Connect with us

ದಿನದ ಸುದ್ದಿ

ದಾವಣಗೆರೆ ಸ್ಮಾರ್ಟ್ ಸಿಟಿ ‘ಸುತ್ತಮುತ್ತ’..!

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರ ಸ್ಮಾರ್ಟ್ ಸಿಟಿಯಾಗಿ ಹೊಸ ರೂಪ ತಾಳಲಿದೆ. ಇದರ ಹಿಂದೆ ಹಲವು ಎಂಜಿನಿಯರ್ ಗಳ ಶ್ರಮ ಅಪಾರವಾಗಿದೆ.

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯನ್ನು ಎಂಜಿನಿಯರ್ ಗಳು ಸಾಕಾರಗೊಳಿಸುತ್ತಿದ್ದಾರೆ. ಒಟ್ಟು 98 ನಗರಗಳು ‘ಸ್ಮಾರ್ಟ್‌ ಸಿಟಿ’ಗಳಾಗಲಿವೆ. ಈ ನಗರಗಳ ಪಟ್ಟಿಯಲ್ಲಿ ದಾವಣಗೆರೆ ನಗರವೂ ಒಂದಾಗಿದ್ದು, ಹಲವು ನಗರಗಳಿಗೆ ಇದು ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.

ದೇಶದ ವಿವಿಧ ರಾಜ್ಯಗಳ 24 ರಾಜಧಾನಿಯ ನಗರಗಳನ್ನು ಸ್ಮಾರ್ಟ್‌ ಸಿಟಿಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಹಂತ, ಹಂತವಾಗಿ ಕೆಲಸ ನಡೆಯುತ್ತಿದೆ. ಸ್ಮಾರ್ಟ್‌ ಸಿಟಿಗಳೆಂದರೆ, ಶುದ್ಧ ನೀರು, ಸ್ವಚ್ಛತೆ, ತ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆ, ಪರಿಸರಸ್ನೇಹಿ ಸಾರಿಗೆ, ಇ-ಆಡಳಿತಕ್ಕೆ ಆದ್ಯತೆ ನೀಡಬೇಕಾಗಿದ್ದು, ಎಂಜಿನಿಯರ್ ಗಳ ನೇತೃತ್ವದ ತಂಡ ಅಂತಹ ಕೆಲಸಗಳನ್ನು ಮಾಡಲು ಮುಂದಾಗಿದೆ.

ನಗರಗಳು ಎದುರಿಸುತ್ತಿರುವ ಆಡಳಿತದ ಮತ್ತು ಸ್ವಚ್ಛತೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಕೆಲಸಗಳನ್ನು ಎಂಜಿನಿಯರ್ ಮಾಡುತ್ತಿದ್ದಾರೆ. ಒಟ್ಟಾರೆ, ಸುಸ್ಥಿರ ಮೂಲಸೌಲಭ್ಯಗಳ ವಿಸ್ತರಣೆಗಾಗಿ ಸರಳ ತಂತ್ರಜ್ಞಾನದ ಬಳಕೆ ಸ್ಮಾರ್ಟ್‌ಸಿಟಿಗಳ ಮೂಲ ಕಾರ್ಯತಂತ್ರವಾಗಿದ್ದು, ನಗರ ಕೆಲವೇ ದಿನಗಳಲ್ಲಿ ಸ್ಮಾರ್ಟ್ ಆಗಲಿದೆ.

100 ಸ್ಮಾರ್ಟ್ ಸಿಟಿ

ಕೇಂದ್ರ ಸರಕಾರ ಈಗಾಗಲೇ 100 ಸ್ಮಾರ್ಟ್‌ ಸಿಟಿಗಳ ಅಭಿವೃದ್ಧಿಗೆ ರೂ.48,000 ಕೋಟಿ ವಿನಿಯೋಗಿಸುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದೆ. ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಈ ಯೋಜನೆ ಜಾರಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಖಾಸಗಿ ಸಹಭಾಗಿತ್ವದ ಬಗ್ಗೆಯೂ ಕೇಂದ್ರ ಸರ್ಕಾರ ಒಲವು ಪ್ರಕಟಿಸಿದ್ದು, ಹಾಗೆ ಬಂಡವಾಳ ಹೂಡುವ ಖಾಸಗಿ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಹೊಣೆಗಾರಿಕೆಯೂ ರಾಜ್ಯ ಸರ್ಕಾರಗಳ ಮೇಲಿದೆ. ಈ ಯೋಜನೆ ಯಶಸ್ವಿಯಾಗಿ ಸಾಕಾರಗೊಳ್ಳಲು ನಗರಗಳ ಜನರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ.

ಸ್ಮಾರ್ಟ್ ಸಿಟಿ : ಇಂಜಿನಿಯರ್ ಗಳು

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಏಳು ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಜೂನಿಯರ್ ಇಂಜಿನಿಯರ್ ನಾಲ್ಕು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಮೊದಲ ಹಂತದಲ್ಲೇ ಆಯ್ಕೆ

ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮೊದಲ ಹಂತದ ನಗರಗಳಲ್ಲಿ ದಾವಣಗೆರೆ ಆಯ್ಕೆಯಾಗಿದ್ದು, ಕಾಮಗಾರಿಗೆ 2016-17ರಲ್ಲೇ 398 ಕೋಟಿ ರೂ. ಬಿಡುಗಡೆಯಾಗಿದೆ. ರಾಜ ಕಾಲುವೆ, ಸ್ಮಾರ್ಟ್ ರೋಡ್, ಸಿಸಿ ಕ್ಯಾಮೆರಾ, ಸ್ಮಾರ್ಟ್ ಬಸ್ಟಾಂಡ್, ಸ್ಮಾರ್ಟ್ ಆಟೋ, ಸ್ಮಾರ್ಟ್ ಲೈಟಿಂಗ್, ಸಾರ್ಟ್ ಬೋರ್ಡ್ ಹೀಗೆ ಹತ್ತು ಹಲವು ಕೆಲಸಗಳು ಸ್ಮಾರ್ಟ್ ಸಿಟಿಯಲ್ಲಿ ಆಗುತ್ತಿದೆ. ಈ ಎಲ್ಲ ಕೆಲಸಗಳಲ್ಲಿ ಎಂಜಿನಿಯರ್ ಪಾತ್ರ ಅಪಾರವಾಗಿದೆ.

ಅಭಿವೃದ್ದಿ ಮತ್ತು ಮನವಿ

ಸ್ಮಾರ್ಟ್ ಸಿಟಿ ಯೋಜನೆಯಅಡಿಯಲ್ಲಿ ಒಂದನೇ ಹಂತದ ರಿಂಗ್ ರಸ್ತೆ ಮತ್ತು ರಿಂಗ್ ರಸ್ತೆಗೆ ಸೇರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಮತ್ತು 2ನೇ
ಪಾದಚಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ
ಚಾಲನೆ ನೀಡಲಾಗಿದೆ. ಈ ಸಂಬಂಧ 600
ರಿಂದ 700 ಕೋಟಿ ಅನುದಾನಕ್ಕಾಗಿ
ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.


ಸ್ಮಾರ್ಟ್ ಸಿಟಿ ಕನಸು ಇನ್ನೂ 2 ವರ್ಷ ಗಳಲ್ಲಿ ಸುಮಾರು 1,150 ಕೋಟಿ ಹಣವನ್ನು ಖರ್ಚು ಮಾಡಿ ಸ್ಮಾರ್ಟ್ ಸಿಟಿಯ ಕನಸನ್ನು ನನಸು ಮಾಡಲಾಗುವುದು.”

| ಸಂಸದ ಜಿ.ಎಂ. ಸಿದ್ದೇಶ್ವರ


ಸುದ್ದಿದಿನ.ಕಾಂ|ವಾಟ್ಸಾಪ್|9980346243

Advertisement

ದಿನದ ಸುದ್ದಿ

ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ಸಭೆ | ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಕ್ರಮ

Published

on

ಸುದ್ದಿದಿನ,ದಾವಣಗೆರೆ :ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಪ್ರಮುಖವಾಗಿ ದಲಿತರಿಗೆ ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ದ ಕ್ರಮ, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು, ಈ ಸಭೆ ನಡೆದು 2 ವರ್ಷಗಳಾಗಿದ್ದು ನಾನು ಜಿಲ್ಲಾಧಿಕಾರಿಯಾಗಿ ಬಂದ ನಂತರ ಮೊದಲ ಸಭೆ
ಇದಾಗಿದೆ. ತಮ್ಮ ಕುಂದು ಕೊರತೆಗಳನ್ನು ಮುಕ್ತವಾಗಿ ತಿಳಿಸಿ. ನಾನೂ ಸೇರಿದಂತೆ ಅಧಿಕಾರಿಗಳ ತಂಡದಿಂದ ತಮ್ಮ ಮನವಿಗಳನ್ನು ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ವರ್ಷದಲ್ಲಿ ಸುಮಾರು 349 ಜಾತಿ ನಿಂದನೆ ಕೇಸ್‍ ದಾಖಲು : ಎ ಎಸ್ಪಿ ರಾಜೀವ್

Published

on

ಸುದ್ದಿದಿನ,ದಾವಣಗೆರೆ: ನಿಮ್ಮ ಕುಂದು ಕೊರತೆಗಳು ನಮಗೆ ಅರ್ಥವಾಗಿದೆ. ನಮ್ಮ ಇಲಾಖೆಯು 10 ವರ್ಷದಲ್ಲಿ ಸುಮಾರು 349 ಜಾತಿ ನಿಂದನೆ ಕೇಸ್‍ಗಳನ್ನು ದಾಖಲಿಸಿಕೊಂಡಿದ್ದು, ಇಲ್ಲಿ 7 ಜನರಿಗೆ ಮಾತ್ರ ಪರಿಹಾರ ಬರಬೇಕು. ಜೊತೆಗೆ 99 ಕೇಸ್‍ಗಳು ಬಾಕಿ ಇದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ರಾಜೀವ್ ಮಾಹಿತಿ ನೀಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅವರು ಮಾಹಿತಿ ಹಂಚಿಕೊಂಡರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪ.ಜಾತಿ – ಪ.ಪಂಗಡದವರ ಮೇಲಿನ ದೌರ್ಜನ್ಯ ಖಂಡಿಸಿದರೆ, ನನಗೆ ಚಪ್ಪಲಿ ಹಾರ ಹಾಕುತ್ತಾರೆ :‌ ಜಿ.ಪಂ ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ನಾನೊಬ್ಬ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ. ನನಗೆ ನಗರದ ಪ್ರಮುಖ ವೃತ್ತದಲ್ಲಿ ಚಪ್ಪಲಿ ಹಾರ ಹಾಕುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ನೋವಿನಿಂದ ನುಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು,

ದೂರು ನೀಡಿ ಸಂಬಂಧಿಸಿದವರನ್ನು ಬಂಧಿಸಲು ಕೋರಿದರೆ, ಪೊಲೀಸರು ಆರೋಪಿಗಳು ಕಣ್ಮರೆಯಾಗಿದ್ದಾರೆ ಎಂದು ಸಬೂಬು ಹೇಳುತ್ತಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಮುಖ್ಯ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಹೇಗೆ ಸಾಧ್ಯ? ಇದು ಇಲಾಖೆಯ ವೈಫಲ್ಯವಲ್ಲವೇ? ನನ್ನಂತಹವನಿಗೇ ಹಾಗೆ ಆದರೆ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 500 ರಿಂದ 600 ಕ್ರಷರ್ ಮಾಲೀಕರಿದ್ದಾರೆ. ಇದರಲ್ಲಿ ಎಸ್‍ಸಿ/ಎಸ್‍ಟಿ ಜನಾಂಗದವರು ಎಷ್ಟು ಜನರಿದ್ದಾರೆ? ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಜನಾಂಗದವರು ಇರುವ ಪ್ರದೇಶಗಳಲ್ಲಿ ಎಷ್ಟು ಕಾಮಗಾರಿಗಳಾಗಿವೆ? ಈ ಜಿಲ್ಲೆಯಲ್ಲಿ ಸಮಾನತೆ ಎಂಬುದು ಏನಾದರೂ ಇದ್ದರೆ ಅದು ಕರೊನಾದಿಂದ ಸತ್ತವರನ್ನು ಮಣ್ಣು ಮಾಡುವಲ್ಲಿ ಮಾತ್ರ ಇದೆ. ಬೇರೆಲ್ಲಿಯೂ ಇಲ್ಲ.

ಕಳೆದ 10 ವರ್ಷಗಳಲ್ಲಿ ಈ ಸಮುದಾಯದವರ ಮೇಲೆ ಎಷ್ಟು ದೌರ್ಜನ್ಯದ ಕೇಸ್‍ಗಳಾಗಿವೆ? ಎಷ್ಟರಲ್ಲಿ ಶಿಕ್ಷೆ ಆಗಿದೆ. ಎಷ್ಟು ‘ಬಿ’ ರಿಪೋರ್ಟ್ ಆಗಿದೆ ಮಾಹಿತಿ ಒದಗಿಸಿ. ಹಾಗೂ ಈ ಹಿಂದಿನ ಸಭೆಯ ಅನುಪಾಲನೆ ವರದಿಯೇ ಇಲ್ಲದೇ ಮುಂದಿನ ಸಭೆ ನಡೆಸುವುದು ಹೇಗೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending