Connect with us

ದಿನದ ಸುದ್ದಿ

ಪ್ರಾಣಿಗಳ ಮೇಲೆ ನಡೆಯುವ ಅಮಾನವೀಯ ಕೃತ್ಯಗಳನ್ನು ತಡೆಯಲು ತಿಳಿದುಕೊಳ್ಳಲೇ ಬೇಕಾದ ಪ್ರಾಣಿ ಕಲ್ಯಾಣ ಕಾನೂನುಗಳಿವು : ಮಿಸ್ ಮಾಡ್ದೆ ಓದಿ

Published

on

  • ಡಾ.ಕಮಲೇಶ್ ಕುಮಾರ್ ಕೆ ಎಸ್, ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ

ಹಿಂದಿನಿಂದಲೂ ತಮ್ಮ ಪಾಡಿಗೆ ತಾವು ಜೀವಿಸುತ್ತಿದ್ದ ವನ್ಯ ಪ್ರಾಣಿಗಳನ್ನು ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಎಷ್ಟೋ ಪ್ರಾಣಿಗಳನ್ನು ಪಳಗಿಸಿ ನಾಡು ಪ್ರಾಣಿಗಳನ್ನಾಗಿ ಪರಿವರ್ತಿಸಿದ್ದೇವೆ. ಮಾತು ಬಾರದ ಮೂಕ ಜೀವಿಗಳನ್ನು ಮನುಷ್ಯರಾದ ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ನಮ್ಮ ಸ್ವಾರ್ಥಕ್ಕಾಗಿ ಜೀವನ ನಡೆಸಲು, ಆರ್ಥಿಕವಾಗಿ ಸದೃಢವಾಗಲು, ಆಟವಾಡಲು, ನಮ್ಮ ಜೀವನದ ಒಡನಾಡಿಗಳಾಗಿ, ಮನರಂಜನೆ ಪಡೆಯಲು ಹಾಗು ಸಾಂಪ್ರದಾಯಿಕವಾಗಿ ಬಂದಿರುವ ಕಾರ್ಯಗಳನ್ನು ಮಾಡಲು ಬಳಸಿಕೊಳ್ಳುತ್ತಿದ್ದೇವೆ. ಇಷ್ಟೆಲ್ಲಾ ಆದರೂ ಅವುಗಳನ್ನು ಸರಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮಮೇಲೆಯೇ ಇದೆ ಅಲ್ಲವೇ, ಎಲ್ಲವೂ ತಿಳಿದಿದ್ದರು ಸ್ವಾರ್ಥಿಗಳಾದ ಕೆಲವರು ಮಾಡುತ್ತಿರುವುದಾದರು ಏನು?

ಅದುವೆ ಹಿಂಸೆ..!

ಇತ್ತೀಚೆಗಷ್ಟೇ ಕೇರಳ, ಹಿಮಾಚಲ್ ಪ್ರದೇಶ ಹಾಗೂ ಛತ್ತೀಸ್ ಗಡದಲ್ಲಿ ನಡೆದ ಅಮಾನವೀಯ ಕೃತ್ಯಗಳು ಮಾನವೀಯತೆಯನ್ನು ಮೀರಿವೆ. ಛತ್ತೀಸ್ಗಡ ರಾಜ್ಯದ ರಾಯಪುರದ ಲೀಲಾಂಬ ಹಳ್ಳಿಯಲ್ಲಿ ಒಂದು ಹಸುವಿನ ಬಾಯಿಯಲ್ಲಿ, ಹಿಮಾಚಲ್ ಪ್ರದೇಶದ ಬಿಲಾಸ್ಪುರ ಜಿಲ್ಲೆಯ ದಹಾದ್ ಗ್ರಾಮದಲ್ಲಿ ಕೂಡ ಒಂದು ಗರ್ಭಿಣಿ ಹಸುವಿನ ಬಾಯಿಯಲ್ಲಿ ಸ್ಪೋಟಕವನ್ನಿಟ್ಟು ಘಾಸಿಗೊಳಿಸಿದ್ದಾರೆ.

ಹಾಗೂ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆಹಾರ ಅರಸಿ ಬಂದ ಗರ್ಭಿಣಿ ಆನೆಯ ಬಾಯಿಗೆ ತಿನ್ನಲು ಸ್ಪೋಟಕ ತುಂಬಿದ ತೆಂಗಿನಕಾಯಿಯನ್ನಿಟ್ಟು ಹತ್ಯೆಗೈದಿರುವುದು ವಿಶ್ವವ್ಯಾಪಿ ಖಂಡನೆಗೆ ಗುರಿಯಾಗಿದೆ. ಅಷ್ಟೇ ಏಕೆ ನಮ್ಮ ಕಣ್ಣೆದುರಲ್ಲೇ ಎಷ್ಟೋ ಹಿಂಸೆಗಳು ಕಣ್ಮರೆಯಾಗಿ ಹೋಗುತ್ತಿವೆ. ಹೀಗೆಯೇ ಆಗುತ್ತಿದ್ದರೆ ನಮ್ಮ ದೇಶದ ಹೆಸರು ಹಾಗು ಪ್ರಾಣಿ ಸಂಕುಲ ಸಂಪೂರ್ಣವಾಗಿ ನಾಶವಾಗುವುದು ಖಚಿತ.

ಪ್ರಾಣಿಗಳು ಕೇವಲ ಆಟವಾಡುವ ವಸ್ತುವಲ್ಲ ಅವುಗಳಿಗೂ ನಮ್ಮಷ್ಟೇ ಜೀವಿಸುವ ಹಕ್ಕಿರುವುದು, ಜೀವಿಗಳಲ್ಲೆ ಹೆಚ್ಚು ಸ್ವಾರ್ಥಿಯಾಗಿರುವ ಹಾಗೂ ಪ್ರಾಣಿ ಸಂಕುಲದ ಸ್ಥಳವನ್ನು ಅಕ್ರಮಿಸುತ್ತಿರುವ ನಾವುಗಳು ಪ್ರಾಣಿಗಳ ಜೀವ ರಕ್ಷಣೆ ಮಾಡಬೇಕೆ ಹೊರತು ಅವುಗಳ ಜೀವಕ್ಕೆ ಕುತ್ತು ತರಬಾರದು. ಇಷ್ಟೆಲ್ಲಾ ಆದಮೇಲಾದರು ನಾವುಗಳು ಪ್ರಾಣಿಗಳ ರಕ್ಷಣೆಗೆ ಸಜ್ಜಾಗಬೇಕು, ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಅದರ ವಿವಿಧ ಕಾನೂನಿನ ಬಗ್ಗೆ ಅರಿವು ಮುಡಿಸಿಕೊಳ್ಳಲೇಬೇಕು.

ಮುಖ್ಯವಾಗಿರುವ ಪ್ರಾಣಿ ಕಲ್ಯಾಣ ಕಾನೂನುಗಳು ಹೀಗಿವೆ

  • Prevention of Cruelty to Animals Act – 1960,
  • Wild Life Protection Act – 1972,
  • Transport of Animal Rules – 1975, -Performing Animals Registration (Amendment) Rules 2001

ಈ ಕಾನೂನುಗಳ ಪ್ರಕಾರ ಈ ಕೆಳಕಂಡ ಅಮಾನವೀಯ ಕೃತ್ಯಗಳ ಮೇಲೆ ಕ್ರಮ ಜರುಗಿಸಬಹುದು..

ಪ್ರಾಣಿಗಳನ್ನು ಹೊಡಿಯೋದು, ಒದಿಯೋದು, ಧೀರ್ಘಕಾಲ ಸವಾರಿ ಮಾಡೋದು, ಹೆಚ್ಚುಭಾರ ಹೆರೋದು ಹಾಗು ಚಿತ್ರಹಿಂಸೆ ನೀಡೋದು ಮಾಡಿದರೆ PCA – 1960, ಸೆಕ್ಷನ್ 11 (1) (a) ಪ್ರಕಾರ ಕಾನೂನು ಕ್ರಮ ಜರುಗಿಸಬಹುದಾಗಿದೆ.

  • ವಯಸ್ಸಾಗಿರುವ, ಗಾಯವಾಗಿರುವ ಹಾಗೂ ಅನರ್ಹ ಪ್ರಾಣಿಯನ್ನು ಕೆಲಸಕ್ಕೆ ಬಳಸುವ ಹಾಗಿಲ್ಲ.
  • ಹಾನಿಕಾರಕ ಔಷಧವನ್ನು ಪ್ರಾಣಿಗಳ ಮೇಲೆ ಬಳಸುವ ಹಾಗಿಲ್ಲ.
  • ಅಸ್ವಸ್ಥತೆ ಹಾಗೂ ನೋವು ಮೂಡಿಸುವಹಾಗೆ ಪ್ರಾಣಿಯನ್ನು ವಾಹನದಲ್ಲಿ ಸಾಗಣೆ ಮಾಡುವ ಹಾಗಿಲ್ಲ.
  • ಕಾನೂನಿನ ಪ್ರಕಾರ ಶಿಫಾರಸ್ಸು ಮಾಡಿರುವ ಪಂಜರಕ್ಕಿಂತ ಸಣ್ಣ ಪಂಜರಗಳಲ್ಲಿ ಪ್ರಾಣಿಗಳನ್ನು ಇಡುವ ಹಾಗಿಲ್ಲ.
  • ಪ್ರಾಣಿಗಳನ್ನು ದೊಡ್ಡ ಸರಪಣಿ ಹಾಗು ಅಸಮಂಜಸ ಸಮಯದವರೆಗೆ ಕಟ್ಟಿ ಹಾಕುವ ಹಾಗಿಲ್ಲ.
  • ಶ್ವಾನವನ್ನು ದೀರ್ಘಕಾಲ ದೇಹಕ್ಕೆ ವ್ಯಾಯಾಮವಿಲ್ಲದೆ ಒಂದೇ ಸ್ಥಳದಲ್ಲಿ ಕಟ್ಟಿ ಹಾಕಿ ಬಂದಿಸುವ ಹಾಗಿಲ್ಲ.
  • ಪ್ರಾಣಿಗಳನ್ನು ಸಾಕುವವರು ಅವುಗಳಿಗೆ ಊಟ, ನೀರು ಹಾಗೂ ಆಶ್ರಯ ಕಡ್ಡಾಯವಾಗಿ ನೀಡಲೇಬೇಕಿದೆ
  • ಸಾಕುಪ್ರಾಣಿಗಳನ್ನು ಅವುಗಳ ವಯಸ್ಸಾದಮೇಲೆ ಅಥವಾ ಖಾಯಿಲೆಬಿದ್ದರೆ ಹಾಗೆಯೇ ತ್ಯಜಿಸುವ ಹಾಗಿಲ್ಲ.
  • ಪ್ರಾಣಿಗಳನ್ನು ಅಮಾನವೀಯವಾಗಿ ವಿರೂಪಗೊಳಿಸುವ ಅಥವಾ ಸಾಯಿಸುವಹಾಗಿಲ್ಲ.
  • ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿಯ ಜೊತೆಗೆ ಜಗಳವಾಡಲು ಪ್ರೇರೇಪಿಸುವಹಾಗಿಲ್ಲ.
  • ಒಂದು ಪ್ರಾಣಿಗೆ ಇನ್ನೊಂದು ಜೀವಂತ ಪ್ರಾಣಿಯನ್ನು ತಿನ್ನಲು ಕೊಡುವುದು ಅಥವಾ ತಿನ್ನಲು ಪ್ರೇರೇಪಿಸುವ ಹಾಗಿಲ್ಲ.
  • ಹೆಣ್ಣು ಪ್ರಾಣಿಗಳು ಹಾಲು ಜಾಸ್ತಿ ನೀಡುವ ಹಾಗೆ ಹಾನಿಕಾರಕ ಔಷಧ (Oxytocin) ನೀಡುವ ಹಾಗಿಲ್ಲ.
  • ಪ್ರಾಣಿಗಳಿಗೆ ತರಬೇತಿ ಹಾಗು ಪ್ರದರ್ಶನ ನೀಡಲು Animal Welfare Board of India ಮಂಡಳಿಯಿಂದ ನೋಂದಣಿ ಕಡ್ಡಾಯವಾಗಿ ಮಾಡಿಸಬೇಕು.
  • ಹುಲಿ, ಸಿಂಹ, ಕೋತಿ, ಚಿರತೆ, ಕರಡಿ, ಎತ್ತು ಹಾಗೂ ಇನ್ನಿತರ ಪ್ರಾಣಿಗಳನ್ನು ಬೀದಿಗಳಲ್ಲಿ ಪ್ರದರ್ಶಿಸಲು ಬಳಸುವ ಹಾಗಿಲ್ಲ.
  • ಪ್ರಾಣಿಗಳ ಜೊತೆಗೆ ದೈಹಿಕ ಸಂಪರ್ಕ ಅಥವಾ ಅನೈತಿಕ ಸಂಬಂಧ ಹೊಂದುವ ಹಾಗಿಲ್ಲ.

ಈ ರೀತಿ ಯಾವುದಾದರು ಆಪತ್ತಿನಲ್ಲಿರುವ ಪ್ರಾಣಿಗಳು ಕಂಡುಬಂದಲ್ಲಿ ಪುರಾವೆಯ (ಫೋಟೋ / ವಿಡಿಯೋ) ಸಮೇತ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು.

(ಡಾ.ಕಮಲೇಶ್ ಕುಮಾರ್ ಕೆ ಎಸ್
ಪಶುವೈದ್ಯಾಧಿಕಾರಿಗಳು
ಪಶುಚಿಕಿತ್ಸಾಲಯ, ಮತ್ತೂರು,
ಶಿವಮೊಗ್ಗ.
ಈ ಮೇಲ್ : kskamalesh93@gmail.com
ಫೋನ್ : 9164282969)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending