Connect with us

ದಿನದ ಸುದ್ದಿ

ಪತ್ರಕರ್ತರು ಕಾನೂನಿಗೆ ಅತೀತರಾದವರೇನೂ ಅಲ್ಲ

Published

on

  • ನವೀನ್ ಸೂರಿಂಜೆ

ತ್ರಕರ್ತರೇನು ಕಾನೂನಿಗೆ ಅತೀತರಾದವರೇನೂ ಅಲ್ಲ. ಹಿರಿಯ ಪತ್ರಕರ್ತ ಅರ್ನಾಬ್ ಗೋ ಸ್ವಾಮಿಯವರು ಕಾನೂನು ಪಾಲನೆ ವಿಷಯದಲ್ಲಿ ಪೊಲೀಸರೊಂದಿಗೆ ನಡೆದುಕೊಂಡ ರೀತಿ ಸರಿಯಾದುದಲ್ಲ. “ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇವೆ, ಬನ್ನಿ” ಎಂದು ಯೂನಿಫಾರಂ ಹಾಕಿರೋ ಪೊಲೀಸರು ಹೇಳಿದ ತಕ್ಷಣ, ಕೇಸಿನ ಬಗ್ಗೆ ಮಾಹಿತಿಯನ್ನು ಕೇಳಿಕೊಂಡು ವಿಚಾರಣೆಗೆ ಹಾಜರಾಗಬೇಕು.

ಅದರ ಬದಲು ಕಿರುಚಾಡುವುದು, ಪೊಲೀಸ್ ಅಧಿಕಾರಿಯನ್ನು ಬೈಯ್ಯುವುದು ಸರಿಯಾದ ಕ್ರಮವಲ್ಲ. ಇವತ್ತು ಅರ್ನಾಬ್ ಗೋಸ್ವಾಮಿಯವರು ಮಾಡಿದ್ದನ್ನೇ ಸಾಮಾನ್ಯ ಆರೋಪಿಗಳು ಮಾಡಿದ್ದರೆ ಅದನ್ನು ಪೊಲೀಸರು, ಮಾಧ್ಯಮಗಳು ಮತ್ತು ಜನರು ಹೇಗೆ ಸ್ವೀಕರಿಸುತ್ತಿದ್ದರು.

ಇಷ್ಟಕ್ಕೂ ಅರ್ನಾಬ್ ಗೋಸ್ವಾಮಿಯವರು ಅರೆಸ್ಟ್ ಆಗಿದ್ದು ಪತ್ರಿಕಾ ವೃತ್ತಿಯ ಕಾರಣಕ್ಕಲ್ಲ. ಹಣಕಾಸಿನ ವಂಚನೆ ಮತ್ತು ಆತ್ಮಹತ್ಯೆ ಪ್ರಚೋದನೆಯ ಕಾರಣಕ್ಕಾಗಿ ಅರ್ನಾಬ್ ಬಂಧನವಾಗಿದೆ. ಈ ಹಿಂದೆ ಎಡಪಂಥೀಯರಿಗೆ ಸ್ವಲ್ಪ ಹತ್ತಿರವಾಗಿದ್ದ, ಬಿಜೆಪಿ ಕಟ್ಟಾ ವಿರೋಧಿ ತೆಹಲ್ಕಾ ಪತ್ರಿಕೆಯ ಸಂಪಾದಕ ಅರೆಸ್ಟ್ ಆದಾಗ ಎಡಪಂಥೀಯರು ಅವರನ್ನು ಬೆಂಬಲಿಸಲಿಲ್ಲ. ಯಾಕೆಂದರೆ ಅವರ ಕೇಸ್ ಪತ್ರಿಕೋಧ್ಯಮಕ್ಕೆ ಸಂಬಂಧಿಸಿದ್ದಾಗಿರಲಿಲ್ಲ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಬಂಧನವಾದಾಗ ಅರ್ನಾಬ್ ಗಿಂತಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಹಾಗೆ ನೋಡಿದ್ರೆ ನನ್ನ ಕೇಸ್ ಕೇವಲ ಪತ್ರಿಕಾ ವೃತ್ತಿಗೆ ಸಂಬಂಧಿಸಿದ್ದು. ನನ್ನ ಮೇಲಿನ ಪೊಲೀಸ್ ಚಾರ್ಜ್ ಶೀಟ್ ನಲ್ಲೂ ನನ್ನ ವೃತ್ತಿಯ ಬಗ್ಗೆ ಮಾತ್ರ ಉಲ್ಲೇಖವಾಗಿತ್ತು. ನವೆಂಬರ್ 07 ರಂದು ವಿಟ್ಲದಲ್ಲಿ ಕಾರ್ಯಕ್ರಮದ ವರದಿಗಾರಿಕೆ ಮುಗಿಸಿಕೊಂಡು ಮಂಗಳೂರಿನತ್ತಾ ನಾವು ಬರುತ್ತಿದ್ದೆವು.

ಹೆದ್ದಾರಿ ದಾರಿ ಮಧ್ಯೆ ಅಲ್ಲಲಿ ಮೀನು ತಿನ್ನುತ್ತಾ, ನೀರು ದೋಸೆ ತಿನ್ನುತ್ತಾ ಮಂಗಳೂರು ತಲುಪುವಾಗ ರಾತ್ರಿ 10 ಆಗಿರಬಹುದು. ಪಡೀಲ್ ಜಂಕ್ಷನ್ ಬಳಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಟಿವಿ9 ಹಿರಿಯ ವರದಿಗಾರ ರಾಜೇಶ್ ಕಾರಿನಲ್ಲಿ ನಾವು ನಾಲ್ಕು ಜನರಿದ್ದೆವು. ರಿಪೋರ್ಟರ್ ರಾಜೇಶ್ ಡ್ರೈವಿಂಗ್ ಮಾಡುತ್ತಿದ್ದರೆ, ನಾನು ಎದುರಿನ ಸೀಟಿನಲ್ಲಿ ಕುಳಿತಿದ್ದೆ. ಹಿಂಬದಿಯಲ್ಲಿ ಟಿವಿ 9 ಕ್ಯಾಮರಾಮೆನ್ ರಾಜೇಶ್ ಪೂಜಾರಿ, ಕಸ್ತೂರಿ ಕ್ಯಾಮರಾಮೆನ್ ಶಿವಪ್ರಸಾದ್ ದೇವಾಡಿಗ ಇದ್ದರು.

ಪೊಲೀಸರು ಎಲ್ಲಾ ಕಾರುಗಳನ್ನು ಚೆಕ್ ಮಾಡುತ್ತಿರುವುದು ದೂರದಲ್ಲೇ ಕಾಣಿಸಿತು. ಮಂಗಳೂರಿನ ಎಲ್ಲಾ ಪೊಲೀಸರು ಸಾಮಾನ್ಯ ಪರಿಚಯವೇ ಆಗಿದ್ದರಿಂದ ನಮ್ಮ ಕಾರನ್ನು ನಿಲ್ಲಿಸಿ ಚೆಕ್ ಮಾಡಲ್ಲ ಎಂದು ಅಂದುಕೊಂಡಿದ್ದೆವು. ಅವರು ಹುಡುಕುತ್ತಿದ್ದುದೇ ನಮ್ಮ ಕಾರನ್ನು ಎಂದು ತಿಳಿದಿರಲಿಲ್ಲ. ನಮ್ಮ ಕಾರು ಕಂಡಾಕ್ಷಣ ಪೊಲೀಸರು ಸುತ್ತುವರಿದರು.

ಇನ್ಸ್ ಸ್ಪೆಕ್ಟರ್ ರವೀಶ್ ನಾಯಕ್ ನಾನಿದ್ದ ಸೀಟಿನ ಡೋರ್ ಬಳಿ ಬಂದು “ನವೀನ್ ನೀವು ಅರೆಸ್ಟ್ ಆಗ್ತಿದ್ದೀರಿ” ಅಂದ್ರು. “ರಾತ್ರಿಯಾಗಿದೆ, ಬೆಳಿಗ್ಗೆ ನಾನೇ ಠಾಣೆಗೆ ಬರುತ್ತೇನೆ. ನಾನೇನು ಓಡಿ ಹೋಗಿಲ್ವಲ್ಲಾ. ಕೇಸ್ ಆದ ಮೇಲೂ ಡ್ಯೂಟಿಯಲ್ಲೇ ಇದ್ದೀನಿ. ನಾಳೆ ನಾನೇ ಬರ್ತೀನಿ” ಅಂದೆ. ” “ನೀವು ಅಬ್ ಸ್ಕ್ಯಾಂಡ್ ಆಗಿದ್ದರೆ ನಾವು ಹುಡುಕುತ್ತಿರಲಿಲ್ಲ. ರಾಜಾರೋಷವಾಗಿ ಓಡಾಡಿದ್ದೇ ನಮಗೆ ಪ್ರಾಬ್ಲೆಂ, ಇಳೀರಿ. ಅರೆಸ್ಟ್ ಮಾಡ್ತೀವಿ” ಅಂದ್ರು. ನಾನು ಕಾರಿನಿಂದ ಇಳಿಯಲು ರೆಡಿಯಾದೆ.

ಟಿವಿ 9 ರಾಜೇಶ್ ಮಾತ್ರ ನನ್ನನ್ನು ಇಳಿಯಲು ಬಿಡುತ್ತಿಲ್ಲ. ಕೊನೆಗೆ ರಾಜೇಶ್ ಗೆ ಸಮಾದಾನ ಮಾಡಿ, ಮಾತನಾಡದೆ ಪೊಲೀಸ್ ಬೊಲೆರೋ ವಾಹನ ಹತ್ತಿದೆ. ಪೊಲೀಸರು ನನ್ನ ಮೊಬೈಲ್ ಪಡೆದುಕೊಂಡರು. ರಾತ್ರಿ ಊಟ ಮಾಡದೇ ಅಮ್ಮ ಕಾಯುತ್ತಿರುತ್ತಾರೆ. ಒಂದು ಫೋನ್ ಮಾಡ್ತೀನಿ ಅಂದೆ. ಫೋನ್ ಕೊಟ್ಟರು. “ಅಮ್ಮ, ನಾನು ಕೆಲಸ ಮುಗಿಸುವಾಗ ಲೇಟಾಗುತ್ತೆ. ಹಾಗಾಗಿ ರಾಜೇಶ್ ಮನೆಯಲ್ಲಿ ಉಳಿದುಕೊಳ್ಳುತ್ತೇನೆ. ನೀವು ಊಟ ಮಾಡಿ ಮಲಗಿ” ಎಂದು ಸುಳ್ಳು ಹೇಳಿ ಫೋನ್ ವಾಪಸ್ ಪೊಲೀಸರ ಕೈಗೆ ಕೊಟ್ಟೆ. ನೇರ ಜಡ್ಜ್ ಮನೆಗೆ ಹಾಜರುಪಡಿಸಿದಾಗ ಜೈಲಿಗೆ ಹಾಕಿದರು. ನಾನೆಲ್ಲೂ ರಂಪಾಟ ಮಾಡಲಿಲ್ಲ.

ಒಂದು ಸಿದ್ದಾಂತವನ್ನು ಇಟ್ಟುಕೊಂಡು ಪತ್ರಿಕಾವೃತ್ತಿ ನಿರ್ವಹಿಸುವಾಗ ಇಂತಹ ಪರಿಸ್ಥಿತಿಗಳು ಎದುರಾಗುತ್ತದೆ. ಅದಕ್ಕೆ ಅರ್ನಾಬ್ ಸೇರಿದಂತೆ ಎಲ್ಲರೂ ಸಿದ್ದರಿರಬೇಕು. ನಾನು ಬಿಡುಗಡೆ ಆದ ಬಳಿಕ ನನ್ನ ವೃತ್ತಿ ಜೀವನದಲ್ಲಿ ನನ್ನನ್ನು ಅರೆಸ್ಟ್ ಮಾಡಿದ ಐಪಿಎಸ್, ಎಸ್ಐ, ಇನ್ಸ್ ಸ್ಪೆಕ್ಟರ್ ಎಲ್ಲರೂ ಒಂದಿಲ್ಲೊಂದು ಪ್ರಕರಣದಲ್ಲಿ ದೂರು ಎದುರಿಸಿದರು.‌ ಆ ದೂರುಗಳು ನನ್ನ ಬಳಿ ಬಂದರೂ ನಾನು ಸುದ್ದಿ ಮಾಡಲಿಲ್ಲ.

ಯಾಕೆಂದರೆ ನನ್ನ ವರದಿ ಪೂರ್ವಾಗ್ರಹಪೀಡಿತ ಎಂದು ಅವರಿಗೆ ಅನ್ನಿಸಬಹುದು. ಆ ಕಾರಣಕ್ಕಾಗಿ ಆ ಸುದ್ದಿಯ ಸತ್ಯಾಸತ್ಯತೆ ಅರಿತು ಸುದ್ದಿ ಮಾಡುವಂತೆ ಬೇರೆ ವರದಿಗಾರರಿಗೆ ಸುದ್ದಿಯನ್ನು ಹಸ್ತಾಂತರಿಸಿದ್ದೆ. ಆದರೆ ಅರ್ನಾಬ್ ಮಾಡಿದ್ದೇನು ? ಪೊಲೀಸರ ವಿರುದ್ದ ದ್ವೇಷದ ಪತ್ರಿಕೋಧ್ಯಮ..! ಸವಾಲು ಹಾಕುವ ಪತ್ರಿಕೋಧ್ಯಮ !

ಪತ್ರಕರ್ತ ಜನಪರವಾಗಿ ಕೆಲಸ ಮಾಡಿದ್ದರೆ ಜನರು ಖಂಡಿತ ಆತನ ಪರ ನಿಲ್ಲುತ್ತಾರೆ. ಆ ನಾಲ್ಕುವರೆ ತಿಂಗಳ ಜೈಲುವಾಸದ ಅವಧಿಯಲ್ಲಿ ಪ್ರಗತಿಪರರು, ಪತ್ರಕರ್ತರು ಮಾಡಿದ ಪ್ರತಿಭಟನೆ ಐತಿಹಾಸಿಕವಾದದ್ದು. ರವಿಕೃಷ್ಣ ರೆಡ್ಡಿವರಂತೂ ಉಪವಾಸ ಸತ್ಯಾಗ್ರಹವನ್ನೇ ಮಾಡಿದ್ದರು. ಅವರೇನೋ ನನ್ನ ನಿಲುವುಗಳನ್ನು ಒಪ್ಪಿ ಪ್ರತಿಭಟಿಸಿದರು. ನಾನು ನನ್ನ ಬಹುತೇಕ ಬರಹಗಳಲ್ಲಿ ವಿರೋಧಿಸುವ ಬ್ರಾಹ್ಮಣರೂ ಕೂಡಾ ನನ್ನ ಬಿಡುಗಡೆಗಾಗಿ ಒಂಬತ್ತು ದಿನಗಳ ಹೋಮ ಮಾಡಿದರು. ಅದೂ ನಾನು ದೇವರನ್ನು ನಂಬುವುದಿಲ್ಲ ಎಂದು ತಿಳಿದೂ..!

ಯಾಕೆಂದರೆ ಪೆರ್ಮುದೆಯ ಆ ಬ್ರಾಹ್ಮಣರ ಕೃಷಿ ಭೂಮಿ ಉಳಿಸುವ ಹೋರಾಟದಲ್ಲಿ ನನ್ನ ಅಳಿಲ ಸೇವೆಯಿತ್ತು ! ಹೈ ಕೋರ್ಟ್ ಜಾಮೀನು ನೀಡಿದಾಗ ಮುಗ್ದ ಆದಿವಾಸಿಗಳು, ದಲಿತರು, ಕುಡುಬಿಗಳು ತಮ್ಮ ಜಮೀನು ಪತ್ರಗಳನ್ನು ಜೈಲಿಗೆ ತಂದಿದ್ದರು. ಬೇಗ ಜಮೀನು ಪತ್ರವನ್ನು ಜೈಲಿಗೆ ಕೊಟ್ಟು ನನ್ನನ್ನು ಬಿಡಿಸಿಕೊಳ್ಳೋಣಾವೆಂದು..! “ಜಾಮೀನಿಗೆ ಜಮೀನು ಪತ್ರ ಕೊಡುವುದು ಜೈಲಿನಲ್ಲಿ ಅಲ್ಲ, ಕೋರ್ಟಿನಲ್ಲಿ. ಅಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ.‌ ನಿಶ್ಚಿಂತೆಯಿಂದಿರಿ” ಎಂದು ನಾನೇ ಅವರುಗಳನ್ನು ಸಮಾದಾನ ಮಾಡಿ ಕಳುಹಿಸಬೇಕಿತ್ತು.

ಈ ರೀತಿ ನೀವು ಪತ್ರಕರ್ತರಾಗಿ ವೃತ್ತಿಯಲ್ಲಿ ಜನಪರ ಮತ್ತು ಪ್ರಾಮಾಣಿಕರಾಗಿದ್ದರೆ ಜನ ನಿಮ್ಮೊಂದಿಗೆ ಇದ್ದೇ ಇರ್ತಾರೆ. ಆಗ ಪೊಲೀಸ್ ಬಂಧನದ ವೇಳೆ ಯಾವ ಕಿರುಚಾಟಗಳೂ, ನನಗಾಗಿ ಅವಾಜ್ ಉಟಾಯಿಯೇ ಅನ್ನೊ ಮನವಿಗಳೂ ಬೇಕಾಗಿಲ್ಲ. ಪೊಲೀಸ್ ಬಂಧನಕ್ಕೆ ಭಯಪಡಬೇಕಾಗಿಯೂ ಇಲ್ಲ. ನನ್ನ ಪತ್ರಿಕಾ ವೃತ್ತಿಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತವೇ ತುಂಬಿಹೋಗಿ ಜನರ ನೋವುಗಳಿಗೆ ಜೊತೆಯಾಗದೇ ಇದ್ದರೆ ಮಾತ್ರ ಇಂತಹ ಗಿಮಿಕ್ ಗಳನ್ನು ಮಾಡಬೇಕಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending