Connect with us

ದಿನದ ಸುದ್ದಿ

ಇವು ಮಾಧ್ಯಮ ಅಲ್ಲ ‘ಮೋದಿನಾಮ’..!

Published

on

  • ಆಲ್ಮೆಡಾ ಗ್ಲಾಡ್ ಸನ್

Oxford ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹಾಗೂ ಫಾರ್ಮಾ ಕ್ಷೇತ್ರದ ದೈತ್ಯ AstraZeneca ಒಟ್ಟಾಗಿ ನಿರ್ಮಿಸಿರುವ ಕೋವಿಡ್ ಲಸಿಕೆ ಯಶಸ್ವಿಯಾಗಿ ಸ್ಟೇಜ್-2 ಮಾನವ ಪ್ರಯೋಗ ಮುಗಿಸಿ, ಕೊನೆಯ, ಅಂದರೆ ಸ್ಟೇಜ್-3 ಮಾನವ ಪ್ರಯೋಗಕ್ಕೆ ಅಣಿಯಾಗಿದೆ.

ಇದು ಸಂತಸದ ವಿಷಯವೋ, ಸಾಧನೆಯೋ, ಪೂರ್ಣ ಯಶಸ್ಸೋ ಅದು ಮುಂದಿನ ಪ್ರಶ್ನೆ. ಆದರೆ ಈ ಲಸಿಕೆಯ ಸುದ್ದಿ ಹೊರಬಿದ್ದಾಗಾಗಲಿ, ಈವಾಗ ಸ್ಟೇಜ್-2 ಮುಗಿಸಿದ ನಂತರವಾಗಲಿ, ಅದರ ಬಗ್ಗೆ ಮಾಧ್ಯಮಗಳು ವರದಿ ಮಾಡುವಾಗ ಎಲ್ಲೂ ಬ್ರಿಟನ್ನಿನ ಪ್ರಧಾನಿ ಬೋರಿಸ್ ಜಾನ್ಸನ್ ಬಗ್ಗೆ ಮಾತೇ ಇಲ್ಲ. ಲಸಿಕೆ ಪಕ್ಕದಲ್ಲಿ ಬೋರಿಸ್ ಜಾನ್ಸನ್ ಫೊಟೋ ಹಾಕಿ, ಪೂಜೆ ನಡೆಯುತ್ತಿಲ್ಲ.

ಕೊರೋನಾಕ್ಕೆ ಜಾನ್ಸನ್ ಮದ್ದು, ಕೋವಿಡ್‍ಗೆ ಜಾನ್ಸನ್ ಬಾಣ, ಕೊರೋನಾ ಷಡ್ಯಂತ್ರವನ್ನು ವಿಫಲಗೊಳಿಸಿದ ಜಾನ್ಸನ್, ಕೋವಿಡ್ ವಿರುದ್ಧ ಹೋರಾಟಕ್ಕೆ ವಿಶ್ವಕ್ಕೆ ಜಾನ್ಸನ್ನೇ ನಾಯಕ, ಜಾನ್ಸನ್ ಎದುರು ಮಂಡಿಯೂರಿದ ಕೋವಿಡ್, ಜಾನ್ಸನ್ ಹೊಡೆತಕ್ಕೆ ಹೈರಾಣಾದ ಕೊರೋನಾ ಎಂದೆಲ್ಲಾ ಶೀರ್ಷಿಕೆ ಕೊಟ್ಟು ಬ್ರಿಟನ್ನಿನ ಯಾವುದೇ ಮಾಧ್ಯಮ ವರದಿ ಮಾಡುತ್ತಿಲ್ಲ. ಲಸಿಕೆಯ ಅವಿಷ್ಕಾರ Oxford ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹಾಗೂ AstraZeneca ದಿಂದ ನಡೆದದ್ದು ಎಂದಷ್ಟೇ ವರದಿ ಮಾಡುತ್ತಿದ್ದಾರೆ.

ಅದೇ ನಮ್ಮಲ್ಲಾದರೇ? ಕಳೆದ ಎರಡ್ಮೂರು ತಿಂಗಳಿನಿಂದ ನಮ್ಮ ಟಿವಿ ಚಾನಲ್‍ಗಳಲ್ಲಿ ಲಸಿಕೆ, ಕೊರೋನಾಕ್ಕೆ ಜೌಷಧಿಯ ಹೆಸರು ಬಂದಾಗಲೆಲ್ಲಾ, ಅದರ ಸುದ್ದಿ ಹೇಗೆ ಹೊರಬಿದ್ದಿದೆ ನೋಡಿ. ಲಸಿಕೆ ಯಾರೇ ಕಂಡುಹಿಡಿಯಲಿ, ಫೊಟೋ ಮಾತ್ರ ಪ್ರಧಾನಿ ನರೇಂದ್ರ ಮೋದಿಯದ್ದೇ. ಅದು ರಾಮ್‍ದೇವ್ ಆಗಲಿ, ಕಜೆಯಾಗಲಿ, ಕೊವಾಕ್ಸೀನ್ ಆಗಲಿ ಇನ್ಯಾವುದೇ ‘ಅವಿಷ್ಕಾರದ’ ಸುದ್ದಿಯಾಗಲಿ. ಮೊದಲು ಫೊಟೋ ಮೋದಿಯದ್ದು.

ನಂತರ ಮೂರು-ಮೂರು ಸಲ ರಿಪೀಟ್ ಆಗುವ, ರಣಭಯಂಕರ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ಜೊತೆಗೆ, ಆಂಕರ್ ಒಬ್ಬರು ಕೈಯಲ್ಲಿ ಮೋದಿ ಭಾವಚಿತ್ರ ಅಂಟಿಸಿದ ಸಿರಿಂಜ್ ಹಿಡಿದುಕೊಂಡು ಎಂಥಾ ಪ್ರೆಸೆಂಟೇಷನ್ …’ಕೊನೆಗೂ ಮೋದಿಯೆದುರು ಮೊಣಕಾಲೂರಿದ ವಿಶ್ವ’, ‘ಮೋದಿ ಬತ್ತಳಿಕೆಯಲ್ಲಿ ಕೋವಿಡ್ ಅಸ್ತ್ರ’ , ‘ಮೋದಿ ಮದ್ದಿಗೆ ಹೆದರು ಓಡಿದ ಕೊರೋನಾ’, ‘ಮೋದಿ ಹೊಡೆತಕ್ಕೆ ಹೈರಾಣಾದ ಕೋವಿಡ್, ‘ಮೋದಿ ಮುಂದೆ, ಕೊರೋನಾ ಹಿಂದೆ’, ‘ಕೊರೋನಾಕ್ಕೆ ಮೋದಿಯ ರಾಮಬಾಣ’, ‘ಮೋದಿ ಘರ್ಜನೆಗೆ ಸೋತು ಸುಣ್ಣವಾದ ಕೊರೋನಾ’,

ಅಬ್ಬಾಬ್ಬಾ! ಇನ್ನು ಅಭಿವೃದ್ಧಿ ಹಂತದಲ್ಲಿರುವ ನಮ್ಮ ಲಸಿಕೆಗಳಲ್ಲಿ ಯಾವುದಾದರೊಂದು ಕೊರೋನಾಕ್ಕೆ ಮದ್ದು ಎಂದು ಸಾಬೀತಾದರೆ ಈ ವರುಷದ Nobel Prize for Medicine ನಮ್ಮ ಪ್ರಧಾನಿ ಮೋದಿಯವರಿಗೇ ಕೊಡಬೇಕೆಂದು ನಮ್ಮ ಮಾಧ್ಯಮಗಳು ಶಿಫಾರಸ್ಸು ಮಾಡೋದಂತೂ ಗ್ಯಾರಂಟಿ.

ನಮ್ಮ ಮಾಧ್ಯಮಗಳು ತಲುಪಿರುವ ಮಟ್ಟ ಇದು. ಆಡಳಿತ ವರ್ಗ ಹಾಗೂ ಪಕ್ಷದ ಬೂಟು ನೆಕ್ಕುವುದರಲ್ಲಿ, ಅವರೆಸೆದ ಮೂಳೆ ಜಗಿಯುವುದರಲ್ಲಿ, ಅವರ ಪರವಾಗಿ ಓಲಗ, ಪುಂಗಿ ಊದುವುದರಲ್ಲಿ, ಅವರು ಅಂಡುತೊಳೆದ ನೀರಿನಲ್ಲಿ ಸ್ನಾನ ಮಾಡಲು ಸ್ಪರ್ಧಿಸುವುದರಲ್ಲಿ ನಮ್ಮ ಮಾಧ್ಯಮಗಳೆದುರು ಈ ಒರ್ಗ್ಯಾನಿಕ್ ಹೆಂಗ್ ಪುಂಗ್ ಲಿ, ಹೆಂಗ್ ಹಾರ್ಸ್ ಲಿ, ಹೆಂಗ್ ಮಾಡ್ ಲಿ, ಹೆಂಗ್ ಕಿರ್ಚ್ ಲಿ ಏನೇನೂ ಅಲ್ಲ. ಇವರನ್ನು ಬೆಳೆಸಿದ್ದೇ ನಮ್ಮ ಮಾಧ್ಯಮವೆಂಬ ತೊಡೆಗುನ್ನಿಗಳು. ಇವು ಮಾಧ್ಯಮ ಅಲ್ಲ ಮೋದಿನಾಮ…Media ಅಲ್ಲ Modia..!

ಕೃಪೆ : ಫೇಸ್ ಬುಕ್ ಬರಹ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಯುಪಿಯಲ್ಲಿ ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ-ಕೊಲೆ : ಇಬ್ಬರ ಬಂಧನ

Published

on

ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಇನ್ನೊಂದು ಜಿಲ್ಲೆಯಾದ ಬಲರಾಮ್‍ಪುರದಲ್ಲಿ ಮತ್ತೋರ್ವ ದಲಿತ ಯುವತಿ ಅತ್ಯಾಚಾರಕ್ಕೊಳಗಾಗಿ, ತೀವೃ ಗಾಯಗಳೊಂದಿಗೆ ಮೃತಪಟ್ಟಿದ್ದಾಳೆ.

ಬಲರಾಮ್ ಪುರದ ಗ್ರೈಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಶಾಹೀದ್ ಮತ್ತು ಸಾಹಿಲ್ ಎಂಬ ಯುವಕರನ್ನು ಪೋಲೀಸರು ಬಂಧಿಸಿದ್ದಾರೆ.

ಘಟನೆ ವಿವರ

22 ವರುಷದ ಈಕೆ ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ (ಕೆಲ ವರದಿಗಳ ಪ್ರಕಾರ ಆಕೆ ಎರಡನೆಯ ವರುಷದ ಪದವಿ ಕಾಲೇಜಿನ ಅಡ್ಮಿಷನ್‍‍ಗಾಗಿ ಕಾಲೇಜಿಗೆ ಹೋಗಿ ಮನೆಗೆ ವಾಪಾಸ್ಸು ಬರುತ್ತಿದ್ದಳು) ಆಕೆಗೆ ಪರಿಚಯದ ಶಾಹಿದ್ ಹಾಗೂ ಸಾಹಿಲ್ ಎಂಬ ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.

ಆಕೆ ತೀವೃ ರಕ್ತಸ್ರಾವ ಹಾಗೂ ಯುವಕರ ಮೃಗೀಯ ವರ್ತನೆಯಿಂದ ನಡೆಯಲೂ ಆಗದ ಸ್ಥಿತಿಯಲ್ಲಿ ಇದ್ದುದ್ದನ್ನು ಕಂಡು ಹೆದರಿದ ಅತ್ಯಾಚಾರಿಗಳು, ಅದೇ ಯುವಕರು ಆಕೆಯನ್ನು ಆವರ ಪರಿಚಯದ ವೈದ್ಯರ ಬಳಿಗೆ ಕೊಂಡೊಯ್ದು, ಗ್ಲೂಕೋಸ್ ಡ್ರಿಪ್ಸ್ ಹಾಕಿ, ರಿಕ್ಷಾದಲ್ಲಿ ಕುಳ್ಳಿರಿಸಿ ಮನೆಗೆ ಕಳುಹಿಸಿದ್ದಾರೆ.

ಅಷ್ಟರವರೆಗೆ ಆಕೆಯ ಹುಡುಕಿ ಕಂಗಾಲಾಗಿದ್ದ ಹೆತ್ತವರು, ಆಕೆಯನ್ನು ತಂದ ರಿಕ್ಷಾ ಮನೆ ಬಳಿ ಬರುತ್ತಿದ್ದಂತೆ, ಆಕೆಯ ಪರಿಸ್ಥಿತಿಯನ್ನು ಕಂಡು, ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಪ್ರತಿಕ್ರಯಿಸದೆ, ಆಕೆ ಮೃತಪಟ್ಟಿದ್ದಾಳೆ. ಹೆತ್ತವರನ್ನು ನೋಡುತ್ತಲೇ “ಅಮ್ಮಾ ನನಗೆ ತೀವೃ ನೋವಾಗುತ್ತಿದೆ. ನಾನು ಬದುಕುಳಿಯಲಾರೆ,” ಎಂದು ಆಕೆ ನೋವಿನಿಂದ ನರಳುತ್ತಿದ್ದಳೆಂದು ಆಕೆಯ ಹೆತ್ತವರು ಹೇಳಿದ್ದಾರೆ. ಅವರ ಪ್ರಕಾರ ಅತ್ಯಾಚಾರಿಗಳು ಆಕೆಯ ಕೈಗಳನ್ನು ಮುರಿದಿದ್ದರು ಹಾಗೂ ಆಕೆಯ ಬೆನ್ನುಮೂಳೆಗೂ ಪೆಟ್ಟಾಗಿತ್ತು.‌ ಈ ಸಂಬಂಧ ಅತ್ಯಾಚಾರಿಗಳ ಮೇಲೆ ಕುಟುಂಬದವರು ಅತ್ಯಾಚಾರ-ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಪೋಲಿಸ್ ಹೇಳಿಕೆ

ಬಲರಾಮ್ ಪೋಲೀಸರು ಮತ್ತಿತರ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಕೈ-ಕಾಲು ಮುರಿದಿರುವುದು ದೃಢಪಟ್ಟಿಲ್ಲವೆಂದು ಟ್ವೀಟ್ ಮಾಡುವುದರ ಮೂಲಕ ಆರೋಪವನ್ನು ಅಲ್ಲಗಳೆದಿದ್ದಾರೆ.

ದೇವಿಪಟ್ನ ವಲಯದ ಐಜಿಪಿ ರಾಕೇಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ” ಯುವತಿಗೆ ಅತಿಯಾದ ರಕ್ತಸ್ರಾವ ಆದಕಾರಣ ಆಕೆ ಮೃತಪಟ್ಟಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ಆಗಿದೆಯೋ,ಇಲ್ಲವೋ ಎಂಬುದು ವೈದ್ಯರು ಪರೀಕ್ಷೆಯ ವರದಿ ಬಂದ ಮೇಲೆ ತಿಳಿಸಲಾಗುವುದು” ಎಂದು ಹೇಳಿಕೆ ನೀಡಿದ್ದಾರೆ‌.

https://twitter.com/priyankagandhi/status/1311507851831996416?s=20

https://m.timesofindia.com/city/lucknow/another-dalit-woman-raped-killed-in-up-2-arrested/amp_articleshow/78418057.cms

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಮ್ಮ ನ್ಯಾಯಾಲಯಗಳು ಇತರೆ ಚಿಲ್ಲರೆ ಕೇಸುಗಳಲ್ಲಿ ಎಷ್ಟು ಜಬರ್ದಸ್ತ್ ಆಗಿರುತ್ತವೆ ನೋಡಿ..!

Published

on

  • ಪಂಜು‌ ಗಂಗ್ಗೊಳ್ಳಿ, ವ್ಯಂಗ್ಯ ಚಿತ್ರಕಾರರು

ಮುಂಬೈಯ ಕುರ್ಲಾದ 19 ವರ್ಷ ಪ್ರಾಯದ ಆಲೀಂ ಪಟೇಲ್ ಮಾಹೀಂ ಎಂಬಲ್ಲಿ ಕಾರು ಸೀಟುಗಳನ್ನು ಹೊಲಿಯುವ ಕೆಲಸ ಮಾಡಿ ಅವನ ಕುಟುಂಬದ ಹೊಟ್ಟೆ ಪಾಡು ನಡೆಯುತ್ತಿತ್ತು. ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಹೇರಲ್ಪಟ್ಟು ಬಸ್ಸು, ಲೋಕಲ್ ಟ್ರೈನ್ ಗಳು ಬಂದಾಗಿ ಲಕ್ಷಾಂತರ ಕೆಲಸಗಾರಂತೆ ಇವನೂ ಮನೆಯಲ್ಲೇ ಕುಳಿತುಕೊಳ್ಳಬೇಕಾಯಿತು.

ಜೂನ್ ನಲ್ಲಿ ಲಾಕ್ ಡೌನ್ ಸಡಿಲಗೊಂಡು ಅಗತ್ಯ ಸೇವೆಗಳನ್ನು ನಿರ್ವಹಿಸುವವರಿಗಾಗಿ ಲೋಕಲ್ ಟ್ರೈನ್ ಗಳನ್ನು ಶುರು ಮಾಡಿದಾಗ ಜೀವನ ನಿರ್ವಹಣೆಗೆ ಬೇರೆ ಮಾರ್ಗವಿಲ್ಲದ ಆಲೀಂ ಪಟೇಲ್ ಒಂದು ನಕಲಿ ಪಾಸನ್ನು ಮಾಡಿಕೊಂಡು ಲೋಕಲ್ ಟ್ರೈನಲ್ಲಿ ಮಾಹೀಂನ ತನ್ನ ಕೆಲಸಕ್ಕೆ ಹೋಗಿ ಬಂದು ಮಾಡಲು ಶುರು ಮಾಡಿದ.

ಆದರೆ, ಆಗಸ್ಟ್ 20 ರಂದು ಒಬ್ಬ ಟಿಸಿ ಇವನನ್ನು ಹಿಡಿದು ಚೀಟಿಂಗ್ ಕೇಸ್ ಹಾಕಿ ಮ್ಯಾಜಿಸ್ಟ್ರೇಟ್ ಕೋರ್ಟು ಇವನಿಗೆ ಜಾಮೀನು ನೀಡದೆ ಜೈಲು ಸೇರ ಬೇಕಾಯಿತು. ಆದಿತ್ಯ ಮೊಕಾಶಿ ಎಂಬ ಇವನ ಲಾಯರ್ ಸೆಸ್ಸನ್ ಕೋರ್ಟಲ್ಲಿ ಅಪೀಲ್ ಹಾಕಿ ಆಲೀಂ ಪಟೇಲ್ ಹೊಟ್ಟೆ ಪಾಡು ನಡೆಸಲು ಬೇರೇನೂ ದಾರಿಯಿಲ್ಲದೆ ಹೀಗೆ ಮಾಡಿದನೇ ವಿನಃ ಯಾರನ್ನೂ ವಂಚಿಸಲು ಅಲ್ಲ ಎಂದು ಕೇಳಿಕೊಂಡಾಗ ಕೋರ್ಟು 15000 ರುಪಾಯಿ ಬಾಂಡ್ ಮತ್ತು ವೈಯಕ್ತಿಕ ಶ್ಯೂರಿಟಿ ಪಡೆದು ಜಾಮೀನು ನೀಡಿತು, 40 ದಿನಗಳ ನಂತರ!

ಇದನ್ನೂ ಓದಿ‌ 

ಕೊರೋನಾ ಪಾಸಿಟಿವ್ ವರದಿ ಕೊಟ್ಟ ಲ್ಯಾಬ್ ಟೆಕ್ನೀಶಿಯನ್ ಮೇಲೆ ಸೋಂಕಿತನಿಂದ ಹಲ್ಲೆ https://www.suddidina.com/daily-news/coronavirus-and-hasana

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊರೋನಾ ಪಾಸಿಟಿವ್ ವರದಿ ಕೊಟ್ಟ ಲ್ಯಾಬ್ ಟೆಕ್ನೀಶಿಯನ್ ಮೇಲೆ ಸೋಂಕಿತನಿಂದ ಹಲ್ಲೆ

Published

on

ಸುದ್ದಿದಿನ, ಹಾಸನ : ಜಿಲ್ಲೆಯ, ಅರಸೀಕೆರೆ ತಾಲೂಕಿನ ದೊಡ್ಡ ಮೇಟಿಕುರ್ಕಿ ಗ್ರಾಮದಲ್ಲಿ ಸೆಪ್ಟೆಂಬರ್ 17 ನೇ ತಾರೀಖಿನಂದು ಗ್ರಾಮದ ಮಂಜುನಾಥ್‍‌ ಎಂಬುವವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ, ಕೊರೋನಾ ವಾರಿಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊರೋನಾ ಪಾಸಿಟಿವ್ ಬಂದಿದ್ದ ವ್ಯಕ್ತಿ, ಸ್ಲ್ಯಾಬ್ ಟೆಸ್ಟ್ ಮಾಡಿದ್ದ ಲ್ಯಾಬ್ ಟೆಕ್ನೀಷಿಯನ್ ಮೇಲೆ ಮಂಜುನಾಥ್ ಹಲ್ಲೆ ನಡಿಸಿದ್ದಾನೆ. ಕೊರೋನಾ ನನಗೆ ಬಂದಿಲ್ಲ, ಹಣವನ್ನು ದೋಚಲು ಕೊರೋನಾ ಪಾಸಿಟಿವ್ ಎಂದು ವರದಿ ಕೊಟ್ಟಿದ್ದೀಯಾ ಎಂದು ಗಂಭೀರವಾಗಿ ಆತನನ್ನು ಥಳಿಸಿದ್ದಾನೆ. ಹಲ್ಲೆ ನಡೆಸಿರು ಕೊರೋನಾ ಸೋಂಕಿತನ ಮೇಲೆ ಕೇಸ್ ದಾಖಲಾಗಿದೆ.

ಇದನ್ನೂ ಓದಿ

ಸಿಎಂ ಮಗನ ಭ್ರಷ್ಟಾಚಾರದ ವೃತ್ತಾಂತ : ಪವರ್ ಟಿವಿ ಬಂದ್ ಹಿಂದಿನ ಒಳ ರಾಜಕೀಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending