Connect with us

ದಿನದ ಸುದ್ದಿ

ಸರ್ಕಾರ ಅಕ್ರಮ‌‌‌ ಮಾಡಿಲ್ಲ, ಸಚಿವರುಗಳು ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ,ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸರ್ಕಾರ ಅಕ್ರಮ‌‌‌ ಮಾಡಿಲ್ಲ, ಸಚಿವರುಗಳು ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಇದು ಭಂಡತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಖರೀದಿ ಅವ್ಯವಹಾರದ 14 ದಾಖಲೆಗಳನ್ನು ಕೊಟ್ಟಿದ್ದೇವೆ. ಅವು ಸರ್ಕಾರದ್ದೇ ದಾಖಲೆಗಳು. ಅವುಗಳನ್ನು ಸಚಿವರು ನಿರಾಕರಿಸುತ್ತಾರೆ ಎಂದಾದರೆ, ನಿನ್ನೆ ಸರ್ಕಾರದ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದವರು ಮಂತ್ರಿಗಳಾಗಿರುವುದು ನಿಜನಾ? ಸುಳ್ಳಾ? ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕಾದರೆ ನ್ಯಾಯಾಂಗ ತನಿಖೆಯಾಗಲಿ. ಸತ್ಯ ಹೊರ ಬಂದರೆ ಜನ ತೀರ್ಮಾನ ಮಾಡುತ್ತಾರೆ. ನಮ್ಮ ಮತ್ತು ಅವರ ದಾಖಲೆಗಳು ನ್ಯಾಯಾಂಗ ತನಿಖೆಯ ಮುಂದೆ ಬರಲಿ. ನಮ್ಮದು ಸುಳ್ಳು ಅವರದ್ದು ಸತ್ಯ ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಎಂದು ಪ್ರಶ್ನಿಸಿದರು.

ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಮತ್ತೆ ಒತ್ತಾಯಿಸುತ್ತೇನೆ.
ತನಿಖೆಗೆ ಸರ್ಕಾರ ಒಪ್ಪುವುದಿಲ್ಲ ಎಂದಾದರೆ ಅವರು ಕಳ್ಳತನ ಮಾಡಿದ್ದಾರೆ ಎಂದು ಅರ್ಥ. ನಾವು ತನಿಖೆಗೆ ಆಗ್ರಹಿಸಿದ ಮೇಲೆ ಉಪಕರಣಗಳ ಖರೀದಿಗೆ ನೀಡಿದ್ದ ಆದೇಶ ರದ್ದು ಮಾಡಲಾಗಿದೆ ಎಂಬುದರ ಬಗ್ಗೆ ನನಗೆ ತಿಳಿಯದು ಎಂದರು.

“2,000 ಕೋಟಿ ವೆಚ್ಚದಲ್ಲಿ 50,000 ವೆಂಟಿಲೇಟರ್‌ಗಳನ್ನು ತಲಾ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ” ಎಂದು ಪ್ರಧಾನಿ‌ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. “ಕೇಂದ್ರ ಸರ್ಕಾರ ಹೇಳಿರುವುದು ಸುಳ್ಳು. ನಮಗೆ ಕೊಟ್ಟಿರುವ ವೆಂಟಿಲೇಟರ್‌ಗಳು ಕಳಪೆ” ಎಂದು ಈ ಮಂತ್ರಿಗಳು ಹೇಳಲಿ ನೋಡೋಣ.

ಗುಣಮಟ್ಟದ ವಿಚಾರಕ್ಕೆ ಬರುವುದಾದರೆ ಕಾರು, ಮೊಬೈಲ್ ಎಲ್ಲದರಲ್ಲಿಯೂ‌ ಸಾಮಾನ್ಯ, ಐಷಾರಾಮಿ‌ ಎರಡೂ ಇರುತ್ತವೆ.
ಕೇಂದ್ರ ಸರ್ಕಾರ ಸಹ 18 ಲಕ್ಷ ರೂ. ವೆಚ್ಚದಲ್ಲಿಯೇ ವೆಂಟಿಲೇಟರ್ ಖರೀದಿ ಮಾಡಬಹುದಿತ್ತಲ್ಲವೇ? ಯಾಕೆ 4 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದರು? ಇದಕ್ಕೆ ಮಂತ್ರಿಗಳಲ್ಲಿ ಉತ್ತರ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಇಲಾಖೆಯಲ್ಲಿ 1,000 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಹೇಳಿಲ್ಲ, ಅಷ್ಟು ಖರ್ಚಾಗಿದೆ ಎಂದಿದ್ದೇನೆ. ಆದರೆ ಫುಡ್ ಪ್ಯಾಕೇಟ್ ಕೊಡುವಲ್ಲಿ ಅವ್ಯವಹಾರ ಆಗಿದೆ, ಒಂದು ಸಾವಿರ ಕೋಟಿ ಖರ್ಚಾಗಿದೆ ಅದಕ್ಕೆ ಲೆಕ್ಕ ಕೊಡಿ ಅಂದಿದ್ದೆ.
ಕಾರ್ಮಿಕ‌ ಸಚಿವರು ಮೊದಲು ಆ ಲೆಕ್ಕ‌‌ ಕೊಡಲಿ ಎಂದು ಒತ್ತಾಯಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ 815 ಕೋಟಿಗೆ ಪ್ರಸ್ತಾವನೆ ಕಳುಹಿಸಿದೆ ಎಂದು ಹೇಳಿದ್ದು ನಿಜ. ತಜ್ಞರ ಶಿಫಾರಸು ಇಲ್ಲದೆ ಉಪಕರಣಗಳ ಖರೀದಿಗೆ ಮುಂದಾಗಿರುವುದಾಗಿ‌ ಟಿಪ್ಪಣಿ ಬರೆಯಲಾಗಿರುವುದು ನಿಜ. ಈ ಟಿಪ್ಪಣಿಯ ಮಹತ್ವ ಏನು? ಪ್ರಸ್ತಾವನೆ,ಅನುಮೋದನೆ ಮಂಜೂರಾತಿ, ಖರ್ಚು-ವೆಚ್ಚ ಗೊತ್ತಿದ್ದೇ ನಾನು 13 ಬಜೆಟ್ ಮಂಡಿಸಿದ್ದು. ಆದರೆ ಈ ಸುಧಾಕರ್ ಯಾರು? ಹೇಗೆ ಎಂದು ಸರಿಯಾಗಿ ಗೊತ್ತಿರಲಿಲ್ಲ.

ಅವರಿಗೆ ಟಿಕೆಟ್ ನೀಡಿದ್ದೇ ತಪ್ಪಾಯಿತು. ಮೊದಲ ಬಾರಿ ಸಚಿವರಾದವರು 13 ಬಾರಿ ಬಜೆಟ್ ಮಂಡಿಸಿದ್ದವರಿಗೆ‌ ಪಾಠ ಹೇಳ್ತಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ ಖರೀದಿ ಮಾಡಿರುವ ವೆಂಟಿಲೇಟರ್ ಗಳ ಬಗ್ಗೆ ಅವರು ಆರೋಪ‌‌ ಮಾಡಿದ್ದಾರೆ. ನಾನು ಆಗ ಸರ್ಕಾರದಲ್ಲಿ ಇರಲಿಲ್ಲ. ದಾಖಲೆಗಳು ಅವರ ಬಳಿಯೇ ಇದೆ ಅಲ್ಲವೇ ? ಆ ಬಗ್ಗೆಯೂ ತನಿಖೆ ಮಾಡಿಸಿ ಸತ್ಯ ಹೊರತನ್ನಿ‌ ಎಂದು ನುಡಿದರು.

ಮಹಾಭಾರತದ ಪಾಂಡವರು- ಕೌರವರ ಚರ್ಚೆ ಈಗ ಯಾಕೆ? ದ್ವಾಪರ ಯುಗದಲ್ಲಿ ನಡೆದಿದ್ದನ್ನು ಈಗ ಎಳೆದು ತರುವುದೇಕೆ ? ಅವರು ಕೌರವರಾಗಲೂ ಅರ್ಹತೆ ಇಲ್ಲದ ದುಷ್ಟರು. ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಾನು ಪಾಂಡವನೂ ಅಲ್ಲ, ಕೌರವನೂ ಅಲ್ಲ, ಐಯಾಮ್ ಸಿದ್ದರಾಮಯ್ಯ ಓನ್ಲಿ ಎಂದು ಬಿಜೆಪಿಗರಿಗೆ ಟಾಂಗ್ ನೀಡಿದರು.

ಈ ಬಿಜೆಪಿ ನಾಯಕರಿಗೆ ರಾಮಾಯಣ-ಮಹಾಭಾರತ ಎಂದರೆ ರಾಜಕೀಯ ಅಸ್ತ್ರಗಳು. ನಮಗೆ‌ ಅದು ಬದುಕಿನ‌ ಪಾಠದ ಪುಸ್ತಕಗಳು. ಅದರಿಂದ ನಾವು ನಿತ್ಯ‌ ಒಳ್ಳೆಯದನ್ನು ಕಲಿಯುತ್ತೇವೆ. ಇವರಿಗೆ ಕೌರವರದ್ದೇ ಧ್ಯಾನ,‌ ಅವರವರ ಯೋಗ್ಯತೆಗೆ ತಕ್ಕ ಹಾಗೆ ಎಂದು ಲೇವಡಿ ಮಾಡಿದರು.

ಕೊರೊನಾ ನಿಯಂತ್ರಣದ ವಿಚಾರದಲ್ಲಿ ರಾಜಕೀಯ ಮಾಡುವ ಉದ್ದೇಶ ನಮಗಿಲ್ಲ, ಅದರ ಅಗತ್ಯವೂ ಇಲ್ಲ. ಇದಕ್ಕಾಗಿಯೇ ಇವರ ಇತರ ಕರ್ಮ‌ಕಾಂಡಗಳ ಬಗ್ಗೆ ನಾವು ಈಗ ಮಾತನಾಡುತ್ತಿಲ್ಲ. ಆದರೆ ಕೊರೊನಾ ಸಂಬಂಧಿತ ಭ್ರಷ್ಟಾಚಾರಕ್ಕೆ ಜನ ಬಲಿಯಾಗುತ್ತಿರುವುದನ್ನು ನೋಡುತ್ತಾ ಸುಮ್ಮನಿರುವುದು ಹೇಗೆ?

ನಮ್ಮ ಆರೋಪದಿಂದ ಅಧಿಕಾರಿಗಳ‌ ನೈತಿಕ ಸ್ಥೈರ್ಯ ಕುಸಿಯುತ್ತದೆ‌ ಎಂದು ಸಚಿವರು ಕಣ್ಣೀರು ಹಾಕಿದ್ದಾರೆ. ಬಿಬಿಎಂಪಿ ಆಯುಕ್ತರ ಏಕಾಏಕಿ ವರ್ಗಾವಣೆ ಯಾಕಾಯ್ತು? ಯಾವ ಸಚಿವರ ಭ್ರಷ್ಟಾಚಾರ ಮುಚ್ಚಿಡಲು ಅವರನ್ನು ಬಲಿ‌ಕೊಟ್ಟಿರಿ? ಇದರಿಂದ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯಲಿಲ್ಲವೇ? ಎಂದು ಕೆಂಡಾಮಂಡಲವಾದರು.

ನಮ್ಮ ಆರೋಪಕ್ಕೆ ಪ್ರತಿಕ್ರಿಯಿಸಲು ಐವರು ಸಚಿವರು ಓಡೋಡಿ ಬಂದಿದ್ದಾರೆ. ‘ಮಾಡಿದ್ದಿರಲ್ಲಾ, ಅನುಭವಿಸಿ’ ಎಂದು ಮುಖ್ಯಮಂತ್ರಿಗಳೇ ಗದರಿಸಿ ಕಳಿಸಿರಬಹುದು. ಅವರ ಈ ಒಗ್ಗಟ್ಟನ್ನು ಕೊರೊನಾ ನಿಯಂತ್ರಣದಲ್ಲಿ ತೋರಿಸಿದ್ದರೆ ಪರಿಸ್ಥಿತಿ ಈಗಿನಂತೆ ಕೈ ಮೀರಿ ಹೋಗುತ್ತಿರಲಿಲ್ಲ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಾವಲ ಭೈರವಸಂದ್ರ ಗಲಭೆ | ಹಿಂದೂ-ಮುಸ್ಲಿಮರು ಶಾಂತಿಯಿಂದ ವರ್ತಿಸಿ : ಸಿದ್ದರಾಮಯ್ಯ ಮನವಿ

Published

on

ಸುದ್ದಿದಿನ, ಬೆಂಗಳೂರು:  ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಮ್ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ‌.

ಕೊರೋನಾ ಚಿಕಿತ್ಸೆಯಲ್ಲಿರುವ ಅವರು, ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ
ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತಿಳಿಸಿದ್ದೇನೆ. ಶಾಂತಿ ಸ್ಥಾಪನೆಯ ರಾಜ್ಯ ಸರ್ಕಾರದ ಪ್ರಯತ್ನಕ್ಕೆ
ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ.

ಇಂತಹ ಕೋಮು ಗಲಭೆಗಳಲ್ಲಿ‌ ಸಾವು-ನೋವಿಗೆ ಈಡಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕೆಂದು ಕೋರುತ್ತೇನೆ ಎಂದು ಹೇಳಿದ್ದಾರೆ.

ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಖಂಡನೀಯ. ಇದರಿಂದ ಪೊಲೀಸರು ನೈತಿಕ ಸ್ಥೈರ್ಯ‌ ಕಳೆದು ಕೊಳ್ಳಬಾರದು. ಇಂತಹ ಪ್ರಕರಣಗಳ ಸಂದರ್ಭಗಳಲ್ಲಿ ಪೊಲೀಸರು ತಕ್ಷಣ ವಿವೇಚನೆಯಿಂದ ನಿರ್ಧಾರ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಸಣ್ಣ ನಿರ್ಲಕ್ಷ್ಯ ಅನಾಹುತಕ್ಕೆ ದಾರಿಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಳೆಗಾಲದಲ್ಲೂ ಮನೆಗೆ ತಲುಪುತ್ತಿಲ್ಲ ಕುಡಿಯಲು ನೀರು; ಪಾಲಿಕೆ ವಿರುದ್ಧ ದಿನೇಶ್ ಶೆಟ್ಟಿ ಆಕ್ರೋಶ

Published

on

ಸುದ್ದಿದಿನ, ದಾವಣಗೆರೆ: ನಗರಪಾಲಿಕೆಯಿಂದ ಕುಡಿಯುವ ನೀರಿನ ಸರಬರಾಜನ್ನು ಎಂಟರಿಂದ ಹತ್ತು ದಿನಕ್ಕೆ ಪೂರೈಕೆ ಮಾಡುತ್ತಿದ್ದು,  ನೀರಿನ ಸಮಸ್ಯೆಗೆ ಆಡಳಿತ ನಿರ್ಲಕ್ಷ ವಹಿಸಿದೆ ಎಂದು ಪಾಲಿಕೆಯ ಮಾಜಿ ಸದಸ್ಯ ದಿನೇಶ್ ಕೆ ಶೆಟ್ಟಿ ಆರೋಪಿಸಿದ್ದಾರೆ.

ನೀರನ್ನು ಶುದ್ಧೀಕರಿಸದೇ ಅಶುದ್ಧವಾದ ನೀರನ್ನೇ ಸರಬರಾಜು ಮಾಡಲಾಗುತಿದ್ದು ಇದರಿಂದ ಸಾಕಷ್ಟು ರೋಗ-ರುಜಿನಗಳು ಉಲ್ಬಣಗೊಳಿಸುತ್ತವೆ ಎಂದು ತಿಳಿಸಿರುತ್ತಾರೆ.
ಈ ಹಿಂದೆ ನಗರಪಾಲಿಕೆಯ ನೀರನ್ನು ಕುದಿಸಿ ಆರಿಸಿ ಉಪಯೋಗಿಸಿ ಎಂಬ ಹೇಳಿಕೆಯನ್ನು ನೀಡಲಾಗುತ್ತಿತ್ತು ಆದರೆ ಈಗಿನ ಪಾಲಿಕೆಯ ಆಡಳಿತ ಸೌಜನ್ಯಕ್ಕಾದರೂ ಜನತೆಗೆ ಮಾಹಿತಿ ನೀಡದೆ ಸಂಪೂರ್ಣ ನಿರ್ಲಕ್ಷ ವಹಿಸಿದೆ ಎಂದರು.

ಕೋವಿಡ್ ನೆಪದಲ್ಲಿ ನಗರದಲ್ಲಿ ಮಹಾನಗರಪಾಲಿಕೆ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಪೂರ ಸಂಪೂರ್ಣ ವಿಫಲವಾಗಿದ್ದು ಸೀಲ್ ಡೌನ್ ನೆಪದಲ್ಲಿ ಮನೆಯೊಂದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಸ್ವಚ್ಛತೆ ಇಲ್ಲದೇ ರೋಗರುಜಿನಗಳು ಹೆಚ್ಚಾಗಿದ್ದು, ಕರೋನಾ ಡೆಂಗ್ಯು , ಹೆಚ್ ,1, ಎನ್,1. ಮುಂತಾದ ರೋಗಗಳು ಹರಡಲು ಸಹ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ

ಪಾಲಿಕೆ ಆಡಳಿತ ನಡೆಸುವವರೇ ಆಗಲಿ ಅಧಿಕಾರಿಗಳಾಗಲಿ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಕರೋನ ನೆಪ ಒಡ್ಡಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದಿನೇಶ್ ಅವರು ದೂರಿದ್ದಾರೆ.
ಜಿಲ್ಲಾಡಳಿತ ಕೂಡಲೇ ಮಹಾನಗರಪಾಲಿಕೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲುಸ ಸೂಕ್ತ ಕ್ರಮ ಕೈಗೊಳ್ಳಲು ಅದೇಶಿಸಬೇಕೆಂದು ಒತ್ತಾಯಿದ್ದಾರೆ.

 

Continue Reading

ದಿನದ ಸುದ್ದಿ

ರೈಲುಗಳ ಸಂಚಾರಕ್ಕಿನ್ನು ಗೀನ್ ಸಿಗ್ನಲ್ ಇಲ್ಲ

Published

on

ಸುದ್ದಿದಿನ  ದಾವಣಗೆರೆ : ಭಾರತೀಯ ರೈಲ್ವೆ ಇಲಾಖೆಯ ಪ್ರಕಟಣೆ. ನವದೆಹಲಿ: ಕರೋನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಪ್ರಯಾಣಿಕ ರೈಲುಗಳ ಸಂಚಾರವನ್ನು ಅನಿರ್ದಿಷ್ಟಾವಧಿಯವರಿಗೆ ಮುಂದುವರಿಸಲಾಗಿದೆ.

ಈಗಾಗಲೇ ದೇಶದಲ್ಲಿ ಸಂಚರಿಸುತ್ತಿರುವ 230 ವಿಶೇಷ ರೈಲುಗಳ ಸಂಚಾರ ಎಂದಿನಂತೆ ಮುಂದುವರೆಯಲಿದೆ, ರೈಲುಗಳಲ್ಲಿ ನ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ಇದ್ದಲ್ಲಿ ಅಗತ್ಯವಿದ್ದಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ, ದೇಶಾದ್ಯಂತ ಕರೊನಾ ಹರಡಿರುವ ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿಂದ ಪ್ರಸ್ತುತ ಅವಧಿಯವರೆಗೆ ರೈಲ್ವೇ ಸೇವೆಯು ಸ್ಥಗಿತಗೊಂಡಿರುವ ಕಾರಣ ಬೊಕ್ಕಸಕ್ಕೆ 40 ಸಾವಿರ ಕೋಟಿಯಷ್ಟು ಹಣ ನಷ್ಟ ಆಗಿರುತ್ತದೆ,

ಈ ಹಿಂದಿನ ಆದೇಶದಂತೆ ಅಗಸ್ಟ್ 12ರವರೆಗೆ ಸ್ಥಗಿತಗೊಂಡಿರುವ ರೈಲ್ವೆ ಸಂಚಾರ ಸಾರ್ವಜನಿಕವಾಗಿ ಆದಷ್ಟು ಬೇಗನೆ ಮುಕ್ತಗೊಳ್ಳುವುದೋ ಕಾದುನೋಡಬೇಕು.

ಸುದ್ದಿದಿನ.ಕಾಂ| ವಾಟ್ಸಾಪ್| 9980346243

Continue Reading

Trending