Connect with us

ರಾಜಕೀಯ

ಬಳ್ಳಾರಿ ಲೋಕ‌ಸಭಾ ಉಪಚುನಾವಣೆ ಮತ‌‌ ಎಣಿಕೆಗೆ ಕ್ಷಣಗಣನೆ : 144 ಸೆಕ್ಷನ್ ಜಾರಿ

Published

on

ಸುದ್ದಿದಿನ,ಬಳ್ಳಾರಿ : ಜಿಲ್ಲಾಧಿಕಾರಿ ರಾಮ್ ಪ್ರಸಾದ್ – ಎಸ್.ಪಿ. ಅರುಣ್ ರಂಗರಾಜನ್ ಜಂಟಿ ಸುದ್ದಿಗೋಷ್ಠಿ, ಲೋಕಸಭಾ ಉಪ ಚುನಾವಣೆ ಮತದಾನ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕ್ಷೇತ್ರದಾದ್ಯಂತ 61.12ರಷ್ಟು ಮತದಾನವಾಗಿದೆ, ವಿಕಲಚೇನರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು, ಕೌಂಟಿಂಗ್ ಸಿದ್ದತೆ ಮಾಡಿಕೊಳ್ಳಲಾಗಿದೆ, 120 ಟೇಬಲ್ ಗಳಿದ್ದು 8 ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ,
ಪ್ರತಿಯೊಂದು ಟೇಬಲ್ ಗೂ ಅಬ್ಸರ್ವರ್ ಇರುತ್ತಾರೆ, 8 ಗಂಟೆಯಿಂದ ಮತ ಎಣಿಕೆ ಆರಂಭಬಾಗಿ 12 ಗಂಟೆ ಹೊತ್ತಿಗೆ ಪೂರ್ಣಗೊಳ್ಳಬಹುದು‌ ಎಂದು ಜಿಲ್ಲಾಧಿಕಾರಿ ಹೇಳಿದರು.

ನಂತರ ಮಾತನಾಡಿದ ಅವರು 14 ರಿಂದ 16 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ, ಸಿಸಿ ಟಿವಿ ವ್ಯವಸ್ಥೆ ಮಾಡಲಾಗಿದೆ, ಮೆರವಣಿಗೆಗೆ ಅವಕಾಶವಿಲ್ಲ, ಪಟಾಕಿ ಸಿಡಿಸುವಂತಿಲ್ಲ, ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಎಸ್.ಪಿ ಮಾತನಾಡಿ, ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ, 5 ಹೆಚ್ಚುವರಿ ಕೆಎಸ್ಸಾರ್ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ, ಮೂರು ಶಿಫ್ಟ್ ನಲ್ಲಿ ಭದ್ರತೆ ‌ನೀಡಲಾಗಿದೆ, 500ಕ್ಕೂ ಹೆಚ್ಚು ಪೊಲೀಸ್ ರನ್ನು ನಿಯೋಜಿಸಲಾಗಿದೆ, ಕೌಂಟಿಂಗ್ ಸೆಂಟರ್ ಸುತ್ತಲೂ 144 ಸೆಕ್ಷನ್ ಜಾರಿಮಾಡಲಾಗಿದೆ,ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ರಾಜಕೀಯ

ಬಿಜೆಪಿ ರಾಜ್ಯಾದ್ಯಕ್ಷ ಬದಲಾವಣೆ ಇಲ್ಲ : ಸಂಸದ ನಳಿನ್ ಕುಮಾರ್

Published

on

ಸುದ್ದಿದಿನ,ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಸಂಬಂಧ ಅಮಿತ್ ಶಾ ಚರ್ಚೆ ವಿಚಾರ ಸದ್ಯಕ್ಕೆ ಯಡಿಯೂರಪ್ಪರೇ ಇದಾರೆ, ಚುನಾವಣೆಗಳು ಬರಲಿಕ್ಕಿದೆ ಅಂಥಹ ಯಾವುದೇ ಸಂಬಂಧ ಮತ್ತು ಸಂದರ್ಭಗಳು ಬಂದಿಲ್ಲ‌ ಎಂದು ಮಂಗಳೂರಿನಲ್ಲಿ ದ.ಕ ಲೋಕಸಭಾ ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.

ಹೀಗಾಗಿ ನಮ್ಮಲ್ಲಿ ಖಾಲಿ ಹುದ್ದೆಗಳಿಲ್ಲ, ಅವಶ್ಯಕತೆಗಳೂ ಇಲ್ಲ. ಅಲ್ಲದೇ ಹುದ್ದೆ ಬದಲಾವಣೆ ಚರ್ಚೆ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತದೆ. ಒಂದು ಘಂಟೆಗಳ ಕಾಲ ಅಮಿತ್ ಶಾ ಜೊತೆ ಕುಶಲೋಪರಿಯಷ್ಟೇ ಮಾತನಾಡಿದ್ದೇನೆ. ಕರಾವಳಿ ರಾಜಕೀಯದ ಬಗ್ಗೆ ನಮಗಿಂತ ಹೆಚ್ಚು ಅಮಿತ್ ಶಾರಿಗೆ‌ ಮಾಹಿತಿಯಿದೆ. ಹೀಗಾಗಿ ದ.ಕ ಜಿಲ್ಲೆಗಿಂತ ಹೆಚ್ಚು ಬಾಕಿ ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ. ಸಂಘದ ಬೈಠಕ್ ನಲ್ಲಿ ರಾಷ್ಟ್ರೀಯ ಅಧ್ಯಕ್ಷರು ಭಾಗವಹಿಸೋದು ಸಹಜ ಪ್ರಕ್ರಿಯೆ ಎಂದರು.

ಕೇರಳದಲ್ಲಿ ಶಬರಿಮಲೆ ಹೋರಾಟ ಮುಂದುವರೆಸುವ ವಿಚಾರ ಈಗಾಗಲೇ ಬಿಜೆಪಿ, ಸಂಘಪರಿವಾರ ಭಾಗಿಯಾಗಿ ಹೋರಾಟ ನಡೆಯುತ್ತಿದೆ. ಕೇರಳ ಮುಖ್ಯಮಂತ್ರಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಕೇರಳ ಬಿಜೆಪಿ ನಿರ್ಧರಿಸುತ್ತೆ ಎಂದರು.

Continue Reading

ರಾಜಕೀಯ

ಜನಾರ್ದನ ರೆಡ್ಡಿ ವಿಚಾರದಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿಲ್ಲ : ಎಚ್.ಡಿ.ಕೆ

Published

on

ಸುದ್ದಿದಿನ ಡೆಸ್ಕ್ : ಜನಾರ್ದನ ರೆಡ್ಡಿ ವಿಚಾರದಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಾವು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ,
ರೆಡ್ಡಿ ಆಪ್ತರೊಬ್ಬರು 18 ಕೋಟಿ ಹಣವನ್ನು ತಿರುಪತಿ ಹುಂಡಿಗೆ ಹಾಕಿದ್ದೇವೆ ಎನ್ನುತ್ತಾರೆ.ಇದು ಹಾಸ್ಯವೋ ಅಥವಾ ಗಂಭೀರವೋ ನನಗೆ ಅರ್ಥ ಆಗುತ್ತಿಲ್ಲ. ಇದರ ಅರ್ಥವೇನು ಅಂತ ಮಾಧ್ಯಮದವರು ತಿಳಿದುಕೊಳ್ಳಬೇಕು ಎಂದರು.

ರೆಡ್ಡಿ ಕೇಸ್ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಹಾಗಂತ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು.ಮಾಧ್ಯಮಗಳಲ್ಲಿ ಬಂದಿರುವುದನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.

Continue Reading

ದಿನದ ಸುದ್ದಿ

ಸರ್ದಾರ್ ಏಕತಾ ಮೂರ್ತಿ ತೆಗಳಿದ ಇಂಗ್ಲೆಂಡ್ ಸಂಸದ; ಯಾರ್ವರು, ಏನಂದ್ರು ಇಲ್ಲಿದೆ ಡಿಟೇಲ್ಸ್?

Published

on

ಸುದ್ದಿದಿನ ದೆಹಲಿ: ಕೆಲವು ದಿನಗಳ ಹಿಂದೆಯಷ್ಟೇ ಲೋಕಾರ್ಪಣೆ ಗೊಂಡಿದ್ದ ಭಾರತದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಮೂರ್ತಿ ಬಗ್ಗೆ ಇಂಗ್ಲೆಂಡಿನ ಸಂಸದನೊಬ್ಬ ಅವಹೇಳನಕಾರಿ ಹೇಳಿಕೆ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದ್ರೆ ಆ ಸಂಸದ ಏನೆಂದು ಹೇಳಿಕೆ ನೀಡಿದ್ದಾರೆ. ಇಲ್ಲಿದೆ ಡಿಟೇಲ್ಸ್ ಓದಿ..!?

ಅಖಂಡ ಭಾರತದ ಏಕತೆಗೆ ಶ್ರಮಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ಪ್ರಧಾನಿ ಮೋದಿ ಅವರು ಗುಜರಾತಿನ ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ ಅಣೆಕಟ್ಟಿನ ಎದುರು 600 ಅಡಿ ಎತ್ತರದ ಏಕತಾ ಮೂರ್ತಿ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಮೂರ್ತಿಯನ್ನು ಇಂಗ್ಲೆಂಡಿನ ಸಂಸತ್ ಸದಸ್ಯ ಪೀಟರ್ ಬೋನ್ ‘ಟೋಟಲ್ ನಾನ್ಸೆನ್ಸ್’ ತೆಗಳಿದ್ದಾರೆ.

ಸಂಸದ ಪೀಟರ್ ಬೋನ್ಸ್ ಮುಂದುವರಿದ ಮಾತನಾಡಿ, “ಅವರು (ಭಾರತ) ಹಣವನ್ನು ಹೇಗೆ ಖರ್ಚು ಮಾಡುತ್ತಾರೆ. ಆದರೆ, ಬೃಹತ್ ಮೊತ್ತದಲ್ಲಿ ಮೂರ್ತಿ ನಿರ್ಮಿಸಿ, ನಿಭಾಯಿಸುತ್ತಾರೆ ಎಂದಾದರೆ ನಾವು ಅವರಿಗೆ (ಭಾರತಕ್ಕೆ) ನೆರವು ನೀಡಬೇಕಾಗಿಲ್ಲ ಎಂದು ವಿರೋಧ ವ್ಯಕ್ತಪಡಿಸುದ್ದಾರೆ.

ಕಳೆದ ವರ್ಷಗಳಲ್ಲಿ ಇಂಗ್ಲೆಂಡ್ ಭಾರತಕ್ಕೆ 9492 ಕೋಟಿ ರೂ. (1.17 ಬಿಲಿಯನ್ ಪೌಂಡ್ಸ್ ಹಣಕಾಸಿನ ನೆರವು ನೀಡಿದೆ. ಇಷ್ಟು ದೊಡ್ಡ ಮೊತ್ತವು ಮಹಿಳಾ ಹಕ್ಕು, ಸಾಮಾಜಿಕ ಸಮಸ್ಯೆ, ನವೀಕರಿಸಬಹುದಾದ ಇಂಧನ ಶಕ್ತಿ ಯೋಜನೆ ಸೇರಿದಂತೆ ವಿವಿಧ ಸೌಕರ್ಯಗಳ ಅಭಿವೃದ್ಧಿಗೆ ನೀಡಲಾಗಿತ್ತು. ಆದರೆ, ಭಾರತೀಯರ ಕಲ್ಯಾಣಕ್ಕೆ ನೆರವು ನೀಡಿದ್ದೆ ಹೊರತು 2000 ಟನ್ನಿನ ಸ್ಟ್ಯಾಚ್ಯುಗೆ ಅಲ್ಲ ಎಂದು ವಿರೋಧಿದಿದ್ದಾರೆ.

ಏಕತಾ ಮೂರ್ತಿಯನ್ನು ಟೋಟಲ್ ಮ್ಯಾಡ್ನೆಸ್ ಎಂದು ತೆಗಳಿರುವ ಬ್ರಿಟಿಷ್‌ ಸಂಸದ, 3000 ಕೋಟಿ ರೂ. ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸಬಹುದಿತ್ತು. 2989 ಕೋಟಿ ರೂ. ಮೊತ್ತದಲ್ಲಿ ಒಂದು ಮೂರ್ತಿ ನಿರ್ಮಿಸಲು ಸಾಧ್ಯವಿದೆ ಎಂದಾದರೆ ವಿದೇಶಿ ನೆರವು ಅಗತ್ಯವಿರಲಿಲ್ಲ ಎಂದ ಸಂಸದ ಬೋನ್, ಏಕತಾ ಮೂರ್ತಿ ನಿರ್ಮಾಣಕ್ಕೆ ಇಂಗ್ಲೆಂಡಿನಲ್ಲಿ ಮೊದಲು ವಿರೋಧ ವ್ಯಕ್ತವಾಗಿತ್ತು ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

Continue Reading
Advertisement

Trending