Connect with us

ದಿನದ ಸುದ್ದಿ

ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿ : ಧರ್ಮ, ಜಾತಿ ಮೀರಿದ ವಧು-ವರರ ಸಂಗಾತಿ ಆಯ್ಕೆಗೆ ಹೊಸ ವೇದಿಕೆ

Published

on

ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಮದುವೆ ಎನ್ನುವುದು ಕೇವಲ ಎರಡು ಕುಟುಂಬಗಳ ನಡುವಿನ ಸಂಬಂಧವನ್ನು ಬೆಸೆಯುವ ಕಾರ್ಯವಾಗಿಯಷ್ಟೇ ಉಳಿದುಕೊಳ್ಳದೇ ಅದರ ಆಳದಲ್ಲಿ ಜಾತೀಯತೆಯ ಪೋಷಣೆ, ಪುರುಷ ಪ್ರಧಾನ ಸಮಾಜ ನಿರ್ಮಾಣ, ಆಸ್ತಿಯ ಹಕ್ಕನ್ನು ಉಳ್ಳವರ ಬಳಿಯೇ ಉಳಿಸಿಕೊಳ್ಳುವ, ಸಾರ್ವಜನಿಕ ಪ್ರತಿಷ್ಠೆಯಂತಹ ಪೊಳ್ಳು ಆದರ್ಶಗಳನ್ನು ಸೇರಿದಂತೆ ಇನ್ನೂ ಅನೇಕ ಮನುಷ್ಯ ವಿರೋಧಿ ಗುಣಗಳನ್ನು ಪೋಷಿಸುವ ಪರೋಕ್ಷ ಕಾರ್ಯವಾಗಿಯೂ ಉಳಿದುಕೊಂಡಿದೆ.

ನಿಜವಾದ ಅರ್ಥದಲ್ಲಿ ಮದುವೆ ಎನ್ನುವ ಬಾಂಧವ್ಯ ಇರಬೇಕಾಗಿರುವುದೇ ಬೇರೆಯ ರೀತಿ. ಎಲ್ಲರನ್ನೂ ಬೆಸೆಯುವ ಮದುವೆ ಎನ್ನುವ ಕ್ರಿಯೆ ನಡೆಯಬೇಕಾಗಿರುವುದು ಎರಡು ಸಮಾನ ಮನಸ್ಕರ ನಡುವೆ. ಭಿನ್ನ ರುಚಿಗಳಲ್ಲಿದ್ದರೂ ಪರಸ್ಪರ ಗೌರವವನ್ನು ಹೊಂದಿರುವರ ವ್ಯಕ್ತಿತ್ವಗಳ ನಡುವೆ. ಹೀಗೆ ನಡೆಯಬೇಕಾಗಿದ್ದ ಮದುವೆ ಏಕೆ ಜಾತಿ ಹಾಗೂ ಅನಗತ್ಯ ಸಂಪ್ರಾದಯಗಳ ನಡುವೆ ಸಿಲುಕಿ ನಲುಗುತ್ತಿದೆ? ಇಂತಹ ಸೂಕ್ಷ್ಮ ವಿಚಾರಗಳು ಬಸವಣ್ಣವರಿಂದ ಆರಂಭವಾಗಿ ಕುವೆಂಪುವರಗೆ ಇನ್ನೂ ಅನೇಕರು ವಿವಿಧ ರೀತಿಯಲ್ಲಿ ಎಲ್ಲರನ್ನೂ ಎಚ್ಚರಿಸುತ್ತಲೇ ಬಂದಿದ್ದಾರೆ.

ಸಂವಿಧಾನವನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ತಿದ್ದಬೇಕು, ಆ ಮೂಲಕ ಭಾರತವನ್ನು ಆರೋಗ್ಯವಾಗಿ ರೂಪಿಸಬಹುದು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಇದೇ ದಿನಗಳಲ್ಲಿ ಭಾರತದ ನೆಲದಲ್ಲೇ ಮೂಡಿರುವ ಸಂಸ್ಕೃತಿಗಳಲ್ಲೂ ಕೆಲವು ಅನಿವಾರ್ಯ ಬದಲಾವಣೆಯನ್ನು ರೂಪಿಸಬೇಕು.

ಹೀಗೆ ಆಚರಣೆಯ ರೂಪದಲ್ಲಿರುವ ಅನೇಕ ಸಂಸ್ಕೃತಿಗಳನ್ನು ಈ ಶತಮಾನದ ಮನುಷ್ಯ ಜೀವನಕ್ಕೆ ಅಗತ್ಯವಾಗಿ ತಿದ್ದುಪಡಿ ಮಾಡಿದರೆ ಆ ಮೂಲಕ ಭಾರತವನ್ನು ಬೌದ್ಧಿಕವಾಗಿ ಇನ್ನಷ್ಟು ಗಟ್ಟಿಯಾಗಿ ನಿರ್ಮಾಣ ಮಾಡಲು ಸಾಧ್ಯವಿದೆ ಎನ್ನುವುದು ನಾವು ಗೆಳೆಯರು ಕಾಲೇಜಿನ ದಿನಗಳಿಂದ ಆರಂಭಿಸಿ ಅನೇಕ ವರ್ಷಗಳಿಂದ ಚರ್ಚಿಸಿ, ಕಾದಾಡಿ ಕಂಡುಕೊಂಡಿರುವ ಈ ಕ್ಷಣದ ಸತ್ಯ. ಈ ಚರ್ಚೆಯ ಫಲಿತಾಂಶವಾಗಿಯೇ ಸದ್ಯ “The Change Makers Matrimony” ರೂಪುಗೊಂಡಿದೆ.

ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದಾಗಲೇ ನಾವು ಒಂದಷ್ಟು ಗೆಳೆಯರು ಈ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದೆವು. ಕೇವಲ ಜಾತಿ ಆಧರಿತ ಮ್ಯಾಟ್ರಿಮೋನಿಯಲ್‌ ಸೈಟ್‌ಗಳಿಗೆ ಪರ್ಯಾಯವಾಗಿ ಯಾವುದೇ ಜಾತಿ, ಧರ್ಮ, ಕುಲಗಳ ಮನುಷ್ಯ ವಿರೋಧಿ ಬೇಲಿಗಳಿಂದ ಹೊರಗೆ ನಿಂತು ನಮ್ಮ ಜೀವನದೃಷ್ಠಿಗೆ ಹೊಂದುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವೇದಿಕೆಯನ್ನು ನಿರ್ಮಾಣ ಮಾಡಬೇಕು ಎನ್ನುವ ಆಲೋಚನೆಯಲ್ಲಿ ತೊಡಗಿದ್ದೆವು.

ನಮಗೆ ಶಿಕ್ಷಕರಾಗಿದ್ದ ಕ್ರಾಂತಿರಾಜ್‌ ಒಡೆಯರ್‌ ಕೂಡ ನಮ್ಮ ಆಲೋಚನೆಗಳಿಗೆ ಕೈ ಜೋಡಿಸಿದ್ದರು. ಆದರೆ, ಕಾಲೇಜು ಮುಗಿಯುತ್ತಿದ್ದಂತೆ ಚರ್ಚೆಯಲ್ಲಿ ಭಾಗವಹಿಸಿದ್ದ ಗೆಳೆಯರು ಹೆಚ್ಚಿನ ಓದಿಗೆ ಇಂಗ್ಲೆಂಡ್‌ಗೆ ಹೊರಟರೆ, ಕೆಲವುರ ಉದ್ಯೋಗದ ಕಾರಣಕ್ಕೆ ಬೆಂಗಳೂರಿಗೆ ಹೊರಟಿದ್ದರು. ಸದ್ಯ ಎಲ್ಲರೂ ಮರಳಿ ಮೈಸೂರಿಗೆ ಮರಳಿದ್ದೇವೆ. ಶಿಕ್ಷಕರಾದ ಕ್ರಾಂತಿರಾಜ್‌ ಒಡೆಯರ್‌ ಸೇರಿದಂತೆ ನಾವು ಎಲ್ಲಾ ಗೆಳೆಯರು ಮತ್ತೊಮ್ಮೆ ಚರ್ಚಿಸಿ ನಮ್ಮ ಹಳೆಯ ಕನಸಿಗೆ ಮರು ಚಾಲನೆ ನೀಡುತ್ತಿದ್ದೇವೆ.

ಮುಂದಿನ ದಿನಗಳಲ್ಲಿ ನಮ್ಮ “The Change Makers Matrimony”ಯ ವೆಬ್‌ಸೈಟ್‌ ಆರಂಭವಾಗಲಿದ್ದು ಇದರೊಂದಿಗೆ ಎಲ್ಲ ಬಗೆಯ ಸ್ಮಾರ್ಟ್‌ಫೋನ್‌ಗಳಿಗೂ ಹೊಂದುವಂತಹ ಅಪ್ಲಿಕೇಶನ್‌ ಸಹ ಬಿಡುಗಡೆಗೊಳಿಸಲಿದ್ದೇವೆ. ನಮ್ಮ ವೆಬ್‌ಸೈಟ್‌ ಬಿಡುಗಡೆ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ನಡೆಸಲು ತೀರ್ಮಾನಿಸಿದ್ದು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ನಮ್ಮ ವೆಬ್‌ಸೈಟ್‌ನಲ್ಲಿ ನೋದಾಂಯಿಸುವ ಮೂಲಕ ಮದುವೆಯಾಗಲು ಇಚ್ಛಿಸುವವರು ಉಳಿದ ಮ್ಯಾಟ್ರಿಮೋನಿಯಲ್‌ ಸೈಟ್‌ಗಳಲ್ಲಿ ನೀಡುವಂತೆ ಜಾತಿ, ಧರ್ಮಗಳ ವಿವವರಣೆಯನ್ನು ನೀಡುವ ಅಗತ್ಯವಿಲ್ಲ. ನಿಮ್ಮ ಆಲೋಚನೆ, ಉದ್ಯೋಗ, ಹವ್ಯಾಸ, ಸಮಾಜಿಕ ಜವಾಬ್ದಾರಿ ಗುಣಗಳನ್ನು ವಿವವರಿಸಿದರೆ ಸಾಕು.

The Change Makers Matrimony“ಯ ಉದ್ದೇಶ ಸ್ಪಷ್ಟ. ಗಂಡನ್ನು ಹೆಣ್ಣನ್ನು ಬೆಸೆಯುವ ಮದುವೆ ಎನ್ನುವ ಕ್ರಿಯೆಗೆ ಜಾತಿ, ಧರ್ಮದ ಅಗತ್ಯವಿಲ್ಲ. ಮದುವೆ ಸಫಲವಾಗುದಕ್ಕೆ ನಮ್ಮ ಬದುಕಿನ ಕುರಿತ ಅಭಿರುಚಿ, ಆಸಕ್ತಿಗಳು, ಆಯ್ಕೆ ಹಾಗೂ ಜೀವನ ಜೀವನದೃಷ್ಠಿ ಮುಖ್ಯ ಸಾಮಗ್ರಿಯೇ ಹೊರತು ನಮ್ಮ ಕಣ್ಣಿಗೆ ಕಾಣದ, ಸ್ಪರ್ಶಕ್ಕೆ ಸಿಗದ ಜಾತಿಯಲ್ಲ. ಈ ಕಾರಣದಿಂದ “The Change Makers Matrimony“ಯಲ್ಲಿ ಬಹುಮುಖ್ಯವಾಗಿ ಸಂಗಾತಿಯನ್ನು ನಿಮ್ಮ ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತದೆ.

ಈಗಾಗಲೇ ಅನೇಕ ಮಹನೀಯರು ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಹಲವು ರೂಪಗಳಲ್ಲಿ, ಹಲವು ವೇದಿಕೆಗಳಲ್ಲಿ ಬಯಲು ಮಾಡುತ್ತಲೇ ಬಂದಿದ್ದಾರೆ. ಈಗಾಗಲೇ ಬಯಲಾಗಿರ ಜಾತೀಯತೆಯ ಕರಾಳ ಮುಖವನ್ನು ಇನ್ನಷ್ಟು ಬಯಲು ಮಾಡುತ್ತಲೇ ಸಮಯ ಕೊಲ್ಲುವ ಬದಲು, ಬದಲಾವಣೆಗೆ ಮುಂದಾಗಬೇಕಾದ ತುರ್ತು ಎದುರಾಗಿದೆ.

ಯಾವುದೇ ಜಾತಿ ಹಾಗೂ ಧರ್ಮದ ಸೋಂಕಿಲ್ಲದೆ ಸಮಾನ ಮನಸ್ಕರಷ್ಟೇ ಉತ್ತಮ ಗೆಳೆಯರಾಗಬಹುದು ಎನ್ನುವುದು ಹೇಗೆ ಸಾಮಾನ್ಯ ಜ್ಞಾನವೋ ಅದೇ ರೀತಿಯಲ್ಲಿ ನಮ್ಮ ಆಲೋಚನೆಗೆ ಹೊಂದಬಲ್ಲವರಷ್ಟೇ ಉತ್ತಮ ಜೀವನ ಸಂಗಾತಿಯಾಗಬಹದು ಎನ್ನುವುದು ಅಷ್ಟೇ ಸಾಮಾನ್ಯ ಜ್ಞಾನ.

ಮದುವೆಯಾಗುವ ಇಚ್ಛೆಯನ್ನು ಹೊಂದುವ ಮೂಲಕ ನೋಂದಾಯಿಸಿದವರಿಗೆ ನಮ್ಮ ವೆಬ್‌ಸೈಟ್‌ನಲ್ಲಿ ಯಾವುದಾದರೂ ಹುಡುಗ/ಗಿ ಒಪ್ಪಿಗೆಯಾದರೆ ಅವರನ್ನು ಮಾತನಾಡಿಸುವ, ಅವರೊಂದಿಗೆ ಮದುವೆಯ ಕುರಿತ ಇಂಗಿತವನ್ನು ವ್ಯಕ್ತಪಡಿಸುವ ಅವಕಾಶವನ್ನು ಒದಗಿಸಲಾಗುತ್ತದೆ.  ಒಂದೊಮ್ಮೆ ನೀವು ಇಬ್ಬರು ಪರಸ್ಪರ ಒಪ್ಪಿಕೊಂಡು ಮದುವೆಯಾಗಲು ನಿರ್ಧರಿಸಿದರೆ ಮದುವೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಮನೆಯವರೊಂದಿಗೆ ನೀವೇ ಮಾತನಾಡಬೇಕು.

ಅದು ಸಂಪೂರ್ಣವಾಗಿ ನಿಮ್ಮದೇ ವಯಕ್ತಿಕ ವಿಷಯವಾಗಿರುತ್ತದೆ. “The Change Makers matrimony” ಸಂಸ್ಥೆಗೂ ಸಂಬಂಧವಿರುವುದಿಲ್ಲ. ಮದುವೆಗೆ ಎರಡೂ ಮನೆಯವರ ಒಪ್ಪಿಗೆ ದೊರೆತ ನಂತರ ಮದುವೆಗೆ ಬೇಕಾದ ಪೂರಕ ಕೆಲಸಗಳನ್ನು “The Change Makers Matrimony” ಸಂಸ್ಥೆಯೇ ಮಾಡಿಕೊಡುತ್ತದೆ.

The Change Makers Matrimony” ವೆಬ್‌ಸೈಟ್‌ನಲ್ಲಿ ಮದುವೆಯಾಗಲು ತಮ್ಮ ಹೆಸರನ್ನು ನೋಂದಾಯಿಸಲು ಇಚ್ಛಿಸುವವರು ಒಂದು ಸಾವಿರ ರೂಪಾಯಿಗಳನ್ನು ಶುಲ್ಕವಾಗಿ ನೀಡಬೇಕಾಗಿದೆ. “The Change Makers Matrimony” ಸಂಸ್ಥೆಯು ಈ ಹಣವನ್ನು ಸಂಸ್ಥೆಯ ನಿರ್ವಹಣೆಯ ಸೇರಿದಂತೆ ಹಲವು ಅಗತ್ಯ ಕೆಲಸಗಳಿಗೆ ವಿನಿಯೋಗಿಸುತ್ತದೆ. ಸಂಸ್ಥೆ ಕಾರ್ಯವನ್ನು ಆರಂಭಿಸಲು ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿದೆ.

ದೀ ಚೇಂಜ್‌ ಮೇಕರ್ಸ್ ಮ್ಯಾಟ್ರಿಮೋನಿ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಸತ್ಯಕೀರ್ತಿ. ಜೆ
ಸಂಸ್ಥಾಪಕ, ಸಿಇಎ
ಚೇಂಜ್‌ ಮೇಕರ್‌ ಮ್ಯಾಟ್ರಿಮೋನಿ
+918867701357

ರವಿ ಕುಮಾರ್‌. ಜೆ
ಸಹ ಸಂಸ್ಥಾಪಕ,
+917899980515

ಕ್ರಾಂತಿರಾಜ್‌ ಒಡೆಯರ್‌
ಮುಖ್ಯ ಸಲಹೆಗಾರರು
+919164061662

ಸಂದೀಪ್‌ ಈಶಾನ್ಯ
ಕಾರ್ಯದರ್ಶಿ
+919741705944

ಸುದ್ದಿದಿನ.ಕಾ|ವಾಟ್ಸಾಪ್|9980346243

Advertisement

ದಿನದ ಸುದ್ದಿ

ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ಸಭೆ | ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಕ್ರಮ

Published

on

ಸುದ್ದಿದಿನ,ದಾವಣಗೆರೆ :ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಪ್ರಮುಖವಾಗಿ ದಲಿತರಿಗೆ ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ದ ಕ್ರಮ, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು, ಈ ಸಭೆ ನಡೆದು 2 ವರ್ಷಗಳಾಗಿದ್ದು ನಾನು ಜಿಲ್ಲಾಧಿಕಾರಿಯಾಗಿ ಬಂದ ನಂತರ ಮೊದಲ ಸಭೆ
ಇದಾಗಿದೆ. ತಮ್ಮ ಕುಂದು ಕೊರತೆಗಳನ್ನು ಮುಕ್ತವಾಗಿ ತಿಳಿಸಿ. ನಾನೂ ಸೇರಿದಂತೆ ಅಧಿಕಾರಿಗಳ ತಂಡದಿಂದ ತಮ್ಮ ಮನವಿಗಳನ್ನು ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ವರ್ಷದಲ್ಲಿ ಸುಮಾರು 349 ಜಾತಿ ನಿಂದನೆ ಕೇಸ್‍ ದಾಖಲು : ಎ ಎಸ್ಪಿ ರಾಜೀವ್

Published

on

ಸುದ್ದಿದಿನ,ದಾವಣಗೆರೆ: ನಿಮ್ಮ ಕುಂದು ಕೊರತೆಗಳು ನಮಗೆ ಅರ್ಥವಾಗಿದೆ. ನಮ್ಮ ಇಲಾಖೆಯು 10 ವರ್ಷದಲ್ಲಿ ಸುಮಾರು 349 ಜಾತಿ ನಿಂದನೆ ಕೇಸ್‍ಗಳನ್ನು ದಾಖಲಿಸಿಕೊಂಡಿದ್ದು, ಇಲ್ಲಿ 7 ಜನರಿಗೆ ಮಾತ್ರ ಪರಿಹಾರ ಬರಬೇಕು. ಜೊತೆಗೆ 99 ಕೇಸ್‍ಗಳು ಬಾಕಿ ಇದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ರಾಜೀವ್ ಮಾಹಿತಿ ನೀಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅವರು ಮಾಹಿತಿ ಹಂಚಿಕೊಂಡರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪ.ಜಾತಿ – ಪ.ಪಂಗಡದವರ ಮೇಲಿನ ದೌರ್ಜನ್ಯ ಖಂಡಿಸಿದರೆ, ನನಗೆ ಚಪ್ಪಲಿ ಹಾರ ಹಾಕುತ್ತಾರೆ :‌ ಜಿ.ಪಂ ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ನಾನೊಬ್ಬ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ. ನನಗೆ ನಗರದ ಪ್ರಮುಖ ವೃತ್ತದಲ್ಲಿ ಚಪ್ಪಲಿ ಹಾರ ಹಾಕುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ನೋವಿನಿಂದ ನುಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು,

ದೂರು ನೀಡಿ ಸಂಬಂಧಿಸಿದವರನ್ನು ಬಂಧಿಸಲು ಕೋರಿದರೆ, ಪೊಲೀಸರು ಆರೋಪಿಗಳು ಕಣ್ಮರೆಯಾಗಿದ್ದಾರೆ ಎಂದು ಸಬೂಬು ಹೇಳುತ್ತಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಮುಖ್ಯ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಹೇಗೆ ಸಾಧ್ಯ? ಇದು ಇಲಾಖೆಯ ವೈಫಲ್ಯವಲ್ಲವೇ? ನನ್ನಂತಹವನಿಗೇ ಹಾಗೆ ಆದರೆ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 500 ರಿಂದ 600 ಕ್ರಷರ್ ಮಾಲೀಕರಿದ್ದಾರೆ. ಇದರಲ್ಲಿ ಎಸ್‍ಸಿ/ಎಸ್‍ಟಿ ಜನಾಂಗದವರು ಎಷ್ಟು ಜನರಿದ್ದಾರೆ? ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಜನಾಂಗದವರು ಇರುವ ಪ್ರದೇಶಗಳಲ್ಲಿ ಎಷ್ಟು ಕಾಮಗಾರಿಗಳಾಗಿವೆ? ಈ ಜಿಲ್ಲೆಯಲ್ಲಿ ಸಮಾನತೆ ಎಂಬುದು ಏನಾದರೂ ಇದ್ದರೆ ಅದು ಕರೊನಾದಿಂದ ಸತ್ತವರನ್ನು ಮಣ್ಣು ಮಾಡುವಲ್ಲಿ ಮಾತ್ರ ಇದೆ. ಬೇರೆಲ್ಲಿಯೂ ಇಲ್ಲ.

ಕಳೆದ 10 ವರ್ಷಗಳಲ್ಲಿ ಈ ಸಮುದಾಯದವರ ಮೇಲೆ ಎಷ್ಟು ದೌರ್ಜನ್ಯದ ಕೇಸ್‍ಗಳಾಗಿವೆ? ಎಷ್ಟರಲ್ಲಿ ಶಿಕ್ಷೆ ಆಗಿದೆ. ಎಷ್ಟು ‘ಬಿ’ ರಿಪೋರ್ಟ್ ಆಗಿದೆ ಮಾಹಿತಿ ಒದಗಿಸಿ. ಹಾಗೂ ಈ ಹಿಂದಿನ ಸಭೆಯ ಅನುಪಾಲನೆ ವರದಿಯೇ ಇಲ್ಲದೇ ಮುಂದಿನ ಸಭೆ ನಡೆಸುವುದು ಹೇಗೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending