Connect with us

ಸಿನಿ ಸುದ್ದಿ

ವಿಡಿಯೋ | ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತ 2 ಮಿಲಿಯನ್ ವೀವ್ಸ್ ಕಂಡು ಮುನ್ನುಗ್ಗುತ್ತಿದೆ ‘ನಟಸಾರ್ವ ಭೌಮ’ ಟ್ರೇಲರ್

Published

on

ಸುದ್ದಿದಿನ ಡೆಸ್ಕ್ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ನಟಸಾರ್ವಭೌಮ’. ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನೆಮಾದ ಟ್ರೇಲರ್ ಇಂದು (ಶುಕ್ರವಾರ)ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಎರಡು ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

ಇಷ್ಟೊಂದು ವೀಕ್ಷಣೆಯನ್ನು ಪಡೆದಿರುವ ಈ ನಟಸಾರ್ವಭೌಮ ಸಿನೆಮಾದ ಟ್ರೇಲರ್ ಇತ್ತೀಚಿಗೆ ರಿಲೀಸ್ ಆಗಿ ವೀಕ್ಷಿಸಲ್ಪಟ್ಟ ಸಿನೆಮಾಗಳ ಟ್ರೇಲರ್ ಗಳ ರೆಕಾರ್ಡ್ ಬ್ರೇಕ್ ಮಾಡುವ ಸೂಚನೆ ಕೊಟ್ಟಿದೆ. ಅಪ್ಪು ಅಭಿಮಾನಿಗಳು ಯೂಟ್ಯೂಬ್ ನಲ್ಲಿ ಅಷ್ಟರಮಟ್ಟಿಗೆ ಈ ಟ್ರೇಲರ್ ಅನ್ನು ವೀಕ್ಷಣೆ ಮಾಡುತ್ತಲಿದೆ. ಲಹರಿ ಆಡಿಯೋ ಸಂಸ್ಥೆ ಯು ತನ್ನ ಟ್ವಿಟರ್ ಖಾತೆಯಲ್ಲಿ ಎರಡು ಮಿಲಿಯನ್ ವೀಕ್ಷಣೆ ಮಾಡಿದ ಬಗ್ಗೆ ಟ್ವೀಟ್ ಮಾಡಿದೆ.

ಲಹರಿ ಸಂಸ್ಥೆಯ ಟ್ವೀಟ್

ಟ್ರೇಲರ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಅಮೆಜಾನ್ ಪ್ರೈಮ್ ವೀಡಿಯೊ ಭೀಮಸೇನ ನಳಮಹಾರಾಜಾ ಕನ್ನಡ ಫಿಲ್ಮ್ ನ ಟ್ರೈಲರನ್ನು ಅನಾವರಣಗೊಳಿಸುತ್ತಿದೆ.

Published

on

ಸುದ್ದಿದಿನ ದಾವಣಗೆರೆ:   ಮೊದಲನೇ ಸ್ಟ್ರೀಮ್ ಭೀಮಸೇನ ನಳಮಹಾರಾಜಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮಾತ್ರ.
ಕಾರ್ತಿಕ್ ಸರಗೂರ್ ನಿರ್ದೇಶನದ ಈ ಫ್ಯಾಮಿಲಿ ಎಂಟರ್ಟೈನರ್ನಲ್ಲಿ ನಟರಾದ ಅರವಿಂದ್ ಅಯ್ಯರ್, ಆರೋಹಿ ನಾರಾಯಣ್, ಪ್ರಿಯಾಂಕಾ ತಿಮ್ಮೇಶ್, ಅಚ್ಯುತ್ ಕುಮಾರ್ ಮತ್ತು ಆದ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಭಾರತದಲ್ಲಿ ಮತ್ತು 200 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಪ್ರಧಾನ ಸದಸ್ಯರು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಕ್ಟೋಬರ್ 29ರಿಂದ ಕನ್ನಡ ಫ್ಯಾಮಿಲಿ ಎಂಟರ್ಟೈನರ್ ಭೀಮಸೇನ ನಳಮಹಾರಾಜಾ ನೋಡಬಹುದು.

ಅಮೆಜಾನ್ ಪ್ರೈಮ್ ಇತ್ತೀಚಿನ ಮತ್ತು ವಿಶೇಷ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸ್ಟ್ಯಾಂಡ್-ಅಪ್ ಕಾಮಿಡಿ, ಅಮೆಜಾನ್ ಒರಿಜಿನಲ್ಸ್, ಅಮೆಜಾನ್ ಪ್ರೈಮ್ ಮ್ಯೂಸಿಕ್ ಮೂಲಕ ಜಾಹೀರಾತು-ಮುಕ್ತ ಸಂಗೀತ ಕೇಳುವುದು, ಭಾರತದ ಅತಿದೊಡ್ಡ ಉತ್ಪನ್ನಗಳ ಉಚಿತ ವೇಗವಾದ ವಿತರಣೆ, ಉನ್ನತ ವ್ಯವಹಾರಗಳಿಗೆ ಆರಂಭಿಕ ಪ್ರವೇಶದೊಂದಿಗೆ ನಂಬಲಾಗದ ಮೌಲ್ಯವನ್ನು ನೀಡುತ್ತದೆ. ಪ್ರೈಮ್ ರೀಡಿಂಗ್ನೊಂದಿಗೆ ಅನಿಯಮಿತ ಓದುವಿಕೆ ಮತ್ತು ಪ್ರೈಮ್ ಗೇಮಿಂಗ್ನೊಂದಿಗೆ ಮೊಬೈಲ್ ಗೇಮಿಂಗ್ ಕಂಟೆಂಟ್, ಎಲ್ಲವೂ ತಿಂಗಳಿಗೆ 129.ರೂಗಳಿಗೆ ಲಭ್ಯವಿದೆ.
ಮುಂಬೈ, ಭಾರತ, 19 ಅಕ್ಟೋಬರ್ 2020 – ಡ್ಯಾನಿಶ್ ಸೈಟ್‌ನ ಫ್ರೆಂಚ್ ಬಿರಿಯಾನಿಯ ಯಶಸ್ವಿ ವರ್ಲ್ಡ್ ಪ್ರೀಮಿಯರ್ ಪ್ರದರ್ಶನದ ನಂತರ, ಅಮೆಜಾನ್ ಪ್ರೈಮ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗುವ ಉತ್ಸವದ ಸಾಲಿನ ಭಾಗವಾಗಿ ಮತ್ತೊಂದು ಮನರಂಜನೆಯ ಕನ್ನಡ ನಾಟಕ ಭೀಮಸೇನ ನಳಮಹಾರಾಜರ ನೇರ-ಸೇವೆಯ ವರ್ಲ್ಡ್ ಪ್ರೀಮಿಯರ್ ಪ್ರದರ್ಶನವನ್ನು ಪ್ರಕಟಿಸಿತು. ಸ್ಟ್ರೀಮಿಂಗ್ ಸೇವೆ ಇಂದು ಚಿತ್ರದ ಕುತೂಹಲಕಾರಿ ಟ್ರೇಲರ್ ಅನ್ನು ಅನಾವರಣಗೊಳಿಸಿತು, ಕುಟುಂಬ ನಾಟಕ ಮತ್ತು ಆಹಾರದ ಮನರಂಜನೆಯ ಸವಾರಿಯಲ್ಲಿ ನಮ್ಮನ್ನು ಕರೆದೊಯ್ಯುತ್ತದೆ. ಕಾರ್ತಿಕ್ ಸರಗೂರ್ ನಿರ್ದೇಶನದ ಈ ಲಘು ಹೃದಯದ ಶೀರ್ಷಿಕೆಯನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ಎಂ ರಾವ್ ನಿರ್ಮಿಸಿದ್ದಾರೆ ಮತ್ತು ಅರವಿಂದ್ ಅಯ್ಯರ್, ಆರೋಹಿ ನಾರಾಯಣ್, ಪ್ರಿಯಾಂಕಾ ತಿಮ್ಮೆಶ್, ಮತ್ತು ಅಚ್ಯುತ್ ಕುಮಾರ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಭಾರತದಲ್ಲಿ ಮತ್ತು 200 ದೇಶಗಳು ಹಾಗು ಪ್ರಾಂತ್ಯಗಳಲ್ಲಿನ ಪ್ರೈಮ್ ಸದಸ್ಯರು 2020 ರ ಅಕ್ಟೋಬರ್ 29 ರಿಂದ ಭೀಮಸೇನ ನಲಮಹರಾಜವಿನ ವರ್ಲ್ಡ್ ಪ್ರೀಮಿಯರ್ ಪ್ರದರ್ಶನವನ್ನು ಸ್ಟ್ರೀಮ್ ಮಾಡಬಹುದು.
“ಭೀಮಸೇನ ನಳಮಹಾರಾಜಾ ಜೀವನದ ಆರು ಸುಂದರ ಹಂತಗಳನ್ನು ಅಥವಾ ಆರು ರಸಗಳನ್ನು ಕೇಂದ್ರೀಕರಿಸುತ್ತದೆ : ಸಿಹಿ, ಹುಳಿ, ಉಪ್ಪು, ಕಹಿ, ಕಟುವಾದ ಮತ್ತು ಸಂಕೋಚ, ಇವೆಲ್ಲವನ್ನು ಮನಬಂದಂತೆ ನೇಯ್ದಿ ಜೀವನವನ್ನು ರೂಪಿಸಲ್ಪಟ್ಟಿದೆ” ಎಂದು ನಿರ್ದೇಶಕ ಕಾರ್ತಿಕ್ ಸರಗೂರ್ ಹೇಳಿದರು “ಹೃದಯವನ್ನು ಬೆಚ್ಚಗಾಗಿಸುವ ಈ ನಾಟಕದಲ್ಲಿ, ಆಹಾರದೊಂದಿಗೆ ಬೆರೆತ ನೆನಪುಗಳನ್ನು ಶೋಧಿಸುತ್ತಾ ಕುಟುಂಬದ ವಿಭಿನ್ನ ಭಾವನೆಗಳನ್ನು ಅನ್ವೇಷಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಪ್ರಸಿದ್ಧ ನುಡಿಮಾತಿನಂತೆ – ಫ್ಯಾಮಿಲಿ ಥಟ್ ಈಟ್ಸ್ ಟುಗೆದರ್, ಸ್ಟೇಸ್ ಟುಗೆದರ್, ಆಹಾರವು ಜನರನ್ನು ಒಂದುಗೂಡಿಸುತ್ತದೆ ಎಂದು ಹೇಳಲಾಗುತ್ತದೆ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗ್ಲೋಬಲ್ ಪ್ರೇಕ್ಷಕರಿಗಾಗಿ ಈ ರುಚಿಕರವಾದ ಕಥೆಯನ್ನು ತರಲು ನಾವು ಸಂತೋಷಪಡುತ್ತೇವೆ. ”

ಅಡುಗೆ ಮಾಡುವುದು ನನ್ನಗೆ ತುಂಬಾ ಇಷ್ಟಾ ಮತ್ತು ಭೀಮಸೇನ ನಳಮಹಾರಾಜಾ ಚಿತ್ರದಲ್ಲಿ, ಸಾಂಪ್ರದಾಯಿಕ ಅಡುಗೆಯನ್ನು ಅನುಭವಿಸಲು ಮತ್ತು ಅನ್ವೇಷಿಸಲು ಹಾಗು ಅದರ ಹಿಂದಿನ ಇತಿಹಾಸವನ್ನು ತಿಲಿಯಲು ಅವಕಾಶ ಸಿಕ್ಕಿದ್ದು ನನಗೆ ತುಂಬಾ ಖುಷಿಕೊಟ್ಟಿದೆ. ” ಎಂದು ನಟ ಅರವಿಂದ್ ಅಯ್ಯರ್ ಹೇಳಿದರು “ಈ ಚಿತ್ರವು ಕುಟುಂಬ, ಸಂಬಂಧಗಳು ಮತ್ತು ಆಹಾರ ಹೇಗೆ ಒಂದು ಕುಟುಂಬವನ್ನು ಒಟ್ಟಿಗೆ ಸೇರಿಸುತ್ತದೆ ಎಂಬುದರ ಬಗೆ ಚಿತ್ರೀಕರಿಸಲಾಗಿದೆ. ಕುಟುಂಬದ ಮೌಲ್ಯಗಳನ್ನು ಪ್ರೇಕ್ಷಕರಿಗೆ ತೋರಿಸುವುದಲ್ಲದೆ, ಈ ಚಿತ್ರ ವೀಕ್ಷಕರಿಗೆ ಭಾರತದ ಬೇಕರಿಯ ಇತಿಹಾಸವನ್ನು ತೋರಿಸುತ್ತಾ ಒಂದು ಕುತೂಹಲಕಾರಿ ವೀಕ್ಷಣೆಯನ್ನಾಗಿ ಮಾಡುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಭೀಮಸೇನ ನಳಮಹಾರಾಜಾ ವರ್ಲ್ಡ್ ಪ್ರೀಮಿಯರ್ ಅನ್ನು ಎಲ್ಲಾ ವಯಸ್ಸಿನವರು ಹಾಗು ಗಡಿಯುದ್ದಕ್ಕೂ, ಸ್ಟ್ರೀಮ್ ಮಾಡಲು ಮತ್ತು ಸರಿಯಾದ ಸಂದೇಶವನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದು ನನಗೆ ಖುಷಿಯಾಗಿದೆ. ”

ಸುದ್ದಿ ದಿನ ವಾಟ್ಸಪ್. 8073105526

Continue Reading

ದಿನದ ಸುದ್ದಿ

ಕನ್ನಡ ಚಿತ್ರರಂಗಕ್ಕೆ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಕಾಣಲಿಲ್ಲವೆ..?

Published

on

  • ರಘೋತ್ತಮ ಹೊ.ಬ

ಮಯ ಸಿಕ್ಕಾಗಲೆಲ್ಲ ನನ್ನ ಹವ್ಯಾಸ ಕನ್ನಡ ಸಿನಿಮಾ ಹಾಡುಗಳನ್ನು ಕೇಳುವುದು ಹಾಗೆ ಒಟ್ಟಿಗೆ ಗುನುಗುವುದು. ಹಿಂದೆ ಆಕಾಶವಾಣಿಯಲ್ಲಿ ಬರುತ್ತಿದ್ದ ಹಾಡುಗಳು ಈಗ ಆ್ಯಪ್ ಗಳ ಮೂಲಕ ಬರುತ್ತಿವೆ. ಒಂದು ರೀತಿಯ ಖುಷಿ ಕೊಡುತ್ತವೆ. ಆಶ್ಚರ್ಯ ಎಂದರೆ ಈ ಹಾಡುಗಳಲ್ಲೆಲ್ಲ ಎಲ್ಲಿಯೂ ಕೂಡ ಅಸ್ಪೃಶ್ಯತೆ, ಜಾತೀಯತೆ ಪ್ರಸ್ತಾಪ ಇಲ್ಲ!

ಅರೆ, ನಮ್ಮ ಕನ್ನಡ ಚಿತ್ರರಂಗ ಏನು ಅಮೆರಿಕದಲ್ಲಾ ಕೆಲಸ ಮಾಡ್ತ ಇರೋದು? ಇಲ್ಲ. ಇಲ್ಲೇ ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಬಾದಾಮಿ, ಐಹೊಳೆ… ಹೀಗೆ. ಪ್ರಶ್ನೆ ಎಂದರೆ ನಮ್ಮ ನಿರ್ದೇಶಕ ರುಗಳಿಗೆ, ಗೀತರಚನೆಕಾರರಿಗೆ, ಕತೆಗಾರರಿಗೆ, ಚಿತ್ರ ಕತೆ ಬರೆಯುವವರಿಗೆ ಅಸ್ಪೃಶ್ಯತೆಯ ಒಂದು ದೃಶ್ಯವೂ ಬೀಳಲಿಲ್ಲವೆಂದರೆ? ಸಮಾಜವನ್ನು ಮುಕ್ತವಾಗಿ ನೋಡದಷ್ಟು ಕುರುಡರೆ ಇವರು?

ಪೌರಾಣಿಕ, ಐತಿಹಾಸಿಕ, ಕೌಟುಂಬಿಕ, ಲವ್, ರೊಮಾನ್ಸ್, ಕಾಮಿಡಿ ಹೀಗೆ ಹುಡುಕಿ ಹುಡುಕಿ ಸಿನಿಮಾ ತೆಗೆದ ಇವರಿಗೆ ಅಸ್ಪೃಶ್ಯತೆ ಕಾಣಲಿಲ್ಲವಲ್ಲ? ಕಡೆ ಪಕ್ಷ ಒಂದೊಂದು ಸಣ್ಣ ದೃಶ್ಯವನ್ನಾದರೂ ಸೇರಿಸದಿರುವಷ್ಟು ನಿರ್ದಯಿಗಳೆ ಇವರು. Very bad. ಇವರೆಲ್ಲ ರಸಿಕರ ರಾಜರು, ಸಾಹಸ ಸಿಂಹಗಳು, ಕಿಂಗ್ ಗಳು, ಕ್ರೇಜಿ ಸ್ಟಾರ್ ಗಳು, ಪ್ರಣಯ ರಾಜಗಳು! ಅಬ್ಬಬ್ಬಾ! ಅದೆಂತೆಂಥ ಬಿಲ್ಡ್ ಅಪ್ ಗಳು. ಅಂದಹಾಗೆ ಶೋಷಿತ ವರ್ಗದ ನಮ್ಮ ವಿಚಾರಗಳನ್ನು ತಮ್ಮ ಸಿನಿಮಾಗಳಲ್ಲಿ ತೋರಿಸದ ಇವರುಗಳು ನಿಮ್ಮ ದುಡ್ಡು ನಮಗೆ ಬೇಡ, ನೀವು ನಮ್ಮ ಸಿನಿಮಾ ನೋಡಬೇಡಿ ಎಂದು ಹೇಳಬೇಕಿತ್ತು. ಆದರೆ?

ದುರಂತ ಎಂದರೆ ಬಾಬಾಸಾಹೇಬ್ ಅಂಬೇಡ್ಕರರ ಜೀವನ ಚರಿತ್ರೆ ತಿಳಿಯಲು ಕನ್ನಡಿಗರು ಹಿಂದಿ ಧಾರಾವಾಹಿಯೊಂದು “ಮಹಾನಾಯಕ”ದ ರೂಪದಲ್ಲಿ ಕನ್ನಡಕ್ಕೆ ಡಬ್ ಆಗಲು ಕಾಯಬೇಕಾಯಿತು! ಆ ಮಟ್ಟಿಗೆ ಕನ್ನಡ ಚಿತ್ರರಂಗ ಅಸ್ಪೃಶ್ಯತೆಯಂತಹ ಸಾಮಾಜಿಕ ಸಮಸ್ಯೆಗಳನ್ನು, ಅಂಬೇಡ್ಕರರ ಜೀವನ ಚರಿತ್ರೆಯನ್ನು ಕಡೆಗಣಿಸಿದೆ. ಅದರಲ್ಲಿ ಬೇರೆ ಸ್ಯಾಂಡಲ್ ವುಡ್ ಎಂಬ ಹೆಸರು! ಅಲ್ಲಿ ಸಮಾನತೆಯ ಗಂಧಕ್ಕೆ ಸ್ಥಳವೇ ಇಲ್ಲ. ಈ ದಿಸೆಯಲ್ಲಿ ಹೇಳುವುದಾದರೆ ತಮಿಳು ಚಿತ್ರರಂಗವೇ ಎಷ್ಟೋ ಪರವಾಗಿಲ್ಲ. ಕನ್ನಡ ಚಿತ್ರರಂಗ? ಅದರಲ್ಲೂ ಈ ಚಿತ್ರಗಳಿಗೆ ಸರ್ಕಾರದ ಧನಸಹಾಯ ಬೇರೆ! ಖಂಡಿತ, ನಾವು ಕೇಳೇ ಕೇಳುತ್ತೇವೆ. ತಪ್ಪೋ ಸರಿಯೋ. ಯಾಕೆಂದರೆ ಆ ಧನಸಹಾಯದಲ್ಲಿ ನಮ್ಮೆಲ್ಲರ ತೆರಿಗೆಯ ಪಾಲಿದೆ. ಆ ಪಾಲು ತಿನ್ನುವಾಗ ಸಮಾಜದ ಎಲ್ಲಾ ವರ್ಗಗಳ ಋಣ ತೀರಿಸಬೇಕು ಎಂಬ ಜವಾಬ್ದಾರಿ ಸಿನಿಮಾ ಪ್ರಭೃತಿಗಳಿಗೆ ಇರಬೇಕಿತ್ತು. ಇಲ್ಲದಿದ್ದರೆ ಅಂತಹ ಸಿನಿ ಮಂದಿಗಳು ಅದು ಯಾರೇ ಇರಲಿ ಅಸಮಾನತೆಯ ಬೆಂಬಲಿಗರು ಎಂದು ಮುಲಾಜಿಲ್ಲದೆ ಹೇಳಬೇಕಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತೊಗೋಳಿ, ಇವನದೊಂದು ನೆನಪು ಬರೆಯುವ ಸರದಿ ಬಂದಿದೆ

Published

on

  • ಕೇಸರಿ ಹರವೂ

ಕೃಷ್ಣ ನಾಡಿಗ ನನಗಿಂತ ಎಂಟೊಭತ್ತು ವರ್ಷಕ್ಕೆ ದೊಡ್ಡವ. ಆದರೂ ‘ಹೋಗೋಲೋ, ಬಾರೋಲೋ’ ಗೆಳೆಯರಾಗಿದ್ವಿ. ನಾನು ಇವನನ್ನು ಮೊದಲು ಕಂಡಿದ್ದು 1983ರಲ್ಲಿ. ಆಗತಾನೇ ಕಾಲೇಜು ಮುಗಿಸಿ, ಕಲಾಕ್ಷೇತ್ರದಲ್ಲೂ ಒಂದಷ್ಟು ಮೊಳೆ ಹೊಡೆದು ಚಿತ್ರನಿರ್ದೇಶನವನ್ನು ಪ್ರಾತ್ಯಕ್ಷಿಕವಾಗಿ ಕಲಿಯುವ ದೆಸೆಯಿಂದ ಗಾಂಧೀನಗರ ಅಲೆಯುತ್ತಿದ್ದೆ. ಹಾಗೊಮ್ಮೆ ಆನಂದರಾವ್ ವೃತ್ತದ ಸಂಗೀತಾ ಹೋಟೆಲಿನ ರೂಮೊಂದರಲ್ಲಿ ನಿರ್ದೇಶಕ ಕೆ.ವಿ. ಜಯರಾಂ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದರು. ಅಲ್ಲಿ ನಾಡಿಗ ಪ್ರೊಡಕ್ಷನ್ ಮ್ಯಾನೇಜರ್.

ಜಯರಾಂ ‘ತಮ್ಮಲ್ಲಿ ಈಗಾಗಲೇ ನಾಲ್ಕು ಜನ ಸಹಾಯಕರಿದ್ದಾರೆ, ಮುಂದಿನ ಚಿತ್ರದಲ್ಲಿ ನೋಡೋಣ’ ಎಂದು ಹೇಳಿದ್ದರು. ಸರಿ, ಎಂದು ನಾನು ಹೊರಗೆ ಕಾರಿಡಾರಿನಲ್ಲಿ ನಡೆಯುತ್ತಿದ್ದಾಗ ಒಳಗೆ ಕುಳಿತಿದ್ದ ನಾಡಿಗ ಅದೇ ರೂಮಿಂದ ಹೊರಬಂದು ‘ಲೇ, ತಡಿಯೋ’ ಎನ್ನುತ್ತಾ ನನ್ನನ್ನು ಸೇರಿಕೊಂಡ.

‘ಈತ ಪರಿಚಯವೇ ಇಲ್ಲ, ಈಗಲೇ ಏಕವಚನವೇ? ಇದೆಂಥಾ ಚಿತ್ರರಂಗವಯ್ಯಾ!’ ಎಂದು ನನ್ನ ಈಗೋನೋ, ಸ್ವಾಭಿಮಾನವೋ ಕೆಣಕಿತ್ತು. ಹತ್ತಿರ ಬಂದವನೇ ಹಠಾತ್ತನೆ ನನ್ನ ಹೆಗಲ ಮೇಲೆ ಕೈಹಾಕಿ ‘ಬಾ, ಕೆಳಗಡೆ ಕಾಫಿ ಕುಡಿಯೋಣ’ ಎಂದು ನನ್ನನ್ನು ಎಳೆದುಕೊಂಡು ನಡೆಯತೊಡಗಿದ. ನನ್ನ ಮುಖಭಾವದಿಂದ ಅವನಿಗೆ ನನ್ನೊಳಗೆ ಏನೇನೆಲ್ಲಾ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದಿತ್ತೆಂದು ಕಾಣುತ್ತದೆ.

ಕಾಫಿ ಕುಡಿಯುವಾಗ ಹೇಳಿದ, ‘ಹಂಗೆ ಮಾತಾಡಿಸಿದ್ದು ನಿನಗೆ ಗುರ್ ಅಂದಿರಬೇಕು, ಅಲ್ವಾ? ನಾನು ನೀನೂ ಇದೇ ಚಿತ್ರರಂಗದಲ್ಲಿ ಕೆಲವು ದಶಕಗಳ ಕಾಲ ಒಳ್ಳೇ ಗೆಳೆಯರಾಗಿ ಜೊತೆಗಿರ್ತೀವಿ ಕಣೋ, ತುಂಬಾ ಜನರ ಜೊತೆ ಹಂಗನಿಸಲ್ಲ, ಅದಿಕ್ಕೆ ಹಂಗನ್ದೇ…” ಎಂದು ಅಜ್ಜಂಪುರದ ಜವಾರೀ ಬ್ರಾಹ್ಮಣ ಭಾಷೆಯಲ್ಲಿ, ದೊಡ್ಡ ಗಂಟಲಿನಲ್ಲಿ ಗಹಗಹಿಸಿದ್ದ. ಸಿಗರೇಟು ಸೇದುವಾಗ ನಾನೂ ಅವನನ್ನು ಆಗಿನಿಂದಲೇ ಏಕವಚನದಲ್ಲೇ ಕರೆಯುವಂತೆ ಮಾಡಿದ್ದ.
ಅನಂತರದ ಹತ್ತಾರು ವರ್ಷ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವಾದರೂ ಒಂದೇ ಚಿತ್ರದಲ್ಲಿ ಕೆಲಸ ಮಾಡಲೇ ಇಲ್ಲ.

ಮಾತಿಗೆ ಸಿಕ್ಕಾಗಲೆಲ್ಲಾ ‘ನಿನ್ನ ಅಂತಃಶಕ್ತಿ ನಿನಗೇ ಗೊತ್ತಿಲ್ಲ ಕಣೋ’ ಎಂದು ಹೇಳುತ್ತಲೇ ಇರುತ್ತಿದ್ದ. ‘ಯಾರಿಗೂ ಗೊತ್ತಿರಲ್ಲ ಬಿಡೋ, ನಿನಗೆ ನಿನ್ನ ಶಕ್ತಿ ಗೊತ್ತಿದೆಯಾ?’ ಎನ್ನುತ್ತಿದ್ದೆ ನಾನು. ಇನ್ನೂ ಕೆಲವೊಮ್ಮೆ ‘ನನಗೆ ಚೆನ್ನಾಗಿ ಗೊತ್ತಿದೆ, ಬೇರೇಯವರಿಗೆ ಅದನ್ನು ಅರಗಿಸಿಕೊಳ್ಳೋ ವೈಶಾಲ್ಯ ಇಲ್ಲ’ ಎನ್ನುತ್ತಿದ್ದೆ. ‘ಬಡ್ಡೀಮಗನೇ, ಅದಿಕ್ಕೇ ನೀನು ನೀನೇ…’ ಎನ್ನುತ್ತಿದ್ದ. ಹೊಗಳಿಕೆ ಮಾತುಗಳು ಅವನಿಂದ ಹೊರಕ್ಕೆ ಸಹಜವಾಗಿ ಹರಿಯುತ್ತಿದ್ದವು. ನನಗೆ ಬಹಳ ಕಷ್ಟ.
ಕೆಲವು ಬಾರಿ ‘ಮನೇಲಿ ನನ್ನ ಹೆಂಡತಿ ಅಡಿಗೆಮನೆ ಡಬ್ಬೀನೆಲ್ಲಾ ನೀಟಾಗಿ ತೊಳೆದು ಹೊರಗೆ ಬಿಸಿಲಿಗೆ ಒಣ ಹಾಕಿದಾಳೆ’ ಎನ್ನುತ್ತಿದ್ದ. ಚಿತ್ರರಂಗದ ಕೆಲವರು ‘ಇದು ಇವನ ಮಾಮೂಲಿ ಡೈಲಾಗು’ ಎಂದು ಹಿಂದೆ ಆಡಿಕೊಳ್ಳುತ್ತಿದ್ದರು ಕೂಡಾ.

ಆದರೆ ಅವರ ಪರಿಸ್ಥಿತಿಯೂ ಇವನಿಗಿಂತ ಒಂದಿಂಚೂ ಉತ್ತಮವಾಗಿರಲಿಲ್ಲ. ಹೇಳಿಕೊಳ್ಳಲು ಅವರಿಗೆ ಸಂಕೋಚವಿತ್ತೋ ಏನೋ!
ಕೆಲವು ವರ್ಷ್ಗಳ ನಂತರ ಅದ್ಯಾವಾಗಲೋ ಅವನು ಮ್ಯಾನೇಜರ್ ಕೆಲಸ ಬಿಟ್ಟು ಸ್ಕ್ರಿಪ್ಟ್ ರೈಟರ್ ಆಗಿದ್ದ. ಅವನು ಬರೆದ ಅನೇಕ ಸ್ಕ್ರಿಪ್ಟುಗಳು ಆ ಚಿತ್ರದ ನಿರ್ದೇಶಕನ ಹೆಸರಲ್ಲಿ ಟೈಟಲ್ ಕಾರ್ಡಿನಲ್ಲಿ ಇರುತ್ತಿದ್ದವು. ಅದೇ ಕಾಲದಲ್ಲಿ ಮಗಳ ಮದುವೆಯನ್ನು ಬಹಳ ಕಷ್ಟಪಟ್ಟು ಸರಳವಾಗಿ, ಆದರೆ ಸಾಂಪ್ರದಾಯಿಕವಾಗಿ ಮಾಡಿದ್ದ. ನನಗೂ ಆಹ್ವಾನಿಸಿದ್ದ. ನನಗೆ ಕೂಡಾ ಆಗ ಆರ್ಥಿಕವಾಗಿ ಅನನುಕೂಲ ಇದ್ದಿದ್ದು, ಬೇಕೆಂದೇ ಮದುವೆಗೆ ಹೋಗಿರಲಿಲ್ಲ.

ಫೇಸ್ಬುಕ್ಕಿನಲ್ಲಿ ನಾನು ಬಲಪಂಥೀಯತೆಯ ಬಗ್ಗೆ ಅಸಹನೆಯಿಂದ ಬರೆಯುತ್ತಿದ್ದಾಗಲೆಲ್ಲಾ ಅವನಿಗೆ ನನ್ನ ಮೇಲೆ ಸಿಟ್ಟು ಬರುತ್ತಿತ್ತೇನೋ! ಅಮೇಲಾಮೇಲೆ ಅವನು ಬಹುಶಃ ನನ್ನ ಪೋಸ್ಟುಗಳನ್ನು ನೋಡುವುದನ್ನೇ ಬಿಟ್ಟಿದ್ದನೇನೋ. ಆ ನಂತರ ನಾವು ಭೇಟಿ ಮಾಡಿದ್ದು ಬಹಳ ಕಡಿಮೆ. ಆಗಾಗ ಫೋನು ಮಾಡುತ್ತಿದ್ದವನು ಅದನ್ನೂ ಬಿಟ್ಟಿದ್ದ. ಬಿಡುವಿಲ್ಲವೆಂದೋ, ಅಥವಾ ಮೇಲಿನ ಕಾರಣಕ್ಕೋ ಗೊತ್ತಿಲ್ಲ.

ಆಮೇಲೆ ಮತ್ಯಾವಾಗಲೋ ಟಿವಿ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದ. ಬಹುಶಃ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವೀ) ಅವರು ತೀರಿಕೊಂಡ ನಂತರ ಅವರ ಜಾಗವನ್ನು ಸೀರಿಯಲ್ಲಿನವರು ಇವನ ಮೂಲಕ ತುಂಬಿಕೊಂಡಿದ್ದರೆಂದು ಅನಿಸುತ್ತದೆ. ಒಟ್ಟಲ್ಲಿ ಅವನ ಕೊನೆಯ ವರ್ಷಗಳಲ್ಲಿ ಸ್ವಲ್ಪ ಆರ್ಥಿಕವಾಗಿ ನೆಮ್ಮದಿಯಿಂದ ಇದ್ದನೇನೋ!
ಚಿತ್ರರಂಗಕ್ಕೆ ಬರುವಾಗ ಯಾರು ಯಾರು ತಮ್ಮ ಇಡೀ ಓದು, ಅನುಭವ, ಕಾಣ್ಕೆ ಮತ್ತು ಮಹತ್ವಾಕಾಂಕ್ಷೆ ಇಟ್ಟುಕೊಂಡು ಬರುತ್ತಾರೋ ಅಂಥವರನ್ನು ತನ್ನ ಜಿಗುಟಿಗೆ, ಜಿಡ್ಡಿಗೆ ಒಗ್ಗಿಸಿಕೊಂಡುಬಿಡುತ್ತೆ. ಬಂದಾದ ಮೇಲೆ ಅನಿವಾರ್ಯವಾಗಿ ಕೆಲವರು ಒಗ್ಗಿಯೂ ಬಿಡುತ್ತಾರೆ.

ಅಲ್ಲೋ ಅಥವಾ ಟಿವಿ ಮಾಧ್ಯಮದಲ್ಲೋ ಹಣ ಸಿಕ್ಕುವ ಕಸುಬನ್ನು ‘ಅವರಿಗೇನು ಬೇಕೋ ಅದನ್ನು ಕೊಡುತ್ತೇನೆ’ ಎಂದು ಬದುಕಿ ಹೀಗೆ ಕೊನೆಯಾಗುತ್ತಾರೆ. ಇಂತಹ ನೂರು ನಟನಟಿಯರು, ತಂತ್ರಜ್ಞರು, ಕಲಾವಿದರನ್ನು ನಾನು ತೋರಿಸುತ್ತೇನೆ ಬೇಕಾದರೆ. ನನ್ನಂತೆ ಕೆಲವೇ ಕೆಲವರು ಸೆಡ್ಡು ಹೊಡೆಯುತ್ತೇವೆ. ಹೊರಗೆ ಬರುತ್ತೇವೆ. ಪರ್ಯಾಯ ಕಟ್ಟುವ ಆಲೋಚನೆ ಮಾಡುತ್ತೇವೆ. ಸೋಲೋ ಗೆಲುವೋ ಮುಖ್ಯವಲ್ಲ, ಪ್ರಯತ್ನ ಮುಖ್ಯ ಎನ್ನುತ್ತೇವೆ. ನಾಡಿಗನಲ್ಲೂ ಆ ಶಕ್ತಿಯಿತ್ತು. ಆದರೆ ಅವನ ಬದುಕಿನ ಅನಿವಾರ್ಯಕ್ಕೋ, ಸಂಪ್ರದಾಯಸ್ಥ ಮನಸ್ಥಿತಿಗೋ ಅವನಲ್ಲಿ ಅದು ಸಾಧ್ಯವಾಗಲಿಲ್ಲ.
ಹೋಗೋ ಗೆಳೆಯಾ, ನಿನ್ನ ನೆನಪು ಸದಾ ಇರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 hours ago

ಮಾಜಿ ಸಚಿವ ವೈ.ನಾಗಪ್ಪ ನಿಧನ : ಸಂತಾಪ ಸೂಚನೆ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಹರಿಹರದಿಂದ ಮೂರು ಬಾರಿ ಶಾಸಕರಾಗಿ ಹಾಗೂ ಈ ಹಿಂದೆ 2004-05 ರ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಖಾತೆಯ ಸಚಿವರಾಗಿದ್ದ...

ದಿನದ ಸುದ್ದಿ2 hours ago

ಕೃಷಿ ಕಾಯ್ದೆಗಳು-2020 ಕುರಿತು ಆನ್‍ಲೈನ್ ತರಬೇತಿ

ಸುದ್ದಿದಿನ,ಬಾಗಲಕೋಟೆ : ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಕೊರೊನಾ ಹಿನ್ನಲೆಯಲ್ಲಿ ರೈತರ ಉಪಯೋಗಕ್ಕಾಗಿ ಅಕ್ಟೋಬರ 29 ರಂದು ಬೆಳಿಗ್ಗೆ 11 ರಿಂದ 12 ವರೆಗೆ ಗೂಗಲ...

ದಿನದ ಸುದ್ದಿ2 days ago

ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿಯ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಇರಲು ಹೇಗೆ ಸಾಧ್ಯ? : ಸಿದ್ದರಾಮಯ್ಯ ಕಿಡಿ

ಸುದ್ದಿದಿನ ಡೆಸ್ಕ್ : ಕಳೆದ ಮೂರು ತಿಂಗಳುಗಳ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದ ರೈತರು ಬೆಳೆ-ಮನೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ...

ದಿನದ ಸುದ್ದಿ2 days ago

ಮಹಾ ನವಮಿ ; ‘ಶರಣರ ಹುತಾತ್ಮ ದಿನ..!’

ಡಾ.ವಡ್ಡಗೆರೆ ನಾಗರಾಜಯ್ಯ ಶರಣ ಬಸವಣ್ಣ ಜಾತಿವಿನಾಶ ಚಳವಳಿ ರೂಪಿಸಿದ ಮಹಾ ಬಂಡಾಯಗಾರ. ಸಮಗಾರ ಹರಳಯ್ಯ ಮತ್ತು ಬಸವಣ್ಣನವರ ಬಾಂಧವ್ಯ ಅತ್ಯಂತ ನಿಕಟವಾಗಿತ್ತು. ಇವರಿಬ್ಬರ ಬಾಂಧವ್ಯ ಎಷ್ಟೊಂದು ನಿಕಟವಾಗಿತ್ತೆಂದರೆ...

ಅಂತರಂಗ2 days ago

ಬುದ್ಧ ಮತ್ತು ರೂಮಿ

ಹರೀಶ್ ಎಂ ಜಿ ಬುದ್ಧ ಮತ್ತು ರೂಮಿ ನನ್ನನ್ನು ಅತಿಯಾಗಿ ಆಕರ್ಷಿಸಿದ ವ್ಯಕ್ತಿತ್ವಗಳು. ಜಗತ್ತಿನ ಎಲ್ಲ ಭಾಗದ ಜನರು ಹುಟ್ಟಿನಿಂದಲೇ ಹೇರಲ್ಪಟ್ಟ ಧಾರ್ಮಿಕ, ಸಾಂಸ್ಕೃತಿಕ ಹಾಗು ಪ್ರಾಂತೀಯ...

ದಿನದ ಸುದ್ದಿ3 days ago

ರಾಜ್ಯದಲ್ಲಿಂದು 4,471 ಹೊಸ ಕೊರೊನಾ ಕೇಸ್ : ಯಾವ ಜಿಲ್ಲೆಯಲ್ಲಿ ಎಷ್ಟು..?

ಸುದ್ದಿದಿನ,ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 7,98,378* ಕ್ಕೆ ಏರಿಕೆಯಾಗಿದ್ದು, ಶನಿವಾರ 7,153 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆದರು.ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ...

ದಿನದ ಸುದ್ದಿ3 days ago

ದಸರಾ-ಮೆರವಣಿಗೆ : ಹೀಗಿದೆ ನಿಗಧಿತ ಕಲಾತಂಡಗಳ ನಿಯೋಜನೆ

ಸುದ್ದಿದಿನ,ಮೈಸೂರು : ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಸರ್ಕಾರದ ವತಿಯಿಂದ ಈ ಬಾರಿ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು,...

ದಿನದ ಸುದ್ದಿ3 days ago

ಕೊಳಕು ಭಾರತವೂ ಭಾರತದ ಬೌದ್ಧಿಕ ತ್ಯಾಜ್ಯವೂ

ನಾ ದಿವಾಕರ ನಮ್ಮೊಳಗಿನ ಕೊಳಕು ನಮಗೆ ಕಾಣದಾದಾಗ, ಬೇರೆಯವರ ದೂಷಣೆ ನಮ್ಮಲ್ಲಿ ಆಕ್ರೋಶ ಮೂಡಿಸುತ್ತದೆ. ಡೊಲಾಂಡ್ ಟ್ರಂಪ್ ಭಾರತವನ್ನು ಕೊಳಕು ಎಂದು ಜರೆದಿರುವುದು ಭಾರತದಲ್ಲಿ ತೀವ್ರ ಟೀಕೆ,...

ದಿನದ ಸುದ್ದಿ3 days ago

ರಾಣಿ ಚನ್ನಮ್ಮ ವಿವಿ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ನೂರು‌ ಕೋಟಿ ಅನುದಾನ: ಡಾ.ಅಶ್ವಥ್ ನಾರಾಯಣ

ಸುದ್ದಿದಿನ,ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಅನ್ನು ಹಿರೇಬಾಗೇವಾಡಿಯಲ್ಲಿಯೇ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ನೂರು ಕೋಟಿ ರೂಪಾಯಿ ಒದಗಿಸಲಾಗುವುದು ಎಂದು ಉಪ...

ದಿನದ ಸುದ್ದಿ3 days ago

ದಾವಣಗೆರೆ ಕೋವಿಡ್ ಮರಣ ಪ್ರಮಾಣ ಇಳಿಕೆ

ಸುದ್ದಿದಿನ,ದಾವಣಗೆರೆ: ನಗರದಲ್ಲಿ ಕೊರೋನಾ ಮರಣ ಪ್ರಮಾಣ ಈ ಹಿಂದೆ ಶೇ.3ರಷ್ಟಿದ್ದು, ಈ ಪ್ರಮಾಣ ಈಗ ಕಡಿಮೆ ಆಗುತ್ತಿದೆ. ಕಳೆದ ಒಂದು ವಾರದಲ್ಲಿ ಇಬ್ಬರು ಮೃತಪಟ್ಟಿದ್ದು ಮರಣ ಪ್ರಮಾಣವು...

Trending