Connect with us

ದಿನದ ಸುದ್ದಿ

ಕೊಡಗು ಪ್ರವಾಹ : ಸಂತ್ರಸ್ತರಿಗೆ ಗೃಹ ಬಳಕೆ ವಸ್ತುಗಳ ಕಿಟ್ ವಿತರಣೆ

Published

on

ಸುದ್ದಿದಿನ,ಮಡಿಕೇರಿ : ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದ ಸಂತ್ರಸ್ತ 100 ಕುಟುಂಬಗಳಿಗೆ ವಸಾಯಿ ತಾಲ್ಲೂಕು ಹೊಟೇಲ್ ಅಸೋಷಿಯೇಷನ್ ಮುಂಬೈ ಮತ್ತು ವಿ.ಕೆ. ಕಂಪನಿ ವತಿಯಿಂದ ನಗರದ ಕೋಟೆ ಆವರಣದಲ್ಲಿರುವ ಪರಿಹಾರ ಕೇಂದ್ರದಲ್ಲಿ ಗೃಹ ಬಳಕೆ ವಸ್ತುಗಳಾದ ಗ್ಯಾಸ್ ಸ್ಟೌವ್, ಮಿಕ್ಸಿ ಹಾಗೂ ಪಾತ್ರೆಗಳ ಕಿಟ್‍ಗಳನ್ನು ಶುಕ್ರವಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ, ತರಬೇತಿ ನ್ಯಾಯಾಧೀಶರಾದ ಮಹಾಲಕ್ಷ್ಮೀ, ಮಲ್ಲಿಕಾರ್ಜುನ, ವಸಾಯಿ ತಾಲ್ಲೂಕು ಹೊಟೇಲ್ ಅಸೋಷಿಯಶನ್ ಅಧ್ಯಕ್ಷರಾದ ಪ್ರಕಾಶ ಹೆಗಡೆ, ಶಂಕರ ಶೆಟ್ಟಿ, ನಾಗರಾಜ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಸುಜಿತ್ ರೈ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್.ಜಯಪ್ಪ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ತಜ್ಞವೈದ್ಯರು-ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞವೈದ್ಯರು/ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಸರ್ಕಾರದ ಆದೇಶದಂತೆ ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞವೈದ್ಯರ ಹುದ್ದೆಗೆ ಎದುರು ಎಂ.ಬಿ.ಬಿ.ಎಸ್ ವೈದ್ಯರನ್ನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗೆ ಎಂ.ಬಿ.ಬಿ.ಎಸ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಲು ಸೆ.24 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿಗಳ ಕಚೇರಿ ದಾವಣಗೆರೆ ಇಲ್ಲಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ ಕರೆಯಲಾಗಿದೆ.

ಅಭ್ಯರ್ಥಿಗಳು ಸೆ.23 ರಂದು ಬೆಳಿಗ್ಗೆ 10.30 ರಿಂದ ಮದ್ಯಾಹ್ನ 01.30 ರೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಹಾಜರಾಗಿ ಸಂಬಂಧಪಟ್ಟ ವಿಭಾಗದಲ್ಲಿ ವಿದ್ಯಾರ್ಹತೆ ಮತ್ತು ಮೀಸಲಾತಿಯ ಅರ್ಹತಾ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿ, ಅರ್ಹತಾ ದಾಖಲೆಗಳ ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ದಾವಣಗೆರೆ ಜಿಲ್ಲೆ,ಎಸ್.ಎಸ್.ಹೈಟೆಕ್ ಆಸ್ಪತ್ರೆ ಹತ್ತಿರ, ಶ್ರೀರಾಮನಗರ ರಸ್ತೆ, ಎನ್.ಸಿ.ಸಿ ಕ್ಯಾಂಪ್ ಪಕ್ಕ, ದಾವಣಗೆರೆ-577005
ದೂ.ಸಂ : 08192 237833 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ರೈತರು ಭಯೋತ್ಪಾದಕ’ರೆಂದು ಟ್ವೀಟ್ ಮಾಡಿದ ನಟಿ ಕಂಗನಾ ವಿರುದ್ಧ ನೆಟ್ಟಿಗರ ಆಕ್ರೋಶ

Published

on

ಸುದ್ದಿದಿನ,ಪಂಜಾಬ್: ಸೆಪ್ಟೆಂಬರ್ 20 ನೇ ತಾರೀಖು ಭಾನುವಾರದಂದು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ಕೃಷಿ -ಮಾರುಕಟ್ಟೆ ಮಸೂದೆಗಳ ವಿರುದ್ಧ ಪಂಜಾಬಿನಾದ್ಯಂತ ಪ್ರತಿಭಟನೆ ಶುರುವಾಗಿದೆ. ಈ ಪ್ರತಿಭಟನಾ ನಿರತರನ್ನು ಬಾಲಿವುಡ್ ನಟಿ ಕಂಗನಾ ರಾನಾವತ್ ಸಿಎಎ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದ, ಆಗ ಗಲಭೆಗೆ ಕಾರಣರಾದ ಇವರು ಭಯೋತ್ಪಾದಕರು ಎಂದು ಟ್ವೀಟ್‌ ಮಾಡುವುದರ ಮೂಲಕ ದೇಶದ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ರಾಜ್ಯಸಭೆಯಲ್ಲಿ ಮಸೂದೆಗಳು ಅಂಗೀಕರಿಸಲ್ಪಟ್ಟ ನಂತರ, ರೈತರನ್ನುದ್ದೇಶಿಸಿ ಪ್ರಧಾನಿ ಮೋದಿ ಇಂಗ್ಲಿಷ್, ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ನಾಲ್ಕು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟ್ವೀಟ್ ರೀಟ್ವೀಟ್ ಮಾಡುತ್ತಾ ಕಂಗಾನಾ‌ ರಾನಾವತ್, ಈ ಹಿಂದಡ ಸಿಎಎಯ ಬಗ್ಗೆ ತಪ್ಪುತಪ್ಪಾಗಿ ಮಾಹಿತಿ ಹರಡಿ ವದಂತಿಗಳನ್ನು ಹಬ್ಬಿಸಿದ್ದ ಜನರು ಈಗ ರೈತರ ಮಸೂದೆಯ ಬಗ್ಗೆ ತಪ್ಪು ಮಾಹಿತಿಯನ್ನು ಪ್ರತಿಭಟನೆಯ ಮೂಲಕ ಹರಡುತ್ತಿದ್ದು, ದೇಶದಲ್ಲಿ ಭಯೋತ್ಪಾದನೆಗೆ ಕಾರಣರಾಗುತ್ತಿದ್ದಾರೆ. ಇವರು ಭಯೋತ್ಪಾದಕರು ಎಂದು ಕಂಗನಾ ಟ್ವೀಟ್‌ ಮಾಡಿದ್ದರು.

ರಾಜ್ಯಸಭೆಯ ಭಾನುವಾರದ ಅಧಿವೇಶನದಲ್ಲಿ ಕೃಷಿ ಮಸೂದೆಯ ವಿರುದ್ಧ ವಿಪಕ್ಷಗಳು ಭಾರಿ ಪತ್ರಿಭಟನೆ ನಡೆಸಿದವು, ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿಪಕ್ಷಗಳ ಎಂಟು ರಾಜ್ಯಸಭಾ ಸದಸ್ಯರನ್ನು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯನಾಯ್ಡು ಅಮಾನತುಗೊಳಿಸಿದ್ದಾರೆ.

ಪಂಜಾಬ್‌ ಒಳಗೊಂಡಂತೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿವೆ. ಪಂಜಾಬ್‌ನಲ್ಲಿ ಕೃಷಿ ಮಸೂದೆಯನ್ನು ವಿರೋಧಿಸಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರತಿಭಟನೆಯ ಕಾವು ಹೆಚ್ಚಿಸಿದೆ.

ಟ್ವೀಟ್ ವಿರೋಧಿಸಿ ನೆಟ್ಟಿಗರ ಆಕ್ರೋಶ

ನಟಿ ಕಂಗನಾರ ರೈತ ವಿರೋಧಿ ಟ್ವೀಟ್ ವಿರೋಧಿಸಿ ಸಾಮಾಜಿಕ‌ ಜಾಲತಾಣದಲ್ಲಿ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಗನಾರ ಟ್ವೀಟ್ ಅನ್ನು ಬೆಂಬಲಿಸಿ ರೀ ಟ್ವೀಟ್ ಮಾಡಿರುವವರಿಗೂ ನೆಟ್ಟಿಗರು ಕೃಷಿ ಮಸೂದೆ ಕೆಡಕುಗಳ ಬಗ್ಗೆ ತಿಳಿ ಹೇಳಿದ್ದಾರೆ.

ಲಿಂಕ್ ಗಳು

Posted by ಮಾರಪ್ಪಣ್ಣನ ಅಂಗಡಿ on Monday, September 21, 2020

ನನ್ನ ಊಹೆ ನಿಜವಾಯಿತು. ಬಿಜೆಪಿ ಸೇರಿದವರು, ಬಾಹ್ಯವಾಗಿ ಬಿಜೆಪಿ ಬೆಂಬಲಿಸುವವರು ಬಹುತೇಕರು ಮೆಂಟಲ್ ಗಳೇ ಆಗಿರುತ್ತಾರೆ. ಹಾಗಾಗಿಯೇ…

Posted by Dinesh Kumar Dinoo on Monday, September 21, 2020

https://m.facebook.com/story.php?story_fbid=3179835338793062&id=100002998803316

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸೆ. 27ರಂದು ಸಾಹಿತಿ ಪಾಪುಗುರು ಅವರ ಬಹು ನಿರೀಕ್ಷೆಯ ” ಸೂಜಿ ” ಕಾದಂಬರಿ ಲೋಕಾರ್ಪಣೆ

Published

on

ಸುದ್ದಿದಿನ, ದಾವಣಗೆರೆ: ಬಿಡುಗಡೆಗೂ ಮುನ್ನ ಸಾಹಿತ್ಯ ವಲಯದಲ್ಲಿ ಸದ್ದಿಲ್ಲದೆ ಸಂಚಲನ ಮೂಡಿಸಿ ಮೊದಲ ಮುದ್ರಣದ ಪ್ರತಿಗಳು ಓದುಗರಿಂದ ಮುಂಗಡ ಆನ್ ಲೈನ್ ಬುಕ್ಕಿಂಗ್ ಆಗಿ ಎರಡನೇ ಮುದ್ರಣಕ್ಕೆ ಸಿದ್ಧಗೊಂಡಿರುವ, ಪ್ರಬುದ್ಧ ಕವಿ, ಸಾಹಿತಿ ಶ್ರೀ ಪಾಪು ಗುರು, ದಾವಣಗೆರೆ ಅವರ ಬಹು ನಿರೀಕ್ಷೆಯ ಕುತೂಹಲಕಾರಿ ” ಸೂಜಿ ” ಕಾದಂಬರಿಯ ಲೋಕಾರ್ಪಣೆ ಸಮಾರಂಭ ದಿನಾಂಕ : 27.09.2020 ರ ಭಾನುವಾರ ಬೆಳಿಗ್ಗೆ 10.30ಕ್ಕೆ ದಾವಣಗೆರೆಯ ವಿದ್ಯಾ ನಗರದ ಕುವೆಂಪು ಕನ್ನಡ ಭವನದಲ್ಲಿ ಜರುಗಲಿದೆ.

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಿ. ಶಿವಲಿಂಗಪ್ಪ ಸಾಹಿತ್ಯ ಬಳಗ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು, ವಾಗ್ಮಿಗಳಾದ ವೈ. ಎಸ್. ವಿ. ದತ್ತಾರವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯಕ್ಷರಾದ ಡಾ. ಹೆಚ್. ಎಸ್ ಮಂಜುನಾಥ ಕುರ್ಕಿ ಉದ್ಘಾಟಿಸುವರು.

ನಿವೃತ್ತ ಪ್ರಾಚಾರ್ಯರು, ಸಾಹಿತಿ ಹಾಗೂ ಚಿಂತಕರಾದ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ,ಅಧ್ಯಕ್ಷತೆ ವಹಿಸುವವರು.ಪ್ರಗತಿ ಪರ ಚಿಂತಕರು, ವಿಮರ್ಶಕರು, ಸಾಹಿತಿಗಳಾದ ಡಾ ಎ. ಬಿ. ರಾಮಚಂದ್ರಪ್ಪ ಕಾದಂಬರಿ ” ಸೂಜಿ ” ಯ ಅವಲೋಕನ ಮಾಡುವರು.ವಿಶೇಷ ಆಹ್ವಾನಿತರಾಗಿ ರೈತ ಮುಖಂಡರು ಹಾಗೂ ಸಾಹಿತ್ಯ ಪ್ರೇಮಿಗಳಾದ ತೇಜಸ್ವಿ ಪಟೇಲ್ ಪಾಲ್ಗೊಳ್ಳುವವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ4 hours ago

ತಜ್ಞವೈದ್ಯರು-ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞವೈದ್ಯರು/ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಒಟ್ಟು 12 ಹುದ್ದೆಗಳನ್ನು...

ದಿನದ ಸುದ್ದಿ4 hours ago

‘ರೈತರು ಭಯೋತ್ಪಾದಕ’ರೆಂದು ಟ್ವೀಟ್ ಮಾಡಿದ ನಟಿ ಕಂಗನಾ ವಿರುದ್ಧ ನೆಟ್ಟಿಗರ ಆಕ್ರೋಶ

ಸುದ್ದಿದಿನ,ಪಂಜಾಬ್: ಸೆಪ್ಟೆಂಬರ್ 20 ನೇ ತಾರೀಖು ಭಾನುವಾರದಂದು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ಕೃಷಿ -ಮಾರುಕಟ್ಟೆ ಮಸೂದೆಗಳ ವಿರುದ್ಧ ಪಂಜಾಬಿನಾದ್ಯಂತ ಪ್ರತಿಭಟನೆ ಶುರುವಾಗಿದೆ. ಈ ಪ್ರತಿಭಟನಾ ನಿರತರನ್ನು ಬಾಲಿವುಡ್ ನಟಿ...

ದಿನದ ಸುದ್ದಿ6 hours ago

ಸೆ. 27ರಂದು ಸಾಹಿತಿ ಪಾಪುಗುರು ಅವರ ಬಹು ನಿರೀಕ್ಷೆಯ ” ಸೂಜಿ ” ಕಾದಂಬರಿ ಲೋಕಾರ್ಪಣೆ

ಸುದ್ದಿದಿನ, ದಾವಣಗೆರೆ: ಬಿಡುಗಡೆಗೂ ಮುನ್ನ ಸಾಹಿತ್ಯ ವಲಯದಲ್ಲಿ ಸದ್ದಿಲ್ಲದೆ ಸಂಚಲನ ಮೂಡಿಸಿ ಮೊದಲ ಮುದ್ರಣದ ಪ್ರತಿಗಳು ಓದುಗರಿಂದ ಮುಂಗಡ ಆನ್ ಲೈನ್ ಬುಕ್ಕಿಂಗ್ ಆಗಿ ಎರಡನೇ ಮುದ್ರಣಕ್ಕೆ...

ದಿನದ ಸುದ್ದಿ19 hours ago

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ : ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆಯ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಿ.ಬಿ ರಸ್ತೆಯ ಅರುಣ...

ದಿನದ ಸುದ್ದಿ20 hours ago

ರಾಜ್ಯದಲ್ಲಿಂದು 8191 ಕೊರೋನಾ ಕೇಸ್ ಗಳು : ಜಿಲ್ಲಾವಾರು ವರದಿ

ಸುದ್ದಿದಿನ, ಬೆಂಗಳೂರು : ರಾಜ್ಯದಲ್ಲಿಂದು 8,191 ಕೊರೋನಾ ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಜಿಲ್ಲಾವಾರು ಕೊರೋನಾ ಕೇಸ್ ಗಳ ವರದಿ ಈ ಕೆಳಕಂಡಂತಿದೆ. ಬಾಗಲಕೋಟೆ-123, ಬಳ್ಳಾರಿ-196, ಬೆಳಗಾವಿ-171,...

ದಿನದ ಸುದ್ದಿ2 days ago

ಬುದ್ದನ ಬಗ್ಗೆ ಸತ್ಯಗೊತ್ತಿದ್ದರೂ ಎಲ್ಲಿಯವರೆಗೂ ಸುಳ್ಳನ್ನ ಓದುವಿರಿ..?

ಬುದ್ದ ಎಂದಾಕ್ಷಣ ನೆನಪಿಗೆ ಬರುವುದು ನಾಲ್ಕು ಸನ್ನಿವೇಶಗಳನ್ನು ಮುದುಕ, ರೋಗಿ, ಸನ್ಯಾಸಿ ಮತ್ತು ಶವಗಳನ್ನು ನೋಡಿ ರಾಜ್ಯ ತ್ಯಜಿಸಿದ, ಹೆಂಡತಿ ಮತ್ತು ಮಗು ರಾಹುಲನನ್ನು ರಾತ್ರಿಯೇ ಬಿಟ್ಟು...

ದಿನದ ಸುದ್ದಿ3 days ago

ರಾಜ್ಯ ಬಿಜೆಪಿ ಸರ್ಕಾರ ಇನ್ನಷ್ಟು ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡುವುದು ನಿಶ್ಚಿತ : ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಇಂದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಮೇಶ್ ಬಾಬು ಅವರನ್ನು...

ದಿನದ ಸುದ್ದಿ3 days ago

ಹವಾಮಾನ ಮುನ್ಸೂಚನೆ; ರೆಡ್ ಅಲರ್ಟ್ ಘೋಷಣೆ..!

ಸುದ್ದಿದಿನ,ಮಡಿಕೇರಿ : ಕೊಡಗು ಜಿಲ್ಲೆ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆ ಹೆಚ್ಚಾಗುವ ಸಂಭವವಿದ್ದು, ಜಿಲ್ಲೆಯಲ್ಲಿ ವ್ಯಾಪಕವಾಗಿ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಸೆಪ್ಟೆಂಬರ್, 21...

ದಿನದ ಸುದ್ದಿ3 days ago

ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರಗಳು ಇಡಿ, ಐಟಿ ಮತ್ತು ಪಕ್ಷದ ಗಮನಕ್ಕೆ ಬಂದಿಲ್ಲವಾ..? : ಶಂಕರ್ ಬಿದರಿ ಸರಣಿ ಟ್ವೀಟ್

ಸುದ್ದಿದಿನ,ಬೆಂಗಳೂರು: ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತೊಗೆಯಿರಿ ಎಂದು ಬಿಜೆಪಿ ವರಿಷ್ಠ ರಿಗೆ ಸರಣಿ ಟ್ವೀಟ್ ಮಾಡುವ ಮೂಲಕ ಮಾಜಿ ಪೋಲಿಸ್ ಮಹಾ ನಿರ್ದೇಶಕ...

ದಿನದ ಸುದ್ದಿ3 days ago

ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ಸಭೆ | ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಕ್ರಮ

ಸುದ್ದಿದಿನ,ದಾವಣಗೆರೆ :ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು....

Trending