Connect with us

ದಿನದ ಸುದ್ದಿ

#MeToo | ಅರ್ಜುನ್ ಸರ್ಜಾ ಆಪ್ತ ಸಂಬರಗಿ ವಿರುದ್ದ ಶೃತಿ ಹರಿಹರನ್ ಕೊಲೆ ಬೆದರಿಕೆ ಆರೋಪ

Published

on

ಸುದ್ದಿದಿನ, ಬೆಂಗಳೂರು : ಮೀಟೂ ಆಂದೋಲನಕ್ಕೆ ಭಾರೀ ಟ್ವಿಸ್ಟ್ ದೊರೆತಿದೆ, ನಟಿ ಶೃತಿ ಹರಿಹರನ್ ಗೆ ಕೊಲೆ ಬೆದರಿಕೆ ಒಡ್ಡಲಾಗಿದೆಯಂತೆ, ಫಿಲ್ಮ್ ಚೇಂಬರ್ ಹೊರಗಡೆ ಕೊಲೆ ಬೆದರಿಕೆ ಮಾಡಿದ್ದಾತೆ ಅಂತ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ನಿಂಬರಗಿ ನಟಿ ಶೃತಿ ಹರಿಹರನ್ ನಿಂದ ಗಂಭೀರ ಆರೋಪ ಮಾಡಿದ್ದಾರೆ ಶೃತಿಹರಿಹರನ್.

ಮಧ್ಯರಾತ್ರಿ 12.15 ಕ್ಕೆ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿದ ನಟಿ ಶೃತಿ ಹರಿಹರನ್ ಅವರು ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದರು. ತಮಿಳು ಚಿತ್ರೀಕರಣ ಸಂಬಂಧ ಇಂದು ಮುಂಜಾನೆ 6 ಗಂಟೆಯ ವಿಮಾನದಲ್ಲಿ ಚೆನ್ನೈ ತೆರಳಿದರು ನಟಿ ಶೃತಿ ಹರಿಹರನ್.

ಚೆನ್ನೈ ತೆರಳಬೇಕಿರೋ ಕಾರಣದಿಂದ ಮಧ್ಯರಾತ್ರಿಯೇ ಠಾಣೆಗೆ ದೌಡಾಯಿಸಿದ ಶೃತಿ ಹರಿಹರನ್ ಪ್ರಶಾಂತ್ ನಿಂಬರಗಿ ವಿರುದ್ದ ದೂರು ದಾಖಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಟಿ. ನರಸೀಪುರ | ಯುವ ಪೀಳಿಗೆಗೆ ‘ಮಹಾನಾಯಕ’ ಧಾರವಾಹಿ ಪ್ರೇರಣೆಯಾಗುತ್ತಿದೆ : ಪುರಸಭಾ ಸದಸ್ಯ ಎಲ್. ಮಂಜುನಾಥ್

Published

on

ಸುದ್ದಿದಿನ,ಟಿ. ನರಸೀಪುರ: ಯುವ ಪೀಳಿಗೆಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ‘ಮಹಾನಾಯಕ’ ಧಾರವಾಹಿ ಪ್ರೇರಣೆಯಾಗುತ್ತಿದೆ ಎಂದು 4ನೇ ವಾರ್ಡಿನ ಪುರಸಭಾ ಸದಸ್ಯ ಎಲ್. ಮಂಜುನಾಥ್ ತಿಳಿಸಿದರು.

ಪಟ್ಟಣದ ಭೈರಾಪುರ ಜೋಡಿ ರಸ್ತೆಯಲ್ಲಿ ಮಹಾನಾಯಕ ಧಾರವಾಹಿಯ ಫ್ಲೆಕ್ಸ್‍ನನ್ನ ಅಳವಡಿಸಿ ಪುಷ್ಪಾರ್ಚನೆ ಗೈದು ಮೊಂಬತ್ತಿಯನ್ನು ಬೆಳಗಿ ಶಾಲಾ ವಿದ್ಯಾರ್ಥಿಗಳಿಗೆ ಅಂಬೇಡ್ಕರ್‍ರವರ ಪುಸ್ತಕವನ್ನು ಉಚಿತವಾಗಿ ನೀಡುವುದರ ಮುಖಾಂತರ ಧಾರವಾಹಿಯ ಮಹತ್ವವನ್ನು ಸಾರುವ ಮಾತುಗಳನ್ನಾಡುತ್ತಾ, ಈ ಧಾರಾವಾಹಿ ಸಮಾಜದಲ್ಲಿ ನೋವುಂಡ ಶೋಷಿತ ಸಮುದಾಯಗಳು ಅನುಭವಿಸಿದ ನರಕಯಾತನೆಯನ್ನ ಬಾಬಾ ಸಾಹೇಬ್ ಸೇರಿದಂತೆ ಅವರ ಕುಟುಂಬ ವರ್ಗ ಪಟ್ಟಂತಹ ಪಾಡು, ಅದನ್ನು ಮೆಟ್ಟಿನಿಂತು ತಮ್ಮ ಜ್ಞಾನಾರ್ಜನೆಯ ಮೂಲಕ ಜಾತೀಯತೆ ಪಿಡುಗನ್ನು ತೊಡೆದು ಎಲ್ಲರೂ ಸರಿಸಮಾನರು ಎಂಬುದನ್ನು ಕಾನೂನಾತ್ಮಕವಾಗಿ ತಾವು ರಚಿಸಿದ ಸಂವಿಧಾನದಲ್ಲಿ ಅಳವಡಿಸಿ ಇಂದು ನಾವೆಲ್ಲರೂ ಶೈಕ್ಷಣಿಕ-ರಾಜಕೀಯ ಹಾಗೂ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗಿದೆ. ಪ್ರತಿಯೊಬ್ಬರ ಕಣ್ಣಲ್ಲೂ ನೀರೂರಿಸುವ ಮತ್ತು ಮೈನವಿರೇಳಿಸಿ ಸ್ಪೂರ್ಥಿಯಾಗುವ ಇಂತಹ ಧಾರಾವಾಹಿಯನ್ನು ನಿರ್ಮಿಸಿ ನಿರ್ದೇಶಿಸಿ ಇಡೀ ಭಾರತಕ್ಕೆ ಅಂಬೇಡ್ಕರ್‍ರವರ ಜೀವನ ಚರಿತ್ರೆಯನ್ನು ತಿಳಿಸಿಕೊಟ್ಟ ಮಹಾನರಿಗೆ ಕೋಟಿ ಕೋಟಿ ನಮನಗಳನ್ನ ಅರ್ಪಿಸುತ್ತೇವೆಂದರು.

ಅವರು ನೋವುಂಡು ತಮ್ಮ ಇಡೀ ಜೀವನವನ್ನ ತ್ಯಾಗ ಮಾಡಿ ಶೋಷಿತರಿಗೇ ತಮ್ಮ ಜೀವನವನ್ನು ಮೀಸಲಿಟ್ಟ ಇಂತಹ ಮಹಾನಾಯಕರ ಆದರ್ಶ ಎಲ್ಲರಿಗೂ ಸ್ಪೂರ್ತಿದಾಯಕವಾಗಲಿ. ವಿದ್ಯಾರ್ಥಿಗಳು ತಪ್ಪದೆ ವಾರದ 2 ದಿನ ಈ ಧಾರಾವಾಹಿಯನ್ನು ನೋಡಿ ಅವರಂತಯೇ ಹೆಚ್ಚು ಜ್ಞಾನಾಭಿವೃದ್ಧಿಗೆ ಗಮನ ನೀಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮಾಜಿ ಗ್ರಾ.ಪಂ. ಅಧ್ಯಕ್ಷ ಬಿ.ಎಲ್. ಮಹದೇವು, ಮುಖಂಡರುಗಳಾದ ಚಿಕ್ಕಲಿಂಗಯ್ಯ, ಮಹದೇವಯ್ಯ, ದಿಲೀಪ್, ರಾಜೇಂದ್ರ, ಪವನ್, ಹೇಮಂತ್‍ಕುಮಾರ್, ಮಹದೇವಮ್ಮ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ದೌರ್ಜನ್ಯ ಪ್ರಕರಣದಲ್ಲಿ ವ್ಯಕ್ತಿ ಸಾವು , ಜಿಲ್ಲಾಧಿಕಾರಿಗಳಿಂದ ಮೃತ ವ್ಯಕ್ತಿ ಮನೆಗೆ ಭೇಟಿ; ಸಾಂತ್ವನ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕು ಕೊಮಾರನಹಳ್ಳಿ ಗ್ರಾಮದ ಮಹಾಬಲಿ ಎಂಬ ವ್ಯಕ್ತಿಯು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಹೊಂದಿದ್ದು, ಇವರ ಮನೆಗೆ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಭೇಟಿ ನೀಡಿ ನೊಂದ ಪತ್ನಿ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಮೊದಲ ಪರಿಹಾರದ ಮೊತ್ತ ರೂ.4,12,500/- ಗಳ ಚೆಕ್‍ನ್ನು ಮೃತರ ಪೋಸ್ಟ್ ಮಾರ್ಟಂ ವರದಿ ಬಂದ ತಕ್ಷಣ ನೀಡಲಾಗುವುದು ಎಂದರು. ಈ ವೇಳೆ ಎಸಿ ಮಮತಾ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸೆ.27 ರಂದು ಕೆ-ಸೆಟ್ ಪರೀಕ್ಷೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯು ಸೆಪ್ಟೆಂಬರ್ 27 ರ ಭಾನುವಾರದಂದು ದಾವಣಗೆರೆ ನಗರದ 11 ಉಪ ಕೇಂದ್ರಗಳಲ್ಲಿ ನಡೆಯಲಿದೆ.

ಈಗಾಗಲೇ ಕೆ-ಸೆಟ್ ಅಂತರ್ಜಾಲದಲ್ಲಿ ಅಭ್ಯರ್ಥಿಗಳ ಸೂಚನೆಗಳನ್ನು ಮತ್ತು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರವನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಕೆ-ಸೆಟ್ ಅಂತರ್ಜಾಲ http://kset.uni-mysore.ac.in
ಇಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಭಾವಚಿತ್ರವಿರುವ ಮೂಲ ಗುರುತಿನ ಚೀಟಿ ()ಯನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗತಕ್ಕದ್ದು. ಯಾವುದೇ ಸಂದರ್ಭದಲ್ಲಿ ಅಭ್ಯರ್ಥಿಯು ಪ್ರವೇಶ ಪತ್ರವಿಲ್ಲದೆ ಬಂದರೆ ಅಂತಹ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ.

ಪರೀಕ್ಷಾ ಉಪ ಕೇಂದ್ರಗಳ ವಿವರ

ಎಸ್.ಬಿ.ಸಿ ಫಸ್ಟ್ ಗ್ರೇಡ್ ಕಾಲೇಜ್ ಫಾರ್ ವುಮೆನ್ (ಅಥಣಿ ಕಾಲೇಜು), ಬಿ.ಎಸ್.ಚನ್ನಬಸಪ್ಪ ಫಸ್ಟ್ ಗ್ರೇಡ್ ಕಾಲೇಜ್, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ(ಬಿಐeಟಿ), ಬಾಪೂಜಿ ಪಾಲಿಟೆಕ್ನಿಕ್ ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್(ಜಿ.ಎಫ್.ಜಿ.ಸಿ), ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು, ಎ.ವಿ.ಕಮಲಮ್ಮ ಕಾಲೇಜ್ ಫಾರ್ ವುಮೆನ್, ಎಂ.ಎಸ್.ಬಿ ಕಲಾ ಮತ್ತು ವಾಣಿಜ್ಯ ಕಾಲೇಜು, ಜಿ.ಎಂ.ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು, ದವನ್-ನೂತನ್ ಅಲೆಯನ್ಸ್ (ಡಿಎನ್‍ಎ), ನೂತನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್.

ಹೆಚ್ಚಿನ ಮಾಹಿತಿಗಾಗಿ http://kset.uni-mysore.ac.in ಸಂಪರ್ಕಿಸಬಹುದು. ಅಭ್ಯರ್ಥಿಗಳು ಪರೀಕ್ಷೆಯ ದಿನದಂದು ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 8 ರೊಳಗೆ ಹಾಜರಾಗಬೇಕು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು ಪ್ರತ್ಯೇಕ ನೀರಿನ ಬಾಟಲ್ ತರತಕ್ಕದ್ದು. ಮೊಬೈಲ್ ಮತ್ತು ಇನ್ನಿತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ದಾವಣಗೆರೆ ವಿವಿ ಯ ಕೆ-ಸೆಟ್ ನೋಡಲ್ ಅಧಿಕಾರಿ ಪ್ರೊ.ಜೆ.ಕೆ.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ20 mins ago

ಟಿ. ನರಸೀಪುರ | ಯುವ ಪೀಳಿಗೆಗೆ ‘ಮಹಾನಾಯಕ’ ಧಾರವಾಹಿ ಪ್ರೇರಣೆಯಾಗುತ್ತಿದೆ : ಪುರಸಭಾ ಸದಸ್ಯ ಎಲ್. ಮಂಜುನಾಥ್

ಸುದ್ದಿದಿನ,ಟಿ. ನರಸೀಪುರ: ಯುವ ಪೀಳಿಗೆಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ‘ಮಹಾನಾಯಕ’ ಧಾರವಾಹಿ ಪ್ರೇರಣೆಯಾಗುತ್ತಿದೆ ಎಂದು 4ನೇ ವಾರ್ಡಿನ ಪುರಸಭಾ ಸದಸ್ಯ...

ಲೈಫ್ ಸ್ಟೈಲ್37 mins ago

ಸಾವಯವ ಕೃಷಿಯಲ್ಲಿ ಸೈ ಎನಿಸಿಕೊಂಡ ‘ಶಂಕರೇಗೌಡ’..!

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೇವಗಳ್ಳಿ ಗ್ರಾಮದ ಶಂಕರೇಗೌಡ ಅವರು ಒಟ್ಟು 5 ಎಕರೆ ಜಮೀನನ್ನು ಹೊಂದಿರುತ್ತಾರೆ. ಆದರೆ ಇವರು ಪ್ರಾರಂಭದಲ್ಲಿ ವ್ಯವಸಾಯವನ್ನು ಮಾಡದೆ ತನ್ನ ಬಳಿ...

ದಿನದ ಸುದ್ದಿ52 mins ago

ಚನ್ನಗಿರಿ | ದೌರ್ಜನ್ಯ ಪ್ರಕರಣದಲ್ಲಿ ವ್ಯಕ್ತಿ ಸಾವು , ಜಿಲ್ಲಾಧಿಕಾರಿಗಳಿಂದ ಮೃತ ವ್ಯಕ್ತಿ ಮನೆಗೆ ಭೇಟಿ; ಸಾಂತ್ವನ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕು ಕೊಮಾರನಹಳ್ಳಿ ಗ್ರಾಮದ ಮಹಾಬಲಿ ಎಂಬ ವ್ಯಕ್ತಿಯು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಹೊಂದಿದ್ದು, ಇವರ ಮನೆಗೆ ಇಂದು ಜಿಲ್ಲಾಧಿಕಾರಿ ಮಹಾಂತೇಶ...

ದಿನದ ಸುದ್ದಿ1 hour ago

ಸೆ.27 ರಂದು ಕೆ-ಸೆಟ್ ಪರೀಕ್ಷೆ

ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯು ಸೆಪ್ಟೆಂಬರ್ 27 ರ ಭಾನುವಾರದಂದು ದಾವಣಗೆರೆ ನಗರದ 11 ಉಪ ಕೇಂದ್ರಗಳಲ್ಲಿ ನಡೆಯಲಿದೆ. ಈಗಾಗಲೇ ಕೆ-ಸೆಟ್ ಅಂತರ್ಜಾಲದಲ್ಲಿ...

ದಿನದ ಸುದ್ದಿ1 hour ago

ಭೂ ಸುಧಾರಣಾ ಕಾಯಿದೆ ತಿದ್ದುಪಡಿಯ ಹಿಂದೆ ಸಾವಿರಾರು ಕೋಟಿ ಹಣದ ಕಳ್ಳ ವ್ಯವಹಾರ ನಡೆದಿದೆ : ಸಿದ್ದರಾಮಯ್ಯ ಆಕ್ರೋಶ

ಸುದ್ದಿದಿನ, ಬೆಂಗಳೂರು: ಜಮೀನ್ದಾರಿ ಪದ್ಧತಿಗೆ ಅಂತ್ಯ ಹಾಡಬೇಕೆಂಬ ಉದ್ದೇಶದಿಂದ 1974ರಲ್ಲಿ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಉಳುವವನನ್ನೇ ಭೂಮಿಯ ಒಡೆಯ ಎಂದು ಘೋಷಣೆ ಮಾಡಲಾಯಿತು. ಈಗಿನ...

ದಿನದ ಸುದ್ದಿ7 hours ago

ತಜ್ಞವೈದ್ಯರು-ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞವೈದ್ಯರು/ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಒಟ್ಟು 12 ಹುದ್ದೆಗಳನ್ನು...

ದಿನದ ಸುದ್ದಿ8 hours ago

‘ರೈತರು ಭಯೋತ್ಪಾದಕ’ರೆಂದು ಟ್ವೀಟ್ ಮಾಡಿದ ನಟಿ ಕಂಗನಾ ವಿರುದ್ಧ ನೆಟ್ಟಿಗರ ಆಕ್ರೋಶ

ಸುದ್ದಿದಿನ,ಪಂಜಾಬ್: ಸೆಪ್ಟೆಂಬರ್ 20 ನೇ ತಾರೀಖು ಭಾನುವಾರದಂದು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ಕೃಷಿ -ಮಾರುಕಟ್ಟೆ ಮಸೂದೆಗಳ ವಿರುದ್ಧ ಪಂಜಾಬಿನಾದ್ಯಂತ ಪ್ರತಿಭಟನೆ ಶುರುವಾಗಿದೆ. ಈ ಪ್ರತಿಭಟನಾ ನಿರತರನ್ನು ಬಾಲಿವುಡ್ ನಟಿ...

ದಿನದ ಸುದ್ದಿ10 hours ago

ಸೆ. 27ರಂದು ಸಾಹಿತಿ ಪಾಪುಗುರು ಅವರ ಬಹು ನಿರೀಕ್ಷೆಯ ” ಸೂಜಿ ” ಕಾದಂಬರಿ ಲೋಕಾರ್ಪಣೆ

ಸುದ್ದಿದಿನ, ದಾವಣಗೆರೆ: ಬಿಡುಗಡೆಗೂ ಮುನ್ನ ಸಾಹಿತ್ಯ ವಲಯದಲ್ಲಿ ಸದ್ದಿಲ್ಲದೆ ಸಂಚಲನ ಮೂಡಿಸಿ ಮೊದಲ ಮುದ್ರಣದ ಪ್ರತಿಗಳು ಓದುಗರಿಂದ ಮುಂಗಡ ಆನ್ ಲೈನ್ ಬುಕ್ಕಿಂಗ್ ಆಗಿ ಎರಡನೇ ಮುದ್ರಣಕ್ಕೆ...

ದಿನದ ಸುದ್ದಿ22 hours ago

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ : ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆಯ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಿ.ಬಿ ರಸ್ತೆಯ ಅರುಣ...

ದಿನದ ಸುದ್ದಿ24 hours ago

ರಾಜ್ಯದಲ್ಲಿಂದು 8191 ಕೊರೋನಾ ಕೇಸ್ ಗಳು : ಜಿಲ್ಲಾವಾರು ವರದಿ

ಸುದ್ದಿದಿನ, ಬೆಂಗಳೂರು : ರಾಜ್ಯದಲ್ಲಿಂದು 8,191 ಕೊರೋನಾ ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಜಿಲ್ಲಾವಾರು ಕೊರೋನಾ ಕೇಸ್ ಗಳ ವರದಿ ಈ ಕೆಳಕಂಡಂತಿದೆ. ಬಾಗಲಕೋಟೆ-123, ಬಳ್ಳಾರಿ-196, ಬೆಳಗಾವಿ-171,...

Trending