Connect with us

ರಾಜಕೀಯ

ಇದು ರಾಜ್ಯ ರಾಜಕಾರಣದ ಸ್ಫೋಟಕ ಸ್ಟೋರಿ ; ಜಾರಕಿಹೊಳಿ ಬ್ರದರ್ಸ್​ 6 ಬೇಡಿಕೆ ಸಿಎಂ ಅಸ್ತು : ಬಿಜೆಪಿ ಕನಸು ಭಗ್ನ

Published

on

ಸುದ್ದಿದಿನ ಡೆಸ್ಕ್ : ಜಾರಕಿಹೊಳಿ ಬ್ರದರ್ಸ್​ -ಸಿಎಂ ಹೆಚ್​ಡಿಕೆ ನಡುವೆ ನಡೆದ ಮಾತುಕತೆ ಏನು? ಜಾರಕಿಹೊಳಿ ಬ್ರದರ್ಸ್​ ಕೇಳಿದ್ದೇನು? ಸಿಎಂ ಹೆಚ್​ಡಿಕೆ ಹೇಳಿದ್ದೇನು? ಆ ಒಂದು ಗಂಟೆಯ ಮಾತುಕತೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು..? ಬಿಟಿವಿಯಲ್ಲಿ ಜಾರಕಿಹೊಳಿ ಬ್ರದರ್ಸ್​-ಸಿಎಂ ಭೇಟಿಯ ಎಕ್ಸ್​ಕ್ಲೂಸಿವ್​ ಡೀಟೇಲ್ಸ್​-

ಆ ಒಂದು ಗಂಟೆಯಲ್ಲಿ ಆಗಿದ್ದೇನು..?

ಇದು ರಾಜ್ಯ ರಾಜಕಾರಣದ ಸ್ಫೋಟಕ ಸ್ಟೋರಿ-
ಬಂಡಾಯ ಶಮನಕ್ಕೆ ಎಂಟ್ರಿಯಾದ ಸಿಎಂ ಹೆಚ್​ಡಿ ಕುಮಾರಸ್ವಾಮಿ ಜಾರಕಿಹೊಳಿ ಬ್ರದರ್ಸ್​ ಜತೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ತಾಜ್​​ವೆಸ್ಟೆಂಡ್​ನಲ್ಲಿ ಒಂದು ಗಂಟೆ ಕಾಲ ನಡೆದ ಮಾತುಕತೆ ಫಲಪ್ರದವಾಗಿದ್ದು, ಸಿಎಂ ಭೇಟಿ ವೇಳೆ ರಮೇಶ್​ ಜಾರಕಿಹೊಳಿ,ಸತೀಶ್ ಜಾರಕಿಹೊಳಿ, ನಾಗೇಂದ್ರ ಮತ್ತು ಹೆಚ್​ಡಿ ರೇವಣ್ಣ ಹಾಜರಿದ್ದರು. ನಾವು ರಾಹುಲ್​​ ಗಾಂಧಿ ಬಳಿಗೆ ಹೋಗಲ್ಲ ನೀವೇ ಬಗೆಹರಿಸಿ ಎಂದರು ಜಾರಕಿಹೊಳಿ. ಜಾರಕಿಹೊಳಿಯ 6 ಪ್ರಮುಖ ಬೇಡಿಕೆಗಳಿಗೂ ಒಪ್ಪಿಗೆ ನೀಡಿದ ಸಿಎಂ ಕುಮಾರಸ್ವಾಮಿ ಅವರು ಸತೀಶ್​ ಜಾರಕಿಹೊಳಿ ಹಾಗೂ ನಾಗೇಂದ್ರಗೆ ಸಚಿವ ಪಟ್ಟ ನೀಡಲು ಸಿಎಂ ಒಪ್ಪಿಗೆ ನೀಡಿದ್ದು, ರಮೇಶ್​ ಜಾರಕಿಹೊಳಿಯ ಖಾತೆ ಬದಲಾವಣೆಗೆ ಓಕೆ ಎಂದಿದ್ದಾರೆ. ಬೆಳಗಾವಿ ಜಿಲ್ಲೆ ಸದ್ಯಕ್ಕೆ ವಿಭಜನೆ ಇಲ್ಲ, ಬೆಳಗಾವಿ ರಾಜಕಾರಣದಲ್ಲಿ ಯಾರ ಹಸ್ತಕ್ಷೇಪವೂ ಇರಲ್ಲ ಎಂದು ಎಲ್ಲಾ ಬೇಡಿಕೆಗಳಿಗೂ ಸಮ್ಮತಿ ನೀಡಿದ್ದಾರೆ ಸಿಎಂ ಕುಮಾರಸ್ವಾಮಿ.

ಜಾರಕಿಹೊಳಿ ಬ್ರದರ್ಸ್​ 6 ಬೇಡಿಕೆ ಸಿಎಂ ಅಸ್ತು

ಬಿಜೆಪಿ ನಾಯಕರ ಆಪರೇಷನ್​​ ಕಮಲ ಠುಸ್​ ಆಗಿದೆ. ಸಿಎಂ ಜತೆ ಜಾರಕಿಹೊಳಿ ಬ್ರದರ್ಸ್​ ಮಾತುಕತೆ ಯಶಸ್ವಿಯದನಂತರ, ಜಾರಕಿಹೊಳಿ ಸಹೋದರರ ಎಲ್ಲಾ ಬೇಡಿಕೆಗಳಿಗೂ ಸಮ್ಮತಿಸಿದ್ದಾರೆ ಸಿಎಂ ಹೆಚ್​ಡಿಕೆ.
ಬಿಜೆಪಿ ನಾಯಕರ ಎಲ್ಲಾ ಪ್ಲಾನ್​​ಗಳನ್ನು ಉಲ್ಟಾ ಮಾಡಿದ ಸಿಎಂ ಕುಮಾರಸ್ವಾಮಿ.
ತಾಜ್​ವೆಸ್ಟೆಂಡ್​ನಲ್ಲಿ ರಮೇಶ್​ ಜಾರಕಿಹೊಳಿ ಭೇಟಿಗೆ ಸಜ್ಜಾಗಿದ್ದ ಬಿಜೆಪಿ ನಾಯಕರು
ಆಪರೇಷನ್​​ ಕಮಲಕ್ಕೆ ಅಂತಿಮ ತಯಾರಿ ಮಾಡಿಕೊಂಡಿದ್ದರು‌‌. ರಾಜನಾಥ್​ ಸಿಂಗ್​ ಬೆಂಗಳೂರಿಗೆ ಎಂಟ್ರಿ ಕೊಡ್ತಿದ್ದಂತೆ ಮಾತುಕತೆಗೆ ಸಿದ್ದವಾಗಿತ್ತು ವೇದಿಕೆ. ಅಷ್ಟರಲ್ಲೇ ತಾಜ್​​ ವೆಸ್ಟ್​ ಎಂಡ್​ಗೆ ಎಂಟ್ರಿ ಕೊಟ್ಟು ಬಿಜೆಪಿ ಕನಸು ಭಗ್ನ ಮಾಡಿದ ಸಿಎಂ. ಯಾವುದೇ ಕಾರಣಕ್ಕೂ ನಾವು ಬಿಜೆಪಿ ಜತೆ ಹೋಗಲ್ಲ ಎಂದರು ಜಾರಕಿಹೊಳಿ ಬ್ರದರ್ಸ್​.

ಬಿಜೆಪಿ ಪ್ಲಾನ್​ ಛಿದ್ರ ಮಾಡಿದ ಹೆಚ್​ಡಿಕೆ

ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್​
ಮುಂದುವರೆಯುತ್ತಲೇ ಇದೆ ಜಾರಕಿಹೊಳಿ ಬ್ರದರ್ಸ್​-ಸಿಎಂ ಮಾತುಕತೆ. ತಾಜ್​​ ವೆಸ್ಟ್​ಎಂಡ್​ನಲ್ಲಿ ನಡೆಯುತ್ತಿರುವ ಸುದೀರ್ಘ ಮಾತುಕತೆ-
ಜಾರಕಿಹೊಳಿ ಬ್ರದರ್ಸ್​ ಗೆ ಕೊನೆಗುಯ ಸಮಾಧಾನ ಪಡಿಸಿದ್ಸಾರೆ ಸಿಎಂ ಹೆಚ್​ಡಿಕೆ.

ಇಂದು ಮಧ್ಯಾಹ್ನ ಜಾರಕಿಹೊಳಿ ಸೋದರರ ಭೇಟಿಯಾಗಲಿರುವ ಸಿದ್ದರಾಮಯ್ಯನವರು,
ಜಾರಕಿಹೊಳಿ ಭೇಟಿ ನಂತರ ಸಂಜೆ ದೆಹಲಿಗೆ ತೆರಳಲಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಭೇಟಿ ಮಾಡಲಿರುವ ಸಿದ್ದು. ಈಗಾಗಲೇ ದೆಹಲಿಯತ್ತ ಹೊರಟಿದ್ದಾರೆ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​​. ಸಿಎಂ ಜತೆಗಿನ ಮಾತುಕತೆ ಫಲಪ್ರದ ಹಿನ್ನೆಲೆಯಲ್ಲಿ ಜಾರಕಿಹೊಳಿ ಬ್ರದರ್ಸ್​ ದೆಹಲಿ ಪ್ರಯಾಣ ರದ್ದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ರಾಜಕೀಯ

ಲಿಂಗಾಯತ ಧರ್ಮ ವಿಚಾರ ನನ್ನ ಆತ್ಮಸಾಕ್ಷಿಗೆ ತಕ್ಕ ಹೇಳಿಕೆ ನೀಡಿದ್ದೇನೆ : ಡಿ.ಕೆ.ಶಿ ಸ್ಪಷ್ಟನೆ

Published

on

ಸುದ್ದಿದಿನ,ಕೋಲಾರ : ನಾನು ಲೀಡರೇ ಅಲ್ಲ. ನಾನು ಲೀಡರ್ ಎಂದು ಎಲ್ಲೂ ಹೇಳಿಕೊಂಡಿಲ್ಲ, ಯಾರನ್ನು ಗೆಲ್ಲಿಸುತ್ತೇನೆ ಎಂದು ಎಲ್ಲೂ ಹೇಳಿಕೊಂಡಿಲ್ಲ. ಲಿಂಗಾಯತ ಧರ್ಮ ‌ವಿಚಾರ ನಾನು ನನ್ನ ಆತ್ಮಸಾಕ್ಷಿಗೆ ತಕ್ಕ ಹೇಳಿಕೆ ನೀಡಿದ್ದೇನೆ, ಆ ಹೇಳಿಕೆಗೆ ನಾನು ಬದ್ದನಾಗಿದ್ದೇನೆ ಎಂದು ಕೋಲಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ನಾವು ರಾಜಕಾರಣಿಗಳು ಧಾರ್ಮಿಕ ವಿಚಾರದಲ್ಲಿ ಭಾಗಿಯಾಗಿದ್ದ ತಪ್ಪು. ಬಳ್ಳಾರಿಯಲ್ಲೂ‌ ನಾನು ಗೆಲ್ಲಿಸಿಕೊಳ್ತೇನೆ ಅಂತ ಹೇಳಿಕೊಂಡಿಲ್ಲ.ನನ್ನ ಹೇಳಿಕೆ ಹಿಂದೆ ಯಾರನ್ನೂ‌ ಮುಗಿಸುವ ಉದ್ದೇಶ ಇಲ್ಲ, ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಕೋಲಾರ ಹೊರವಲಯದಲ್ಲಿರುವ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸ್ಪಷ್ಟನೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ರಾಜಕೀಯ

ಮಾಜಿ ಪ್ರಧಾನಿ ದೇವೇಗೌಡರ ಈ ಪೋಟೋ ಸಖತ್ ವೈರಲ್ ಆಗಿರುವ ಹಿನ್ನೆಲೆ ಏನು ಗೊತ್ತಾ..?

Published

on

ಸುದ್ದಿದಿನ,ಮಂಡ್ಯ: ಲೋಕಸಭಾ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಲ್‍ಆರ್ ಶಿವರಾಮೇಗೌಡಗೆ ಮುಳುವಾಗುತ್ತಾ 25 ವರ್ಷ ಹಿಂದಿನ ಕೇಸ್ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ.

25 ವರ್ಷಗಳ ಹಿಂದೆ ಕಂಚನಹಳ್ಳಿ ವಕೀಲ ಗಂಗಾಧರ ಮೂರ್ತಿ, ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿರುತ್ತಾರೆ. ಆ ವೇಳೆ ಅವರು ಶಿವರಾಮೇಗೌಡರು ನಡೆಸುತ್ತಿದ್ದ ಎಂದು ಹೇಳಲಾಗುವ ಅಕ್ರಮಗಳ ಬಗೆಗೆ ಸತತವಾಗಿ ಬರೆಯಲಾರಂಭಿಸಿದ್ದರು. ಒಂದು ದಿನ ಅವರ ಕೊಲೆ ನಡೆದು ಹೋಯ್ತು. ಈ ಕೊಲೆ ಹಿಂದೆ ಶಿವರಾಮೇಗೌಡ ಅವರ ಕೈವಾಡ ಇದೆ ಎಂದು ಆರೋಪಿಸಿ ಸುದ್ದಿ ಹರಡಿತ್ತು. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ನಾಗಮಂಗಲದಲ್ಲಿ ಪ್ರಗತಿಪರರಿಂದ ದೊಡ್ಡ ಪ್ರತಿಭಟನೆ ನಡೆದಿತ್ತು.

ಅಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪತ್ರಕರ್ತನ ಫೋಟೋ ಹಿಡಿದು ಪ್ರತಿಭಟನೆ ಮಾಡಿದ್ದರು. ನಂತರ ಸಭೆಯಲ್ಲೂ ಪಾಲ್ಗೊಂಡು ಶಿವರಾಮೇಗೌಡರ ವಿರುದ್ಧ ಗುಡುಗಿದ್ದರು. ಆದರೆ ಇಂದು ಅವರಿಗೇ ಟಿಕೆಟ್ ನೀಡಲಾಗಿದೆ. ಅಂದು ಶಿವರಾಮೇಗೌಡರನ್ನ ಅವನೊಬ್ಬ ಕೇಡಿ, ಅವನಿಗೆ ಬೇಡಿ ಹಾಕಿ ಎಂದಿದ್ದ ಗೌಡರು ಇಂದು ಟಿಕೆಟ್ ನೀಡಿದ್ದಾರೆ.

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ ಎಂದು ಬರೆದು ಟ್ರೋಲ್ ಮಾಡಿ ಚರ್ಚೆ ಮಾಡಲಾಗ್ತಿದೆ. ಅಂದು ದೇವೇಗೌಡರ ಜೊತೆ ಸಿದ್ದರಾಮಯ್ಯ ಅವರೂ ಇದ್ದರು ಅನ್ನೋದು ವಿಶೇಷ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ರಾಜಕೀಯ

ವಿಜಯಪುರ : ಸಂಸದರ ನಿಧಿಗೆ ಕನ್ನ ಹಾಕಿದ ಭೂಪ‌

Published

on

ಸುದ್ದಿದಿನ ಡೆಸ್ಕ್ : ವಿಜಯಪುರ ಲೋಕಸಭೆ ಸದಸ್ಯ ರಮೇಶ ಜಿಗಜಿಣಗಿ ಹೆಸರಿನಲ್ಲಿ ನಕಲಿ ಲೆಟರ್ ಪ್ಯಾಡ್ ತಯಾರಿಸಿ ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಿದ್ದಾನೆ ಭೂಪ.ಶಾಲಾ ಆಡಳಿತ ಮಂಡಳಿಯೊಂದರ ಪದಾಧಿಕಾರಿಯು ಈ ಕೃತ್ಯವನ್ನು ಎಸಗಿದ್ದಾನೆ.

ಈತ ವಿಜಯಪುರ ನಗರದ ಪ್ರತಿಷ್ಠಿತ ಬಂಜಾರಾ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ. ಜಿ. ರಾಠೋಡ. ಇವನ ವಿರುದ್ಧ ಆರೋಪ, ದೂರು ದಾಖಲಾಗಿ್ದೆದೆ. ವಿಜಯಪುರ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿದು ಸ್ವತಃ ಬೆಚ್ಚಿ ಬಿದ್ದಿದ್ದಾರೆ ವಿಜಯಪುರ ಲೋಕಸಭೆ ಸದಸ್ಯ ರಮೇಶ ಜಿಗಜಿಣಗಿ. 2016 ರಿಂದ ಈವರೆಗೆ ಸುಮಾರು 6 ಕಾಮಗಾರಿಗಳನ್ನು ಸಚಿವರ ಲೆಟರ್ ಹಡ್ ನಲ್ಲಿ ಫೋರ್ಜರಿ ಮಾಡಿ ತನ್ನ ಶಿಕ್ಷಣ ಸಮಸ್ಥೆಯಲ್ಲಿ ಕೆಲಸ ಮಾಡಿಸಿಕೊಂಡ ಆರೋಪವೂ ವ್ಯಕ್ತವಾಗಿದೆ ಆರೋಪಿ ಕೆ. ಜಿ. ರಾಠೋಡ ಮೇಲೆ. ಈಗ ಈತ ಪೊಲೀಸರ ವಶದಲ್ಲಿದ್ದು,ತನಿಖೆಯ ನಂತರ ಮತ್ತಷ್ಟು ವಿಷಯ ಬಹಿರಂಗ ನಿರೀಕ್ಷೆ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

Trending