Connect with us

ಕ್ರೀಡೆ

ಇಂಗ್ಲೆಂಡಿನ ಆಲ್ ರೌಂಡರ್ ‘ಮೋಯಿನ್ ಅಲಿ’ ಗೆ ಎದುರಾಗಿತ್ತು ಜನಾಂಗೀಯ ನಿಂದನೆ..!

Published

on

 ಆತ್ಮಕಥೆಯಲ್ಲಿ ಹೇಳಿಕೊಂಡಿರುವ ಆಲ್ ರೌಂಡರ್ ಕ್ರಿಕೆಟಿಗ

ಸುದ್ದಿದಿನ ಡೆಸ್ಕ್: ಇಂಗ್ಲೆಂಡ್‌ನ ಆಲ್ ರೌಂಡರ್ ಕ್ರಿಕೆಟಿಗ ಮೊಯೆನ್ ಅಲಿ ತಮಗೆ ಜನಾಂಗೀಯ ನಿಂದನೆ ಮಾಡಲಾಗಿದೆ ಎಂದು ಜೀವನ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. 2015ರಲ್ಲಿ ಕಾರ್ಡಿಫ್ ನಲ್ಲಿ ನಡೆದ ಆಶಿಸ್ ಸರಣಿಯ ಪಂದ್ಯದ ವೇಳೆ ಆಸ್ಟ್ರೇಲಿಯಾದ ಆಟಗಾರನೊಬ್ಬ ಮೊಯಿನ್ ಅಲಿಯನ್ನು ನೀನೊಬ್ಬ ‘ಒಸಾಮಾ’ ಎಂದು ಕರೆದಿದ್ದಾನೆ ಎಂದು ಬಹಿರಂಗ ಪಡಿಸಿದ್ದಾರೆ.

ಭಾರತದ-ಇಂಗ್ಲೆಂಡ್ 5-ಪಂದ್ಯಗಳ ಸರಣಿಯ ನಾಲ್ಕನೆಯ ಟೆಸ್ಟ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಸೋಲುವಂತೆ ಆಟವಾಡಿದ್ದ ಮೊಯಿನ್ ಆತ್ಮಚರಿತ್ರೆಯಲ್ಲಿ ಬಹಿರಂಗಪಡಿಸಿದ್ದಾರೆ. ಅಲಿಯ ಬಯೋಗ್ರಫಿಯನ್ನು ಲಂಡನ್ನಿನ ದಿ ಟೈಮ್ಸ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸುತ್ತಿದೆ.

ಇದರಲ್ಲಿ ಅಲಿ ಹೀಗೆ ಬರೆದಿದ್ದಾರೆ; “ಇದು ನನ್ನ ವೈಯಕ್ತಿಕ ಪ್ರದರ್ಶನದ ದೃಷ್ಟಿಯಿಂದ ಇದೊಂದು ಉತ್ತಮ ಪರೀಕ್ಷೆಯಾಗಿದ್ದರೂ ನನ್ನ ಗಮನವನ್ನು ಒಂದು ಘಟನೆ ವಿಚಲಿತಗೊಳಿಸಿತು. ಅದೇನೆಂದರೆ, ಆಸ್ಟ್ರೇಲಿಯಾದ ಆಟಗಾರನೊಬ್ಬ ಮೈದಾನದಲ್ಲಿ ನನ್ನ ಕಡೆಗೆ ತಿರುಗಿ “ಒಸಾಮಾ ಇದನ್ನು ತೆಗೆದುಕೊ” ಎಂದು ಹೇಳಿದ. ಆದರೆ, ನಾನು ಎಂದಿಗೂ ಕೋಪಗೊಳ್ಳಲಿಲ್ಲ. ಬದಲಿಗೆ ಆಸ್ಟ್ರೇಲಿಯಾದ ಕೋಚ್ ಡ್ಯಾರೆನ್ ಲೆಹ್ಮನ್ ಬಳಿ ಹೇಳಿದೆ. ಇದನ್ನು ಅವರು ಆಟಗಾರನ ಬಳಿ ಕೇಳಿದಾಗ ಇಲ್ಲವೆಂದು ಅಲ್ಲಗಳೆದರು ಎಂದು ಹೇಳಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ

ವಿಂಡೀಸ್ ಮಣಿಸಿ ಹೊಸ ದಾಖಲೆ ಬರೆದ ಭಾರತ

Published

on

ಸುದ್ದಿದಿನ ಡೆಸ್ಕ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಮತ್ತು 272 ರನ್ ಗಳ ಭಾರಿ ಗೆಲುವು ದಾಖಲಿಸಿದ ಭಾರತ, ಹೊಸ ದಾಖಲೆ ಬರೆದಿದೆ. 1932ರಲ್ಲಿ ಟೆಸ್ಟ್ ಕ್ರಿಕೆಟ್ ದರ್ಜೆ ಪಡೆದಿದ್ದ ಭಾರತ ತಂಡದ ಈ ಗೆಲುವು ಈವರೆಗಿನ ಅತಿ ದೊಡ್ಡ ಗೆಲುವಾಗಿದೆ.

ಇದಕ್ಕೂ ಮೊದಲು ಭಾರತ ಅಫ್ಘನ್ ವಿರುದ್ಧ ಇನ್ನಿಂಗ್ಸ್ ಮತ್ತು 262 ರನ್(2018), ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ ಮತ್ತು 239 ರನ್(2007) ಹಾಗೂ ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಮತ್ತು 239 ರನ್(2017)ಗಳ ಗೆಲುವು ದಾಖಲಿಸಿತ್ತು.

Continue Reading

ಕ್ರೀಡೆ

ಸ್ತನ ಕ್ಯಾನ್ಸರ್ | ‘ತೆರೆದೆದೆಯ ಹಾಡಿನ’ ಮೂಲಕ ಜಾಗೃತಿ ಮೂಡಿಸಲು ಮುಂದಾದ ಟೆನ್ನಿಸ್ ತಾರೆ ಸೆರೆನಾ..! ವೀಡಿಯೋ ನೋಡಿ

Published

on

ಸುದ್ದಿದಿನ,ನ್ಯೂ ಯಾರ್ಕ್ (ಎಪಿ) – ಟೆನಿಸ್ ಶ್ರೇಷ್ಠ ಸೆರೆನಾ ವಿಲಿಯಮ್ಸ್ “ಐ ಟಚ್ ಮೈಸೆಲ್ಫ್” ಎಂಬ ಗೀತೆಯ ಮೂಲಕ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ತನ್ನ ಕೈಗಳನ್ನು ತೆರೆದೆದೆಗೆ ಮುಚ್ಚಿ ಹಿಡಿದಿರುವ ಹಾಡಿನ ವೀಡಿಯೋವನ್ನು ವಿಲಿಯಮ್ಸ್ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಪತ್ತೆಹಚ್ಚುವುದರಿಂದ ಹಲವು ಜೀವಗಳು ಉಳಿಯುತ್ತವೆ ಎಂದಿದ್ದಾರೆ.

ವೀಡಿಯೊ ‘ಐ ಟಚ್ ಮೈಸೆಲ್ಫ್’ ಪ್ರಾಜೆಕ್ಟ್ನ ಭಾಗವಾಗಿದೆ, ಇದು ಡಿವಿನಿಲ್ಸ್ ಗಾಯಕಿ ಕ್ರಿಸ್ಸಿ ಆಮ್ಫ್ಲೆಟ್ಗೆ ಸಮರ್ಪಿತವಾಗಿದೆ. 2013 ರಲ್ಲಿ ಸ್ತನ ಕ್ಯಾನ್ಸರ್ ವಿರುದ್ಧ ದೀರ್ಘಕಾಲ ಹೋರಾಡಿ ನಂತರ 53 ವರ್ಷದ ಆಸ್ಟ್ರೇಲಿಯಾ ಮೃತಪಟ್ಟರು ಎಂದಿದ್ದಾರೆ.

ಒಟ್ಟಾರೆ ಈ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ಸೆರೆನಾಳ ಈ ಕಾರ್ಯಕ್ಕೆ ಜಗತ್ತೇ ಭೇಷ್ ಎಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಕ್ರೀಡೆ

ಏಷ್ಯಾ ಕಪ್: ಫೈನಲ್ ಗೆ ಎಂಟ್ರಿ ಕೊಟ್ಟ‌ ಬಾಂಗ್ಲಾ ಹುಲಿ ಗಳು

Published

on

asia cup india won against bangla

ಸುದ್ದಿದಿನ ಡೆಸ್ಕ್ : ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ಫೈನಲ್ ಪ್ರವೇಶ ಮಾಡಿದೆ.

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶ ಪಾಕಿಸ್ತಾನವನ್ನು 37 ರನ್ ಅಂತರದಿಂದ ಸೋಲಿಸಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮುಷ್ಫಿಕುರ್ ರಹೀಮ್ ಮತ್ತು ಮುಹಮ್ಮದ್ ಮಿಥುನ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 48.5 ಓವರ್ ಗಳಲ್ಲಿ 239 ರನ್ ಗಳಿಸಿತು. ಪಾಕ್ ಗೆ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ ಸೋಲು ಅನುಭವಿಸಿತು

ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿ

ಮುಂದಿನ ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡವು ಭಾರತವನ್ನು ಎದುರಿಸಲಿದೆ.

Continue Reading

Trending