Connect with us

ದಿನದ ಸುದ್ದಿ

ಟ್ರಾಫಿಕ್ ಜಾಮ್ ನಿಂದ ಬೇಸತ್ತ ಜೆ.ಪಿ.ನಗರವಾಸಿಗಳಿಂದ ಪ್ರತಿಭಟನೆ

Published

on

ಸುದ್ದಿದಿನ,ಬೆಂಗಳೂರು : ಸದಾ ಜನಬಿಡಿತವಾಗಿರುವ ಜೆ.ಪೆ.ನಗರ , ಇತ್ತೀಚಿನ ದಿನಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಎದಿರಿಸುತ್ತಿದೆ. 29 ಜೂನ್, ಶನಿವಾರದಂದು ಗಂಟೆ ಗಟ್ಟಲೆ  ಟ್ರಾಫಿಕ್ ಜಾಮ್ ನಿಂದ ಬೇಸತ್ತ ಜೆ.ಪಿ.ನಗರ ನಿವಾಸಿಗಳು ರಸ್ತೆ ಗಿಳಿದು ಶಾಂತಿಯುತ ಪ್ರತಿಭಟನೆ ಮಾಡಿದರು.

ಜೆ.ಪಿ.ನಗರದ 24ನೇ ಮೇನ್ ರೋಡ್ ಅಪಾರ್ಟ್ಮೆಂಟ್ ನಿವಾಸಿಗಳ ಸಂಫವು ಈ ಪ್ರತಿಭಟನೆ ಕರೆದಿದ್ದು, ಮಹಾವೀರ್ ರಿವಿಯೆರಾ, ಎಲಿಟಾ , ಬ್ರಿಗೇಡ್ ಪಾಮ್ ಸ್ಪ್ರಿಂಗ್ಸ್, ಸೇರಿದಂತೆ ಸುಮಾರು 22 ಅಪಾರ್ಟ್ಮೆಂಟ್ ಗಳು ಈ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು. ಚಿನ್ನರು, ವೃದ್ದರು, ಮಹಿಳೆಯರು , ಸೇರಿದಂತೆ ಸಾವಿರಕ್ಕೂ ಹೆಚ್ಚು ಜೆ.ಪಿ ನಗರ ನಿವಾಸಿಗಳು, ಟ್ರಾಫಿಕ್ ಜಾಮ್ ನಿಂದ ತಮಗೆ ಆಗುತ್ತಿರುವ ತೊಂದರಗಳನ್ನು ರಸ್ತೆ ಗಿಳಿದು ಪೋಷಣೆ ಕೂಗುವುದುರೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಎಂ.ಎಲ್.ಆರ್ ಕಾನ್ವೆಂಷನ್ ಹಾಲ್ ನಿಂದ ಶುರುವಾದ ಮೆರವಣಿಗೆ ನಂದಿನಿ ಹೋಟೆಲ್  ವೃತ್ತದಲ್ಲಿ ಅಂತ್ಯ ವಾಯಿತು.ದಿನನಿತ್ಯ ನಡೆಯುವ ಆಕ್ಸಿಡೆಂಟ್, ರೋಡ್ ಬ್ಲಾಕ್, ರಸ್ತೆ ಕಾಮಗಾರಿ, ರಸ್ತೆ ಬದಿಯಲ್ಲಿನ ಅನಧಿಕೃತ ಪಾರ್ಕಿಂಗ್, ಶಾಲಾ ಕಟ್ಟಡದ ಹತ್ತಿರದಲ್ಲೇ  ಇತ್ತೀಚೆಗೆ ಶುರುವಾಗಿರುವ ಮೈಕ್ರೋ ಬ್ರೂವೆರಿ, ಹುಕ್ಕಾ ಬಾರ್ ಗಳಿಂದಾಗಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ಬಗ್ಗೆ , ಹಾಗೂ ಬಿಬಿಎಂಪಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚು ಟ್ರಾಫಿಕ್ ಸಂಚಾರವಿರುವ ಜೆ.ಪಿ ನಗರದಲ್ಲಿ ಸರಿಯಾದ ಸಂಚಾರಿ ಪೊಲೀಸ್ ವ್ಯವಸ್ಥೆ ಇಲ್ಲದಿರುವುದೇ ಎಲ್ಲಾ ಅವಘಡಗಳಿಗೆ ಕಾರಣವೆನ್ನಲಾಗಿದೆ.

ಇನ್ನು ಮುಂದೆಯಾದರೂ ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರು ಎಚ್ಚೆತ್ತು ಕೊಂಡು ಜೆ.ಪಿ ನಗರ ನಿವಾಸಿಗಳ ಟ್ರಾಫಿಕ್ ಸಂಕಷ್ಟ ನಿವಾರಿಸುತ್ತಾರ? ಕೋದು ನೋಡಬೇಕಿದೆ.

ವರದಿ : ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್ ಎಸ್ ಎಲ್ ಸಿ, ಐಟಿಐ ಪಾಸಾದವರಿಗೆ ಇಲ್ಲಿದೆ ಸಿಹಿ ಸುದ್ದಿ..!

Published

on

ಸುದ್ದಿದಿನ ಡೆಸ್ಕ್ : ಎಸ್ ಎಸ್ ಎಲ್ ಸಿ ಅಥವಾ ಐ ಟಿ ಐ ಪಾಸಾದವರಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸೌಥ್‌ ಈಸ್ಟ್‌ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 432 ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

31 ಆಗಸ್ಟ್‌ 2020ಕ್ಕೆ ಅನ್ವಯವಾಗುವಂತೆ ಕನಿಷ್ಠ 15, ಗರಿಷ್ಠ 24 ವರ್ಷದರಾಗಿರಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ ಸಡಿಲಿಕೆ ಇದೆ. ಹೆಚ್ಚಿನ ಮಾಹಿತಿಗಾಗಿ https://secr.indianrailways.gov.in ಸಂಪರ್ಕಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಿ ಯು ಕಾಲೇಜು ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿ : ಶಿಕ್ಷಣ ಇಲಾಖೆ ಅದೇಶ

Published

on

ಸುದ್ದಿದಿನ ದಾವಣಗೆರೆ: ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮತ್ತು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2020 ದಿನಾಂಕ 7.9. 2020 ರಿಂದ 16. 9. 2020 ರ ವರೆಗೆ ನಡೆಯಲಿರುವುದರಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೋವಿಡ್ ಕಾರ್ಯದಲ್ಲಿ ನಿಯೋಜಿತಗೊಂಡಿರುವ ಸಿಬ್ಬಂದಿಗಳು ಹೊರತಾಗಿ, ಎಲ್ಲಾ ಸಿಬ್ಬಂದಿಗಳು ಇಂದಿನಿಂದ ಕಾಲೇಜಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.

ಎಸ್ ಎಸ್ ಎಲ್ ಸಿ ಫಲಿತಾಂಶ ಈಗಾಗಲೇ ಪ್ರಕಟಗೊಂಡಿರುವುದರಿಂದ ಪ್ರಥಮ ಪಿಯು ತರಗತಿಗಳನ್ನು ಪ್ರಾರಂಭಿಸುವುದಕ್ಕಿಂತ ಮುಂಚಿತವಾಗಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಬೇಕಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಸುವ ಸಂಬಂಧ ಕಾಲೇಜುಗಳಲ್ಲಿ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿರುವುದರಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುವುದನ್ನು ಮಾತ್ರ ಬಿಟ್ಟು, ಉಳಿದೆಲ್ಲಾ ದಾಖಲಾತಿಯನ್ನೊಳಗೊಂಡಂತೆ ಪೂರಕವಾದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ದಿನಾಂಕ 13-08-2020ರಿಂದ ಕಾಲೇಜಿಗೆ ಹಾಜರಾಗಲು ಸೂಚಿಸಿದೆ.

ಕಾಲೇಜಿಗೆ ಹಾಜರಾಗುವ ಸಂದರ್ಭದಲ್ಲಿ ಕೋವಿಡ್-19ರ ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನೊಳಗೊಂಡಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆಯೂ ಅದೇಶಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾವಲ ಭೈರವಸಂದ್ರ ಗಲಭೆ | ಹಿಂದೂ-ಮುಸ್ಲಿಮರು ಶಾಂತಿಯಿಂದ ವರ್ತಿಸಿ : ಸಿದ್ದರಾಮಯ್ಯ ಮನವಿ

Published

on

ಸುದ್ದಿದಿನ, ಬೆಂಗಳೂರು:  ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಮ್ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ‌.

ಕೊರೋನಾ ಚಿಕಿತ್ಸೆಯಲ್ಲಿರುವ ಅವರು, ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ
ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತಿಳಿಸಿದ್ದೇನೆ. ಶಾಂತಿ ಸ್ಥಾಪನೆಯ ರಾಜ್ಯ ಸರ್ಕಾರದ ಪ್ರಯತ್ನಕ್ಕೆ
ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ.

ಇಂತಹ ಕೋಮು ಗಲಭೆಗಳಲ್ಲಿ‌ ಸಾವು-ನೋವಿಗೆ ಈಡಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕೆಂದು ಕೋರುತ್ತೇನೆ ಎಂದು ಹೇಳಿದ್ದಾರೆ.

ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಖಂಡನೀಯ. ಇದರಿಂದ ಪೊಲೀಸರು ನೈತಿಕ ಸ್ಥೈರ್ಯ‌ ಕಳೆದು ಕೊಳ್ಳಬಾರದು. ಇಂತಹ ಪ್ರಕರಣಗಳ ಸಂದರ್ಭಗಳಲ್ಲಿ ಪೊಲೀಸರು ತಕ್ಷಣ ವಿವೇಚನೆಯಿಂದ ನಿರ್ಧಾರ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಸಣ್ಣ ನಿರ್ಲಕ್ಷ್ಯ ಅನಾಹುತಕ್ಕೆ ದಾರಿಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ4 hours ago

ಎಸ್ ಎಸ್ ಎಲ್ ಸಿ, ಐಟಿಐ ಪಾಸಾದವರಿಗೆ ಇಲ್ಲಿದೆ ಸಿಹಿ ಸುದ್ದಿ..!

ಸುದ್ದಿದಿನ ಡೆಸ್ಕ್ : ಎಸ್ ಎಸ್ ಎಲ್ ಸಿ ಅಥವಾ ಐ ಟಿ ಐ ಪಾಸಾದವರಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸೌಥ್‌ ಈಸ್ಟ್‌ ಸೆಂಟ್ರಲ್...

ದಿನದ ಸುದ್ದಿ4 hours ago

ಪಿ ಯು ಕಾಲೇಜು ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿ : ಶಿಕ್ಷಣ ಇಲಾಖೆ ಅದೇಶ

ಸುದ್ದಿದಿನ ದಾವಣಗೆರೆ: ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮತ್ತು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2020 ದಿನಾಂಕ 7.9. 2020 ರಿಂದ 16....

ನಿತ್ಯ ಭವಿಷ್ಯ11 hours ago

ಗುರುವಾರದ ಭವಿಷ್ಯವಾಣಿ

ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್...

ದಿನದ ಸುದ್ದಿ1 day ago

ಕಾವಲ ಭೈರವಸಂದ್ರ ಗಲಭೆ | ಹಿಂದೂ-ಮುಸ್ಲಿಮರು ಶಾಂತಿಯಿಂದ ವರ್ತಿಸಿ : ಸಿದ್ದರಾಮಯ್ಯ ಮನವಿ

ಸುದ್ದಿದಿನ, ಬೆಂಗಳೂರು:  ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಮ್ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು...

ದಿನದ ಸುದ್ದಿ1 day ago

ಮಳೆಗಾಲದಲ್ಲೂ ಮನೆಗೆ ತಲುಪುತ್ತಿಲ್ಲ ಕುಡಿಯಲು ನೀರು; ಪಾಲಿಕೆ ವಿರುದ್ಧ ದಿನೇಶ್ ಶೆಟ್ಟಿ ಆಕ್ರೋಶ

ಸುದ್ದಿದಿನ, ದಾವಣಗೆರೆ: ನಗರಪಾಲಿಕೆಯಿಂದ ಕುಡಿಯುವ ನೀರಿನ ಸರಬರಾಜನ್ನು ಎಂಟರಿಂದ ಹತ್ತು ದಿನಕ್ಕೆ ಪೂರೈಕೆ ಮಾಡುತ್ತಿದ್ದು,  ನೀರಿನ ಸಮಸ್ಯೆಗೆ ಆಡಳಿತ ನಿರ್ಲಕ್ಷ ವಹಿಸಿದೆ ಎಂದು ಪಾಲಿಕೆಯ ಮಾಜಿ ಸದಸ್ಯ...

ದಿನದ ಸುದ್ದಿ1 day ago

ರೈಲುಗಳ ಸಂಚಾರಕ್ಕಿನ್ನು ಗೀನ್ ಸಿಗ್ನಲ್ ಇಲ್ಲ

ಸುದ್ದಿದಿನ  ದಾವಣಗೆರೆ : ಭಾರತೀಯ ರೈಲ್ವೆ ಇಲಾಖೆಯ ಪ್ರಕಟಣೆ. ನವದೆಹಲಿ: ಕರೋನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಪ್ರಯಾಣಿಕ ರೈಲುಗಳ ಸಂಚಾರವನ್ನು ಅನಿರ್ದಿಷ್ಟಾವಧಿಯವರಿಗೆ ಮುಂದುವರಿಸಲಾಗಿದೆ. ಈಗಾಗಲೇ ದೇಶದಲ್ಲಿ ಸಂಚರಿಸುತ್ತಿರುವ 230...

ಅಸಾಮಾನ್ಯಳು1 day ago

ಭಾರತದ ಕಿರಿಯ ಲೇಖಕಿ ‘ಮಾನ್ಯ ಹರ್ಷ’..!

ಹತ್ತು ವರ್ಷದ ಈ ಪುಟ್ಟ ಲೇಖಕಿ ಮಾನ್ಯ ಹರ್ಷ ಗೆ ಓದುವುದು ಬರೆಯುವುದು ಎಂದರೆ ತುಂಬಾ ಇಷ್ಟವಂತೆ. ಬೆಂಗಳೂರಿನ ಚಿತ್ರ ಮತ್ತು ಹರ್ಷ ದಂಪತಿಗಳ ಮಗಳಾದ ಮಾನ್ಯ...

ಭಾವ ಭೈರಾಗಿ1 day ago

ಪುಸ್ತಕ ವಿಮರ್ಶೆ | ಒಡಲಬೇಗೆಯ ನಡುವೆ ಹೊಳೆವ ‘ಮಡಿಲ ನಕ್ಷತ್ರ’

ಡಾ.ಎನ್.ಕೆ.ಪದ್ಮನಾಭ ಕವಿತೆ ಎಂದರೆ ಹಾಗೆಯೇ. ಅದು ಮನಸ್ಸಿಗೆ ಹತ್ತಿರ. ಬುದ್ಧಿ-ಭಾವಗಳ ಎಚ್ಚರದೊಳಗೆ ಸೃಷ್ಟಿಯಾಗುವ ಕೌತುಕ. ಒಂದಷ್ಟು ಖುಷಿ, ಒಂದಷ್ಟು ವಿಷಾದದ ಛಾಯೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ಬೆಳಕಿನ ಗಮ್ಯವನ್ನು...

ದಿನದ ಸುದ್ದಿ1 day ago

ದಾವಣಗೆರೆ ಮಳೆ ವಿವರ ಹೀಗಿದೆ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಆ.10 ರಂದು 4.8 ಮಿ.ಮೀ ಸರಾಸರಿ ಮಳೆಯಾಗಿದ್ದು ತಾಲ್ಲೂಕುವಾರು ಮಳೆ ವಿವರ ಈ ಕೆಳಕಂಡಂತೆ ಇದೆ. ಮಳೆ ವಿವರ ಚನ್ನಗಿರಿ ತಾಲ್ಲೂಕಿನಲ್ಲಿ 2.0...

ನಿತ್ಯ ಭವಿಷ್ಯ1 day ago

ಬುಧವಾರದ ಭವಿಷ್ಯವಾಣಿ

ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್...

Trending