Connect with us
http://www.suddidina.com/category/political-news

ಕ್ರೀಡೆ

ನಾಲ್ಕು ವರ್ಷ ಶಿಕ್ಷೆ ಅನುಭವಿಸಿದ್ದ ದೇಶದ ಭರವಸೆ ಆಟಗಾರ್ತಿ ಮೊಗದಲ್ಲಿ ಅರಳಿದ ನಗು

Published

on

ಸುದ್ದಿದಿನ ಡೆಸ್ಕ್: ದೇಹದಲ್ಲಿ ಆಗುತ್ತಿದ್ದ ಹಾರ್ಮೋನ್‌ ಬದಲಾವಣೆ ಕಾರಣಕ್ಕೆ ಸತತ ನಾಲ್ಕು ವರ್ಷಗಳಿಂದ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಟೂರ್ನಿಗಳಿಂದ ವಂಚಿತವಾಗಿದ್ದ ಭಾರತದ ಭರವಸೆಯ ಅಥ್ಲೀಟ್‌ ದ್ಯುತಿ ಚಾಂದ್ ಮೊಗದಲ್ಲಿ ನಗು ಅರಳಿದೆ.
ಅಂತರರಾಷ್ಟ್ರೀಯ ಕ್ರೀಡಾ  ನ್ಯಾಯಾಲಯ ಕಳೆದ ವಾರ ತೀರ್ಪು ನೀಡಿದ್ದು, ದ್ಯುತಿ ಮಂದಹಾಸಕ್ಕೆ ಕಾರಣವಾಗಿದೆ. ದ್ಯುತಿ  ದೇಹದಲ್ಲಿ ಟೆಸ್ಟೊಸ್ಟಿರೊನ್‌ ಎಂಬ ಗ್ರಂಥಿಗಳ ಪ್ರಮಾಣ ಸಾಮಾನ್ಯ ಮಹಿಳೆಗಿಂತ ಹೆಚ್ಚಿವೆ. ಆದ್ದರಿಂದ ಆಕೆ ಓಡುವಾಗ ಪುರುಷರಷ್ಟೇ ಸಾಮರ್ಥ್ಯದಿಂದ ಓಡುತ್ತಾರೆ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ ದೂರಿತ್ತು. ಇದರಿಂದ ನಾಲ್ಕು ವರ್ಷಗಳ ಕಾಲ ಕ್ರೀಡೆಯಿಂದ ದೂರ ಉಳಿಯಬೇಕಾಯಿತು. ಸದ್ಯ‌ಅಂತರರಾಷ್ಟ್ರೀಯ ಕ್ರೀಡಾ  ನ್ಯಾಯಾಲಯ ದ್ಯುತಿ‌ ಪರ ತೀರ್ಪು ನೀಡಿದೆ. ರಿಯೊ ಒಲಿಂಪಿಕ್ಸ್‌ ಕೂಟದ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದ ದ್ಯುತಿ
36 ವರ್ಷಗಳ ಬಳಿಕ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಅಥ್ಲೀಟ್‌ ಗೌರವ ಗಳಿಸಿದ್ದರು. ಈಗ ಪ್ರತಿಭಾವಂತ ಆಟಗಾರ್ತಿ ಮತ್ತೆ ಮರಳುತ್ತಿರುವುದು ಭಾರತದ ಭರವಸೆ ಹೆಚ್ಚಿಸಿದೆ.

ಕ್ರೀಡೆ

ಅನಿಲ್​ಕುಂಬ್ಳೆ ಆಯ್ಕೆಯ ‘ವಿಶ್ವಕಪ್ ಟೀಂ ಇಂಡಿಯಾ ಆಟಗಾರರು’ ಯಾರ್ಯಾರು ಗೊತ್ತಾ..!

Published

on

ಸುದ್ದಿದಿನ ಡೆಸ್ಕ್ : ಇಂಗ್ಲೆಂಡ್​​ನಲ್ಲಿ ಮೇ 30 ರಿಂದ ಆರಂಭವಾಗಲಿರುವ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗಾಗಿ ಟೀಮ್ ಇಂಡಿಯಾ ಈಗಾಗಲೇ ಹಲವು ಸಿದ್ಧತೆಗಳನ್ನ ಮಾಡಿಕೊಂಡಿದೆ. ಈ ಮಹಾಸಂಗ್ರಾಮದಲ್ಲಿ ಆಡುವ ಆಟಗಾರರ ತಂಡದ ಆಯ್ಕೆ ಮಾತ್ರ ಆಗಿಲ್ಲ.

ಹೀಗಿದ್ದರೂ ಟೀಮ್ ಇಂಡಿಯಾದ ಹಲವು ಮಾಜಿ ಆಟಗಾರರು ವಿಶ್ವಕಪ್ ತಂಡದಲ್ಲಿ ಆಡಬೇಕಾದ ಆಟಗಾರರನ್ನ ಆಯ್ಕೆ ಮಾಡುತ್ತಿದ್ದಾರೆ. ಈಗ ಟೀಮ್ ಇಂಡಿಯಾ ಮಾಜಿ ಕೋಚ್​, ಸ್ಪಿನ್ ದಿಗ್ಗಜ ಅನಿಲ್​ ಕುಂಬ್ಳೆ ಕೂಡ ತಮ್ಮ ಇಷ್ಟದ ವಿಶ್ವಕಪ್ ತಂಡವನ್ನ ಪ್ರಕಟಿಸಿದ್ದಾರೆ.

ಅನಿಲ್ ಕುಂಬ್ಳೆಯ ವಿಶ್ವಕಪ್ ತಂಡ ಹೀಗಿದೆ

ವಿರಾಟ್ ಕೊಹ್ಲಿ ( ನಾಯಕ), ಎಂ.ಎಸ್ ಧೋನಿ, ರೋಹಿತ್ ಶರ್ಮಾ, ಶಿಖರ್ ಧವನ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್​ದೀಪ್ ಯಾದವ್, ಯಜುವೇಂದರ್ ಚಹಾಲ್, ಮಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ಅಂಬಟಿ ರಾಯುಡು, ರಿಷಬ್ ಪಂತ್, ವಿಜಯ್ ಶಂಕರ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಕ್ರೀಡೆ

4ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ; ಬ್ಯಾಟಿಂಗ್ ಆಯ್ಕೆ..!

Published

on

ಸುದ್ದಿದಿನ,ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಕಾಂಗರೂಗಳಿಗೆ ಶರಣಾಗಿ ಹಿನ್ನೆಡೆ ಅನುಭವಿಸಿದ್ದ ವಿರಾಟ್ ಕೊಹ್ಲಿ ಪಡೆ, ಇಂದಿನ ಪಂದ್ಯದಲ್ಲಿ ಕಾಂಗರೂಗಳಿಗೆ ತಿರುಗೇಟು ನೀಡಿ ಸರಣಿ ಗೆಲುವಿನ ಬಗೆ ಬೀರುವ ವಿಶ್ವಾಸದಲ್ಲಿದೆ.

ಇನ್ನು ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಕೆಲ ಬದಲಾವಣೆಯಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್, ಯಜುವೇಂದರ್ ಚಹಾಲ್, ರಿಷಬ್ ಪಂತ್, ಭುವನೇಶ್ವರ್ ಕುಮಾರ್​ಗೆ ಚಾನ್ಸ್ ನೀಡಲಾಗಿದೆ. ಧೋನಿ, ಅಂಬಟಿ ರಾಯುಡು, ಮಹಮ್ಮದ್ ಶಮಿ, ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಕ್ರೀಡೆ

ವಿಡಿಯೋ | ಅಮ್ಮನಿಗಾಗಿ ‘ಅಡುಗೆ ಭಟ್ಟ’ ಆದ್ರು ಸಚಿನ್ ತೆಂಡೂಲ್ಕರ್..!

Published

on

ಸುದ್ದಿದಿನ ಡೆಸ್ಕ್ : ಮಾಸ್ಟರ್​​ ಬ್ಲಾಸ್ಟರ್​​ ಸಚಿನ್​ ತೆಂಡೊಲ್ಕರ್ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ತಾಯಿ, ಪತ್ನಿ ಅಂಜಲಿ ಹಾಗೂ ಮಗಳು ಸರಾ ಅವರಿಗಾಗಿ ಸ್ವತಃ ಸಚಿನ್​ ಅವರೇ ಕಿಚನ್​ನಲ್ಲಿ ಅಡುಗೆ ಮಾಡಿ ಬಡಿಸಿದ್ದಾರೆ.

ತಾವು ಅಡುಗೆ ಮಾಡಿರೋ ವಿಡಿಯೋವನ್ನು ಟ್ವೀಟರ್​​​ನಲ್ಲಿ ಹಂಚಿಕೊಂಡಿದ್ದಾರೆ. ಈ ಮಹಿಳಾ ದಿನದಂದು ನಮ್ಮ ಬಾಳಲ್ಲಿ ತುಂಬಾ ಪ್ರಮುಖರಾಗಿರುವ ಮಹಿಳೆಯರಿಗಾಗಿ ಏನಾದರೂ ವಿಶೇಷವಾಗಿರೋದನ್ನು ಮಾಡೋಣ ಎಂದು ಟ್ವೀಟ್​​ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending