Connect with us

ಸಿನಿ ಸುದ್ದಿ

‘ಜೂನಿಯರ್ ರಾಜ್ ಕುಮಾರ್’ ಜಯಕುಮಾರ್ ಆಸ್ಪತ್ರೆ ಖರ್ಚಿಗೆ ನೆರವಾಗಿ ; ಪತ್ನಿ ಪದ್ಮಾವತಿ ಅಳಲು

Published

on

ವರೊಬ್ಬ ರಂಗಭೂಮಿಯ ಅಭಿಜಾತ ಕಲಾವಿದ. ಅವರೊಳಗೆ ವರನಟ ಡಾ. ರಾಜಕುಮಾರ್ ಅವರ ಪರಕಾಯ ಪ್ರವೇಶ. ಮತ್ತೆ ಮತ್ತೆ ರಾಜಕುಮಾರ್ ನಮ್ಮೆದುರು ಪ್ರತ್ಯಕ್ಷವಾಗಿಸುವ ಅಭಿನಯ ಚತುರತೆ ಅವರದು. ನಾಟಕ ಯಾವುದೇ ಇರಲಿ ಈ ಕಲಾವಿದನಿಗೆ ಹೀರೋ ಪಾತ್ರ ಮುಡಿಪು. ಅಲ್ಲಿ ಡಾ. ರಾಜ್ ಛಾಪು. ನೋಡಲು ವರನಟನ ತದ್ರೂಪು. ಹಾಗೆಂದು ಅನುಕರಣೀಯ ಪ್ರತಿಭೆ ಮಾತ್ರವಲ್ಲ, ಅವರೊಬ್ಬ ಅಪ್ರತಿಮನಟ. ಹೆಸರು ಜಯಕುಮಾರ್, ಊರು ಕೊಡಗನೂರು.

ಗುಬ್ಬಿ ಕಂಪನಿ ಸೇರಿದಂತೆ ಗುಡಗೇರಿ, ಕುಮಾರಸ್ವಾಮಿ, ಚಿಂದೋಡಿ… ಹೀಗೆ ಇಪ್ಪತ್ತಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ ಕಳೆದ ಐವತ್ತು ವರ್ಷಗಳ ಕಾಲ ವೃತ್ತಿ ರಂಗಭೂಮಿಯ ನಿರಂತರ ರಂಗಸೇವೆ. ಈಗ್ಗೆ ತಿಂಗಳ ಹಿಂದೆಯಷ್ಟೇ ಕಲಬುರ್ಗಿಯಲ್ಲಿ ಖಾಯಂ ಮೊಕ್ಕಾಂ ಮಾಡಿರುವ ನಾಟಕ ಕಂಪನಿಯೊಂದರಲ್ಲಿ ಅಭಿನಯಿಸುತ್ತಿರುವಾಗ ಲಘು ಹೃದಯಾಘಾತ. ಸಕ್ಕರೆ ಕಾಯಿಲೆ ಆತನನ್ನು ಯಾಮಾರಿಸಿದೆ. ಎರಡನೇ ಬಾರಿಗೆ ಆದಾಗ, ಸೂಕ್ಷ್ಮವಾಗಿ ತಿಳಿದು ದಾವಣಗೆರೆಗೆ ಧಾವಿಸಿ ತಜ್ಞ ವೈದ್ಯಕೀಯ ಚಿಕಿತ್ಸೆ ಪಡೆದು ಹೃದಯ ನಾಳಗಳಿಗೆ ಎರಡು ಸ್ಟಂಟ್ ಅಳವಡಿಕೆ. ಆ ಸಂದರ್ಭದಲ್ಲಿ ಶಿವಸಂಚಾರದ ಶ್ರೀ ಪಂಡಿತಾರಾಧ್ಯಶ್ರೀಗಳು ಸಂಬಂಧಿಸಿದ ವೈದ್ಯರಿಗೆ ಫೋನ್ ಮೂಲಕ ಹೇಳಿ ನೆರವಾದರು. ಇನ್ನೇನು ಮನೆಗೆ ಕಳಿಸಬೇಕೆನ್ನುವಾಗ ಎರಡೂ ಕಿಡ್ನಿಗಳು ಕೈ ಕೊಡುವ ಸೂಚನೆಗಳು ಎದುರಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರೋಗಿಯ ಸ್ಥಳಾಂತರ.

ಕಳೆದ ಹದಿನೈದು ದಿನಗಳಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖ ಆಗುವ ಎಲ್ಲ ಲಕ್ಷಣಗಳಿವೆ ಎಂದು ತಜ್ಞ ವೈದ್ಯರ ಅಂಬೋಣ. ಹೆಲ್ತ್ ಕಾರ್ಡಿನ ಸೌಲಭ್ಯಗಳು ಹೃದಯದ ರಕ್ತನಾಳಗಳಿಗೆ ಅಳವಡಿಸಿದ ಸ್ಟಂಟಗಳಿಗೆ ಕೊನೆಗೊಂಡಿತು. ಈಗ ಮಣಿಪಾಲ್ ಆಸ್ಪತ್ರೆಯಲ್ಲಿ ದೊರಕುವ ಎಲ್ಲ ಚಿಕಿತ್ಸೆಗೂ ಹಣ ಕಟ್ಟಲೇ ಬೇಕಿದೆ. ಒಂದು ಲಕ್ಷ ರುಪಾಯಿ ಮಿಕ್ಕ ಖರ್ಚು. ಕಲಾವಿದ ಜಯಕುಮಾರರ ಬಳಿ ಇರುವ ಹಣವೆಲ್ಲ ಖರ್ಚಾಗಿದೆ. ಆಸ್ಪತ್ರೆಯಲ್ಲಿರುವ ಜಯಕುಮಾರರ ಜತೆ ಅವರ ಪತ್ನಿ ಪದ್ಮಾವತಿ ಮಗ ಮಾರುತಿ‌ ಇದ್ದಾರೆ.

ಶಿವಣ್ಣನ ಜನುಮದ ಜೋಡಿ ಸೇರಿದಂತೆ, ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ದರ್ಶನ್ ಅಂತಹ ಹೆಸರಾಂತ ನಟರ ಜತೆ, (ಬರಗೂರರ ನಾಕೈದು ಚಿತ್ರ ) ನೂರೈವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಜಯಕುಮಾರ ನಟಿಸಿದ್ದಾರೆ. ಆತ ಅಭಿನಯಿಸಿದ ಕಿರುತೆರೆ ದಾರಾವಾಹಿಗಳು ಲೆಕ್ಕವಿಲ್ಲದಷ್ಟು. ಅಷ್ಟೇ ಪ್ರಮಾಣದ ವೃತ್ತಿ ರಂಗನಾಟಕಗಳು. ಹೀಗೆ ಅವಿರತವಾಗಿ ದುಡಿದ ಬಣ್ಣದಜೀವ ಹಾಸಿಗೆ ಹಿಡಿದಿದೆ. ಈಗ ಅಕ್ಷರಶಃ ಸಂಕಷ್ಟದಲ್ಲಿರುವ ಕೊಡಗನೂರು ಜಯಕುಮಾರರ ನೆರವಿಗಾಗಿ ಅವರ ಪತ್ನಿ ಶ್ರೀಮತಿ ಪದ್ಮಾವತಿ ಹಾಗೂ ಅವರ ಮಗ ಮಾರುತಿ ಮನವಿ ಮಾಡಿಕೊಂಡಿದ್ದಾರೆ.

ಜಯಕುಮಾರ್ ಅವರ ಬ್ಯಾಂಕ್ ಖಾತೆ ವಿವರ ಹೀಗಿದೆ

ಸಿಂಡಿಕೇಟ್ ಬ್ಯಾಂಕ್
ಮಲ್ಲೇಶ್ವರಮ್
ಕೆ.ಸಿ. ಜನರಲ್ ಆಸ್ಪತ್ರೆ ಶಾಖೆ :ಬೆಂ.
A/C : 04492010022368
IFSC code : SYNB 0000449

ಕಲಾವಿದನ ನೆರವಿನ ನಿರೀಕ್ಷೆ ಯಲ್ಲಿ
ಪದ್ಮಾವತಿ w/o ಜಯಕುಮಾರ
ಮಣಿಪಾಲ್ ಆಸ್ಪತ್ರೆ, ಮಣಿಪಾಲ್
ಮೊ: 99023 89044

ಸಿನಿ ಸುದ್ದಿ

ರಾಜ್‌ಕುಮಾರ್ ಕುಟುಂಬದ ಆಪ್ತೆ, ಕನ್ನಡದ ಹಿರಿಯ ನಟಿ ಶಾಂತಮ್ಮ ಇನ್ನಿಲ್ಲ..!

Published

on

ನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶಾಂತಮ್ಮ ಇನ್ನಿಲ್ಲ. ಇಂದು ಅವರು ಕೊನೆಯುಸಿರೆಳೆದಿದ್ದಾರೆ. ರಾಜ್‌ಕುಮಾರ್ ಮತ್ತು ರಜನಿಕಾಂತ್ ಅವರ ಸಿನಿಮಾಗಳಲ್ಲಿ ಶಾಂತಮ್ಮ ನಟಿಸಿದ್ದಾರೆ. ಶಾಂತಮ್ಮ ಅವರು ವಯೋಸಹಜ ಕಾಯಿಲೆಯಿಂದ ಇಂದು (ಜುಲೈ 19, 2020) ನಿಧನರಾಗಿದ್ದಾರೆ. ಇವರಿಗೆ 95 ವರ್ಷ ವಯಸ್ಸಾಗಿತ್ತು.

ಪತಿಯ ಪ್ರೋತ್ಸಾಹದಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶಾಂತಮ್ಮ!

ಶಾಂತಮ್ಮ ಅವರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾಂತಮ್ಮ ಅವರ ತವರು ಮನೆಯಲ್ಲಿ ನಟನೆಗೆ ಅವಕಾಶ ಇರಲಿಲ್ಲ. ಸಿನಿಮಾಕ್ಕೆ ಬರಬೇಕು ಎಂದು ಅವರು ಅಂದುಕೊಂಡಿರಲಿಲ್ಲ. ಹಳ್ಳಿಯ ಜನ ಆಗಿರೋದರಿಂದ ಶಾಂತಮ್ಮನವರ ತಾಯಿ ಅವರಿಗೆ ನಟನೆಗೆ ಬರಲು ಅವಕಾಶ ಮಾಡಿಕೊಟ್ಟಿರಲಿಲ್ಲ. ನಟಿಸುವ ಆಸೆಯಿದ್ದರೂ ಕೂಡ ಹೆದರಿಕೆಯ ಮಧ್ಯದಲ್ಲೇ ಶಾಂತಮ್ಮ ಮೊದ ಮೊದಲು ಡೈಲಾಗ್ ಮರೆಯುತ್ತ ನಟಿಸುತ್ತಿದ್ದರಂತೆ. ಶಾಂತಮ್ಮ ಅವರ ಪತಿ ಗೋಕಾಕ್ ಕಂಪೆನಿಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದರು. ಹೀಗಾಗಿ ಅಲ್ಲಿದ್ದವರೊಬ್ಬರು ನಿಮ್ಮ ಪತ್ನಿ ಚೆನ್ನಾಗಿದ್ದಾರೆ, ನಟಿಸಬಹುದಲ್ಲವಾ ಎಂದು ಕೇಳಿದ್ದರಂತೆ. ಆಗ ಶಾಂತಮ್ಮ ಗಂಡ, ನನ್ನ ಪತ್ನಿ ಒಪ್ಪಿದರೆ ನನ್ನದೇನೂ ಅಭ್ಯಂತರವೇನಿಲ್ಲ ಎಂದಿದ್ದರು. ಹೀಗೆ ಪತಿಯ ಪ್ರೋತ್ಸಾಹದಿಂದ ಅವರು ಚಿತ್ರರಂಗಕ್ಕೆ ಬಂದಿದ್ದರು. 15 ವರ್ಷ ಮದ್ರಾಸ್‌ನಲ್ಲಿ ಶಾಂತಮ್ಮ ಕುಟುಂಬ ನೆಲೆಸಿತ್ತು.

ಶಾಂತಮ್ಮ ಮಕ್ಕಳ ಕ್ಯಾನ್ಸರ್‌ಗೆ ಸಹಾಯ ಮಾಡಿದ್ದ ದುನಿಯಾ ವಿಜಯ್, ರಾಧಿಕಾ ಕುಮಾರಸ್ವಾಮಿ

ಕೆಲ ವರ್ಷಗಳ ಹಿಂದೆ ಮಗ ಮತ್ತು ಮಗಳು ಕ್ಯಾನ್ಸರ್‌ ಚಿಕಿತ್ಸೆಗೆ ಸಲುವಾಗಿ ನಟಿ ಶಾಂತಮ್ಮ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಏನಾದರೂ ಸಹಾಯ ಸಿಗುತ್ತದೆಯೇ ಎಂದು ಆಶಿಸಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಂತಮ್ಮ ಅವರಿಗೆ ಸಹಾಯ ಮಾಡುವ ಆಶ್ವಾಸನೆ ನೀಡಿದ್ದರು. ಅಷ್ಟೇ ಅಲ್ಲದೆ ದುನಿಯಾ ವಿಜಯ್ ಹಾಗೂ ರಾಧಿಕಾ ಕುಮಾರಸ್ವಾಮಿ ಕೂಡ ಶಾಂತಮ್ಮ ಅವರ ಮಕ್ಕಳ ಕ್ಯಾನ್ಸರ್ ಚಿಕಿತ್ಸಗೆ ಸಹಾಯ ಮಾಡಿದ್ದರು.

ಶಾಂತಮ್ಮ ಮಗಳ ಮದುವೆಗ ಸಹಾಯ ಮಾಡಿದ್ದ ಶಂಕರ್‌ನಾಗ್, ಅಂಬರೀಶ್
ಶಾಂತಮ್ಮ ಅವರ ಮಗಳ ಮದುವೆಗೆ ಅಂಬರೀಶ್, ಶಂಕರ್‌ನಾಗ್ ಸಹಾಯ ಮಾಡಿದ್ದರು. ಅಷ್ಟೇ ಅಲ್ಲದೆ ರಾಜ್‌ಕುಮಾರ್ ಕುಟುಂಬದ ಜೊತೆಗೆ ಶಾಂತಮ್ಮ ಅವರಿಗೆ ಒಳ್ಳೆಯ ಸಂಬಂಧವಿತ್ತು. ರಾಘವೇಂದ್ರ ರಾಜ್‌ಕುಮಾರ್ ಅವರು ಅನೇಕ ಬಾರಿ ಸಹಾಯ ಮಾಡಿದ್ದಾರೆಂದು ಶಾಂತಮ್ಮನವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಡಾ.ರಾಜ್‌ಕುಮಾರ್ ಜೊತೆ ನಟಿಸಿದ್ದ ಶಾಂತಮ್ಮ
ಡಾ ರಾಜ್‌ಕುಮಾರ್ ಜೊತೆ ಶಾಂತಮ್ಮ ನಟಿಸಿದ್ದರು. ರಜನಿಕಾಂತ್ ಅವರ ಮುಲ್ಲುವರಂ ಸಿನಿಮಾದಲ್ಲಿ ಶಾಂತಮ್ಮ ಅಭಿನಯಿಸಿದ್ದರು. ಆ ಚಿತ್ರ ಆಗಲೇ 100 ದಿನ ಓಡಿತ್ತು. 1956 ರಲ್ಲಿ ಡಾ ರಾಜ್‌ಕುಮಾರ್ ಅವರ ನಾಲ್ಕನೇ ಸಿನಿಮಾ ‘ಹರಿಭಕ್ತ’ದಲ್ಲಿ ಶಾಂತಮ್ಮ ಮೊದಲ ಬಾರಿಗೆ ನಟಿಸಿದ್ದರು. ‘ರಣಧೀರ ಕಂಠೀರವ’, ‘ಇಂದಿನ ಭಾರತ’, ‘ಶಬರಿಮಲೆ’ ಮುಂತಾದ ಸಿನಿಮಾಗಳಲ್ಲಿ ಶಾಂತಮ್ಮ ನಟಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಒಲವೇ ಜೀವನ ಸಾಕ್ಷಾತ್ಕಾರ..!

Published

on

sakshtkara_suddidina
  • ಕ್ರಾಂತಿರಾಜ್ ಒಡೆಯರ್, ಸಹಾಯಕ ಪ್ರಾಧ್ಯಾಪಕರು, ಮೈಸೂರು

ನ್ನಡ ಚಲನಚಿತ್ರ ಲೋಕದ ದಿಗ್ಗಜ ನಿರ್ದೇಶಕರಲ್ಲೊಬ್ಬರಾದ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿರುವ ಅದ್ಬುತ ಚಿತ್ರಗಳಲ್ಲಿ “ಸಾಕ್ಷಾತ್ಕಾರ” ಹಲವರಿಗೆ ಬಹಳ ಇಷ್ಟವಾಗುವ ಚಿತ್ರ. ಈ ಚಿತ್ರದಲ್ಲಿ, ನಾಯಕ ಡಾ ರಾಜಕುಮಾರ್ ಅವರ ತಂದೆ ಪಾತ್ರ ನಿರ್ವಹಿಸಿರುವ ಪೃಥ್ವಿರಾಜ್ ಕಪೂರ್ ಅವರು ಚಿತ್ರದಲ್ಲಿ ಹಲವು ಬಾರಿ ಹೇಳುವ ಘೋಷವಾಕ್ಯ “ಒಲವೇ ಜೀವನ ಸಾಕ್ಷಾತ್ಕಾರ”. ಈ ಘೋಷವಾಕ್ಯಕ್ಕೆ ಹೇಳಿ ಮಾಡಿಸಿದ ಹಾಗೆ ನಾಯಕ ರಾಜಕುಮಾರ್ ಅವರ ಪಾತ್ರ.

ಸೋದರ ಮಾವನ ಮಗಳನ್ನೇ ಮದುವೆ ಮಾಡಿಕೊಳ್ಳಬೇಕೆಂಬ ಷರತ್ತು ಹಾಕುವ ತಾಯಿ ಹಾಗೂ ಅದರಂತೆ ಒತ್ತಡದ ವಾತಾವರಣ ನಿರ್ಮಾಣ ಮಾಡುವ ಮನೆಯವರ ಮಾತನ್ನು ದಿಕ್ಕರಿಸಿ, ರಾಜಕುಮಾರ್ ಅವರು ತಂದೆಯ ಘೋಷವಾಕ್ಯ “ಒಲವೇ ಜೀವನ ಸಾಕ್ಷಾತ್ಕಾರ’ ದಂತೆ ತಾನು ಪ್ರೀತಿಸಿದ ಹುಡುಗಿ ಮೂಲ ನಕ್ಷತ್ರದವಳಾದರೂ, ಅವಳನ್ನೇ ವರಿಸಬೇಕೆಂದು ನಿರ್ದರಿಸಿದರೂ, ಅವರಿಬ್ಬರ ಮದುವೆ ಸಾಧ್ಯವಾಗದೇ, ಚಿತ್ರದ ನಾಯಕನ ಮನೆಯ ಜನರ ಕ್ರೂರತ್ವದಿಂದ ಸಾವಿಗೀಡಾಗುವ ನಾಯಕಿಯ ಮೃತದೇಹದ ಬಳಿ ಕುಳಿತು ಕಣ್ಣೀರಿಡುವ ನಾಯಕ ರಾಜಕುಮಾರ್, ಶವವಾಗಿ ಮಲಗಿರುವ ನಾಯಕಿಯ ಕೊರಳಿಗೆ ತಾಳಿಯನ್ನು ಕಟ್ಟಿ “ಒಲವೇ ಜೀವನ ಸಾಕ್ಷಾತ್ಕಾರ” ಎಂದು ಹೇಳುವ ದೃಶ್ಯ ಎಲ್ಲರ ಮನಕಲಕುವಂತೆ ಮಾಡುವುದರ ಜೊತೆಗೆ ಪ್ರೀತಿ, ಸಂಬಂಧ ಹಾಗೂ ವಿಶ್ವಾಸ ಎಂಬ ಪದಗಳ ಆದರ್ಶದ ಫಿಲಾಸಫಿಯನ್ನೇ ಹೇಳುತ್ತದೆ.

ಈ ಚಿತ್ರದಲ್ಲಿ ತೋರಿಸಿರುವ ಹಾಗೆ ಆದರ್ಶಮಯ ಪ್ರೀತಿಯನ್ನು ಒಂದು ಗಂಡಾಗಲಿ ಅಥವಾ ಹೆಣ್ಣಾಗಲಿ ಕಾಪಾಡಿಕೊಳ್ಳಲು ಸಾಧ್ಯವೇ ಎಂದು ಅವಲೋಕಿಸಿದಾಗ, ಇತಿಹಾಸದಲ್ಲಿ ಹಾಗೂ ವರ್ತಮಾನದಲ್ಲಿ ಕೆಲವು ಉದಾಹರಣೆಗಳು ಸಿಗಬಹುದು. ಆದರೆ ಮನುಷ್ಯರ ಸೈಕಾಲಜಿ ಇದರ ವಿರುದ್ಧವಾದ ದಿಕ್ಕಿನಲ್ಲಿ ಚಲಿಸುತ್ತದೆ. ಅದಕ್ಕಾಗಿಯೇ ಏನೋ ಒಂದು ಗಂಡು ಹೆಣ್ಣಿನ ಸಂಬಂಧದಲ್ಲಿ ವೈಮನಸ್ಸು, ಜಗಳ ಹಾಗೂ ದೋಷಾರೋಪದಿಂದ ಪ್ರಾರಂಭವಾಗಿ ಕೆಲವರ ಜೀವನದಲ್ಲಿ ವಿವಾಹೇತರ ಸಂಬಂಧಗಳು ಬೆಸೆದುಕೊಳ್ಳುವುದಲ್ಲದೇ, ಹಲವರ ಸಂಬಂಧಗಳು ವಿವಾಹ ವಿಚ್ಚೇದನದಲ್ಲಿ ಕೊನೆಗೊಳ್ಳುತ್ತವೆ.

ಇದು ಒಂಥರಾ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನೆಡೆಯುವುದೇ ಜೀವನ” ಎಂಬ ನಾಣ್ಣುಡಿಗೆ ಪೂರಕವಾದಂತೆ. ಒಟ್ಟಿನಲ್ಲಿ ಹೇಳುವುದಾದರೆ, ಒಂದು ಗಂಡು ಮತ್ತು ಹೆಣ್ಣಿನ ನಡುವಿನ ಆದರ್ಶಮಯ ಪ್ರೀತಿ ಅಥವಾ ಸಂಬಂಧ ಮನುಷ್ಯರ ಸೈಕಾಲಜಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸಬೇಕಾಗಿದ್ದು, ಅದಕ್ಕೆ ಬಹಳ ಸದೃಢ ಮನಸ್ಸು ಒಂದು ಗಂಡು ಹಾಗೂ ಹೆಣ್ಣು ಇಬ್ಬರಲ್ಲೂ ಇರಬೇಕಾಗುತ್ತದೆ. ಇಂತಹ ಸದೃಢ ಮನಸ್ಸುಗಳು ಇರಲು ಸಾಧ್ಯವೇ ಎಂದು ನನ್ನನ್ನೂ ಒಳಗೊಂಡಂತೆ ನನ್ನ ಸುತ್ತಲಿರುವ ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಮನುಷ್ಯರ ಜೀವನದ ಕೆಲವು ಸತ್ಯಗಳು ಅನಾವರಣಗೊಳ್ಳುತ್ತಾ ಹೋದವು.

ಎರಡು ದಿನಗಳ ಹಿಂದೆ, ನಾನು ಮತ್ತು ನನ್ನ ಮಡದಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ, ಆ ರಸ್ತೆಯ ಬದಿಯಲ್ಲಿ ನಿಂತಿದ್ದ ಕಾರಿನಿಂದ ಒಬ್ಬ ಮಹಿಳೆ ಡೋರ್ ತೆಗೆದು ಹೊರ ಬರಲಾಗಿ, “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸೆಳೆಯುವುದು ಮನಸ್ಸು” ಎಂಬ ಮನುಷ್ಯನ ಸೈಕಾಲಜಿ ಪ್ರಕಾರ ಕಾರಿನಿಂದ ಇಳಿಯುವ ಆ ಮಹಿಳೆಯತ್ತ ನೆಟ್ಟ ನನ್ನ ಕಣ್ಣುಗಳನ್ನು ಗಮನಿಸಿದ ನನ್ನ ಮಡದಿ, “ದಾರಿ ಮುಂದೆ ಇದೆ. ಸರಿಗೇ ನೋಡ್ಕಂಡು ಗಾಡಿ ಓಡ್ಸಿ” ಎಂದು ನನಗೆ ಹೇಳಲಾಗಿ, “ಚೆನ್ನಾಗಿದಾರಲ್ವ ನೋಡಕೆ” ಎಂದು ನಾನು ಮಡದಿಗೆ ಉತ್ತರ ಕೊಡಲಾಗಿ, ಇಬ್ಬರೂ ಆ ಸಂದರ್ಭದಲ್ಲಿ ನಕ್ಕು, ಮನೆಗೆ ತೆರಳಿದ ಮೇಲೂ ಆ ಸಂದರ್ಭವನ್ನು ನೆನೆದು ನನ್ನ ಮಡದಿ ನನ್ನನ್ನು ಕಿಚಾಯಿಸಿದ್ದೂ ಇದೆ. ನಮ್ಮಿಬ್ಬರ ನಡುವೆ ಇಂತಹ ಸಂದರ್ಭಗಳು ಬಂದಿರುವುದು ಹಲವಾರು.

ಕನ್ನಡ ಚಲನ ಚಿತ್ರದ ಮಾಜಿ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ನನಗೆ ಬಹಳ ಇಷ್ಟ ಎಂದು ತಿಳಿದಿರುವ ನನ್ನ ಮಡದಿ, ರಮ್ಯಾ ಅವರ ಯಾವುದೇ ಚೆಂದದ ಚಿತ್ರ ಸಿಕ್ಕರೆ ನನಗೆ ಫೋನಿನ ಮೂಲಕ ಕಳುಹಿಸುತ್ತಾರೆ. ಹಾಗೆಯೇ ನನ್ನ ಮಡದಿಗೆ ನಟ ದರ್ಶನ್ ತೂಗುದೀಪ ಎಂದರೆ ನನಗಿಂತ ಇಷ್ಟ. ದರ್ಶನ್ ರ ಚೆಂದದ ಚಿತ್ರ ಹಾಗೂ ಅವರು ನಟಿಸಿರುವ ಚಲನ ಚಿತ್ರದ ತುಣುಕುಗಳನ್ನು ನನ್ನ ಮಡದಿಗೆ ನಾನು ಕಳುಹಿಸುತ್ತೇನೆ.

ಅಷ್ಟೇ ಅಲ್ಲದೇ, ಅವರು ನನ್ನ ಜೊತೆ ಇರುವಾಗ ನಮ್ಮ ಕಣ್ಣಿಗೆ ಕಾಣುವ ಚೆಂದದ ಪುರುಷರನ್ನು ನೋಡಿ ಪ್ರಶಂಸಿಸುವಾಗ, ನಾನು ಕೂಡ ಅವರೊಡನೆ ದನಿಗೂಡಿಸುತ್ತೇನೆ. ಇಷ್ಟಿದ್ದರೂ ನಮ್ಮಿಬ್ಬರಲ್ಲಿ ಯಾವತ್ತೂ ಕೂಡ “ಜೆಲಸಿ” ಎಂಬುದನ್ನು ನಾನು ಕಂಡಿಲ್ಲ. ನಾವಿಬ್ಬರೂ ಮನುಷ್ಯರ ಸೈಕಾಲಜಿ ಅನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದು, ಕ್ಷಣ ಮಾತ್ರಕ್ಕೆ ಬೇರೆಡೆ ಆಕರ್ಷಿತರಾದರೂ, ನಮ್ಮಲ್ಲಿರುವ ಸತ್ಯವನ್ನು ಅರಗಿಸಿಕೊಳ್ಳುವ ಗುಣ ಹಾಗೂ ಸಾಕ್ಷಾತ್ಕಾರ ಚಿತ್ರದಲ್ಲಿ ಡಾ ರಾಜಕುಮಾರ್ ಅವರು ಹೇಳುವ “ಒಲವು” ಎಂಬ ಭಾವನೆ ವಿಸ್ತಾರವಾದ ಜೀವನದಲ್ಲಿ ನಮ್ಮಿಬ್ಬರನ್ನು ಮನುಷ್ಯರ ಸೈಕಾಲಜಿ ಗೆ ವಿರುದ್ಧವಾಗಿ ನೆಡೆಯುವಂತೆ ಮಾಡುತ್ತಿದೆಯೇನೋ ಎಂಬುದು ನನ್ನ ಅನಿಸಿಕೆ.

ಒಂದು ಗಂಡು ಮತ್ತು ಹೆಣ್ಣಿನ ನಡುವೆ ಉಂಟಾಗುವ “ಒಲವು” ಎಂಬ ಭಾವನೆಗೆ ಮನುಷ್ಯರ ಸೈಕಾಲಜಿ ಪ್ರಚೋದಿಸುವ “ಜೀವನದ ತಾತ್ಕಾಲಿಕ ಆಕರ್ಷಣೆ” ಯನ್ನು ಮೀರಿಸುವ ಶಕ್ತಿ ಇದೆ ಎಂಬುದು ನನ್ನ ಅನುಭವದ ಅನಿಸಿಕೆ. ಈ “ಒಲವು” ಉಂಟಾಗಲು ಒಂದು ಗಂಡು ಹಾಗೂ ಹೆಣ್ಣಿನ ಆಸೆ ಮತ್ತು ಆದ್ಯತೆಗಳಲ್ಲಿ ಸಾಮ್ಯತೆ, ಇಬ್ಬರ ಜೀವನದ ಉದ್ದೇಶ ಹಾಗೂ ಗುರಿ ಸಾದಿಸಲು ಒಬ್ಬರಿಗೊಬ್ಬರು ಒತ್ತಾಸೆಯಾಗಿ ನಿಲ್ಲುವ ಮನೋಭಾವ, ಸ್ವಾತಂತ್ರ್ಯ ಹಾಗೂ ಸಮಾನತೆ, ಸ್ನೇಹಿತರ ಭಾವನೆ ಇವೆಲ್ಲದರಿಂದ ಕೂಡಿರುವ ವಾತಾವರಣ ಬಹಳ ಮುಖ್ಯ ಎಂದು ನನ್ನ ಅಭಿಪ್ರಾಯ.

ನನ್ನ ಕೆಲವು ಸ್ನೇಹಿತರು ಹಾಗೂ ಸಂಬಂಧಿಕರನ್ನೂ ನೋಡಿದ್ದೇನೆ. ಅದರಲ್ಲಿ ಕೆಲವರು ತಮ್ಮ ಕುಟುಂಬದ ಯಾರನ್ನೋ ಖುಷಿಪಡಿಸಲು, ಅವರ ಪೋಷಕರು ಗುರುತು ಪಡಿಸಿದವರನ್ನ ಮದುವೆ ಮಾಡಿಕೊಂಡು, ಮಡದಿಗಳಿಬ್ಬರ ನಡುವಿನ ಆಸೆ, ಗುರಿ, ಸಿದ್ದಾಂತ, ಜೀವನ ಶೈಲಿ, ಜೀವನದ ಉದ್ದೇಶ, ಆಲೋಚನೆ, ಸಮಾಜದ ಬಗೆಗಿನ ಪರಿಕಲ್ಪನೆ ಹಾಗೂ ಹವ್ಯಾಸಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿದ್ದು, ಒಬ್ಬರ ಒಟ್ಟಾರೆ ಜೀವನ ಶೈಲಿ ಕಂಡರೆ ಮತ್ತೊಬ್ಬರಿಗೆ ಕೋಪ. ಒಬ್ಬರ ಮೇಲೊಬ್ಬರು ದೋಷಾರೋಪ ಮಾಡಿಕೊಂಡು, ತಮ್ಮ ನಿಕಟವರ್ತಿಗಳೊಂದಿಗೆ ಮಡದಿಯ ಬಗೆಗೆ ದೂರನ್ನ ಹೇಳಿ, ತಾವಿರುವ ಪರಿಸ್ಥಿತಿಯ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸುವ ಸ್ಥಿತಿ ಇವರದು.

ಇದರ ಪರಿಣಾಮವಾಗಿ, ಇಬ್ಬರ ನಡುವಿನ ಮುಖಾಮುಖಿ ತಪ್ಪಿಸಲು ಏನೇನೋ ಕಾರಣಗಳನ್ನು ಹೇಳಿ ಮನೆಗೆ ತಡವಾಗಿ ಬರುವುದೋ, ಬರೀ ಔಪಚಾರಿಕ ಮಾತುಗಳನ್ನಷ್ಟೇ ಆಡಿ ಬೇರೆ ಕೆಲಸಗಳಲ್ಲಿ ಪಾಲ್ಗೊಳ್ಳುವುದೋ, ಯಾವುದಾದರೊಂದು ಕಾರಣಗಳನ್ನು ಹೇಳಿ ಎಷ್ಟು ಸಮಯ ಅಥವಾ ದಿನಗಳು ಸಾಧ್ಯವೂ ಅಷ್ಟು ದೂರ ಉಳಿಯುವುದನ್ನು ಮೊದಲಿಸಿ ವಿವಾಹೇತರ ಸಂಬಂಧಗಳಿಗೆ ಕೆಲವರು ಒಳಗಾಗಿದ್ದರೆ, ಕೆಲವರು ಈ ಅನ್ಯೋನ್ಯತೆ ಇಲ್ಲದ ಸಂಬಂಧ ಸಾಕೆಂದು ವಿವಾಹ ವಿಚ್ಚೇದನ ಪಡೆದು ತಮ್ಮ ಕಲ್ಪನೆಯ ಜೀವನವನ್ನು ನೆಡೆಸುತ್ತಿದ್ದಾರೆ. ಇನ್ನೂ ಹಲವರು ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಕಷ್ಟವೋ ಸುಖವೋ “ಕಟ್ಟುಕೊಂಡಿದದ್ದರ ಜೊತೆ ಕೊನೆವರೆಗೂ ಸಾಯಬೇಕು” ಎಂದು ನಿಶ್ಚಯಿಸಿ ಜೀವನವನ್ನ ದೂಡುತ್ತಿದ್ದಾರೆ.

ಇನ್ನು ಈ ಯುವಕ ಯುವತಿಯರ ನಡುವಿನ “ಪ್ರೀತಿ” ಎಂಬ ಸಂಬಂದದ್ದು ಇನ್ನೊಂದು ವಿಚಿತ್ರ. ಇವರಿಗೆ ಮನುಷ್ಯರ ಸಹಜ ಸೈಕಾಲಜಿ ಸತ್ಯಗಳು ಆರ್ಥವಾಗದೇ, ಅಥವಾ ಅರ್ಥವಾದರೂ ಅದನ್ನು ಜೀರ್ಣಿಸಿಕೊಳ್ಳಲಾಗದೇ ಕೆಲವರು ತಮ್ಮ ಪ್ರೇಯಸಿ ಅಥವಾ ಪ್ರಿಯತಮನನ್ನು ದೂಷಿಸಿ, ದ್ವೇಷಿಸಿ , ತಮ್ಮ ನಡವಳಿಕೆಯಲ್ಲಿ ಬಾರೀ ಬದಲಾವಣೆ ಮಾಡಿಕೊಂಡು, ಅಡ್ಡ ದಾರಿಯನ್ನು ಹಿಡಿದಿದ್ದರೆ, ಇನ್ನು ಕೆಲವು ಮುಗ್ಧ ಮನಸ್ಸುಗಳು ತಮ್ಮ ಜೀವನದಲ್ಲಾದ ಕಹಿ ಘಟನೆಯಿಂದ ಹೊರಬರಲಾರದೆ ಖಿನ್ನತೆಗೆ ಒಳಗಾಗಿರುವುದನ್ನು ನಾನು ನೋಡಿದ್ದೇನೆ.

ಸಮಾಜದ ಎಲ್ಲ ವ್ಯಕ್ತಿಗಳ ಹಿತಬಯಸುವವನಾಗಿ ಹೇಳುವುದಾದರೆ, ಒಂದು ಗಂಡು ಅಥವಾ ಹೆಣ್ಣು, ಯುವ ವಯಸ್ಸಿನಲ್ಲಿ ಪ್ರೀತಿ ಎಂಬ ಸಂಕೋಲೆಯಲ್ಲಿ ಬೀಳುವ ಹಾಗೂ ಮದುವೆ ಎಂಬ ಸಂಬಂಧದಲ್ಲಿ ಬೆಸೆದುಕೊಳ್ಳುವ ಮೊದಲು ಈ “ಒಲವು” ಎಂಬ ಪದದ ಅಂಶಗಳಾದ ಸಿದ್ದಾಂತ, ಜೀವನ ಶೈಲಿ, ಜೀವನದ ಉದ್ದೇಶ, ಆಲೋಚನೆ, ಸಮಾಜದ ಬಗೆಗಿನ ಪರಿಕಲ್ಪನೆ, ಗೆಳೆತನ, ಹವ್ಯಾಸಗಳು ಹಾಗೂ ಇತ್ಯಾದಿಗಳಲ್ಲಿ ತಮ್ಮದೇ ಆಲೋಚನೆಯುಳ್ಳ ಜತೆಗಾರರನ್ನ ಹುಡುಕಿಕೊಳ್ಳುವ ಮೂಲಕ ಸಾಯುವವರೆಗೂ ಸಂತೋಷವಾಗಿ ಬದುಕಿ ತಮ್ಮ ಜೀವನದ ಉದ್ದೇಶವನ್ನು ಸಾರ್ಥಕಗೊಳಿಸಬಹುದು.

ಒಂದು ವೇಳೆ ಅನಿರೀಕ್ಷಿತವಾಗಿಯೋ ಅಥವಾ ಪೋಷಕರು ನಿಶ್ಚಯಿಸುವ ಒಪ್ಪಂದದ ಮದುವೆಗಳಿಂದ ಬೆಸೆದುಕೊಳ್ಳುವ ಸಂಬಂಧದಿಂದ “ಒಲವಿನ” ಅಂಶಗಳನ್ನ ನಿರೀಕ್ಷಿಸಲು ಆರಂಭದಲ್ಲಿ ಸಾಧ್ಯವಾಗದಿದ್ದರೂ, ಒಂದು ಗಂಡು ಹಾಗೂ ಹೆಣ್ಣಿನಲ್ಲಿ ಇರುವ ಮೆಚುರಿಟಿ ಹಾಗೂ ಪರಸ್ಪರ ತಿಳುವಳಿಕೆಯ ಗುಣಗಳಿದ್ದರೆ ಈ ಮನುಷ್ಯರ ಸಹಜ ಸೈಕಾಲಜಿ “ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ಜೀವನ” ಎಂಬ ಮಾತನ್ನು ಒಂದು ಗಂಡು ಮತ್ತು ಹೆಣ್ಣಿನ ವಿಸ್ತಾರ ಸಂಬಂಧದ ಪರಿಕಲ್ಪನೆಯಲ್ಲಿ ಸುಳ್ಳು ಮಾಡಿ, ಸಾಕ್ಷಾತ್ಕಾರ ಚಿತ್ರದ ಘೋಷವಾಕ್ಯ “ಒಲವೇ ಜೀವನ ಸಾಕ್ಷಾತ್ಕಾರ” ವನ್ನು ಸತ್ಯವಾಗಿಸಬಹುದು ಎಂಬ ಅನಿಸಿಕೆ ನನ್ನದು.

ಸುದ್ದಿದಿನ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿರು ಅಗಲಿ‌ ಇಂದಿಗೆ ಒಂದು ತಿಂಗಳು : ಪೂಜೆ ಸಲ್ಲಿಸಿ ಕಣ್ಣೀರಿಟ್ಟ ಕುಟುಂಬ

Published

on

ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ದೈಹಿಕವಾಗಿ ದೂರವಾಗಿ ಬುಧವಾರಕ್ಕೆ ಒಂದು ತಿಂಗಳು ಆಗಲಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಕನಕಪುರದ ನೆಲಗುಳಿಯ ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟಿದ್ದಾರೆ.

ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟಿದ್ದರು. ಸಹೋದರ ಧ್ರುವ ಸರ್ಜಾ ತಮ್ಮ ಆಸೆಯಂತೆ ಅಣ್ಣ ಚಿರಂಜೀವಿಯ ಅಂತ್ಯಕ್ರಿಯೆಯನ್ನು ಕನಕಪುರದಲ್ಲಿರುವ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ನೆರವೇರಿಸಿದ್ದರು. ಚಿರಂಜೀವಿ ಸರ್ಜಾ ಅವರು ದೈಹಿಕವಾಗಿ ದೂರವಾಗಿ ಜುಲೈ 7ಕ್ಕೆ ಒಂದು ತಿಂಗಳು ಕಳೆಯಲಿದೆ.

ಇಂದೇ ಕುಟುಂಬ ಸದಸ್ಯರು ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟು ಚಿರಂಜೀವಿ ಸರ್ಜಾ ತಿಂಗಳ ಕಾರ್ಯ ಮಾಡಿದ್ದಾರೆ. ಚಿರು ಸಮಾಧಿ ಗೆ ಸೋದರ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅರ್ಜುನ್ ಸರ್ಜಾ, ಮೇಘನಾ ರಾಜ್, ಚಿರು ಅಪ್ಪ, ಅಮ್ಮ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕುಟುಂಬ ಸದಸ್ಯರು ಕಣ್ಣೀರಿಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಅಂತರಂಗ5 hours ago

ನಡುಪಂಥ ಅನ್ನುವ ಗುಳ್ಳೇನರಿ ಸಿದ್ದಾಂತ : ಭಾಗ -3

ಲೋಕೇಶ್ ಪೂಜಾರಿ ಒಬ್ಬ ನಡುಪಂಥೀಯ ನರಿ ಹೀಗೆ ಬರೆದುಕೊಳ್ಳುತ್ತಾನೆ. “ನಾನು ಬಿಲ್ಲವರ ಬಗ್ಗೆ ಬರೆದೆ ,ಅವರು ಜಗಳಕ್ಕೆ ಬಂದರು, ಬಂಟರ ಬಗ್ಗೆ ಮಾತಾಡಿದೆ ಅವರೂ ಜಗಳಕ್ಕೆ ನಿಂತರು,...

ದಿನದ ಸುದ್ದಿ6 hours ago

ಆಶಾ ಕಾರ್ಯಕರ್ತೆಯರಿಗೆ ಸಚಿವರಿಂದ ಚೆಕ್ ವಿತರಣೆ

ಸುದ್ದಿದಿನ,ಹಾಸನ: ಜೀವದ ಹಂಗು ತೊರೆದು ಕುಟುಂಬವನ್ನು ಲೆಕ್ಕಿಸದೇ ಹಗಲಿರುಳು ಕೆಲಸ ಮಾಡುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಜಿಲ್ಲಾ...

ಲೈಫ್ ಸ್ಟೈಲ್6 hours ago

ರೆಸಿಪಿ | ಮಳೆಗಾಲಕ್ಕೆ ಆಲೂ ಮಟರ್ ಪಲಾವ್ ಮಾಡಿ ತಿನ್ನಿ

ಸುದ್ದಿದಿನ ಡೆಸ್ಕ್ : ಕುಕ್ಕರ್ ಒಲೆ ಮೇಲಿಟ್ಟು 2 ಚಮಚ ತುಪ್ಪ, ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ, ಚಕ್ಕೆ, ಲವಂಗ, ಪಲಾವ್ ಎಲೆಯನ್ನು ಹಾಕಿ. ತರುವಾಯ ಈರುಳ್ಳಿ,...

ದಿನದ ಸುದ್ದಿ6 hours ago

ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ | ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ಕಲಬುರಗಿ:ಪ್ರಸಕ್ತ 2020-21ನೇ ಸಾಲಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ...

ಬಹಿರಂಗ6 hours ago

ಮುನ್ನೂರು ರಾಮಾಯಣಗಳು : ಒಂದು ವ್ಯಾಖ್ಯಾನ

ಎ. ಕೆ. ರಾಮಾನುಜನ್ ಅವರ `ಥ್ರೀ ಹಂಡ್ರೆಡ್ ರಾಮಾಯಣಾಸ್: ಫೈವ್ ಎಕ್ಸಾಂಪಲ್ಸ್ ಅಂಡ್ ಥ್ರೀ ಥಾಟ್ಸ್ ಆನ್ ಟ್ರಾನ್ಸ್‌ಲೇಷನ್ಸ್~ (Three Hundred Ramayanas: Five Examples and...

ದಿನದ ಸುದ್ದಿ6 hours ago

ಭಾರತ ಭಾಗ್ಯವಿಧಾತರೊಟ್ಟಿಗೆ ಹಂಸಲೇಖರ ಅನುಸಂಧಾನ

ಹಾರೋಹಳ್ಳಿ ರವೀಂದ್ರ ಅಮರ್ತ್ಯ ಸೇನ್ ಅವರಿಗೆ ನೊಬೆಲ್ ಬಂದಾಗ ಅವರು “ನಾನು ಹೊಸತೇನನ್ನು ಮಾಡಿಲ್ಲ, ಬಾಬಾಸಾಹೇಬರ ಆರ್ಥಿಕ ಸಿದ್ಧಾಂತಗಳನ್ನು ವಿಸ್ತರಿಸಿದ್ದೇನಷ್ಟೆ ಎಂದು ಹೇಳಿದರು. ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯವು...

ದಿನದ ಸುದ್ದಿ6 hours ago

ಹುಬ್ಬಳ್ಳಿಯ ವಿಜಯಚೇತನ, ವಿಶ್ವಚೇತನ ಹಾಗೂ ಧಾರವಾಡದ ವೈಷ್ಣವಿ ಚೇತನ ಪದವಿಪೂರ್ವ ಕಾಲೇಜುಗಳ ಮಾನ್ಯತೆ ರದ್ದು

ಸುದ್ದಿದಿನ,ಧಾರವಾಡ : ವಿಜಯಚೇತನ ಪದವಿಪೂರ್ವ ಕಾಲೇಜು, ಹುಬ್ಬಳ್ಳಿ (ಜೆಜೆ-394), ವೈಷ್ಣವಿ ಚೇತನ ಪದವಿಪೂರ್ವ ಕಾಲೇಜು ಧಾರವಾಡ (ಜೆಜೆ-327) ಹಾಗೂ ವಿಶ್ವಚೇತನ ಪದವಿಪೂರ್ವ ಕಾಲೇಜು ಹುಬ್ಬಳ್ಳಿ (ಜೆಜೆ-328) ಈ...

ದಿನದ ಸುದ್ದಿ6 hours ago

ದಾವಣಗೆರೆ | ರಾಮಮಂದಿರ ನಿರ್ಮಾಣ : ನಿಷೇಧಾಜ್ಞೆ ಜಾರಿ

ಸುದ್ದಿದಿನ,ದಾವಣಗೆರೆ : ಆ.5 ರಂದು ಪ್ರಧಾನಮಂತ್ರಿಗಳು ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯಾದ್ಯಂತ...

ನಿತ್ಯ ಭವಿಷ್ಯ6 hours ago

ಬುಧವಾರದ ದಿನ ಭವಿಷ್ಯವಾಣಿ

ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್...

ದಿನದ ಸುದ್ದಿ15 hours ago

ರಾಜ್ಯದಲ್ಲಿ 6,259 ಹೊಸ ಕೊರೊನಾ ಕೇಸ್ ಪತ್ತೆ

ಸುದ್ದಿದಿನ,ಬೆಂಗಳೂರು: ಇಂದು ರಾಜ್ಯದಲ್ಲಿ 6,259 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,45,830ಕ್ಕೆ ಏರಿಕೆಯಾಗಿದೆ. ಇಂದು 110 ಮಂದಿ ಕೊರೊನಾಗೆ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ...

Trending