Connect with us

ಸಿನಿ ಸುದ್ದಿ

ಜೂನಿಯರ್ ಎನ್‍ಟಿಆರ್ ತಂದೆ ಅಪಘಾತದಲ್ಲಿ ದುರ್ಮರಣ

Published

on

ಸುದ್ದಿದಿನ ಡೆಸ್ಕ್: ತೆಲುಗಿನ ಹಿರಿಯ ನಟ ಮಾಜಿ ಸಂಸದ ನಂದಮೂರಿ ಹರಿಕೃಷ್ಣ(61) ಅವರು ನಲ್ಲಗೊಂಡ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೂಲಗಳ ಪ್ರಕಾರ ನಲ್ಲಗೊಂಡ ಬಳಿ ಕಾರು ಪಲ್ಟಿ ಹೊಡೆದಿದ್ದು, ಸ್ಟೇರಿಂಗ್ ಬಲವಾಗಿ ಎದೆಗೆ ಬಡಿದ ಕಾರಣ ಅವರು ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ.

ನಂದಮೂರಿ ಅವರೊಂದಿಗೆ ಪ್ರಯಾಣ ಮಾಡುತ್ತಿದ್ದ ಇನ್ನಿಬ್ಬರೂ ಕೂಡ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಅಪಘಾತದ ಸಂದರ್ಭದಲ್ಲಿ ನಂದಮೂರಿ ಅವರೇ ಕಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಂದಮೂರಿ ಅವರು ಆಂಧ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಟ ಎನ್‍ಟಿಆರ್ ಅವರ ಪುತ್ರ ಹಾಗೂ ಆಂಧ್ರದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಾಮೈದುನ ಕೂಡ ಹೌದು.

ತೆಲುಗಿನ ಪ್ರಖ್ಯಾತ ನಟ ಜೂನಿಯರ್ ಎನ್‍ಟಿಆರ್ ಹಾಗೂ ನಂದಮೂರಿ ಕಲ್ಯಾಣ ರಾಮ್ ಅವರು ಇಬ್ಬರು ಮಕ್ಕಳು.

Advertisement
Click to comment

Leave a Reply

Your email address will not be published. Required fields are marked *

ದಿನದ ಸುದ್ದಿ

ಗಾನ ಗಾರುಡಿಗ ಎಸ್ ಪಿ ಬಿ ಇನ್ನಿಲ್ಲ..!

Published

on

ಸುದ್ದಿದಿನ, ಚೆನೈ :ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ (74) ಅವರು ಚಿಕಿತ್ಸೆ ಲಭಿಸದೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ವೈದ್ಯರು ತಿಳಿಸಿದ್ದಾರೆ.

ಗುರುವಾರ ಸಂಜೆ ಎಂಜಿಎಂ ಆಸ್ಪತ್ರೆಯು ಎಸ್‍ಪಿಬಿಯವರ ಹೆಲ್ತ್ ಬುಲೆಟಿನ್ ಅನ್ನು ಬಿಡುಗಡೆ ಮಾಡಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಲಾಗಿತ್ತು. ಎಸ್‍.ಪಿ. ಬಾಲಸುಬ್ರಹ್ಮಣ್ಯಂ ಅವರು ಆಗಸ್ಟ್ 5ನೇ ತಾರೀಖಿನಂದು ಕೊರೋನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ನಂತರ ಕೊರೋನಾ ನೆಗೆಟಿವ್ ವರದಿ ಬಂದಿತ್ತು. ಅವರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಳೆದ 24ಗಂಟೆಗಳಿಂದ ಎಸ್‍.ಪಿ.ಬಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Published

on

ಸುದ್ದಿದಿನ,ಚೆನ್ನೈ: ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಗುರುವಾರ ಸಂಜೆ ಎಂಜಿಎಂ ಆಸ್ಪತ್ರೆಯು ಎಸ್‍ಪಿಬಿಯವರ ಹೆಲ್ತ್ ಬುಲೆಟಿನ್ ಅನ್ನು ಬಿಡುಗಡೆ ಮಾಡಿದೆ. ಎಸ್‍.ಪಿ. ಬಾಲಸುಬ್ರಹ್ಮಣ್ಯಂ ಅವರು ಆಗಸ್ಟ್ 5ನೇ ತಾರೀಖಿನಂದು ಕೊರೋನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ಅವರಿಗೆ ಎಕ್ಮೋ ಮತ್ತು ಇನ್ನಿತರ ಲೈಫ್ ಸಪೋರ್ಟ್ ಮೇಲೆ ಚಿಕಿತ್ಸೆ ಕೊಡಲಾಗುತ್ತಿದೆ.

ಹೆಲ್ತ್ ಬುಲೆಟಿನ್

ಕಳೆದ 24ಗಂಟೆಗಳಿಂದ ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಆ ಕಾರಣಕ್ಕಾಗಿ ಅವರಿಗೆ ಹೆಚ್ಚು ಲೈಫ್ ಸಪೋರ್ಟ್ ಸಾಧನಗಳನ್ನು ಬಳಸಲಾಗುತ್ತಿದೆ. ಎಂಜಿಎಂ ಆಸ್ಪತ್ರೆಯ ವೈದ್ಯರ ತಂಡವು ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿ ಚಿಕಿತ್ಸೆ ನೀಡಾಲಗುತ್ತಿದೆ ಎಂದು ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪ್ರೀತಿಯ ಸುಬ್ಬಿ, ನಿನ್ನಗಲಿಕೆಯ ನೋವು ಹೇಳತೀರದು : ಡಾಲಿಯ ನೋವಿನ ನುಡಿ

Published

on

ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಅಪರೂಪದ ನಟ ರಾಕ್ ಲೈನ್ ಸುಧಾಕರ್ ಬುಧವಾರ ಶೂಟಿಂಗ್ ಸಮಯದಲ್ಲಿ ಮೇಕಪ್ ಹಚ್ಚಿಕೊಳ್ಳುವಾಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸುಧಾಕರ್ ವಿಶೇಷವಾದ ಧ್ವನಿ, ಬಾಡಿಲಾಂಗ್ವೇಜ್, ಡೈಲಾಗ್ ಡಿಲವರಿ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.

ಮನಸಾರೆ ಸಿನೆಮಾದಲ್ಲಿ ನೀನಾಸಂ ಸತೀಶ್ ಅವರ ಅಪ್ಪನ ಪಾತ್ರ (ಕುರುಡನ ಪಾತ್ರ) ಬಹುತೇಕ ಇವರ ಫ್ಯಾನ್ ಫಾಲೋಯಿಂಗ್ ಅನ್ನು ಹೆಚ್ಚಿಸಿತ್ತು‌. ಹಾಗೇ ಟಗರು ಸಿನೆಮಾದಲ್ಲೂ ಕೂಡ ಸುಬ್ಬಿ ಪಾತ್ರ ಇವರಿಗೆ ಹೆಸರು ತಂದುಕೊಟ್ಟಿತು. ಅಧ್ಯಕ್ಷ ಸಿನೆಮಾದಲ್ಲಿ ನಟ ರವಿಶಂಕರ್ ಅವರಿಗೆ ಕೌಂಟರ್ ಕೊಡುವ ಪಾತ್ರದಲ್ಲಿನ ಆಭಿನಯ ಚೆನ್ನಾಗಿಮಾಡಿದ್ದರು.

ಈ ಹಿನ್ನೆಲೆಯಲ್ಲಿ ಟಗರು ಸಿನೆಮಾದಲ್ಲಿ ಡಾಲಿ ಧನಂಜಯ್ ಜೊತೆ ಸುಬ್ಬಿ ಪಾತ್ರದ ಅಭೂತಪೂರ್ವ ಯಶಸ್ಸು ಕಂಡಿತು. ನಟ ಡಾಲಿ ಸುಬ್ಬಿ ಪಾತ್ರಧಾರಿ ರಾಕ್ ಲೈನ್ ಸಾವಿಗೆ ನೋವಿನಿಂದ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರೀತಿಯ ಸುಬ್ಬಿ,

ಸಿಕ್ಕಾಗಲೆಲ್ಲ ನಗಿಸುತ್ತ, ಬದುಕಿನ ಫಿಲಾಸಫಿಗಳ ನಿನ್ನದೇ ರೀತಿಯಲ್ಲಿ ಅದ್ಭುತವಾಗಿ ಹೇಳುತ್ತ, ಪ್ರೀತಿಯಿಂದ ತಬ್ಬಿ ಒಳ್ಳೆಯದೆ ಆಗುತ್ತದೆ ಎಂದು ಹರಸುತ್ತಿದ್ದೆ. ನಿನ್ನಗಲಿಕೆಯ ನೋವು ಹೇಳತೀರದು. ಶಾಂತಿಯಿಂದ ನಿದ್ರಿಸು. ಎಂದು ಅಂತಿಮ ನಮನ ಸಲ್ಲಿಸಿದ್ದಾರೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://m.facebook.com/story.php?story_fbid=202396181245879&id=100044264957540

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ11 hours ago

ದಾವಣಗೆರೆ | ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2018-19 ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ 6,7 ಮತ್ತು 8ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು...

ದಿನದ ಸುದ್ದಿ11 hours ago

ಟಿ.ನರಸೀಪುರ | ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ‌ ನೀತಿ ಖಂಡಿಸಿ ಭಾರತ ಪ್ರಜಾ ಸತ್ತಾತ್ಮಕ ಯುವ ಜನ ಫೆಡರೇಷನ್ ಪ್ರತಿಭಟನೆ

ಸುದ್ದಿದಿನ,ಟಿ. ನರಸೀಪುರ: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ದೇಶದ ಜನರ ಜೀವನ ತತ್ವಾರವಾಗಿದ್ದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾದರೆ ಬಡವರು ಮತ್ತಷ್ಟು ಕಡು ಬಡವರಾಗುತ್ತಿದ್ದಾರೆಂದು ಭಾರತ ಪ್ರಜಾ ಸತ್ತಾತ್ಮಕ ಯುವ ಜನ...

ದಿನದ ಸುದ್ದಿ11 hours ago

ಟಿ.ನರಸೀಪುರ | ರೈತ ವಿರೋಧಿ ಕಾಯ್ದೆ‌ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

ಸುದ್ದಿದಿನ,ಟಿ. ನರಸೀಪುರ: ಕೇಂದ್ರ ಸರ್ಕಾರದ ಎಪಿಎಂಸಿ, ವಿದ್ಯುತ್ ಖಾಸಗೀಕರಣ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ,...

ದಿನದ ಸುದ್ದಿ18 hours ago

ಕುಸುಮ ರೋಗಿಗಳ ಸಂಕಷ್ಟಕ್ಕೆ ಧ್ವನಿಯಾಗಿದ್ದ ಗಾನ ಕೋಗಿಲೆ; ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿಗೆ ಸಹಕಾರ ನೀಡಿದ್ದ ಎಸ್ಪಿಬಿ !

ಸುದ್ದಿದಿನ,ದಾವಣಗೆರೆ: ಸಂಗೀತ ಲೋಕದ ದಿಗ್ಗಜರಾಗಿದ್ದ ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಮಣ್ಯಂ ಅವರದ್ದು ಮಾತೃ ಹೃದಯ. ಸಂಕಷ್ಟದಲ್ಲಿರುವ ಜನರ ಬಗ್ಗೆ ಅವರ ಹೃದಯ ಸದಾ ಮಿಡಿಯಿತ್ತಿತ್ತು. ಇದಕ್ಕೆ ಶ್ರೇಷ್ಠ ನಿದರ್ಶನ...

ದಿನದ ಸುದ್ದಿ18 hours ago

ಗಾನ ಗಾರುಡಿಗ ಎಸ್ ಪಿ ಬಿ ಇನ್ನಿಲ್ಲ..!

ಸುದ್ದಿದಿನ, ಚೆನೈ :ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ (74) ಅವರು ಚಿಕಿತ್ಸೆ ಲಭಿಸದೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ವೈದ್ಯರು ತಿಳಿಸಿದ್ದಾರೆ. ಗುರುವಾರ ಸಂಜೆ ಎಂಜಿಎಂ...

ದಿನದ ಸುದ್ದಿ19 hours ago

ರಕ್ತಹೀನತೆ ನಿವಾರಣೆಗೆ ರಾಮಬಾಣ ಆಗಿರುವ‌ ಸೀತಾಫಲದ ಹಲವು ಉಪಯೋಗ ತಿಳಿಯಿರಿ

ಆರೋಗ್ಯದ ಸಿರಿ ಹೆಚ್ಚಿಸುವ ಸೀತಾಫಲದ ತವರು ದಕ್ಷಿಣ ಅಮೆರಿಕಾ. ಇದಕ್ಕೆ ಅಲ್ಲಿ ‘ಆತಾ’ ಎಂಬ ಹೆಸರಿದೆ ಎಂದು ಹೇಳಲಾಗುತ್ತದೆ. ಹಿಂದಿಯಲ್ಲಿ ‘ಆತ್’ ಗುಜರಾತಿನಲ್ಲಿ ‘ಆಟ’ ಮರಾಠಿಯಲ್ಲಿ ‘ಆತಾಫಾಲ್’...

ದಿನದ ಸುದ್ದಿ19 hours ago

ರೈತ ವಿರೋಧಿ ಕಾನೂನು ವಿರೋಧಿಸಿ ರೈತಸಂಘದಿಂದ ಪ್ರತಿಭಟನೆ : ರೈತಮುಖಂಡರ ಬಂಧನ

ಸುದ್ದಿದಿನ,ಚಾಮರಾಜನಗರ: ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮವನ್ನು ವಿರೋಧಿಸಿ ಇಂದು ಚಾಮರಾಜನಗರದಲ್ಲಿ ಹೆದ್ದಾರಿ ಸಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದ ಕರ್ನಾಟಕ...

ದಿನದ ಸುದ್ದಿ23 hours ago

ನುಡಿಯ ಒಡಲು – 16 | ವಿಚಾರ ಸಂವಹನ : ತೊಡಕುಗಳೆಂತಹವು..?

ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ವಿಚಾರ ಎಂಬ ಪರಿಕಲ್ಪನೆಯ ಅರ್ಥ ವ್ಯಾಪ್ತಿ ದೊಡ್ಡದು. ಇದರ ತಾತ್ವಿಕ ಚೌಕಟ್ಟನ್ನು ಕುರಿತು ವಿಶ್ಲೇಷಣೆ...

ಲೈಫ್ ಸ್ಟೈಲ್1 day ago

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ | ಏನಿದು MDMA ಡ್ರಗ್ ಮಾತ್ರೆ..? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್ : ಮಿಸ್ ಮಾಡ್ದೆ ಓದಿ

ವೈಶಾಲಿ ದುರ್ಗಪ್ಪ ಡ್ರಗ್ಸ್ ಮಾಫಿಯಾ ಜಗತ್ತಿಗೆ ಹೊಸದೇನಲ್ಲ. ಇದುವರೆಗೂ‌ ಈ‌ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ತಡೆದುಹಾಕಲು ಪೊಲೀಸ್ ವ್ಯವಸ್ಥೆಗೆ ಯಾಕೆ ಸಾಧ್ಯವಾಗಿಲ್ಲ ಎಂಬ ಯಕ್ಷ ಪ್ರಶ್ನೆ‌ ಕಾಡುತ್ತದೆ....

ದಿನದ ಸುದ್ದಿ1 day ago

ಕಳೆದ 24ಗಂಟೆಗಳಿಂದ ಎಸ್‍.ಪಿ.ಬಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ಸುದ್ದಿದಿನ,ಚೆನ್ನೈ: ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಗುರುವಾರ ಸಂಜೆ ಎಂಜಿಎಂ ಆಸ್ಪತ್ರೆಯು ಎಸ್‍ಪಿಬಿಯವರ...

Trending