Connect with us

ದಿನದ ಸುದ್ದಿ

ದಾವಣಗೆರೆಯಲ್ಲಿ ಒಂದೇದಿನ 40 ಕೊರೊನಾ ಪಾಸಿಟಿವ್ ಕೇಸ್ ಪತ್ತೆ, 14 ಸಾವು

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಇಂದು 40 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 01 ಸಾವು ಸಂಭವಿಸಿದೆ ಹಾಗೂ 04 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ.

ರೋಗಿ ಸಂಖ್ಯೆ 30643 52 ವರ್ಷದ ಪುರುಷ, ಮತ್ತು ರೋಗಿ ಸಂಖ್ಯೆ 30644 35 ವರ್ಷದ ಮಹಿಳೆ, ರೋಗಿ ಸಂಖ್ಯೆ, ರೋಗಿ ಸಂಖ್ಯೆ 30646 11 ವರ್ಷದ ಬಾಲಕಿ, ರೋಗಿಸಂಖ್ಯೆ 30647 10 ವರ್ಷದ ಬಾಲಕ, ರೋಗಿಸಂಖ್ಯೆ 30648 75 ವರ್ಷದ ವೃದ್ದ, ರೋಗಿಸಂಖ್ಯೆ 30652 25 ವರ್ಷದ ಮಹಿಳೆ, 30653 44 ವರ್ಷದ ಪುರುಷ, 30655 73 ವರ್ಷದ ವೃದ್ದ. 30657 27 ವರ್ಷದ ಪುರುಷ.

ರೋಗಿಸಂಖ್ಯೆ 30658 38 ವರ್ಷದ ಪುರುಷ, 30660 27 ವರ್ಷದ ಪುರುಷ, 30661 53 ವರ್ಷದ ಮಹಿಳೆ, 30662 56 ವರ್ಷದ ಮಹಿಳೆ, 30663 60 ವರ್ಷದ ವೃದ್ದೆ, 30664 52 ವರ್ಷದ ಪುರುಷ, 30665 58 ವರ್ಷದ ಪುರುಷ, 30666 56 ವರ್ಷದ ಪುರುಷ, 30667 53 ವರ್ಷದ ಮಹಿಳೆ, 30668 62 ವರ್ಷದ ವೃದ್ದ, 30669 60 ವರ್ಷದ ವೃದ್ದ, 30670 56 ವರ್ಷದ ಮಹಿಳೆ, 30671 38 ವರ್ಷದ ಮಹಿಳೆ.

ರೋಗಿಸಂಖ್ಯೆ 30672 42 ವರ್ಷದ ಮಹಿಳೆ, 30673 4ವರ್ಷದ ಬಾಲಕ, 30674 26 ವರ್ಷದ ಮಹಿಳೆ, 30675 48 ವರ್ಷದ ಮಹಿಳೆ, 30676 60 ವರ್ಷದ ವೃದ್ದೆ, 30677 40 ವರ್ಷದ ಮಹಿಳೆ, 30678 56 ವರ್ಷದ ಪುರುಷ, 30679 50 ವರ್ಷದ ಪುರುಷ, 30680 58 ವರ್ಷದ ಪುರುಷ, 30681 68ವರ್ಷದ ವೃದ್ದ, ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ರೋಗಿಸಂಖ್ಯೆ 30645 65 ವರ್ಷದ ವೃದ್ದೆ, 30649 55 ವರ್ಷದ ಪುರುಷ, 30654 69 ವರ್ಷದ ವೃದ್ದ, 30657 29 ವರ್ಷದ ಪುರುಷ, 30659 10 ವರ್ಷದ ಬಾಲಕಿ, ಇವರು Influnenza linke lllness(ILI)‌ ಹಿನ್ನೆಲೆಯನ್ನು ಹೊಂದಿದ್ದಾರೆ.

ರೋಗಿಸಂಖ್ಯೆ 30650 57ವರ್ಷದ ಪುರುಷ, 30651 45 ವರ್ಷದ ಮಹಿಳೆ, ಇವರು ಮಹಾರಾಷ್ಟ್ರದಿಂದ ಹಿಂದಿರಿಗಿರುವವರಾಗಿದ್ದಾರೆ.

ರೋಗಿ ಸಂಖ್ಯೆಗಳಾದ 14402, 14403, 15375, 23565, ಇವರೆಲ್ಲರೂ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರೋಗಿಸಂಖ್ಯೆ 30682 ಇವರು 73 ವರ್ಷದ ಪುರುಷ ತಿವ್ರ ಉಸಿರಾಟದ ತೊಂದರೆಯಿಂದ ಸಾರಿ ಕೇಸ್ ಹಿನ್ನೆಲೆ ಹೊಂದಿದ್ದು ಮರಣ ಹೊಂದಿರುತ್ತಾರೆ.

ಒಟ್ಟು 423 ಪ್ರಕರಣಗಳು ದಾಖಲಾಗಿದ್ದು. ಈ ಪೈಕಿ 328 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ, 14 ಸಾವು ಸಂಭವಿಸಿದ್ದು ಪ್ರಸ್ತುತ್ತ 81 ಸಕ್ರಿಯ ಪ್ರಕರಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಿಜೆಪಿ ನಾಯಕರಿಗೆ ಗಂಡಸ್ತನ ಇದ್ರೆ ನ್ಯಾಯಾಲಯಕ್ಕೆ ಬರಲಿ; ಟಿ.ಬಿ ಜಯಚಂದ್ರ ಬಹಿರಂಗ ಸವಾಲು

Published

on

tb jayachandra

ಚಿಕ್ಕಬಳ್ಳಾಪುರ: ಬಿಜೆಪಿ ನಾಯಕರಿಗೆ ಗಂಡಸ್ತನ ಇದ್ದರೆ ನ್ಯಾಯಾಲಯಕ್ಕೆ ಬರಲಿ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ಬಹಿರಂಗ ಸವಾಲು ಹಾಕಿದ್ದಾರೆ.

ಕೊರೋನಾ ನಿಯಂತ್ರಣ ಸಂಬಂಧ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಚಿವರು ಬಿಜೆಪಿ ನಾಯಕರ ಧೈರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೋವಿಡ್‍ ವಿಚಾರದಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಈ ಕುರಿತು ಪ್ರಶ್ನೆ ಮಾಡಿದರೆ ನಮಗೆ ನೋಟೀಸ್‍ ಕಳುಹಿಸಲಾಗುತ್ತಿದೆ ಎಂದು ಖಡಕ್‍ ಆಗಿ ಹೇಳಿದರು.

ಕೋವಿಡ್ ವಿಚಾರವಾಗಿ ಸರ್ಕಾರ 4200 ಕೋಟಿ ರೂ. ಖರ್ಚು ಮಾಡಿದ್ದು, ಅದರಲ್ಲಿ ಸರಿ ಸುಮಾರು ಅರ್ಧದಷ್ಟು ಹಣಕ್ಕೆ ಲೆಕ್ಕವೇ ಇಲ್ಲ. ಈ ಬಗ್ಗೆ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದರೆ ಅವರಿಗೆ ಲೀಗಲ್‍ ನೋಟಿಸ್‍ ನೀಡಲಾಗಿದೆ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ

Published

on

tungabhadra dam water level today in tmc

ದಾವಣಗೆರೆ, ಆಗಸ್ಟ್ 04: ತುಂಗಭದ್ರಾ ಜಲಾಶಯದ ಮಟ್ಟ ಇಂದಿನ (04-08-2020) ಮಟ್ಟ ಈ ಕೆಳಗಿನಂತಿದೆ.

  • ಮಟ್ಟ: 1612.23 ಅಡಿ (ಪೂರ್ಣ ಮಟ್ಟದ 1633 ಅಡಿ)
  • ಕ್ಯಾಪ್: 39.694 ಟಿಎಂಸಿ (ಪೂರ್ಣ ಸಾಮರ್ಥ್ಯ 103 ಟಿಎಂಸಿ ಅಡಿ)
  • ಒಳಹರಿವು: 6575 ಸಿ / ಸೆ
  • ಹೊರಹರಿವು: 7595 ಸಿ / ಸೆ

ಕಳೆದ ವರ್ಷ: 04 ಆಗಸ್ಟ್ 2019

  • ಮಟ್ಟ: 1609.07 ಅಡಿ
  • ಕ್ಯಾಪ್: 33.496 ಟಿಎಂಸಿ
  • ಒಳಹರಿವು: 17817 ಸಿ / ಸೆ
  • ಹೊರಹರಿವು: 1250 ಸಿ / ಸೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ರಾಮ-ಲಕ್ಷ್ಮಣನ ವಿಗ್ರಹಕ್ಕೆ ಮೀಸೆ ಬೇಕು ;  ಹಿಂದುತ್ವ ಪ್ರತಿಪಾದಕ ಸಂಭಾಜಿ ಬಿಡೆ

Published

on

ಸುದ್ದಿದಿನ,ಪುಣೆ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವ ರಾಮ-ಲಕ್ಷ್ಮಣನ ವಿಗ್ರಹಕ್ಕೆ ಮೀಸೆ ಬೇಕು ಎಂದು ಹಿಂದುತ್ವ ಪ್ರತಿಪಾದಕ ಸಂಭಾಜಿ ಭಿಡೆ ಆಗ್ರಹಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬುಧವಾರ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಈ ಸಂಬಂಧ ಈಗಾಗಲೇ ಶ್ರೀರಾಮಂದಿರ ಟ್ರಸ್ಟ್ ನ ಗೋವಿಂದಗಿರಿ ಜೀ ಮಹಾರಾಜ್ ಜೊತೆ ಮಾತನಾಡಿ, ನೀವು ಸ್ಥಾಪಿಸುವ ರಾಮ ಹಾಗೂ ಲಕ್ಷ್ಣಣ ಪ್ರತಿಮೆಗಳಿಗೆ ಮೀಸೆ ಇರಬೇಕು. ಒಂದು ವೇಳೆ ನೀವು ರಾಮ-ಲಕ್ಷ್ಮಣ ವಿಗ್ರಹಗಳಿಗೆ ಮೀಸೆ ಇಟ್ಟಿಲ್ಲವೆಂದರೆ, ನನ್ನಂತಹ ಭಕ್ತರಿಗೆ ದೇವಾಲಯ ನಿರ್ಮಿಸಿದರೂ ಪ್ರಯೋಜನವಿಲ್ಲದಂತಾಗುತ್ತದೆ ಎಂದಿದ್ದಾರೆ.

ಶ್ರೀರಾಮಮಂದಿರಕ್ಕೆ ಭೂಮಿಪೂಜೆ ಮಾಡುವ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಆಗಸ್ಟ್ 5ರಂದು ನಡೆಯುವ ಕಾರ್ಯವನ್ನು ದಸರಾ, ದೀಪಾವಳಿ ಹಬ್ಬಗಳಂತೆ ಆಚರಿಸೋಣ ಎಂದು ಇದೇ ವೇಳೆ ಭಿಡೆ ಕರೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending