Connect with us

ದಿನದ ಸುದ್ದಿ

ಉಡುಪಿಯ ಪದ್ಮಪ್ರಿಯಾ ಆತ್ಮಕ್ಕೆ ಶಾಂತಿ ಸಿಕ್ತು..! ಶಾಸಕರ ಪತ್ನಿ ಸಾವಿಗೆ ಕಾರಣವಾದ ಟಿವಿ ಅ್ಯಂಕರ್ ಗೂ ಅದೇ ಗತಿಯಾಯ್ತು..!

Published

on

  • ಪ್ರದೀಪ್ ಕುಮಾರ್, ಪತ್ರಕರ್ತ

ನಿಮಗೆ ಉಡುಪಿ ಪದ್ಮಪ್ರಿಯ ಪ್ರಕರಣ ಮರೆತು ಹೋಗಿರಬಹುದು. ನಾಲ್ಕೈದು ದಿನ ಟಿವಿಯಲ್ಲಿ ಪದ್ಮಪ್ರಿಯಾ ಸಾವಿನ ತರಾವರಿ ಕತೆ ಕೇಳಿ ಖುಷಿಯಲ್ಲೇ ಆಕ್ರೋಶ ವ್ಯಕ್ತಪಡಿಸಿ ಮರೆತಿರಬಹುದು. ಆದ್ರೆ ಪದ್ಮಪ್ರಿಯ ಆತ್ಮ ಮಾತ್ರ ಅದನ್ನು ಮರೆತಿಲ್ಲ. ಪದ್ಮಪ್ರೀಯ ಮತ್ತು ಆಕೆಯ ಗೆಳೆಯನ ಸಂಬಂಧದ ಬಗ್ಗೆ ಕತೆ ಕಟ್ಟಿ ಪದ್ಮಪ್ರೀಯ ಸಾವಿಗೆ ನೇರ ಕಾರಣನಾಗಿದ್ದ ಟಿವಿ ಅ್ಯಂಕರ್ ಗೆ ಇವತ್ತು ಅಂತದ್ದೇ ಅನೈತಿಕ ಸಂಬಂಧದ ಕಾರಣಕ್ಕಾಗಿ ಒದೆ ಬಿದ್ದಿದೆ.

ಅವತ್ತು ಶಾಸಕರ ಜೊತೆಗಿನ ಬದುಕಿನ ನಿರಾಸಕ್ತಿ ತಳೆದು ತನ್ನಷ್ಟಕ್ಕೆ ತಾನಿರ್ತೀನಿ ಅಂತ ಉಡುಪಿಯ ಪದ್ಮಪ್ರೀಯ ದೆಹಲಿಗೆ ಹೋಗಿದ್ದಳು. ಹೇರ್ ಕಟ್ ಮಾಡಿ, ತನ್ನ ಬಟ್ಟೆ, ನಡೆ ನುಡಿಗಳನ್ನು ಬದಲಿಸಿ ಹೊಸ ಬದುಕು ಕಟ್ಟಲು ಆಕೆ ದೆಹಲಿಗೆ ತೆರಳಿ ಐಟಿ ಕಂಪನಿಯಲ್ಲಿ ಕೆಲಸವನ್ನೂ ಹುಡುಕಿದ್ದಳು.

ದೆಹಲಿಯಲ್ಲಿ ಉಳಿದುಕೊಳ್ಳಲು ಮನೆಯೊಂದು ಬೇಕಾಗಿತ್ತು. ಆಗ ಆಕೆಯ ನೆನಪಿಗೆ ಬಂದಿದ್ದು ಬಾಲ್ಯದ ಗೆಳೆಯ ಅತುಲ್ ರಾವ್ ! ಗೆಳೆಯನಿಗೆ ಕರೆ ಮಾಡಿ ದೆಹಲಿಯಲ್ಲಿ ಫ್ಲ್ಯಾಟ್ ಒಂದನ್ನು ಬುಕ್ ಮಾಡಿಸಿಕೊಂಡಿದ್ದಷ್ಟೇ ಆಕೆ ಮಾಡಿದ ತಪ್ಪು. ಫ್ಲ್ಯಾಟ್ ಲೆಡ್ಜರ್ ನಲ್ಲಿ ಅತುಲ್ ರಾವ್ ಸಹಿ ಇತ್ತು. ಆಗ ಎಂಟ್ರಿಯಾಗಿದ್ದೇ ದೆಹಲಿ ಟಿವಿ9 ರಿಪೋರ್ಟರ್ ಶಿವಪ್ರಸಾದ್.

ಬದುಕು ಕಟ್ಟಿಕೊಳ್ಳಲು ದೆಹಲಿಗೆ ಬಂದ ಪದ್ಮಪ್ರಿಯಗೂ ಅತುಲ್ ರಾವ್ ಅನೈತಿಕ ಸಂಬಂಧವಿದೆ ಎಂದು ಟಿವಿ9 ನಲ್ಲಿ ಶಿವಪ್ರಸಾದ್ ಸುದ್ದಿ ಮಾಡಿದ. ಇಬ್ಬರ ಸಂಬಂಧದ ಬಗ್ಗೆ ಕಪೋಲಕಲ್ಪಿತ ಸುದ್ದಿಯನ್ನು ರೋಚಕವಾಗಿ 24 ಗಂಟೆಯೂ ನಿರಂತರ ಪ್ರಸಾರ ಮಾಡಲಾಯ್ತು. ಬದುಕಲು ಬಂದ ಪದ್ಮಪ್ರಿಯ ಟಿವಿ 9 ವರದಿ ನೋಡಿ ನೇಣಿಗೆ ಶರಣಾಗುವ ನಿರ್ಧಾರ ಮಾಡಿದಳು.

ಪದ್ಮಪ್ರಿಯ

ಫ್ಲ್ಯಾಟ್ ನ ಬಾಗಿಲು ಒಡೆದು ಒಳ ಹೋದಾಗ ಪದ್ಮಪ್ರಿಯ ನೇಣಿನಲ್ಲಿದ್ದಳು ಮತ್ತು ಟಿವಿ9 ಆನ್ ಆಗಿತ್ತು. ಇಷ್ಟಕ್ಕೆ ಬಿಡದ ಶಿವಪ್ರಸಾದ್ ಆ ರೂಮಿನಲ್ಲಿದ್ದ ಮಂಚದ ಕೆಳಗೆ ನುಸುಳಿ ಪದ್ಮಪ್ರಿಯಾ ಸಂಬಂಧದ ಬಗ್ಗೆ ಲೈವ್ ಕೊಡಲಾರಂಬಿಸಿದ. ಪದ್ಮಪ್ರಿಯಾ ಸಾವಿಗೆ ಟಿವಿ9 ಶಿವಪ್ರಸಾದನೇ ಕಾರಣ ಎಂದು ಇಡೀ ರಾಜ್ಯ ಮಾತನಾಡಿಕೊಂಡಿತು. ಆದರೆ ಶಿವಪ್ರಸಾದ್ ಮಾತ್ರ ಅದು ತನ್ನ ಜೀವಮಾನದ ಸಾಧನೆ ಅಂದುಕೊಂಡ.

ಅದೇ ಶಿವಪ್ರಸಾದ್ ಇದೀಗ ಟಿವಿ ಚಾನೆಲ್ ಅ್ಯಂಕರ್. ಇವತ್ತು ಮತ್ತೊಬ್ಬರ ಪತ್ನಿ ಜೊತೆ ರೆಡ್​​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಮಹಿಳಾ ಅ್ಯಂಕರ್ ಜೊತೆ ಶಿವಪ್ರಸಾದ್ ಕಾರಿನಲ್ಲಿ ಹೋಗುತ್ತಿದ್ದಾಗ ಸಿನೀಮಿಯ ರೀತಿಯಲ್ಲಿ ಫಾಲೋ ಮಾಡಿಕೊಂಡು ಬಂದ ಗಂಡ ಶ್ರೀಧರ್, ಶಿವಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ. ಇವತ್ತು ಆ ಮಹಿಳಾ ಅ್ಯಂಕರ್ ಬರ್ತ್ ಡೇ ಇತ್ತು. ಹಾಗಾಗಿ ಇಬ್ಬರೂ ಸುತ್ತಾಡುತ್ತಿದ್ದರು.

ಕೊಡಿಗೆಹಳ್ಳಿ ಮೋರ್ ಎದುರು ಶಿವಪ್ರಸಾದ್ ಮತ್ತು ಮಹಿಳಾ ಅ್ಯಂಕರ್ ಜಾಲಿ ರೈಡ್ ನಲ್ಲಿ ಇದ್ದಾಗ ಸಾಫ್ಟ್ ವೇರ್ ಇಂಜಿನಿಯರ್ ಗಂಡ ಕಾರನ್ನು ಅಡ್ಡಗಟ್ಟಿ ಶಿವಪ್ರಸಾದ್ ಗೆ ಹಲ್ಲೆ ಮಾಡಿದ್ದಾನೆ. ಕಾರಿನ ಗಾಜುಪುಡಿ ಗೂಸಾ ನೀಡಿದ್ದಾನೆ. ಶ್ರೀಧರ್ ಹೇಳುವ ಪ್ರಕಾರ, ಅ್ಯಂಕರ್ ಸದಿವಪ್ರಸಾದ್ ನನ್ನ ಜೀವನ ನರಕ ಮಾಡಿದ್ದಾನೆ.

ನನ್ನ ಪತ್ನಿಯನ್ನು ನನ್ನಿಂದ ದೂರ ಮಾಡಿದ್ದಾನೆ. ಹಾಗಾಗಿ, ಇಂದು ರೆಡ್​ಹ್ಯಾಂಡ್ ಆಕೆ ಮತ್ತು ಆತನನ್ನು ನಾನು ಹಿಡಿದು ಪೊಲೀಸರಿಗೆ ಕೊಟ್ಟಿದ್ದೇನೆ. ಪೊಲೀಸರ ಬಳಿಯೂ ಹೇಳಿಕೆ ನೀಡಿದ್ದೇನೆ ಎಂದು ಹಲ್ಲೆ ಮಾಡಿರೋ ಆರೋಪ ಹೊತ್ತಿರೋ ಮಹಿಳಾ ಅ್ಯಂಕರ್ ಗಂಡ ಶ್ರೀಧರ್ ಹೇಳುತ್ತಿದ್ದಾನೆ. ಅವತ್ತು ಶಾಸಕರ ಪತ್ನಿ ಪದ್ಮಪ್ರಿಯಾ ತಲೆಗೆ ಅನೈತಿಕ ಸಂಬಂಧ ಕಟ್ಟಿ ಆಕೆಯ ಸಾವಿಗೆ ಕಾರಣವಾದ ಅ್ಯಂಕರ್ ಶಿವಪ್ರಸಾದ್ ಈಗ ಏನನ್ನುತ್ತಾನೆ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಿಜೆಪಿ ನಾಯಕರಿಗೆ ಗಂಡಸ್ತನ ಇದ್ರೆ ನ್ಯಾಯಾಲಯಕ್ಕೆ ಬರಲಿ; ಟಿ.ಬಿ ಜಯಚಂದ್ರ ಬಹಿರಂಗ ಸವಾಲು

Published

on

tb jayachandra

ಚಿಕ್ಕಬಳ್ಳಾಪುರ: ಬಿಜೆಪಿ ನಾಯಕರಿಗೆ ಗಂಡಸ್ತನ ಇದ್ದರೆ ನ್ಯಾಯಾಲಯಕ್ಕೆ ಬರಲಿ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ಬಹಿರಂಗ ಸವಾಲು ಹಾಕಿದ್ದಾರೆ.

ಕೊರೋನಾ ನಿಯಂತ್ರಣ ಸಂಬಂಧ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಚಿವರು ಬಿಜೆಪಿ ನಾಯಕರ ಧೈರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೋವಿಡ್‍ ವಿಚಾರದಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಈ ಕುರಿತು ಪ್ರಶ್ನೆ ಮಾಡಿದರೆ ನಮಗೆ ನೋಟೀಸ್‍ ಕಳುಹಿಸಲಾಗುತ್ತಿದೆ ಎಂದು ಖಡಕ್‍ ಆಗಿ ಹೇಳಿದರು.

ಕೋವಿಡ್ ವಿಚಾರವಾಗಿ ಸರ್ಕಾರ 4200 ಕೋಟಿ ರೂ. ಖರ್ಚು ಮಾಡಿದ್ದು, ಅದರಲ್ಲಿ ಸರಿ ಸುಮಾರು ಅರ್ಧದಷ್ಟು ಹಣಕ್ಕೆ ಲೆಕ್ಕವೇ ಇಲ್ಲ. ಈ ಬಗ್ಗೆ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದರೆ ಅವರಿಗೆ ಲೀಗಲ್‍ ನೋಟಿಸ್‍ ನೀಡಲಾಗಿದೆ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ

Published

on

tungabhadra dam water level today in tmc

ದಾವಣಗೆರೆ, ಆಗಸ್ಟ್ 04: ತುಂಗಭದ್ರಾ ಜಲಾಶಯದ ಮಟ್ಟ ಇಂದಿನ (04-08-2020) ಮಟ್ಟ ಈ ಕೆಳಗಿನಂತಿದೆ.

  • ಮಟ್ಟ: 1612.23 ಅಡಿ (ಪೂರ್ಣ ಮಟ್ಟದ 1633 ಅಡಿ)
  • ಕ್ಯಾಪ್: 39.694 ಟಿಎಂಸಿ (ಪೂರ್ಣ ಸಾಮರ್ಥ್ಯ 103 ಟಿಎಂಸಿ ಅಡಿ)
  • ಒಳಹರಿವು: 6575 ಸಿ / ಸೆ
  • ಹೊರಹರಿವು: 7595 ಸಿ / ಸೆ

ಕಳೆದ ವರ್ಷ: 04 ಆಗಸ್ಟ್ 2019

  • ಮಟ್ಟ: 1609.07 ಅಡಿ
  • ಕ್ಯಾಪ್: 33.496 ಟಿಎಂಸಿ
  • ಒಳಹರಿವು: 17817 ಸಿ / ಸೆ
  • ಹೊರಹರಿವು: 1250 ಸಿ / ಸೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ರಾಮ-ಲಕ್ಷ್ಮಣನ ವಿಗ್ರಹಕ್ಕೆ ಮೀಸೆ ಬೇಕು ;  ಹಿಂದುತ್ವ ಪ್ರತಿಪಾದಕ ಸಂಭಾಜಿ ಬಿಡೆ

Published

on

ಸುದ್ದಿದಿನ,ಪುಣೆ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವ ರಾಮ-ಲಕ್ಷ್ಮಣನ ವಿಗ್ರಹಕ್ಕೆ ಮೀಸೆ ಬೇಕು ಎಂದು ಹಿಂದುತ್ವ ಪ್ರತಿಪಾದಕ ಸಂಭಾಜಿ ಭಿಡೆ ಆಗ್ರಹಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬುಧವಾರ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಈ ಸಂಬಂಧ ಈಗಾಗಲೇ ಶ್ರೀರಾಮಂದಿರ ಟ್ರಸ್ಟ್ ನ ಗೋವಿಂದಗಿರಿ ಜೀ ಮಹಾರಾಜ್ ಜೊತೆ ಮಾತನಾಡಿ, ನೀವು ಸ್ಥಾಪಿಸುವ ರಾಮ ಹಾಗೂ ಲಕ್ಷ್ಣಣ ಪ್ರತಿಮೆಗಳಿಗೆ ಮೀಸೆ ಇರಬೇಕು. ಒಂದು ವೇಳೆ ನೀವು ರಾಮ-ಲಕ್ಷ್ಮಣ ವಿಗ್ರಹಗಳಿಗೆ ಮೀಸೆ ಇಟ್ಟಿಲ್ಲವೆಂದರೆ, ನನ್ನಂತಹ ಭಕ್ತರಿಗೆ ದೇವಾಲಯ ನಿರ್ಮಿಸಿದರೂ ಪ್ರಯೋಜನವಿಲ್ಲದಂತಾಗುತ್ತದೆ ಎಂದಿದ್ದಾರೆ.

ಶ್ರೀರಾಮಮಂದಿರಕ್ಕೆ ಭೂಮಿಪೂಜೆ ಮಾಡುವ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಆಗಸ್ಟ್ 5ರಂದು ನಡೆಯುವ ಕಾರ್ಯವನ್ನು ದಸರಾ, ದೀಪಾವಳಿ ಹಬ್ಬಗಳಂತೆ ಆಚರಿಸೋಣ ಎಂದು ಇದೇ ವೇಳೆ ಭಿಡೆ ಕರೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending