Connect with us

ದಿನದ ಸುದ್ದಿ

ಸ್ಟಾರ್ ಗಳ ಫೇವರೆಟ್ ಫೋಟೋಗ್ರಾಫರ್ : ಯಶಸ್ಸಿನ ಶಿಖರ ಏರಿದ ಉತ್ತರಕರ್ನಾಟಕದ ಪ್ರತಿಭೆ ‘ಪ್ರಶಾಂತ್ ಪಚ್ಚಿ’..!

Published

on

ಚಿತ್ರರಂಗದಲ್ಲಿ ಪ್ರಶಾಂತ್ ಪಚ್ಚಿ ಎಂದರೆ ತಕ್ಷಣವೆ ನೆನಪಾಗುವುದು ಇವರು ಕ್ಲಿಕ್ಕಿಸಿದ ಅದ್ಭುತ ಫೋಟೋಗಳು, ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ ಯಾರಿಗೂ ಕ್ಲಿಕ್ಕಿಸಲಾಗದ ಅದ್ಭುತ ಅಚ್ಚರಿಯ ಫೋಟೋಗಳು ಇವರ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇವರು ಒಬ್ಬ ಮಾಂತ್ರಿಕ ಛಾಯಾಗ್ರಾಹಕ ಎಂದರೆ ತಪ್ಪಲ್ಲ, ಇವರು ಕ್ಲಿಕ್ಕಿಸಿದ ಎಲ್ಲಾ ಫೋಟೋಗಳು ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತದೆ, ಸ್ಟಾರ್ ಗಳ ಫೇವರೆಟ್ ಫೋಟೋಗ್ರಾಫರ್ ಈ ನಮ್ಮ ಉತ್ತರ ಕರ್ನಾಟಕದ ಹೈದ.

ಈ ಫೋಟೋಗಳ ಜಾದೂಗಾರ ಮೂಲತಃ ಗದಗ ಜಿಲ್ಲೆಯ ಬಿಂಕದಕಟ್ಟಿ ಎಂಬ ಹಳ್ಳಿಯವರು, ಇವರ ಜನನ ಅಕ್ಟೋಬರ್ 11/ 1994, ಇವರ ತಂದೆ ಬಸವರಾಜ್ ಮಲಗವಿ, ತಾಯಿ ಲಕ್ಷ್ಮವ್ವ, ಇವರು ಮನೆಯ ಕಿರಿಯ ಪುತ್ರ, ಇವರ ಸಹೋದರರು ರಾಜು ಮತ್ತು ಚೇತನ್.

ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ಧಾರಿ ಹೆಗಲ ಮೇಲೆ ಹೊತ್ತು , ತಾನು ಎಸೆಸೆಲ್ಸಿ ಓದುವಾಗಲೇ ಕೆಲಸ ಮಾಡುವುದಕ್ಕೆ ಶುರುಮಾಡಿದ್ದರು, ಇವರ ಕುಟುಂಬ ಆರ್ಥಿಕವಾಗಿ ಉತ್ತಮವಾಗಿ ಇರಲಿಲ್ಲ, ಕಷ್ಟದ ನಡುವೆ ಜೇವನವನ್ನು ನೋಡಿ ಬೆಳದು ಇವರು ಜೀವನೋಪಾಯಕ್ಕಾಗಿ ಅಡುಗೆ ಕೆಲಸದವರಾಗಿ ಬೆಂಗಳೂರಿಗೆ ಬಂದರು.

ಪ್ರಶಾಂತ್ ಪಚ್ಚಿ ಫೋಟೋಗ್ರಫಿ

ಹೌದು 1 ಕ್ಯಾಟರಿಂಗ್ ಅಲ್ಲಿ ಅಡಿಗೆ ಕೆಲಸಕ್ಕೆ ಇವರು ಬೆಂಗಳೂರಿಗೆ ಬಂದರು, ಮೊದಮೊದಲು ಇಂತಹ ದೊಡ್ಡ ಬೆಂಗಳೂರಿನಲ್ಲಿ ಕೆಲಸ ಮಾಡಿ ಬೇಸತ್ತು ಪ್ರಯೋಜನವಿಲ್ಲವೆಂದು ಮರಳಿ ತಮ್ಮ ಊರಿಗೆ ವಾಪಸ್ಸಾದರು, ಊರಲ್ಲಿರುವ ತನ್ನ ತಂದೆಯ ಚಿಕ್ಕ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಅದರ ಜೊತೆಗೆ ಓದುತ್ತಾ ಜೀವನ ಕಳೆಯುತ್ತಿದ್ದರು, ಈಗಲೂ ಇವರ ತಂದೆ ಊರಿನಲ್ಲಿ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ.

ಪ್ರಶಾಂತ್ ಅವರು ವಿದ್ಯೆಯಲ್ಲಿ ಬುದ್ಧಿವಂತ ರಾಗಿರಲಿಲ್ಲ, ಪಿಯುಸಿಯಲ್ಲಿ ಫೇಲಾದರೂ, ಫೇಲಾದ ಬಳಿಕ ಜೀವನಕ್ಕೆ ಏನು ಮಾಡಬೇಕು ಎಂದು ತಿಳಿಯದ ಇವರು ತಮ್ಮ ಬಡ ಕುಟುಂಬವನ್ನು ನೋಡುತ್ತಾ ಜೀವನದಲ್ಲಿ ಏನಾದರೂ ಮಾಡಲೇಬೇಕು ಹೇಗಾದರೂ ಮಾಡಿ ಒಂದು ಒಳ್ಳೆ ಹೆಸರು ಮಾಡಲೇಬೇಕು ಎಲ್ಲಾದರೂ ಕೆಲಸ ಮಾಡುತ್ತಾ ಜೀವ ನಡೆಸಬೇಕು ಎಂದು ಛಲದಿಂದ ಡಿಸೈಡ್ ಮಾಡಿದರು.

ಇವರ ಸಹೋದರ ಬೆಂಗಳೂರಿನಲ್ಲಿ ಒಂದು ಸ್ಟುಡಿಯೋದಲ್ಲಿ ವಿಡಿಯೋ ಎಡಿಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು, ಆದರಿಂದ ಇವರ ಅಣ್ಣ ಇವರನ್ನು ತನ್ನ ಊರಿನಲ್ಲಿ ಇರುವ ಹೂವಿನ ಅಡಗಲಿ ಎಂಬ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿಸಿದರು, ಮೂರು ತಿಂಗಳುಗಳ ಕಾಲ ಸ್ಟುಡಿಯೋದಲ್ಲಿ ಪ್ರಶಾಂತ್ ಅವರು ಕಸಗುಡಿಸಿ, ಸ್ಟುಡಿಯೋ ಕ್ಲೀನ್ ಮಾಡುವ ಕೆಲಸವನ್ನು ಮಾಡುತ್ತಿದ್ದರು, ಕಂಪ್ಯೂಟರ್ ಅನ್ನು ಹೇಗೆ ಉಪಯೋಗಿಸಬೇಕು ಎನ್ನುವ ಅರಿವಿಲ್ಲದ ಇವರು ದಿನೇದಿನೇ ಬೇರೆಯವರನ್ನು ನೋಡಿ ಬೇರೆಯವರಿಂದ ಸ್ವಲ್ಪ ಸ್ವಲ್ಪ ಕಂಪ್ಯೂಟರ್ ಬಳಕೆಯನ್ನು ಕಲಿತುಕೊಂಡರು.

ಆ ಸ್ಟುಡಿಯೋ ಮಾಲೀಕರೆ ಇವರಿಗೆ ಆಶ್ರಯವನ್ನು ಸಹ ಕೊಟ್ಟಿದ್ದರು, ದಿನಕಳೆದಂತೆ ಕ್ಯಾಮರಾದ ಬಗ್ಗೆ ಮತ್ತು ಫೋಟೋ ತೆಗೆಯುವುದನ್ನು ಸಹ ಇವರು ಕಲಿತುಕೊಂಡರು ನಂತರ ಚಿಕ್ಕ-ಚಿಕ್ಕ ಫಂಕ್ಷನ್ ಗಳಿಗೆ ಛಾಯಾಗ್ರಾಹಕನಾಗಿ ಹೋಗುತ್ತಿದ್ದರು, ಹೀಗೆ ಕೆಲವು ತಿಂಗಳುಗಳ ಕಾಲ ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದರು, ನಂತರ ಇನ್ನು ಏನಾದರೂ ಮಾಡಬೇಕು ಎಂದು ಮತ್ತೆ 2015ರಲ್ಲಿ ಬೆಂಗಳೂರಿನ ಕಡೆಗೆ ತಮ್ಮ ಸಹೋದರನ ಸಹಾಯದಿಂದ ಬಂದರು.

ಬೆಂಗಳೂರಿಗೆ ಬಂದಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಬೇರೆ ಯಾರದೋ ರೂಮಿನಲ್ಲಿ ಆಶ್ರಯ ಪಡೆದು ಹಗಲು-ರಾತ್ರಿಯೆನ್ನದೆ ತಮ್ಮ ಕ್ಯಾಮರಾವನ್ನು ನಂಬಿ ಛಾಯಾಗ್ರಾಹಕ ವೃತ್ತಿಯನ್ನು ಮಾಡುತ್ತಿದ್ದರು, ಇವರ ಕೈಗೆ ಕ್ಯಾಮೆರಾ ಸಿಕ್ಕರೆ ಸಾಕು ಎಲ್ಲರ ಮನಸ್ಸನ್ನು ಸೆಳೆಯುವ ಫೋಟೋ ಇವರು ತೆಗೆಯುತ್ತಾರೆ,
ಹೀಗೆ ಕೆಲಸ ಮಾಡುತ್ತಾ ಮಾಡುತ್ತಾ ತಮ್ಮ ವೃತ್ತಿಯಲ್ಲಿ ಮದುವೆ ಸಮಾರಂಭಗಳಿಗೆ ಫೋಟೋ ತೆಗೆಯುವ ಜೊತೆಗೆ ಸೆಲೆಬ್ರಿಟಿಗಳ ಈವೆಂಟ್ಗಳು, ಮಾಡಲಿಂಗ್ ಗಳಿಗೆ ಫೋಟೋಗ್ರಾಫರ್ ಆಗಿ ಹೋಗಲು ಆರಂಭಿಸಿ ಯಶಸ್ಸನ್ನು ಕಂಡರು.

ಒಂದು ಚಿಕ್ಕ ಸ್ಟುಡಿಯೋ ಇಂದ ಆರಂಭಿಸಿದ ಇವರ ವೃತ್ತಿ ಇವತ್ತು ಎಲ್ಲಾ ಸೆಲೆಬ್ರಿಟಿಗಳ ಫೇವರೆಟ್ ಫೋಟೋಗ್ರಾಫರ್ ಆಗಿ ಬೆಳೆದಿದ್ದಾರೆ, ಸ್ಟಾರ್ಸ್ ಗಳಾದ ಶಿವಣ್ಣ, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಪ್ರಭಾಸ್, ತಮ್ಮನ್ನ, ಕರೀನಾ ಕಪೂರ್, ಇನ್ನು ಮುಂತಾದ ಸ್ಟಾರ್ಸ್ ಗಳ ಅದ್ಭುತವಾದ ಫೋಟೋವನ್ನು ಕ್ಲಿಕ್ಕಿಸಿದ್ದಾರೆ, ಇವರು ತೆಗೆದಿರುವ ಫೋಟೋವನ್ನು ಇಷ್ಟಪಟ್ಟು ಸ್ಟಾರ್ ಗಳೆ ಇವರ ಜೊತೆ ಸೆಲ್ಫಿ ಅನ್ನು ಕೂಡ ತೆಗೆದುಕೊಂಡಿದ್ದಾರೆ.

ಪ್ರಶಾಂತ್ ಪಚ್ಚಿ ಫೋಟೋಗ್ರಫಿ

ನಮ್ಮ ಪ್ರಶಾಂತ್ ಅವರು ಫೋಟೋಗ್ರಫಿಯನ್ನು ಎಷ್ಟರಮಟ್ಟಿಗೆ ಇವರು ಇಷ್ಟಪಡುತ್ತಾರೆ ಎಂದರೆ ಆಗಸ್ಟ್ 19 ವರ್ಲ್ಡ್ ಫೋಟೋಗ್ರಫಿ ದಿನದಂದೇ ತನ್ನ ಪ್ರೇಯಸಿ ಚೈತ್ರಾಳ ಜೊತೆ ವೈವಾಹಿಕ ಜೀವನವನ್ನು ಸಹ ಆರಂಭಿಸಿದ್ದಾರೆ, ಈಗ ಪುಟ್ಟ ಮಗುವಿನೊಂದಿಗೆ ಇವರ ಕುಟುಂಬ ಸಂತೋಷದಿಂದ ಕೂಡಿದೆ, ಕ್ಯಾಮೆರಾ, ಹೆಂಡತಿ ಮತ್ತು ಮಗು ನನ್ನ ಆಸ್ತಿ ಎಂದು ಹೇಳುವ ಪ್ರಶಾಂತ್ ಪಚ್ಚಿ ಅವರು ಯಶಸ್ಸನ್ನು ಕಂಡರು, ಸ್ಟಾರ್ಸ್ ಗಳ ಜೊತೆ ಕೆಲಸ ಮಾಡಿದರು, ಸೆಲೆಬ್ರಿಟಿಗಳ ಫೇವರೆಟ್ ಫೋಟೋಗ್ರಾಫರ್ ಎಂಬ ಬಿರುದು ಇದ್ದರು ಯಾವುದೇ ಅಹಂ ಇಲ್ಲದೆ ಬಹಳ ಸರಳ ಜೀವನವನ್ನು ನಡೆಸುತ್ತಿದ್ದಾರೆ.

ಮಡದಿ,ಮಗುವಿನೊಂದಿಗೆ ಪ್ರಶಾಂತ್ ಪಚ್ಚಿ

ಹೀಗೆ 8 ವರ್ಷಗಳ ಕಾಲ ಕಷ್ಟಪಟ್ಟು ಬೆಳೆದ ನಮ್ಮ ಛಾಯಾಗ್ರಹದ ಜಾದುಗಾರ ಪ್ರಶಾಂತ್ ಪಚ್ಚಿ ಇನ್ನು ಎತ್ತರಕ್ಕೆ ಬೆಳೆಯಲಿ ಇನ್ನು ಹೆಚ್ಚು ಮಟ್ಟದಲ್ಲಿ ಇವರ ಫೋಟೋಗಳು ವೈರಲ್ ಆಗಲಿ ಎಂದು ಆಶಿಸೋಣ.

ಯಾರಾದರೂ ಇವರನ್ನು ಮದುವೆ ಸಮಾರಂಭಗಳಿಗೆ ಅಥವಾ ಫೋಟೋಶೂಟ್ ಗಳಿಗೆ ಸಂಪರ್ಕಿಸಬೇಕು ಎಂದರೆ ಕೆಳಗಿರುವ ಇ-ಮೇಲ್ ಮತ್ತು ಮೊಬೈಲ್ ನಂಬರ್ ಗೆ ಸಂಪರ್ಕಿಸಿ:prashantpachi8951@gmail.com
9886242294

ದಿವ್ಯಶ್ರೀ. ವಿ
ಬೆಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ಸಭೆ | ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಕ್ರಮ

Published

on

ಸುದ್ದಿದಿನ,ದಾವಣಗೆರೆ :ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಪ್ರಮುಖವಾಗಿ ದಲಿತರಿಗೆ ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ದ ಕ್ರಮ, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು, ಈ ಸಭೆ ನಡೆದು 2 ವರ್ಷಗಳಾಗಿದ್ದು ನಾನು ಜಿಲ್ಲಾಧಿಕಾರಿಯಾಗಿ ಬಂದ ನಂತರ ಮೊದಲ ಸಭೆ
ಇದಾಗಿದೆ. ತಮ್ಮ ಕುಂದು ಕೊರತೆಗಳನ್ನು ಮುಕ್ತವಾಗಿ ತಿಳಿಸಿ. ನಾನೂ ಸೇರಿದಂತೆ ಅಧಿಕಾರಿಗಳ ತಂಡದಿಂದ ತಮ್ಮ ಮನವಿಗಳನ್ನು ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ವರ್ಷದಲ್ಲಿ ಸುಮಾರು 349 ಜಾತಿ ನಿಂದನೆ ಕೇಸ್‍ ದಾಖಲು : ಎ ಎಸ್ಪಿ ರಾಜೀವ್

Published

on

ಸುದ್ದಿದಿನ,ದಾವಣಗೆರೆ: ನಿಮ್ಮ ಕುಂದು ಕೊರತೆಗಳು ನಮಗೆ ಅರ್ಥವಾಗಿದೆ. ನಮ್ಮ ಇಲಾಖೆಯು 10 ವರ್ಷದಲ್ಲಿ ಸುಮಾರು 349 ಜಾತಿ ನಿಂದನೆ ಕೇಸ್‍ಗಳನ್ನು ದಾಖಲಿಸಿಕೊಂಡಿದ್ದು, ಇಲ್ಲಿ 7 ಜನರಿಗೆ ಮಾತ್ರ ಪರಿಹಾರ ಬರಬೇಕು. ಜೊತೆಗೆ 99 ಕೇಸ್‍ಗಳು ಬಾಕಿ ಇದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ರಾಜೀವ್ ಮಾಹಿತಿ ನೀಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅವರು ಮಾಹಿತಿ ಹಂಚಿಕೊಂಡರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪ.ಜಾತಿ – ಪ.ಪಂಗಡದವರ ಮೇಲಿನ ದೌರ್ಜನ್ಯ ಖಂಡಿಸಿದರೆ, ನನಗೆ ಚಪ್ಪಲಿ ಹಾರ ಹಾಕುತ್ತಾರೆ :‌ ಜಿ.ಪಂ ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ನಾನೊಬ್ಬ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ. ನನಗೆ ನಗರದ ಪ್ರಮುಖ ವೃತ್ತದಲ್ಲಿ ಚಪ್ಪಲಿ ಹಾರ ಹಾಕುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ನೋವಿನಿಂದ ನುಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು,

ದೂರು ನೀಡಿ ಸಂಬಂಧಿಸಿದವರನ್ನು ಬಂಧಿಸಲು ಕೋರಿದರೆ, ಪೊಲೀಸರು ಆರೋಪಿಗಳು ಕಣ್ಮರೆಯಾಗಿದ್ದಾರೆ ಎಂದು ಸಬೂಬು ಹೇಳುತ್ತಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಮುಖ್ಯ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಹೇಗೆ ಸಾಧ್ಯ? ಇದು ಇಲಾಖೆಯ ವೈಫಲ್ಯವಲ್ಲವೇ? ನನ್ನಂತಹವನಿಗೇ ಹಾಗೆ ಆದರೆ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 500 ರಿಂದ 600 ಕ್ರಷರ್ ಮಾಲೀಕರಿದ್ದಾರೆ. ಇದರಲ್ಲಿ ಎಸ್‍ಸಿ/ಎಸ್‍ಟಿ ಜನಾಂಗದವರು ಎಷ್ಟು ಜನರಿದ್ದಾರೆ? ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಜನಾಂಗದವರು ಇರುವ ಪ್ರದೇಶಗಳಲ್ಲಿ ಎಷ್ಟು ಕಾಮಗಾರಿಗಳಾಗಿವೆ? ಈ ಜಿಲ್ಲೆಯಲ್ಲಿ ಸಮಾನತೆ ಎಂಬುದು ಏನಾದರೂ ಇದ್ದರೆ ಅದು ಕರೊನಾದಿಂದ ಸತ್ತವರನ್ನು ಮಣ್ಣು ಮಾಡುವಲ್ಲಿ ಮಾತ್ರ ಇದೆ. ಬೇರೆಲ್ಲಿಯೂ ಇಲ್ಲ.

ಕಳೆದ 10 ವರ್ಷಗಳಲ್ಲಿ ಈ ಸಮುದಾಯದವರ ಮೇಲೆ ಎಷ್ಟು ದೌರ್ಜನ್ಯದ ಕೇಸ್‍ಗಳಾಗಿವೆ? ಎಷ್ಟರಲ್ಲಿ ಶಿಕ್ಷೆ ಆಗಿದೆ. ಎಷ್ಟು ‘ಬಿ’ ರಿಪೋರ್ಟ್ ಆಗಿದೆ ಮಾಹಿತಿ ಒದಗಿಸಿ. ಹಾಗೂ ಈ ಹಿಂದಿನ ಸಭೆಯ ಅನುಪಾಲನೆ ವರದಿಯೇ ಇಲ್ಲದೇ ಮುಂದಿನ ಸಭೆ ನಡೆಸುವುದು ಹೇಗೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending