Connect with us

ಭಾವ ಭೈರಾಗಿ

ಆ ಪ್ರೀತಿಲಿ ಅದೊಂದು ಮಿಸ್ ಆಗ್ತಿದೆ ನೋಡಿ!

Published

on

ಪ್ರೀತಿ ಅಂದ್ರೆ ಹಾಗೇನೆ ಅದೊಂಥರಾ ಮಾಯಾಲೋಕ..ನಿನ್ನೆವರೆಗೂ ಸರ್ವೇ ಸಾಮಾನ್ಯ ಅನ್ನೋ ಹಾಗೆ ಕಾಣ ಸ್ತಿದ್ದ ಜಗತ್ತು ಪ್ರೀತಿಯಲ್ಲಿ ಬಿದ್ದ ಮರುಕ್ಷಣ ಕಲರ್ ಫುಲ್ ಆಗಿಬಿಡುತ್ತೆ.

ರೋಡಲ್ಲಿ ಕಾರಿಗೆ ಅಡ್ಡ ಹೋಗಿ ಬೈಸಿಕೊಂಡ್ರು ನಗು ಬರುತ್ತೆ, ಬಸ್ಸಲ್ಲಿ ಸಿಕ್ಕ ಭಿಕ್ಷುಕರ ಮಗುವನ್ನೂ ಮುದ್ದಾಡ್ಬೇಕು ಅನ್ಸುತ್ತೆ. ಬೆಳಗೆದ್ದು ಹಾಡು ಕೇಳಿ ಹೊರಬಂದ್ರೆ ಅದೇನು ಹಿತ ಅಂತೀರಾ, ಅವಳೇನು ನಮ್ಮ ಜೊತೆಗೇ ಇರಬೇಕಿಲ್ಲ ಆದರೂ ಅವಳು ನನ್ನ ಪ್ರೀತಿಸ್ತಿದ್ದಾಳೆ ಅನ್ನೊ ಆ ಒಂದು ಭಾವನೆ ಇದೆಯಲ್ಲ, ಅದಕ್ಕಿಂತ ಹೆಚ್ಚಿನದು ಮತ್ತೇನೂ ಇಲ್ಲ.ಜಗತ್ತಿನ ಅತೀ ದೊಡ್ಡ ಖುಷಿ ಅಂದ್ರೆ ಅದು ನಾನು ಯಾರಿಂದಲೋ ಪ್ರೀತಿಸಲ್ಪಡುತ್ತಿದ್ದೇನೆ ಅನ್ನೊ ಭಾವನೆಯಂತೆ. ಈ ಪ್ರೀತಿ ಅನ್ನೋ ಪದವೇ ಹಾಗೆ ಅದೊಂದು ವಿಭಿನ್ನ ಜಗತ್ತು. ಅದೆಲ್ಲಾ ನಾನು ಹೇಳಿ ನೀವು ಕೇಳಿದರೆ ಅರ್ಥವಾಗುವಂಥದ್ದಲ್ಲ, ಅದರ ಖುಷಿ ಅನುಭವಿಸಿದವರಿಗೆ ಮಾತ್ರವೇ ದಕ್ಕುವಂಥದ್ದು.

ಹೀಗಿದ್ದ ಪ್ರೀತಿ ದಿನಕಳೆದ ಹಾಗೆ ಅದು ಹೇಗೋ ಸಾದಾ ಸಾದಾ ಅನ್ನಿಸಿಬಿಡುತ್ತೆ. ಪ್ರತಿಸಲದಂತೆ ಕಿತ್ತಾಡಿ ಮತ್ತೆ ಒಂದಾಗೋ ಬದಲು ಅಲ್ಲೊಂದು ಬಿರುಕು ಹಾಗೇ ಉಳಿದುಬಿಡುತ್ತೆ. ಏನೇ ಅನ್ನಿ ಆ ಒಂದು ವಾರ ಮಾತು ಬಿಟ್ಟು ಒಂದಾದಮೇಲೆ ಆಕೆಗೆ ಅವನು ಮೊದಲಿನಂತಿಲ್ಲ ಅನ್ನಿಸುತ್ತೆ. ಆಗೆಲ್ಲಾ ಅವನು ಮಾತಾಡಿದ್ರೆ ಕೇಳ್ತಾನೆ ಇರಬೇಕು ಅಂತಿದ್ದವಳು ಈಗ ಪ್ರತಿ ಮಾತಿಗೂ ತಪ್ಪು ಹುಡುಕ್ತಾಳೆ. ಅವನು ಆರಂಭದಲ್ಲಿ ಬೆಳಗ್ಗೆ ಸಂಜೆ ಕಾಲ್ ಮಾಡಿ ಮಾತಾಡಿದ್ರು ಐ ಮಿಸ್ ಯೂ ಅಂತ ನೂರುಬಾರಿ ಅಂತಿದ್ದವನು, ಈಗ ಕಾಲ್ ಮಾಡಿದ್ರೆ ಏನ್ ಕಾಲ್ ಮಾಡಿದ್ದು ಅಂತ ಕೇಳುವ ಮಟ್ಟಕ್ಕೆ ತಲುಪಿದ್ದಾನೆ.

ಮೊದಮೊದಲು ಅವಳಿಗೆ ಅವನು ತುಂಬಾ ಇಷ್ಟ ಆಗ್ತಿದ್ದ್ದ. ಆದರೆ ಈಗ ಕಾಲ ಬದಲಾಗಿದೆಯೋ ಅವಳು ಬದಲಾಗಿದ್ದಾಳೋ ಗೊತ್ತಿಲ್ಲ. ಅವನು ಅಂದ್ರೆ ಉರಿದು ಬೀಳ್ತಾಳೆ. ಆತ ಏನೇ ಮಾತಾಡಿದ್ರು ಅವಳಿಗೆ ಅದು ತಪ್ಪಾಗಿ ಕಾಣ ಸುತ್ತೆ. ಅವನನ್ನು ಕಂಡ್ರೆ ಅವಳು ಇರಿಟೇಟ್ ಆಗ್ತಾಳೆ..

ಯಾಕೆ ಹೀಗೆ? ಇದು ಪ್ರೀತಿಯಲ್ಲಿ ನೊಂದ ಬಹುತೇಕ ಹುಡುಗ ಹುಡುಗಿಯರು ಹೇಳೋ ಮಾತು. ಅವರ ಈ ಮಾತು ಕೇಳುವಾಗ ಯಾರಿಗೇ ಆದರೂ ಅವರನ್ನ ನೋಡಿದ್ರೆ ಪಾಪ ಅನ್ನಿಸದೇ ಇರಲ್ಲ. ಅದು ಅವನ ಅಥವಾ ಅವಳ ಪ್ರೇಮಿಗೂ ಅನ್ನಸಬಹುದು ಆದರೆ ಈ ಕರುಣೆಗೆ ಅವರಿಬ್ಬರ ಪ್ರೀತಿ ಉಳಿಸುವಷ್ಟು ಶಕ್ತಿ ಇರಲ್ಲ ಅನ್ನೋದು ಅಷ್ಟೆ ಸತ್ಯ.

ಇದು ಎಲ್ಲ ಪ್ರೀತಿಗಳಲ್ಲೂ ನಡೆಯುವ ಸಾಮಾನ್ಯ ಪ್ರಕ್ರಿಯೆ. ಹಾಗಂತ ಪ್ರತಿ ಪ್ರೀತಿಯಲ್ಲೂ ಇದು ನಡೀಲೇ ಬೇಕು ಅಂತ ರೂಲ್ಸ್ ಏನೂ ಇಲ್ಲ. ಇದಾಗೋಕೆ ಕಾರಣ ಏನು ಅಂತ ನೋಡಿದ್ರೆ ಅದಕ್ಕೆ ಸಿಗೋ ಕಾರಣ ನಾವಿಬ್ಬರೇ ಆಗಿರ್ತೀವಿ. ಅದು ನಮ್ಮಿಬ್ಬರದೇ ಜಗತ್ತು ಅಲ್ಲಿ ನಾವಲ್ಲದೆ ಮತ್ಯಾರೂ ಇರಲ್ಲ. ಮೂರನೆಯವರು ಬಂದು ನಮ್ಮ ಪ್ರೀತಿಯನ್ನ ಡಿಸ್ಟರ್ಬ್ ಮಾಡೋಕಾಗಲ್ಲ. ಇಲ್ಲಿ ಒಮ್ಮ ನೆನಪಿಸಿಕೊಳ್ಳಿ ಈ ಪ್ರೀತಿ ಆರಂಭವಾದಾಗ ಯಾವ ಕಾರಣಕ್ಕೆ ಆರಂಭವಾಯ್ತು ಅಂತ ಯಾರಿಗೂ ಗೊತ್ತಾಗಲ್ಲ. ಅದಕ್ಕೆ ನೂರಾರು ಕಾರಣಗಳಿರಬಹುದು. ಅವಳ ಆ ಕಣ್ಣು, ಗಿಳಿಮರಿಯಂತ ಮೂಗು, ತಿದ್ದಿತೀಡಿದ ತುಟಿ, ಅದ್ಬುತವಾದ ನಗು, ನನಗೇ ಅಂತಾನೆ ಹೇಳಿಮಾಡಿಸಿದ ಹಾಗಿದ್ಲು ಸಾರ್ ಅಂತ ನೀವು ಹೇಳಬಹುದು.

ಆದರೆ ಅದೆಲ್ಲವನ್ನೂ ಮೀರಿ ಅವಳ ತುಂಟತನ, ಅವಳ ಮಾತು, ಪ್ರತಿ ಕ್ಷಣವನ್ನೂ ಅವಳು ಜೀವಂತವಾಗಿಡುವ ಪರಿ, ಇದೆಲ್ಲವೂ ನಿಮಗೆ ಇಷ್ಟವಾಗಿರುತ್ತೆ ಅವಳಿಗೂ ಅಷ್ಟೆ ನಿಮ್ಮ ಸಿಕ್ಸ್ ಪ್ಯಾಕ್ ಬಾಡಿ, ನಿಮ್ಮ ಪೊಸಿಷನ್, ಹಿರೋಯಿಸಮ್ ಗಿಂತಲೂ ನಿಮ್ ಧೈರ್ಯ, ಪ್ರಾಮಾಣ ಕತೆ, ನೀವು ಅವಳನ್ನ ಕೇರ್ ಮಾಡೋ ರೀತಿ ಇಷ್ಟವಾಗಿರುತ್ತೆ. ಸರ್ ಇದೆಲ್ಲವನ್ನೂ ಮೀರಿ ಅವನು ನನ್ ಜೊತೆಲಿದ್ರೆ ನಾನು ಜೀವನ ಪೂರ್ತಿ ಖುಷಿಯಾಗಿರ್ತೀನಿ ಅನ್ಸುತ್ತೆ ಸಾರ್ ಅಷ್ಟು ಸಾಕಲ್ವಾ ಪ್ರೀತ್ಸೋಕೆ ಅಂತ ಆ ಹುಡುಗಿ ಕೇಳ್ತಾಳೆ.

ಹೌದು ಹೀಗಿದ್ದ ಪ್ರೀತಿಗೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ ಇದ್ದಕ್ಕಿದ್ದ ಹಾಗೆ ಸಣ್ಣಸಣ್ಣ ಜಗಳಗಳು ಆರಂಭವಾಗಿಬಿಡುತ್ತವೆ. ಮೊದಮೊದಲು ಒಂದರ್ಧ ಗಂಟೆಯಲ್ಲೇ ಮುಗಿಯುವ ಜಗಳ ಬರ್ತಾ ಬರ್ತಾ ದಿನಗಟ್ಟಲೆ ಮುಂದುವರೆಯುತ್ತೆ. ಇಂಥದ್ದು ತುಂಬಾ ಸಲ ಆದಾಗಲೇ ನಾನು ಮೇಲೆ ಹೇಳಿದ ಆ ಬಿರುಕು ಸೃಷ್ಟಿಯಾಗಿಬಿಟ್ಟಿರುತ್ತೆ. ಇದಕ್ಕೆ ಬೇರೇನು ಮಾಡಬೇಕಿಲ್ಲ ಇಬ್ಬರೂ ಕೂತು ಒಂದು ಕ್ಷಣ ಯೋಚಿಸಿದ್ರೆ ಸಾಕಾಗಿರುತ್ತೆ. ಕವಿತೆ ಬರೆಯೋ ಹುಡುಗ ಆರಂಭದಲ್ಲಿ ಅವಳಿಗೆ ಕೋಪ ಇಲ್ಲದಿದ್ರೂ ಸಮಾಧಾನ ಮಾಡ್ತಿದ್ದ, ಅವಳು ಏನೂ ಹೇಳಿಲ್ಲ ಅಂದ್ರೂ ಅವನಿಗೆ ಎಲ್ಲಾ ತಿಳಿದುಬಿಡ್ತಿತ್ತು. ಹೀಗಾಗಿ ಇವನೇ ನನಗೆ ಪರ್ಫೆಕ್ಟ್ ಜೋಡಿ ಅಂದುಕೊಂಡಿದ್ಲು. ಅವಳೂ ಅಷ್ಟೆ ಅವನನ್ನು ಮಗು ಥರ ಕೇರ್ ಮಾಡ್ತಿದ್ಲು. ಅವನು ಎಷ್ಟೇ ಟೆನ್ಷನ್ ನಲ್ಲಿದ್ರು ಒಮ್ಮೆ ತಲೆ ಸವರಿ ನಾನಿದಿನಿ ಬಿಡೊ ಅಂದುಬಿಟ್ರೆ ಅವನ ಆಯಾಸವೆಲ್ಲ ಮಾಯ. ಹೀಗಿದ್ದವರು ಈಗ ದೂರ ದೂರ. ಒಟ್ಟಿಗೇ ಇದ್ರು ಮಾತಾಡ್ಬೇಕು ಅನ್ಸಲ್ಲ. ಇಬ್ಬರೂ ಆನ್ ಲೈನ್ ಇರ್ತಾರೆ ಆದರೆ ಯಾರೂ ಮುಂದಾಗಿ ಮೇಸೇಜ್ ಹಾಕಲ್ಲ. ಯಾಕ್ ಹೀಗೆ ಅಂದ್ರೆ ಅದಕ್ಕೆ ಕಾರಣ ಓವರ್ ಅಟ್ಯಾಚ್ಮೆಂಟ್. ಆರಂಭದಲ್ಲಿ ಅವರಿಬ್ಬರ ನಡುವೆ ಒಂದು ಹೆಲ್ದಿ ಡಿಸ್ಟೆನ್ಸ್ ಇರುತ್ತೆ ಅದು ದಿನಗಳೆದಂತೆ ಮಾಯವಾಗಿಬಿಡುತ್ತೆ.

ಆಗೆಲ್ಲ ಅವನು ಕಾಲ್ ಮಾಡ್ಲಿ ಅಂತ ಕಾಯ್ತಿದ್ದ ಹುಡುಗಿ ಈಗ ಯಾಕೆ ಕಾಲ್ ಮಾಡಲ್ಲ ಅಂತ ಕಾಲು ಕೆರೆದು ಜಗಳವಾಡ್ತಾಳೆ. ಆರಂಭದಲ್ಲಿ ಹಿತವಾಗಿ ಕೇರ್ ಮಾಡ್ತಿದ್ದ ಅವನು ಇಷ್ಟೊತ್ತಲ್ಲಿ ಯಾರ್ ಜೊತೆ ಮಾತಾಡ್ತಿದ್ದೆ ಅಂತ ಅನುಮಾನದ ಟೋನಲ್ಲಿ ಪ್ರಶ್ನೆ ಮಾಡ್ತಾನೆ. ಮನಸಿಗೆ ಮುದ ಅನ್ನಿಸ್ತಿದ್ದ ಪ್ರೀತಿ ಈಗ ಅಧಿಕಾರದ ರೂಪ ಪಡೆದುಬಿಟ್ಟಿರುತ್ತೆ. ಒಬ್ಬರಿಗೊಬ್ಬರು ಉಸಿರಾಡೋಕು ಜಾಗ ಕೊಡದೇ ಆವರಿಸಿಕೊಂಡುಬಿಟ್ಟಿರುತ್ತಾರೆ. ಅಲ್ಲಿಗೆ ಅವರಿಬ್ಬರ ಆಳದಲ್ಲಿ ತನ್ನನ್ನ ತಾನು ಕಳೆದುಕೊಳ್ತಿದ್ದೀನಿ ಅನ್ನೋ ಭಯ ಕಾಡಲಾರಂಭಿಸಿರುತ್ತೆ. ಜೊತೆಗೆ ದಿನಕ್ಕೆ ಐದೈದು ಬಾರಿ ಮುಗಿಯದ ಜಗಳ ಬೇರೆ ಸಾಕಲ್ಲವಾ ಇಬ್ಬರ ನೆಮ್ಮದಿ ಹಾಳಾಗೋಕೆ ಇನ್ನೇನು ಬೇಕು?
ಇದಕ್ಕೆಲ್ಲಾ ಪರಿಹಾರಕ್ಕಾಗಿ ನವಗ್ರಹ ಹೋಮ ಮಾಡಿಸಬೇಕಿಲ್ಲ. ದೇವಸ್ಥಾನಕ್ಕಂತೂ ಹೋಗಲೇ ಬೇಕಿಲ್ಲ. ಬದಲಾಗಿ ಒಬ್ಬರನ್ನೊಬ್ಬರು ಗಟ್ಟಿಯಾಗಿ ನಂಬಿದ್ರೆ ಸಾಕು. ತಮ್ಮ ಸಂಗಾತಿಗೆ ಸ್ವಲ್ಪ ಉಸಿರಾಡೋಕೆ ಜಾಗ ಬೇಕು ಜೊತೆಗೆ ಅವರದೇ ಆದ ಸಣ್ಣ ಸ್ವಾತಂತ್ರಕ್ಕೆ ನಾವು ಅಡ್ಡ ಹೋಗಬಾರದು. ಇವನು ಬಂದಮೇಲೆ ನನ್ ಸಣ್ಣ ಸಣ್ಣ ಖುಷಿಗಳನ್ನ ಹಾಳುಮಾಡಿಕೊಂಡೆ ಅಂತ ಅವಳಿಗೆ ಅನ್ನಿಸೋಕೆ ಬಿಡಬಾರದು. ಅವನು ಮಾಡೋ ವಿಶಷ್ಟವಾದ ಕೆಲಸಗಳಿಗೆ ಅವಳು ಸಪೋರ್ಟ್ ಮಾಡ್ಬೇಕು ಯಾಕಂದ್ರೆ ಆರಂಭದಲ್ಲಿ ಪರಸ್ಪರ ಇಷ್ಟ ಪಟ್ಟಿದ್ದು ಇದಕ್ಕೇ ಅಲ್ವಾ,,,

ಇಂಥ ಸಣ್ಣ ವಿಚಾರಗಳನ್ನ ಅರ್ಥ ಮಾಡಿಕೊಂಡು, ಕೆಲವೊಂದು ಬದಲಾವಣೆ ಮಾಡಿಕೊಂಡ್ರೆ ಯಾವ ಪ್ರೀತಿಯಾದರೂ ಯಾಕೆ ಬೋರಾಗುತ್ತೇ ನೀವೆ ಹೇಳಿ, ಜಸ್ಟ್ ಥಿಂಕ್ ಅಂಡ್ ಡೂ ಇಟ್,,,,,,,,,,

(ಲೇಖಕರು: ದರ್ಶನ್ ಆರಾಧ್ಯ-ಮೊ: 8495980857)

ದಿನದ ಸುದ್ದಿ

ಎಲ್ಲ ರೀತಿಯಿಂದ ದೊಡ್ಡವರು ‘ಜಿ.ಎಸ್.ಆಮೂರ’

Published

on

ಜಿ ಎಸ್ ಆಮೂರ ಎಲ್ಲ ರೀತಿಯಿಂದಲೂ ದೊಡ್ಡವರು. ಕಳೆದ ಮೇ ತಿಂಗಳಲ್ಲಿ 95 ಮುಗಿಸಿ ನೂರರೆಡೆಗೆ ಹೆಜ್ಜೆ ಹಾಕುತ್ತಿದ್ದರು. ಕನ್ನಡಕ್ಕೆ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ (ಸಂಬಂಧ, ಕೊಡುಗೆ, ಬಾಂಧವ್ಯ ಈ ಪದಗಳಿಗಿಂತ ಉತ್ತಮ) ದೊಡ್ಡದು. ಮೇಷ್ಟ್ರುಗಳಷ್ಟೇ ಅಲ್ಲ ಬೇರೆ ಬೇರೆ ನೌಕರಿಗಳಲ್ಲಿದ್ದವರೂ ಇದ್ದರು. ಇರಲಿ. ನವೋದಯ, ನವೋದಯಪೂರ್ವ ಕಾಲದಿಂದಲೂ ಈ ಇತಿಹಾಸವಿದೆ. ಆ ಪರಂಪರೆಯ ಕೊಂಡಿಯಾಗಿದ್ದ ಅಮೂರ ಕಳಚಿಕೊಂಡು ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾದರು.

ಕನ್ನಡಕ್ಕೆ ಗಂಟುಬೀಳುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕೂ ಇದೆ ! ಅವರಲ್ಲಿ ಬಹುತೇಕರಿಗೆ ಅತ್ತ ಇಂಗ್ಲಷ್ಷೂ ಐಬು ಇತ್ತ ಅವರ ತಾಯ್ನುಡಿಯೂ ಐಬು. ಅವರು ಇಂಗ್ಲಿಷ್ ಡಿಗ್ರಿ ಸರ್ಟಿಫಿಕೇಟ್ ಇಟ್ಟುಕೊಂಡು ಕನ್ನಡದೊಳಗೆ ಓಡಾಡ್ತಾ ಇರ್ತಾರೆ. ಸ್ವಲ್ಪ ಬೆದರಿಕೆ, ಸ್ವಲ್ಪ ಬೂಟಾಟಿಕೆ ತೋರ್ತಾರೆ ! ಕೆಲವು ಕನ್ನಡದವು ಬೆದರೋದೂ ಉಂಟು !

ಆದರೆ ಕನ್ನಡಕ್ಕೆ ಕಾಮಧೇನುವಿನಂತೆ ಬರುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ ಇದ್ಯಲ್ಲಾ ಅದು ಮಹತ್ವದ್ದು. ‘ ಶ್ರೀ ‘ ಯವರಿಂದಲೇ ಶ್ರೀಕಾರಗೊಂಡ ಆ ಪರಂಪರೆಗೆ ಸೇರಿದವರು ಅಮೂರ. ಮುಂದುವರೆದ ಹೊಸ ತಲೆಮಾರಿನಲ್ಲೂ ಕೆಲವರು ಆ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಇಂಥವರು ಕನ್ನಡವನ್ನು ಪ್ರೀತಿ ಗೌರವದಿಂದ ಕಾಣುತ್ತಾರೆ. ಕನ್ನಡವೆಂಬುದು ಇಂಗ್ಲಿಷಿನಂತೆಯೇ ಒಂದು ದೊಡ್ಡ ಭಾಷೆಯೆಂಬ ಅರಿವಿನಲ್ಲಿ ಒಡನಾಡುತ್ತಾರೆ, ಕೆಲಸ ಮಾಡುತ್ತಾರೆ. ಅಂಥವರಿಂದಲೇ ಇವಳ ಒಡವೆ ಅವಳಿಗಿಡುವ ಶಕ್ತಿ ಬರುವುದು. ಆಮೂರ ಇಂಗ್ಲಿಷ್ ಮತ್ತು ಕನ್ನಡ ಎರಡನ್ನೂ ಅರಗಿಸಿಕೂಂಡ ವಿಮರ್ಶಕರು. ಯಾವ ವಿಷಯವೇ ಆಗಲಿ ಅವರು ಬುಡಮಟ್ಟ ಶೋಧಿಸಿ ಬರೆಯುತ್ತಿದ್ದರು.

ಕನ್ನಡ ಕಥನ ಪರಂಪರೆ, ಮಹಿಳೆಯರ ಕಾವ್ಯ, ನವೋದಯ ಸಾಹಿತ್ಯ, ಜನಪ್ರಿಯ ಸಾಹಿತ್ಯ ಎಲ್ಲದರ ಬಗ್ಗೆಯೂ ಸಮಾನ ಆಸಕ್ತಿಯಿಂದ ಅಧ್ಯಯನಶೀಲರಾಗುತ್ತಿದ್ದರು. ಬೇಂದ್ರೆ, ಶ್ರೀರಂಗರ ಬಗ್ಗೆ ಎಂಥ ತಾದಾತ್ಮ್ಯ ಹೊಂದುತ್ತಿದ್ದರೋ ಅಷ್ಟೇ ತಾದಾತ್ಮ್ಯದಲ್ಲಿ ಜನಪ್ರಿಯ ಕಾದಂಬರಿಕಾರ ಅನಕೃ ಬಗ್ಗೆ ಚಿಂತಿಸಿ ಬರೆಯುತ್ತಿದ್ದರು. ಜನಪ್ರಿಯ ಸಾಹಿತ್ಯದ ಬಗ್ಗೆ ಸದಭಿರುಚಿಯ ಅಭಿಪ್ರಾಯ ಮೂಡಿಸುತ್ತಿದ್ದರು.

ಇಂಗ್ಲಿಷ್ ಭಾಷೆಯಲ್ಲಿ ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಮಳಗಾಂವಕರ್, ಮುಲ್ಕ್ ರಾಜ್ ಆನಂದ, ರಾಜಾರಾವ್, ನಾಯ್ಪಾಲ್, ಸಲ್ಮಾನ್ ರುಶ್ದಿ ( ನಾನು ನೈಪಾಲ್, ರಶ್ದಿ ಅಂದಾಗಲೆಲ್ಲ ಅವರು ನಾಯ್ಪಾಲ್, ರುಶ್ದಿ ಅಂತ ಸರಿಮಾಡುತ್ತಿದ್ದರು ! ) ಅವರೆಲ್ಲರ ಕೃತಿಗಳ ವಿಸ್ತೃತ ಓದು ಅವರದಾಗಿತ್ತು. ಕುವೆಂಪು ಅವರ ರಾಮಾಯಣ ದರ್ಶನಂ ಕುರಿತ ಅವರ ಇಂಗ್ಲಿಷ್ ಲೇಖನ ಬಹಳ ಮೌಲಿಕವಾದುದು.

ಪ್ರಾಚೀನ ಸಾಹಿತ್ಯದ ಬಗ್ಗೆ ಇರುವಷ್ಟೇ ಆಸಕ್ತಿಯನ್ನು ಹೊಸದಾಗಿ ಬರೆಯುವವರ ಕತೆ ಕವಿತೆಗಳನ್ನು ಸಂಕಲನಗಳಲ್ಲಿ ಸೇರಿಸುತ್ತಿದ್ದರು. ಬೇರೆ ಬೇರೆ ರೀತಿಯ ಸಂಕಲನಗಳನ್ನು ಸಂಪಾದಿಸುವುದಕ್ಕೆ ಬೇಕಾದ ಅಪಾರ ಓದನ್ನು ಅವರು ಸಂತೋಷದಿಂದ ಮತ್ತು ಪರಿಪೂರ್ಣತೆಯಿಂದ ಮಾಡುತ್ತಿದ್ದರು.

ಬೆಂಗಳೂರಿಗೆ ಬಂದರೆ ಲಂಕೇಶ್ ಅವರಲ್ಲಿಗೆ ಭೇಟಿ ಕೊಟ್ಟು ಅವರೊಡನೆ ಗಂಭೀರ ಸಾಹಿತ್ಯ ಚರ್ಚೆ ಮಾಡುತ್ತಿದ್ದರು. ಹಾಗೆ ಒಮ್ಮೆ ಚರ್ಚಿಸುತ್ತಿದ್ದ ಹೊತ್ತಿನಲ್ಲಿ ಅವರು, ‘ ವರ್ಷಕ್ಕೆ ಒಂದು ಸಾರಿ ತಪ್ಪದೇ War and Peace ಮತ್ತು Anna Karenina ಓದೇ ಓದ್ತೀನಿ ‘ ಅಂತ ಹೇಳಿದ್ದು ನನ್ನ ನೆನಪಿನಲ್ಲಿದೆ. ಅವರ ‘ಭುವನದ ಭಾಗ್ಯ’ ಕುರಿತು ಆಗ ನಾನು ಲಂಕೇಶ್ ಪತ್ರಿಕೆ ಯಲ್ಲಿ ಬರೆದಿದ್ದೆ.

ಅವರು ಬಹುಶೃತ ವಿದ್ವಾಂಸರಾಗಿದ್ದರು. ನಿಷ್ಠುರ ವಿಮರ್ಶಕರಾಗಿದ್ದರು. ಒಮ್ಮೆ ಒಂದು ಪ್ರತಿಷ್ಠಿತ ಪ್ರಶಸ್ತಿ ತೀರ್ಮಾನ ಮಾಡಲು ಒಂದು ಸಭೆ ನಡೆಯಿತು. ಮೂವರು ತೀರ್ಪುಗಾರರಲ್ಲಿ ಅಮೂರ ಒಬ್ಬರು. ಇನ್ನೊಬ್ಬರು ಅವರ ವಯಸ್ಸಿನವರೇ. ಮೂರನೆಯವರು ಇನ್ನೂ ಯುವಕರು. ತೀರ್ಮಾನ ವಿವಾದದಲ್ಲಿ ಆಯಿತು. ಆ ಪ್ರಶಸ್ತಿಗೆ ಯಾವ ರೀತಿಯಿಂದಲೂ ಅರ್ಹವಲ್ಲದ ಕೃತಿಯನ್ನು ಅಮೂರ ಒಪ್ಪಲಿಲ್ಲ.

ಆದರೆ ಉಳಿದಿಬ್ಬರ ಬಹುಮತವಿತ್ತು. ಅದು ಆಯ್ಕೆಯಾಗಬೇಕಾಯ್ತು. ಎಲ್ಲ ಮುಗಿದಮೇಲೆ ಹೊರಡುವಾಗ ಆ ಯುವಕರನ್ನು ಪಕ್ಕಕ್ಕೆ ಕರೆದು ಆಮೂರ ಹೇಳಿದರು, ” ನೀವಿನ್ನೂ ಚಿಕ್ಕ ವಯಸ್ಸಿನವರಿದ್ದೀರಿ, ಇನ್ನು ಮುಂದೆ ಎಂದೂ ಇಂಥ ಲಿಟರರಿ ಪೊಲಿಟಿಕ್ಸ್ ಮಾಡಬೇಡಿ, ” ಅಂದ ಅವರ ಮಾತಿಗೆ ನಾನು ಸಾಕ್ಷಿಯಾಗಿದ್ದೆ. ಆ ಯುವ ಪ್ರಭೃತಿ ತಲೆತಗ್ಗಿಸಿ ನಿಂತಿದ್ದರು.

ಅದು ಸಾಹಿತ್ಯ ಲೋಕದಲ್ಲಿರಬೇಕಾದ ದೊಡ್ಡತನ. ಅಮೂರ ಅಂಥ ಅಪರೂಪದ ದೊಡ್ಡವರು. ನಮಗೆ ಬಹಳಷ್ಟು ಕಲಿಸಿದ್ದಾರೆ. ಅಂಥ ಮೌಲ್ಯಗಳನ್ನು ಕಲಿತು ದೊಡ್ಡವರಾಗಲು ಬದುಕೋಣ. ಅವರ ನೆನಪಿಗೆ ನಮನಗಳು.

-ಅಗ್ರಹಾರ ಕೃಷ್ಣಮೂರ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನೀಲು ಕಾವ್ಯ

Published

on

  • ಪಿ. ಲಂಕೇಶ್

1

ಹೃದಯದ ಗುಟ್ಟುಗಳನ್ನು
ಇನಿಯನಿಗೆ ಕೂಡ
ಬಿಟ್ಟುಕೊಡಲಾರದ ನನ್ನ
ಕಣ್ಣುಗಳನ್ನು ವಂಚಿಸಿ
ನನ್ನ ಲೇಖನಿ
ಹಾಡಿ ಕುಣಿಯುವುದು

2

ಪ್ರೀತಿಸುವ ಇಬ್ಬರು
ಮೌನವಾಗಿ ಕೂತು
ನೆಮ್ಮದಿಯಾಗಿರುವುದು
ಸುಖದೃಶ್ಯ

3

ಮೊಘಲ್ ದೊರೆಗಳಂತೆ
ಪ್ರೇಮಿ ಕೂಡ
ಕೇವಲ ಅಹಂಕಾರತೆ
ನಿನ್ನ ದೊರೆಯಾಗುವ ಅಪಾಯವಿದೆ
-ಎಚ್ಚರಿಕೆ!

4

ಪ್ರೀತಿಯಿಂದ ನನ್ನ
ಕಾಲ್ಬೆರಳಿಗೆ ಮುತ್ತಿಟ್ಟ ಚೆಲುವ
ನನ್ನ ಹೃದಯ ಸಿಂಹಾಸನವ
ಗೆದ್ದುಕೊಂಡ

5

ಜನಸಾಮಾನ್ಯನ
ಮೂಕ ಅಳಲಿನಲ್ಲಿ
ಸಾಮ್ರಾಜ್ಯಗಳ ಬೀಲಿಸುವ
ತಪಃಶಕ್ತಿ ಇದೆ

6

ಚೆಲುವಾ,
ಚಲಿಸುವ ಗೋಳದ ಮೇಲೆ
ನಡೆಯುತ್ತಿರುವ ನಾವು
ಅಚಲ ಪ್ರೇಮದ ಬಗ್ಗೆ
ಪಣತೊಡುವ
ಹಾಸ್ಯಾಸ್ಪದರು ಆಗದಿರೋಣ

7

ಬಿಸಿಲು, ಸೆಖೆಯ ದಿವಸ
ಹಠಾತ್ತನೆ ಬಿದ್ದ
ಮೂಡಿದ ಕಾಮನಬಿಲ್ಲು
ನನ್ನ ಮನಸ್ಸು ಕೂಡ

8

ನನಗೆ ಅಜ್ಜಿಯ ಹಿತವಚನ:
“ನಿನ್ನ ವಿದ್ಯೆಗೆ ಬದಲು
ನಿನ್ನ ಲಜ್ಜೆ ನಡೆಸಿದಂತೆ
ಬದುಕು”

9

ಸೊಟ್ಟ ಮೋರೆಯ ಹುಡುಗಿ
ಕನ್ನಡಿಗೆ
ತಾನು ಜೀನತಳೆಂದು
ಮನವೊಲಿಸುವುದು
ಬದುಕಿನ ಮೋಜು

10

ನನ್ನ ಇನಿಯನ ಹೃದಯದ
ಸ್ಪಂದನಕ್ಕೆ ಕಿವಿ ಸಲ್ಲಿಸಿದ ನನಗೆ
ಬೇರೆ ಸಂಗೀತ
ಕೇವಲ ಗದ್ದಲ

11

ಯಾವ ವಸಂತದ ಯಾವ ಗಳಿಗೆ
ಕನ್ಯೆಗೆ ಕಾಮನೆ ಮೂಡಿತು,
ಎಂದು ಕೇಳಿದರೆ
ಗ್ರೀಷ್ಮ ಋತು ಕಲಾವಿದನಂತೆ
ವಿನಮ್ರ ಮೌನ ತಾಳಿತು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಚಪ್ಪಲಿ ಮತ್ತು ನಾನು

Published

on

  • ಮೂಡ್ನಾಕೂಡು ಚಿನ್ನಸ್ವಾಮಿ

ನಾನು ದೇವಸ್ಥಾನಕ್ಕೆ ಹೋದಾಗ
ಚಪ್ಪಲಿಯನ್ನು ಹೊರಗೆ ಬಿಡುವುದಿಲ್ಲ
ನಾನೇ ಹೊರಗಿರುತ್ತೇನೆ

ಚಮ್ಮಾರನ ಕಾಲುಗಳಲ್ಲಿ ಕಂಡ ಚಪ್ಪಲಿ
ಮನುಷ್ಯ ನಾಯಿಯನ್ನು ಕಚ್ಚಿದಾಗ ಆಗುವಂತೆ
ಸುದ್ದಿಯಾಗುತ್ತದೆ

ಚಪ್ಪಲಿಗಳನ್ನು ಬಿಚ್ಚಿ ಹರಡುವ
ಎಲ್ಲರ ಕಾಲುಗಳು
ನನ್ನ ಮೇಲೆ ಹರಿದಾಡುತ್ತವೆ

ನಾನೊಂದು ಗಿಡ
ಅದು ನನ್ನ ಬುಡ
ಎಂದವರಿಗೆ ತಿಳಿಯುವುದೇ ಇಲ್ಲ

ಬತ್ತಿದ ಕೆರೆಯ ನೀರುಗುಣಿಗೆ
ಗೋಣ ಅನಿಸುವ ಕೊಕ್ಕರೆಯಂತೆ
ನಾನು ಮುಂಗಾಲ
ತುದಿ ಬೆರಳುಗಳ ಮೇಲೆ
ನಿಂತು ಇಣುಕಿ ದೇವರ ರೂಪವನ್ನು
ಕಂಡಷ್ಟು ಕದಿಯಿತ್ತೇನೆ

ಹತ್ತಾರು ತಲೆಗಳ ನಡುವೆ
ಹೊಳೆಯುವ ಮುಕುಟಮಣಿ
ಮೆತ್ತನೆಯ ಹಾಸಾಗಿ ಬೆಳೆದು
ಛತ್ರಿಯಾಗುವ ಫಣಿ
ಒಮ್ಮೆ ವಜ್ರಖಚಿತ ಕಿರೀಟ
ಕಂಠೀಹಾರ, ಜನಿವಾರ
ದೀಪದಾರತಿ ಬೆಳಗಿ
ಫಂಟನಾದ ಮೊಳಗುವಾಗ
ಕಾದ ಕಬ್ಬಿಣವಾಗಿ
ನೆಲ ಕುಸಿಯತೊಡ, ಹಸಿ
ಒಡಲು ಉರಿ ಹತ್ತಿ ಬೇಯುತ್ತದೆ

ದೂರವಿದ್ದರೂ ನಿಷ್ಠಾವಂತ
ಗರುಡಗಂಭ ನನಗಿಷ್ಟ, ಅದರ ಮುಂದಿಟ್ಟ
ಕೆಂಡದ ಕುಂಡಕ್ಕಷ್ಟು ಧೂಪ ಎರಚಿ
ಹೊಗೆ ಚಿಮ್ಮಿಸುವಾಗ ನಾನು ಕೃತಾರ್ಥ

ದೇವರ ಬಳಿ ಸುಳಿದು
ದಕ್ಷಿಣೆ ಪ್ರದಕ್ಷಿಣೆ ಹಾಕುವವರು
ರೆಪ್ಪೆ ಮುಚ್ಚದೆ ಆಗಾಗ ನನ್ನತ್ತ ನೋಡುವರು
ನನ್ನ ಚಿತ್ತ ಮಾತ್ರ ದೇವರತ್ತ

ಗರ್ಭಗುಡಿಯಲ್ಲಿ
ಹೂವು ಗಂಧ ಪಡೆದುಕೊಳ್ಳುವವರ ಆತ್ಮ
ಕಳಚಿಟ್ಟ ಚಪ್ಪಲಿಗಳ ಬಳಿ
ಹೊರಗೆ

ನಿತ್ಯ ಹಜಾರದಲಿ ನಿಂತು
ಗೋಣ ಆನಿಸಿ ಇಣುಕಿ
ಪುನೀತವಾಗುವ ನನ್ನ ಆತ್ಮ
ದೇವರ ಬಳಿ ಒಳಗೆ

– ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2009 ರಲ್ಲಿ ಪ್ರಕಟಿಸಿರುವ ‘ಸುವರ್ಣ ಕಾವ್ಯ‘ ಪುಸ್ತಕದಿಂದ, ಮೂಡ್ನಾಕೂಡು ಚಿನ್ನಸ್ವಾಮಿಯವರ ‘ಚಪ್ಪಲಿ ಮತ್ತು ನಾನು’ ಕವಿತೆಯನ್ನು ಆಯ್ದುಕೊಳ್ಳಲಾಗಿದೆ. ಈ ಪುಸ್ತಕದ ಸಂಪಾದಕರು ಬಿ.ಎ.ಸನದಿ ಮತ್ತು ಸವಿತಾ ನಾಗಭೂಷಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 hours ago

ಕೊರೋನ ಕಾಲದಲ್ಲಿ ಹೃದಯವನ್ನು ಕಾಪಾಡಿ..!

ಶ್ರೀನಿವಾಸ ಕಕ್ಕಿಲಾಯ ಕೊರೋನ ಸೋಂಕಿನ ನೆಪದಲ್ಲಿ ಆಗಿರುವ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಕೊರೋನ ಸೋಂಕಿಗೆ ಹೊರತಾದ ಇತರ ಸಮಸ್ಯೆಗಳನ್ನು ಹೊಂದಿರುವವರಿಗೆ, ಅದರಲ್ಲೂ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಆದವರಿಗೆ, ತುರ್ತು...

ದಿನದ ಸುದ್ದಿ2 hours ago

ಪವರ್ ಟಿವಿ ಪ್ರಸಾರ ಸ್ಥಗಿತ : ರಾಜ್ಯ ಸರ್ಕಾರದ ವಿರುದ್ಧ ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘ ಆಕ್ರೋಶ

ಸುದ್ದಿದಿನ,ದಾವಣಗೆರೆ : ಪವರ್ ಟಿವಿ ಮೇಲೆ ದಬ್ಬಾಳಿಕೆ ಹಿನ್ನಲೆ ದಾವಣಗೆರೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಉಪವಿಭಾಗ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯನಿರತ...

ದಿನದ ಸುದ್ದಿ9 hours ago

ಮಾಧ್ಯಮ ಸ್ವಾತಂತ್ರ್ಯದ ಗುಂಗಿನಲ್ಲಿ

ನಾ ದಿವಾಕರ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ಹಿಂಜರಿಯುವಷ್ಟು ಮಟ್ಟಿಗೆ ಸುದ್ದಿ ಮಾಧ್ಯಮಗಳು ತಮ್ಮ ಬೌದ್ಧಿಕ ನೆಲೆಯನ್ನು ಕಳೆದುಕೊಂಡಿವೆ. ಯಾವುದೇ ಸಂದರ್ಭದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲದೆ...

ದಿನದ ಸುದ್ದಿ13 hours ago

ಸುದ್ದಿಮನೆಯ ಪ್ರಾಮಾಣಿಕತೆ, ಸರ್ಕಾರದ ಭ್ರಷ್ಟಾಚಾರ

ನಾ ದಿವಾಕರ ಕನ್ನಡದ ಸುದ್ದಿಮನೆಗಳು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹತೆ ಕಳೆದುಕೊಂಡಿವೆ ಎಂದರೆ ಅವುಗಳು ಬಿತ್ತರಿಸುವ ವಾಸ್ತವಗಳನ್ನೂ ಜನರು ನಂಬುವುದಿಲ್ಲ. ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಅಧಿಕಾರ...

ದಿನದ ಸುದ್ದಿ1 day ago

ಟಿ. ನರಸೀಪುರ : ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ

ಸುದ್ದಿದಿನ,ಟಿ. ನರಸೀಪುರ: ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೋರಣೆಯನ್ನು ಖಂಡಿಸಿ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದ ಹಿನ್ನಲೆ ಪಟ್ಟಣದಲ್ಲಿ ಉತ್ತಮ...

ದಿನದ ಸುದ್ದಿ1 day ago

ಎಲ್ಲ ರೀತಿಯಿಂದ ದೊಡ್ಡವರು ‘ಜಿ.ಎಸ್.ಆಮೂರ’

ಜಿ ಎಸ್ ಆಮೂರ ಎಲ್ಲ ರೀತಿಯಿಂದಲೂ ದೊಡ್ಡವರು. ಕಳೆದ ಮೇ ತಿಂಗಳಲ್ಲಿ 95 ಮುಗಿಸಿ ನೂರರೆಡೆಗೆ ಹೆಜ್ಜೆ ಹಾಕುತ್ತಿದ್ದರು. ಕನ್ನಡಕ್ಕೆ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ (ಸಂಬಂಧ, ಕೊಡುಗೆ,...

ದಿನದ ಸುದ್ದಿ1 day ago

ರೂತ್ ಗ್ರಿನ್ಸ್ ಬರ್ಗ್ : ಸಾವಿನಲ್ಲೂ ಪಡೆದ ಸ್ತ್ರೀ ಸಮಾನತೆ..!

ಸಿ.ಎಸ್.ದ್ವಾರಕಾನಾಥ್ ಇದೇ ಸಪ್ಟೆಂಬರ್ 18 ನೇ ತಾರೀಖು ಬೆಳಿಗ್ಗೆ ಆರು ಗಂಟೆಗೆಲ್ಲ ಅಮೆರಿಕದಿಂದ ರೆಡ್ಡಿ ಪೋನ್ ಮಾಡಿ ಸುಮ್ಮನೇ ಒಂದೇ ಸಮ ಬೈಯ್ಯತೊಡಗಿದ!? ಇಲ್ಲಿನ ಬೆಳಿಗ್ಗೆ ಅಮೆರಿಕದಲ್ಲಿ...

ದಿನದ ಸುದ್ದಿ1 day ago

ದಾವಣಗೆರೆ | ಸಿಎಂ‌‌ ಯಡಿಯೂರಪ್ಪ ಫೋಟೋ ಗೆ ಚಪ್ಪಲಿಯಿಂದ ಹೊಡೆಯುವುದರ ಮೂಲಕ ರೈತ ಸಂಘಟನೆಗಳ ಆಕ್ರೋಶ : ವಿಡಿಯೋ ನೋಡಿ

ಸುದ್ದಿದಿನ, ದಾವಣಗೆರೆ : ಎಪಿಎಂಸಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧ ಬಂದ್‌ ಹಿನ್ನೆಲೆ ಸೋಮವಾರ ನಗರದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡಿಸಿದವು. ಸಿಎಂ ಯಡಿಯೂರಪ್ಪ ಅವರ ಫೋಟೋಗೆ...

ದಿನದ ಸುದ್ದಿ1 day ago

ಅಂತರ್ರಾಷ್ಟ್ರೀಯ ರೇಬೀಸ್ ದಿನಾಚರಣೆ 2020: ಸಹಯೋಗದೊಂದಿಗೆ ಲಸಿಕೆ ಹಾಕಿಸಿ ತಡೆಗಟ್ಟೋಣ

ಡಾ||.ಕಮಲೇಶ್ ಕುಮಾರ್ ಕೆ ಎಸ್, ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ ರೇಬೀಸ್ (Rabies) ಒಂದು ವೈರಾಣುವಿನಿಂದ (Virus) ಹರಡುವ ಮಾರಕ ಖಾಯಿಲೆಯಾಗಿದ್ದು ಇದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು...

ದಿನದ ಸುದ್ದಿ2 days ago

ಹೊಳಲ್ಕೆರೆ | ಎರಡು ವರ್ಷದ ಕಂದಮ್ಮನ ಹೊಡೆದು ಕೊಂದ ಮಂತ್ರವಾದಿ ; ಅಮಾನವೀಯ ಕೃತ್ಯ ಎಸಗಿದ ಪಾಪಿ..!

ಸುದ್ದಿದಿನ,ಹೊಳಲ್ಕೆರೆ: ಅಪ್ಪ,‌ ಅಮ್ಮನ ಮಡಿಲಿನಲ್ಲಿ ಸುಖವಾಗಿದ್ದ ಎರಡು ವರ್ಷದ ಕಂದಮ್ಮ ಮಂತ್ರವಾದಿಯ ಅಮಾನವೀಯ ಕೃತ್ಯಕ್ಕೆ ಬಲಿಯಾಗಿದೆ. ಎರಡು ವರ್ಷದ ಹೆಣ್ಣು ಮಗುವನ್ನು ಮಂತ್ರವಾದಿ ಕೊಲಿನಿಂದ ಹೊಡೆದು ಸಾಯಿಸಿದ್ದು,...

Trending