Connect with us

ಕ್ರೀಡೆ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದ ಕ್ರೀಡಾ ಪೋಷಕರನ್ನು ಗುರುತಿಸಿ ಗೌರವಿಸಲು ಅವರಿಗೆ “ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ” ಯನ್ನು ನೀಡಲಾಗುತ್ತಿದೆ.

ಅರ್ಹ ಕ್ರೀಡಾ ಪೋಷಕರು ಸೆ.16 ರೊಳಗೆ ಅರ್ಜಿಯನ್ನು ಕಚೇರಿಗೆ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ದೂ.ಸಂ: 08192-237480ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Advertisement

ಕ್ರೀಡೆ

ಐಪಿಎಲ್ ಜ್ವರ | ಕ್ರಿಕೆಟ್ ಅಭಿಮಾನಿಗಳ ಕಾತುರ..!

Published

on

ಸುದ್ದಿದಿನ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಶನಿವಾರದಿಂದ ಪ್ರಾರಂಭವಾಗಲಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ‌ ನಿಂತಿರುವುದಂತೂ ಸತ್ಯ. ಸಿಎಸ್ಕೆ ವರ್ಸಸ್ ಎಂಐ ಆರಂಭಿಕ ಪಂದ್ಯವು ಶನಿವಾರ ಸಂಜೆ 7:30 ಕ್ಕೆ ಶುರುವಾಗಲಿದೆ. ಪಂದ್ಯಕ್ಕೆ ಕೇವಲ ಕೆಲವೇ ಗಂಟೆಗಳು ಮಾತ್ರ ಉಳಿದಿವೆ.

ಐಪಿಎಲ್ ಅನ್ನು‌ ಈ ಬಾರಿ ಕೊರೋನಾ ಕಾರಣಕ್ಕೆ ದೇಶದ ಹೊರಗೆ ಆಯೋಜಿಸಲಾಗಿದ್ದರೂ, ಜಾಗತಿಕ ಸಾಂಕ್ರಾಮಿಕ ರೋಗದ ಮದ್ಯೆಯೂ ಕ್ರಿಕೆಟ್ ಅಭಿಮಾನಿಗಳು ತಮ್ಮ ಮನೆಗಳಲ್ಲಿಯೇ ಕೂತು ನೋಡುವ ಸಂತಸಕ್ಕೆ ಕಾಯುತ್ತಿದ್ದಾರೆ.

ಸಂಜೆ ಟೂರ್ನಮೆಂಟ್ ಓಪನರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

Continue Reading

ಕ್ರೀಡೆ

ಸತತ ಮೂರನೇ ವರ್ಷ ಮೈಸೂರಿನ ಝೂನಲ್ಲಿ ಚಿರತೆ ದತ್ತು ಪಡೆದ ವೇದಾ ಕೃಷ್ಣಮೂರ್ತಿ; ಟೀಂ ಇಂಡಿಯಾ ಆಟಗಾರ್ತಿಗೆ ಸೈ ಎಂದ ನೆಟ್ಟಿಗರು

Published

on

ಮೈಸೂರು: ಸತತ ಮೂರನೇ ವರ್ಷ ಕೂಡ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿನ ಚಿರತೆಯೊಂದನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ದತ್ತು ಪಡೆದಿದ್ದಾರೆ.

ಈ ಕುರಿತು ವೇದಾ ಕೃಷ್ಣಮೂರ್ತಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರು ಮೃಗಾಲಯಕ್ಕೆ ಇತ್ತೀಚೆಗೆ ಅವರು ಭೇಟಿ ನೀಡಿದ್ದರು. ಆಗ ಚಿರತೆಯೊಂದನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಬಂದ್ರು ಮಾಲಿಂಗ..!

Published

on

ಸುದ್ದಿದಿನ ಡೆಸ್ಕ್ : ಐಪಿಎಲ್ 13ನೇ ಆವೃತ್ತಿಯಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಾಲಿಂಗ ಹೊರನಡೆದಿದ್ದಾರೆ. ಹೌದು, ವೈಯಕ್ತಿಕ ಕಾರಣಗಳಿಂದ ಮಾಲಿಂಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಲಭ್ಯರಾಗಿದ್ದಾರೆ.

ಆಸ್ಟ್ರೇಲಿಯಾದ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅವರು ಮಾಲಿಂಗ ಅವರ ಸ್ಥಾನವನ್ನು ತುಂಬಲಿದ್ದು, ವಾರಾಂತ್ಯದಲ್ಲಿ ತಂಡವನ್ನು ಅಬುಧಾಬಿಯಲ್ಲಿ ಕೂಡಿಕೊಳ್ಳಲಿದ್ದಾರೆ. 30 ವರ್ಷದ ಪ್ಯಾಟಿನ್ಸನ್ ಆಸೀಸ್ ಪರ 21 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending