Connect with us

ಕ್ರೀಡೆ

ಬೆಣ್ಣೆನಗರಿಯ ಅಂತರಾಷ್ಟ್ರೀಯ ಕಬ್ಬಡ್ಡಿ ಪ್ರತಿಭೆ ಅನಿಲ್‌ ಮಲೇಷಿಯಾದಲ್ಲಿ ಆಡಲು ನಿಮ್ಮಿಂದ ಮಾತ್ರ ಸಾಧ್ಯ : ಸಹಕರಿಸಿ ; ಈ ಪ್ರತಿಭೆ ಬೆಳೆಸಿ

Published

on

ಅನಿಲ್ ಕಬ್ಬಡ್ಡಿ ಪ್ರತಿಭೆ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಕ್ಕನೂರು ನಿವಾಸಿ ಅನಿಲ್ ಈಗ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಟೀಂಗೆ ಆಯ್ಕೆಯಾಗಿದ್ದಾರೆ.ಕೇವಲ ನಾಲ್ಕು ದಿನಗಳಲ್ಲಿ ಅನಿಲ್ ಮಲೇಷ್ಯಾಯಾದಲ್ಲಿ ನಡೆಯಲಿರು ಅಂತರಾಷ್ಟ್ರೀಯ ಕಬ್ಬಡಿ ಟೀಂನಲ್ಲಿ ಭಾರತವನ್ನು ಪ್ರತಿನಿಧಿಸಲು ಹೋಗಬೇಕಾಗಿದೆ.ಆದರೆ ಅವರಿಗೆ ಆರ್ಥಿಕ ಅಡಚಣೆಯಾಗಿದ್ದು ಆರ್ಥಿಕ ಸಹಾಯಕ್ಕೆ ಸಂಬಂಧಿಕರ ಮೊರೆ ಹೋಗಿದ್ದಾರೆ.

ಆದರೂ ಹಣ ಸಂಗ್ರಹವಾಗುತ್ತಿಲ್ಲ.ಮಲೇಷ್ಯಾಕ್ಕೆ ಹೋಗಲು 70 ಸಾವಿರ ಹಣ ಬೇಕಾಗಿದೆ.ಹೀಗಾಗಿ ದಾನಿಗಳ ಸಹಾಯ ಬೇಡುತ್ತಿದ್ದಾರೆ.ಮಗನಿಗೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅನಿಲ್ ತಾಯಿ ಕೂಲಿ ನಾಲಿ ಮಾಡಿ ಮಗನನ್ನು ಮಲೇಷ್ಯಾಕ್ಕೆ ಹೋಗುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಆದರೆ ಹಣದ ಸಂಗ್ರಹವಾಗುತ್ತಿಲ್ಲ. ಅನಿಲ್ ಈಗ ದಾನಿಗಳ ನೆರವಿಗಾಗಿ ಹಸ್ತ ಚಾಚಿದ್ದಾರೆ.

ಸಹಾಯ ಮಾಡಲಿಚ್ಚಿಸುವವರು, ಈ ಅಕೌಂಟ್ ನಂಬರ್ ಗೆ

Anil.A 
STAT BANK OF INDIA
HARIHARA
A/C 38014193686
ifsc code-sbin0040466

ನಿಮ್ಮ ಹಣಸಂದಾಯ ಮಾಡಬಹುದು. ಹಾಗೇ ಈ ನಂಬರ್ ಗೆ ಕರೆಮಾಡಿ ಅವರ ಪರಿಸ್ಥಿತಿಯ ಬಗ್ಗೆ ಮೊ ನಂ : 9620007275 ತಿಳಿದುಕೊಳ್ಳಿ.

ಕ್ರೀಡೆ

ಏಕಲವ್ಯ ಪ್ರಶಸ್ತಿಗೆ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ, ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷ ಸಹ 2018 ಹಾಗೂ ಹಿಂದಿನ ನಾಲ್ಕು ವರ್ಷಗಳಲ್ಲಿ ಅಸಾಧರಣ ಪ್ರತಿಭೆ ತೋರಿದ ಪುರುಷ/ಮಹಿಳಾ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಿ ಸನ್ಮಾನಿಸಲು ತೀರ್ಮಾನಿಸಿಲಾಗಿದೆ.

ಇದರೊಂದಿಗೆ ತರಬೇತುದಾರರಾಗಿ ನಿರಂತರವಾಗಿ ಸೇವೆ ಸಲ್ಲಿಸಿದ ಹಿರಿಯ ಹಿರಿಯ ಕ್ರೀಡಾಪಟು/ತರಬೇತುದಾರರು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ತೀರ್ಮಾನಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜೀವಮಾನ ಸಾಧನೆ ಪ್ರಶಸ್ತಿಗೆ http://serviceonline.gov.in/Karnataka ಹಾಗೂ ಏಕಲವ್ಯ ಪ್ರಶಸ್ತಿಗೆ www.karnataka.gov.in/dyes ವೆಬ್ ವಿಳಾಸದ ಮೂಲಕ ಜೂನ್ 30 ರೊಳಗಾಗಿ ಆನ್‍ಲೈನ್ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರುಪಾವತಿಗೆ ಆನ್‍ಲೈನ್ ಅರ್ಜಿ ಆಹ್ವಾನ

Published

on

ಸುದ್ದಿದಿನ, ಬೆಂಗಳೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018-19ನೇ ಸಾಲಿನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕವನ್ನು ಮರುಪಾವತಿಸುವ ಯೋಜನೆಯಡಿ ಅರ್ಹ ಕ್ರೀಡಾಪಟುಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.

ಆಸಕ್ತ ಕ್ರೀಡಾ ಪಟುಗಳು ಕಚೇರಿಯ ಜಾಲತಾಣ http://serviceonline.gov.in/karantaka ಮೂಲಕ ಆನ್‍ಲೈನ್‍ನಲ್ಲಿ ಜೂನ್ 30ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮಾಹಿತಿಗಾಗಿ ದೂ.ಸಂ.: 08182-223328ನ್ನು ಸಂಪರ್ಕಿಸುವುದು.

Continue Reading

ಕ್ರೀಡೆ

‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿಗೆ ಆನ್‍ಲೈನ್ ಅರ್ಜಿ ಆಹ್ವಾನ

Published

on

ಸುದ್ದಿದಿನ,ಬೆಂಗಳೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಅರ್ಹ ಕ್ರೀಡಾಪಟುಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.

ಆಸಕ್ತ ಕ್ರೀಡಾ ಪಟುಗಳು ಕಚೇರಿಯ ಜಾಲತಾಣ http://serviceonline.gov.in/karantaka ಮೂಲಕ ಆನ್‍ಲೈನ್‍ನಲ್ಲಿ ಜೂನ್ 30ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮಾಹಿತಿಗಾಗಿ ದೂ.ಸಂ.: 08182-223328ನ್ನು ಸಂಪರ್ಕಿಸುವುದು.

Continue Reading
Advertisement

Trending