Connect with us

ದಿನದ ಸುದ್ದಿ

ಲೈಂಗಿಕ ದೌರ್ಜನ್ಯ ಪ್ರಕರಣ: ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌

Published

on

ಸುದ್ದಿದಿನ ಡೆಸ್ಕ್: ದೇಶದಲ್ಲಿ ನಡೆದಿರುವ ಮಹಿಳೆಯರು ಮತ್ತು ಮಕ್ಕಳು ಲೈಂಗಿಕ ದೌರ್ಜನ್ಯ ಪ್ರಕರಣಗಳ ಇತ್ಯರ್ಥ ಮಾಡಲು 1,000 (ಒಂದು ಸಾವಿರ)ಕ್ಕೂ ಅಧಿಕ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳ ಅವಶ್ಯಕತೆ ಇದೆ ಎಂದು ಕೇಂದ್ರ ಕಾನೂನು ಸಚಿವಾಲಯ ಅಂದಾಜು ಮಾಡಿದಿಯಂತೆ.

ಅತ್ಯಾಚಾರ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವುದಕ್ಕಾಗಿ ಕೋರ್ಟ್‌ಗಳಿಗೆ ಅಗತ್ಯ ಸೌಲಭ್ಯ ನೀಡಲು ಬೃಹತ್ ಯೋಜನೆ ಜಾರಿ ಚಿಂತನೆ ನಡೆಸಿದೆ. ವಿಶೇಷ ನ್ಯಾಯಾಲಯಗಳ ರಚನೆಗೆ ಕಾನೂನು ಸಚಿವಾಲಯ ಅಧೀನದ ನ್ಯಾಯಾಂಗ ಇಲಾಖೆಯು 767.25 ಕೋಟಿಗಳ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಿದೆ. ಇದರಲ್ಲಿ 474 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಗೃಹ ಸಚಿವಾಲಯಕ್ಕೆ ತಿಳಿಸಿದೆ.

ಅತ್ಯಾಚಾರ ಮತ್ತು ಪೋಸ್ಕೋ (ಪ್ರೊಟೆಕ್ಷನ್‌ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಸ್ಯುಲ್ ಅಫೆನ್ಸಸ್) ಕಾಯ್ದೆಯಡಿ ದಾಖಲಾದ ಪ್ರಕರಣಗಳ ಇತ್ಯರ್ಥಕ್ಕೆ ಅಂದಾಜು 1,023 ಎಫ್.ಟಿ.ಎಸ್.ಸಿ.(ಫಾಸ್ಟ್ ಟ್ಯ್ರಾಕ್ ಸ್ಪೆಷಲ್ ಕೋರ್ಟ್) ಅಗತ್ಯವಿದೆ. ಇವುಗಳ ರಚನೆಗೆ ಅಗತ್ಯವಿರುವ 767.25 ಕೋಟಿ ರೂ.ಗಳಲ್ಲಿ 464 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ತನ್ನ ಪಾಲಿನ (೬೧) ಅನುದಾನದಡಿ 464 ಕೋಟಿ ರೂ‌ ನೀಡಲಿದೆ. ಇದಕ್ಕೆ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ.

12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರಿಗೆ ಮರಣ ದಂಡನೆ ವಿಧಿಸುವಂತ ಆದೇಶವನ್ನು ಇತ್ತೀಚೆಗೆ ಜಾರಿಗೊಳಿಸಿದ ಹೊಸ ಯೋಜನೆಯಲ್ಲಿ ಅಡಕವಾಗಿದೆ. ಐಪಿಸಿ, ಸಿಆರ್ಪಿಸಿ,‌ ಎವಿಡರನ್ಸ್ ಆ್ಯಕ್ಟ್ ಮತ್ತು ಪೋಸ್ಕೋ ಕಾಯ್ದೆಗಳಿಗೆ ಇತ್ತೀಚೆಗೆ ತಿದ್ದುಪಡಿ ತರಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಅಗತ್ಯವಿರುವ ಕೋರ್ಟ್‌ಗಳ ಸಂಖ್ಯೆಯನ್ನು ನಿಗದಿ ಮಾಡಿ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಿದ್ದು, ಇದಕ್ಕಾಗಿ ಉತ್ತಮ ಗುಣಮಟ್ಟದ ಇನ್ಫ್ರಾಸ್ಟ್ರಕ್ಚರ್, ಕಾನೂನು ಆಡಳಿತ, ಕೆಳ ನ್ಯಾಯಾಲಯಗಳಿಗೆ ಅಗತ್ಯವಿರುವ ನ್ಯಾಯಾಂಗ ಅಧಿಕಾರಿಗಳ ಸಂಖ್ಯೆ, ಪಬ್ಲಿಕ್ ಪ್ರಾಸಿಕ್ಯುಟರ್.ಗಳ ಹೆಚ್ಚುವರಿ ಹುದ್ದೆಗಳು, ದಕ್ಷ ತನಿಖಾಧಿಕಾರಿಗಳು ಮತ್ತು ಫೋರೆನ್ಸಿಕ್ ಕಿಟ್ ಒದಗಿಸುವ ಅಂಶವನ್ನು ಯೋಜನೆ ಒಳಗೊಂಡಿದೆ.

ಮಹಿಳೆ ಮತ್ತು ಎಸ್ಸಿ, ಎಸ್ಟಿ, ಹಿರಿಯ ನಾಗರಿಕರು, ನಿರ್ಗತಿಕರಿಗೆ ಸಂಬಂಧಿಸಿದ ಪ್ರಕರಣಗಳ ಇತ್ಯರ್ಥಕ್ಕಾಗಿಯೇ ದೇಶದಲ್ಲಿ ಸರಿಸುಮಾರು 524 ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಸಂಸತ್ ಸಭೆಯಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಲಿಖಿತ ಪ್ರತಿಕ್ರಿಯೆ ನೀಡಿದ್ದರು. ಮಹಾರಾಷ್ಟ್ರದಲ್ಲಿ 100, ಉತ್ತರ ಪ್ರದೇಶದಲ್ಲಿ 83, ತಮಿಳುನಾಡಿನಲ್ಲಿ 39, ಆಂಧ್ರಪ್ರದೇಶದಲ್ಲಿ 38 ಮತ್ತು ತೆಲಂಗಾಣದಲ್ಲಿ 34 ಸೇರಿದಂತೆ 524 ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಿವೆ. ಉದ್ದೇಶಿತ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು ವಿಶೇಷವಾಗಿ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗೆಹರಿಸಲು ಕೆಲಸ ಮಾಡಲಿವೆ ಎಂದು ಮಾಹಿತಿ ನೀಡಿದ್ದಾರೆ.

12ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಮರಣ ದಂಡನೆ ಹಾಗೂ 16ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಿದೆ. ಅತ್ಯಾಚಾರ ಪ್ರಕರಣಗಳನ್ನು ಎರಡು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಬೇಕು. ಆರು ತಿಂಗಳೊಳಗೆ ಪ್ರಕರಣ ಇತ್ಯರ್ಥವಾಗುವಂತ ನಿಯಮವಿದೆ. ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗಳಿಗೆ ವಿಶೇಷ ಫೋರೆನ್ಸಿಕ್ ಕಿಟ್ ಪೂರೈಕೆಯಾಗಲಿದೆ. ಅತ್ಯಾಚಾರ ಪ್ರಕರಣಗಳ ಇತ್ಯರ್ಥಗೊಳಿಸಲಿಜ್ಕಾಗೇ ಎಲ್ಲ ರಾಜ್ಯಗಳಲ್ಲಿ ಅತ್ಯಾಧುನಿಕ ಫೋರೆನ್ಸಿಕ್ ಪ್ರಯೋಗಾಲಯ ಆರಂಭವಾಗಲಿವೆ.

ದಿನದ ಸುದ್ದಿ

ಕವಿತೆ | ಚರಗ ಚಲ್ಲುತ್ತಿದ್ದಾರೆ..!

Published

on

  • ಸುರೇಶ ಎನ್ ಶಿಕಾರಿಪುರ

ವಳು ಸಾಕ್ಷಿ ಹೇಳಬಾರದಲ್ಲ? ಅದಕ್ಕೆ,
ಅವಳ ನಾಲಗೆ ಕತ್ತರಿಸಿ ಎಸೆದರು.

ಅವಳು ತಮ್ಮ ಹೆಸರು ಬರೆಯಬಾರದಲ್ಲ?
ಅದಕ್ಕೇ,
ಅವಳ ಕೋಮಲ ಕೈಗಳನ್ನು ಲಟಲಟನೆ ಮುರಿದರು.

ಅವಳು ಕೋರ್ಟು ಕಚೇರಿಗಳಿಗೆ ಓಡಾಡಬಾರದಲ್ಲ? ಅದಕ್ಕೆ,
ಅವಳ ಕಾಲುಗಳನ್ನು ಒಣ ಕಟ್ಟಿಗೆಯಂತೆ ಲಡ್ಡನೆ ಮುರಿದರು.

ಅವಳ ಕೊರಳು ಸ್ವರ ಹೊರಡಿಸಬಾರದಲ್ಲ?
ಅದಕ್ಕೇ,
ಅವಳ ಗೋಣನ್ನು ತಿರುಪಿ ಮುರಿದರು.

ಅವಳು ಮಿಸುಕಲೂ ಬಾರದಲ್ಲ? ಅದಕ್ಕೇ,
ಬೆನ್ನ ಮೂಳೆ ಮುರಿದು ಬೆನ್ನ ಹುರಿ ಹರಿದರು..

ದೇಶವು ಹೊತ್ತಿ ಉರಿಯಬಾರದಲ್ಲ?
ಆಳುವವನ ಗದ್ದುಗೆಯು ಅಲ್ಲಾಡಬಾರದಲ್ಲ?
ಶ್ರೇಷ್ಟ ಹಿಂದೂ ಧರ್ಮದ ಮಾನ ಉಳಿಯಬೇಕಲ್ಲ?
ಅದಕ್ಕೇ ಅಧಿಕಾರಿಗಳು ಸೂರ್ಯ ಹುಟ್ಟುವ ಮುನ್ನ ಅವಳನ್ನು ಸುಟ್ಟು ಬೂದಿ ಮಾಡಿದರು.

ಹಿಂದೂ ಧರ್ಮದ ಶವ ಸಂಸ್ಕಾರವನ್ನು
ಶಾಸ್ತ್ರೋಕ್ತ ಮಾಡಿ ಮುಗಿಸಿದರು
ಮೂಳೆ, ಮಾಂಸ, ವೀರ್ಯಮಾದರಿ, ಸಾಕ್ಷಿ ಎಲ್ಲವೂ..
ಪಂಚಭೂತಗಳಲ್ಲಿ ಲೀನ.

ವಿಶ್ವಗುರುವಿನ ಜೋಳಿಗೆಯ ತುಂಬಾ
ಹೆಣ್ಣಿನ ತುಟಿ ಕೊರಳು ಮೊಲೆ ಯೋನಿಯಿಂದ ಹರಿದ ರಕ್ತದ ಮಜಗಟ್ಟಿದ ಉಂಡೆಗಳು ತುಂಬಿವೆ.

ದಾನಮ್ಮ, ಆಸಿಫಾ, ಮನೀಷಾ, ಅವಳಿವಳೆಲ್ಲರ
ಬಿಸಿರಕ್ತ ಬಸಿದು ಪುಂಡರು ಚರಗ ಚೆಲ್ಲುತ್ತಿದ್ದಾರೆ
ತಮ್ಮ ರಾಕ್ಷಸ ಸಂತಾನ ಹುಲುಸಾಗಿ ಬೆಳೆಯಲೆಂದು.

ಚೌಕಿದಾರ ಕಾಯುತ್ತಿದ್ದಾನೆ,
ಯಾರನ್ನ? ಏನನ್ನ?

ಕವಿ : ಸುರೇಶ ಎನ್ ಶಿಕಾರಿಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪೊಲೀಸರಿಂದ ಕಾನೂನಿನ ಅತ್ಯಾಚಾರ

Published

on

ಅತ್ಯಾಚಾರ ಸಂತ್ರಸ್ತೆ ಮನಿಶಾ ಶವ ಸುಡುತ್ತಿರುವುದು
  • ದಿನೇಶ್ ಅಮಿನ್ ಮಟ್ಟು

ತ್ರಾಸ್ ನಲ್ಲಿ ಮೇಲ್ಜಾತಿಯ ದುರುಳರಿಂದ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಯುವತಿಯ ಅಂತ್ಯಕ್ರಿಯೆಯನ್ನು ಪೊಲೀಸರು ತಂದೆ-ತಾಯಿಗೆ ಮಗಳ ಮುಖವನ್ನೂ ನೋಡಲು ಅವಕಾಶ ನೀಡದೆ ಅವಸರದಲ್ಲಿ ನಡುರಾತ್ರಿಯೇ ಅಂತ್ಯಕ್ರಿಯೆಯನ್ನು ಮುಗಿಸಿದರು. ಯಾಕೆ?

ನಮ್ಮ ಭವ್ಯಭಾರತದಲ್ಲಿ ಅತ್ಯಾಚಾರದ ನೂರು ಪ್ರಕರಣಗಳಲ್ಲಿ ಕೇವಲ 27 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. 2018ರಲ್ಲಿ ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದ್ದು 1,56,327 ರೇಪ್ ಪ್ರಕರಣಗಳು.

ಅವುಗಳಲ್ಲಿ ವಿಚಾರಣೆ ಪೂರ್ಣಗೊಂಡ ಪ್ರಕರಣಗಳು 17,313 ಮಾತ್ರ. ಇವುಗಳಲ್ಲಿ 11,133 ಪ್ರಕರಣಗಳ ಆರೋಪ ಪಟ್ಟಿ ಸಲ್ಲಿಕೆಯಾಗುವ ಮೊದಲೇ ಆರೋಪಿಗಳು ಬಿಡುಗಡೆಯಾಗಿದ್ದರು, 1472 ಪ್ರಕರಣಗಳಲ್ಲಿ ಆರೋಪಿಗಳು ವಿಚಾರಣೆ ನಡೆದು ದೋಷಮುಕ್ತರಾಗಿದ್ದರು.

ಆರೋಪಿಗಳು ದೋಷಮುಕ್ತರಾಗಲು ಒಂದು ಕಾರಣ ಏನೆನ್ನುವುದು ಬುಧವಾರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ನೋಡಿದವರಿಗೆ ಮನವರಿಕೆಯಾಗಿರಬಹುದು. ಇನ್ನೊಂದು ಪ್ರಮುಖ ಕಾರಣ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಆರೋಪಪಟ್ಟಿಯಲ್ಲಿನ ದೋಷಗಳು.

ಅತ್ಯಾಚಾರದಂತಹ ಪ್ರಕರಣಗಳಲ್ಲಿ ಶೇಕಡಾ 90ರಷ್ಟು ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ಎಫ್ ಐ ಆರ್ ದಾಖಲಾಗಿ ಆರೋಪ ಪಟ್ಟಿ ಸಿದ್ದಗೊಂಡು ನ್ಯಾಯಾಲಯಕ್ಕೆ ಸಲ್ಲಿಸುವ ಹಂತದಲ್ಲಿ ಸತ್ತು ಹೋಗಿರುತ್ತವೆ.

ಸರ್ಕಾರ ವಿಶೇಷ ಆಸಕ್ತಿ ವಹಿಸಿದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ಗಳೇನಾದರೂ ಕಸಬುದಾರ ವಕೀಲರಂತೆ ವೃತ್ತಿನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಸತ್ತುಹೋಗಿರುವ ಒಂದಷ್ಟು ಪ್ರಕರಣಗಳಿಗೆ ಜೀವ ತುಂಬಬಹುದು. ಅವರೂ ವ್ಯವಸ್ಥೆಯ ಜೊತೆ ಷಾಮೀಲಾಗಿದ್ದರೆ ಆತನೂ ಸೇರ್ಕೊಂಡು ಉಳಿದ ಪ್ರಕರಣಗಳನ್ನು ಮುಗಿಸಿಬಿಡುತ್ತಾರೆ.

ಅಪರಾಧಿಗಳನ್ನು ರಕ್ಷಿಸಲು ಪೊಲೀಸರು ನಿರ್ಧರಿಸಿದರೆ ಅವರು ಮೊದಲು ಸಾಕ್ಷ್ಯ ನಾಶಕ್ಕೆ ಇಳಿಯುತ್ತಾರೆ. ಹತ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ದಲಿತ ಯುವತಿಯ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಸೆಪ್ಟೆಂಬರ್ ಹದಿನಾಲ್ಕರಂದು ತನ್ನ ಮನೆ ಸಮೀಪದ ಕಾಡಲ್ಲಿ ಈ ದಲಿತ ಯುವತಿಯ ಮೇಲೆ ಊರಿನ ಮೇಲ್ಜಾತಿಯ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರ ಎಸಗುತ್ತಾರೆ.

ಅಲ್ಲಿಂದಲೇ ಸಾಕ್ಷ್ಯ ನಾಶದ ಕೆಲಸ ಪ್ರಾರಂಭವಾಗುತ್ತದೆ. ಆ ಯುವತಿ ಒಂದೆರಡು ವರ್ಷ ಮಾತ್ರ ಶಾಲೆಗೆ ಹೋಗಿದ್ದಳಂತೆ. ಓದಲು ಬರೆಯಲು ಗೊತ್ತಿದ್ದ ಹಾಗೆ ಕಾಣುತ್ತಿಲ್ಲ. ಇದರಿಂದಾಗಿ ಮೌಖಿಕ ಹೇಳಿಕೆಯನ್ನಷ್ಟೇ ನೀಡಲು ಸಾಧ್ಯವಿತ್ತು. ಅದಕ್ಕಾಗಿ ನಾಲಗೆಯನ್ನು ಕತ್ತರಿಸಲಾಗಿತ್ತು.

ಅಲ್ಲಿಂದ ಪೊಲೀಸರ ಪ್ರವೇಶವಾಗುತ್ತದೆ. ಅಷ್ಟರಲ್ಲಿ ಯುವತಿ ಅಪರಾಧಿಗಳ ಹೆಸರನ್ನು ಹೇಳಿರುತ್ತಾಳೆ, ನಾಲ್ವರ ಬಂಧನವೂ ಆಗಿರುತ್ತದೆ. ಮಾಧ್ಯಮಗಳಲ್ಲಿ ವರದಿ ಬರತೊಡಗುತ್ತದೆ. ಇದೇನು ಕೈಮೀರಿ ಹೋಗುತ್ತಿದೆ ಎಂದನಿಸಿದಾಗ ಹೆತ್ತವರಿಗೆ ಮನವರಿಕೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿದ್ದ ಆಕೆಯನ್ನು ದಿಡೀರನೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸಾಗಿಸುತ್ತಾರೆ. ಹೋಗುವ ಮೊದಲು ಆಕೆ ತಾಯಿಯ ಜೊತೆ, ಹುಷಾರಾಗಿ ಬರ್ತೇನೆ ಎಂದು ಹೇಳಿ ಹೋಗಿದ್ದಳಂತೆ.

ಹದಿನಾಲ್ಕು ದಿನ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದ ಯುವತಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆ ಸೇರಿದ ಹದಿನೈದು ಗಂಟೆಗಳಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆಯುತ್ತಾಳೆ. ತಕ್ಷಣ ಹತ್ರಾಸ್ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಧಾವಿಸುತ್ತಾರೆ. ಹೆತ್ತವರಿಗೆ ಸಾವಿನ ಸುದ್ದಿ ತಿಳಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅದರ ನಂತರ ಹೆತ್ತವರನ್ನು ದೂರ ಇಟ್ಟು ಯುವತಿಯ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿಯ ವರೆಗೆ ಪೊಲೀಸರು ಹೆತ್ತವರಿಗೆ ಯುವತಿಯ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿಲ್ಲ. ಇಷ್ಟೆಲ್ಲ ತಂತ್ರ-ಕುತಂತ್ರಗಳನ್ನು ನಡೆಸಿದವರು ತ ಮರಣೋತ್ತರ ಪರೀಕ್ಷೆಯಲ್ಲಿಯೂ ಕೈಯಾಡಿಸಿರುವ ಸಾಧ್ಯತೆಗಳು ಖಂಡಿತ ಇದೆ. ಸಂಶಯಗೊಂಡು ಹೆತ್ತವರು ಮರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಬಾರದೆಂದೇ ಅವಸರದಲ್ಲಿ ಅಂತ್ಯಕ್ರಿಯೆ ನಡೆಸಿ ಅಳಿದುಳಿದ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ.

ಸಾಮಾನ್ಯವಾಗಿ ಮೆಡಿಕೋ-ಲೀಗಲ್ ಪ್ರಕರಣಗಳಲ್ಲಿ ಮೃತದೇಹದ ಅಂತ್ಯಕ್ರಿಯೆಯನ್ನು ಹೇಗೆ ಮಾಡಬೇಕೆಂಬುದನ್ನು ಹೆತ್ತವರು/ಪೋಷಕರು ನಿರ್ಧರಿಸಬೇಕು. ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆಗೆ ಮೊದಲು ಪೊಲೀಸರು ಒಂದಷ್ಟು ಕಾಗದಪತ್ರಗಳಿಗೆ ಯುವತಿಯ ತಂದೆಯ ಸಹಿಹಾಕಿಸಿದ್ದಾರೆ.

ಅನಕ್ಷರಸ್ಥ ತಂದೆ ಹೇಳಿಕೆಯನ್ನು ಖಂಡಿತ ಓದಿರುವುದಿಲ್ಲ, ಪೊಲೀಸರು ಓದಿ ಹೇಳಿದ್ದನ್ನು ಒಪ್ಪಿಕೊಂಡಿರಬಹುದು. ಅದರಲ್ಲಿ ಮಗಳ ಮೃತದೇಹವನ್ನು ಸುಡಲು ಒಪ್ಪಿಗೆ ನೀಡಿದ್ದ ಪತ್ರಕ್ಕೂ ಅವರು ಸಹಿಹಾಕಿರಬಹುದು. ಅದನ್ನೇ ಪೊಲೀಸರು ಈಗ ‘’ ತಂದೆಯ ಒಪ್ಪಿಗೆಯ ಮೇಲೆಯೇ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ’ ಎಂದು ಹೇಳುತ್ತಿರುವುದು.

ಈಗಾಗಲೇ ಪೊಲೀಸರ ಹೇಳಿಕೆಗಳ ಧಾಟಿ ಬದಲಾಗಿದೆ. ಮೊದಲನೆಯದಾಗಿ ಯುವತಿಯ ಮೇಲೆ ರೇಪ್ ನಡೆದಿಲ್ಲ, ರೇಪ್ ಗೆ ಪ್ರಯತ್ನಿಸಲಾಗಿದೆ ಎಂದು ಹೇಳತೊಡಗಿದ್ದಾರೆ, ಇದರ ಜೊತೆಗೆ ಯುವತಿಯ ನಾಲಗೆ ಕತ್ತರಿಸಲಾಗಿಲ್ಲ ಎಂದೂ ಹೇಳತೊಡಗಿದ್ದಾರೆ. ಪೊಲೀಸರು ನಾಳೆ ಅಧಿಕೃತವಾಗಿ ಈ ಹೇಳಿಕೆ ನೀಡಿದರೆ ಇದು ಸುಳ್ಳೆಂದು ಸಾಬೀತುಪಡಿಸುವುದು ಹೇಗೆ? ಮೃತದೇಹ ಸುಟ್ಟು ಬೂದಿಯಾಗಿದೆ.

ಇದನ್ನೇ “ ಪೊಲೀಸರಿಂದ ಕಾನೂನಿನ ಅತ್ಯಾಚಾರ” ಎಂದು ಹೇಳಲಾಗುತ್ತಿದೆ.ಯುಪಿ ಪೊಲೀಸರು ಈ ಕಲೆಯಲ್ಲಿ ವರ್ಷದಿಂದ ಪಳಗಿ ಬಿಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ವಿವಿ 7ನೇ ವಾರ್ಷಿಕ ಘಟಿಕೋತ್ಸವ :56 ಪಿಹೆಚ್‍ಡಿ-62 ಚಿನ್ನದ ಪದಕ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದ 7ನೇ ವಾರ್ಷಿಕ ಘಟಿಕೋತ್ಸವ ಬುಧವಾರ ಇಲ್ಲಿನ ವಿವಿ ಕ್ಯಾಂಪಸ್‍ನ ಶಿವಗೊಂಗೋತ್ರಿ ಆವರಣದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ ಸರಳವಾಗಿ ನಡೆಯಿತು.

ಸಮಾರಂಭದಲ್ಲಿ 56 ಜನರಿಗೆ ಪಿಹೆಚ್‍ಡಿ ಪ್ರದಾನ ಮಾಡಲಾಯಿತು. 62 ಚಿನ್ನದ ಪದಕ ನೀಡಲಾಯಿತು. 8441 ವಿದ್ಯಾರ್ಥಿಗಳು ಸ್ನಾತಕ ಪದವಿ ಹಾಗೂ 1592 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು.

ಗೌರವ ಡಾಕ್ಟರೇಟ್

ಈ ಬಾರಿ ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು ಕಲಬುರ್ಗಿಯ ಶರಣಬಸವೇಶ್ವರ ಅಪ್ಪ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರಾಗಿರುವ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರಿಗೆ ಈ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 30 ವರ್ಷದ ಸಾಮಾಜಿಕ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಯಿತು.

ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವದ ಮುಖ್ಯ ಭಾಷಣ ನೆರವೇರಿಸಿದ ವಿಕ್ರಮ್ ಸಾರಾಭಾಯಿ ಪ್ರೊಫೆಸರ್ ಹಾಗೂ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಎ.ಎಸ್. ಕಿರಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ ಕೇವಲ ಕಾಲೇಜು ಶಿಕ್ಷಣಕ್ಕೆ ಸೀಮಿತವಾಗಬಾರದು. ಕಲಿಕೆ ಎಂದಿಗೂ ಅಂತ್ಯವಾಗಿವುದಿಲ್ಲ. ಬದಲಾಗಿ ಅದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ನಿರಂತರ ಕಲಿಕೆÀ ಸ್ಪರ್ಧಾತ್ಮಕ ಹಾಗೂ ವೇಗವಾಗಿ ಬದಲಾಗುವ ಪರಿಸ್ಥಿತಿಯಲ್ಲಿ ಮುನ್ನಡೆ ಸಾಧಿಸಲು ಸಹಕರಿಸುತ್ತದೆ ಎಂದು ಹೇಳಿದರು.

ಪ್ರತಿಭಾ ಕುಲವನ್ನು ರೂಪಿಸುವಲ್ಲಿ ಶೈಕ್ಷಣಿಕ ವಲಯದ ಪಾತ್ರ ತುಂಬಾ ದೊಡ್ಡದಿದೆ. ಇದರಿಂದಾಗಿ ದೇಶ ಎಲ್ಲಾ ವಲಯಗಳಲ್ಲಿ ಬೆಳೆಯಲು, ಸ್ಪರ್ಧಿಸಲು ಹಾಗೂ ಯಶಸ್ಸು ಗಳಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಳೆಯ ದಾರಿಯಲ್ಲಿ ಹೆಜ್ಜೆ ಹಾಕದೇ,ತಮ್ಮದೇ ಆದ ಹೊಸ ಪಥದಲ್ಲಿ ವೇಗವಾಗಿ ರೂಪಿಸಿಕೊಳ್ಳಬೇಕು. ಆ ಮೂಲಕ ತಂತ್ರಜ್ಞಾನವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕೋವಿಡ್ ನಿರ್ವಹಣೆಯಲ್ಲಿ ತಂತ್ರಜ್ಞಾನ ಮಹತ್ವಪೂರ್ಣವಾಗಿ ನೆರವಾಗಿದ್ದು, ಕೇವಲ ಆರೋಗ್ಯವಷ್ಟೇ ಅಲ್ಲದೆ, ದೈನಂದಿನ ಜೀವನಕ್ಕೂ ತಂತ್ರಜ್ಞಾನ ನೆರವಾಗಿರುವುದು ವಿಶೇಷವಾಗಿದೆ. ಕೊರೊನಾ ಹರಡುತ್ತಿರುವಂತೆಯೇ ತಂತ್ರಜ್ಞಾನ ಪರಿಹಾರಗಳು ಸೋಂಕು ನಿಗಾ ಹಾಗೂ ನಿಯಂತ್ರಣಕ್ಕೆ ನೆರವಾಗಿದೆ. ಇದರಿಂದಾಗಿ ಆರೋಗ್ಯ ವ್ಯವಸ್ಥೆ ಮೇಲಿನ ಹೊರೆ ಹಾಗೂ ಆರೋಗ್ಯ ವೃತ್ತಿಪರರ ಕಾರ್ಯ ನಿರ್ವಹಣೆಯ ಭಾರ ಕಡಿಮೆಯಾಗಿರುವುದು ವಿಶೇಷ ಎಂದು ಬಣ್ಣಿಸಿದರು.

ದೈಹಿಕ ಅಂತರ ಕಾಯ್ದುಕೊಳ್ಳಬೇಕಾದ ಈ ಸಂದರ್ಭದಲ್ಲಿ ವರ್ಚುಯಲ್ ಪ್ಲಾಟ್‍ಫಾರಂಗಳು, ವಿಡಿಯೋ ಕಾನ್ಫರೆನ್ಸ್ ಹಾಗೂ ಡಿಜಿಟಲ್ ನಿಗಾ ಅತ್ಯುಪಯುಕ್ತವಾಗಿವೆ. ವಿಶ್ವದೆಲ್ಲೆಡೆ ರೋಗಿಗಳಿಗೆ ದೂರದಿಂದಲೇ ಆರೋಗ್ಯ ಸೇವೆ ನೀಡುವುದು ಹೆಚ್ಚಾಗುತ್ತಿದೆ. ಟೆಲಿಮೆಡಿಸಿನ್ ದೂರದಲ್ಲಿರುವ ರೋಗಿಗಳ ನಿರ್ವಹಣೆ ಹಾಗೂ ಅವರ ಜೊತೆಗಿನ ಸಂವಾದಕ್ಕೆ ವೈದ್ಯರಿಗೆ ಸಹಾಯ ಮಾಡುತ್ತಿವೆ ಎಂದು ತಿಳಿಸಿದರು.

ಮೊಬೈಲ್ ಪಾವತಿ ತಂತ್ರಾಂಶಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಕ್ಷಿಪ್ರವಾಗಿ ಜನರಿಂದ ಮಾಹಿತಿ ಪಡೆದುಕೊಳ್ಳುವ ಮೂಲಕ ಸಂವಹನಕ್ಕೆ ನೆರವಾಗುತ್ತಿವೆ. ವಿಮಾನ ನಿಲ್ದಾಣ ಹಾಗೂ ಇತರ ಪ್ರದೇಶಗಳಲ್ಲಿ ಅಳವಡಿಸಲಾಗುವ ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳಿಂದಾಗಿ ಜ್ವರದಿಂದ ಬಳಲುತ್ತಿರುವವರ ತ್ವರಿತ ಪತ್ತೆ ಸಾಧ್ಯವಾಗಿದೆ ಎಂದು ವಿವರಿಸಿದರು.

ಭಾರತದ ಬಾಹ್ಯಾಕಾಶ ಯೋಜನೆ ಆರಂಭದ ದಿನದಿಂದಲೂ ಉಪಗ್ರಹ ಸಂವಹನ, ಪ್ರಸಾರ, ಭೂ ಸರ್ವೇಕ್ಷಣೆ, ಬಾಹ್ಯಾಕಾಶ ವಿಜ್ಞಾನ ಅಧ್ಯಯನ, ಬಾಹ್ಯಾಕಾಶ ಸಾರಿಗೆ ವ್ಯವಸ್ಥೆಗಳು ಹಾಗೂ ಸಂಬಂಧಿತ ಯೋಜನೆಗಳು ವಿಶಿಷ್ಟತೆಗಳನ್ನು ರೂಢಿಸಿಕೊಂಡಿದೆ. ಭಾರತವು ಬಾಹ್ಯಾಕಾಶ ತಂತ್ರಜ್ಞಾನವನ್ನು ವಿಕೋಪ ನಿರ್ವಹಣೆ, ಬೆಸ್ತರಿಗೆ ನೆರವು ನೀಡುವಂತಹ ಜನ ಸಾಮಾನ್ಯರಿಗೆ ಉಪಯುಕ್ತ ಕ್ರಮಗಳಿಗೆ ಬಳಸುತ್ತಾ ಬಂದಿದೆ ಎಂದು ತಿಳಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಮಾತನಾಡಿ, ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಸುರಕ್ಷತೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಮಾರಂಭವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

2018-19 ನೇ ಸಾಲಿನಲ್ಲಿ ಸ್ನಾತಕ ಪದವಿಯಲ್ಲಿ ಶೇ. 56.55 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ. 82.87 ರಷ್ಟು ಫಲಿತಾಂಶ ಬಂದಿದೆ. ದಾವಣಗೆರೆ ವಿವಿ ಸ್ಥಾಪನೆ ನಂತರ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಕರ್ನಾಟಕದ ಕಿರಿಯ ವಿಶ್ವವಿದ್ಯಾನಿಲಯಗಳಲ್ಲಿ ದಾವಣಗೆರೆ ವಿವಿ ಕೂಡ ಒಂದಾಗಿದ್ದು, ಒಟ್ಟು 251 ಎಕರೆ ಪ್ರದೇಶದಲ್ಲಿ ಹಸಿರು ವಾತಾವರಣದಲ್ಲಿರುವುದು ವಿಶೇಷವಾಗಿದೆ. ಹಾಗೂ ಇದು ಅಸ್ತಿತ್ವಕ್ಕೆ ಬಂದ ಪ್ರಥಮ ದಶಕದಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.

ವಿಜ್ಞಾನ, ಕಲಾ ಹಾಗೂ ವಾಣಿಜ್ಯ ನಿಕಾಯಗಳಡಿಯಲ್ಲಿ ಹಲವಾರು ಕೋರ್ಸ್ ಚಾಯ್ಸ್ ಬೆಸ್ಟ್ ಕ್ರೆಡಿಟ್ ಸಿಸ್ಟ್‍ಂ ಅಡಿ ಶಿಕ್ಷಣ ನೀಡಲಾಗುತ್ತಿದೆ. ಎಲ್ಲಾ ಕೋರ್ಸ್‍ಗಳಿಗೂ ಸಿಬಿಸಿಎಸ್ ಪರಿಚಯಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ನ್ಯಾಯ ಒದಗಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದ್ದು, ಪ್ರತಿಯೊಂದು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

56 ಜನರಿಗೆ ಪಿಹೆಚ್‍ಡಿ ಪ್ರದಾನ

03 ಮಹಿಳಾ ಹಾಗೂ 02 ಪುರುಷ ಅಭ್ಯರ್ಥಿಗಳು ಸೇರಿ ಒಟ್ಟು 05 ಜನ ಮಾಸ್ಟರ್ ಆಫ್ ಫಿಲಾಸಫಿ (ಎಂ.ಫಿಲ್) ಮತ್ತು 11 ಮಹಿಳಾ ಹಾಗೂ 45 ಪುರುಷ ಅಭ್ಯರ್ಥಿಗಳು ಸೇರಿ ಒಟ್ಟು 56 ಅಭ್ಯರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ಪ್ರದಾನ ಮಾಡಲಾಯಿತು.

ಕನ್ನಡ ವಿಭಾಗದ ವಿನಯವತಿಗೆ 4 ಚಿನ್ನದ ಪದಕ

ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ ವಿದ್ಯಾರ್ಥಿನಿಯರು ಸ್ವರ್ಣ ಪದಕಗಳ ಗಳಿಕೆಯಲ್ಲೂ ಪಾರಮ್ಯ ಮೆರೆದಿರುವುದು ವಿಶೇಷ. ಒಟ್ಟು 33 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿನಿಯರು ಚಿನ್ನದ ಪದಕ ಗಳಿಸಿದ್ದಾರೆ. ದಾವಣಗೆರೆ ವಿವಿಯ ಸ್ನಾತಕೋತ್ತರ ಕನ್ನಡ ವಿಭಾಗದ ವಿನಯವತಿ ಕೆ.ಬಿ. ವಿದ್ಯಾರ್ಥಿನಿ ಅತೀ ಹೆಚ್ಚು ಅಂಕ ಪಡೆದು 4 ಸ್ವರ್ಣ ಪದಕಗಳನ್ನು ಪಡೆದರು.

62 ಚಿನ್ನದ ಪದಕ

2018-19 ನೇ ಸಾಲಿನಲ್ಲಿ 62 ಚಿನ್ನದ ಪದಕಗಳನ್ನು ನೀಡಲಾಗುತ್ತಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 27 ಮಹಿಳಾ ವಿದ್ಯಾರ್ಥಿಗಳು ಹಾಗೂ 6 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 33 ವಿದ್ಯಾರ್ಥಿಗಳು 62 ಚಿನ್ನದ ಪದಕಗಳನ್ನು ಹಂಚಿಕೊಂಡರು.

10,033 ವಿದ್ಯಾರ್ಥಿಗಳಿಗೆ ಪದವಿ

ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿದಂತೆ ಒಟ್ಟು 10,033 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಬಿಎ, ಬಿಕಾಂ, ಬಿಬಿಎಂ ಸೇರಿದಂತೆ ವಿವಿಧ ಪದವಿ ವ್ಯಾಸಂಗದಲ್ಲಿ 2018-19 ನೇ ಸಾಲಿನಲ್ಲಿ 5408 ಮಹಿಳೆ, 3033-ಪುರುಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 8441 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆದರು. ಎಂಎ, ಎಂಕಾಂ, ಎಂಎಸ್‍ಸಿ ಸೇರಿದಂತೆ ವಿವಿಧ ಸ್ನಾತಕೋತ್ತರ ಪದವಿ ವ್ಯಾಸಂಗದಲ್ಲಿ 1073 ಮಹಿಳೆ, 519 ಪುರುಷ ವಿದ್ಯಾರ್ಥಿಗಳು ಸೇರಿದಂತೆ 1592 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು.

ದಾವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರ ಅನುಪಸ್ಥಿತಿಯಲ್ಲಿ ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್.ಅನಿತಾ ಮತ್ತು ಹಣಕಾಸು ಅಧಿಕಾರಿ ಪ್ರೊ.ಗೋಪಾಲ ಎಂ. ಅಡವಿರಾವ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ರಾಮನಾಥ್, ವಿಜಯಲಕ್ಷ್ಮಿ, ಇನಾಯತ್ ಉಲ್ಲಾ, ಡಾ.ವಿ.ಕುಮಾರ್, ಕಲಾ ನಿಕಾಯದ ಡೀನ್ ಪ್ರೊ.ಕೆ.ಬಿ.ರಂಗಪ್ಪ, ವಾಣಿಜ್ಯ ನಿಕಾಯದ ಡೀನ್ ಪ್ರೊ.ಲಕ್ಷ್ಮಣ, ಶಿಕ್ಷಣ ನಿಕಾಯದ ಡೀನ್ ಡಾ.ವೆಂಕಟೇಶ್, ವಿಜ್ಞಾನ ನಿಕಾಯದ ಡೀನ್ ವಡ್ಲಪುಡಿ ಕುಮಾರ್ ಹಾಗೂ ವಿವಿಯ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಪೋಷಕರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ23 mins ago

ಕವಿತೆ | ಚರಗ ಚಲ್ಲುತ್ತಿದ್ದಾರೆ..!

ಸುರೇಶ ಎನ್ ಶಿಕಾರಿಪುರ ಅವಳು ಸಾಕ್ಷಿ ಹೇಳಬಾರದಲ್ಲ? ಅದಕ್ಕೆ, ಅವಳ ನಾಲಗೆ ಕತ್ತರಿಸಿ ಎಸೆದರು. ಅವಳು ತಮ್ಮ ಹೆಸರು ಬರೆಯಬಾರದಲ್ಲ? ಅದಕ್ಕೇ, ಅವಳ ಕೋಮಲ ಕೈಗಳನ್ನು ಲಟಲಟನೆ...

ದಿನದ ಸುದ್ದಿ37 mins ago

ಪೊಲೀಸರಿಂದ ಕಾನೂನಿನ ಅತ್ಯಾಚಾರ

ದಿನೇಶ್ ಅಮಿನ್ ಮಟ್ಟು ಹತ್ರಾಸ್ ನಲ್ಲಿ ಮೇಲ್ಜಾತಿಯ ದುರುಳರಿಂದ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಯುವತಿಯ ಅಂತ್ಯಕ್ರಿಯೆಯನ್ನು ಪೊಲೀಸರು ತಂದೆ-ತಾಯಿಗೆ ಮಗಳ ಮುಖವನ್ನೂ ನೋಡಲು ಅವಕಾಶ ನೀಡದೆ ಅವಸರದಲ್ಲಿ ನಡುರಾತ್ರಿಯೇ...

ದಿನದ ಸುದ್ದಿ2 hours ago

ದಾವಣಗೆರೆ ವಿವಿ 7ನೇ ವಾರ್ಷಿಕ ಘಟಿಕೋತ್ಸವ :56 ಪಿಹೆಚ್‍ಡಿ-62 ಚಿನ್ನದ ಪದಕ

ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದ 7ನೇ ವಾರ್ಷಿಕ ಘಟಿಕೋತ್ಸವ ಬುಧವಾರ ಇಲ್ಲಿನ ವಿವಿ ಕ್ಯಾಂಪಸ್‍ನ ಶಿವಗೊಂಗೋತ್ರಿ ಆವರಣದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ ಸರಳವಾಗಿ ನಡೆಯಿತು. ಸಮಾರಂಭದಲ್ಲಿ 56...

ದಿನದ ಸುದ್ದಿ2 hours ago

ಸಿಎಂ ಮಗನ ಭ್ರಷ್ಟಾಚಾರದ ವೃತ್ತಾಂತ : ಪವರ್ ಟಿವಿ ಬಂದ್ ಹಿಂದಿನ ಒಳ ರಾಜಕೀಯ

ದಿನೇಶ್ ಅಮೀನ್ ಮಟ್ಟು ಪವರ್ ಟಿವಿ ಚಾನೆಲ್ ಗೆ ಸಂಬಂಧಿಸಿದ ಬೆಳವಣಿಗೆಗಳಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಚಾನೆಲ್ ವರದಿ ಮಾಡಿರುವ ಭ್ರಷ್ಟಾಚಾರದ ಹಗರಣ, ಎರಡನೆಯದು ಟಿವಿ ಚಾನೆಲ್...

ದಿನದ ಸುದ್ದಿ4 hours ago

ದಾವಣಗೆರೆ | ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಸುದ್ದಿದಿನ,ದಾವಣಗೆರೆ: ಕರ್ನಾಟಕ ವಿಧಾನಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಸಂಬಂಧ ವೇಳಾಪಟ್ಟಿಯನ್ನು ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಿಸಿದ್ದಾರೆ. ವಿಧಾನಪರಿಷತ್ತಿನ ಕರ್ನಾಟಕ ಆಗ್ನೇಯ...

ಅಂತರಂಗ5 hours ago

ಮನಿಶಾ : ಅನ್ಯಾಯದ ಘೋರ ಸಾವು

ಡಾ.ಎಚ್.ಎಸ್.ಅನುಪಮಾ ಸಾವಿರ ಕನಸುಗಳಿದ್ದ ತರುಣಿ ಮನಿಶಾಳ ದೇಹದ ಮೇಲೆ ನಡೆದ ಅತಿ ಘೋರ ಹಿಂಸೆ, ಆ ಅನ್ಯಾಯದ ಸಾವು, ಬಡಹೆಣ್ಣುಗಳ ಬಗೆಗೆ ರಕ್ಷಕ ವ್ಯವಸ್ಥೆಗಿರುವ ಕಣ್ಣಿಗೆ ರಾಚುವಂತಹ...

ದಿನದ ಸುದ್ದಿ15 hours ago

ಹೋರಾಟದ ಕಿಚ್ಚು ಈಗಷ್ಟೇ ಆರಂಭವಾಗಿದೆ, ಇದು ಇಲ್ಲಿಗೆ ನಿಲ್ಲುವುದಿಲ್ಲ : ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ

ಸುದ್ದಿದಿನ,ಬೆಂಗಳೂರು : ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಈ ಕ್ಷೇತ್ರಗಳಿಗೆ ಪಕ್ಷದ ಪರವಾಗಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು,...

ದಿನದ ಸುದ್ದಿ17 hours ago

ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಸುದ್ದಿದಿನ,ಮೈಸೂರು : 2020-21ನೇ ಸಾಲಿನಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಬೈರಾಗಿ (ಬಾವ), ಬಾಲ ಸಂತೋಷಿ-ಜೋಷಿ, ಬಾಜಿಗರ್, ಭರಡಿ, ಬುಡಬುಡಕಿ, ಜೋಷಿ, ಗೋಂಧಳಿ, ಚಾರ, ಚಿತ್ರಕಥಿ,...

ಅಂತರಂಗ23 hours ago

ಮತ್ತೊಂದು ಜೀವ ಮತ್ತದೇ ಬೇಸರ ಇನ್ನೆಷ್ಟು ದಿನ

 ನಾ ದಿವಾಕರ ಉತ್ತರ ಪ್ರದೇಶ ಭಾರತದ ಅತ್ಯಾಚಾರ ಪ್ರದೇಶ ಆಗಿದೆ. ಯೋಗಿಯ ರಾಮರಾಜ್ಯದಲ್ಲಿ ಸೀತೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ಈಗ ಮತ್ತೋರ್ವ ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದಾಳೆ. ದಲಿತ...

ದಿನದ ಸುದ್ದಿ1 day ago

ಮನಿಷಾ ಅತ್ಯಚಾರ-ಕೊಲೆ : ಆದಿತ್ಯನಾಥನ ಸರ್ಕಾರದಲ್ಲಿ ಹೆಚ್ಚುತ್ತಿವೆ ಅಪರಾಧಗಳು

ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಹತ್ರಾಸ್ ನಗರದಲ್ಲಿ 19 ವರ್ಷದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಮೇಲೆ ನಾಲ್ಕು ಮಂದಿ ಸವರ್ಣೀಯ ಯುವಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಆಕೆ...

Trending