Connect with us

ರಾಜಕೀಯ

ಬರೆದಿಟ್ಟುಕೊಳ್ಳಿ ಮೈತ್ರಿ ಸರ್ಕಾರ ಐದು ವರ್ಷ ಪೂರೈಸುತ್ತೆ : ಬಿಜೆಪಿಗೆ ಟಾಂಗ್ ಕೊಟ್ಟ ಸಚಿವ ಎಚ್.ಡಿ.ರೇವಣ್ಣ

Published

on

ಸುದ್ದಿದಿನ, ಕಲಬುರಗಿ : ಆರು ತಿಂಗಳಿನಿಂದ ಸರ್ಕಾರ ಕೆಡತಿವಿ ಅಂತಾ ಬಿಜೆಪಿಯವರು ಹೇಳ್ತಾನೆ ಬರ್ತಿದಾರೆ, ರಾಜ್ಯದ ಹಿತ ಬಿಟ್ಟು ಅಧಿಕಾರಕ್ಕಾಗಿ ಅವರು ಒದ್ದಾಡುತ್ತಿದ್ದಾರೆ ಕಲಬುರಗಿಯಲ್ಲಿ ಸಚಿವ ಎಚ್‌ಡಿ ರೇವಣ್ಣ ಸುದ್ಧಿಗೋಷ್ಟಿಯಲ್ಲಿ ಕಿಡಿಕಾರಿದರು.

ನಂತರ ಮಾತನಾಡಿದ ಅವರು ಬರ ಪರಿಹಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಆದ್ರೆ ರಾಜ್ಯ ಬಿಜೆಪಿಯವರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ನಾಚಿಕೆಯಾಗಬೇಕು. ನಾವು ಅಣ್ಣ ತಮ್ಮಾ ಜಗಳ ಮಾಡ್ತೇವೆ ಅನ್ನೊದು ಬಿಜೆಪಿಯವರ ಭ್ರಮೆ. ಆದರೆ ಎಂಟನೇ ತಾರಿಖಿಗೆ ಬಜೆಟ್ ಮಾಡೇ ಮಾಡ್ತೇವೆ.ಈ ಬಾರಿ ಬಜೆಟ್ ರೈತರ ಪರ ಆಗಿರಲಿದೆ ಎಂದು ಹೇಳಿದರು

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಮೈತ್ರಿ ಮಾಡ್ತೇವೆ ಅಂದ್ರೆ ಸಂತೋಷ, ಇಲ್ಲಾಂದ್ರೆ ಮುಂದೆನಾಗುತ್ತೊ ನೋಡೊಣ. ಬರೆದಿಟ್ಟುಕೊಳ್ಳಿ ಈ ಸರ್ಕಾರ ಐದು ವರ್ಷ ಖಂಡಿತಾ ಇರುತ್ತೆ.ಯಡಿಯೂರಪ್ಪರಿಂದ ಸರ್ಕಾರ ಕೆಡವೊಕೆ ಆಗಲ್ಲ ಅಂತಾ ಸುಮ್ಮನ್ನಿದ್ದಾರೆ.ಹೀಗಾಗಿ ಆರ್ ಅಶೋಕ್‌ರನ್ನ ಸರ್ಕಾರ ಕೆಡವೊಕೆ ಮುಂದೆ ಮಾಡಿದ್ದಾರೆ.ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಬೇಕು.
ಬಡವರ ಮಕ್ಕಳು ಇಂಗ್ಲಿಷ್ ಓದಬೇಕು, ಶ್ರೀಮಂತರ ಮಕ್ಕಳು ಮಾತ್ರ ಇಂಗ್ಲಿಷ್ ಕಲಿಬೇಕಾ? ಎಂದು ಖಡಕ್ ಆಗಿ ನುಡಿದರು.

ನಾನು ಅಪ್ಪಟ್ಟ ಶಿವನ ಭಕ್ತ, ಜೊತೆಗೆ ಇಂದು ಸೋಮುವಾರ‌ ನಿಮ್ಮಿತ್ತ ಟೆಂಪಲ್ ರನ್ ಮಾಡಿದಿನಿ. ಸೋಮುವಾರ ದೇವರಿಗೆ ಕೈ ಮುಗಿಬಾರದಂತಾ ಏನಾದರು ಇದೆಯಾ? ರಾಜ್ಯದ ಜನತೆಗೆ ಹಾಗೂ ಬರದಿಂದ ತತ್ತರಿಸಿರುವ ರೈತರಿಗೆ ಒಳ್ಳೆದಾಗಲಿ ಅಂತಾ ಪ್ರಾರ್ಥಿಸಿದಿನಿ. ಯಾರೇ ಏನೇ ಮಾಡಲಿ ಸರ್ಕಾರಕ್ಕೆನು ಆಗಲ್ಲ ಕಣ್ರಿ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ರಾಜಕೀಯ

ಕರ್ನಾಟಕದಲ್ಲಿ ಬಿಜೆಪಿಯಿಂದ ಜನತಂತ್ರ ಬುಡಮೇಲು ಕೃತ್ಯ

Published

on

  • ರ್ನಾಟಕದಲ್ಲಿ ಜನತಾಂತ್ರಿಕ ನಿಯಮಗಳನ್ನು ಬಿಜೆಪಿ ಬುಡಮೇಲು ಮಾಡುತ್ತಿರುವುದು ಮೋದಿ ಸರಕಾರದಡಿ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ವ್ಯಾಪಕ ದಾಳಿಯ ಭಾಗವಾಗಿದೆ. ಪ್ರಜಾಪ್ರಭುತ್ವ ಮತ್ತು ಜನತಾಂತ್ರಿಕ ಸಂಸ್ಥೆಗಳನ್ನು ರಕ್ಷಿಸುವುದು, ಚುನಾವಣೆ ಸುಧಾರಣೆಗಳು ಮತ್ತು ಪಕ್ಷಾಂತರಿ ಹಾಗೂ ಭ್ರಷ್ಟ ಜನಪ್ರತಿನಿಧಿಗಳಿಗೆ ಶಿಕ್ಷೆ ನೀಡುವುದು ಮುಂದಿನ ದಿನಗಳಲ್ಲಿ ದೇಶದ ಜನತಾಂತ್ರಿಕ ಶಕ್ತಿಗಳ ಕಾರ್ಯಸೂಚಿಯ ಆದ್ಯತೆಯಾಗಬೇಕು.

ಕಾಂಗ್ರೆಸ್, ಜನತಾ ದಳ (ಎಸ್)ದ 12ಮತ್ತು ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತಿದ್ದ ಇಬ್ಬರು ಪಕ್ಷೇತರ ಶಾಸಕರು- ಹೀಗೆ ಒಟ್ಟು 14 ಶಾಸಕರು ರಾಜಿನಾಮೆ ನೀಡುವುದರೊಂದಿಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಚರಮ ಸ್ಥಿತಿಯನ್ನು ತಲುಪಿವೆ. ಕುಮಾರಸ್ವಾಮಿ ಸರಕಾರವನ್ನು ಉರುಳಿಸಲು ಕಳೆದ ಒಂದು ವರ್ಷದಿಂದ ಬಿಜೆಪಿ ಹಲವು ಬಾರಿ ನಡೆಸಿದ ಪ್ರಯತ್ನಗಳ ನಂತರ ಈ ಬೆಳವಣಿಗೆ ನಡೆದಿದೆ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ತಾನು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತದಿಂದ ತನಗೆ ಸರಕಾರ ನಡೆಸಲಾಗದು ಎಂಬ ವಾಸ್ತವವನ್ನು ಜೀರ್ಣಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಆಳುವ ಮೈತ್ರಿಕೂಟದ ಶಾಸಕರಿಗೆ ಆಮಿಷ ಒಡ್ಡಲು ಹಾಗೂ ಲಂಚ ನೀಡಲು ಬಿಜೆಪಿ ಯಾವುದೇ ಹಿಂಜರಿಕೆ ತೋರಿಲ್ಲ. ಕೆಲವು ವರ್ಷಗಳ ಹಿಂದೆ ತಾನು ಚಾಲ್ತಿಗೆ ತಂದ ಆಪರೇಷನ್ ಕಮಲಕ್ಕೆ ಅದು ಮುಂದಾಗಿದೆ.

ಚುನಾಯಿತ ಪ್ರತಿನಿಧಿಗಳಿಗೆ ಲಂಚ ನೀಡಿ ಹಾಗೂ ಸ್ಥಾನಮಾನದ ಆಮಿಷಗಳನ್ನೊಡ್ಡುವುದು ಹಾಗೂ ಚುನಾಯಿತ ಸರಕಾರವನ್ನು ಬುಡಮೇಲು ಮಾಡಲು ಅಪಾರ ಪ್ರಮಾಣದ ಸಂಪನ್ಮೂಲವನ್ನು ಬಳಕೆ ಮಾಡುವುದು ಬಿಜೆಪಿಯ ಚಾಳಿಯಾಗಿ ಬಿಟ್ಟಿದೆ. ಇದಕ್ಕೂ ಮೊದಲು ಅರುಣಾಚಲ ಪ್ರದೇಶ ಮತ್ತು ಗೋವಾದಲ್ಲಿ ಸರಕಾರಗಳನ್ನು ರಚಿಸಲಿಕ್ಕಾಗಿ ಅದು ಪಕ್ಷಾಂತರಗಳನ್ನು ನಡೆಸಿತ್ತು. ಇಂಥ ಕೀಳು ಮಟ್ಟದ ತಂತ್ರಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಲಿನಗೊಳಿಸಲು ಮೋದಿ-ಷಾ ಜೋಡಿ ನೇರವಾಗಿ ಹೊಣೆಗಾರನಾಗಿದೆ.
ರಚನೆಯಾದಂದಿನಿಂದ ಯಾವುದೇ ತಾಳಮೇಳವಿಲ್ಲದ ಅಥವಾ ದಿಕ್ಕುದೆಸೆಯಿಲ್ಲದಂತೆ ವರ್ತಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ರಚಿಸಿದ ಅಸ್ಥಿರ ಸರಕಾರದ ಸನ್ನಿವೇಶವನ್ನು ಬಳಸಿಕೊಂಡು ಇಂಥ ಪಕ್ಷಾಂತರಗಳನ್ನು ಸಂಘಟಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾಂಗ್ರೆಸ್ ನಾಯಕರ ಕಚ್ಚಾಟ ಮತ್ತು ಅದರ ಕೆಲವು ಅಧಿಕಾರದಾಹಿ ಶಾಸಕರ ಕುತಂತ್ರಗಳು ಕೂಡ ಪ್ರಸ್ತುತ ಸನ್ನಿವೇಶಕ್ಕೆ ಕೊಡುಗೆ ನೀಡಿವೆ.

ಕರ್ನಾಟಕದ ರಾಜಕೀಯದಲ್ಲಿನ ಈ ಅವನತಿಯು ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಕಾಡುತ್ತಿರುವ ಇನ್ನೂ ಆಳವಾದ ರೋಗದ ಸೂಚನೆಯಾಗಿದೆ. ದೊಡ್ಡ ಹಣಕಾಸು ಮತ್ತು ನವ ಉದಾರವಾದಿ ಬಂಡವಾಳದ ಆಕ್ರಮಣವು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪಕ್ಷ ವ್ಯವಸ್ಥೆಯ ಸಾರವನ್ನೇ ನಾಶಮಾಡಿದೆ. ಆಯ್ಕೆಯಾಗುತ್ತಿರುವ ಹೆಚ್ಚೆಚ್ಚು ಶಾಸಕರು ರಿಯಲ್ ಎಸ್ಟೇಟ್, ಸಾರಾಯಿ ದಂಧೆ, ಕಂಟ್ರಾಕ್ಟ್ ಇತ್ಯಾದಿ ವ್ಯಾಪಾರಿ ಹಿತಾಸಕ್ತಿ ಹೊಂದಿರುವವರಾಗಿದ್ದಾರೆ ಅಥವಾ ಗ್ರಾಮೀಣ ಸಮಾಜದ ಶ್ರೀಮಂತ ವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ಶಕ್ತಿಗಳಿಗೆ ಬಂಡವಾಳಶಾಹಿ ಪಕ್ಷಗಳ ಟಿಕೆಟ್ ಸಿಗುತ್ತದೆ. ಈ ಜನರಲ್ಲಿ ಯಾವುದೇ ತತ್ವ ಸಿದ್ಧಾಂತದ ಲವಲೇಷವೂ ಇರುವುದಿಲ್ಲ.

ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆದಂತೆ ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಶಾಸಕರು ಮತ್ತು ಸಂಸತ್ ಸದಸ್ಯರು ಬಿಜೆಪಿಗೆ ಸೇರಿದ್ದನ್ನು ನಾವು ನೋಡಿದ್ದೇವೆ. ಪಕ್ಷಾಂತರ ಮಾಡಿದ ತೆಲುಗುದೇಶಂನ ಎಲ್ಲಾ ನಾಲ್ವರು ರಾಜ್ಯಸಭೆ ಎಂಪಿಗಳು ವ್ಯಾಪಾರೋದ್ಯಮಿಗಳು ಎನ್ನುವುದು ಗಮನಾರ್ಹ.

ಬಿಜೆಪಿ ರಾಜಕೀಯದಲ್ಲಿ ವ್ಯಾಪಾರವನ್ನು ಬೆರೆಸುವ ಈ ವಿದ್ಯಮಾನದ ಉತ್ತುಂಗವನ್ನು ಪ್ರತಿನಿಧಿಸುತ್ತದೆ. ಈ ಪಕ್ಷ ಕಾರ್ಪೊರೇಟ್‌ಗಳಿಂದ ಹೆಚ್ಚು ಅನುಕೂಲ ಪಡೆದ ಪಕ್ಷವಾಗಿದ್ದು ತನ್ನ ರಾಜಕೀಯ ಕುತಂತ್ರದಾಟಗಳಿಗೆ ಈ ಹಣವನ್ನು ಬಳಸಿಕೊಳ್ಳುತ್ತಿದೆ. ಪಕ್ಷಾಂತರ ಮಾಡಿದ ಶಾಸಕರನ್ನು ಉದ್ಯಮಿ ಹಾಗೂ ಬಿಜೆಪಿ ನಾಯಕನಾಗಿರುವ ರಾಜ್ಯಸಭೆಯ ಸದಸ್ಯರೊಬ್ಬರ ಮಾಲಿಕತ್ವದ ಖಾಸಗಿ ಜೆಟ್ ಕಂಪೆನಿಯ ವಿಮಾನದಲ್ಲಿ ಮುಂಬಯಿಯ ಒಂದು ಪಂಚತಾರಾ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದು ಅಚ್ಚರಿಯ ಸಂಗತಿಯೇನೂ ಅಲ್ಲ.

ಕರ್ನಾಟಕದಲ್ಲಿ ಜನತಾಂತ್ರಿಕ ನಿಯಮಗಳನ್ನು ಬಿಜೆಪಿ ಬುಡಮೇಲು ಮಾಡುತ್ತಿರುವುದು ಮೋದಿ ಸರಕಾರದಡಿ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ವ್ಯಾಪಕ ದಾಳಿಯ ಭಾಗವಾಗಿದೆ. ಪ್ರಜಾಪ್ರಭುತ್ವ ಮತ್ತು ಜನತಾಂತ್ರಿಕ ಸಂಸ್ಥೆಗಳನ್ನು ರಕ್ಷಿಸುವುದು, ಚುನಾವಣೆ ಸುಧಾರಣೆಗಳು ಮತ್ತು ಪಕ್ಷಾಂತರಿ ಹಾಗೂ ಭ್ರಷ್ಟ ಜನಪ್ರತಿನಿಧಿಗಳಿಗೆ ಶಿಕ್ಷೆ ನೀಡುವುದು ಮುಂದಿನ ದಿನಗಳಲ್ಲಿ ದೇಶದ ಜನತಾಂತ್ರಿಕ ಶಕ್ತಿಗಳ ಕಾರ್ಯಸೂಚಿಯ ಆದ್ಯತೆಯಾಗಬೇಕು.

ಪ್ರಕಾಶ್ ಕಾರಟ್
ಅನು: ವಿಶ್ವ

ಕೃಪೆ : ಜನಶಕ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ವಿಶ್ವಾಸ ಮತ ಸಾಬೀತು ಪಡಿಸ್ತೇವೆ, ಹೇಗೆ ಅಂತ ಕಾದು ನೋಡಿ : ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್

Published

on

ಸುದ್ದಿದಿನ, ಬೆಂಗಳೂರು : ಶಾಸಕರ ಅನರ್ಹತೆಯ ಬಗ್ಗೆ ಸಭಾಧ್ಯಕ್ಷರು ನಿರ್ಣಯ ಕೈಗೊಳ್ಳುತ್ತಾರೆ. ಎರಡು ಪಕ್ಷಗಳ ನಾಯಕರು ಚರ್ಚಿಸಿ ವಿಶ್ವಾಸ ಮತ ಯಾಚನೆಯ ನಿರ್ಧಾರಕ್ಕೆ ಬಂದಿದ್ದೇವೆ, ಅದರಲ್ಲಿ ಯಶಸ್ವಿ ಕೂಡ ಆಗುತ್ತೇವೆ. ನಾವೇನು ಬಿಜೆಪಿಯವರಂತೆ ಅಪರೇಷನ್, ಸರ್ಜರಿ ಇಂತಹ ಹೀನ ರಾಜಕಾರಣ ಮಾಡುವವರಲ್ಲ. ವಿಶ್ವಾಸ ಮತ ಸಾಬೀತು ಹೇಗೆ ಮಾಡುತ್ತೇವೆ ಎಂದು ಕಾದು ನೋಡಿ ಅಷ್ಟೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾರೆ ಅಂತ ಎಂಟಿಬಿ ನಾಗರಾಜ್ ಹೇಳ್ತಿದ್ರು. ಅವ್ರೇ ರಾಜೀನಾಮೆ ಕೊಟ್ಟಿದ್ದಾರೆ, ಈಗ ನಾನು ಅವರ ಎದೆ ಬಗೆದು ನೋಡೋಕೆ ಆಗುತ್ತದೆಯೇ?
ರಾಜಕಾರಣ ಇರೋದು ಜನ ಸೇವೆ ಮಾಡಲು ಎಂಬುದನ್ನೇ ಕೆಲವರು ಮರೆತಿದ್ದಾರೆ. ಅಂಥವರಿಗೆ ಕಾಲವೇ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.

ರೋಷನ್ ಬೇಗ್ ಅವರನ್ನು ಅಮಾನತ್ತು ಮಾಡಲಾಗಿದೆ. ರಾಮಲಿಂಗಾರೆಡ್ಡಿ ಅವರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಅತೃಪ್ತ ಶಾಸಕರನ್ನ ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ ಸಹ ಮಾಡಿದ್ದೇವೆ. ಸಿದ್ದಾಂತವಿಲ್ಲದ ಜೊಳ್ಳುಗಳೆಲ್ಲ ಹಾರಿ ಹೋಗಿದ್ದು, ನಮ್ಮ ಪಕ್ಷ ಹಿಂದಿಗಿಂತ ಈಗ ಮತ್ತಷ್ಟು ಸದೃಢವಾಗಿದೆ ಎಂಬ ಖುಷಿಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ಕುಮಾರ ಗರ್ವಪರ್ವ ಸಮಾಪ್ತಿಯಾಗುತಿದೆ

Published

on

ಮಂಡ್ಯ ದಳಪತಿ ಕುಮಾರನ ಗರ್ವಪರ್ವ ಇನ್ಮೇನು ಅಂತ್ಯ ಕಾಣ್ತಾ ಬರ್ತಿದೆ. ಇನ್ಮೇಲೆ ಉತ್ತರಕುಮಾರನ ಪೌರುಷ ಅವರೂರ ಅಕ್ಕಪಕ್ಕದ ಮಂದಿ ಮುಂದೆ ಅಷ್ಟೆ.

ಪಾಪ ಆ ಕಾಂಗೈಗರದೋ ತ್ರಿಶಂಕು ಸ್ಥಿತಿ. ಆಚೀಚೆ ಕಡೆಯಿಂದ ವಲಸೆ ಬಂದ ಅನೇಕ ಹೊಲಸಿಗರೆಲ್ಲಾ ಸೇರಿ ಕೊಳಚೆ ಗುಂಡಿ ಮಾಡಿ ಬಿಟ್ಟರು. ಕೈ ಪಕ್ಷ ಕಟ್ಟಿದ ಅತ್ಯಂತ ನಿಷ್ವಾವಂತ ಹಿರಿಯರನ್ನೆಲ್ಲಾ ಮೂಲೆಗೆ ಕೂರಿಸುವ ಕೆಲಸ ಮಾಡಿ ಮುಗಿಸಿದ್ದಾರೆ. ಅಧ್ಯಕ್ಷ ಆಗಲಿಕ್ಕೆ ನಾನೊಲ್ಲೆ ನಾನೊಲ್ಲೆ ಅಂತ ಕೊಟ್ಟ ಕುರೆಯನೇರಲಾರದೆ ಕೈಕೊಟ್ಟು ಅತ್ತಿಂದಿತ್ತ ಓಟ ಕೀಳ್ತಿದಾರೆ.

ಇವತ್ತು ರಾತ್ರಿನೊ, ನಾಳೆ ಬೆಳಗ್ಗೆನೊ ಜೆಪಿಯವರ ಅಜ್ಞಾತವಾಸ ಮುಗಿಯುವ ಲಕ್ಷಣಗಳು ಕಾಣಿಸುತ್ತಿವೆ. ಅವರಾಗಲೆ ಕೇಸರಿ ಬಾವುಟ ಬಿದಿರು ಗಳಕ್ಕೇರಿಸಿಕೊಂಡು ವಿಜಯೋತ್ಸವ ಆಚರಿಸಲು ಅಣಿ ಮಾಡಿಕೊತಿದ್ದಾರೆ.‌ಇನ್ಮೇಲಾದ್ರೂ ಮೋದಿ ಪಡೆಯ ಈ ಬಿಜಿಯಪ್ಪಗಳು ಒಂದೈದು ವರ್ಷನದ್ರೂ ಹಗರಣಗಳ ಖೆಡ್ಡಕೆ ಸಿಲುಕಿ ಹೈರಾಣಾಗದಿದ್ದರೆ ಒಳ್ಳೆಯದು.

ಕನ್ನಡನಾಡ ಜನ ಸೋತು ಹೋಗಿದ್ದಾರೆ ಕಣ್ರಪ್ಪಾ ಖಾದಿ ಅಣ್ಣೈಗಳಾ; ನಿಮ್ಗೆಲ್ಲಾ ಓಟು ಹಾಕಿಹಾಕಿ ಅಧಿಕಾರ ಮಾಡಲಿಕ್ಕೆ ಮೇಲಕ್ಕೆ ನೂಕಿನೂಕಿ. ನಿಮ್ಮೆಲ್ಲರ ಲಜ್ಜೆಗೇಡುತನ ನೋಡ್ನೋಡಿ ಸುಸ್ತು ಆಗಿದಾರೆ ಕಣ್ರೊ ಅಣ್ಣಂದಿರಾ.

ಹೆಂಗೂ ಮೇಲೆ ಕೇಂದ್ರದಲ್ಲಿ ಕಮಲ ಬಂದು ಭದ್ರವಾಗಿ ಕೂತಿದೆ. ಇಲ್ಲೂ ಅದೇ ಅರಳಲಿ ಬಿಡ್ರೆಪಾ. ಹಿಂದಿನಿಂದಲೂ ಅಲ್ಲಿ ಅದಿದ್ದರೆ, ಇಲ್ಲಿ ಇನ್ನೊಂದು ಪಕ್ಷ ಅಧಿಕಾಕ್ಕೆ ಬಂದೂಬಂದೂ ಸರಿಯಾದ ಏಳ್ಗೆಯಾಗ್ತಿಲ್ಲ ನಮ್ಮ ಈ ಕನ್ನಡನಾಡು !

ಜನಕ್ಕೆ ಏನಾದ್ರೂ ಒಳ್ಳೇದ ಮಾಡಿ ಸಾಯ್ರಿ. ನಮ್ಮ ಕನ್ನಡ ಜನಗಳ್ನ ಸಾಯಿಸಬೇಡ್ರಿ ಕಣ್ರೋ ಖಾದೆಪ್ಪಗಳಾ ! ನಿಮ್ಮೀ ದಡ್ಡಾಟ ನೋಡೇ ಆ ಮೋಡ ಮಳೆ ಸುರಿಸ್ತಿಲ್ಲ ಅನ್ನಿಸುತ್ತದೆ ನೋಡಿ.

ಶಿವಕುಮಾರಸ್ವಾಮಿ ಕುರ್ಕಿ
ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending