Connect with us

ದಿನದ ಸುದ್ದಿ

ದೆಹಲಿ‌ ಸಿಎಂ ಅರವಿಂದ್ ಕೇಜ್ರಿವಾಲರನ್ನು ಅವಹೇಳಿಸಿ ಶೂ ಖರೀದಿಸಲು ಹಣ ಕಳಿಸಿದ ಇಂಜಿನಿಯರ್ ಗೆ ಅವರು ಕೊಟ್ಟ ಉತ್ತರ..! : ಮಿಸ್ ಮಾಡ್ದೆ ಓದಿ

Published

on

  • ಮೂಲ : ಮಲಯಾಳ, ಕನ್ನಡಕ್ಕೆ: ರಶೀದ್ ಅಬ್ದುಲ್ ಹಮೀದ್ (HA ) ಕಕ್ಕಿಂಜೆ

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರನ್ನು ಅವಹೇಳಿಸಿ ಅವರಿಗೆ ಶೂ ಖರೀದಿಸಲು 364 ರೂ ಕಳಿಸಿ ಫೇಸ್ಬುಕ್ ಪೋಸ್ಟ್ ಮಾಡಿದ ಇಂಜಿನಿಯರ್ ಗೆ ಕೇಜ್ರಿವಾಲರು ನೀಡಿದ ಉತ್ತರ.

ಪ್ರಿಯ ಇಂಜಿನಿಯರ್ ಗೆಳೆಯಾ,

“ತಾವು ಕಳಿಸಿದ ಹಣ ತಲುಪಿದೆ. ಅದರಲ್ಲಿ ಒಂದು ಜೊತೆ ಶೂ ಖರೀದಿಸಿದೆ. ನಿಮಗೆ ತಿಳಿದಿರುವ ಹಾಗೆ ನಮ್ಮ ರೂಪಾಯಿ ಮೌಲ್ಯವು ಪಾತಾಳಕ್ಕೆ ಇಳಿದಿರುವೂದರಿಂದ 364 ರುಪಾಯಿಗೆ ಅಷ್ಟೇನೂ ಉತ್ತಮ ಶೂ ಸಿಗಲಿಲ್ಲ. ನಾನು ಆಫೀಸಿಗೆ ಶೂ ಉಪಯೋಗಿಸುವುದಿಲ್ಲ. ಹಾಗಾಗಿ ಬೆಳಗ್ಗೆ ಜಾಗಿಂಗ್ ಹೋಗುವಾಗ ಇದನ್ನು ಉಪಯೋಗಿಸುವೆ. ನಿಮ್ಮ ಸಹೃದಯಿ ಮನಸ್ಸಿಗೆ ಕೃತಜ್ಞತೆಗಳು.

ನಿಮ್ಮಂತಹ ರಾಷ್ಟ್ರದ ಬಗ್ಗೆ ಚಿಂತಿಸುವ ಯುವಜನತೆ ನಮ್ಮ ರಾಷ್ಟ್ರದ ಬಲು ದೊಡ್ಡ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ನಮ್ಮ ರಾಷ್ಟ್ರದ ಪ್ರಧಾನಿ ವಿದೇಶಗಳಿಗೆ ತೆರಳಿ ಭಾರತದಲ್ಲಿ ಜನಿಸಿದ್ದು ಕೂಡ ಅಪಮಾನವಾಯಿತು ಎನ್ನುವಂತಹ ಮಾತುಗಳನ್ನು ಆಡುವುದು, ರಾಷ್ಟ್ರ ಗೀತೆಗೆ ಗೌರವ ಸಲ್ಲಿಸದೆ ನಡೆಯುವುದು, ಹೆಮ್ಮೆಯ ಬಾವುಟದ ಮೇಲೆ ಸಹಿ ಹಾಕುವುದನ್ನು ನೋಡಿಯೂ ನೋಡದಂತೆ ನಟಿಸಬಾರದು.

ಒಬ್ಬ ಮುಖ್ಯಮಂತ್ರಿಯ ಚಪ್ಪಲನ್ನು ಗುರುತು ಮಾಡಿದ ತಾವು 40.36% ಇರುವ ನಿರ್ಗತಿಕ ಮತ್ತು, ‘ಭಾರತದ ಸ್ವರ್ಗ’ ಎಂದು ಬಿಂಬಿಸುವ ಗುಜರಾತಿನಲ್ಲಿ ಕೂಡ 62.78 % ಜನರು ತಮ್ಮ ಪ್ರಾಥಮಿಕ ಕಾರ್ಯಗಳನ್ನು ಬಯಲು ಪ್ರದೇಶದಲ್ಲಿ ಮಾಡುವುದು, ದೈನಂದಿನ ಒಂದು ಹೊತ್ತಿನ ತುತ್ತಿಗಾಗಿ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುವುದು, ಭ್ರಷ್ಟಾಚಾರ ದಿನನಿತ್ಯ ನಡೆಯುವುದು, ಜಾತಿ ಮತದ ಹೆಸರಲ್ಲಿ ತಮ್ಮೊಳಗೆ ಜಗಳ ತಂದಿಕ್ಕಿ ISIS ನಂತಹ ಸಂಘಟನೆಗಳು ಮೊಳಕೆಯೊಡೆಯುವುದು, ಜೀವಿಸಲು ಅತ್ಯಗತ್ಯ ಸಾಮಾನುಗಳ ಬೆಲೆ ಗಗನಕ್ಕೆ ಏರುವುದು ಮಾತ್ರವಲ್ಲ ಸೈನಿಕರು ಸಾವನ್ನಪ್ಪುವುದು ಕಂಡಿಲ್ಲ ಎಂಬಂತೆ ತಾವು ನಟಿಸಬಾರದು.

ನಿಮಗಿದು ಗೊತ್ತೇ ?? ನಾನು ಕೂಡ ಒಬ್ಬ ಇಂಜಿನಿಯರ್ ನ ಮಗನಾಗಿದ್ದೇನೆ, ಅಲ್ಲದೆ IIT ಯವನೂ ಅಲ್ಲದೆ IRS, ಮತ್ತು ಒಬ್ಬ ಆದಾಯ ತೆರಿಗೆ ಉದ್ಯೋಗಸ್ತೆಯ ಪತಿಯಾಗಿದ್ದೇನೆ, ಆರ್ಥಿಕವಾಗಿ ಒಂದು ಉತ್ತಮ ಕುಟುಂಬ, ಆದರೂ ವಿದ್ಯಾಬ್ಯಾಸದಲ್ಲಿ ಮತ್ತು ಉದ್ಯೋಗದಲ್ಲಿ ನಾನು ಒಮ್ಮೆಯೂ ನಮ್ಮ ರಾಜಕೀಯ ನೇತಾರರನ್ನು ಅವರ ವೇಷದಲ್ಲಿ ಅಲ್ಲ ಅವರು ಮಾಡುವ ಕೆಲಸದಲ್ಲಿ ಗಮನ ನೀಡಿದವನಾಗಿದ್ದೇನೆ. ಇಂದಿರಾ ಗಾಂಧಿಯವರ ಬಿಳಿ ಕೂದಲೊ ದೇವೇಗೌಡರ ಕೂದಲಿಲ್ಲದ ತಲೆಯೋ ನನ್ನ ಗಮನಕ್ಕೆ ಬಂದಿಲ್ಲ, ಅಲ್ಲದೆ ಅವರು ನೇತಾರರಾಗಿರುವ ಸಮಯದಲ್ಲಿ ನಮ್ಮ ರಾಷ್ಟ್ರದ ಜನಜೀವನ ರೀತಿ ಹೇಗಿದೆ ಎಂಬುದರಲ್ಲಾಗಿತ್ತು ನನ್ನ ಗಮನ ಮತ್ತು ನೋಟ.

ಭಿಕ್ಷೆ ಬೇಡುವ ಮಕ್ಕಳು, ಅವರ ಪಾಲನೆಗಾಗಿ ಶರೀರ ಮಾರುವ ತಾಯಂದಿರು, ಆದಾಗ್ಯೂ ಬಡತನ ತಡೆಯಲಾರದೆ ಆತ್ಮಹತ್ಯೆ ನಡೆಸುವ ತಂದೆಯಂದಿರು, ನಮ್ಮ ದೇಶದ ಈ ವ್ಯವಸ್ಥೆಯಾಗಿದೆ ಬಲು ದೊಡ್ಡ ಅವಮಾನ ಎಂದು ಹೇಳಲು ನನಗೆ ನಿರಾಶೆ ಇದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ನಾನು ಚಿಂತಿಸಿದೆ.

ಅದಕ್ಕಾಗಿ ನಾನು ನನ್ನ ಉದ್ಯೋಗಕ್ಕೆ ರಾಜಿ ಕೊಟ್ಟೆ, ಜನರ ನಡುವೆ ಇಳಿದು ಕೆಲಸ ಮಾಡಿದೆ, ಅದರ ಪ್ರತಿಫಲ ತಿಳಿಯಲು ಆರಂಭಿಸಿತು, ಜನರು ನನ್ನೊಂದಿಗೆ ನಿಂತರು ಚುನಾವಣೆಯಲ್ಲಿ ಅವರು ನನ್ನ ಗುರುತನ್ನು ಪ್ರದರ್ಶಿಸಿದರು, ಇಂದು ನನಗೆ ಅವರ ಕನಸುಗಳನ್ನು ನನಸು ಗೊಳಿಸುವ ಕೆಲಸದಲ್ಲಿ ನಿರತನಾಗಿದ್ದೇನೆ ಆದೂದರಿಂದ ನಾನದನ್ನು ಮರೆತೆ, ಕೋಟ್ಟು ಸೂಟು ಕನ್ನಡಕ ಹಾಕಿ ಸುತ್ತಬೇಕು ಎಂದೂ ವಿದೇಶಗಳಲ್ಲಿ ಹೋಗಿ ಸೆಲ್ಫಿ ತೆಗೆಯಬೇಕೆಂದು.

ಇಂಜಿನಿಯರ್ ಆದಾಗ ನಿಮಗೆ ಮುಖ್ಯಮಂತ್ರಿಯರ ಚಪ್ಪಲ್ ಒಂದು ಕೊರತೆಯಾಗಿ ಕಂಡಿತು, ತಾವು ಅದಕ್ಕೆ ಪರಿಹಾರ ಕಂಡು ಹಿಡಿದಿರಿ ಮೊದಲಾಗಿ ಅದನ್ನು ನಾನು ಅಭಿನಂದಿಸುತ್ತೇನೆ.ಆದರೆ ನಾನು ಇಂಜಿನಿಯರ್ ಆದಾಗ ನಮ್ಮ ರಾಷ್ಟ್ರದ ಏನೆಲ್ಲ ಕೊರತೆಗಳು ಎಂದು ನನ್ನ ಸ್ವರಾಜ್ ಎಂಬ ಪುಸ್ತಕದಲ್ಲಿದೆ, ಅದರಲ್ಲಿ ಹೇಳುವ ಕೊರತೆಗಳನ್ನ ಪರಿಹರಿಸಲು ನಿಮ್ಮ ಸಹಾಯ ಖಂಡಿತ ಬೇಕೆಂದು ನಿರೀಕ್ಷಿಸುತ್ತಾ..”

ನಿಮ್ಮವನೇ ಆದ ಅರವಿಂದ್ ಕೇಜ್ರಿವಾಲ್

ಒಳಿತನ್ನು ಹೇಳಲು ರಾಜಕೀಯ ನೋಡಬೇಕಾಗಿಲ್ಲ.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ಸಭೆ | ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಕ್ರಮ

Published

on

ಸುದ್ದಿದಿನ,ದಾವಣಗೆರೆ :ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಪ್ರಮುಖವಾಗಿ ದಲಿತರಿಗೆ ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ದ ಕ್ರಮ, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು, ಈ ಸಭೆ ನಡೆದು 2 ವರ್ಷಗಳಾಗಿದ್ದು ನಾನು ಜಿಲ್ಲಾಧಿಕಾರಿಯಾಗಿ ಬಂದ ನಂತರ ಮೊದಲ ಸಭೆ
ಇದಾಗಿದೆ. ತಮ್ಮ ಕುಂದು ಕೊರತೆಗಳನ್ನು ಮುಕ್ತವಾಗಿ ತಿಳಿಸಿ. ನಾನೂ ಸೇರಿದಂತೆ ಅಧಿಕಾರಿಗಳ ತಂಡದಿಂದ ತಮ್ಮ ಮನವಿಗಳನ್ನು ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ವರ್ಷದಲ್ಲಿ ಸುಮಾರು 349 ಜಾತಿ ನಿಂದನೆ ಕೇಸ್‍ ದಾಖಲು : ಎ ಎಸ್ಪಿ ರಾಜೀವ್

Published

on

ಸುದ್ದಿದಿನ,ದಾವಣಗೆರೆ: ನಿಮ್ಮ ಕುಂದು ಕೊರತೆಗಳು ನಮಗೆ ಅರ್ಥವಾಗಿದೆ. ನಮ್ಮ ಇಲಾಖೆಯು 10 ವರ್ಷದಲ್ಲಿ ಸುಮಾರು 349 ಜಾತಿ ನಿಂದನೆ ಕೇಸ್‍ಗಳನ್ನು ದಾಖಲಿಸಿಕೊಂಡಿದ್ದು, ಇಲ್ಲಿ 7 ಜನರಿಗೆ ಮಾತ್ರ ಪರಿಹಾರ ಬರಬೇಕು. ಜೊತೆಗೆ 99 ಕೇಸ್‍ಗಳು ಬಾಕಿ ಇದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ರಾಜೀವ್ ಮಾಹಿತಿ ನೀಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅವರು ಮಾಹಿತಿ ಹಂಚಿಕೊಂಡರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪ.ಜಾತಿ – ಪ.ಪಂಗಡದವರ ಮೇಲಿನ ದೌರ್ಜನ್ಯ ಖಂಡಿಸಿದರೆ, ನನಗೆ ಚಪ್ಪಲಿ ಹಾರ ಹಾಕುತ್ತಾರೆ :‌ ಜಿ.ಪಂ ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ನಾನೊಬ್ಬ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ. ನನಗೆ ನಗರದ ಪ್ರಮುಖ ವೃತ್ತದಲ್ಲಿ ಚಪ್ಪಲಿ ಹಾರ ಹಾಕುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ನೋವಿನಿಂದ ನುಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು,

ದೂರು ನೀಡಿ ಸಂಬಂಧಿಸಿದವರನ್ನು ಬಂಧಿಸಲು ಕೋರಿದರೆ, ಪೊಲೀಸರು ಆರೋಪಿಗಳು ಕಣ್ಮರೆಯಾಗಿದ್ದಾರೆ ಎಂದು ಸಬೂಬು ಹೇಳುತ್ತಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಮುಖ್ಯ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಹೇಗೆ ಸಾಧ್ಯ? ಇದು ಇಲಾಖೆಯ ವೈಫಲ್ಯವಲ್ಲವೇ? ನನ್ನಂತಹವನಿಗೇ ಹಾಗೆ ಆದರೆ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 500 ರಿಂದ 600 ಕ್ರಷರ್ ಮಾಲೀಕರಿದ್ದಾರೆ. ಇದರಲ್ಲಿ ಎಸ್‍ಸಿ/ಎಸ್‍ಟಿ ಜನಾಂಗದವರು ಎಷ್ಟು ಜನರಿದ್ದಾರೆ? ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಜನಾಂಗದವರು ಇರುವ ಪ್ರದೇಶಗಳಲ್ಲಿ ಎಷ್ಟು ಕಾಮಗಾರಿಗಳಾಗಿವೆ? ಈ ಜಿಲ್ಲೆಯಲ್ಲಿ ಸಮಾನತೆ ಎಂಬುದು ಏನಾದರೂ ಇದ್ದರೆ ಅದು ಕರೊನಾದಿಂದ ಸತ್ತವರನ್ನು ಮಣ್ಣು ಮಾಡುವಲ್ಲಿ ಮಾತ್ರ ಇದೆ. ಬೇರೆಲ್ಲಿಯೂ ಇಲ್ಲ.

ಕಳೆದ 10 ವರ್ಷಗಳಲ್ಲಿ ಈ ಸಮುದಾಯದವರ ಮೇಲೆ ಎಷ್ಟು ದೌರ್ಜನ್ಯದ ಕೇಸ್‍ಗಳಾಗಿವೆ? ಎಷ್ಟರಲ್ಲಿ ಶಿಕ್ಷೆ ಆಗಿದೆ. ಎಷ್ಟು ‘ಬಿ’ ರಿಪೋರ್ಟ್ ಆಗಿದೆ ಮಾಹಿತಿ ಒದಗಿಸಿ. ಹಾಗೂ ಈ ಹಿಂದಿನ ಸಭೆಯ ಅನುಪಾಲನೆ ವರದಿಯೇ ಇಲ್ಲದೇ ಮುಂದಿನ ಸಭೆ ನಡೆಸುವುದು ಹೇಗೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending