Connect with us

ದಿನದ ಸುದ್ದಿ

ದೋಣಿ ಮತ್ತು ವೀಡಿಯೋ ಕಾಲ್..!

Published

on

  • ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು

ಸ್ಸಾಮಿನ ಮೋರಿಗಾಂವ್ ಜಿಲ್ಲೆಯ ಜಿಂಗ್ ಪೋರಿ ಹಳ್ಳಿಯ ಲಾಲ್ ಚಂದ್ ಬಿಸ್ವಾಸ್ ಗೆ ಯಕೃತ್ತಿನ ಸಮಸ್ಯೆಯಿದೆ. ನಿರಂತರ ವೈದ್ಯಕೀಯ ಆರೈಕೆಯಿಂದಾಗಿ ಗುಣವಾಗುತ್ತಿದ್ದನು. ಫೆಭ್ರವರಿ ತಿಂಗಳ ತನಕ ಎಲ್ಲವೂ ಸರಿಯಾಗಿತ್ತು. ಆದರೆ, ಮಾರ್ಚ್ ತಿಂಗಳಲ್ಲಿ ಹೇರಿಕೆಯಾದ ಲಾಕ್ ಡೌನ್ ನಿಂದಾಗಿ ನಂತರದ ದಿನಗಳಲ್ಲಿ ವೈದ್ಯಕೀಯ ಸೌಲಭ್ಯ ಸಿಗದೆ ಜೂನ್ ತಿಂಗಳಲ್ಲಿ ಕಿಬ್ಬೊಟ್ಟೆಯಲ್ಲಿ ನೋವು, ಮಂಪರು, ಉಸಿರಾಡಲು ಕಷ್ಟವಾಗಿ ಗಂಭಿರ ಸ್ಥಿತಿಗೆ ತಲುಪಿದನು.

ಜುಲೈ ತಿಂಗಳ ಪ್ರಾರಂಭದಲ್ಲಿ ಈತನ ಪರಿಚಯದ ಫಾರ್ಮಸಿಸ್ಟ್ ಮೊಫಿಸುರ್ ರೆಹ್ಮಾನ್ ಈತನ ಮನೆಗೆ ಬೇಟಿ ಕೊಟ್ಟಾಗ ಲಾಲ್ ಚಂದ್ ಬಿಸ್ವಾಸ್ ಕೋಮಾಕ್ಕೆ ಜಾರುವುದರಲ್ಲಿದ್ದನು. ಆತನನ್ನು ಯಾವುದಾದರೂ ಡಾಕ್ಟರ್ ಬಳಿ ಒಯ್ಯಲು ಪ್ರಯತ್ನಿಸಿದರೂ ಪ್ರವಾಹದಿಂದಾಗಿ ಸಾಧ್ಯವಿರಲಿಲ್ಲ. ಆಗ ಬಿಸ್ವಾಸ್ ಬಳಿಯಿದ್ದ ಡಾಕ್ಟರೊಬ್ಬರ ಚೀಟಿ ರೆಹ್ಮಾನ್ ಗೆ ಕಾಣಿಸಿತು.

ಅವರು ಅದರಲ್ಲಿದ್ದ ನಂಬರಿಗೆ ಫೋನ್ ಮಾಡಿದಾಗ 2000 ಕಿಮಿ ದೂರದ ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಲಿವರ್ ಟ್ರಾನ್ಸ್ ಪ್ಲಾಂಟೇಷನ್ ಸರ್ಜನ್ ಮತ್ತು ಗೈನಾಕೊಲಾಜಿಸ್ಟ್ ಡಾ ಉಷಾ ಧೀರ್ ಫೋನ್ ಎತ್ತಿದರು. ವಾಸ್ತವದಲ್ಲಿ, ಕಳೆದೊಂದು ವರ್ಷದಿಂದ ಪ್ರತೀ ತಿಂಗಳು ಅಸ್ಸಾಮಿಗೆ ಬಂದು ಯಕೃತ್ತಿನ ರೋಗಿಗಳನ್ನು ಉಪಚರಿಸಿ ಹೋಗುತ್ತಿದ್ದ ಅವರೇ ಫೆಭ್ರವರಿ ತಿಂಗಳಲ್ಲಿ ಕೊನೇ ಬಾರಿಗೆ ಬಿಸ್ವಾಸ್ ಗೆ ಚಿಕಿತ್ಸೆ ನೀಡಿ ಹೋಗಿದ್ದರು.

ಅವರು ಬಿಸ್ವಾಸ್ ನ ವೀಡಿಯೋ ಕಾಲಿಗೆ ವ್ಯವಸ್ಥೆ ಮಾಡಲು ಹೇಳಿದರು. ಆದರೆ, ವೀಡಿಯೋ ಕಾಲಿಗೆ ಬೇಕಾದಷ್ಟು ಸಿಗ್ನಲ್ ಆ ಹಳ್ಳಿಯಲ್ಲಿ ಸಿಗುತ್ತಿರಲಿಲ್ಲ. ಆಗ ರೆಹ್ಮಾನ್ ಮತ್ತು ಬಿಸ್ವಾಸನ ಕುಟುಂಬಿಕರು ಸಣ್ಣ ದೋಣಿಯೊಂದರಲ್ಲಿ ಅವನನ್ನು ಮಲಗಿಸಿ ಹೊಳೆಯ ನಡುವೆ ಹೋದಾಗ ಅಲ್ಲಿ ಸಿಗ್ನಲ್ ಸಿಕ್ಕಿತು.

ಅರು ಗಂಟೆಗಳ ಕಾಲ ನಡೆದ ವೀಡಿಯೋ ಕಾಲಿನಲ್ಲಿ ರೆಹ್ಮಾನ್ ಡಾ ಧೀರ್ ಹೇಳಿದಂತೆ ಮಾಡಿ ಬಿಸ್ವಾಸ್ ನನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು. ಕೆಲವು ದಿನಗಳ ನಂತರ ಡಾ ಧೀರ್ ಅವನಿಗೆ ಬೇಕಾದ ಔಷಧಿಗಳನ್ನೂ ಕಳುಹಿಸಿ ಕೊಟ್ಟು ಮುಂದೆ ಪ್ರವಾಹ ಇಳಿದು ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ದೆಹಲಿಗೆ ಬರಲು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Advertisement

ದಿನದ ಸುದ್ದಿ

ಕಾವಲ ಭೈರವಸಂದ್ರ ಗಲಭೆ | ಹಿಂದೂ-ಮುಸ್ಲಿಮರು ಶಾಂತಿಯಿಂದ ವರ್ತಿಸಿ : ಸಿದ್ದರಾಮಯ್ಯ ಮನವಿ

Published

on

ಸುದ್ದಿದಿನ, ಬೆಂಗಳೂರು:  ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಮ್ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ‌.

ಕೊರೋನಾ ಚಿಕಿತ್ಸೆಯಲ್ಲಿರುವ ಅವರು, ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ
ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತಿಳಿಸಿದ್ದೇನೆ. ಶಾಂತಿ ಸ್ಥಾಪನೆಯ ರಾಜ್ಯ ಸರ್ಕಾರದ ಪ್ರಯತ್ನಕ್ಕೆ
ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ.

ಇಂತಹ ಕೋಮು ಗಲಭೆಗಳಲ್ಲಿ‌ ಸಾವು-ನೋವಿಗೆ ಈಡಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕೆಂದು ಕೋರುತ್ತೇನೆ ಎಂದು ಹೇಳಿದ್ದಾರೆ.

ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಖಂಡನೀಯ. ಇದರಿಂದ ಪೊಲೀಸರು ನೈತಿಕ ಸ್ಥೈರ್ಯ‌ ಕಳೆದು ಕೊಳ್ಳಬಾರದು. ಇಂತಹ ಪ್ರಕರಣಗಳ ಸಂದರ್ಭಗಳಲ್ಲಿ ಪೊಲೀಸರು ತಕ್ಷಣ ವಿವೇಚನೆಯಿಂದ ನಿರ್ಧಾರ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಸಣ್ಣ ನಿರ್ಲಕ್ಷ್ಯ ಅನಾಹುತಕ್ಕೆ ದಾರಿಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಳೆಗಾಲದಲ್ಲೂ ಮನೆಗೆ ತಲುಪುತ್ತಿಲ್ಲ ಕುಡಿಯಲು ನೀರು; ಪಾಲಿಕೆ ವಿರುದ್ಧ ದಿನೇಶ್ ಶೆಟ್ಟಿ ಆಕ್ರೋಶ

Published

on

ಸುದ್ದಿದಿನ, ದಾವಣಗೆರೆ: ನಗರಪಾಲಿಕೆಯಿಂದ ಕುಡಿಯುವ ನೀರಿನ ಸರಬರಾಜನ್ನು ಎಂಟರಿಂದ ಹತ್ತು ದಿನಕ್ಕೆ ಪೂರೈಕೆ ಮಾಡುತ್ತಿದ್ದು,  ನೀರಿನ ಸಮಸ್ಯೆಗೆ ಆಡಳಿತ ನಿರ್ಲಕ್ಷ ವಹಿಸಿದೆ ಎಂದು ಪಾಲಿಕೆಯ ಮಾಜಿ ಸದಸ್ಯ ದಿನೇಶ್ ಕೆ ಶೆಟ್ಟಿ ಆರೋಪಿಸಿದ್ದಾರೆ.

ನೀರನ್ನು ಶುದ್ಧೀಕರಿಸದೇ ಅಶುದ್ಧವಾದ ನೀರನ್ನೇ ಸರಬರಾಜು ಮಾಡಲಾಗುತಿದ್ದು ಇದರಿಂದ ಸಾಕಷ್ಟು ರೋಗ-ರುಜಿನಗಳು ಉಲ್ಬಣಗೊಳಿಸುತ್ತವೆ ಎಂದು ತಿಳಿಸಿರುತ್ತಾರೆ.
ಈ ಹಿಂದೆ ನಗರಪಾಲಿಕೆಯ ನೀರನ್ನು ಕುದಿಸಿ ಆರಿಸಿ ಉಪಯೋಗಿಸಿ ಎಂಬ ಹೇಳಿಕೆಯನ್ನು ನೀಡಲಾಗುತ್ತಿತ್ತು ಆದರೆ ಈಗಿನ ಪಾಲಿಕೆಯ ಆಡಳಿತ ಸೌಜನ್ಯಕ್ಕಾದರೂ ಜನತೆಗೆ ಮಾಹಿತಿ ನೀಡದೆ ಸಂಪೂರ್ಣ ನಿರ್ಲಕ್ಷ ವಹಿಸಿದೆ ಎಂದರು.

ಕೋವಿಡ್ ನೆಪದಲ್ಲಿ ನಗರದಲ್ಲಿ ಮಹಾನಗರಪಾಲಿಕೆ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಪೂರ ಸಂಪೂರ್ಣ ವಿಫಲವಾಗಿದ್ದು ಸೀಲ್ ಡೌನ್ ನೆಪದಲ್ಲಿ ಮನೆಯೊಂದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಸ್ವಚ್ಛತೆ ಇಲ್ಲದೇ ರೋಗರುಜಿನಗಳು ಹೆಚ್ಚಾಗಿದ್ದು, ಕರೋನಾ ಡೆಂಗ್ಯು , ಹೆಚ್ ,1, ಎನ್,1. ಮುಂತಾದ ರೋಗಗಳು ಹರಡಲು ಸಹ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ

ಪಾಲಿಕೆ ಆಡಳಿತ ನಡೆಸುವವರೇ ಆಗಲಿ ಅಧಿಕಾರಿಗಳಾಗಲಿ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಕರೋನ ನೆಪ ಒಡ್ಡಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದಿನೇಶ್ ಅವರು ದೂರಿದ್ದಾರೆ.
ಜಿಲ್ಲಾಡಳಿತ ಕೂಡಲೇ ಮಹಾನಗರಪಾಲಿಕೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲುಸ ಸೂಕ್ತ ಕ್ರಮ ಕೈಗೊಳ್ಳಲು ಅದೇಶಿಸಬೇಕೆಂದು ಒತ್ತಾಯಿದ್ದಾರೆ.

 

Continue Reading

ದಿನದ ಸುದ್ದಿ

ರೈಲುಗಳ ಸಂಚಾರಕ್ಕಿನ್ನು ಗೀನ್ ಸಿಗ್ನಲ್ ಇಲ್ಲ

Published

on

ಸುದ್ದಿದಿನ  ದಾವಣಗೆರೆ : ಭಾರತೀಯ ರೈಲ್ವೆ ಇಲಾಖೆಯ ಪ್ರಕಟಣೆ. ನವದೆಹಲಿ: ಕರೋನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಪ್ರಯಾಣಿಕ ರೈಲುಗಳ ಸಂಚಾರವನ್ನು ಅನಿರ್ದಿಷ್ಟಾವಧಿಯವರಿಗೆ ಮುಂದುವರಿಸಲಾಗಿದೆ.

ಈಗಾಗಲೇ ದೇಶದಲ್ಲಿ ಸಂಚರಿಸುತ್ತಿರುವ 230 ವಿಶೇಷ ರೈಲುಗಳ ಸಂಚಾರ ಎಂದಿನಂತೆ ಮುಂದುವರೆಯಲಿದೆ, ರೈಲುಗಳಲ್ಲಿ ನ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ಇದ್ದಲ್ಲಿ ಅಗತ್ಯವಿದ್ದಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ, ದೇಶಾದ್ಯಂತ ಕರೊನಾ ಹರಡಿರುವ ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿಂದ ಪ್ರಸ್ತುತ ಅವಧಿಯವರೆಗೆ ರೈಲ್ವೇ ಸೇವೆಯು ಸ್ಥಗಿತಗೊಂಡಿರುವ ಕಾರಣ ಬೊಕ್ಕಸಕ್ಕೆ 40 ಸಾವಿರ ಕೋಟಿಯಷ್ಟು ಹಣ ನಷ್ಟ ಆಗಿರುತ್ತದೆ,

ಈ ಹಿಂದಿನ ಆದೇಶದಂತೆ ಅಗಸ್ಟ್ 12ರವರೆಗೆ ಸ್ಥಗಿತಗೊಂಡಿರುವ ರೈಲ್ವೆ ಸಂಚಾರ ಸಾರ್ವಜನಿಕವಾಗಿ ಆದಷ್ಟು ಬೇಗನೆ ಮುಕ್ತಗೊಳ್ಳುವುದೋ ಕಾದುನೋಡಬೇಕು.

ಸುದ್ದಿದಿನ.ಕಾಂ| ವಾಟ್ಸಾಪ್| 9980346243

Continue Reading

Trending