದಿದ್ದಾರೆ.

ರಾಜ್ಯದ ಕಂದಾಯ ಸಚಿವರೂ ಕ್ವಾರಂಟೈನ್‌ಗೊಳಗಾಗಿದ್ದಾರೆಂದು ಹೇಳಲಾಗುತ್ತಿದೆ.
ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯದಲ್ಲಿ ಕಂದಾಯ ಇಲಾಖೆಯ ಜವಾಬ್ದಾರಿ‌ ಹೆಚ್ಚಿರುವುದರಿಂದ ಪೂರಕ ವ್ಯವಸ್ಥೆ ಮಾಡುವ ಬಗ್ಗೆ ಮುಖ್ಯಮಂತ್ರಿ ಅವರು ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಕಳೆದ ವರ್ಷದ ಆಗಸ್ಟ್-ಅಕ್ಟೋಬರ್ ತಿಂಗಳ ಪ್ರವಾಹದಿಂದ ಜನತೆ ಇನ್ನೂ ಚೇತರಿಸಿಕೊಂಡಿಲ್ಲ.‌‌ ಹಳೆಯ ಹಾನಿಯ ಪರಿಹಾರ ಕಾರ್ಯವೇ ಇನ್ನೂ ಪೂರ್ಣಗೊಂಡಿಲ್ಲ. ನಿರಂತರವಾಗಿ ಈ ಬಗ್ಗೆ ನಾವು ಎಚ್ಚರಿಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ರಾಜ್ಯ ಸರ್ಕಾರದ ಈ ನಿರ್ಲಕ್ಷಕ್ಕೆ ಅಮಾಯಕ ಜನ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿ.ಎಸ್.ಯಡಿಯೂರಪ್ಪ ಅವರ ಸಿಎಂ ಕುರ್ಚಿ ಮೇಲೆ ವರಿಷ್ಠರ ಕಣ್ಣು ; ದನಿಯೆತ್ತಲಿದೆಯೇ ಲಿಂಗಾಯತ ಸಮುದಾಯ  

Published

on

ಸುದ್ದಿದಿನ,ಬೆಂಗಳೂರು: ಸದ್ಯ ರಾಜ್ಯದಲ್ಲಿ ‘ಮುಖ್ಯಮಂತ್ರಿ’ ಬದಲಾವಣೆ ಕುರಿತ ಚರ್ಚೆಗಳು ನಡೆಯುತ್ತಿವೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಬದಲಿಗೆ ಬೇರೆವರಿಗೆ ಅವಕಾಶ ಮಾಡಿಕೊಡಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ ಎಂಬ ವದಂತಿಗಳು ದೃಶ್ಯ ಮಾಧ್ಯಮದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ. ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದಾಗಿ ಸ್ವತಃ ಬಿ.ಎಸ್.ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ ಎಂಬ ವದಂತಿಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದೇನೆ ಇರಲಿ ಒಂದು ವೇಳೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ರಾಜ್ಯದ ಪ್ರಬಲ ಲಿಂಗಾಯ ಸಮುದಾಯ ಸುಮ್ಮನಿರುವುದೇ ಎಂಬ ಪ್ರಶ್ನೆಗಳು ಎದ್ದಿವೆ.

ಪದೇಪದೇ ಯಡಿಯೂರಪ್ಪ ಕುರ್ಚಿ ಮೇಲೇಕೆ ಕಣ್ಣು..?

ರಾಜ್ಯದ ಪ್ರಬಲ ನಾಯಕರಲ್ಲಿ ಮುಂಚೂಣಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ಹೋರಾಟದಿಂದ ಬಂದವರು. ರಾಜ್ಯದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಹುತೇಕ ಸಂದರ್ಭಗಳಲ್ಲಿ ಸಂಕಷ್ಟದ ಪರಿಸ್ಥಿತಿಗಳು ಎದುರಾಗಿವೆ. ಆದರೆ ಬಿ.ಎಸ್.ಯಡಿಯೂರಪ್ಪ ಅವುಗಳನ್ನು ಸಮರ್ಥವಾಗಿ ಎದುರಿಸುವ ಕಾರ್ಯ ಮಾಡಿದ್ದಾರೆ. ಇಂತಹ ನಾಯಕನ ಬದಲಾವಣೆಗೆ ಪಕ್ಷದ ಒಳಗಿನಿಂದಲೇ ಹಲವು ಸಲ ಒತ್ತಡಗಳು ಕೇಳಿ ಬರುತ್ತಿವೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂಬ ಕಾರಣ ನೀಡಿ ಅವರ ಬದಲಾವಣೆ ಕುರಿತ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ.

ದನಿಯೆತ್ತಲಿದೆಯೇದೇ ಸಮುದಾಯ..?

ರಾಜ್ಯದ ಲಿಂಗಾಯ ಸಮುದಾಯಕ್ಕೆ ಬಿ.ಎಸ್.ಯಡಿಯೂರಪ್ಪ ಅವರೇ ಸರ್ವ ಶ್ರೇಷ್ಠನಾಯಕ. ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವದಲ್ಲಿ ಇರುವುದೇ ಬಿ.ಎಸ್.ಯಡಿಯೂರಪ್ಪ ಅವರ ಶ್ರಮ ಹಾಗೂ ವರ್ಚಸ್ಸಿನಿಂದ ಎಂಬ ಮಾತು ಇದೆ. ಈಗ ಬಿ.ಎಸ್.ಯಡಿಯೂರಪ್ಪ ಅವರನ್ನು ವರಿಷ್ಠರು ಸಿಎಂ ಕುರ್ಚಿಯಿಂದ ಇಳಿಸುವ ಪ್ರಯತ್ನ ಮಾಡಿದರೆ ಲಿಂಗಾಯ ಸಮುದಾಯ ಸುಮ್ಮನಿರುವುದೇ ಎಂಬ ಮಾತು ಕೇಳಿಬರುತ್ತಿವೆ. ಒಂದು ವೇಳೆ ಯಡಿಯೂರಪ್ಪ ಅವರು ತಮ್ಮ ಸ್ಥಾನದಿಂದ ಕೆಳಗಿಳಿದರೆ ಬಿಜೆಪಿ ಮತ ಬ್ಯಾಂಕ್ ಗೆ ದೊಡ್ಡ ನಷ್ಟವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸುದ್ದಿದಿನ.ಕಾಂ | ವಾಟ್ಸಾಪ್ | 9980346243

Continue Reading
Advertisement

Title

tungabhadra dam water level today in tmc tungabhadra dam water level today in tmc
ದಿನದ ಸುದ್ದಿ1 hour ago

ಮಹಾಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು; ತುಂಗಭದ್ರಾ ಡ್ಯಾಂ ತುಂಬಲು ಕೆಲವೇ ಅಡಿ ಬಾಕಿ

ಸುದ್ದಿದಿನ, ಹೊಸಪೇಟೆ: ರಾಜ್ಯದಲ್ಲಿ ಮಳೆ ಅಬ್ಬರ ಇಂದು ಕೊಂಚ ತಗ್ಗಿದ್ದು, ನೀರಿನ ಸೆಳೆವು ಮುಂದುವರಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿ ತುಂಗಭದ್ರಾ ತಂಬಲು ಇನ್ನೂ ಕೆಲವೇ ಅಡಿ...

ದಿನದ ಸುದ್ದಿ1 hour ago

ಸೋಮವಾರದ ಭವಿಷ್ಯವಾಣಿ

ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್...

ಲೈಫ್ ಸ್ಟೈಲ್16 hours ago

ಪಕ್ಷಿ ಪರಿಚಯ | ಕುಟ್ರುಹಕ್ಕಿ

ಭಗವತಿ ಎಂ.ಆರ್, ಛಾಯಾಗ್ರಾಹಕಿ, ಕವಯಿತ್ರಿ “ಕುಟ್ರೋ ಕುಟ್ರೋ” ಎಂದು ಒಂದೇ ಸಮನೆ ಕೂಗುವ ಈ ಹಕ್ಕಿಯನ್ನು ಗುರುತಿಸುವುದು ಅಭ್ಯಾಸವಿದ್ದರೆ, ಅದರ ಕೂಗನ್ನು ಅನುಸರಿಸಿ ಅದು ಇರುವ ಜಾಗವನ್ನು...

ಬಹಿರಂಗ18 hours ago

ಕನ್ನಡಿಗರ ಮನ ಮನೆಗೆ ಮಹಾನಾಯಕ

ರಘೋತ್ತಮ ಹೊ.ಬ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆರವರ ಮಗಳು ಉದ್ಯಮಿ ಸ್ಮೃತಿ ಸುಶೀಲ್ ಕುಮಾರ್ ಶಿಂಧೆ ತಮ್ಮ “ಸೋಬೋ ಫಿಲಂಸ್” ಲಾಂಛನದಡಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್...

ದಿನದ ಸುದ್ದಿ18 hours ago

24 ಗಂಟೆಯಲ್ಲಿ ದಾಖಲಾದ ಕೊರೋನಾ ಕೇಸ್ ಗಳು ಎಷ್ಟು ಗೊತ್ತಾ..!?

ಸುದ್ದಿದಿನ ಡೆಸ್ಕ್: ದೇಶದಲ್ಲಿ ಕೊರೋನಾ ಸ್ಫೋಟಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಹೊಸದಾಗಿ 64,399 ಪ್ರಕರಣಗಳು ದಾಖಲಾಗಿದ್ದು, 861 ಜನ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ...

ದಿನದ ಸುದ್ದಿ19 hours ago

ಕೊರೋನಾದಿಂದ ಮೃತಪಟ್ಟವರ ಉಚಿತ ಶವಸಂಸ್ಕಾರ ಮಾಡೋ ‘ ಮರ್ಸಿ‌ಏಂಜಲ್ಸ್’..!

ಸುದ್ದಿದಿನ,ಬೆಂಗಳೂರು: ಹಳೇ ಗೆಳೆಯರ ತಂಡವೊಂದು ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರವನ್ನ ಉಚಿತವಾಗಿ ನೆರವೇರಿಸಲು ಮುಂದಾಗಿದ್ದಾರೆ. ಐಟಿಬಿಟಿ, ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಗೆಳೆಯರ ಬಳಗವು...

ದಿನದ ಸುದ್ದಿ19 hours ago

ಭೋರ್ಗರೆದು ಹರಿಯುತಿದೆ ಗಗನ ಚುಕ್ಕಿ‌ ಜಲಪಾತ : ವಿಷಾದದ ಸಂಗತಿಯೆಂದರೆ..!?

ಸುದ್ದಿದಿನ,ಮಂಡ್ಯ: ಕರ್ನಾಟಕದಲ್ಲಿ ಮಾನ್ಸೂನ್ ಗರಿಗೆದರಿದ್ದು ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಜೊತೆಗೆ ಪ್ರಮುಖ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು ಕೆಲ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೆಲವು ದಿನಗಳಿಂದ...

ದಿನದ ಸುದ್ದಿ19 hours ago

ಕಿಸಾನ್ ಸಮ್ಮಾನ್ ಯೋಜನೆ : 17 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ

ಸುದ್ದಿದಿನ,ದೆಹಲಿ: ಕೃಷಿ ವಲಯಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಕೃಷಿ ಮೂಲಸೌಕರ್ಯ ನಿಧಿಗೆಯಡಿ ಅನುದಾನ ನೀಡುವ ಪ್ರಕ್ರಿಯೆಗೆ...

ದಿನದ ಸುದ್ದಿ21 hours ago

ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ: ಸಚಿವ ಜಗದೀಶ್‌ ಶೆಟ್ಟರ್‌

ಸುದ್ದಿದಿನ,ಬೆಂಗಳೂರು ಗ್ರಾಮಾಂತರ : ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ಬೃಹತ್‌ ಮತ್ತು ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್‌ ಅವರು...

ದಿನದ ಸುದ್ದಿ21 hours ago

ವಿದ್ಯಾರ್ಥಿಗಳ‌ ಮೊಬೈಲ್ ಸಂಖ್ಯೆಗೆ ಸೋಮವಾರ ಎಸ್ ಎಸ್ ಎಲ್ ಸಿ ಫಲಿತಾಂಶ..!

ಸುದ್ದಿದಿನ,ಬೆಂಗಳೂರು:ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು ವಿದ್ಯಾರ್ಥಿಗಳ ಮೊಬೈಲ್ ಗೆ ಫಲಿತಾಂಶ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ...

Trending