Connect with us

ದಿನದ ಸುದ್ದಿ

ಹಾಲ್ ಟಿಕೆಟ್ ಕೊಡದಕ್ಕೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಆತ್ಮಹತ್ಯೆ

Published

on

ಸುದ್ದಿದಿನ, ಬೆಂಗಳೂರು : ಹಾಲ್ ಟಿಕೆಟ್ ಕೊಡದಕ್ಕೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಜನಾರ್ದನ್ (15), ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯ ಹಾಜರಾತಿ ಕಡಿಮೆ ಇದ್ದ ಕಾರಣ ಹಾಲ್ ಟಿಕೆಟ್ ನಿರಾಕರಿಸಿತ್ತು ಶಾಲೆ.ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿ
ನಿನ್ನೆ(ಭಾನುವಾರ) ನಾಗವಾರ ಪಾಳ್ಯದ ತಮ್ಮ‌ ನಿವಾಸದಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಬೌರಿಂಗ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ್ದದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ದಾವಣಗೆರೆ | ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ : ಶೇ.62.55 ಮತದಾನ

Published

on

ಸುದ್ದಿದಿನ,ದಾವಣಗೆರೆ : ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶೇ.62.55 ಮತದಾನವಾಗಿದೆ.

ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ಮತಕ್ಷೇತ್ರಗಳಲ್ಲಿನ ಒಟ್ಟು 32 ಮತಗಟ್ಟೆ ಕೇಂದ್ರಗಳಲ್ಲಿ ಒಟ್ಟು 12813 ಪುರುಷ ಮತದಾರರ ಪೈಕಿ 8641 ಮತದಾನ ಮಾಡಿದ್ದು ಶೇ. 67.44 ಮತದಾನವಾಗಿದೆ. ಒಟ್ಟು 8143 ಮಹಿಳಾ ಮತದಾರರ ಪೈಕಿ 4471 ಮಹಿಳೆಯರು ಮತದಾನ ಮಾಡಿದ್ದು ಒಟ್ಟು 13112 ಮತದಾರರು ಮತದಾನ ಮಾಡಿದ್ದು ಶೇ.62.55 ಮತದಾನವಾಗಿದೆ.

ಬೆಳಿಗ್ಗೆ 10 ಗಂಟೆಗೆ ಶೇ.5 ರಷ್ಟು ಮತದಾನವಾಗಿದ್ದು, ಮಧ್ಯಾಹ್ನ 12 ಗಂಟೆಗೆ ಶೇ19.54 ಮತದಾನವಾಗಿತ್ತು. ಮಧ್ಯಾಹ್ನ 2 ಗಂಟೆಗೆ ಶೇ.32.20 ಮತದಾನವಾದರೆ ಸಂಜೆ 4 ಗಂಟೆಗೆ ಶೇ.52.80 ಮತದಾನವಾಗಿತ್ತು. ಮುಕ್ತಾಯದ ಅವಧಿ 5 ಗಂಟೆಗೆ ಶೇ.62.55 ಮತದಾನವಾಗಿತ್ತು.

ಮಲೆಬೆನ್ನೂರು ಮತಗಟ್ಟೆ ಸಂಖ್ಯೆ 2 ಅತಿ ಹೆಚ್ಚು ಶೇ.85.64 ಮತದಾನವಾಗಿದ್ದರೆ, ದಾವಣಗೆರೆ ಮತಗಟ್ಟೆ ಸಂಖ್ಯೆ 13 ರಲ್ಲಿ ಅತಿ ಕಡಿಮೆ ಶೇ.42.56 ರಷ್ಟು ಮತದಾನವಾಗಿದೆ.

ಬುಧವಾರ ಬೆಳಿಗ್ಗೆ 8 ರಿಂದ ಆರಂಭವಾದ ಮತದಾನ ಎಲ್ಲೆಡೆ ಶಾಂತಿಯುತವಾಗಿ ನಡೆಯಿತು. ಕೋವಿಡ್ 19 ಹಿನ್ನೆಲೆಯಲ್ಲಿ ಮತದಾನಕ್ಕೂ ಮುನ್ನ ಎಲ್ಲ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರು ಮತದಾರರಿಗೆ ಸ್ಯಾನಿಟೈಸರ್ ನೀಡಿ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್‍ನಲ್ಲಿ ಪರೀಕ್ಷಿಸಿ ಪ್ರತಿಯೊಬ್ಬರಿಗೂ ಮತದಾನ ಮಾಡುವ ಸಲುವಾಗಿ ಕೈಗವಸುಗಳನ್ನು ನೀಡಲಾಯಿತು.

ಬುಧವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೈಸ್ಕೂಲ್ ಮೈದಾನದಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆಯಲ್ಲಿ ನಾಳೆ ವಿದ್ಯುತ್ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿ.ವಿ. ಕೇಂದ್ರ ದಿಂದ ಹೊರಡುವ ಎಂ.ಸಿ.ಸಿ.ಬಿ ಹಾಗೂ ಡಿ.ಸಿ.ಎಂ. ಫೀಡರ್‍ಗಳಲ್ಲಿ ಬೆ.ವಿ.ಕಂ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಅ.29 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಲಿದೆ.

ಎಮ್.ಸಿ.ಸಿ.ಬಿ ಫೀಡರ್ ವ್ಯಾಪ್ತಿಯ ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ, ಬಿ.ಐ.ಇ.ಟಿ. ಕಾಲೇಜು.

ಗುಂಡಿ ಛತ್ರದ ಸುತ್ತ ಮುತ್ತ, ಸದ್ಯೋಜಾತ ಮಠದ ಸುತ್ತಮುತ್ತ, ಕಾಸಲ್ ಶೆಟ್ಟಿ ಪಾರ್ಕ್, ಶಾಮನೂರು ಶಿವಶಂಕರಪ್ಪರವರ ನಿವಾಸದ ಸುತ್ತ ಮುತ್ತ ಪ್ರದೇಶಗಳು.

ಡಿ.ಸಿ.ಎಂ. ಫೀಡರ್ ವ್ಯಾಪ್ತಿಯ ಶ್ರೀರಾಮ ಬಡಾವಣೆ, ಡಿ.ಸಿ.ಎಂ. ಟೌನ್‍ಶಿಪ್, ಶಕ್ತಿನಗರ, ಅಂಬಿಕಾ ನಗರ, ಕೊಟ್ಟೂರೇಶ್ವರ ಬಡಾವಣೆ, ಜಯನಗರ, ಶೇಖರಪ್ಪ ಗೋಡೌನ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪೆನ್ಶನ್ ಪಡೆಯುವವರಿಗೆ ಇಲ್ಲಿದೆ ಸಿಹಿ ಸುದ್ದಿ..!

Published

on

ಸುದ್ದಿದಿನ,ದಾವಣಗೆರೆ: ನಿವೃತ್ತ ಸರ್ಕಾರಿ ನೌಕರರು ಪ್ರತಿವರ್ಷ ಪೆನ್ಶನ್ ಪಡೆಯಲು ಜೀವನ ಪ್ರಮಾಣ ದೃಡೀಕರಣ ಪತ್ರವನ್ನು ನವೆಂಬರ್ ತಿಂಗಳಲ್ಲಿ ಸಲ್ಲಿಸುವುದು ಖಡ್ಡಾಯವಾಗಿರುತ್ತದೆ.

ಈ ಕಾರಣಕ್ಕಾಗಿ ನಿವೃತ್ತರು ಬ್ಯಾಂಕುಗಳಿಗೆ ಅಡ್ಡಾಡಬೇಕಾಗಿದ್ದು ಅನಾರೋಗ್ಯ, ಸಮಯ, ಹಣ ವ್ಯಯಿಸುವುದು ಅನಿವಾರ್ಯವಾಗಿತ್ತು. ಆದರೆ ಇನ್ನು ಮುಂದೆ ನಿವೃತ್ತರ ಮನೆ ಬಾಗಿಲಿಗೆ ಟಪಾಲು ತರುವ ಪೋಸ್ಟ್ ಮಾಸ್ಟರ್ ಈ ಜೀವನ ಪ್ರಮಾಣ ಪತ್ರವನ್ನು ಮನೆಬಾಗಿಲಲ್ಲೇ ಪಡೆದು ಆನ್ಲೈನ್‌ನಲ್ಲಿ ತಲುಪಿಸಲಿದ್ದು ಎಲ್ಲ ನಿವೃತ್ತ ನೌಕರರಿಗೂ ಅನುಕೂಲವಾಗಲಿದ್ದು, ಫೋಟೋ ಹಾಗೂ ಬೆರಳಚ್ಚನ್ನು ಮನೆಬಾಗಿಲಲ್ಲೇ ಪಡೆಯುವ ಕಾರ್ಯವನ್ನು ನಿರ್ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ14 hours ago

ದಾವಣಗೆರೆ | ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ : ಶೇ.62.55 ಮತದಾನ

ಸುದ್ದಿದಿನ,ದಾವಣಗೆರೆ : ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶೇ.62.55 ಮತದಾನವಾಗಿದೆ. ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ಮತಕ್ಷೇತ್ರಗಳಲ್ಲಿನ...

ದಿನದ ಸುದ್ದಿ15 hours ago

ದಾವಣಗೆರೆಯಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿ.ವಿ. ಕೇಂದ್ರ ದಿಂದ ಹೊರಡುವ ಎಂ.ಸಿ.ಸಿ.ಬಿ ಹಾಗೂ ಡಿ.ಸಿ.ಎಂ. ಫೀಡರ್‍ಗಳಲ್ಲಿ ಬೆ.ವಿ.ಕಂ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಅ.29 ರಂದು ಬೆಳಿಗ್ಗೆ...

ದಿನದ ಸುದ್ದಿ15 hours ago

ಪೆನ್ಶನ್ ಪಡೆಯುವವರಿಗೆ ಇಲ್ಲಿದೆ ಸಿಹಿ ಸುದ್ದಿ..!

ಸುದ್ದಿದಿನ,ದಾವಣಗೆರೆ: ನಿವೃತ್ತ ಸರ್ಕಾರಿ ನೌಕರರು ಪ್ರತಿವರ್ಷ ಪೆನ್ಶನ್ ಪಡೆಯಲು ಜೀವನ ಪ್ರಮಾಣ ದೃಡೀಕರಣ ಪತ್ರವನ್ನು ನವೆಂಬರ್ ತಿಂಗಳಲ್ಲಿ ಸಲ್ಲಿಸುವುದು ಖಡ್ಡಾಯವಾಗಿರುತ್ತದೆ. ಈ ಕಾರಣಕ್ಕಾಗಿ ನಿವೃತ್ತರು ಬ್ಯಾಂಕುಗಳಿಗೆ ಅಡ್ಡಾಡಬೇಕಾಗಿದ್ದು...

ದಿನದ ಸುದ್ದಿ15 hours ago

ದಾವಣಗೆರೆ | ಭತ್ತ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ ; ಹೆಚ್ಚು ಬಾಡಿಗೆ ತಗೊಂಡ್ರೆ ಕಾನೂನು ಕ್ರಮ : ಜಿಲ್ಲಾಧಿಕಾರಿ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರಿನ ಹಂಗಾಮಿನಲ್ಲಿ 66046 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಸದ್ಯ ಭತ್ತದ ಬೆಳೆಯು ಬಹುತೇಕ ಕಾಳು ಬೆಳೆಯುವ ಹಂತದಲ್ಲಿರುವುದರಿಂದ ಇನ್ನು...

ದಿನದ ಸುದ್ದಿ16 hours ago

ಸೋಬೆರಾನ್ ಬೆಳಗಿದ ಜ್ಯೋತಿ..! : ಕಸದ ರಾಶಿಯಲ್ಲಿ ಸಿಕ್ಕ ಹೆಣ್ಣು ಮಗುವೀಗ ‘ಕಮೀಷನರ್’..!

ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು, ಮುಂಬೈ ಅಸ್ಸಾಮಿನ ತಿನ್ಸುಖಿಯಾ ಎಂಬಲ್ಲಿನ ಫುಟ್ ಪಾತ್ ತರಕಾರಿ ವ್ಯಾಪಾರಿ 30 ವರ್ಷ ಪ್ರಾಯದ ಸೋಬೆರಾನ್ ಎಂದಿನಂತೆ ಅಂದು ತರಕಾರಿ ಮಾರಿ ಗಾಡಿ...

ಅಂತರಂಗ22 hours ago

ಎಚ್ಚೆತ್ತುಕೊಳ್ಳಿ..!

ಸುರೇಶ ಎನ್ ಶಿಕಾರಿಪುರ ಖಿನ್ನತೆ ಆತ್ಮಹತ್ಯೆಗಳ ಹಿಂದೆ ನಿರುದ್ಯೋಗದ ದೊಡ್ಡ ಕಾರಣವಾಗಿದೆ. ನಿರುದ್ಯೋಗ ಕೂಡ ಒಂದು ಭೀಕರ ಕ್ಷಾಮವೇ. ಅದು ಮನುಷ್ಯರನ್ನು ಕೊಲ್ಲುತ್ತದೆ. ಈ ದೇಶಕ್ಕೆ ಕೇಂದ್ರ...

ದಿನದ ಸುದ್ದಿ22 hours ago

ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ..!

ಸುದ್ದಿದಿನ,ಮೈಸೂರು : ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅಕ್ಟೋಬರ್ 28 ರ ಸಂಜೆ 6 ಗಂಟೆಯಿಂದ ಅಕ್ಟೋಬರ್ 29 ರ ಮಧ್ಯಾಹ್ನ 12 ಗಂಟೆಯವರೆಗೆ...

ದಿನದ ಸುದ್ದಿ2 days ago

ಮಾಜಿ ಸಚಿವ ವೈ.ನಾಗಪ್ಪ ನಿಧನ : ಸಂತಾಪ ಸೂಚನೆ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಹರಿಹರದಿಂದ ಮೂರು ಬಾರಿ ಶಾಸಕರಾಗಿ ಹಾಗೂ ಈ ಹಿಂದೆ 2004-05 ರ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಖಾತೆಯ ಸಚಿವರಾಗಿದ್ದ...

ದಿನದ ಸುದ್ದಿ2 days ago

ಕೃಷಿ ಕಾಯ್ದೆಗಳು-2020 ಕುರಿತು ಆನ್‍ಲೈನ್ ತರಬೇತಿ

ಸುದ್ದಿದಿನ,ಬಾಗಲಕೋಟೆ : ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಕೊರೊನಾ ಹಿನ್ನಲೆಯಲ್ಲಿ ರೈತರ ಉಪಯೋಗಕ್ಕಾಗಿ ಅಕ್ಟೋಬರ 29 ರಂದು ಬೆಳಿಗ್ಗೆ 11 ರಿಂದ 12 ವರೆಗೆ ಗೂಗಲ...

ದಿನದ ಸುದ್ದಿ3 days ago

ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿಯ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಇರಲು ಹೇಗೆ ಸಾಧ್ಯ? : ಸಿದ್ದರಾಮಯ್ಯ ಕಿಡಿ

ಸುದ್ದಿದಿನ ಡೆಸ್ಕ್ : ಕಳೆದ ಮೂರು ತಿಂಗಳುಗಳ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದ ರೈತರು ಬೆಳೆ-ಮನೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ...

Trending