Connect with us

ರಾಜಕೀಯ

ಸಚಿವ ಸ್ಥಾನ |ಎಮ್.ವೈ.ಪಾಟೀಲ್,ಬಿ.ಸಿ.ಪಾಟೀಲ್ ಆಕ್ರೋಶ ; ಸಿದ್ದರಾಮಯ್ಯ ನನ್ನ ಕೈ ಬಿಟ್ಟರು : ಬಿ.ಸಿ.ಪಾಟೀಲ್ ಅಸಮಾಧಾನ

Published

on

ಸುದ್ದಿದಿನ ಡೆಸ್ಕ್ : ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಕಲಬುರಗಿ ಜಿಲ್ಲೆಗೆ ಭಾರಿ ಹಿನ್ನಡೆಯಾಗಿದೆ ಎಂದು ಕಲಬುರಗಿಯಲ್ಲಿ ಸಮೀಶ್ರ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ ಅಫಜಲಪುರ ಕಾಂಗ್ರೆಸ್ ಶಾಸಕ ಎಮ್ ವೈ ಪಾಟೀಲ್.

ಒತ್ತಡಕ್ಕೆ ಮಣಿದು, ಹಾಗೂ ಎಲ್ಲರನ್ನ ಸಮಾಧಾಪಡಿಸುವ ದೃಷ್ಟಿಯಿಂದ ಸಚಿವ ಸ್ಥಾನ ಕೈ ತಪ್ಪಿದೆ. ನಾನೇನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ, ವರಿಷ್ಟರ ಬಳಿ ಬೇಡಿಕೆ ಇಟ್ಟಿರಲಿಲ್ಲ. ಶಾಸಕರಾದ ಡಾ ಉಮೇಶ್ ಜಾಧವ್, ಡಾ ಅಜಯ್‌ಸಿಂಗ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು ಆದರೆ ಎಲ್ಲರನ್ನ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಅಂತಾ ನಿಗಮ ಮಂಡಳಿ ನೀಡಲಾಗಿದೆ.ಆದರೆ ಕಲಬುರಗಿ ಸಂಸತ್ ಕ್ಷೇತ್ರಕ್ಕೆ ಸಮೀಶ್ರ ಸರ್ಕಾರದಿಂದ ಹಿನ್ನಡೆಯಾಗಿದ್ದಂತು ಸತ್ಯ.‌ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಇರಿಸುಮುರಿಸುಂಟು ಮಾಡಿದ್ರಿಂದ ಅವ್ರನ್ನ ಕೈ ಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಬಿ.ಸಿ.ಪಾಟೀಲ್ ಅಸಮಾಧಾನ

ಶಾಸಕ ಬಿ.ಸಿ.ಪಾಟೀಲಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಪಾಟೀಲ ನಿವಾಸದ ಎದುರು ಬೆಂಬಲಿಗರ ಪ್ರತಿಭಟನೆ ನಡೆಸಿದ್ದಾರೆ.ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಡಣದಲ್ಲಿರೋ ನಿವಾಸ ಎದುರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತ ಪಡಿಸಿದ್ದು, ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡ್ತಿರೋ ಕಾಂಗ್ರೆಸ್ ನಿಂದ ಹೊರಬರುವಂತೆ ಒತ್ತಾಯ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹಿರೇಕೆರೂರಿನಲ್ಲಿ ಶಾಸಕ ಬಿಸಿ ಪಾಟೀಲ್ ಅವರು’ಖಂಡಿತ ಬರವಸೆ ಇತ್ತು ಈ ಸಲ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗುತ್ತದೆ ಅಂತಾ,‌ ಆದರೆ ಹಾವೇರಿಯ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಬಗ್ಗೆ ಯಾರು ಕೇಳುವವರಿಲ್ಲ. ಹಾವೇರಿ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ನಾನು. ನಾನು ಬಂದಮೇಲೆ ಕಾಂಗ್ರೆಸ್ ಪಕ್ಷವನ್ನು ಬೆಳಸಿದ್ದೇನೆ. ಮೂರು ಜಿಲ್ಲೆಯಲ್ಲಿ ಲಿಂಗಾಯತ ಕಾಂಗ್ರೆಸ್ ಶಾಸಕ ಇಲ್ಲ.ಹೀಗಾಗಿ ಸಾದರ ಲಿಂಗಾಯತರನ್ನು ಬಿಟ್ಟು ಸಚಿವ ಸಂಪುಟ ರಚಿಸಲಾಗಿದೆ.ನಾವು ಹತ್ತು ಜಿಲ್ಲೆಯಲ್ಲಿ ಸಾದರ ಲಿಂಗಾಯತರಿದ್ದೇವೆ‌’ ಎಂದು ಅಸಮಾಧಾನ ಹೊತಹಾಕಿದರು.

ಹಿರೇಕೆರೂರ ತಾಲೂಕಿಗೆ 38 ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ. ತುಂಬಾ ಬೇಜಾರಾಗಿದೆ ತುಂಬಾ ನೋವಾಗಿದೆ.ನನ್ನ ಗಾಡ್ ಫಾದರ್ ಸಿದ್ದರಾಮಯ್ಯ. ನಾನು ಸಿದ್ದರಾಮಯ್ಯರನ್ನು ನಂಬಿಕೊಂಡಿದೆ.‌ಅವರು ಮುಖ್ಯಮಂತ್ರಿ ಮಾಡಲು ದ್ವನಿ ಎತ್ತಿದವರಲ್ಲಿ ನಾನು ಮೊದಲಿಗ. ಆದರೆ ಸಿದ್ದರಾಮಯ್ಯ ನನ್ನನ್ನು ಕೈ ಬಿಟ್ಟಿದ್ದಾರೆ. ಬಿಜಾಪುರ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಿದ್ದಾರೆ.ನನ್ನ ಜೊತೆ ಕಾಂಗ್ರೆಸ್ ಪಕ್ಷದ ಮುಖಂಡರು ಯಾರು ಮಾತನಾಡಿಲ್ಲ. ಮುಂದಿನ ನಡೆ ಕಾದು ನೋಡಿ. ಯಾವುದೇ ಕಾರಣಕ್ಕೂ ಬಿಜೆಪಿ ಸೇರೊಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ರಾಜಕೀಯ

ಮಂಡ್ಯ ಲೋಕಸಭಾ ಚುನಾವಣೆ: ಮೊದಲ ದಿನ ಮೂರು ನಾಮಪತ್ರ ಸಲ್ಲಿಕೆ

Published

on

ಸುದ್ದಿದಿನ,ಮಂಡ್ಯ : ಮಂಡ್ಯ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಮೊದಲ ದಿನವಾದ ಇಂದು ಕೌಡ್ಲೆ ಚನ್ನಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ 1 ನಾಮಪತ್ರ, ಸಂಯುಕ್ತ ಜನತಾ ದಳ ಪಕ್ಷದಿಂದ 1 ನಾಮಪತ್ರ ಹಾಗೂ ಸಮಾಜವಾದಿ ಪಕ್ಷದಿಂದ 1 ನಾಮಪತ್ರವನ್ನು ಸಲ್ಲಿಸಿರುತ್ತಾರೆ ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ರಾಜಕೀಯ

ಖರ್ಗೆ ಗೆದ್ದರೆ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬಲ ಬಂದಂತೆ : ಸಿದ್ದರಾಮಯ್ಯ

Published

on

ಸುದ್ದಿದಿನ,ಕಲಬುರಗಿ: ಕೇಂದ್ರದಲ್ಲಿ ಬಿಜೆಪಿ ಆಡಳಿತ ಕೊನೆಗೊಂಡು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ನಮ್ಮ ಕಾರ್ಯಕರ್ತರು ಈ ಬಾರಿ ಸಂಕಲ್ಪ ಮಾಡಿ ಚುನಾವಣೆಯಲ್ಲಿ ಹೋರಾಟ ಮಾಡಬೇಕು‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟರು.

ಕಲಬುರಗಿಯಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ, ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿಯವರು ಇತ್ತೀಚೆಗೆ ಕಲಬುರಗಿಗೆ ಬಂದಿದ್ದರು. ಹಾಗೆಯೇ ಅವರು ದೇಶದ ಯಾವುದೇ ಭಾಗದಲ್ಲಿ ಭಾಷಣ ಮಾಡಿದರೂ ಅಭಿವೃದ್ಧಿ ಕುರಿತು ಚಕಾರ ಎತ್ತುವುದಿಲ್ಲ. ಚುನಾವಣೆ ಪೂರ್ವದಲ್ಲಿ ದೇಶದ ಜನರಿಗೆ ಕೊಟ್ಟ ಭರವಸೆಗಳೆಷ್ಟು, ಈಡೇರಿಸಿದ ಆಶ್ವಾಸನೆಗಳು ಎಷ್ಟು? ಎಂಬುದನ್ನು ಹೇಳುವುದಿಲ್ಲ. ಬದಲಿಗೆ ಭಾವನಾತ್ಮಕವಾಗಿ ಮಾತನಾಡಿ ಜನತೆಯ ದಿಕ್ಕು ತಪ್ಪಿಸುತ್ತಾರೆ ಎಂದು ಕಿಡಿಕಾರಿದರು.

ಕೋಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮುಖ್ಯಮಂತ್ರಿ ಆಗಿದ್ದಾಗ ಎರಡು ಬಾರಿ ಮೋದಿಯವರಿಗೆ ಶಿಫಾರಸು ಮಾಡಿದ್ದೆ, ಆದರೆ ಅವರು ತಿರಸ್ಕರಿಸಿದ್ದರು.‌ ರಾಹುಲ್ ಗಾಂಧಿಯವರು ಪ್ರಧಾನಿಯಾದರೆ ಖಂಡಿತಾ ಇದನ್ನು ಪರಿಶೀಲನೆ ನಡೆಸುತ್ತಾರೆ. ಈ ಬಗ್ಗೆ ಅವರಲ್ಲಿ ಈಗಾಗಲೇ ಮನವಿ ಮಾಡಿದ್ದೇನೆ ಎಂದರು.

ಹೈದರಾಬಾದ್- ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ಶ್ರಮಿಸಿದವರು ಖರ್ಗೆಯವರು. ಸಂಸತ್ತಿನಲ್ಲಿ ಸದಾಕಾಲ ನಾಡಿನ ಪರವಾದ ಧ್ವನಿಯಾಗಿ ನಿಂತವರು ಇವರು. ಇಂತಹ ಮುತ್ಸದ್ದಿ ನಾಯಕರು ರಾಜಕಾರಣದಲ್ಲಿ ಗೆಲ್ಲಬೇಕು, ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬಲ ಬರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ರಾಜಕೀಯ

ನಾನು ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ : ಸುಮಲತ ಅಂಬರೀಶ್

Published

on

ಸುದ್ದಿದಿನ,ಬೆಂಗಳೂರು: ನಾನು ಮಂಡ್ಯದ ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಮಂಡ್ಯದ ಜನತೆಯ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಅವರ ಒತ್ತಾಯದ ಮೇರೆಗೆ ಅಂಬರೀಶ್ ಕನಸು ನನಸು ಮಾಡಲು ಮಂಡ್ಯದ ಜನಾಭಿಪ್ರಾಯದಂತೆ ನಡೆಯುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಅಭಿಷೇಕ್ ಅಂಬರೀಶ್, ಯಶ್, ದರ್ಶನ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಚಿತ್ರರಂಗದ ಇತರ ಗಣ್ಯರು ಉಪಸ್ಥಿತ ರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending