Connect with us

ದಿನದ ಸುದ್ದಿ

Boycott China ಎನ್ನುವುದು ಬಹಳ ಸುಲಭ ಹಾಗೂ ಕೇಳಲೇನೋ ಚೆಂದ, ಆದರೆ ವಾಸ್ತವ..?

Published

on

  • ಗ್ಲಾಡ್ ಸನ್ ಅಲ್ಮೆಡಾ

Boycott China ಎನ್ನುವುದು ಬಹಳ ಸುಲಭ ಹಾಗೂ ಕೇಳಲೂ ಚೆಂದ. ಆದರೆ ವಾಸ್ತವ? ಸದ್ಯದ ಪರಿಸ್ಥಿತಿಯಲ್ಲಂತೂ ಅಲ್ಮೋಸ್ಟ್ ಇಂಪಾಸಿಬಲ್. ಯಾಕೆ ಗೊತ್ತೇ? ಚೀನಾದಿಂದ ಭಾರತ ಪಡೆಯುತ್ತಿರುವ ಆಮದಿನ ಒಟ್ಟು ಮೌಲ್ಯ ಸುಮಾರು 60 ಬಿಲಿಯನ್ ಡಾಲರ್. ಇದು ಚೀನಾದ ಒಟ್ಟು ರಫ್ತಿನ ಕೇವಲ 3% ಅಷ್ಟೇ.

ಹಾಗಾಗಿ ಭಾರತ ಸಂಪೂರ್ಣವಾಗಿ ಚೀನಾದ ಆಮದನ್ನು ನಿಲ್ಲಿಸಿದರೂ, ಚೀನಾಕ್ಕೆ ಹೊಡೆತ ಬೀಳಲ್ಲ. ಇನ್ನು ಈ ಆಮದಿನಲ್ಲಿ ಹಲವಾರು ಔಷಧಿಗಳ ಮೂಲಧಾತುಗಳನ್ನೂ ಕೂಡಾ ಭಾರತೀಯ ಜೌಷಧಿ ಕಂಪನಿಗಳು ತರಿಸುತ್ತಿವೆ. ಇವೆಲ್ಲಾವನ್ನು ಬೇರೆಡೆಯಿಂದ ತರಿಸಿಕೊಳ್ಳಲು ಭಾರತ ಶಕ್ತವಾಗಿದೆಯಾ ಎನ್ನುವ ಪ್ರಶ್ನೆಗೆ ಸರಕಾರದ ಬಳಿಯೇ ಉತ್ತರವಿಲ್ಲ.

ಆದರೆ ಚೀನಾದಿಂದ ಆಗುತ್ತಿರುವ ಆಮದು, ನಮ್ಮ ಒಟ್ಟು ಆಮದಿನ ಸುಮಾರು 14%. ಹಾಗಾಗಿ ಚೀನಾದಿಂದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಭಾರತದ ಆಮದಿನ ಮೇಲೆ ಭಾರೀ ಪರಿಣಾಮವುಂಟಾಗುತ್ತದೆ. ಒಂದೇ ಬೇರೆ ಯಾವುದೇ ದೇಶದಿಂದ ಭಾರತ ಆಮದು ಮಾಡಿ ಈ ಪರಿಣಾಮವನ್ನು ಸರಿದೂಗಿಸಬೇಕು ಇಲ್ಲವೇ ನಮ್ಮಲ್ಲೇ ಉತ್ಪಾದನೆ ಕೈಗೊಳ್ಳಬೇಕು. ಬೇರೆ ದೇಶದಿಂದ ಚೀನಾ ಮಾರುವ ಬೆಲೆಯಲ್ಲಿ ವಸ್ತುಗಳಂತೂ ಸಿಗೋಲ್ಲ. ಹಾಗಾಗಿ ಅದು ಕಷ್ಟಸಾಧ್ಯ. ಇನ್ನು ಭಾರತದಲ್ಲಿ ಉತ್ಪಾದನೆ.

ಮೇಕ್ ಇನ್ ಇಂಡಿಯಾ ಎಂದು ಸ್ಲೋಗನ್ ಮಾಡಿಕೊಂಡರೂ ಭಾರತದ ಉತ್ಪಾದನಾ ಕ್ಷೇತ್ರ ಕಳೆದ ಮೂರ್ನಾಲ್ಕು ವರುಷಗಳಲ್ಲಿ ಸತತವಾಗಿ ನಷ್ಟದಲ್ಲಿದೆ. ಹಾಗಾಗಿ ಮಾಧ್ಯಮಗಳು, ಭಕ್ತರು ಎಷ್ಟು ಬಾಯ್ಕಾಟ್, ಬಾಯ್ಕಾಟ್ ಎಂದರೂ, ನಮ್ಮ ಸರಕಾರ ಸದ್ಯಕ್ಕೆ ಚೀನಾದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ನಮ್ಮ ಆರ್ಥಿಕತೆಯ ಮೇಲೆ ಆಗಬಹುದಾದ ಪರಿಣಾಮಗಳನ್ನೆದುರಿಸಲು ತಯಾರಾಗಿದೆಯೇ? ಶಕ್ತವಾಗಿದೆಯೇ? ನನ್ನ ಪ್ರಕಾರ ಎರಡೂ ಇಲ್ಲ. ವಿ ಆರ್ ನಾಟ್ ರೆಡಿ. ಐಟಿ ಸೆಲ್, ಫೇಸ್‍‍ಬುಕ್‍, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಉತ್ಪಾದನೆ ಗಗನ ಮುಟ್ಟಿದೆಯಾದರೂ, ಆ ಔಟ್‍ಪುಟ್ಟನ್ನೂ ನಮ್ಮ ಸರ್ಕಾರನೇ ಖರೀದಿಸೋಲ್ಲ.

ಇನ್ನು ಸದ್ಯಕ್ಕೆ ಚೀನಾ ನಮ್ಮ ದೇಶದಲ್ಲಿ ಮಾಡಿರುವ ಹೂಡಿಕೆಯನ್ನು ಹೇಗೆ ನಿಲ್ಲಿಸುವುದು? ಭಕ್ತರು ಬಾಯ್ಕಾಟ್, ಬಾಯ್ಕಾಟ್ ಎಂದು ಊಳಿಡುತ್ತಿರುವಾಗಲೇ ಡೆಲ್ಲಿ-ಮೀರಟ್ ನಡುವಿನ ರೇಲ್ವೇ ಯೋಜನೆಯ ಕಾಮಗಾರಿಯೊಂದನ್ನು ಚೀನಾದ ಕಂಪನಿಯೊಂದಕ್ಕೆ ಗುತ್ತಿಗೆಗೆ ಕೊಡಲು ತಯಾರಿ ನಡೆಸುತ್ತಿದೆಯೆಂದು ವರದಿಯಾಗಿದೆ.

ಇನ್ನು ಈಗಾಗಲೇ ಆಗಿರುವ ಹೂಡಿಕೆ ದೊಡ್ಡ ಮೊತ್ತದ್ದು. ಬಾಯ್ಕಾಟ್ ಅನ್ನುವ ಮೊದಲು ವಾಸ್ತವವನ್ನು ಅರಿಯಿರಪ್ಪಾ. ಆರು ವರುಷಗಳಲ್ಲಿ ಚೀನಾಕ್ಕೆ ನಮ್ಮ ದೇಶದಲ್ಲಿ ಬೇಕಾಬಿಟ್ಟಿಯಾಗಿ ಹೂಡಿಕೆ ಮಾಡಲು ಬಿಟ್ಟು, ಅವರ ಆಮದನ್ನು ಹೆಚ್ಚಿಸಿ, ಈವಾಗ ಒಮ್ಮೆಗೆ ಬಾಯ್ಕಾಟ್ ಅಂದರೆ?

ಅದಕ್ಕೆ ಬಾಯ್ಕಾಟ್, ಬಾಯ್ಕಾಟ್ ಎನ್ನುವ ಕಾಂಟ್ರಾಕ್ಟನ್ನು ಸರಕಾರ ಮಾಧ್ಯಮಗಳು ಹಾಗೂ ಭಕ್ತ ಮಂಡಳಿಗೆ ಬಿಟ್ಟುಕೊಟ್ಟು, ತಾನು ಮಾತ್ರ ಮೌನಕ್ಕೆ ಜಾರಿದೆ. ಯಾಕೆಂದರೆ ಅವರಿಗೆ ವಾಸ್ತವ ತಿಳಿದಿದೆ. ಆದರೂ ಚುನಾವಣೆಗಳಿವೆಯಲ್ವಾ? ಹಾಂ! ಅದರಲ್ಲಿ ಈ ಬಾಯ್ಕಾಟ್, ಕಡೀ ನಿಂದಾಗಳು ತುಂಬಾ ಹೆಲ್ಪ್ ಮಾಡ್ತಾವೆ ಅಂತ ಬ್ರಹ್ಮಾಂಡ ಜ್ಯೋತಿಷಿಗಳು ಹೇಳಿದ ನೆನಪು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಯುಪಿಯಲ್ಲಿ ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ-ಕೊಲೆ : ಇಬ್ಬರ ಬಂಧನ

Published

on

ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಇನ್ನೊಂದು ಜಿಲ್ಲೆಯಾದ ಬಲರಾಮ್‍ಪುರದಲ್ಲಿ ಮತ್ತೋರ್ವ ದಲಿತ ಯುವತಿ ಅತ್ಯಾಚಾರಕ್ಕೊಳಗಾಗಿ, ತೀವೃ ಗಾಯಗಳೊಂದಿಗೆ ಮೃತಪಟ್ಟಿದ್ದಾಳೆ.

ಬಲರಾಮ್ ಪುರದ ಗ್ರೈಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಶಾಹೀದ್ ಮತ್ತು ಸಾಹಿಲ್ ಎಂಬ ಯುವಕರನ್ನು ಪೋಲೀಸರು ಬಂಧಿಸಿದ್ದಾರೆ.

ಘಟನೆ ವಿವರ

22 ವರುಷದ ಈಕೆ ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ (ಕೆಲ ವರದಿಗಳ ಪ್ರಕಾರ ಆಕೆ ಎರಡನೆಯ ವರುಷದ ಪದವಿ ಕಾಲೇಜಿನ ಅಡ್ಮಿಷನ್‍‍ಗಾಗಿ ಕಾಲೇಜಿಗೆ ಹೋಗಿ ಮನೆಗೆ ವಾಪಾಸ್ಸು ಬರುತ್ತಿದ್ದಳು) ಆಕೆಗೆ ಪರಿಚಯದ ಶಾಹಿದ್ ಹಾಗೂ ಸಾಹಿಲ್ ಎಂಬ ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.

ಆಕೆ ತೀವೃ ರಕ್ತಸ್ರಾವ ಹಾಗೂ ಯುವಕರ ಮೃಗೀಯ ವರ್ತನೆಯಿಂದ ನಡೆಯಲೂ ಆಗದ ಸ್ಥಿತಿಯಲ್ಲಿ ಇದ್ದುದ್ದನ್ನು ಕಂಡು ಹೆದರಿದ ಅತ್ಯಾಚಾರಿಗಳು, ಅದೇ ಯುವಕರು ಆಕೆಯನ್ನು ಆವರ ಪರಿಚಯದ ವೈದ್ಯರ ಬಳಿಗೆ ಕೊಂಡೊಯ್ದು, ಗ್ಲೂಕೋಸ್ ಡ್ರಿಪ್ಸ್ ಹಾಕಿ, ರಿಕ್ಷಾದಲ್ಲಿ ಕುಳ್ಳಿರಿಸಿ ಮನೆಗೆ ಕಳುಹಿಸಿದ್ದಾರೆ.

ಅಷ್ಟರವರೆಗೆ ಆಕೆಯ ಹುಡುಕಿ ಕಂಗಾಲಾಗಿದ್ದ ಹೆತ್ತವರು, ಆಕೆಯನ್ನು ತಂದ ರಿಕ್ಷಾ ಮನೆ ಬಳಿ ಬರುತ್ತಿದ್ದಂತೆ, ಆಕೆಯ ಪರಿಸ್ಥಿತಿಯನ್ನು ಕಂಡು, ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಪ್ರತಿಕ್ರಯಿಸದೆ, ಆಕೆ ಮೃತಪಟ್ಟಿದ್ದಾಳೆ. ಹೆತ್ತವರನ್ನು ನೋಡುತ್ತಲೇ “ಅಮ್ಮಾ ನನಗೆ ತೀವೃ ನೋವಾಗುತ್ತಿದೆ. ನಾನು ಬದುಕುಳಿಯಲಾರೆ,” ಎಂದು ಆಕೆ ನೋವಿನಿಂದ ನರಳುತ್ತಿದ್ದಳೆಂದು ಆಕೆಯ ಹೆತ್ತವರು ಹೇಳಿದ್ದಾರೆ. ಅವರ ಪ್ರಕಾರ ಅತ್ಯಾಚಾರಿಗಳು ಆಕೆಯ ಕೈಗಳನ್ನು ಮುರಿದಿದ್ದರು ಹಾಗೂ ಆಕೆಯ ಬೆನ್ನುಮೂಳೆಗೂ ಪೆಟ್ಟಾಗಿತ್ತು.‌ ಈ ಸಂಬಂಧ ಅತ್ಯಾಚಾರಿಗಳ ಮೇಲೆ ಕುಟುಂಬದವರು ಅತ್ಯಾಚಾರ-ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಪೋಲಿಸ್ ಹೇಳಿಕೆ

ಬಲರಾಮ್ ಪೋಲೀಸರು ಮತ್ತಿತರ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಕೈ-ಕಾಲು ಮುರಿದಿರುವುದು ದೃಢಪಟ್ಟಿಲ್ಲವೆಂದು ಟ್ವೀಟ್ ಮಾಡುವುದರ ಮೂಲಕ ಆರೋಪವನ್ನು ಅಲ್ಲಗಳೆದಿದ್ದಾರೆ.

ದೇವಿಪಟ್ನ ವಲಯದ ಐಜಿಪಿ ರಾಕೇಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ” ಯುವತಿಗೆ ಅತಿಯಾದ ರಕ್ತಸ್ರಾವ ಆದಕಾರಣ ಆಕೆ ಮೃತಪಟ್ಟಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ಆಗಿದೆಯೋ,ಇಲ್ಲವೋ ಎಂಬುದು ವೈದ್ಯರು ಪರೀಕ್ಷೆಯ ವರದಿ ಬಂದ ಮೇಲೆ ತಿಳಿಸಲಾಗುವುದು” ಎಂದು ಹೇಳಿಕೆ ನೀಡಿದ್ದಾರೆ‌.

https://twitter.com/priyankagandhi/status/1311507851831996416?s=20

https://m.timesofindia.com/city/lucknow/another-dalit-woman-raped-killed-in-up-2-arrested/amp_articleshow/78418057.cms

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಮ್ಮ ನ್ಯಾಯಾಲಯಗಳು ಇತರೆ ಚಿಲ್ಲರೆ ಕೇಸುಗಳಲ್ಲಿ ಎಷ್ಟು ಜಬರ್ದಸ್ತ್ ಆಗಿರುತ್ತವೆ ನೋಡಿ..!

Published

on

  • ಪಂಜು‌ ಗಂಗ್ಗೊಳ್ಳಿ, ವ್ಯಂಗ್ಯ ಚಿತ್ರಕಾರರು

ಮುಂಬೈಯ ಕುರ್ಲಾದ 19 ವರ್ಷ ಪ್ರಾಯದ ಆಲೀಂ ಪಟೇಲ್ ಮಾಹೀಂ ಎಂಬಲ್ಲಿ ಕಾರು ಸೀಟುಗಳನ್ನು ಹೊಲಿಯುವ ಕೆಲಸ ಮಾಡಿ ಅವನ ಕುಟುಂಬದ ಹೊಟ್ಟೆ ಪಾಡು ನಡೆಯುತ್ತಿತ್ತು. ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಹೇರಲ್ಪಟ್ಟು ಬಸ್ಸು, ಲೋಕಲ್ ಟ್ರೈನ್ ಗಳು ಬಂದಾಗಿ ಲಕ್ಷಾಂತರ ಕೆಲಸಗಾರಂತೆ ಇವನೂ ಮನೆಯಲ್ಲೇ ಕುಳಿತುಕೊಳ್ಳಬೇಕಾಯಿತು.

ಜೂನ್ ನಲ್ಲಿ ಲಾಕ್ ಡೌನ್ ಸಡಿಲಗೊಂಡು ಅಗತ್ಯ ಸೇವೆಗಳನ್ನು ನಿರ್ವಹಿಸುವವರಿಗಾಗಿ ಲೋಕಲ್ ಟ್ರೈನ್ ಗಳನ್ನು ಶುರು ಮಾಡಿದಾಗ ಜೀವನ ನಿರ್ವಹಣೆಗೆ ಬೇರೆ ಮಾರ್ಗವಿಲ್ಲದ ಆಲೀಂ ಪಟೇಲ್ ಒಂದು ನಕಲಿ ಪಾಸನ್ನು ಮಾಡಿಕೊಂಡು ಲೋಕಲ್ ಟ್ರೈನಲ್ಲಿ ಮಾಹೀಂನ ತನ್ನ ಕೆಲಸಕ್ಕೆ ಹೋಗಿ ಬಂದು ಮಾಡಲು ಶುರು ಮಾಡಿದ.

ಆದರೆ, ಆಗಸ್ಟ್ 20 ರಂದು ಒಬ್ಬ ಟಿಸಿ ಇವನನ್ನು ಹಿಡಿದು ಚೀಟಿಂಗ್ ಕೇಸ್ ಹಾಕಿ ಮ್ಯಾಜಿಸ್ಟ್ರೇಟ್ ಕೋರ್ಟು ಇವನಿಗೆ ಜಾಮೀನು ನೀಡದೆ ಜೈಲು ಸೇರ ಬೇಕಾಯಿತು. ಆದಿತ್ಯ ಮೊಕಾಶಿ ಎಂಬ ಇವನ ಲಾಯರ್ ಸೆಸ್ಸನ್ ಕೋರ್ಟಲ್ಲಿ ಅಪೀಲ್ ಹಾಕಿ ಆಲೀಂ ಪಟೇಲ್ ಹೊಟ್ಟೆ ಪಾಡು ನಡೆಸಲು ಬೇರೇನೂ ದಾರಿಯಿಲ್ಲದೆ ಹೀಗೆ ಮಾಡಿದನೇ ವಿನಃ ಯಾರನ್ನೂ ವಂಚಿಸಲು ಅಲ್ಲ ಎಂದು ಕೇಳಿಕೊಂಡಾಗ ಕೋರ್ಟು 15000 ರುಪಾಯಿ ಬಾಂಡ್ ಮತ್ತು ವೈಯಕ್ತಿಕ ಶ್ಯೂರಿಟಿ ಪಡೆದು ಜಾಮೀನು ನೀಡಿತು, 40 ದಿನಗಳ ನಂತರ!

ಇದನ್ನೂ ಓದಿ‌ 

ಕೊರೋನಾ ಪಾಸಿಟಿವ್ ವರದಿ ಕೊಟ್ಟ ಲ್ಯಾಬ್ ಟೆಕ್ನೀಶಿಯನ್ ಮೇಲೆ ಸೋಂಕಿತನಿಂದ ಹಲ್ಲೆ https://www.suddidina.com/daily-news/coronavirus-and-hasana

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊರೋನಾ ಪಾಸಿಟಿವ್ ವರದಿ ಕೊಟ್ಟ ಲ್ಯಾಬ್ ಟೆಕ್ನೀಶಿಯನ್ ಮೇಲೆ ಸೋಂಕಿತನಿಂದ ಹಲ್ಲೆ

Published

on

ಸುದ್ದಿದಿನ, ಹಾಸನ : ಜಿಲ್ಲೆಯ, ಅರಸೀಕೆರೆ ತಾಲೂಕಿನ ದೊಡ್ಡ ಮೇಟಿಕುರ್ಕಿ ಗ್ರಾಮದಲ್ಲಿ ಸೆಪ್ಟೆಂಬರ್ 17 ನೇ ತಾರೀಖಿನಂದು ಗ್ರಾಮದ ಮಂಜುನಾಥ್‍‌ ಎಂಬುವವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ, ಕೊರೋನಾ ವಾರಿಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊರೋನಾ ಪಾಸಿಟಿವ್ ಬಂದಿದ್ದ ವ್ಯಕ್ತಿ, ಸ್ಲ್ಯಾಬ್ ಟೆಸ್ಟ್ ಮಾಡಿದ್ದ ಲ್ಯಾಬ್ ಟೆಕ್ನೀಷಿಯನ್ ಮೇಲೆ ಮಂಜುನಾಥ್ ಹಲ್ಲೆ ನಡಿಸಿದ್ದಾನೆ. ಕೊರೋನಾ ನನಗೆ ಬಂದಿಲ್ಲ, ಹಣವನ್ನು ದೋಚಲು ಕೊರೋನಾ ಪಾಸಿಟಿವ್ ಎಂದು ವರದಿ ಕೊಟ್ಟಿದ್ದೀಯಾ ಎಂದು ಗಂಭೀರವಾಗಿ ಆತನನ್ನು ಥಳಿಸಿದ್ದಾನೆ. ಹಲ್ಲೆ ನಡೆಸಿರು ಕೊರೋನಾ ಸೋಂಕಿತನ ಮೇಲೆ ಕೇಸ್ ದಾಖಲಾಗಿದೆ.

ಇದನ್ನೂ ಓದಿ

ಸಿಎಂ ಮಗನ ಭ್ರಷ್ಟಾಚಾರದ ವೃತ್ತಾಂತ : ಪವರ್ ಟಿವಿ ಬಂದ್ ಹಿಂದಿನ ಒಳ ರಾಜಕೀಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending