Connect with us

ಕ್ರೀಡೆ

ರಾಜ್ಯದ ಯುವ ವೇಗಿಗಳಿಗೆ ಮಿಚೆಲ್ ಜಾನ್ಸನ್ ಬೌಲಿಂಗ್ ಪಾಠ

Published

on

ಸುದ್ದಿದಿನ,ಮೈಸೂರು: ಆಸ್ಟ್ರೇಲಿಯಾದ ಮಾಜಿ ಎಡಗೈ ವೇಗದ ಬೌಲರ್ ಮಿಚೆಲ್ ಜಾನ್ಸನ್, ಸದ್ಯ ಮೈಸೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್-7 ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಈ ಸಂದರ್ಭದಲ್ಲಿ ಕಾಂಗರೂ ನಾಡಿನ ದಿಗ್ಗಜ ವೇಗದ ಬೌಲರ್ ಜಾನ್ಸನ್, ಕರ್ನಾಟಕದ ಯುವ ವೇಗದ ಬೌಲರ್‌ಗಳಿಗೆ ಬೌಲಿಂಗ್ ಪಾಠ ಹೇಳಿಕೊಟ್ಟಿದ್ದಾರೆ.

ಶನಿವಾರ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಜಾನ್ಸನ್, ರಾಜ್ಯದ 12 ವೇಗದ ಬೌಲರ್‌ಗಳಿಗೆ ಬೌಲಿಂಗ್ ಟಿಪ್ಸ್ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಟೆಸ್ಟ್ ಕ್ರಿಕೆಟಿಗ ಹಾಗೂ ರಾಜ್ಯ ಹಿರಿಯರ ತಂಡದ ಆಯ್ಕೆ ಸಮಿತಿಯ ಸದಸ್ಯ, ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಉಪಸ್ಥಿತರಿದ್ದರು.

ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ 36 ವರ್ಷದ ಜಾನ್ಸನ್, ಆಸ್ಟ್ರೇಲಿಯಾ ಪರ ಆಡಿರುವ 73 ಟೆಸ್ಟ್ ಪಂದ್ಯಗಳಿಂದ 313 ವಿಕೆಟ್ಸ್, 153 ಏಕದಿನ ಪಂದ್ಯಗಳಿಂದ 239 ವಿಕೆಟ್ಸ್ ಹಾಗೂ 30 ಟಿ20 ಪಂದ್ಯಗಳಿಂದ 38 ವಿಕೆಟ್ ಪಡೆದಿದ್ದಾರೆ.

ಕ್ರೀಡೆ

ದಾವಣಗೆರೆ | ಅಖಿಲ ಭಾರತ ಅಂತರ ವಿವಿ ಖೋ-ಖೋ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ

Published

on

ಸುದ್ದಿದಿನ,ದಾವಣಗೆರೆ : ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟ, ಶಿವಮೊಗ್ಗ ಇವರ ಆಶ್ರಯದಲ್ಲಿ ಜರುಗಿದ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾನಿಲಯಲ್ಲಿ ಪಂದ್ಯಾವಳಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪುರುಷರ ಖೋ-ಖೋ ತಂಡ ತೃತೀಯ ಸ್ಥಾನವನ್ನು ಪಡೆದಿದೆ ಹಾಗೂ ಅಖಿಲಭಾರತ ಅಂತರ ವಿಶ್ವವಿದ್ಯಾನಿಲಯ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ.

ತಂಡದ ಎಲ್ಲಾ ಆಟಗಾರರಿಗೆ ಮತ್ತು ತಂಡದ ಮ್ಯಾನೇಜರ್ ಬಸವರಾಜ್ ವಿ ದಮ್ಮಳ್ಳಿ, ತಂಡದ ಕೋಚ್ ಹೆಚ್.ತಿಪ್ಪೇಸ್ವಾಮಿಯವರಿಗೆ, ಕುಲಪತಿಗಳಾದ ಪ್ರೊ.ಎಸ್.ವಿ. ಹಲಸೆ, ಕುಲಸಚಿವರಾದ ಪ್ರೊ. ಬಸವರಾಜ್ ಬಣಕಾರ್, ಪರೀಕ್ಷಾಂಗ ಕುಲಸಚಿವೆ ಪ್ರೊ.ಅನಿತಾ ಹೆಚ್.ಎಸ್. ಹಾಗೂ ಕಲಾ ನಿಕಾಯದ ಡೀನ್ ಡಾ. ಕೆ.ಬಿ. ರಂಗಪ್ಪ, ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಂ.ಎಸ್. ರಾಜ್‍ಕುಮಾರ್ ಹಾಗೂ ವಿಶ್ವವಿದ್ಯಾನಿಲಯ ಅಧಿಕಾರಿ ವೃಂದದವರು ಉಪಸ್ಥಿತರಿದ್ದು ಅಭಿನಂದಿಸಿದ್ದಾರೆ ಎಂದು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್. ರಾಜಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ತಂಡಕ್ಕೆ ತೃತೀಯ ಸ್ಥಾನ

Published

on

ಸುದ್ದಿದಿನ ,ದಾವಣಗೆರೆ : ಜ.3 ರಿಂದ 05 ವರೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಅಶೋಕ ಕ್ರೀಡಾ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಆಹ್ವಾನಿತ ಹೊನಲು-ಬೆಳಕಿನ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯದ ಪುರುಷರ ಖೋ-ಖೋ ತಂಡವು ತೃತೀಯ ಸ್ಥಾನ ಪಡೆದಿದೆ.

ಬಾಷಿತ್ ಆಲಿ, ಭರತ್ ಕುಮಾರ್, ಬಾಹುಬಲಿ, ವೀರೇಶ, ಲಕ್ಷ್ಮಣ, ಮಹಮ್ಮದ್ ತಾಸೀನ್, ಅರ್ಜುನ, ಕೃಷ್ಣ, ರಂಗಸ್ವಾಮಿ, ಪುನೀತ್ ಕುಮಾರ್ ಇವರುಗಳು ಉತ್ತಮ ಪ್ರದರ್ಶನ ನೀಡಿರುತ್ತಾರೆ. ಅರುಣ್ ಜೆ. ಬಿ. ಇವರು ಪಂದ್ಯಾವಳಿಯ ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿ ಪಡೆದಿರುತ್ತಾರೆ. ಕ್ರೀಡಾಪಟುಗಳು ಇಲಾಖೆಯ ತರಬೇತುದಾರರಾದ ಜೆ.ರಾಮಲಿಂಗಪ್ಪ ಇವರ ಬಳಿ ತರಬೇತಿ ಪಡೆದಿದ್ದರು.

ವಿಜೇತ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ ಶ್ರೀನಿವಾಸ, ಅಧೀಕ್ಷಕರಾದ ಗ್ರೇಸಿ ಕೆ, ಇಲಾಖೆಯ ತರಬೇತುದಾರರಾದ ಜೆ.ರಾಮಲಿಂಗಪ್ಪ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ದಾವಣಗೆರೆ | ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಗೆ ಜಿಲ್ಲಾ ಕ್ರೀಡಾಪಟುಗಳು ಆಯ್ಕೆ

Published

on

ಸುದ್ದಿದಿನ,ದಾವಣಗೆರೆ : ರಾಷ್ಟ್ರ ಮಟ್ಟದ ಎಸ್.ಜಿ.ಎಫ್.ಐ. ಹಾಗೂ ಖೇಲೋ ಇಂಡಿಯಾ ಖೋ-ಖೋ ಪಂದ್ಯಾವಳಿಗಳು ಉತ್ತರ ಪ್ರದೇಶದ ಡಿಯೋರಿಯಾ ಮತ್ತು ಅಸ್ಸಾಂ ರಾಜ್ಯದ ಗೌವಹಟಿಯಲ್ಲಿ ನಡೆಯಲಿದ್ದು ಈ ಪಂದ್ಯಾವಳಿಗಳಿಗೆ ಜಿಲ್ಲಾ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳು ಆಯ್ಕೆಯಾಗಿರುತ್ತಾರೆ.

ರಾಷ್ಟ್ರ ಮಟ್ಟದಲ್ಲಿ ಜ.03 ರಿಂದ ಜ.07 ರ ವರೆಗೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆಯುವ 17 ವರ್ಷದೊಳಗಿನ ಬಾಲಕರ ಖೋ-ಖೋ ಪಂದ್ಯಾವಳಿ ಹಾಗೂ ಜ.15 ರಿಂದ ಜ.19 ರ ವರೆಗೆ ಅಸ್ಸಾಂ ರಾಜ್ಯ ಗೌವಹಟಿಯಲ್ಲಿ ನಡೆಯುವ 3ನೇ ರಾಷ್ಟ್ರ ಮಟ್ಟದ 17 ವರ್ಷದೊಳಗಿನ ಖೇಲೋ ಇಂಡಿಯಾ ಖೋ-ಖೋ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ರಾಜ್ಯ ಬಾಲಕರ ತಂಡಕ್ಕೆ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಾದ ಎಸ್. ವೇಣುಗೋಪಾಲ್, ಗಜಾ ಚೌಹಾಣ್, ದರ್ಶನ್ ತಿಗಡಿ, ಲಂಕೇಶ, ಆಸೀಫ್ ಕನ್ನೂರ್ ಮತ್ತು ಶರೀಷ್ ಲಾಲಾಸಾಬ್ ಯಲಿಗಾರ್ ಇವರುಗಳು ಆಯ್ಕೆಯಾಗಿರುತ್ತಾರೆ.

ಈ ಕ್ರೀಡಾಪಟುಗಳಿಗೆ ಇಲಾಖೆಯ ತರಬೇತುದಾರರಾದ ಜೆ.ರಾಮಲಿಂಗಪ್ಪ ಇವರು ತರಬೇತಿ ನೀಡಿದ್ದಾರೆ. ಪಂದ್ಯಾವಳಿಗಳಲ್ಲಿ ರಾಜ್ಯ ತಂಡವು ಉತ್ತಮ ಸಾಧನೆ ಮಾಡಿ, ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತರಲೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್ ಹಾಗೂ ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending