Connect with us

ಸಿನಿ ಸುದ್ದಿ

ಸ್ನೇಹ, ಪ್ರೀತಿಗಿಲ್ಲ ಅಂತರದ ಭೇದಭಾವ

Published

on

ಸುದ್ದಿದಿನ ಡೆಸ್ಕ್ “ಅಂಕಲ್” ಕಾಲಿವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಮಮ್ಮುಟ್ಟಿ ನಟನೆಯ ಚಿತ್ರ. ಪ್ರಸ್ತುತ ಸಾಮಾಜಿಕ ವ್ಯವಸ್ಥೆ ಪ್ರತಿಬಿಂಬಿಸುವ ಉತ್ತಮ ನಿದರ್ಶನದ ಚಿತ್ರ. ಈ ಚಿತ್ರದಲ್ಲಿ ಒಬ್ಬ ಯುವತಿ ತನ್ನ ತಂದೆಯ ಸ್ನೇಹಿತನ ಜತೆಗಿನ ಸಂಬಂಧದ ಬಗ್ಗೆ ಹರಡುವ ಗಾಸಿಪ್ ಕುರಿತಾಗಿದೆ.

ಮನುಷ್ಯ ಜೀವನದಲ್ಲಿ ಸ್ನೇಹ, ಪ್ರೀತಿ ಎಂಬುದು ಎಲ್ಲ ಎಲ್ಲೆಗಳ ಮೀರಿ ನಿಂತಿರುವಂಥ. ಇದಕ್ಕೆ ಧರ್ಮ, ಜಾತಿ, ವಯಸ್ಸು ಎಲ್ಲವೂ ಅಗಣಿತ. ಇಂತಹ ಸಂಬಂಧವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿರುವ ಚಿತ್ರ (ಬಿಡುಗಡೆ ಆಗಿಲ್ಲ) ಇದಾಗಿರಬಹುದೆಂಬ ಪರಿಕಲ್ಪನೆ ನಮ್ಮದು. ಇದರಲ್ಲಿ ಈ ಲೇಖನದ ಉದ್ದೇಶ ಬೇರೆಯದು.

ಮಿಲಿಂದ್ ಸೋಮನ್ ಪತ್ತಿಜೊತೆಗೆ

ಈಚೆಗಷ್ಟೇ ಖಾತ್ಯ ನಟ ಮಿಲಿಂದ್ ಸೋಮನ್ ಮದುವೆಯಾಗಿದ್ದಾರೆ. ಅದು ತಮಗಿಂತ ೨೫ ಸಣ್ಣ ವಯಸ್ಸಿನ ಯುವತಿಯನ್ನ. ಇವರಿಬ್ಬರ ಸ್ನೇಹವಾಗಿದ್ದು ಕೆಲ ವರ್ಷಗಳ ಹಿಂದೆಯಷ್ಟೆ. ಪರಸ್ಪರ ಪ್ರೀತಿಸುವ ಇಬ್ಬರ ನಡುವೆ ದೈಹಿಕ, ಮಾನಸಿಕವಾಗಿ ಅಜಗಜ ಅಂತರವಿದೆ. ಆದರೆ, ಈ ಅಂತರ ಅವರಿಬ್ಬರ ಸ್ನೇಹ, ಪ್ರೀತಿಯಲ್ಲಿ ಶೂನ್ಯವಾಗಿದೆ.

27ವರ್ಷದ ಯುವತಿಯೊಂದಿಗೆ ಮದುವೆಯಾದ 54 ವರ್ಷದ ಮಿಲಿಂದ್: 54 ವರ್ಷಗಳ ಮಾಡೆಲ್ ಮಿಲಿಂದ್ ಸೋಮನ್ ತಮಗಿಂತ 27 ವರ್ಷದ ಅಸ್ಸಾಂನ ಯುವತಿ, ಗಗನಸಖಿ ಅಂಕಿತಾ ಕೊನ್ವಾರ್ ಭಾನುವಾರ ಮದುವೆಯಾಗಿದ್ದಾರೆ.

ಮಿಲಿಂದ್- ಅಂಕಿತಾದ್ದು ಫಸ್ಟ್ ಸೈಟ್ ಅಟ್ ಲವ್:
ಮಿಲಿಂದ್ ಅಂಕಿತಾ ಅವರನ್ನು ನೋಡಿದ್ದು ಚೆನ್ನೈನ ನೈಟ್ ಕ್ಲಬ್ ಒಂದರಲ್ಲಿ. ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿತ್ತು. ಕೂಡಲೇ ಮಿಲಿಂದ್ ತಮ್ಮ ಮೊಬೈಲ್ ನಂಬರ್ ನ್ನು ಅಂಕಿತಾ ಅವರೊಂದಿಗೆ ಶೇರ್ ಮೊಡಿಕೊಂಡಿದ್ದರು. ಚಾಟಿಂಗ್, ಡೇಟಿಂಗ್ ಅಂಥ ಅನೇಕ ವರ್ಷಗಳ ಮುಂದುವರಿತ್ತು. ಇದು ಏಪ್ರಿಲ್‌ 22ರಂದು ವೈವಾಹಿಕ ಸಂಬಂಧದೊಂದಿಗೆ ಗಟ್ಟಿಕೊಂಡಿತು.

ಯಾರೀ ಅಂಕಿತಾ ಕೋನ್ವಾರ್: ಅಸ್ಸಾಂ ನ ಗುವಾಹತಿ ನಗರದವರಾದ ಅಂಕಿತಾ ಕೋನ್ವಾರ್ ಅವರ ಮೊದಲ ಹೆಸರು ಸುನ್ಕುಸ್ಮಿತಾ. ಇವರ ತಂದೆ ನಿರಂಜನ ಕೋನ್ವಾರ್. ತಾಯಿ ನಾಗೇನ್ ಕೋನ್ವಾರ್. ಜಾರ್ಣ ಕೋನ್ವಾರ್ ಬರುಹ.

2013ರಲ್ಲಿ ಏರ್ ಏಷ್ಯಾ ನಾಗರಿಕ ವಿಮಾನಯಾನ ಕಂಪನಿಯಲ್ಲಿ ಕ್ಯಾಬಿನ್ ಕ್ರೂ ಎಕ್ಸಿಕ್ಯುಟಿವ್ ಆಗಿ ವೃತ್ತಿ ಆರಂಭಿಸಿದ ಅಂಕಿತಾ, ಅಸ್ಸಾಮಿ, ಹಿಂದಿ, ಇಂಗ್ಲಿಷ್, ಫ್ರೆಂಚ್ ಭಾಷೆಗಳನ್ನು ಬಲ್ಲವರು.

2015ರ ನವೆಂಬರ್‌ನಲ್ಲಿ 10k ಮ್ಯಾರಥಾನ್ ನ್ನು ಮಿಲಿಂದ್ ಜತೆ ಓಡಿದ್ದಾರೆ. ಪ್ರಯಾಣವನ್ನು ಇಷ್ಟಪಡುವ ಕೋನ್ವಾರ್, 2018 ಫೆಬ್ರವರಿಯಲ್ಲಿ ಸೀನಿಯರ್ ಫ್ಲೈಟ್ ಅಟೆಂಡೆಂಟ್ ಹುದ್ದೆಗೆ ರಾಜೀನಾಮೆ ಕೊಟ್ಟರು.

ಮಿಲಿಂದ್ ಹುಟ್ಟಿದ್ದು ಎಲ್ಲಿ ಗೊತ್ತಾ? ಸೋಮನ್ ಹುಟ್ಟಿದ್ದು ಸ್ಕಾಟ್ಲೆಂಡಿನ ಗ್ಲ್ಯಾಸ್ಗೋದಲ್ಲಿ. ನಂತರ ಅವರ ಪಾಲಕರು ಇಂಗ್ಲೆಂಡ್, ನಂತರ ಭಾರತಕ್ಕೆ ಮರಳಿದರು. 1973ರಲ್ಲಿ ಮುಂಬೈನ ದಾದರ್ ನಲ್ಲಿ ನೆಲೆಯೂರಿದರು. ಎಂಎಚ್ ಸಾಬೂ ಸಿದ್ದಿಕ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪಡೆದಿದ್ದಾರೆ.

ಮಿಲಿಂದ್ ವೃತ್ತಿ ಯಾವುದು ಗೊತ್ತಾ? ಡಿಪ್ಲೋಮಾ ಇಂಜಿನಿಯರಿಂಗ್ ಪಡೆದಿದ್ದರೂ ಆ ವೃತ್ತಿ ಆಯ್ಕೆ ಮಾಡಿಕೊಳ್ಳದೇ ಮಾಡೆಲ್ ಆಗಿ, ಮ್ಯಾರಥಾನ್ ಓಟಗಾರ ಆಗಿ ಪ್ರಸಿದ್ಧಿ ಪಡೆದಿದ್ದಾರೆ. 62000 ಮಹಿಳೆಯರು ಸಂಘದ ಸದಸ್ಯರಿರುವ ಮ್ಯಾರಥಾನ್ ಸಂಘದಲ್ಲಿ ಮಿಲಿಂದ್ ಸಕ್ರಿಯರಾಗಿದ್ದಾರೆ.
ಮಿಲಿಂದ್‌ ಅವರು ಐರನ್ ಮ್ಯಾನ್ ಮತ್ತು ಅಲ್ಟ್ರಾಮ್ಯಾನ್ ನಂತಹ ಜಗತ್ತಿನ ಪ್ರತಿಷ್ಠಿತ ಮ್ಯಾರಥಾನ್ ಮತ್ತು ಟ್ರಯಥ್ಲಾನ್‌ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಮಧು ಸಪ್ರೆ ಅವರ ಜತೆಗಿತ್ತು ಲಿವಿಂಗ್‌ ಟುಗೆದರ್ ಸಂಬಂಧ: ಮಿಲಿಂದ್ ಅವರು ಮೊದಲು ಮಧು ಸಪ್ರೆ ಅವರ ಜತೆಗೆ 1995ರವರೆಗೆ ಲಿವಿಂಗ್‌ ಟುಗೆದರ್ ಸಂಬಂಧ ಹೊಂದಿದ್ದರು. 1992ರ ಮಿಸ್ ಯೂನಿವರ್ಸ್ ಸ್ಪರ್ಧೆಯ ಎರಡನೇ ರನ್ನರ್-ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡವರು.

ಜಾಹಿರಾತಿಗಾಗಿ ಬೆತ್ತಲಾಗಿದ್ದರು: ಮಿಲಿಂದ್ ಸೋಮನ್ ಕೆಲ ವರ್ಷಗಳ ಹಿಂದೆ ರೂಪದರ್ಶಿ, ನಟಿ ಮಧು ಸಪ್ರಯೊಂದಿಗೆ ಬೆತ್ತಲೆಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇವರ ವಿರುದ್ಧ ಮುಂಬೈ ಪೊಲೀಸರು ದೂರು ದಾಖಲಿಸಿದ್ದರು.

ಮಿಲಿಂದ್ ಅವರ ಮೊದಲ ಪತ್ನಿ ಯಾರು?: ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೋನ್ವಾರ್ ಎರಡನೇ ಪತ್ನಿ. ಮಿಲಿಂದ್ ಫ್ರೆಂಚ್ ನಟಿ ಮೈಲೆನೆ ಜಂಪನಾಯ್ ಅವರೊಂದಿಗೆ ಮದುವೆ ಆಗಿದ್ದರು. ವ್ಯಾಲಿ ಆಫ್ ಫ್ಲವರ್ ಚಿತ್ರದಲ್ಲಿ ನಟಿಸಿದ್ದರು. 2008ರಲ್ಲಿ ಮಿಲಿಂದ್ ಮತ್ತು ಮೈಲೆನೆ ಬೇರೆಯಾದರು. 2009ರಲ್ಲಿ ದಂಪತಿ ವಿಚ್ಛೇದನ ಪಡೆದರು. ಇದಾದ 9 ವರ್ಷಗಳ ನಂತರ ಮದುವೆಯಾಗಿದ್ದಾರೆ.

ದಿನದ ಸುದ್ದಿ

ಕಳೆದ 24ಗಂಟೆಗಳಿಂದ ಎಸ್‍.ಪಿ.ಬಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Published

on

ಸುದ್ದಿದಿನ,ಚೆನ್ನೈ: ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಗುರುವಾರ ಸಂಜೆ ಎಂಜಿಎಂ ಆಸ್ಪತ್ರೆಯು ಎಸ್‍ಪಿಬಿಯವರ ಹೆಲ್ತ್ ಬುಲೆಟಿನ್ ಅನ್ನು ಬಿಡುಗಡೆ ಮಾಡಿದೆ. ಎಸ್‍.ಪಿ. ಬಾಲಸುಬ್ರಹ್ಮಣ್ಯಂ ಅವರು ಆಗಸ್ಟ್ 5ನೇ ತಾರೀಖಿನಂದು ಕೊರೋನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ಅವರಿಗೆ ಎಕ್ಮೋ ಮತ್ತು ಇನ್ನಿತರ ಲೈಫ್ ಸಪೋರ್ಟ್ ಮೇಲೆ ಚಿಕಿತ್ಸೆ ಕೊಡಲಾಗುತ್ತಿದೆ.

ಹೆಲ್ತ್ ಬುಲೆಟಿನ್

ಕಳೆದ 24ಗಂಟೆಗಳಿಂದ ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಆ ಕಾರಣಕ್ಕಾಗಿ ಅವರಿಗೆ ಹೆಚ್ಚು ಲೈಫ್ ಸಪೋರ್ಟ್ ಸಾಧನಗಳನ್ನು ಬಳಸಲಾಗುತ್ತಿದೆ. ಎಂಜಿಎಂ ಆಸ್ಪತ್ರೆಯ ವೈದ್ಯರ ತಂಡವು ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿ ಚಿಕಿತ್ಸೆ ನೀಡಾಲಗುತ್ತಿದೆ ಎಂದು ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪ್ರೀತಿಯ ಸುಬ್ಬಿ, ನಿನ್ನಗಲಿಕೆಯ ನೋವು ಹೇಳತೀರದು : ಡಾಲಿಯ ನೋವಿನ ನುಡಿ

Published

on

ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಅಪರೂಪದ ನಟ ರಾಕ್ ಲೈನ್ ಸುಧಾಕರ್ ಬುಧವಾರ ಶೂಟಿಂಗ್ ಸಮಯದಲ್ಲಿ ಮೇಕಪ್ ಹಚ್ಚಿಕೊಳ್ಳುವಾಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸುಧಾಕರ್ ವಿಶೇಷವಾದ ಧ್ವನಿ, ಬಾಡಿಲಾಂಗ್ವೇಜ್, ಡೈಲಾಗ್ ಡಿಲವರಿ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.

ಮನಸಾರೆ ಸಿನೆಮಾದಲ್ಲಿ ನೀನಾಸಂ ಸತೀಶ್ ಅವರ ಅಪ್ಪನ ಪಾತ್ರ (ಕುರುಡನ ಪಾತ್ರ) ಬಹುತೇಕ ಇವರ ಫ್ಯಾನ್ ಫಾಲೋಯಿಂಗ್ ಅನ್ನು ಹೆಚ್ಚಿಸಿತ್ತು‌. ಹಾಗೇ ಟಗರು ಸಿನೆಮಾದಲ್ಲೂ ಕೂಡ ಸುಬ್ಬಿ ಪಾತ್ರ ಇವರಿಗೆ ಹೆಸರು ತಂದುಕೊಟ್ಟಿತು. ಅಧ್ಯಕ್ಷ ಸಿನೆಮಾದಲ್ಲಿ ನಟ ರವಿಶಂಕರ್ ಅವರಿಗೆ ಕೌಂಟರ್ ಕೊಡುವ ಪಾತ್ರದಲ್ಲಿನ ಆಭಿನಯ ಚೆನ್ನಾಗಿಮಾಡಿದ್ದರು.

ಈ ಹಿನ್ನೆಲೆಯಲ್ಲಿ ಟಗರು ಸಿನೆಮಾದಲ್ಲಿ ಡಾಲಿ ಧನಂಜಯ್ ಜೊತೆ ಸುಬ್ಬಿ ಪಾತ್ರದ ಅಭೂತಪೂರ್ವ ಯಶಸ್ಸು ಕಂಡಿತು. ನಟ ಡಾಲಿ ಸುಬ್ಬಿ ಪಾತ್ರಧಾರಿ ರಾಕ್ ಲೈನ್ ಸಾವಿಗೆ ನೋವಿನಿಂದ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರೀತಿಯ ಸುಬ್ಬಿ,

ಸಿಕ್ಕಾಗಲೆಲ್ಲ ನಗಿಸುತ್ತ, ಬದುಕಿನ ಫಿಲಾಸಫಿಗಳ ನಿನ್ನದೇ ರೀತಿಯಲ್ಲಿ ಅದ್ಭುತವಾಗಿ ಹೇಳುತ್ತ, ಪ್ರೀತಿಯಿಂದ ತಬ್ಬಿ ಒಳ್ಳೆಯದೆ ಆಗುತ್ತದೆ ಎಂದು ಹರಸುತ್ತಿದ್ದೆ. ನಿನ್ನಗಲಿಕೆಯ ನೋವು ಹೇಳತೀರದು. ಶಾಂತಿಯಿಂದ ನಿದ್ರಿಸು. ಎಂದು ಅಂತಿಮ ನಮನ ಸಲ್ಲಿಸಿದ್ದಾರೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://m.facebook.com/story.php?story_fbid=202396181245879&id=100044264957540

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಮೇಕಪ್ ಹಚ್ಚುವಾಗಲೇ ಹೃದಯಾಘಾತ : ಸ್ಯಾಂಡಲ್ ವುಡ್ ನ ಹಾಸ್ಯ ಕಲಾವಿದ ಸುಧಾಕರ್ ನಿಧನ

Published

on

ಸುದ್ದಿದಿನ, ಬೆಂಗಳೂರು : ಹಿರಿಯ ಸಿನಿಮಾ ಕಲಾವಿದರಾದ ರಾಕ್ ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

ಇವರು ಕನ್ನಡ ಹಲವು ಸಿನೆಮಾಗಳಲ್ಲಿ‌ ಹಾಸ್ಯ ನಟರಾಗಿ ಜನರ ಮನಸ್ಸನ್ನು ಗೆದ್ದಿದ್ದರು. ಟಗರು, ಮನಸಾರೆ, ಅಧ್ಯಕ್ಷ ಸಿನೆಮಾಗಳು ಇವರಿಗೆ ತುಂಬಾ ಹೆಸರು ತಂದುಕೊಟ್ಟಿದ್ದವು. ಸುಧಾಕರ್ ಸಾವಿಗೆ ಸ್ಯಾಂಡಲ್ ವುಡ್ ಸಂತಾಪ ಸೂಚಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 hour ago

ಕಳೆದ 24ಗಂಟೆಗಳಿಂದ ಎಸ್‍.ಪಿ.ಬಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ಸುದ್ದಿದಿನ,ಚೆನ್ನೈ: ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಗುರುವಾರ ಸಂಜೆ ಎಂಜಿಎಂ ಆಸ್ಪತ್ರೆಯು ಎಸ್‍ಪಿಬಿಯವರ...

ದಿನದ ಸುದ್ದಿ2 hours ago

ಚನ್ನಗಿರಿ | ಗದ್ದೆಯೊಂದರಲ್ಲಿ ಚಿಪ್ಪು ಹಂದಿ ಪತ್ತೆ ..!

ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲೂಕಿನ ಅರಿಶಿನ ಘಟ್ಟ ಗ್ರಾಮದ ಗದ್ದೆಯೊಂದರಲ್ಲಿ ಚಿಪ್ಪು ಹಂದಿಯೊಂದು ಪತ್ತೆಯಾಗಿದ್ದು, ಆ ಚಿಪ್ಪು ಹಂದಿಯನ್ನು ಕಾಡಿನೊಳಗೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾಗಿ ಉಪ ಅರಣ್ಯ...

ದಿನದ ಸುದ್ದಿ8 hours ago

ಪ್ರೀತಿಯ ಸುಬ್ಬಿ, ನಿನ್ನಗಲಿಕೆಯ ನೋವು ಹೇಳತೀರದು : ಡಾಲಿಯ ನೋವಿನ ನುಡಿ

ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಅಪರೂಪದ ನಟ ರಾಕ್ ಲೈನ್ ಸುಧಾಕರ್ ಬುಧವಾರ ಶೂಟಿಂಗ್ ಸಮಯದಲ್ಲಿ ಮೇಕಪ್ ಹಚ್ಚಿಕೊಳ್ಳುವಾಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸುಧಾಕರ್...

ಸಿನಿ ಸುದ್ದಿ11 hours ago

ಮೇಕಪ್ ಹಚ್ಚುವಾಗಲೇ ಹೃದಯಾಘಾತ : ಸ್ಯಾಂಡಲ್ ವುಡ್ ನ ಹಾಸ್ಯ ಕಲಾವಿದ ಸುಧಾಕರ್ ನಿಧನ

ಸುದ್ದಿದಿನ, ಬೆಂಗಳೂರು : ಹಿರಿಯ ಸಿನಿಮಾ ಕಲಾವಿದರಾದ ರಾಕ್ ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಕನ್ನಡ ಹಲವು ಸಿನೆಮಾಗಳಲ್ಲಿ‌ ಹಾಸ್ಯ...

ದಿನದ ಸುದ್ದಿ11 hours ago

ದಾವಣಗೆರೆ | ಕೊರೋನಾ‌ ನಿಯಂತ್ರಣಕ್ಕೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ ಡಿಸಿ,‌ಎಸ್ ಪಿ,‌ಸಿಇಒ : ವಿಡಿಯೋ ನೋಡಿ

ಸುದ್ದಿದಿನ,ದಾವಣಗೆರೆ :ದೇಶಾದ್ಯಂತ ಕೊರೋನಾ ಅರ್ಭಟ ಹೆಚ್ಚುತ್ತಲೇ ಇದೆ. ಇದರಂತೆಯೆ ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ದಿನದಿಂದ‌ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ‌ ಹಿನ್ನೆಲೆಯಲ್ಲಿ...

ದಿನದ ಸುದ್ದಿ13 hours ago

ಭದ್ರಾವತಿ | ಬರೋಬ್ಬರಿ‌ 2 ಲಕ್ಷ ಒಡವೆ ಕದ್ದ ಕಳ್ಳರ ಬಂಧನ

ಸುದ್ದಿದಿನ, ಭದ್ರಾವತಿ : ಭದ್ರಾವತಿ ಗ್ರಾಮಾಂತರ ವೃತ್ತ‌ವ್ಯಾಪ್ತಿಯಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣದ ಇಬ್ಬರು ಆರೋಪಿತರನ್ನು ಬಂಧನ ಹಾಗೂ 50 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 240...

ದಿನದ ಸುದ್ದಿ14 hours ago

ಚಾಮುಂಡಿ ಬೆಟ್ಟದ ಆವರಣದಲ್ಲಿ ‘ಮಾರನಾಯಕರ’ ಪುತ್ತಳಿ ನಿರ್ಮಾಣಕ್ಕೆ ಆಗ್ರಹ

ಸುದ್ದಿದಿನ,ಮೈಸೂರು: ಚಾಮುಂಡಿ ಬೆಟ್ಟದ ಆವರಣದಲ್ಲಿ ಮಾರನಾಯಕರ ಪುತ್ತಳಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಕೀಲ ಪಡುವಾರಹಳ್ಳಿ ಎಂ. ರಾಮಕೃಷ್ಣ ನೇತೃತ್ವದಲ್ಲಿ ನಾಯಕ ಸಮುದಾಯ ಪ್ರತಿಭಟನೆ...

ದಿನದ ಸುದ್ದಿ16 hours ago

ಹೆಚ್ಚು ಬೆಳೆದು ಹೆಚ್ಚೆಚ್ಚು ಜನರಿಗೆ ‘ಇಬ್ಬಡ್ಲ’ದ ಹುಚ್ಚು ಹಿಡಿಸಿಬಿಡಬಹುದು

ಹರೀಶ್ ಬಿ ಎಸ್, ಸಹಾಯಕ ಪ್ರಾಧ್ಯಾಪಕರು,ತೋಟಗಾರಿಕೆ ಮಹಾವಿದ್ಯಾಲಯ,ಮೈಸೂರು ಕ್ಯಾಕ್ರಿಕೆ, ಕೆಕ್ಕರಿಕೆ, ಇಬ್ಬಡ್ಲ, ಬನಸ್ಪತೆ…… ಕೇಳಿದ್ದೀರಾ ಈ ಹೆಸರುಗಳನ್ನು? ಕೇರಳಿಗರು ಇದಕ್ಕೆ ಕಕ್ಕರಿ ಅಥವಾ ಪೊಟ್ಟು ವಳ್ಳರಿ ಎನ್ನುವರು....

ಲೈಫ್ ಸ್ಟೈಲ್16 hours ago

ಹಣೆಬರಹ ಪೂರ್ವ – ನಿಯೋಜಿತವೇ..?

ಸದಾ ಸ್ವರ್ಗ ಹಾಗೂ ನರಕದ ಆಮಿಷ ಹಾಗೂ ಭಯಕ್ಕೆ ಒಳಗಾಗಿ ಅತೀವ ಧಾರ್ಮಿಕತೆಗೆ ಒಳಗಾದ ಮಂದಿ ಜನರಲ್ ಆಗಿ ಒಪ್ಪುವ ಕಾಮನ್ ಸಂಗತಿಯೆಂದರೆ “ಹಣೆಬರಹ”. ನಾವು ಇಲ್ಲಿ...

ದಿನದ ಸುದ್ದಿ16 hours ago

ದಾವಣಗೆರೆ | ರಾಜ್ಯ ಮಹಿಳಾ ನಿಲಯದಲ್ಲಿ ನವಜೀವನಕ್ಕೆ ಕಾಲಿಟ್ಟ ಮೂರು ಜೋಡಿ : ನವದಂಪತಿಗಳಿಗೆ ಹರಸಿ, ಶುಭ ಕೋರಿದ ಜಿ.ಪಂ. ಅಧ್ಯಕ್ಷೆ, ಡಿಸಿ, ಎಸ್‍ಪಿ, ಸಿಇಒ

ಸುದ್ದಿದಿನ,ದಾವಣಗೆರೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಹಿಳಾ ನಿಲಯದಲ್ಲಿ ಚಟುವಟಿಕೆಗಳು ಎಂದಿನಂತೆ ಸಾಮಾನ್ಯವಾಗಿರದೆ, ಬುಧವಾರದಂದು ಸಂಭ್ರಮ, ಗಡಿಬಿಡಿ ಮನೆಮಾಡಿತ್ತು. ಮಂಗಳವಾದ್ಯ...

Trending