ಕ್ರೀಡೆ
ಏಷ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಸಾಧನೆ; ಎರಡು ಪದಕ ಮುಡಿಗೆ

ಸುದ್ದಿದಿನ ಡೆಸ್ಕ್: ಭಾರತದ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ ನಲ್ಲಿ ಪದಕ ಬೇಟೆ ಮುಂದುವರೆಸಿದ್ದು, ಶೂಟಿಂಗ್ ನಲ್ಲಿ ಮೂರನೇ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 16 ವರ್ಷದ ಶೂಟರ್ ಸೌರಭ್ ಚೌದರಿ 10 ಎಂ ಪಿಸ್ತೂಲ್ ಫೈನಲ್ಸ್ ನಲ್ಲಿ ಚಿನ್ನದ ಪದಕ ಕೊರಳಿಗೆ ಧರಿಸಿಕೊಂಡಿದ್ದಾರೆ. ಅಭಿಷೇಕ ವರ್ಮಾ 10ಎಂ ಪಿಸ್ತೂಲ್ ಫೈನಲ್ ನಲ್ಲಿ ಕಂಚು ಪಡೆದಿದ್ದಾರೆ. ಇವರ ಸಾಧನೆವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಗಣ್ಯರು, ಕ್ರೀಡಾಭಿಮಾನಿಗಳು ಪ್ರಶಂಸಿದ್ದಾರೆ.
ಕ್ರೀಡೆ
ದಾವಣಗೆರೆ | ವಾರ್ಷಿಕ ಪೊಲೀಸ್ ಕ್ರೀಡಾಕೂಟ-2019

ಸುದ್ದಿದಿನ,ದಾವಣಗೆರೆ : ಜಿಲ್ಲಾ ಪೊಲೀಸ್ ವತಿಯಿಂದ ಡಿ.09 ರಿಂದ 11 ರಂದು ರವರೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿ.ಎ.ಆರ್, ದಾವಣಗೆರೆ ಇಲ್ಲಿ ವಾರ್ಷಿಕ ಪೊಲೀಸ್ ಕ್ರೀಡಾಕೂಟ-2019 ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಡಿ.9 ರ ಬೆಳಿಗ್ಗೆ 8 ಗಂಟೆಗೆ ಇದೇ ಸ್ಥಳದಲ್ಲಿ ಉದ್ಘಾಟನಾ ಕಾರ್ಯಕ್ರಮವಿದ್ದು, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಶರಣಪ್ಪ.ವಿ.ಹಲಸೆ ಉದ್ಘಾಟಿಸುವರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಡಿ.11 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಗಿದ್ದು, ಮುಖ್ಯ ಅತಿಥಿಗಳಾಗಿ ಪೂರ್ವವಲಯದ ಪೊಲೀಸ್ ಮಹಾನಿರೀಕ್ಷಕರಾದ ಅಮ್ರಿತ್ ಪಾಲ್ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ದಾವಣಗೆರೆ | ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ವೇಣುಗೋಪಾಲ್ ಗೆ ಪ್ರಥಮ ಸ್ಥಾನ

ಸುದ್ದಿದಿನ,ದಾವಣಗೆರೆ : ನಗರದ ಕ್ರೀಡಾ ವಸತಿ ನಿಲಯದ ಕ್ರೀಡಾಪಟುವಾದ ವೇಣುಗೋಪಾಲ್ ಎಸ್ ಇವರು ಇತ್ತೀಚೆಗೆ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷದೊಳಗಿನ ಬಾಲಕರ ಪ್ರೌಢ ಶಾಲಾ ವಿಭಾಗದ ಅಥ್ಲೆಟಿಕ್ಸ್ ಸ್ಪರ್ಧೆಯ 400 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಡಿ.04 ರಿಂದ 08 ರವರೆಗೆ ಪಂಜಾಬ್ನ ಸಂಗ್ರೂರ್ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗೆ ರಾಜ್ಯ ತಂಡದಿಂದ ಇವರು ಆಯ್ಕೆಯಾಗಿರುತ್ತಾರೆ. ಈ ಕ್ರೀಡಾಪಟುವು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ಶ್ರೀನಿವಾಸ್ ಮತ್ತು ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಶುಭಹಾರೈಸಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ದಾವಣಗೆರೆ | ಕಬಡ್ಡಿ ಪಂದ್ಯಾವಳಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ಗೆ ದ್ವಿತೀಯ ಸ್ಥಾನ

ಸುದ್ದಿದಿನ,ದಾವಣಗೆರೆ : ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕ್ರೀಡಾಪಟುಗಳಿಗೆ ಪ್ರಾಂಶುಪಾಲರಾದ ತೂ.ಕ.ಶಂಕರಯ್ಯ, ವ್ಯವಸ್ಥಾಪಕ ಎಸ್.ಆರ್ ಭಜಂತ್ರಿ, ಪ್ರೊಪೆಸರುಗಳಾದ ಭೀಮಣ್ಣ ಸುಣಗಾರ್, ರುದ್ರಪ್ಪ, ಗೌರಮ್ಮ, ವಿರೇಶ, ಡಾ.ಮಂಜಣ್ಣ ಹಾಗೂ ಡಾ.ಶಾಂತಕುಮಾರಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಮದುವೆಯಾಗಿ 1ವರ್ಷವೂ ಆಗಿಲ್ಲ, ಹೇಗೆ ಬದುಕಲಿ : ಎನ್ಕೌಂಟರ್ ಆದ ಆರೋಪಿಯ ಪತ್ನಿ
-
ಬಹಿರಂಗ6 days ago
ಜಾತಿಯಲ್ಲಿ ಕರಗಿಹೋದ ಮತ್ತೊಬ್ಬಳು ‘ಪ್ರಿಯಾಂಕ’
-
ಅಂತರಂಗ5 days ago
ತನ್ನಿಮಿತ್ತ : ಪುಸ್ತಕಗಳ ಮಧ್ಯೆ ಪ್ರಾಣ ಬಿಟ್ಟ ಅಂಬೇಡ್ಕರ್
-
ಭಾವ ಭೈರಾಗಿ5 days ago
ಕವಿತೆ | ಗರ್ಭದೊಳಗೆ
-
ಕ್ರೀಡೆ5 days ago
ದಾವಣಗೆರೆ | ವಾರ್ಷಿಕ ಪೊಲೀಸ್ ಕ್ರೀಡಾಕೂಟ-2019
-
ದಿನದ ಸುದ್ದಿ7 days ago
ಪಶುವೈದ್ಯೆ ಅತ್ಯಾಚಾರ, ಕೊಲೆ : ನಾಲ್ವರು ಆರೋಪಿಗಳ ಎನ್ ಕೌಂಟರ್ | ಪ್ರತಿಕ್ರಿಯೆಗಳು
-
ಭಾವ ಭೈರಾಗಿ6 days ago
ಕಾಳಾರಾಮ ದೇವಾಲಯ ಪ್ರವೇಶ ಮತ್ತು ಕುವೆಂಪು ‘ಜಲಗಾರ’ ನಾಟಕ : 90 ವರ್ಷಾಚರಣೆಯ ಹೊತ್ತಿನಲ್ಲಿ
-
ದಿನದ ಸುದ್ದಿ3 days ago
‘ಪೌರತ್ವ (ತಿದ್ದುಪಡಿ) ಮಸೂದೆ’ | ದೇಶ ಒಡೆಯುವ ಬಿಜೆಪಿಯ ಗುಪ್ತ ಅಜೆಂಡಾದ ಭಾಗವಿದು : ಸಿದ್ದರಾಮಯ್ಯ ಕಿಡಿ