Connect with us

ರಾಜಕೀಯ

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ‘ಪುಷ್ಪಾ ಅಮರನಾಥ್ ಅಧಿಕಾರ ಸ್ವೀಕಾರ’

Published

on

ಸುದ್ದಿದಿನ ಡೆಸ್ಕ್ : ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪುಷ್ಪಾ ಅಮರನಾಥ್ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗಣ್ಯಾತಿಗಣ್ಯರಾದ
ಕಾಂಗ್ರೆಸ್ ಸಂಸದೀಯ ನಾಯಕಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ದಿನೇಶ್,‌ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ,ಸಂಸದ ಧೃವನಾರಾಯಣ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಆಂಜನೇಯ,‌ವೀರಣ್ಣ ಮತ್ತೀಕಟ್ಟಿ,ಶಾಸಕರು,ಎಂಎಲ್ಸಿಗಳು ಉಪಸ್ಥಿತರಿದ್ದರು.

Advertisement

ರಾಜಕೀಯ

ಸಂವಿಧಾನೇತರ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದ್ದಾರೆ, ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ : ಸಿದ್ದರಾಮಯ್ಯ ಆಕ್ರೋಶ

Published

on

ಸುದ್ದಿದಿನ,ದಾವಣಗೆರೆ: ಸಚಿವ ಸೋಮಣ್ಣ ಅವರ ಹೇಳಿಕೆ ಆರ್ಥಿಕತೆಯ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿತ್ತು. ಈಗ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ರಾಜ್ಯ ಮಾತ್ರವಲ್ಲ ಇಡೀ ದೇಶವೇ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂವಿಧಾನೇತರ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದ್ದಾರೆ ಅಂತ ಜನ ಹೇಳ್ತಿದ್ದಾರೆ. ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ, ವಿಜಯೇಂದ್ರ ಸಹಿ ಮಾಡೋದಂತೆ. ಬಹಳ ಜನ ಅಸಮಾಧಾನಿತ ಬಿಜೆಪಿ ಶಾಸಕರು ನನ್ನನ್ನು ಭೇಟಿಯಾಗಿ, ಸಹಜವಾಗಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಇರೋದು ನಿಜ. ಆ ಭಿನ್ನಮತ ಮುಂದುವರಿಯಲಿದೆ. ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ನಾವು ಕೈಹಾಕುವುದಿಲ್ಲ. ಸರಕಾರ ಅದರಷ್ಟಕ್ಕೆ ಪತನಗೊಂಡರೆ ನಾವು ಜವಾಬ್ದಾರರಲ್ಲ ಎಂದು ಹೇಳಿದರು.

ಕೊಪ್ಪಳದಲ್ಲಿ ಪ್ರಗತಿಪರರ ಮೇಲೆ ಕೇಸ್ ಹಾಕಿರುವುದನ್ನು ಖಂಡಿಸುತ್ತೇನೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಯಾವ ಸರ್ಕಾರವೂ ಈ ರೀತಿ ಮಾಡುವುದಿಲ್ಲ. ಜನರ ಧ್ವನಿಯನ್ನು ಹತ್ತಿಕ್ಕುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಸರ್ಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ದಾವಣಗೆರೆ | ಜೂನ್ 11ರಂದು ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಜೂ.11 ರಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಚುನಾವಣಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದ ‘ಬೆಳ್ಳಿ’ ಮಿಂಚು ರಾಜೀವ್ ಗಾಂಧೀ ಆರೋಗ್ಯ ವಿವಿ..!

Published

on

  • ಡಾ.ಕೆ.ಸುಧಾಕರ್,ವೈದ್ಯಕೀಯ ಶಿಕ್ಷಣ ಸಚಿವರು,ಕರ್ನಾಟಕ ಸರ್ಕಾರ

ರ್ನಾಟಕದ ಹೆಮ್ಮೆಯ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಶಿಕ್ಷಣ ಕೇಂದ್ರ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಇಂದು 25 ವರ್ಷ ತುಂಬುತ್ತಿದೆ. ಇಡೀ ವಿಶ್ವದ ವೈದ್ಯಕೀಯ ಕ್ಷೇತ್ರಕ್ಕೆ ಕೊರೊನಾ ಸವಾಲಾಗಿರುವ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ವಿಶ್ವವಿದ್ಯಾಲಯ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಒಂದು ವಿಶಿಷ್ಟ ಸಂದರ್ಭ.

ಕಾರಣ ಕೊರೊನಾ ವಿರುದ್ಧ ಕರ್ನಾಟಕ ರಾಜ್ಯ ಸಮರ ಸಾರಿ ಯಶಸ್ಸಿನ ಫಲ ಕಾಣಲು ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ವಿಶ್ವವಿದ್ಯಾಲಯ ಪ್ರಮುಖ ಪಾತ್ರವಹಿಸಿದೆ. ಇಡೀ ರಾಷ್ಟ್ರಮಟ್ಟದಲ್ಲಿ ರಾಜೀವ್‍ಗಾಂಧೀ ಆರೋಗ್ಯ ವಿವಿಯ ಕೊರೊನಾ ಸಾಂಕ್ರಾಮಿಕ ರೋಗದ ಚಿಕಿತ್ಸೆ ಮತ್ತು ನಿಯಂತ್ರಣದ ಕಾರ್ಯವಿಧಾನಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಇಂತಹ ಸವಾಲಿನ ಸಂದರ್ಭದಲ್ಲಿ ಪ್ರತಿಷ್ಠಿತ ಆರೋಗ್ಯ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರಗಳಿಗೆ ಸಾಟಿಯಿಲ್ಲದಂತೆ ಕಾರ್ಯನಿರ್ವಹಿಸುತ್ತಿರುವ ನಮ್ಮ ರಾಜೀವ್ ಗಾಂಧೀ ಆರೋಗ್ಯ ವಿಶ್ವವಿದ್ಯಾಲಯ ಬೆಳ್ಳಿ ಮಹೋತ್ಸವಕ್ಕೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರೇ ಸಾಕ್ಷಿಯಾಗುತ್ತಿರುವುದು ಅವಿಸ್ಮರಣೀಯವೇ ಸರಿ.

1994ರ ಜೂನ್-1 ರಂದು ಕರ್ನಾಟಕ ವಿಜ್ಞಾನ ಕಾಯ್ದೆ ಅಡಿಯಲ್ಲಿ ಸ್ಥಾಪನೆಗೊಂಡ ಈ ವಿಶ್ವವಿದ್ಯಾಲಯದ 25 ವಸಂತಗಳ ಹೆಜ್ಜೆ ಗುರುತು ಅದ್ವಿತೀಯ. ಅಂದು ಬೆಂಗಳೂರಿನಲ್ಲಿ ಆರಂಭಗೊಂಡ ಈ ವಿಶ್ವ ವಿದ್ಯಾಲಯ ಬೆಂಗಳೂರು ಹೊರವಲಯದ ಭೀಮನಕುಪ್ಪೆಯಲ್ಲಿ ಮತ್ತಷ್ಟು ವಿಸ್ತರಣೆಗೊಳ್ಳುತ್ತಿದೆ. 50 ಎಕರೆಗೂ ಮೀರಿದ ಭೂ ಪ್ರದೇಶದಲ್ಲಿ ವಿಶಾಲ ಕ್ಯಾಂಪಸ್ ನಿರ್ಮಾಣಕ್ಕೆ ಜೂನ್-1 ರಂದು ಹಸಿರು ನಿಶಾನೆ ನೀಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು, ರಾಜ್ಯಪಾಲ ವಜುಭಾಯಿವಾಲಾ ಅವರು, ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವರಾಗಿ ನನ್ನ ಅವಧಿಯಲ್ಲಿ ಬೆಳ್ಳಿ ಮಹೋತ್ಸವ ನಡೆಯುತ್ತಿರುವುದು ಮತ್ತು ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಚಾಲನೆ ಸಿಗುತ್ತಿರುವುದು ನನ್ನ ಭಾಗ್ಯವೇ ಸರಿ.

ಪ್ರತಿವರ್ಷ 65 ಸಾವಿರ ವಿದ್ಯಾರ್ಥಿಗಳನ್ನು ರಾಜೀವ್‍ಗಾಂಧೀ ವಿವಿ ದಾಖಲಿಸಿಕೊಳ್ಳುತ್ತಿದೆ.ವಿವಿಯ ಅಡಿಯಲ್ಲಿ ಬರುವ ಶಿಕ್ಷಣ ಸಂಸ್ಥೆಗಳು ಸೇರಿದಂತೆ 2.50,000 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 52 ಮೆಡಿಕಲ್ ಕಾಲೇಜುಗಳಲ್ಲಿ 6200 ಪದವಿ, 43 ಕಾಲೇಜುಗಳ 2506 ಸ್ನಾತಕೋತ್ತರ ವಿದ್ಯಾರ್ಥಿಗಳು, ದಂತ ವೈದ್ಯಕೀಯದಲ್ಲಿ 2780ಪದವಿ, 913 ಪಿಜಿ, ಆಯುರ್ವೇದಲ್ಲಿ 4405 ಪದವಿ, 985 ಸ್ನಾತಕ್ಕೋತ್ತರ ವಿದ್ಯಾರ್ಥಿಗಳು, ಹೋಮಿಯೋಪತಿಯಲ್ಲಿ 850 ಪದವಿ, 121 ಸ್ನಾತಕೋತ್ತರ, ಯುನಾನಿಯಲ್ಲಿ 290ಪದವಿ, 54 ಸ್ನಾತಕೋತ್ತರ, ನ್ಯಾಚುರೋಪತಿ ಮತ್ತು ಯೋಗದಲ್ಲಿ 340 ಪದವಿ, 35 ಸ್ನಾತಕೋತ್ತರ, ನರ್ಸಿಂಗ್‍ನಲ್ಲಿ 19355 ಪದವಿ, 3983ಸ್ನಾತಕೋತ್ತರ, ಬಿಎಸ್ಸಿ ನರ್ಸಿಂಗ್‍ನಲ್ಲಿ 9040 ಪದವಿ ವಿದ್ಯಾರ್ಥಿಗಳು, ಫಿಜಿಯೋಥೆರಫಿಯಲ್ಲಿ 2150 ಪದವಿ, 468 ಸ್ನಾತಕೋತ್ತರ, ಪ್ಯಾರಾಮೆಡಿಕಲ್‍ನಲ್ಲಿ 2920 ಪದವಿ, 468 ಸ್ನಾತಕೋತ್ತರ, ಫಾರ್ಮಸಿಯಲ್ಲಿ 3930ಪದವಿ ಮತ್ತು 1724 ಸ್ನಾತಕೋತ್ತರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಉತಾಹ್ ವಿವಿಯೊಂದಿಗೆ ರಾಜೀವ್ ಗಾಂಧಿ ವಿವಿ ಆರಂಭಿಸಿದ ಜೀವರಕ್ಷ ಕಾರ್ಯಕ್ರಮವು ಜೀವ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಲು ವಿದ್ಯಾರ್ಥಿಗಳಿಗೆ ಅನುಕೂಲಕರ ಕಾರ್ಯವಾಗಿದೆ. 2015ರಲ್ಲಿ ವಿವಿ ಆರಂಭಿಸಿದ ಸಂಶೋಧನೆ ವಿಭಾಗ ಇಂದು ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದೆ. ಐಐಎಸ್‍ಸಿ, ಎನ್‍ಸಿಬಿಎಸ್, ಸಿಹೆಚ್‍ಜಿ ಮತ್ತು ಜೆಎನ್‍ಸಿಎಎಸ್ ಆರ್ ಜೊತೆ ಮಾಡಿಕೊಂಡ ಒಪ್ಪಂದಗಳಿಂದಾಗಿ ಸಂಶೋಧನೆಯಲ್ಲಿ ಮಹತ್ತರ ಸಾಧನೆಗೆ ಕಾರಣವಾಗಿದೆ.

ನ್ಯಾನೋ ಟೆಕ್ನಾಲಜಿ ಮತ್ತು ಮಾಲೇಕ್ಯೂಲರ್ ಬಯಾಲಜಿ ಕ್ಷೇತ್ರದಲ್ಲಿ ವಿವಿಯ ಸಂಶೋಧನಾ ವಿಭಾಗ ವಿನೂತನ ಹೆಜ್ಜೆಯನ್ನೇ ಇಟ್ಟಿದೆ. ವಿವಿಯ 3000ಕ್ಕೂ ಹೆಚ್ಚು ಬೋಧಕರಿಗೆ ಸಂಶೋಧನಾ ವಿಧಾನದ ತರಬೇತಿ ಶಿಬಿರಗಳನ್ನು ನಡೆಸಲಾಗಿದೆ. ಬಡವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನದ ಮೂಲಕ ವಿವಿ ಪ್ರೋತ್ಸಾಹಿಸುತ್ತಿದೆ.

ಅತ್ಯಾಧುನಿಕ ವೈದ್ಯಕೀಯ ಶಿಕ್ಷಣ ತಂತ್ರಜ್ಞಾನಗಳ ಬಗ್ಗೆ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಅಧ್ಯಾಪಕರಿಗೆ ವಾರ್ಷಿಕ ತರಬೇತಿಗಳನ್ನು ನೀಡಲಾಗಿದೆ. ಇಂತಹ ಅನೇಕಲ ಸುಧಾನರಣೆಗಳಿಂದಾಗಿಯೇ ರಾಜೀವ್ ಗಾಂಧೀ ಆರೋಗ್ಯ ವಿವಿ ಸರಿ ಸುಮಾರು 143 ಸಂಶೋಧನೆ ಅನುದಾನಗಳಿಗೆ 5.99 ಕೋಟಿ ರೂಗಳನ್ನು ವೆಚ್ಚ ಮಾಡಿದೆ.

ಪಾರದರ್ಶಕ ಆನ್‍ಲೈನ್ ಪರೀಕ್ಷೆ

ರಾಜೀವ್ ಗಾಂಧೀ ವಿಶ್ವವಿದ್ಯಾಲಯವು ತನ್ನ ಪರೀಕ್ಷ ಉಪ ಕ್ರಮಗಳಿಂದಲೇ ಇಡೀ ದೇಶಕ್ಕೆ ಮಾದರಿ ಎನ್ನಿಸಿದೆ. ಆನ್‍ಲೈನ್ ಪ್ರಶ್ನೆ ಪತ್ರಿಕೆ ನೀಡುವ ಮೂಲಕ ಪರೀಕ್ಷೆ ನಡೆಸಿ ಅಕ್ರಮಗಳಿಗೆ ಕಡಿವಾಣ ಹಾಕಿದೆ. ಪರೀಕ್ಷೆ ಆರಂಭವಾಗುವ 30 ನಿಮಿಷಗಳ ಮುನ್ನ ಆನ್‍ಲೈನ್ ಮೂಲಕ ನಿರ್ಧಿಷ್ಟ ಪಾಸ್‍ವರ್ಡ್ ಮೂಲಕ ಓಪನ್ ಆಗುವ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗೆ ಕಳುಹಿಸಲಾಗುತ್ತದೆ. ಆನ್‍ಲೈನ್ ಪ್ರಶ್ನೆ ಪತ್ರಿಕೆಯನ್ನು ಪರಿಚಯಿಸಿದ ಮೊದಲ ಆರೋಗ್ಯ ವಿವಿ ಎನ್ನಿಸಿಕೊಂಡಿದೆ ರಾಜೀವ್ ಗಾಂಧೀ ಆರೋಗ್ಯ ವಿವಿ.

ಉತ್ತರ ಪತ್ರಿಕೆಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕ ಮೌಲ್ಯಮಾಪನ ಮಾಡಲಾಗುತ್ತಿದೆ. ಇದು ಮೌಲ್ಯಮಾಪನ ಪ್ರಕ್ರಿಯೆಯ ಅವಧಿಯನ್ನು ಕಡಿಮೆ ಮಾಡಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧಗಳನ್ನು ಆನ್‍ಲೈನ್ ಮೂಲಕ ಮೌಲ್ಯಮಾಪನ ಮಾಡುವ ಪದ್ಧತಿ, ದಾಖಲೆಗಳ ಪರಿಶೀಲನೆ ಮತ್ತು ನೀಡುವ ವಿಧಾನ ಡಿಜಿಟಲೀಕರಣ ಪರೀಕ್ಷೆಗಳನ್ನು ವೆಬ್‍ಸ್ಟ್ರೀಮಿಂಗ್ ಮಾಡುವುದು, ಪಾರದರ್ಶಕತೆಗಾಗಿ ಮಾಹಿತಿ ತಂತ್ರಜ್ಞಾನ ಬಳಸಿ ಡಿಜಿಟಲ್ ವ್ಯವಸ್ಥೆಗೆ ತಂದಿರುವುದು ಮತ್ತೊಂದು ಸುಧಾರಣೆ. ಹೀಗೆ ಹಲವು ಶೈಕ್ಷಣೀಕ ಸುಧಾರಣೆಗಳ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿರುವ ರಾಜೀವ್ ಗಾಂಧೀ ಆರೋಗ್ಯ ವಿವಿಯು ಇದೀಗ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್

ದೇಶಕ್ಕೆ ದೇಶವೇ ಕೊರೊನಾ ಆತಂಕಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕರ್ನಾಟಕದ ಪಾಲಿಗೆ ಭರವಸೆ ಮೂಡಿಸಿದ್ದು ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ವಿಶ್ವವಿದ್ಯಾಲಯ. ಕೊರೊನಾ ಚಿಕಿತ್ಸೆಗಾಗಿ ಮೊದಲು ವಿಭಾಗ ಆರಂಭಗೊಂಡಿದ್ದೇ ರಾಜೀವ್‍ಗಾಂಧೀ ವಿವಿಯಲ್ಲಿ. ದಾಖಲಾದ ಸೋಂಕಿತರನ್ನು ಬಹುಬೇಗ ಗುಣಮುಖರನ್ನಾಗಿಸುವಲ್ಲಿ ದೇಶದ ಇತರೆ ಆಸ್ಪತ್ರೆಗಳಿಗೆ ವೈದ್ಯಕೀಯ ಸಂಸ್ಥೆಗಳಿಗೆ ಹೋಲಿಸಿದರೆ ರಾಜೀವ್ ಗಾಂಧೀ ವಿವಿಯ ಸಾಧನೆ ಮೆಚ್ಚುವಂತಹದ್ದು.

ಇದಿಷ್ಟೇ ಅಲ್ಲದೇ ಕೊರೊನಾ ನಿಯಂತ್ರಣದಲ್ಲಿ ಭಾಗಿಯಾದ 60,607 ವೈದ್ಯರು, 40,478 ನರ್ಸ್‍ಗಳು, 38,149 ಅನುದಾನಿತ ಆರೋಗ್ಯ ತಜ್ಞರು, 31,127 ಎನ್‍ಎಸ್‍ಎಸ್, ಪೊಲೀಸ್ ಮತ್ತು ಇತರೆ ಸಿಬ್ಬಂದಿಗೆ ಮೇ 30ರ ವರೆಗೆ ರಾಜೀವ್ ಗಾಂಧೀ ವಿವಿಯ ಮೂಲಕ ತರಬೇತಿ ನೀಡಲಾಗಿದೆ. ಒಟ್ಟಾರೆ 1,73,361 ಮಂದಿಗೆ ಕೊರೊನಾ ಚಿಕಿತ್ಸೆ ನಿಯಂತ್ರಣ ಸೋಂಕು ತಡೆ, ಸೋಂಕಿನಿಂದ ಪಾರಾಗುವುದು ಹೀಗೆ ನಾನಾ ರೀತಿಯ ತರಬೇತಿಗಳನ್ನ ವಿಶ್ವವಿದ್ಯಾನಿಲಯದ ತಜ್ಞರು ನೀಡಿದ್ದಾರೆ.

ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನನಗಳ ವಿಶ್ವವಿದ್ಯಾಲಯವು ನೀಡಿರುವ ಕೊಡುಗೆ ಅಪಾರ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಸಚ್ಚಿದಾನಂದ ಅವರ ನೇತೃತ್ವದಲ್ಲಿ ಇಡೀ ವಿವಿಯ ಬೋಧಕ ಮತ್ತು ಬೋಧಕೇತರ ಸಮುದಾಯ ವಿವಿಯನ್ನು ಉತ್ತುಂಗಕ್ಕೆ ತರುವಲ್ಲಿ ಅವಿರತ ಪ್ರಯತ್ನ ಮಾಡುತ್ತಿದೆ.

ಡಾ.ಎಸ್.ಕಾಂತ ಅವರ ಮುಂದಾಳತ್ವದಲ್ಲಿ 1994ರಲ್ಲಿ ಆರಂಭಗೊಂಡ ಈ ವಿವಿಯ ಅಡಿಯಲ್ಲಿ ಈಗ 700ಕ್ಕು ಹೆಚ್ಚು ವೈದ್ಯಕಯ ಶಿಕ್ಷಣ ಸಂಸ್ಥೆಗಳಿವೆ. 2018ರಲ್ಲಿ ಡೆಂಘಿ ರೋಗದ ನಿಯಂತ್ರಣಕ್ಕೆ ವಿವಿ ವತಿಯಿಂದ ಸಂಶೋಧನೆಯನ್ನು ನಡೆಸಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವಿವಿಯು ಪ್ರಮುಖ ಪಾತ್ರ ವಹಿಸಿತ್ತು. ದೇಶದಲ್ಲೇ ಮೊದಲ ಡೇಂಘಿ ಕ್ಲೀನಿಕಲ್ ಸ್ಯಾಂಪಲ್ ಬ್ಯಾಂಕ್ ಸ್ಥಾಪಿಸಿದ ಕೀರ್ತಿ ರಾಜೀವ್ ಗಾಂಧೀ ವಿವಿಗೆ ಸಲ್ಲುತ್ತದೆ.

ಒಟ್ಟಾರೆ 217 ಕ್ಲೀನಿಕಲ್ ಟೀಚಿಂಗ್ ಸಾಮಥ್ರ್ಯ ಹೊಂದಿರುವ ವಿಶ್ವವಿದ್ಯಾನಿಲಯ ಸಾಕಷ್ಟು ಗುರಿ ಹೊಂದಿದೆ. ಭೀಮನಕುಪ್ಪೆಯಲ್ಲಿ ಸಂಶೋಧನಾ ವಿಭಾಗ ತೆರೆಯುವುದು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಬಳಗ ಹೆಚ್ಚು ವಿಜ್ಞಾನ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಉತ್ತೇಜಿಸುವುದು ಮತ್ತು ಸಂಶೋಧನೆ ನಡೆಸುವ ಪ್ರಕ್ರಿಯೆಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹಾಕಿಕೊಂಡಿದೆ. ಈ ಬೆಳ್ಳಿ ಸಂಭ್ರಮದ ಸಂದರ್ಭದಲ್ಲಿ ರಾಜೀವ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಜಗತ್ತಿನ ಭೂಪಟದಲ್ಲಿ ಮಹತ್ತರ ಸ್ಥಾನಕ್ಕೆ ಕೊಂಡೊಯ್ಯುವ ಕಾರ್ಯದಲ್ಲಿ ನನ್ನದೂ ಕೂಡಾ ಚಿಕ್ಕ ಪಾತ್ರವಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನ್ನಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ8 hours ago

ವಿಚಾರವಾದಿ ಡಾ.ಎಚ್. ನರಸಿಂಹಯ್ಯ ಬದುಕು : ಮಿಸ್ ಮಾಡ್ದೆ ಓದಿ ಈ ಲೇಖನ

ಸಂಗಮೇಶ ಎನ್ ಜವಾದಿ ನಾಡು ಕಂಡ ಅಪರೂಪದ ಧೀಮಂತ ಸಜ್ಜನ ವ್ಯಕ್ತಿ, ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ಪ್ರಗತಿಪರವಿಚಾರವಾದಿ, ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವ,ರಾಷ್ಟ್ರೀಯವಾದಿ,ಖಾದಿ ಬಟ್ಟೆಯನ್ನೇ ಕೊನೆಯವರೆಗೂ ಧರಿಸುತ್ತಿದ...

ದಿನದ ಸುದ್ದಿ9 hours ago

ಚಾಮರಾಜನಗರ | 109 ಜನರ ವರದಿ ನೆಗೆಟಿವ್

ಸುದ್ದಿದಿನ,ಚಾಮರಾಜನಗರ: ಜಿಲ್ಲೆಯಿಂದ ಮಂಗಳವಾರ(ಜೂನ್ 3) ಪರೀಕ್ಷೆಗಾಗಿ ಕಳುಹಿಸಲಾಗಿದ್ದ 109 ಜನರ ಗಂಟಲಿನ ದ್ರವ ಮಾದರಿಯ ಪ್ರಯೋಗಾಲಯ ವರದಿಯು ನೆಗೆಟಿವ್ ಬಂದಿದೆ. ಇಂದು 73 ಜನರ ಗಂಟಲಿನ ದ್ರವ...

ದಿನದ ಸುದ್ದಿ9 hours ago

91 ಕೊರೋನಾ ಸೋಂಕಿತರ ಪೈಕಿ 74 ಜನ ಗುಣಮುಖ : ಓರ್ವ ಬಾಲಕಿಗೆ ಕೊರೋನಾ ಪಾಸಿಟಿವ್

ಸುದ್ದಿದಿನ,ಬಾಗಲಕೋಟೆ : ಜಿಲ್ಲೆಯ ಬೀಳಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಓರ್ವ ಬಾಲಕಿಗೆ ಕೋವಿಡ್ ಸೋಂಕು ಇರುವುದು ಗುರುವಾರ ದೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. 91 ಸೋಂಕಿತರ...

ದಿನದ ಸುದ್ದಿ9 hours ago

ಹಾಸನ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 198 ಕ್ಕೆ ಏರಿಕೆ

ಸುದ್ದಿದಿನ,ಹಾಸನ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 198 ಕ್ಕೆ ಏರಿಕೆಯಾಗಿದ್ದು, ಹೊಸದಾಗಿ 12 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಪತ್ರಿಕಾ...

ದಿನದ ಸುದ್ದಿ10 hours ago

ದಾವಣಗೆರೆಯಲ್ಲಿಂದು 13 ಕೊರೊನಾ ಪಾಸಿಟಿವ್: ಎಂಟು ತಿಂಗಳ ಮಗು ಸೇರಿ 7 ಜನ ಆಸ್ಪತ್ರೆಯಿಂದ ಬಿಡುಗಡೆ

ಸುದ್ದಿದಿನ ,ದಾವಣಗೆರೆ : ಇಂದು ಜಿಲ್ಲೆಯಲ್ಲಿ 13 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಒಂದು ಸಾವು ಸಂಭವಿಸಿದೆ. ಹಾಗೂ 7 ಜನರು ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ...

ದಿನದ ಸುದ್ದಿ10 hours ago

ಜಾಲಿನಗರ ಕಂಟೈನ್‍ಮೆಂಟ್ ಝೋನ್‍ ನಲ್ಲಿ‌ ಅತಿ ಹೆಚ್ಚು ಕೊರೋನಾ ಪ್ರಕರಣಗಳು : ಜಿಲ್ಲಾಧಿಕಾರಿ

ಸುದ್ದಿದಿನ, ದಾವಣಗೆರೆ: ಜಾಲಿನಗರ ಕಂಟೈನ್‍ಮೆಂಟ್ ಝೋನ್‍ನಲ್ಲೇ ಅತಿ ಹೆಚ್ಚು ಪ್ರಕರಣಗಳಿದ್ದು, ರೋಗಿ ಸ್ಥಿತಿ ಉಲ್ಬಣವಾಗುವವರೆಗೆ ರೋಗದ ಮಾಹಿತಿಯನ್ನು ನೀಡದೇ ಇರಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು....

ದಿನದ ಸುದ್ದಿ10 hours ago

ಹರಿಹರ | ಆಸ್ತಿ ತೆರಿಗೆ ರಿಯಾಯಿತಿ ಸೌಲಭ್ಯ ಜು.31 ರವರೆಗೆ ವಿಸ್ತರಣೆ

ಸುದ್ದಿದಿನ,ದಾವಣಗೆರೆ : ಹರಿಹರ ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಮೇಲೆ ಒದಗಿಸಲಾಗುವ ಶೇ.5 ರಷ್ಟು ರಿಯಾಯಿತಿ ಸೌಲಭ್ಯವನ್ನು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಇರುವ ಪ್ರಯುಕ್ತ ಏಪ್ರಿಲ್...

ದಿನದ ಸುದ್ದಿ10 hours ago

ದಾವಣಗೆರೆ | ನರೇಗಾ ಯೋಜನೆಯಡಿ ಬಿ.ಎಫ್.ಟಿ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಾವಣಗೆರೆ ಜಿಲ್ಲೆಯ ಗ್ರಾ.ಪಂ ಗಳ ವ್ಯಾಪ್ತಿಯಲ್ಲಿ (ಚನ್ನಗಿರಿ ತಾಲ್ಲೂಕು ಹೊರತುಪಡಿಸಿ) ಕೈಗೊಳ್ಳಬಹುದಾದ ಕಾಮಗಾರಿಗಳನ್ನು ನಿರ್ವಹಿಸಲು ಮೇಲುಸ್ತುವಾರಿ...

ದಿನದ ಸುದ್ದಿ11 hours ago

ಪ್ರಾತಃ ಸ್ಮರಣೀಯ ಸಮಾಜವಾದಿ ಮಹಾರಾಜ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ..!

ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ 4, 1848- ಆಗಸ್ಟ್ 3, 1940) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು. ಇವರ ಆಳ್ವಿಕೆ1902 ರಿಂದ1940 ರವರೆಗೆ ನಡೆಯಿತು....

ದಿನದ ಸುದ್ದಿ13 hours ago

ದಾವಣಗೆರೆ | ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಎಸ್‍ಬಿಐ ಮೊಬೈಲ್ ಎಟಿಎಂ

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿರುವ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಹಣದ ಅಗತ್ಯವುಳ್ಳವರ ಸಹಾಯಕ್ಕಾಗಿ ಬುಧವಾರ ಪಿ.ಬಿ. ಮುಖ್ಯ ರಸ್ತೆಯಲ್ಲಿರುವ ಎಸ್‍ಬಿಐ ಶಾಖೆಯ ವತಿಯಿಂದ ವ್ಯವಸ್ಥೆ ಮಾಡಲಾಗಿರುವ...

Trending