Connect with us

ಲೈಫ್ ಸ್ಟೈಲ್

ಆರೋಗ್ಯದ ಗಂಟು ಈ ದಂಟು ಸೊಪ್ಪು

Published

on

ದಂಟಿನ ಸೊಪ್ಪು ಸೊಪ್ಪಿನಲ್ಲೇ ಅಗ್ರಸ್ಥಾನ ಪಡೆದಿದೆ. ಗ್ರಾಮೀಣ ಜನತೆಗೆ ಬಹಳ ಅಚ್ಚುಮೆಚ್ಚು. ಇದರಲ್ಲಿ ಎರಡು ವಿಧ. ಕೆಂಪು ಮತ್ತು ಬಿಳಿ ದಂಟು ಎಂದು. ಬೀಜ ಮೊಳೆತು 2 ರಿಂಧ 3 ವಾರಗಳಲ್ಲಿಯೇ ಇದನ್ನು ಸೊಪ್ಪಿನ ರೀತಿ ಉಪಯೋಗಿಸಬಹುದು.
ಇದರಲ್ಲಿ ಕೆಂಪು ಬಣ್ಣದ ದಂಟಿನಲ್ಲಿ ಹೆಚ್ಚು ರುಚಿಯನ್ನು ನೋಡಬಹುದು. ಸಂಸ್ಕøತದಲ್ಲಿ ಕುಂಡಲಿಮರ, ಮರೀಷರಕ್ತ, ಮೇಘ ಎಂಬ ಹೆಸರು. ವೈಜ್ಙಾನಿಕವಾಗಿ ಅಮರಂಥಸ್ (Amaranthas), ರೂಬ್ರ ಎನ್ನುತ್ತಾರೆ. ಮಧುರ (ಸಿಹಿ), ತಿಕ್ತ(ಕಹಿ) ಮತ್ತು ಒಗರಿನಿಂಧ ಕೂಡಿರುತ್ತದೆ.

ಔಷಧೀಯ ಗುಣಗಳು

  • ಮೂಲವ್ಯಾಧಿಯಿಂದ ನರಳುತ್ತಿರುವವರು ದಂಟು ಸೊಪ್ಪಿನ ಕಷಾಯ ತಯರಿಸಿ ಪ್ರತಿದಿನ ಸೇವಿಸುತ್ತಾ ಬಂದಿರೆ, ಮೂಲವ್ಯಾಧಿಯಲ್ಲಿ ಗುಣ ಕಂಡು ಬರುವುದು.
  • ಇದು ಶೀತ, ವೀರ್ಯವರ್ಧಕ ಉಳ್ಳದಾಗಿದ್ದು, ಸ್ವಲ್ಪ ಕಫದೋಷವುಂಟು. ಮಲಬದ್ಧತೆ, ರಕ್ತಹೀನತೆ ಉತ್ತಮ ಪಥ್ಯಾಹಾರ ಇದು.
  • ನಿಯಮಿತವಾಗಿ ದಂಠು ಸೊಪ್ಪು ಸೇವನೆಯಿಂದ ಮಲಬದ್ದತೆ ನಿವಾರಣೆ ಆಗುತ್ತದೆ.
    ದಿನನಿತ್ಯ ದಂಟು ಸೊಪ್ಪು ಸೇವಿಸುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ.
  • ತಾಯಂದಿರಲ್ಲಿ ಎದೆ ಹಾಲಿನ ಕೊರತೆಯುಂಟಾದಾಗ ಒಂದು ಲೋಟ ತಾಜಾ ದಂಟಿನ ರಸದೊಡನೆ ಸ್ವಲ್ಪ ಜೇನುತುಪ್ಪ ಹಾಗೂ ಏಲಕ್ಕಿ ಪುಡಿ ಬೆರೆಸಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಹಾಲು ವೃದ್ಧಿಸುತ್ತದೆ.
  • ತಲೆಕೂದಲು ಉದುರುತ್ತಿದ್ದರೆ, ದಂಟುಸೊಪ್ಪಿನ ಎಲೆಯನ್ನು ನುಣ್ಣಗೆ ರುಬ್ಬಿ ಅದರ ಲೇಪನವನನು ತಲೆಗೆ ಚೆನ್ನಾಗಿ ಹಚ್ಚಿಕೊಂಡು, ಒಂದು ಗಂಟೆಯ ನಂತರ
  • ಸ್ನಾನಮಾಡಿದರಡ, ಕೂದಲುದುರುವುದು ಕಡಿಮೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.
  • ಸ್ತ್ರೀಯರಲ್ಲಿ ಉಂಟಾಗುವವಂತಹ ಹೆಚ್ಚಿನ ಮುಟ್ಟು ಸ್ರಾವವನ್ನು ನಿಯಂತ್ರಿಸಲು ದಂಟು ಸೊಪ್ಪಿನ ಪಲ್ಯವನ್ನು ನಿಯಮಿತವಾಘಿ ಸೇವಿಸುವುದು ಒಳ್ಳೆಯದು.
  • ದಂಟಿನ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ.
  • ದಂಟಿನ ಸೊಪ್ಪು ತಂಪು ಗುಣವುಳ್ಳದ್ದು.
  • ಜ್ವರದಿಂದ ನರಳುತ್ತಿರುವವರಿಗೆ ದಂಠು ಸೊಪ್ಪಿನ ಪಲ್ಯ, ಹುಳಿ ಆರೋಗ್ಯಕ್ಕೆ ಒಳ್ಳೆಯದು. ಇದರಿಂಧ ಜ್ವರ ಕಡಿಮೆಯಾಗುತ್ತದೆ.

ಎಚ್ಚರಿಕೆ

ಈ ಸೊಪ್ಪನ್ನು ಇತರ ಬೇಳೆ ಅಥವಾ ಕಾಳಿನ ಜೊತೆ ಬೇಯಿಸಿ, ಉಪಯೋಗಿಸ ಬಹುದು.
ಆದರೆ ಹೆಚ್ಚು ಬೇಯಿಸಿದರೆ ಇದರ ಸಾರ ಹೋಗುತ್ತದೆ.

ನೂರು ಗ್ರಾಂ ದಂಟು ಸೊಪ್ಪಿನಲ್ಲಿರುವ ಪೋಷಕಾಂಶಗಳು

  • ತೇವಾಂಶ – 90.8 ಗ್ರಾಂ
  • ಸಸಾರಜನಕ – 4.90 ಗ್ರಾಂ
  • ರಂಜಕ – 83.0 ಮಿಲಿ ಗ್ರಾಂ
  • ಕೊಬ್ಬು – 0.04 ಗ್ರಾಂ
  • ಪಿಷ್ಠ – 42.0 ಗ್ರಾಂ
  • ಕ್ಯಾಲ್ಷಿಯಂ – 200 ಮಿಲಿ ಗ್ರಾಂ
  • ಕಬ್ಬಿಣ – 25.05 ಮಿಲಿ ಗ್ರಾಂ
  • ಪೊಟಾಷಿಯಂ – 314 ಮಿಲಿ ಗ್ರಾಂ
  • ಥೈಯಾಮಿನ್ – 0.03 ಮಿಲಿ ಗ್ರಾಂ
  • ಮ್ಯಾಗ್ನೀಷಿಯಂ – 247 ಮಿಲಿ ಗ್ರಾಂ
  • ಸೋಡಿಯಂ – 230 ಮಿಲಿ ಗ್ರಾಂ
  • ‘ಎ’ ಜೀವಸತ್ವ – 10970 ಇ.ಯು
  • ‘ಬಿ’ ಜೀವಸತ್ವ – 36 ಮಿಲಿ ಸೆಂ. ಗ್ರಾಂ
  • ‘ಸಿ’ ಜೀವಸತ್ವ – 150 ಮಿಲಿ ಗ್ರಾಂ
  • ನಿಯಾಸಿನ್ – 11.1 ಮಿಲಿ ಗ್ರಾಂ

 

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಲೈಫ್ ಸ್ಟೈಲ್

ಸಾವಯವ ಕೃಷಿಯಲ್ಲಿ ಸೈ ಎನಿಸಿಕೊಂಡ ‘ಶಂಕರೇಗೌಡ’..!

Published

on

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೇವಗಳ್ಳಿ ಗ್ರಾಮದ ಶಂಕರೇಗೌಡ ಅವರು ಒಟ್ಟು 5 ಎಕರೆ ಜಮೀನನ್ನು ಹೊಂದಿರುತ್ತಾರೆ. ಆದರೆ ಇವರು ಪ್ರಾರಂಭದಲ್ಲಿ ವ್ಯವಸಾಯವನ್ನು ಮಾಡದೆ ತನ್ನ ಬಳಿ ಇದ್ದ ಒಂದು ಟ್ರ್ಯಾಕ್ಟರನಲ್ಲಿ ಸುತ್ತಮುತ್ತಲಿನ ಜಮೀನನಲ್ಲಿ ಬಾಡಿಗೆಯನ್ನು ಹೊಡೆಯುವ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಕ್ರಮೇಣ ವ್ಯವಸಾಯದಿಂದಲೆ ನನ್ನ ಜೀವನ ಮುಂದುವರೆಯಬೇಕು ಎಂಬ ಆಚಲ ಮನಸ್ಸು ಮಾಡಿದ್ದು ಇಂದು ಇವರು ಸಾವಯವ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಲು ಕಾರಣವಾಯಿತು.
’’ಆರಂಭ ಆರಾಮಗಿರಬೇಕು’’ ಎಂದು ವ್ಯವಸಾಯವನ್ನು ಪ್ರಾರಂಭಿಸಲು ಮುಂದಾದಾಗ ನನ್ನ 5 ಎಕೆರೆ ಭೂಮಿಯನ್ನು ಹಂತಹಂತವಾಗಿ ಹದಮಾಡಿ ಮೊದಲ ಬಾರಿಗೆ ಬಾಳೆಹಣ್ಣು ಬೆಳೆಯಲು ಮುಂದಾದೆ. ಆದರೆ ಇದರಿಂದ ತುಂಬಾ ನಷ್ಟವಾಯಿತು.

ನನಗೆ ಸಾವಯವ ಕೃಷಿ ಅಂದರೇ ನನಗೆ ಎಲ್ಲಿಲದ ಪ್ರೀತಿ, ಆಸಕ್ತಿ. ಆದರೇ ಇದರ ಬಗ್ಗೆ ನನಗೆ ಅಷ್ಟೋಂದು ತಿಳಿದಿರಲಿಲ್ಲ ನಂತರದ ದಿನಗಳಲ್ಲಿ ಸುತ್ತೂರಿನ ಜೆ.ಎಸ್.ಎಸ್. ಕೃಷಿ ವಿಜ್ಞಾನ ಕೇಂದ್ರದ ತರಬೇತಿಗೆ ತೆರಳಿ ಅಲ್ಲಿರುವ ತಜ್ಞರ ಮಾಹಿತಿಯ ಮೇರೆಗೆ ಸಾವಯವ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಲು ಸಾಧ್ಯವಾಯಿತು ಎಂದು ಕೃಷಿಕ ಶಂಕರೇಗೌಡ ಅವರು ಹೇಳುತ್ತಾರೆ.

ಶಂಕರೇಗೌಡರು ಮೊದಲು ಬಾಳೆಯ ವಿವಿಧ ತಳಿಗಳಾದ ಕಾಡುಬಾಳೆ, ನೇಂದ್ರನ್, ನಂಜನಗೂಡು ರಸಬಾಳೆ, ಪಚ್ಚಬಾಳೆ, ಏಲಕ್ಕಿ ಬಾಳೆಗಳ ಸುಮಾರು 400 ಗಿಡಗಳನ್ನು ಟ್ರೆಂಚ್ ಪದ್ದತಿಯಲ್ಲಿ ಬೆಳೆದರು. ಶಂಕರೇಗೌಡರಿಗೆ ಮೊದಲಿನಿಂದಲೂ ಸಾವಯವ ಕೃಷಿಯಲ್ಲಿ ಬಹಳ ಆಸಕ್ತಿ ಇರುವುದರಿಂದ ತಮ್ಮ ಭೂಮಿಯನ್ನು ಹಂತ ಹಂತವಾಗಿ ಸಂಪೂರ್ಣ ಸಾವಯವ ಭೂಮಿಯಾಗಿ ಪರಿವರ್ತಿಸಿದರು.

ಮುಂದುವರೆದು 8 ಗುಂಟೆ ಪ್ರದೇಶದಲ್ಲಿ ಅರಿಶಿಣ ಹಾಗೂ ಪರಂಗಿ 50 ಗಿಡ, ಹುಣಸೆ ಮರ 2, ತೆಂಗು-130, ನೇರಳೆ-2, ಹಲಸು-6, ಸೀಬೆ-40, ಮಾವು-6. ಮೊಸಂಬಿ-2, ಚಕ್ಕೊತಾ-1, ನೆಲ್ಲಿಕಾಯಿ-1, ನುಗ್ಗೆ-15, ಸೀತಾಫಲ-2, ಇರಳೆಕಾಯಿ-20, ಗಜನಿಂಬೆ-25, ನಿಂಬೆ-12, ಕರಿಬೇವು-15, ಸೊಪ್ಪುಗಳಾದ ಕೊತ್ತಂಬರಿ, ಸಬ್ಬಸಿಗೆ, ಹೊನಗೊನೆ, ಕೀರೆ, ಪುದೀನಾ, ಮೆಂತ್ಯಾ, ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ.

ಜಮೀನಿನ ಸುತ್ತಾ ಬದುಗಳಲ್ಲಿ ಸಿಲ್ವರ್ ಓಕ್-200, ಟೀಕ್-100, ಹೆಬ್ಬೇವು-20, ಕಹಿಬೇವು-6, ಜೇನು ಪೆಟ್ಟಿಗೆ-2, ಹಾಗೂ ಕುರಿಗಳು-15, ಕೋಳಿ-15, ಹೆಚ್.ಎಫ್ ಹಸು-2, ಮೆಣಸು-4, ಅಡಿಕೆ-2, ಮರಗೆಣಸು-5, ಶುಂಠಿ-1 ಗುಂಟೆ, ಹಾಗೂ 4 ಎರೆಹುಳು ಗೊಬ್ಬರ ಘಟಕಗಳನ್ನು ಹೊಂದಿದ್ದಾರೆ ಹಾಗೂ ಒಂದು ಬೋರ್‍ವೆಲ್ ಮತ್ತು ಕೃಷಿ ಇಲಾಖೆ ವತಿಯಿಂದ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾದ ಕೃಷಿಹೊಂಡವನ್ನು ಹೊಂದಿದ್ದು, ಇವುಗಳ ಮೂಲಕ ಬೆಳೆಗಳಿಗೆ ನೀರುಣಿಸುತ್ತಾರೆ.

ದಿನನಿತ್ಯ ಉಪಯೋಗಿಸುವಂತಹ ಪದಾರ್ಥಗಳು, ಸಾಂಬಾರ ಪದಾರ್ಥಗಳು, ಸೊಪ್ಪು, ಹಾಗೂ ತರಕಾರಿಗಳನ್ನು ಮಾತ್ರ ಬೆಳೆಯುತ್ತಿದ್ದರು, ಇವುಗಳಿಗೆ ಮಾರುಕಟ್ಟೆಯಲ್ಲಿ ಸದಾಕಾಲ ಬೇಡಿಕೆ ಇದ್ದೇ ಇರುತ್ತಿತ್ತು. ಇದನ್ನರಿತ ಶಂಕರೇಗೌಡರು ಕೃಷಿ ತಜ್ಞರ ಸಲಹೆಯ ಮೇರೆಗೆ ವಿವಿಧ ಹಂತಗಳಲ್ಲಿ ಕಟಾವಿಗೆ ಬರುವಂತೆ ಉಪಚರಿಸಿ, ಯತೇಚ್ಚವಾಗಿ ಜೀವಾಮೃತ ಮತ್ತು ಪಂಚಗವ್ಯಗಳನ್ನು ಬಳಸಿ ಬಿತ್ತನೆ ಮಾಡುತ್ತಿದ್ದರು.

ಇವರು ವಾರಕ್ಕೊಮ್ಮೆ ಭಾನುವಾರದ ದಿನ ತಮ್ಮಲ್ಲಿ ಲಭ್ಯವಿರುವ ಎಲ್ಲಾ ಬೆಳೆಗಳು ಮತ್ತು ಪದಾರ್ಥಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಯಾವುದೇ ಮದ್ಯವರ್ತಿಗಳ ಸಹಾಯವಿಲ್ಲದೆ ಮೈಸೂರಿನ ವಿವೇಕಾನಂದ ಸರ್ಕಲ್‍ನ ಬಳಿ ತಮ್ಮದೇ ಆದ ಒಂದು ಸಂತೆ (ಮಾರುಕಟ್ಟೆ) ಕಲ್ಪಿಸಿಕೊಂಡು ಇದರ ಮೂಲಕ ನಗರ ಪ್ರದೇಶದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಸಾವಯವ ತರಕಾರಿ ಮತ್ತು ಹಣ್ಣುಗಳನ್ನು ಪೂರೈಸುತ್ತಿದ್ದಾರೆ.

ಇವರ ಈ ರಾಸಾಯನಿಕ ಮುಕ್ತವಾದ ಸಾವಯವ ಪದಾರ್ಥಗಳೆಂದರೇ ಗ್ರಾಹಕರಿಗೆ ಎಲ್ಲಿಲ್ಲದ ಬೇಡಿಕೆ. ಒಂದು ವಾರಕ್ಕಾಗುವಷ್ಟು ದಿನಬಳಕೆ ಪದಾರ್ಥಗಳನ್ನು ಭಾನುವಾರದ ದಿನ ಶಂಕರೇಗೌಡರಿಂದ ಖರೀದಿಸುತ್ತಾರೆ. ಹಾಗೂ ಮತ್ತೇನಾದರೂ ಅವಶ್ಯಕತೆವಿರುವ ತರಕಾರಿ ಬೇಕಾದಲ್ಲಿ ಗ್ರಾಹಕರು ಶಂಕರೇಗೌಡರಿಗೆ ದೂರವಾಣಿಯ ಮೂಲಕ ಕರೆ ಮಾಡುವರು. ತಾವು ಬೆಳೆದ ಅರಿಶಿಣವನ್ನು ತಾವೇ ಸ್ವತಃ ಸಂಸ್ಕರಿಸಿ ಚನ್ನಾಗಿ ಒಣಗಿಸಿ ಪುಡಿಗೊಳಿಸಿ ಅದನ್ನು ಪ್ಯಾಕ್ ಮಾಡಿ, ಮಾರಾಟ ಮಾಡುತ್ತಾರೆ.

ಇವರ ಅರಿಶಿಣ ಪಾರ್ಸಲ್ ಮೂಲಕ ಉತ್ತರ ಕರ್ನಾಟಕದ ವಿವಿಧ ಭಾಗಗಳಿಗೆ ತಲುಪುತ್ತದೆ. ಏಕೆಂದರೇ ಇವರ ಗ್ರಾಹಕರು ಅಲ್ಲಿಯವರೆಗೂ ಸಹ ವ್ಯಾಪಿಸಿದ್ದಾರೆ ಎನ್ನುವುದು ಬಹಳ ಹೆಮ್ಮೆಯ ವಿಷಯ ಹಾಗೂ ಪೆÇಸ್ಟಲ್ ಮೂಲಕವೇ ಮನಿ ಆರ್ಡರ್ ಮಾಡಿ ಅಂಚೆ ಮೂಲಕವೇ ತಮಗೆ ಬೇಕಾದ ಪದಾರ್ಥವನ್ನು ಪಡೆಯುತ್ತಾರೆ.

ಕಳೆದ 7 ವರ್ಷಗಳಿಂದಲೂ ಸಹ ಯಾವುದೇ ರಾಸಾಯನಿಕಗಳನ್ನು ಭೂಮಿಗೆ ಸೋಕಿಸದೇ ಇರುವ ಶಂಕರೇಗೌಡರು ಕುರಿ ಮತ್ತು ಕೋಳಿ ಸಾಕಣೆಯನ್ನೂ ಸಹ ವಿಶಿಷ್ಟ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. 15 ಕುರಿಗಳು ಮತ್ತು 15 ಕೋಳಿಗಳನ್ನು ಸ್ಟಾಲ್ ಫೀಡಿಂಗ್ ಪದ್ದತಿಯಲ್ಲಿ ಸಾಕುತ್ತಿದ್ದು, ಇವುಗಳಿಂದ ಬಂದಂತಹ ಗೊಬ್ಬರಗಳನ್ನು ಚೆನ್ನಾಗಿ ಕಲಸಿ, ಅದನ್ನು ತಮ್ಮ ಭೂಮಿಗೆ ಸಿಂಪಡಿಸಿ, ಇದರ ಜೊತೆಗೆ 4 ಎರೆಹುಳು ಘಟಕಗಳನ್ನು ಕೃಷಿ ಇಲಾಖೆ ಸಹಾಯಧನದಲ್ಲಿ ನಿರ್ಮಿಸಿಕೊಂಡು ಇದರಿಂದ ಉತ್ಪಾದನೆಯಾಗುವ ಗೊಬ್ಬರವನ್ನೂ ಸಹ ತಮ್ಮ ಜಮೀನಿಗೆ ಬಳಸಿಕೊಳ್ಳುತ್ತಾರೆ.

ಹೆಚ್ಚು ಎರೆಹುಳು ಗೊಬ್ಬರ ಉತ್ಪಾದನೆ ಮಾಡುವ ಶಂಕರೇಗೌಡರು ಅದನ್ನು ಬೇರೇ ರೈತರಿಗೆ ಬೇಡಿಕೆಗನುಗುಣವಾಗಿ ಮಾರಾಟ ಮಾಡುತ್ತಾರೆ. ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಪಡೆದಿರುವ ಬಹುಪಯೋಗಿ ರೋಟರಿ ಟಿಲ್ಲರ್ ಯಂತ್ರವನ್ನು ಬಹಳ ಪರಿಣಾಮಕಾರಿಯಾಗಿ ಉಳುಮೆ ಮಾಡಲು, ಭೂಮಿ ಹದಾ ಮಾಡಲು, ಸಾಲು ತೆಗೆಯಲು, ಕಳೆ ತೆಗೆಯಲು, ಅಂತರಬೇಸಾಯ, ಹೀಗೇ ಹಲವಾರು ಚಟುವಟಿಕೆಗಳಿಗೆ ಬಳಸುತ್ತಾರೆ.

ಇಷ್ಟೆಲ್ಲಾ ವೈವಿಧ್ಯತೆ ಸಾಧಿಸಿರುವ ಇವರು ಮಾಸಿಕ ಅಂದಾಜು 35 ರಿಂದ 40 ಸಾವಿರ ರೂಗಳ ಆದಾಯ ಗಳಿಸುತ್ತಿದ್ದಾರೆ. ಕೆಲ ಆಸಕ್ತ ರೈತರು ಹಾಗೂ ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ರೈತರುಗಳಿಗೆ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡುತ್ತಾ ಅವರಲ್ಲಿ ಸ್ಪೂರ್ತಿ ತುಂಬುವ ಕೆಲಸದಲ್ಲೂ ಸಹ ಆಸಕ್ತಿ ವಹಿಸುತ್ತಾರೆ.

ಅವರೆಲ್ಲರಿಗೂ ಸಹ ಏಕಬೆಳೆ ಪದ್ದತಿ ತ್ಯಜಿಸಿ ಬಹುಬೆಳೆ ಮತ್ತು ಮಿಶ್ರಬೆಳೆ ಪದ್ದತಿಯನ್ನು ಹಾಗೂ ರಾಸಾಯನಿಕ ಮುಕ್ತವಾದ ಸಾವಯವ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳುವ ರೈತನು ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ದಾರಿ ಹಿಡಿಯುವುದಿಲ್ಲ. ಬದಲಾಗಿ ನಾಲ್ಕು ಜನರಿಗೆ ಕೆಲಸ ನೀಡುವ ಸಾಹುಕಾರನಾಗಿ ಬೆಳೆಯುತ್ತಾನೆ, ಇದಕ್ಕೆ ಸ್ವತಃ ನಾನೇ ನೈಜ ಉದಾಹರಣೆ ಎನ್ನುತ್ತಾರೆ ಪ್ರಗತಿಪರ ರೈತ ಶಂಕರೇಗೌಡ ಅವರು. –

ಸಂಜಯ್.ಕೆ.ಬೆಳತ್ತೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗ್ಯಾಸ್ಟ್ರಿಕ್, ಮಲಬದ್ದತೆ, ಬೊಜ್ಜು ನಿವಾರಣೆಗೆ ಇಲ್ಲಿದೆ ಮನೆ ಮದ್ದು..!

Published

on

ಮಸ್ಕಾರ ನಮ್ಮ “ಜೀವಸತ್ವ” ಗ್ಯಾಸ್ಟ್ರಿಕ್, ಮಲಬದ್ದತೆ, ಬೊಜ್ಜು ನಿವಾರಣೆ ಯಲ್ಲಿ ಬಹಳ ಉತ್ತಮವಾದ ಮನೆ ಮದ್ದು.ಯಾವುದೇ ಅಡ್ಡ ಪರಿಣಾಮ ಇಲ್ಲದ 10 ವರ್ಷ ಮೇಲ್ ಪಟ್ಟು 80 ವರ್ಷದ ಎಲ್ಲರೂ ತೆಗೆದುಕೊಳ್ಳ ಬಹುದಾಗಿದೆ.

ಉಪಯೋಗಗಳು

  1. ಮಲಬದ್ಧತೆ ,ಅಸಿಡಿಟಿ ಯನ್ನು ನಿವಾರಿಸಲು ಸಹಕಾರಿಯಾಗಿದೆ.
  2. ಇದರಲ್ಲಿರುವ ಕಹಿಜೀರಿಗೆ ಮತ್ತು ಮೆಂತ್ಯೆ ಶುಗರ್,ಬಿಪಿ ನಿಯಂತ್ರಣಕ್ಕೆ ಬಹಳ ಉಪಯುಕ್ತವಾಗಿದೆ.
  3. ದೇಹದಲ್ಲಿರುವ ಬೇಡದ ಕೊಬ್ಬನ್ನು ಕರಗಿಸಿ ರಕ್ತ ಚಲನೆಯನ್ನು ಉತ್ತಮ ಗೊಳಿಸಿ ಆರೋಗ್ಯ ವಾಗಿ ಇರುವಂತೆ ದೇಹವನ್ನು ನೋಡಿಕೊಳ್ಳುತ್ತದೆ.
  4. ಇದರಲ್ಲಿರುವ ಅಗಸೆ ಬೀಜ ದೇಹದಲ್ಲಿರುವ ಕಲ್ಮಶಗಳನ್ನೆಲ್ಲ ಶುಚಿ ಮಾಡಿ ದೊಡ್ಡ ಕರುಳ ನ್ನು ಆರೋಗ್ಯದಿಂದಿರಲು ಸಹಕರಿಸುತದೆ.
  5. ಇದರಲ್ಲಿ ಒಮೆಗ 3 ಹೇರಳ ವಾಗಿ ಇರುವುದರಿಂದ ಕಣ್ಣಿನ ,ಕೂದಲಿನ ಆರೋಗ್ಯ ವನ್ನು ಹೆಚ್ಚಿಸುತದೆ.

ಬಳಸಿರುವ ಪದಾರ್ಥಗಳು

ಅಗಸೆ ಬೀಜ,ಜೀರಿಗೆ,ಸೋಂಪುಕಾಳು,ಮೆಂತ್ಯ ಕಹಿಜೀರಿಗೆ,ಸೊಗಡೆಬೇರು,ಕರಿಬೇಹು ಪುಡಿ,ಮೆಣಸು,ತುಳಸಿ,ಓಂಕಾಳು,ದಾಲ್ಚಿನಿ

ಉಪಯೋಗಿಸುವ ರೀತಿ

ಮಲಗುವ ಮುನ್ನ 1.5 ಚಮಚ ಈ ಪುಡಿಯನ್ನು ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ಬೆರೆಸಿ ಕುಡಿಯಬೇಕು(ಚಿಕ್ಕ ಲೋಟ).ತದನಂತರ ಎನ್ನನ್ನು ತಿನ್ನಬಾರದು ಒಂದು ದೊಡ್ಡಲೋಟ ಬಿಸಿನೀರು ಕುಡಿಯಬಹುದು. ಮತ್ತೆ ಬೆಳ್ಳಿಗೆ ಖಾಲಿ ಹೋಟೆಯಲ್ಲಿ 1 ಚಮಚ ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ಬೆರೆಸಿ ಕುಡಿಯಬೇಕು. ಒಂದೇ ಗುಟುಕಿನಲ್ಲಿ ಕುಡಿದರೆ ಒಳ್ಳೆಯದು ಯಾಕೆಂದರೆ ಅತ್ಯಂತ ಕಹಿಯಾಗಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಮೊಬೈಲ್ ಜಗತ್ತು ; ಸಹನೆಗೆ‌ ಕುತ್ತು..!

Published

on

  • ಹಿರಿಯೂರು ಪ್ರಕಾಶ್

ನಿಮ್ಮ ಕೈಯ್ಯಲ್ಲಿ ಮೊಬೈಲ್ ಇಲ್ಲದೇ ಅಥವಾ ಅದನ್ನು ಉಪಯೋಗಿಸದೇ ಎಷ್ಟು ಸಮಯ ಹಾಗೇ ಸುಮ್ಮನೇ ಇರಬಲ್ಲಿರಿ ? ಎಲ್ಲಾದರೂ ಹೊರಗೆ ಹೋದಾಗ, ಯಾರಿಗಾದರೂ ಕಾಯುತ್ತಾ ಕುಳಿತಾಗ, ಪ್ರಯಾಣಿಸುವಾಗ ಅಥವಾ ಸ್ವಲ್ಪ ಬಿಡುವಿನ ಸಮಯದಲ್ಲಿ ಮೊಬೈಲ್ ಗೆ ಕೈ ಹಾಕದೇ ಇರಲು ಸಾಧ್ಯವೇ ?

ಬಹುಶಃ ಯಾರನ್ನು ಬಿಟ್ಟಿರಬಹುದಿದ್ದರೂ ಇದನ್ನು ಬಿಡಲು ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇದು ನಮ್ಮ ಮೈ ಮನವನ್ನಾವರಿಸಿಕೊಂಡು ಬಿಟ್ಟಿದೆ. ಹೀಗಾಗಿ ಮೊಬೈಲ್ ಅನ್ನೋದು ನಮ್ಮ‌ ಜೀವನಕ್ಕೆ ಒಂದು “Some ಗತಿ ” ಕಾಣಿಸುವವರೆಗೂ ಅದು ನಮ್ಮ “ಸಂಗಾತಿ” ಯೇ ! ನೋ ಡೌಟ್.

ಭೂಗತ ಜಗತ್ತು ಅಂತ ಇದೆಯಂತೆ ! ಆದರೆ ಆ ಬಗ್ಗೆ ಎಲ್ಲರಿಗೂ ಅಷ್ಟು ಗೊತ್ತಿರಲಿಕ್ಕಿಲ್ಲ. ಆದರೆ ಈ ಮೊಬೈಲ್ ಜಗತ್ತು ಮಾತ್ರ ಎಲ್ಲರನ್ನೂ ತನ್ನ ತೆಕ್ಕೆಯೊಳಗೆ ಎಳೆದುಕೊಂಡು ಮನುಷ್ಯನ ಗುಣ, ಸ್ವಭಾವ ,ವರ್ತನೆ ಹಾಗೂ ನಿತ್ಯ ಚಟುವಟಿಕೆಗಳ ಮೇಲೆ ಸಕತ್ ಪ್ರಭಾವ ಬೀರಿ ಅಟ್ಟಹಾಸಗೈಯ್ಯುತ್ತಿರುವುದಂತೂ ದಿಟ.

ಮೊಬೈಲ್ ಬಳಕೆ ಕುರಿತಂತೆ ಅದರ ಉಪಯೋಗ, ದುರುಪಯೋಗ_ ಅನುಕೂಲ- ಅನಾನುಕೂಲ ಇತ್ಯಾದಿಗಳ ಬಗ್ಗೆ ಪ್ರಬಂಧ ಅಥವಾ ಟಿಪ್ಪಣಿ ಬರೆದು ಬೋರ್ ಹೊಡೆಸೊಲ್ಲ. ಅದು ಎಲ್ಲರಿಗೂ ಗೊತ್ತಿರೋದೇ ! ಆದರೆ ಬಹುತೇಕ ಮೊಬೈಲ್ ಬಳಕೆದಾರರಲ್ಲಿ ನಾನು ಕಂಡುಕೊಂಡ ಒಂದು ವಿಷಾದನೀಯ ಸತ್ಯವೆಂದರೆ, ಅತಿಯಾದ ಮೊಬೈಲ್ ಸಹವಾಸದಲ್ಲಿ‌ ಮನುಷ್ಯನ ತಾಳ್ಮೆ, ಸಹನೆ ದಿನೇ ದಿನೇ ಅಧೋಗತಿಗಿಳಿಯುತ್ತಿರುವುದು !.

ಮೊಬೈಲ್ ನಲ್ಲಿ ತನ್ಮಯರಾಗಿ ಬೆರಳಾಡಿಸುವಾಗ , ನೆಟ್ ನಲ್ಲಿ ದೃಷ್ಟಿ ನೆಟ್ಟು ಮುಳುಗಿರುವಾಗ ಯಾರಾದರೂ ಮಾತನಾಡಿಸಿದರೂ ಸಡನ್ನಾಗಿ ನಮ್ಮೊಳಗಿನ‌ ಅಸಹನೆ ಭುಗಿಲೇಳುತ್ತದೆ ; ಇಲ್ಲವೇ ಅತಿಯಾದ ಕರೆಗಳಿಂದ‌ ಸಹನೆಯ ಕಟ್ಟೆಯೊಡೆದು ಮಾತನಾಡುವುದೇ ಬೇಡವೆನಿಸಿ ಒಂಥರಾ Frustrated ಮೂಡ್ ಗೆ ಮನಸು ವಾಲಿಬಿಡುತ್ತೆ. ‌

ಅಷ್ಟೆಲ್ಲಾ ಯಾಕೆ ! ನೀವು ಫೇಸ್ ಬುಕ್ ನಲ್ಲೋ ವಾಟ್ಸಪ್ ನಲ್ಲೋ ಸಿಕ್ಕಾಪಟ್ಟೆ ಬಿಜ಼ಿಯಾಗಿದ್ದಾಗ ನಿಮ್ಮ ಸ್ವಂತದವರೇ ಕರೆ ಮಾಡಿದರೂ ಅದು‌ ನಿಮಗೆ ಆ ಕ್ಷಣಕ್ಕೆ ಸಹ್ಯವೆನಿಸದು ! ಒಂದು ವೇಳೆ ಕರೆ ಸ್ವೀಕರಿಸಿದರೂ ಅದಕ್ಕೆ ಮನಸಿಟ್ಟು ಉತ್ತರಿಸದೇ ಬ್ರೌಸ್ ಮಾಡುತ್ತಲೇ ಮಾತನಾಡುವ ಅಸಡ್ಡೆತನವೂ ಗೊತ್ತಿಲ್ಲದೇ ಬೆಳೆದುಬಂದಿದೆ.

ಯಾರ ಸಹವಾಸವನ್ನೂ ಬೇಡದೇ ಒಬ್ಬನೇ‌ ಕೂತು ಇಡೀ ದಿನ ನೆಟ್ಟಗಿರದೇ ನೆಟ್ಟಿಗನಾಗಿ ಕಾಲ ಕಳೆಯೋದೇ ಹೆಚ್ಚು ಆಪ್ಯಾಯವಾಗಿ ಕಾಣಿಸುತ್ತದೆ. ಅದರಲ್ಲೂ ಈ ಲಾಕ್ ಡೌನ್ ಸಮಯದಲ್ಲಿ ಮೊಬೈಲ್ ನಮ್ಮ ಅತ್ಯಂತ ಆಪ್ತ ಸಂಗಾತಿಯಾಗಿ ಹೊರಹೊಮ್ಮಿದ್ದು ಅದರ ಸೆಳೆತದಿಂದ ಬಿಡಿಸಿಕೊಳ್ಳೋದೇ ಸಮಸ್ಯೆಯಾಗಿ ತೋರುತ್ತಿದೆ. ಸೋ…… ಮನಸಿನ‌ ‘ಉದ್ವೇಗ’ ಕ್ಕೂ ಮೊಬೈಲ್ ನ ‘ವೇಗ’ ಕ್ಕೂ ಒಂಥರಾ ಕೆಮಿಸ್ಟ್ರಿ ಲಾಕ್ ಆಗಿರಲೇಬೇಕಲ್ಲವೇ ?

ನಮ್ಮಲ್ಲಿರಬೇಕಾದ ಅತಿ ಮೌಲ್ಯಯುತವಾದ ಗುಣಗಳಲ್ಲಿ ತಾಳ್ಮೆ ಹಾಗೂ ಸಹನೆ ಬಹು ಮುಖ್ಯ. ನಮ್ಮ‌ ಬಹುತೇಕ ಸಮಸ್ಯೆಗಳನ್ನು ಮನಸಿನ ಮೇಲೆ‌ ಹತೋಟಿ ಇಟ್ಟುಕೊಳ್ಳುವುದರಿಂದ ಸಮರ್ಥವಾಗಿ ಎದುರಿಸಬಹುದು ಎಂಬುದು ಸಾರ್ವಕಾಲಿಕ ಸತ್ಯ. ಆದರೆ ಈ ಮೊಬೈಲ್ ಮೇನಕೆಯೆಂಬ ಮಾಯಾಂಗಿನಿಯ ಮೋಹಪಾಶದಲ್ಲಿ ನಮ್ಮ ವಿಶ್ವಾಮಿತ್ರನಂತಹಾ ಮನಸಿನ ನಿಯಂತ್ರಣ ತಪ್ಪಿ ಅನಾಹುತವಾಗುತ್ತಲೇ ಬಂದಿದೆ .

ಮಾಯೆಯ ಬಗೆಗಿನ ನಿರ್ಮೋಹಿಗಳನ್ನು ಪುರಾಣ ಕಾಲದಿಂದಲೂ ಅಲ್ಲಲ್ಲಿ ಕಂಡಿದ್ದೇವೆಯಾದರೂ, ಮೊಬೈಲ್ ನಿರ್ಮೋಹಿಗಳನ್ನು ಕಾಣುವುದು ದುಸ್ತರವಾಗಿದೆ. ಹೀಗಾಗಿ ನೆಟ್ಟಿಗರಲ್ಲಿನ ಮನಸು ನೆಟ್ಟಗಿರಲು ಸಾಧ್ಯವಾಗದೇ ಸಹನೆ ಎನ್ನುವುದು ನಮ್ಮಿಂದ‌ ನಿಧಾನಕ್ಕೆ ‌ನಿಧನವಾಗುತ್ತಲಿದೆ. ಸಹನೆಯ ಜಾಗದಲ್ಲಿ ಅಸಹನೆ ಒಳಗೊಳಗೇ ಬುಸುಗುಟ್ಟುತ್ತಾ ನಮ್ಮ‌ ವ್ಯಕ್ತಿತ್ವಕ್ಕೇ ಮಾರಕವಾಗಿ ಕಿರಿಕ್ ಜಗತ್ತನ್ನೇ ಸೃಷ್ಟಿಸಿದೆ.

ಕೊನೇಪಕ್ಷ ಹೆಂಡತಿ ಮಕ್ಕಳೊಂದಿಗೂ ಆಪ್ಯಾಯವಾಗಿ, ಆನಂದವಾಗಿ ಸಮಯ ಕಳೆಯಲು, ಬಂಧು ಬಳಗ, ಸ್ನೇಹಿತರೊಂದಿಗೆ ಮುಕ್ತವಾಗಿ ಹರಟಲು ಆಗದಂತಹಾ ವಿಚಿತ್ರ ವಿಷವ್ಯೂಹದ ವಾತಾವರಣವನ್ನು ಮೊಬೈಲ್ ಜಗತ್ತು ಕ್ರಿಯೇಟ್ ಮಾಡಿ ಬದುಕಿನ ಸುಂದರ ಕ್ಷಣಗಳನ್ನು ಆಪೋಷನ ತೆಗೆದುಕೊಂಡಿದೆ. ಈ ವಸ್ತು ಸದಾ ನಮ್ಮೊಂದಿಗಿರುವುದರಿಂದ ಏನೋ ಒಂಥರಾ ತಳಮಳ, ಜುಗುಪ್ಸೆ, ಅಸಹನೆ, ಬೇಸರ, ತಾತ್ಸಾರ, ಒಂಟಿತನ, ಸಿಡುಕುತನ, ಸಿನಿಕತನ….ಈ ಎಲ್ಲದರ ಸಹವಾಸವೂ ಬೋನಸ್ ರೂಪದಲ್ಲಿ ಬಂದು ವಕ್ಕರಿಸಿ ಬಿಟ್ಟಿವೆ.

ನಿಮ್ಮಲ್ಲಿ ಕೆಲವರು ನನ್ನ ಬರಹಕ್ಕೆ ಈ ರೀತಿ ಪ್ರತಿಕ್ರಿಯಿಸಲೂ ಬಹುದು .

” ಯಾವುದಾದರೂ ಅತಿಯಾದರೆ ಹೀಗೇನೇ ಆಗೋದು. ಎಷ್ಟು ಬೇಕೋ ಅಷ್ಟು ಬಳಸಬೇಕು. ಹಗಲೂ ರಾತ್ರಿ ಅದಕ್ಕೆ ದಾಸರಾಗಬಾರದು, ನಮ್ಮ‌ಬುದ್ದಿ ನಮ್ಮ‌ ಕೈಯ್ಯಲ್ಲಿರಬೇಕು . ಆಗ ಯಾವ ತೊಂದರೆಯೂ ಇರೋಲ್ಲ “… ಎಂಬ‌ ಉಪದೇಶದಲ್ಲೋ, ಅಥವಾ ” ಈಗ ನೀವು ಬರೆದ ಬರಹ ಮೊಬೈಲ್ ನಲ್ಲಿ ತಾನೇ ??? ಎಂತಲೋ ಕಾಮೆಂಟಿಸಲೂ ಬಹುದು. ಆದರೆ ಅಂಥವರ ವ್ಯಕ್ತಿತ್ವದಲ್ಲೂ ಅನೇಕ ಬದಲಾವಣೆಗಳು ಅವರಿಗೆ ಗೊತ್ತಿಲ್ಲದಂತೆಯೇ ಈ ಮಾಯಾಂಗಿನಿ ತಂದು ಬಿಟ್ಟಿರುತ್ತದೆ. ಒಮ್ಮೆ ಕೇಳಿನೋಡಿ‌ !

ಈ ಜಂಗಮವಾಣಿ ನಮ್ಮ ವ್ಯಕ್ತಿತ್ವದಲ್ಲಿ ನಕಾರಾತ್ಮಕ ‌ಬದಲಾವಣೆಗಳನ್ನು ತಂದೊಡ್ಡುವ ಮುನ್ನ ಸ್ವಲ್ಪ ಜಾಗರೂಕರಾಗೋದು ಒಳ್ಳೆಯದು. ಯಾಕೋ ಇತ್ತೀಚೆಗೆ ಬಹುತೇಕ ಮಂದಿ ಮಾತನಾಡಿಸಿದರೆ ಸಾಕು ಮೈಮೇಲೆ ಎಗರಿ ಬೀಳುತ್ತಾರೆ, ಶಾರ್ಟ್ ಟೆಂಪರ್ ಗಳ ಬಂಪರ್ ಗಳಂತೆ ರೇಗಿ ಬೀಳುತ್ತಿದ್ದಾರೆ, ಸುಖಾಸುಮ್ಮನೇ ಸಿಡಿದು ಸಿಟ್ಟಿಗೇಳುತ್ತಿದ್ದಾರೆ…!

ಇದಕ್ಕೆಲ್ಲಾ ಅತಿಯಾದ ಅಹರ್ನಿಶಿ ಮೊಬೈಲ್‌ ಬಳಕೆ ಕಾರಣವೆಂದು ಸಾರಾಸಗಟಾಗಿ ಆರೋಪಿಸಲಾಗದಿದ್ದರೂ ಅದರ ಪ್ರಭಾವ ಮಾತ್ರ ಸಾಕಷ್ಟಿದೆ ಎನ್ನಬಹುದು. ಜೀವನದಲ್ಲಿನ ಚಿಕ್ಕ‌ಚಿಕ್ಕ ಸಂತೋಷಗಳನ್ನು ಕಿತ್ತುಕೊಂಡು ನಮ್ಮೆಲ್ಲರನ್ನೂ ಭ್ರಮಾಲೋಕದ ಭಾವನೆಗಳ ಸಾಗರದಲ್ಲಿ ತೇಲಾಡಿಸುತ್ತಾ , ಆಕರ್ಷಕ ‌ಜಗತ್ತಿನಲ್ಲಿ‌ ಅಮಲೇರಿಸುತ್ತಾ ಸಾಗಿರುವ ಮೊಬೈಲ್ ಜಗತ್ತು ಸಂಪರ್ಕ ಕ್ರಾಂತಿಯ ಜೊತೆ ಜೊತೆಗೇ ‘ಸಂ‌ ‘ ಕಿರಿಕ್ ಭ್ರಾಂತಿಯನ್ನೂ ನಮಗೆ ತಗಲು ಹಾಕಿಬಿಟ್ಟಿದೆ.

ಮರೆಯುವ ಮುನ್ನ

ಬರೀ ಮೊಬೈಲ್‌ನ‌ ನೆಗೆಟಿವಿಟಿ ಬಗ್ಗೆ ಹೇಳಿದ ಮಾತ್ರಕ್ಕೇ , ಸಂಪರ್ಕ ಕ್ಷೇತ್ರದಲ್ಲಿ ಅದರ ಮಹೋನ್ನತ ಕೊಡುಗೆಯನ್ನು ಸ್ಮರಿಸದೇ ಇರಲಾಗದು . ಅದರದ್ದು ಪದಗಳಿಗೆ‌ ನಿಲುಕದ ಕೊಡುಗೆ. ಆದರೂ ಮನುಷ್ಯನ ವ್ಯಕ್ತಿತ್ವದಲ್ಲಿ , ಅವನ ಧೋರಣೆಯಲ್ಲಿ, ಮಾನವೀಯ ಮೌಲ್ಯಗಳಲ್ಲಿ, ಮನುಷ್ಯ ಸಂಬಂಧಗಳಲ್ಲಿ , ಗುಣ‌ ವಿಶೇಷಣಗಳಲ್ಲಿ ಮೊಬೈಲ್ ನ ಸುಧೀರ್ಘ ಬಳಕೆ ದುಷ್ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಾದದ್ದು ಇಂದಿನ ತುರ್ತು ಅಗತ್ಯವೆಂದು ಅನಿಸುತಿದೆ.

ಆಪ್ತರಿಂದ ಫೋನ್ ಬಂದರೂ ಅದರತ್ತ ವಿಶೇಷ ಲಕ್ಷ್ಯ ಹರಿಸದೇ ಅಂತರ್ಜಾಲದ ಅಂತಃಪುರದಲ್ಲಿಯೇ ಸದಾ ಮುಳುಗಿ ಅಸಡ್ಡೆಯಿಂದ ಉತ್ತರಿಸುವ ಕ್ಯಾರೆಕ್ಟರ್ ಒಂದರ ಕರೆ ಈಗಷ್ಟೇ ಬಂದು ಅವನ ನೆನಪಾಗಿ ಇಷ್ಟೆಲ್ಲಾ ಕೊರೆತಕ್ಕೆ ಕಾರಣವಾಯಿತು ನೋಡಿ !

ನಿರ್ಜೀವ ವಸ್ತುವಿನ ಮುಂದೆ ನಿರ್ಮೋಹಿಯಾಗದಿದ್ದರೂ ಪರವಾಗಿಲ್ಲ ಆದರೆ ಅದಕ್ಕೆ ಶರಣಾಗಿ ಬಾಗದಿರಲಿ ಎನ್ನ‌ ಕಾಯ…. ಶಿವಾ…!!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ5 hours ago

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ | ಬೆಳಗಾವಿ ಮನೆಯಲ್ಲಿ ನೀರವ ಮೌನ ; ಗಣ್ಯರ ಸಂತಾಪ

ಸುದ್ದಿದಿನ, ದೆಹಲಿ : ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊರೊನಾಗೆ‌‌ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ (65) ಸಾವನ್ನಪ್ಪಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರವನ್ನು...

ದಿನದ ಸುದ್ದಿ9 hours ago

ಪೌರ ಕಾರ್ಮಿಕರಿಗೆ ಶೀಘ್ರದಲ್ಲೇ ಗೃಹ ಭಾಗ್ಯ ಹಸ್ತಾಂತರ : ಮೇಯರ್‌ ಅಜಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಪೌರ ಕಾರ್ಮಿಕರ ಗೃಹ ನಿರ್ಮಾಣ ಕಾರ್ಯವು ಇನ್ನು 3-4 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಅವುಗಳನ್ನು ಪೌರ ಕಾರ್ಮಿಕರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾನಗರಪಾಲಿಕೆ ಮಹಾಪೌರರಾದ ಬಿ.ಜಿ...

ದಿನದ ಸುದ್ದಿ16 hours ago

ಕೊರೋನಾ – ಕೈಚೆಲ್ಲಿ ಕೂರುವುದು ಹೊಣೆಗೇಡಿತನವಾದೀತು

ನಾ ದಿವಾಕರ ಕರ್ನಾಟಕದಲ್ಲಿ ಮತ್ತು ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಮೇ 1 ರಂದು ಎರಡನೆ ಹಂತದ ಲಾಕ್ ಡೌನ್ ಅಂತ್ಯವಾದಾಗ ವಿಶ್ವದಲ್ಲಿ ಎರಡನೆ...

ದಿನದ ಸುದ್ದಿ18 hours ago

ಡ್ರಗ್ಸ್ ಪ್ರಕರಣ | ಅರೆಸ್ಟ್ ಆಗ್ತಾರಾ ನಟ ದಿಗಂತ್..?

ಸುದ್ದಿದಿನ, ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಗೆ ಮತ್ತೆ ಸಿಸಿಬಿ‌ಯಿಂದ ನೋಟಿದ್ ಜಾರಿಯಾಗಿದೆ. ವಾಟ್ಸಾಪ್ ಮೂಲಕ‌ ನಟ ದಿಗಂತ್...

ದಿನದ ಸುದ್ದಿ21 hours ago

ದಾವಣಗೆರೆ | ಕರ್ನಾಟಕ ಲೋಕಾಯುಕ್ತ ಕಚೇರಿಯ ಹೊಸ ದೂರವಾಣಿ ಸಂಪರ್ಕ

ಸುದ್ದಿದಿನ,ದಾವಣಗೆರೆ : ಲೋಕಾಯುಕ್ತ ಕಚೇರಿಯ ಹಳೆಯ ಸ್ಥಿರ ದೂರವಾಣಿ ಸಂಖ್ಯೆ: 08192-230164 ಸಂಪರ್ಕವನ್ನು ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಕಡಿತಗೊಳಿಸಿ ಹೊಸ ದೂರವಾಣಿ ಸಂಪರ್ಕ ಸಂಖ್ಯೆ 08192-296027 ನ್ನು...

ದಿನದ ಸುದ್ದಿ21 hours ago

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಸಾವು

ಸುದ್ದಿದಿನ,ಟಿ.ನರಸೀಪುರ : ತಾಲ್ಲೂಕಿನ ಬನ್ನೂರು ಹೋಬಳಿ ಅಂಕನಳ್ಳಿ ಗ್ರಾಮಕ್ಕೆ ಬಳ್ಳಾರಿ ಜಿಲ್ಲೆಯಿಂದ ಕಬ್ಬು ಕಟಾವಿಗೆ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಕುಟುಂಬದ ಮೂರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು...

ದಿನದ ಸುದ್ದಿ1 day ago

ಟಿ. ನರಸೀಪುರ | ಯುವ ಪೀಳಿಗೆಗೆ ‘ಮಹಾನಾಯಕ’ ಧಾರವಾಹಿ ಪ್ರೇರಣೆಯಾಗುತ್ತಿದೆ : ಪುರಸಭಾ ಸದಸ್ಯ ಎಲ್. ಮಂಜುನಾಥ್

ಸುದ್ದಿದಿನ,ಟಿ. ನರಸೀಪುರ: ಯುವ ಪೀಳಿಗೆಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ‘ಮಹಾನಾಯಕ’ ಧಾರವಾಹಿ ಪ್ರೇರಣೆಯಾಗುತ್ತಿದೆ ಎಂದು 4ನೇ ವಾರ್ಡಿನ ಪುರಸಭಾ ಸದಸ್ಯ...

ಲೈಫ್ ಸ್ಟೈಲ್1 day ago

ಸಾವಯವ ಕೃಷಿಯಲ್ಲಿ ಸೈ ಎನಿಸಿಕೊಂಡ ‘ಶಂಕರೇಗೌಡ’..!

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೇವಗಳ್ಳಿ ಗ್ರಾಮದ ಶಂಕರೇಗೌಡ ಅವರು ಒಟ್ಟು 5 ಎಕರೆ ಜಮೀನನ್ನು ಹೊಂದಿರುತ್ತಾರೆ. ಆದರೆ ಇವರು ಪ್ರಾರಂಭದಲ್ಲಿ ವ್ಯವಸಾಯವನ್ನು ಮಾಡದೆ ತನ್ನ ಬಳಿ...

ದಿನದ ಸುದ್ದಿ1 day ago

ಚನ್ನಗಿರಿ | ದೌರ್ಜನ್ಯ ಪ್ರಕರಣದಲ್ಲಿ ವ್ಯಕ್ತಿ ಸಾವು , ಜಿಲ್ಲಾಧಿಕಾರಿಗಳಿಂದ ಮೃತ ವ್ಯಕ್ತಿ ಮನೆಗೆ ಭೇಟಿ; ಸಾಂತ್ವನ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕು ಕೊಮಾರನಹಳ್ಳಿ ಗ್ರಾಮದ ಮಹಾಬಲಿ ಎಂಬ ವ್ಯಕ್ತಿಯು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಹೊಂದಿದ್ದು, ಇವರ ಮನೆಗೆ ಇಂದು ಜಿಲ್ಲಾಧಿಕಾರಿ ಮಹಾಂತೇಶ...

ದಿನದ ಸುದ್ದಿ1 day ago

ಸೆ.27 ರಂದು ಕೆ-ಸೆಟ್ ಪರೀಕ್ಷೆ

ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯು ಸೆಪ್ಟೆಂಬರ್ 27 ರ ಭಾನುವಾರದಂದು ದಾವಣಗೆರೆ ನಗರದ 11 ಉಪ ಕೇಂದ್ರಗಳಲ್ಲಿ ನಡೆಯಲಿದೆ. ಈಗಾಗಲೇ ಕೆ-ಸೆಟ್ ಅಂತರ್ಜಾಲದಲ್ಲಿ...

Trending