Connect with us
http://www.suddidina.com/category/political-news

ರಾಜಕೀಯ

ಲೋಕಸಭಾ ಚುನಾವಣಾ ವೇಳಾಪಟ್ಟಿ ಘೋಷಣೆ : ಮೇ 23ರಂದು ಫಲಿತಾಂಶ

Published

on

ಸುದ್ದಿದಿನ,ನವದೆಹಲಿ: ಮುಂಬರುವ 17ನೇ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿದೆ. ವಿವಿಧ ಹಂತಗಳಲ್ಲಿ ದೇಶಾದ್ಯಂತ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ಚುನಾವಣಾ ಆಯೋಗವು ಇಂದು ದಿನಾಂಕಗಳನ್ನು ಪ್ರಕಟಿಸಿದೆ. ಏಪ್ರಿಲ್ 11ರಿಂದ 7 ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. 22 ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುನೀಲ್​ ಅರೋರಾ, ದಿನಾಂಕಗಳನ್ನ ಘೋಷಿಸಿ, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಹಾಲಿ ಲೋಕಸಭೆಯ ಅವಧಿ ಜೂನ್ 3ರಂದು ಕೊನೆಗೊಳ್ಳಲಿದೆ.

ಲೋಕಸಭೆ ಚುನಾವಣೆ ಜೊತೆ ಜೊತೆಗೆ ಜಮ್ಮು ಕಾಶ್ಮೀರ, ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿಯೂ ವಿಧಾನಸಭಾ ಚುನಾವಣೆಗಳನ್ನು ಅವಧಿಗೆ ಮುನ್ನ ನಡೆಸುವುದಾಗಿ ಪ್ರಕಟಿಸಿದೆ.

2014ರಲ್ಲಿ 16ನೇ ಲೋಕಸಭೆ ಚುನಾವಣೆ ದಿನಾಂಕ ಮಾರ್ಚ್ 5ರಂದು ಪ್ರಕಟ ಮಾಡಲಾಗಿತ್ತು. ಒಟ್ಟು 9 ಹಂತಗಳಲ್ಲಿ ಏಪ್ರಿಲ್ 7 ರಿಂದ ಮೇ 12ರವರೆಗೆ ಚುನಾವಣೆ ನಡೆಸಲಾಗಿತ್ತು.

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ತಲಾ 14 ಕ್ಷೇತ್ರಗಳಲ್ಲಿ ಚುನಾವಣೆಗಳು ನಡೆಯಲಿವೆ – ಏಪ್ರಿಲ್​ 18 (ಗುರುವಾರ) ಮತ್ತು ಏಪ್ರಿಲ್​ 23 (ಮಂಗಳವಾರ) ಚುನಾವಣಾ ದಿನಾಂಕಗಳು.

ವಿಶ್ವದಲ್ಲಿ ಭಾರತದಲ್ಲಿಯೇ ಅತ್ಯಧಿಕ ಮತದಾನ..!

ಪ್ರಸಕ್ತ 2019ನೇ ಸಾಲಿನಲ್ಲಿ ಇಡೀ ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 50 ರಾಷ್ಟ್ರಗಳಲ್ಲಿ ಸುಮಾರು 200 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಾರೆ ಎನ್ನಲಾಗಿದೆ.

ಭಾರತದಲ್ಲಿ 90 ಕೋಟಿ ಮತದಾರರು, ಇಂಡೋನೇಷ್ಯಾದಲ್ಲಿ 19 ಕೋಟಿ ಮತದಾರರು ಮತ್ತು ನೈಜೀರಿಯಾದಲ್ಲಿ 9 ಕೋಟಿ ಮತದಾರರು ತಮ್ಮ ನಾಯಕರನ್ನು ಚುನಾಯಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ರಾಜಕೀಯ

ಕುಂದಗೋಳ ಉಪಚುನಾವಣೆ : ಶೇ.82.42ರಷ್ಟು ಮತದಾನ

Published

on

ಸುದ್ದಿದಿನ,ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪಚುನಾವಣೆಗೆ ಶಾಂತಿಯುತ ಮತದಾನವಾಗಿದೆ. 81938 ಪುರುಷರು, 74188 ಮಹಿಳೆಯರು, 02 ಇತರ ಮತದಾರರು ಸೇರಿ ಒಟ್ಟು 156128 ಮತದಾರರು ಮತ ಚಲಾಯಿಸಿದ್ದು, ಶೇ. 82.42 ಮತದಾನವಾಗಿದೆ.

ಬೆಳಿಗ್ಗೆ 7 ಗಂಟೆಗೆ ಎಲ್ಲಾ 214 ಮತಗಟ್ಟೆಗಳಲ್ಲೂ ಮತದಾನ ಪ್ರಾರಂಭವಾಯಿತು. ಬೆಳಿಗ್ಗೆ9 ಗಂಟೆವರೆಗೆ ಶೇ.9.59 ಷ್ಟು ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆ ವೇಳೆಗೆ ಶೇ.24.20 ರಷ್ಟು ಮತದಾನ ಆಗಿತ್ತು. ಮಧ್ಯಾಹ್ನ 1ಗಂಟೆ ವೇಳೆಗೆ ಶೇ 44.50 ಮತದಾನ ದಾಖಲಾಗಿತ್ತು.ಮಧ್ಯಾಹ್ನ 3 ಗಂಟೆಗೆ ಶೇ. 59.50ಮತ ಚಲಾವಣೆ ಗೊಂಡಿತು. ಸಂಜೆ 5 ಗಂಟೆವರೆಗೆ ಕ್ಷೇತ್ರದಲ್ಲಿ ಶೇ.72.97 ಮತದಾನವಾಗಿತ್ತು.

ಕಳೆದ 2018 ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳಲ್ಲಿ ಶೇ. 78.67 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 3.75 ರಷ್ಟು ಮತದಾನದಲ್ಲಿ ಹೆಚ್ಚಳವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ಮದ್ಯ ಮಾರಾಟದಲ್ಲಿ ದಾಖಲೆ ಪುಡಿ ಪುಡಿ ಮಾಡಿದ ಮಂಡ್ಯ..!

Published

on

ಸುದ್ದಿದಿನ ಡೆಸ್ಕ್ : ಹೈವೊಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದ ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದ್ದು, ಮದ್ಯ ಮಾರಾಟದಲ್ಲಿ ಮಂಡ್ಯ ದಾಖಲೆ ಬರೆದಿದೆ.

ಮಂಡ್ಯ ಎಲೆಕ್ಷನ್ ನಲ್ಲಿ ಬಾಡೂಟ ಮತ್ತು ಎಣ್ಣೆ ಹೊಳೆ ಹರಿದಿರುವುದು ಲೆಕ್ಕಕ್ಕೆ ಸಿಕ್ಕಿದೆ. ಹಣದ ಜೊತೆಗೆ ಎಣ್ಣೆಯ ಹೊಳೆ ಹರಿದಿರುವುದಕ್ಕೆ ಸಿಕ್ಕಿದೆ ಪಕ್ಕಾ ಮಾಹಿತಿ ದೊರೆತಿದ್ದು, ದಶಕಗಳ ಇತಿಹಾಸದಲ್ಲಿ ದಾಖಲೆ ಮದ್ಯ ಮಾರಾಟವಾಗಿದೆ.
ಫೆಬ್ರವರಿಯಲ್ಲಿ44.61 ಲಕ್ಷ ಲೀಟರ್ ಮದ್ಯ ಮಾರಾಟ, ಹಾಗೂ ಮಾರ್ಚ್‌ ನಲ್ಲಿ44.11 ಲಕ್ಷ ಲೀಟರ್ ಮಾರಾಟವಾಗಿದ್ದು, ಏಪ್ರಿಲ್ ನಲ್ಲಿ 46.36 ಲಕ್ಷ ಲೀಟರ್ ಮದ್ಯ ಮಾರಾಟ ಮಾಡಿ ಇತಿಹಾಸ ಸೃಷ್ಟಿಸಿದೆ.

ಹದಿನಾಲ್ಕು ವರ್ಷದ ಹಿಂದಿನ ದಾಖಲೆ ಬ್ರೇಕ್ ಮಾಡಿರುವ ಮಂಡ್ಯ, ಕಳೆದ ವರ್ಷ ಏಪ್ರಿಲ್ ನಲ್ಲಿ 34 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. ಒಂದೇ ವರ್ಷದಲ್ಲಿ ಅಧಿಕವಾಗಿದೆ ಮದ್ಯ ಮಾರಾಟ ಪ್ರಮಾಣ. ಎಲೆಕ್ಷನ್ ನಲ್ಲಿ ಕಾರ್ಯಕರ್ತರಿಗೆ ಎಣ್ಣೆ ,ಬಿರಿಯಾನಿ ಊಟ ಹಂಚಿರೋದಕ್ಕೆ ಸಾಕ್ಷಿ ಸಿಕ್ಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಂಡ್ಯದಲ್ಲಿ ಹೈ ಅಲರ್ಟ್ : ಮೇ 23 ಕ್ಕೆ ಕರ್ಫ್ಯೂ ಜಾರಿ

Published

on

ಸುದ್ದಿದಿನ, ಮಂಡ್ಯ : ಚುನಾವಣಾ ಫಲಿತಾಂಶದ ದಿನ ಹಾಗೂ ಮಾರನೆಯ ದಿನ ಅಂದರೆ ಮೇ 23 ಮತ್ತು 24ರಂದು ಯಾವುದೇ ಮೆರವಣಿಗೆ ಮಾಡುವುನ್ನು ಮತ್ತು ಪಟಾಕಿ ಸಿಡಿಸುವುದನ್ನು ಕೂಡಾ ತಡೆಯಬೇಕೆಂದು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಮಕ್ಕಳಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆಗಳು ಕೂಡಾ ಇದೆ. ಸಿನಿಮಾ ಥಿಯೇಟರ್, ಮಾಲ್‍ಗಳು ಕ್ಲೋಸ್ ಆಗಲಿವೆ. ಕೆಎಸ್‌ಆರ್‌ಟಿಸಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಕೂಡಾ ಹೆಚ್ಚಿನ ಭದ್ರತೆಗೆ ಒತ್ತು ನೀಡಲಾಗುವುದು.ಚುನಾವಣಾ ಫಲಿತಾಂಶದ ಒಂದು ದಿನ ಮೊದಲೇ ಅಂದರೆ ಮೇ 22 ರಿಂದಲೇ ಮಂಡ್ಯ ಜಿಲ್ಲೆಯಾದ್ಯಂತ ಕರ್ನಾಟಕ ಪೊಲೀಸ್ ಮಾತ್ರವಲ್ಲದೆ ಸಿಆರ್‌ಪಿಎಫ್ ಅವರು ಗಸ್ತು ತಿರುಗಲಿದ್ದಾರೆ ಎಂದು ತಿಳಿದು ಬಂದಿದೆ.

ಮೇ 23ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸೆಕ್ಷನ್ 144 ಕರ್ಫ್ಯೂ ಆದೇಶ ನೀಡಲು  ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಡ್ಯದಲ್ಲಿ ಮೇ 22 ರಿಂದಲೇ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು. ಎರಡು ದಿನಗಳ ಕಾಲ ಮದ್ಯದಂಗಡಿಗಳನ್ನು ತೆರೆಯುವಂತಿಲ್ಲ.ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಬ್ಬರ ಸೃಷ್ಟಿಸಿದ ಮಂಡ್ಯದಲ್ಲಿ ಈಗ ಫಲಿತಾಂಶದ ದಿನ ಮಂಡ್ಯದ ಭದ್ರತೆಯ ಬಗ್ಗೆ ಚುನಾವಣಾ ಆಯೋಗ ಚಿಂತನೆ ನಡೆಸಬೇಕಾಗಿದೆ.

ಮೇ 23 ರಂದು ಮಂಡ್ಯದಲ್ಲಿ ಭದ್ರತೆಗಾಗಿ ಪೋಲಿಸ್ ಮಹಾನಿರ್ದೇಶಕರಿಂದ ಚುನಾವಣಾ ಆಯೋಗ ಮಾಹಿತಿಯನ್ನು ಕೇಳಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹೇಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಚರ್ಚೆ ನಡೆಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಮಂಡ್ಯಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ‌‌. ಒಂದು ದಿನ ಮುಂಚಿತವಾಗಿಯೇ ಭದ್ರತೆಯ ಬಗ್ಗೆ ಕ್ರಮಗಳನ್ನು ಕೈಗೊಳ್ಳಲು ಕೂಡಾ ಸಿದ್ಧತೆ ನಡೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending