Connect with us

ರಾಜಕೀಯ

ವಿಧಾನಸಭಾ ಕ್ಷೇತ್ರ ಮಾಯಕೊಂಡ ‘ರಣ-ಕಣದಲ್ಲಿ’

Published

on

ಸುದ್ದಿದಿನ,ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರ ದಾವಣಗೆರೆ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು .. ಮಾಯಕೊಂಡ ಕ್ಷೇತ್ರದಲ್ಲಿ ಈ ಬಾರಿ ಮಾಯಾದಾಟ ಶುರುವಾಗಿದೆ , ಈ ಬಾರಿ ಬಂಡಾಯದ ಬಾವುಟಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಇದೇ ಮಾಯಕೊಂಡ ಕ್ಷೇತ್ರ. ಅದ್ರಲ್ಲೂ ಕೂಡ ಒಂದೇ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ಈಬಾರಿ ಬಂಡಾಯ ಎದ್ದಿರುವುದು ಮತ್ತೊಂದು ವಿಶೇಷ. ಇಬ್ಬರು ಪ್ರಭಾವಿ ನಾಯಕರ ರಾಷ್ಟ್ರೀಯ ಪಕ್ಷದ ಬಂಡಾಯ ರಾಜ್ಯಾದ್ಯಂತ ಸುದ್ದಿಯಾಗಿತ್ತು.. ಇಲ್ಲೂ ಕೂಡ ಬಿಜೆಪಿಯ ಅಭ್ಯರ್ಥಿಗಳನ್ನು ಕಡೆಗಣಿಸಿ ಕೆಜೆಪಿಯ ಅಭ್ಯರ್ಥಿ ಗಳಿಗೆ ಮನ್ನಣೆ ನೀಡುತ್ತಿದ್ದಾರೆ ಎಂಬ ಒಳ‌ಜಗಳ ಬೂದಿ ಮುಚ್ಚಿದ ಕೆಂಡದಂತಿದೆ..

ಬಿಜೆಪಿಯ ಮಾಜಿ ಶಾಸಕ ಎಂ.ಬಸವರಾಜ್ ನಾಯ್ಕ್ ಇಲ್ಲಿನ‌ ಬಿಜೆಪಿಯ ಪ್ರಭಲ ಆಕಾಂಕ್ಷಿ ಯಾಗಿದ್ದರು..‌ ಹಾಗೂ ಕ್ಷೇತ್ರದಲ್ಲಿ ಚುನಾವಣಾ ಓಡಾಟವನ್ನು ಶುರು ಮಾಡಿದ್ದರು.. ಹಾಗೂ ಬಿಜೆಪಿಯ ಮತ್ತೊಬ್ಬರು ಪ್ರಮುಖ ಆಕಾಂಕ್ಷಿಯಾಗಿದ್ದವರು ಹೆಚ್.ಆನಂದಪ್ಪ , ಕಳೆದ ಬಾರಿಯ ಚುನಾವಣೆಯಲ್ಲಿ ಕೂಡ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.. ಆದರೂ ಕ್ಷೇತ್ರದ ಜನತೆ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದರು. ಈ ಬಾರಿಯು ಕೂಡ ಬಿಜೆಪಿಯ ಟಿಕೇಟ್ ನೆಚ್ಚಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬೇರೆಯವರ ಪಾಲಾಗಿ ಇಬ್ಬರು ಪ್ರಬಲ ಅಭ್ಯರ್ಥಿಗಳು ಬಂಡಾಯದ ಬಾವುಟ ವನ್ನು ರಾಷ್ಟ್ರೀಯ ಪಕ್ಷದ ಮೇಲೆ ಹಾರಿಸಿದರು. ಇನ್ನು ಬಸವರಾಜ್ ನಾಯ್ಕ್ ಜೆಡಿಎಸ್ ನ ಕದ ತಟ್ಟಿದರು ಕೂಡ ಜೆಡಿಎಸ್ ಅಭ್ಯರ್ಥಿ ಮೊದಲೆ ಘೋಷಣೆ ಯಾಗಿತ್ತು . ಆದರಿಂದ ಕೊನೆ ಕ್ಷಣದಲ್ಲಿ ಜೆಡಿಯು ಸೇರಿ ಕಮಲಕ್ಕೆ ಬಾಣ ಬಿಟ್ಟಿದ್ದಾರೆ… ಇನ್ನು ಹೆಚ್ ಆನಂದಪ್ಪ ಪಕ್ಷೇತರ ಅಭ್ಯರ್ಥಿ ಯಾಗಿಯೇ ನಿಂತು ಗೆದ್ದು ಬಿಜೆಪಿ ಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಏಕೈಕ ಎಸ್ಸಿ ಮೀಸಲಾತಿ ಕ್ಷೇತ್ರ ಮಾಯಕೊಂಡ

ಮಾಯಕೊಂಡ ಕ್ಷೇತ್ರದ ಒಟ್ಟು ಮತಗಟ್ಟೆಗಳ ಸಂಖ್ಯೆ 229.

ಕ್ಷೇತ್ರದ ಮತದಾರರು

  • ಒಟ್ಟು ಮತದಾರರು –  1,91,819
  • ಪುರುಷರು – 98541
  • ಮಹಿಳೆಯರು – 93278

ಇನ್ನು ಮಾಯಕೊಂಡ ಕ್ಷೇತ್ರ ದಲ್ಲಿ
ಜಾತಿವಾರು ಲೆಕ್ಕಾಚಾರ ವನ್ನು ನಿಮಗೆ ಹೇಳೋದೆ ಆದ್ರೆ.. (ಅಂದಾಜು)

ಲಿಂಗಾಯತ       –     51,830

ಎಸ್ಸಿ              –      47,370

ಎಸ್ಟಿ              –      32,140

ಕುರುಬ           –       17,230

ಮುಸ್ಲಿಂ           –       8,443

ಉಪ್ಪಾರ          –       5000

ಇತರೆ             –       29,806

ಒಟ್ಟು              –      1,91,819

ಇಲ್ಲೂ ಕೂಡ ಎಸ್ಸಿ ಮತಗಳೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಇನ್ನು ಮಾಯಕೊಂಡ ಕ್ಷೇತ್ರದ ಅಭ್ಯರ್ಥಿಗಳು

೧.ಪ್ರೋ. ಲಿಂಗಪ್ಪ -ಬಿಜೆಪಿ

೨. ಕೆ.ಎಸ್ ಬಸವರಾಜು – ಕಾಂಗ್ರೆಸ್

೩. ಶೀಲಾ ನಾಯ್ಕ್ – ಜೆಡಿಎಸ್

೪. ಬಸವರಾಜ್ ನಾಯ್ಕ್ -ಜೆಡಿಯು

೫. ಹೆಚ್ .ಆನಂದಪ್ಪ – ಪಕ್ಷೇತರ

_________

ಇನ್ನು ಮಾಯಕೊಂಡ ಕ್ಷೇತ್ರ ದಲ್ಲಿ ಹಿಂದಿನ‌‌ ವಿಧಾನಸಭಾ ಚುನಾವಣೆಗಳಲ್ಲಿ ಯಾರ್ಯಾರು ತಮ್ಮ ಮಾಯದಾಟವನ್ನು ಆಡಿದ್ದಾರೆ ಅಂತ ನೋಡೋದೆ ಆದ್ರೆ.‌.

2004     –     ಎಸ್.ಎ.ರವೀಂದ್ರನಾಥ್, ಬಿಜೆಪಿ

2008     –     ಎಂ.ಬಸವರಾಜ ನಾಯ್ಕ, ಬಿಜೆಪಿ

2013      –     ಕೆ.ಶಿವಮೂರ್ತಿ ನಾಯ್ಕ, ಕಾಂಗ್ರೆಸ್

ಈ ಕ್ಷೇತ್ರದ ಲ್ಲೂ ಕೂಡ ಬದಲಾವಣೆಯ ಗಾಳಿ ಜೋರಾಗಿಯೇ ಬೀಸಿದೆ. ಅಭ್ಯರ್ಥಿ ಗಳ ಆಯ್ಕೆಗಳಲ್ಲಿ ಬದಲಾವಣೆಗಳು ನಡೆದಿವೆ.

ಕಳೆದ ಚುನಾವಣೆ ಗಳ ಗೆಲುವಿನ ಅಂತರ

2004 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಎ.ರವೀಂದ್ರನಾಥ್ ಒಟ್ಟು 62290 ಮತಗಳನ್ನ ಪಡೆದು 9,097 ಮತಗಳ ಅಂತರದಿಂದ ಜಯ ಗಳಿಸಿದ್ರು.

2008 ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಯ ಎಂ.ಬಸವರಾಜನಾಯ್ಕ 52132 ಮತಗಳನ್ನ ಪಡೆದು 16,661 ಮತಗಳ ಅಂತರದಿಂದ ಗೆಲುವು ಸಾಧಿಸಿದ್ರು.

2013 ರ ವಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಶಿವಮೂರ್ತಿ ನಾಯ್ಕ 32435 ಮತಗಳನ್ನ ಪಡೆದು, 694 ಮತಗಳ ಅಂತರದಿಂದ ಜಯಶೀಲರಾಗಿದ್ರು..

ಇನ್ನು ಈ‌ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್ ನ ಕೆ‌. ಶಿವಮೂರ್ತಿ ಯವರಿಗೆ ಕಾಂಗ್ರೆಸ್ ಹೈ ಕಮಾಂಡ್ ಕೈ ಹಿಡಿಯಲಿಲ್ಲ‌‌‌ … ಆದರಿಂದ ಬೇಸತ್ತು ಚುನಾವಣೆ ‌ಕಣದಿಂದಲೆ ಹಿಂದೆ ಸರಿದಿದ್ದಾರೆ..

ಬಲಾಬಲ

ದಾವಣಗೆರೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ಎಸ್ಸಿಗೆ ಮೀಸಲು. ಹಾಗಾಗಿ ಇಲ್ಲಿ ಮೂರು ಪ್ರಮುಖ ಪಕ್ಷಗಳಿಂದ ಆಕಾಂಕ್ಷಿತರಿದ್ದಾರೆ. ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಒಲವು ಇದೆ , ಆದರೆ ಈ ಕ್ಷೇತ್ರದಲ್ಲಿ ಬಿಜೆಪಿಯ ಆಂತರಿಕ ಬಿಕ್ಕಟ್ಟು ಹಾಗೂ ಬಂಡಾಯದ ಯುದ್ದದಲ್ಲಿ ‌ಇಬ್ಬರ ಜಗಳ ಮೂರನೆಯವನಿಗೆ ಲಾಭ ದಂತೆ ಕಾರ್ಯನಿರ್ವಹಿಸಲಿದೆ. ಹಾಗೂ ಬಿಜೆಪಿಗೆ ಮುಸ್ಲೀಂ ಓಟುಗಳು ಮತ್ತು ದಲಿತರ ಓಟುಗಳು ದೂರದ ಮಾತು ಎಂದು ಹೇಳಲಾಗ್ತಿದೆ‌ . ಆದರಿಂದ ಈ ಓಟುಗಳು ಏನಾದ್ರು ಈ ಬಾರಿ ಬಿಜೆಪಿಗೆ ಒಡೆತ ನೀಡಬಹುದು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಸವರಾಜು ಜಿಲ್ಲಾ ಪಂಚಾಯತ್ ಸದಸ್ಯರರಾಗಿ ಆ ಭಾಗದಲ್ಲಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ ಎನ್ನಲಾಗ್ತಿದೆ‌ . ಹಾಗೂ ಇಲ್ಲಿನ ‌ಜನಗಳಿಂದ 108 ಬಸಣ್ಣ ಎಂತಲೆ ಕಿರು ಪರಿಚಯ , ಆದಷ್ಟೂ ಕಷ್ಟದಲ್ಲಿದವರಿಗೆ ಸಹಾಯ ಮಾಡುವ ಇವರ ಗುಣ , ಈ ಬಾರಿ ವಿಜಯದ ಕೈ ಹಿಡಿಯಲಿದ್ಯ ಕಾದು ನೋಡಬೇಕಿದೆ‌. ಹಾಗೂ ಜೆಡಿಎಸ್ ನ ಅಭ್ಯರ್ಥಿ ಗೆ ಅಷ್ಟು ಪ್ರಮಾಣದ ಒಲವಿಲ್ಲ, ಇಲ್ಲೇನಾದ್ರೂ ಕುಮಾರಸ್ವಾಮಿ ಯವರ ಹವಾ ನಡೆಯುತ್ತ ನೋಡ್ಬೇಕು. ಆದರೂ ಕೂಡ ಮಹಿಳಾ ಅಭ್ಯರ್ಥಿ ಯಾಗಿ ಏನಾದರೂ ಮೋಡಿ ಮಾಡತ್ತಾರೊ ಅನ್ನದೆ ಸಸ್ಪೆನ್ಸ್‌‌….ಇನ್ನೂ ಹೆಚ್ .ಆನಂದಪ್ಪ ಕೂಡ ಪ್ರಬಲ ಅಭ್ಯರ್ಥಿ ಯಾಗಿದ್ದಾರೆ ,ಕ್ಷೇತ್ರದಾದ್ಯಂತ ಒಡನಾಟವನ್ನು ಇಟ್ಟುಕೊಂಡಿದ್ದಾರೆ.. ಹಾಗೂ ಬಿಜೆಪಿಯ ಟಿಕೆಟ್ ವಂಚಿತ ನೆಂದು ಕರುಣೆಯ ಮೂಲಕ ಮತದಾರರು ಆರಿಸಬಹುದೇನು ಎಂಬುದು ಇನ್ನೊಂದು ಮಾತಾಗಿದೆ‌‌‌.

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ರಾಜಕೀಯ

ಸದನದಲ್ಲೇ ಬಿಜೆಪಿಯ ಇನ್ನೊಂದು ಕರಾಳ ಮುಖದ ಅನಾವರಣವಾಗಿದೆ‌ : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ, ಬೆಂಗಳೂರು: ಈಗಾಗಲೇ ವಿಶ್ವಾಸ ಮತ ಮಂಡನೆಯ ನಿರ್ಣಯವನ್ನು ಸದನದಲ್ಲಿ ಮಂಡಿಸಲಾಗಿದೆ. ಹಾಗಾಗಿ ಈ ವಿಚಾರ ಸದನದ ಸ್ವತ್ತು. ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾನ್ಯ ಸಭಾಧ್ಯಕ್ಷರೇ ಸರ್ವೋಚ್ಚರು. ಚರ್ಚೆ ಮತ್ತು ಅಭಿಪ್ರಾಯ ಮಂಡನೆ ಸೇರಿದಂತೆ ಇತರೆ ವಿಚಾರಗಳಲ್ಲಿ ಸಭಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ನಂತರ ಟ್ವೀಟ್ ನಲ್ಲಿ, ಶಾಸಕಾಂಗ ಪಕ್ಷದ ನಾಯಕನಾದ ನನಗೆ ವಿಪ್ ಜಾರಿಗೊಳಿಸುವ ಅವಕಾಶ ಇದೆಯೇ? ಇಲ್ಲವೇ? ಎಂಬ ಬಗ್ಗೆ ಸಭಾಧ್ಯಕ್ಷರ‌ ತೀರ್ಮಾನ ಕೇಳಿದ್ದೇನೆ. ಅವರು ಅಡ್ವೊಕೇಟ್ ಜನರಲ್ ಅವರ ಜೊತೆ ಚರ್ಚಿಸಿ ನಿರ್ಣಯ ತಿಳಿಸುವುದಾಗಿ ಹೇಳಿದ್ದಾರೆ. ಇದು ಇತ್ಯರ್ಥವಾಗುವರೆಗೆ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗುವ ಬಗ್ಗೆ ನಿರ್ಧರಿಸುವುದಿಲ್ಲ ಎಂದಿದ್ದಾರೆ.

ಬಿಜೆಪಿಯ ಅಶ್ವಥ್ ನಾರಾಯಣ್, ಮಾಜಿ ಶಾಸಕ ಯೋಗೀಶ್ವರ್ ಹಾಗೂ ವಿಶ್ವನಾಥ್ ಅವರು ರೂ.5 ಕೋಟಿಯನ್ನು ನನ್ನ ಮನೆಗೆ ತಂದಿದ್ದರು, ಕೊನೆಗೆ ನಾನೇ ಅವರೆಲ್ಲರಿಗೂ ಬೈದು ಕಳುಹಿಸಿದೆ ಎಂದು ಸ್ವತಃ ಶ್ರೀನಿವಾಸ್ ಗೌಡ ಅವರೇ ಹೇಳಿದ್ದಾರೆ. ಇದರಿಂದ ಸದನದಲ್ಲೇ ಬಿಜೆಪಿಯ ಇನ್ನೊಂದು ಕರಾಳ ಮುಖದ ಅನಾವರಣವಾಗಿದೆ‌ ಎಂದು ಕಿಡಿಕಾರಿದ್ದಾರೆ.

Continue Reading

ರಾಜಕೀಯ

ಪಕ್ಷದ ಸದಸ್ಯರಿಗೆ ವಿಪ್ ನೀಡಲು ಅವಕಾಶ ಇರಲೇಬೇಕು : ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು : ರಾಜ್ಯದ 15 ಶಾಸಕರ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಮಧ್ಯಂತರ ಆದೇಶದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ನಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡುವ ನನ್ನ ಹಕ್ಕನ್ನು ಹತ್ತಿಕ್ಕಿದಂತೆ ಕಾಣುತ್ತಿದೆ. ಈ ಬಗ್ಗೆ ಸಭಾಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾದ ನನ್ನ ಅಧಿಕಾರದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪವಾಗಿದೆ.
ಆ ಪ್ರಕರಣದಲ್ಲಿ ನಾನು ಪ್ರತಿವಾದಿ ಆಗದೆ ಇರುವ ಕಾರಣ ನನ್ನ ಅಭಿಪ್ರಾಯ ಮಂಡಿಸಲು ಸಾಧ್ಯವಾಗಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಆಶಯ ಈಡೇರಬೇಕಾದರೆ, ಶಾಸಕಾಂಗ ಪಕ್ಷದ ನಾಯಕರಿಗೆ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಲು ಅವಕಾಶ ಇರಲೇಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ಕರ್ನಾಟಕದಲ್ಲಿ ಬಿಜೆಪಿಯಿಂದ ಜನತಂತ್ರ ಬುಡಮೇಲು ಕೃತ್ಯ

Published

on

  • ರ್ನಾಟಕದಲ್ಲಿ ಜನತಾಂತ್ರಿಕ ನಿಯಮಗಳನ್ನು ಬಿಜೆಪಿ ಬುಡಮೇಲು ಮಾಡುತ್ತಿರುವುದು ಮೋದಿ ಸರಕಾರದಡಿ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ವ್ಯಾಪಕ ದಾಳಿಯ ಭಾಗವಾಗಿದೆ. ಪ್ರಜಾಪ್ರಭುತ್ವ ಮತ್ತು ಜನತಾಂತ್ರಿಕ ಸಂಸ್ಥೆಗಳನ್ನು ರಕ್ಷಿಸುವುದು, ಚುನಾವಣೆ ಸುಧಾರಣೆಗಳು ಮತ್ತು ಪಕ್ಷಾಂತರಿ ಹಾಗೂ ಭ್ರಷ್ಟ ಜನಪ್ರತಿನಿಧಿಗಳಿಗೆ ಶಿಕ್ಷೆ ನೀಡುವುದು ಮುಂದಿನ ದಿನಗಳಲ್ಲಿ ದೇಶದ ಜನತಾಂತ್ರಿಕ ಶಕ್ತಿಗಳ ಕಾರ್ಯಸೂಚಿಯ ಆದ್ಯತೆಯಾಗಬೇಕು.

ಕಾಂಗ್ರೆಸ್, ಜನತಾ ದಳ (ಎಸ್)ದ 12ಮತ್ತು ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತಿದ್ದ ಇಬ್ಬರು ಪಕ್ಷೇತರ ಶಾಸಕರು- ಹೀಗೆ ಒಟ್ಟು 14 ಶಾಸಕರು ರಾಜಿನಾಮೆ ನೀಡುವುದರೊಂದಿಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಚರಮ ಸ್ಥಿತಿಯನ್ನು ತಲುಪಿವೆ. ಕುಮಾರಸ್ವಾಮಿ ಸರಕಾರವನ್ನು ಉರುಳಿಸಲು ಕಳೆದ ಒಂದು ವರ್ಷದಿಂದ ಬಿಜೆಪಿ ಹಲವು ಬಾರಿ ನಡೆಸಿದ ಪ್ರಯತ್ನಗಳ ನಂತರ ಈ ಬೆಳವಣಿಗೆ ನಡೆದಿದೆ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ತಾನು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತದಿಂದ ತನಗೆ ಸರಕಾರ ನಡೆಸಲಾಗದು ಎಂಬ ವಾಸ್ತವವನ್ನು ಜೀರ್ಣಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಆಳುವ ಮೈತ್ರಿಕೂಟದ ಶಾಸಕರಿಗೆ ಆಮಿಷ ಒಡ್ಡಲು ಹಾಗೂ ಲಂಚ ನೀಡಲು ಬಿಜೆಪಿ ಯಾವುದೇ ಹಿಂಜರಿಕೆ ತೋರಿಲ್ಲ. ಕೆಲವು ವರ್ಷಗಳ ಹಿಂದೆ ತಾನು ಚಾಲ್ತಿಗೆ ತಂದ ಆಪರೇಷನ್ ಕಮಲಕ್ಕೆ ಅದು ಮುಂದಾಗಿದೆ.

ಚುನಾಯಿತ ಪ್ರತಿನಿಧಿಗಳಿಗೆ ಲಂಚ ನೀಡಿ ಹಾಗೂ ಸ್ಥಾನಮಾನದ ಆಮಿಷಗಳನ್ನೊಡ್ಡುವುದು ಹಾಗೂ ಚುನಾಯಿತ ಸರಕಾರವನ್ನು ಬುಡಮೇಲು ಮಾಡಲು ಅಪಾರ ಪ್ರಮಾಣದ ಸಂಪನ್ಮೂಲವನ್ನು ಬಳಕೆ ಮಾಡುವುದು ಬಿಜೆಪಿಯ ಚಾಳಿಯಾಗಿ ಬಿಟ್ಟಿದೆ. ಇದಕ್ಕೂ ಮೊದಲು ಅರುಣಾಚಲ ಪ್ರದೇಶ ಮತ್ತು ಗೋವಾದಲ್ಲಿ ಸರಕಾರಗಳನ್ನು ರಚಿಸಲಿಕ್ಕಾಗಿ ಅದು ಪಕ್ಷಾಂತರಗಳನ್ನು ನಡೆಸಿತ್ತು. ಇಂಥ ಕೀಳು ಮಟ್ಟದ ತಂತ್ರಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಲಿನಗೊಳಿಸಲು ಮೋದಿ-ಷಾ ಜೋಡಿ ನೇರವಾಗಿ ಹೊಣೆಗಾರನಾಗಿದೆ.
ರಚನೆಯಾದಂದಿನಿಂದ ಯಾವುದೇ ತಾಳಮೇಳವಿಲ್ಲದ ಅಥವಾ ದಿಕ್ಕುದೆಸೆಯಿಲ್ಲದಂತೆ ವರ್ತಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ರಚಿಸಿದ ಅಸ್ಥಿರ ಸರಕಾರದ ಸನ್ನಿವೇಶವನ್ನು ಬಳಸಿಕೊಂಡು ಇಂಥ ಪಕ್ಷಾಂತರಗಳನ್ನು ಸಂಘಟಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾಂಗ್ರೆಸ್ ನಾಯಕರ ಕಚ್ಚಾಟ ಮತ್ತು ಅದರ ಕೆಲವು ಅಧಿಕಾರದಾಹಿ ಶಾಸಕರ ಕುತಂತ್ರಗಳು ಕೂಡ ಪ್ರಸ್ತುತ ಸನ್ನಿವೇಶಕ್ಕೆ ಕೊಡುಗೆ ನೀಡಿವೆ.

ಕರ್ನಾಟಕದ ರಾಜಕೀಯದಲ್ಲಿನ ಈ ಅವನತಿಯು ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಕಾಡುತ್ತಿರುವ ಇನ್ನೂ ಆಳವಾದ ರೋಗದ ಸೂಚನೆಯಾಗಿದೆ. ದೊಡ್ಡ ಹಣಕಾಸು ಮತ್ತು ನವ ಉದಾರವಾದಿ ಬಂಡವಾಳದ ಆಕ್ರಮಣವು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪಕ್ಷ ವ್ಯವಸ್ಥೆಯ ಸಾರವನ್ನೇ ನಾಶಮಾಡಿದೆ. ಆಯ್ಕೆಯಾಗುತ್ತಿರುವ ಹೆಚ್ಚೆಚ್ಚು ಶಾಸಕರು ರಿಯಲ್ ಎಸ್ಟೇಟ್, ಸಾರಾಯಿ ದಂಧೆ, ಕಂಟ್ರಾಕ್ಟ್ ಇತ್ಯಾದಿ ವ್ಯಾಪಾರಿ ಹಿತಾಸಕ್ತಿ ಹೊಂದಿರುವವರಾಗಿದ್ದಾರೆ ಅಥವಾ ಗ್ರಾಮೀಣ ಸಮಾಜದ ಶ್ರೀಮಂತ ವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ಶಕ್ತಿಗಳಿಗೆ ಬಂಡವಾಳಶಾಹಿ ಪಕ್ಷಗಳ ಟಿಕೆಟ್ ಸಿಗುತ್ತದೆ. ಈ ಜನರಲ್ಲಿ ಯಾವುದೇ ತತ್ವ ಸಿದ್ಧಾಂತದ ಲವಲೇಷವೂ ಇರುವುದಿಲ್ಲ.

ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆದಂತೆ ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಶಾಸಕರು ಮತ್ತು ಸಂಸತ್ ಸದಸ್ಯರು ಬಿಜೆಪಿಗೆ ಸೇರಿದ್ದನ್ನು ನಾವು ನೋಡಿದ್ದೇವೆ. ಪಕ್ಷಾಂತರ ಮಾಡಿದ ತೆಲುಗುದೇಶಂನ ಎಲ್ಲಾ ನಾಲ್ವರು ರಾಜ್ಯಸಭೆ ಎಂಪಿಗಳು ವ್ಯಾಪಾರೋದ್ಯಮಿಗಳು ಎನ್ನುವುದು ಗಮನಾರ್ಹ.

ಬಿಜೆಪಿ ರಾಜಕೀಯದಲ್ಲಿ ವ್ಯಾಪಾರವನ್ನು ಬೆರೆಸುವ ಈ ವಿದ್ಯಮಾನದ ಉತ್ತುಂಗವನ್ನು ಪ್ರತಿನಿಧಿಸುತ್ತದೆ. ಈ ಪಕ್ಷ ಕಾರ್ಪೊರೇಟ್‌ಗಳಿಂದ ಹೆಚ್ಚು ಅನುಕೂಲ ಪಡೆದ ಪಕ್ಷವಾಗಿದ್ದು ತನ್ನ ರಾಜಕೀಯ ಕುತಂತ್ರದಾಟಗಳಿಗೆ ಈ ಹಣವನ್ನು ಬಳಸಿಕೊಳ್ಳುತ್ತಿದೆ. ಪಕ್ಷಾಂತರ ಮಾಡಿದ ಶಾಸಕರನ್ನು ಉದ್ಯಮಿ ಹಾಗೂ ಬಿಜೆಪಿ ನಾಯಕನಾಗಿರುವ ರಾಜ್ಯಸಭೆಯ ಸದಸ್ಯರೊಬ್ಬರ ಮಾಲಿಕತ್ವದ ಖಾಸಗಿ ಜೆಟ್ ಕಂಪೆನಿಯ ವಿಮಾನದಲ್ಲಿ ಮುಂಬಯಿಯ ಒಂದು ಪಂಚತಾರಾ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದು ಅಚ್ಚರಿಯ ಸಂಗತಿಯೇನೂ ಅಲ್ಲ.

ಕರ್ನಾಟಕದಲ್ಲಿ ಜನತಾಂತ್ರಿಕ ನಿಯಮಗಳನ್ನು ಬಿಜೆಪಿ ಬುಡಮೇಲು ಮಾಡುತ್ತಿರುವುದು ಮೋದಿ ಸರಕಾರದಡಿ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ವ್ಯಾಪಕ ದಾಳಿಯ ಭಾಗವಾಗಿದೆ. ಪ್ರಜಾಪ್ರಭುತ್ವ ಮತ್ತು ಜನತಾಂತ್ರಿಕ ಸಂಸ್ಥೆಗಳನ್ನು ರಕ್ಷಿಸುವುದು, ಚುನಾವಣೆ ಸುಧಾರಣೆಗಳು ಮತ್ತು ಪಕ್ಷಾಂತರಿ ಹಾಗೂ ಭ್ರಷ್ಟ ಜನಪ್ರತಿನಿಧಿಗಳಿಗೆ ಶಿಕ್ಷೆ ನೀಡುವುದು ಮುಂದಿನ ದಿನಗಳಲ್ಲಿ ದೇಶದ ಜನತಾಂತ್ರಿಕ ಶಕ್ತಿಗಳ ಕಾರ್ಯಸೂಚಿಯ ಆದ್ಯತೆಯಾಗಬೇಕು.

ಪ್ರಕಾಶ್ ಕಾರಟ್
ಅನು: ವಿಶ್ವ

ಕೃಪೆ : ಜನಶಕ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending