Connect with us

ದಿನದ ಸುದ್ದಿ

ದಾವಣಗೆರೆ | ಗಣೇಶ ವಿಸರ್ಜನೆಗೆ ಸ್ಥಳ ನಿಗದಿ ಹಾಗೂ ಟ್ರಾಕ್ಟರ್ ವ್ಯವಸ್ಥೆ

Published

on

ಸುದ್ದಿದಿನ,ದಾವಣಗೆರೆ : ಸೆಪ್ಟಂಬರ್ 02, 04 ಮತ್ತು 06 ರಂದು ಶ್ರೀ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲು ತಾತ್ಕಾಲಿಕವಾಗಿ ಕೆಳಕಂಡ ಸ್ಥಳಗಳಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಿಂದಟ್ರ್ಯಾಕ್ಟರ್ ಟ್ರೇಲರ್‍ಗಳನ್ನುನಿಲುಗಡೆಗೊಳಿಸಲಾಗುವುದು.

ಬಾತಿ ಕೆರೆ ಹಾಗೂ ಹದಡಿ ರಸ್ತೆ, ಭದ್ರಾ ಚಾನಲ್ ಬಳಿ ಕೃತಕ ಹೊಂಡಗಳನ್ನು ನಿರ್ಮಿಸಿರಲಾಗಿರುತ್ತದೆ. ಈ ಸ್ಥಳಗಳಲ್ಲಿ ಮಾತ್ರ ಶ್ರೀ ಗಣೇಶ ಮೂರ್ತಿಗಳನ್ನು ವಿಸರ್ಜಿಸಿ ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯ ತಡೆಯುವಲ್ಲಿ ಮಹಾನಗರಪಾಲಿಕೆಯೊಂದಿಗೆ ಸಹಕರಿಸಲು ತಿಳಿಸಲಾಗಿದೆ.

ಟ್ರ್ಯಾಕ್ಟರ್ ಟ್ರೇಲರ್‍ಗಳನ್ನು ನಿಲುಗಡೆಗೊಳಿಸುವ ಸ್ಥಳಗಳು

ವೆಂಕಟೇಶ್ವರ ವೃತ್ತ, ಬೇತೂರು ರಸ್ತೆ, ಬಂಬೂ ಬಜಾರ್ (ಗಣೇಶ ಹೋಟೆಲ್ ಹತ್ತಿರ), ಹಗೆದಿಬ್ಬ ವೃತ್ತ, ದುರ್ಗಾಂಬಿಕ ದೇವಸ್ಥಾನ (ಶಿವಾಜಿ ವೃತ್ತ), ಹೊಂಡದ ವೃತ್ತ, ಬಸವೇಶ್ವರ ವೃತ್ತ ಕಾಯಿಪೇಟೆ, ಕುರುಬರ ಕೇರಿ, ಡಾಂಗೆ ಪಾರ್ಕ್, ರಾಮ್ ಅಂಡ್ ಕೋ ಸರ್ಕಲ್(ಗಣೇಶ ದೇವಸ್ಥಾನ ಹತ್ತಿರ) ಬಾಪೂಜಿ ಶಾಲೆ, ಆಂಜನೇಯ ದೇವಸ್ಥಾನ, ಆಂಜನೇಯ ಬಡಾವಣೆ, ಈಶ್ವರ ಪಾರ್ವತಿ ದೇವಸ್ಥಾನ, ವಿದ್ಯಾನಗರ, 3ನೇ ಮುಖ್ಯ ರಸ್ತೆ, ವಿನೋಬನಗರ, ವಿಠ್ಠಲ ಮಂದಿರ, ಮಹಾರಾಜ ಪೇಟೆ, ಅವರಗೆರೆ, ಗುಂಡಿ ಮಹಾದೇವಪ್ಪ ಸರ್ಕಲ್, ದುರ್ಗಾಂಬಿಕ ದೇವಸ್ಥಾನ, ನಿಟುವಳ್ಳಿ, ಹೆಚ್.ಕೆ.ಆರ್. ಸರ್ಕಲ್, ಸಂಜೀವಿನಿ ಆಂಜನೇಯ ದೇವಸ್ಥಾನ, ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತ, ಮೈಲಾರಲಿಂಗೇಶ್ವರ ದೇವಸ್ಥಾನ, ಕೊಂಡಜ್ಜಿ ರಸ್ತೆ (ಶಿಬಾರ), ಬನ್ನಿಮರದ ಹತ್ತಿರ ರಿಂಗ್ ರಸ್ತೆ, ಎಸ್.ಎಸ್ ಲೇಔಟ್, ಜಯದೇವ ವೃತ್ತ, ಗಣೇಶ ದೇವಸ್ಥಾನ ಹತ್ತಿರ, ಬಕ್ಕೇಶ್ವರ ಸ್ಕೂಲ್ ಮುಂಭಾಗ, ಎಂ.ಸಿ.ಸಿ ಎ ಬ್ಲಾಕ್, ಪಂಚಮುಖಿ ಆಂಜನೇಯ ದೇವಸ್ಥಾನ, ಸರಸ್ವತಿ ಬಡಾವಣೆ, ಕೋರ್ಟ್ ಹಿಂಭಾಗ, ದೇವರಾಜ ಅರಸ್ ಬಡಾವಣೆ, ಬಾಪೂಜಿ ಬ್ಯಾಂಕ್ ಹತ್ತಿರ, ಆಂಜನೇಯ ಬಡಾವಣೆ ಬಿ.ಐ.ಇ.ಟಿ ರಸ್ತೆ, ಡಿ.ಸಿ.ಎಂ ಲೇಔಟ್ ಸರ್ಕಲ್ ಹತ್ತಿರ, ಹಳೇ ಕುಂದುವಾಡ, ಹಾಸಬಾವಿ ವೃತ್ತ, ಶ್ಯಾಮನೂರು ಈ ಸ್ಥಳಗಳಲ್ಲಿ ಗಣೇಶ ವಿಸರ್ಜನೆಗೆ ಟ್ಯಾಕ್ಟ್ರರ್ ಟ್ರೇಲರ್‍ಗಳನ್ನು ನಿಲುಗಡೆಗೊಳಿಸಲಾಗುವುದು.

ಸಾರ್ವಜನಿಕ/ ಖಾಸಗಿ ಬಾವಿ/ ಕೆರೆ/ ಕಾಲುವೆ/ ಹಳ್ಳ/ ಕೊಳ್ಳಗಳಲ್ಲಿ ಯಾವುದೇ ಕಾರಣಕ್ಕೂ ವಿಸರ್ಜನೆ ಮಾಡುವಂತಿಲ್ಲ ಇಂತಹ ಪ್ರಕರಣಗಳು ಕಂಡಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

24 ಗಂಟೆಯಲ್ಲಿ ದಾಖಲಾದ ಕೊರೋನಾ ಕೇಸ್ ಗಳು ಎಷ್ಟು ಗೊತ್ತಾ..!?

Published

on

ಸುದ್ದಿದಿನ ಡೆಸ್ಕ್: ದೇಶದಲ್ಲಿ ಕೊರೋನಾ ಸ್ಫೋಟಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಹೊಸದಾಗಿ 64,399 ಪ್ರಕರಣಗಳು ದಾಖಲಾಗಿದ್ದು, 861 ಜನ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ, ದೇಶದಲ್ಲಿ ಒಟ್ಟು ಕೊರೋನಾ ವೈರಸ್ ಪ್ರಕರಣಗಳು ಈಗ 21,53,011 ಆಗಿದೆ. ಇನ್ನು ದೇಶದಲ್ಲಿ ಒಟ್ಟು 14,80,885 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈಗ ಒಟ್ಟು 6,28,747 ಸಕ್ರಿಯ ಪ್ರಕರಣಗಳಿವೆ. ಒಟ್ಟು 43,379 ಮಂದಿ ಸಾವನ್ನಪ್ಪಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊರೋನಾದಿಂದ ಮೃತಪಟ್ಟವರ ಉಚಿತ ಶವಸಂಸ್ಕಾರ ಮಾಡೋ ‘ ಮರ್ಸಿ‌ಏಂಜಲ್ಸ್’..!

Published

on

ಸುದ್ದಿದಿನ,ಬೆಂಗಳೂರು: ಹಳೇ ಗೆಳೆಯರ ತಂಡವೊಂದು ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರವನ್ನ ಉಚಿತವಾಗಿ ನೆರವೇರಿಸಲು ಮುಂದಾಗಿದ್ದಾರೆ. ಐಟಿಬಿಟಿ, ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಗೆಳೆಯರ ಬಳಗವು ಮರ್ಸಿ ಏಂಜಲ್ಸ್ ಎಂಬ ಹೆಸರಿನ ತಂಡವನ್ನ ಕಟ್ಟಿಕೊಂಡಿ 300ಕ್ಕೂ ಹೆಚ್ಚು ಸೋಂಕಿತರ ಶವಸಂಸ್ಕಾರ ನೆರವೇರಿಸಿದ್ದಾರೆ.

ಕೊವಿಡ್ ಭಯದ ಹಿನ್ನೆಲೆಯಲ್ಲಿ ಮೃತ ಸೋಂಕಿತರ ಶವಸಂಸ್ಕಾರಕ್ಕೂ ಸಂಬಂಧಿಕರು ಬರಲು ಹಿಂದೆಮುಂದೆ ಯೋಚಿಸುವ ಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲಿ ಈ ಸ್ನೇಹಿತರ ತಂಡವು ಆಸ್ಪತ್ರೆ, ಆ್ಯಂಬುಲೆನ್ಸ್ ಸಿಬ್ಬಂದಿಯಿಂದ ಮಾಹಿತಿ ಪಡೆದು ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಸೋಂಕಿತರ  ಅಂತ್ಯ ಸಂಸ್ಕಾರ ನೆರವೇರಿಸುತ್ತಿರುವ ಗೆಳೆಯರು ಕೋವಿಡ್ ಪ್ರೋಟೋಕಾಲ್ ಪ್ರಕಾರ ಎಲ್ಲಾ ಮುನ್ಬಚ್ಚರಿಕಾ ಕ್ರಮ ಹಾಗೂ ತಜ್ಙರ ಮಾರ್ಗದರ್ಶನದಲ್ಲೇ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಇದಲ್ಲದೆ, ಶವ ಸಂಸ್ಕಾರದ ವೆಚ್ಚವನ್ನೂ ಇವರೇ ಭರಿಸುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭೋರ್ಗರೆದು ಹರಿಯುತಿದೆ ಗಗನ ಚುಕ್ಕಿ‌ ಜಲಪಾತ : ವಿಷಾದದ ಸಂಗತಿಯೆಂದರೆ..!?

Published

on

ಸುದ್ದಿದಿನ,ಮಂಡ್ಯ: ಕರ್ನಾಟಕದಲ್ಲಿ ಮಾನ್ಸೂನ್ ಗರಿಗೆದರಿದ್ದು ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಜೊತೆಗೆ ಪ್ರಮುಖ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು ಕೆಲ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಕೆಲವು ದಿನಗಳಿಂದ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೆ ಆರ್ ಎಸ್ ಮತ್ತು ಕಬಿನಿ ಡ್ಯಾಮ್​ಗಳಿಗೆ ಒಳ ಹರಿವು ಹೆಚ್ಚಾಗಿದೆ. ಡ್ಯಾಮ್​ಗಳಿಂದ ನೀರನ್ನು ಹೊರಬಿಡುತ್ತಿದ್ದು ಗಗನಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ. ಜೊತೆಗೆ ಸಾವಿರಾರು ಅಡಿ ಮೇಲಿಂದ ನೀರು ಧುಮ್ಮಿಕ್ಕುತ್ತಿರುವುದರಿಂದ ಹಾಲ್ನೊರೆಯ ಜಲಪಾತದಂತೆ ಗಗನಚುಕ್ಕಿ ಕಂಗೊಳಿಸುತ್ತಿದೆ.

ಕೆಲವು ದಿನಗಳಿಂದ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೆ ಆರ್ ಎಸ್ ಮತ್ತು ಕಬಿನಿ ಡ್ಯಾಮ್​ಗಳಿಗೆ ಒಳ ಹರಿವು ಹೆಚ್ಚಾಗಿದೆ. ಡ್ಯಾಮ್​ಗಳಿಂದ ನೀರನ್ನು ಹೊರಬಿಡುತ್ತಿದ್ದು ಗಗನಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ. ಜೊತೆಗೆ ಸಾವಿರಾರು ಅಡಿ ಮೇಲಿಂದ ನೀರು ಧುಮ್ಮಿಕ್ಕುತ್ತಿರುವುದರಿಂದ ಹಾಲ್ನೊರೆಯ ಜಲಪಾತದಂತೆ ಗಗನಚುಕ್ಕಿ ಕಂಗೊಳಿಸುತ್ತಿದೆ.

ಈ ರುದ್ರರಮಣೀಯ ದೃಶ್ಯಾವಳಿಗಳು ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿದೆ. ಪ್ರತಿವರ್ಷವೂ ಈ ವೈಭವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಸೋಂಕಿನಿಂದಾಗಿ ಪ್ರವಾಸಿಗರು ಮನೆಬಿಟ್ಟು ಹೊರಬರದೆ ಇರುವುದರಿಂದ ಗಗನಚುಕ್ಕಿ ಜಲಪಾತ ಪ್ರವಾಸಿಗರಿಲ್ಲದೆ ಬಣಗುಡುತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending