Connect with us
http://www.suddidina.com/category/political-news

ರಾಜಕೀಯ

ಪಕ್ಷದ ಕಾರ್ಯಕರ್ತೆಯ ಭಾಷಣ ನಿಲ್ಲಿಸಲು ಪ್ರಯತ್ನಿಸುವಾಗ ನಡೆದ ಘಟನೆ‌ ಆಕಸ್ಮಿಕ : ಸಿದ್ದ ರಾಮಯ್ಯ ಟ್ವೀಟ್

Published

on

ಸುದ್ದಿದಿನ ಡೆಸ್ಕ್ : ಇಂದು ಸೋಮವಾರ ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತೆಯೊಬ್ಬರ‌ ದೀರ್ಘ ಭಾಷಣವನ್ನು ನಿಲ್ಲಿಸಲು ಪ್ರಯತ್ನಿಸುವಾಗ ನಡೆದ ಘಟನೆ‌ ಆಕಸ್ಮಿಕವಾದುದು, ಅದರಲ್ಲಿ ದುರುದ್ದೇಶ ಇರಲಿಲ್ಲ. 15 ವರ್ಷಗಳಿಂದ‌ ನಾನು ಬಲ್ಲ‌ ಆ‌‌ ಕಾರ್ಯಕರ್ತೆ ನನ್ನ‌ಸೋದರಿ ಸಮಾನ‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ವರುಣಾ ಕ್ಷೇತ್ರದಲ್ಲಿ ನಡೆದ ಘಟನೆ ಬಗ್ಗೆ ಪಕ್ಷದ ಕಾರ್ಯಕರ್ತೆ ಜಮಲಾರ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ನಾಯಕರು ಘಟನೆಗೆ ರಾಜಕೀಯ ಬಣ್ಣ ಬಳಿಯುವ ಮೂಲಕ ಆ ಹೆಣ್ಣುಮಗಳನ್ನು ಅವಮಾನಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಮಹಿಳೆಯರ ಮೇಲೆ ಇರುವ ಗೌರವ ಲೋಕಕ್ಕೆ ಗೊತ್ತು. ಇವರಿಂದ ನಾನು ಕಲಿಯುವುದೇನಿಲ್ಲ‌ ಎಂದೂ ಕೂಡ ಟ್ವೀಟ್ ನಲ್ಲಿ ಬಿಜೆಪಿ ನಾಯಕರಿಗರ ತಿರುಗೇಟು ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

ರಾಜಕೀಯ

ಹಿಂದುತ್ವ ಮತ್ತು‌ ಬಿಜೆಪಿ

Published

on

ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿದ್ದು ನನಗೆ ತೀರಾ ಆಶ್ಚರ್ಯವಾಗಿಯೇನೂ ಕಾಣುತ್ತಿಲ್ಲ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೇಟು ನಿರಾಕರಿಸಿದ್ದು ಕೂಡ ದೊಡ್ಡ ಆಶ್ಚರ್ಯವೇನಲ್ಲ. ಇದು ಸಂಘ ಪರಿವಾರದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯೋಜನಾ ಪ್ರಕ್ರಿಯೆ ಮತ್ತು ಅನುಷ್ಠಾನ.

ಜನಸಾಮಾನ್ಯ ಹಿಂದುತ್ವವಾದ ಮತ್ತು ಹಿಂದೂರಾಷ್ಟ್ರದ ಕಲ್ಪನೆಯನ್ನು ಪರಿಗಣಿಸುವಂತೆ ಮಾಡುವುದು ಅವರ ಮೊದಲ ಹಂತದ ಕೆಲಸವಾಗಿತ್ತು. ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಎಲ್ಲರನ್ನೂ ಒಳಗೊಳ್ಳುವ ಸಂವಿಧಾನ ಪ್ರೇರಿತ ರಾಷ್ಟ್ರೀಯತೆ ಬಹುಸಂಖ್ಯಾತ ಜನರಲ್ಲಿ ಸಾಮಾನ್ಯವಾಗಿಯೇ ಇತ್ತು. ಇಂಥಾ ವಾತಾವರಣದಲ್ಲಿ ವಾಜಪೇಯಿ, ಆಡ್ವಾಣಿ ಮತ್ತು ಜೋಷಿ ಸಾಕಷ್ಟು ಜಾಗರೂಕತೆಯಿಂದಲೇ ಕೆಲಸ ಮಾಡಬೇಕಿತ್ತು. ಇಲ್ಲದಿದ್ದರೆ ಅವರನ್ನಾಗಲೀ, ಅವರ ಸಿದ್ಧಾಂತವನ್ನಾಗಲೀ ಈಗ ಒಪ್ಪಿರುವವರೂ ಒಪ್ಪುವುದು ಕಷ್ಟವಿತ್ತು. ಈ ತಂಡ ಅದನ್ನು ಸಾಕಷ್ಟೂ ಯಶಸ್ವಿಯಾಗಿ ಮಾಡಿದ್ದಲ್ಲದೇ, ಬಲಪಂಥೀಯ ಸರ್ಕಾರಕ್ಕೂ ಕೂಡ ಒಂದು ಗಟ್ಟಿ ತಳಹದಿಯನ್ನು ಹಾಕಿಕೊಟ್ಟಿತು.

ಈ ತಳಹದಿ ದೊರೆತ ಮೇಲೆ ಹಿಂದುತ್ವವಾದವನ್ನು ಇನ್ನಷ್ಟು ನೆಲ-ಮನಕ್ಕಿಳಿಸಲು ಆ ತಲೆಮಾರಿಗಿಂತ ಹೆಚ್ಚು ಆಗ್ರಹಪೂರ್ವಕವಾಗಿ ಕೆಲಸ ಮಾಡುವ ತಲೆಮಾರಿನ ಅಗತ್ಯ ಕಾಣಿಸಿತು. ಹೀಗಾಗಿ ಮೋದಿಯನ್ನು ಮುನ್ನೆಲೆಗೆ ತರಲಾಯಿತು. ಜೋಷಿ, ಆಡ್ವಾಣಿಯವರನ್ನು ಬದಿಗೆ ಸರಿಸಿದ್ದು ಈ ಪ್ರಕ್ರಿಯೆಯೇ. ಮೋದಿಯವರ ಆಡಳಿತದಲ್ಲಿ ಪರಿವಾರ ಈ ಗುರಿಯತ್ತ ಸಾಕಷ್ಟು ದೂರ ಕ್ರಮಿಸುವುದು ಸಾಧ್ಯವಾಯಿತು ಎನ್ನುವುದನ್ನು ನಾವೆಲ್ಲ ಕಳೆದ ಐದು ವರ್ಷಗಳಲ್ಲಿ ಚೆನ್ನಾಗಿಯೇ ನೋಡಿದ್ದೇವೆ. ರಾಷ್ಟ್ರೀಯತೆಯ ವ್ಯಾಖ್ಯಾನವನ್ನು ಬದಲಿಸುವುದು, ದೇಶದ್ರೋಹವನ್ನು ಮರುವ್ಯಾಖ್ಯಾನಿಸುವುದು, ವಿಶ್ವವಿದ್ಯಾಲಯಗಳ ಮೇಲೆ, ವಿದ್ಯಾರ್ಥಿಗಳ ಮೇಲೆ ವೈಚಾರಿಕ ನಿರ್ಬಂಧ ಹೇರಿ, ತಮ್ಮದನ್ನು ಹೇರಲು ಮಾಡಿದಂಥಾ ಪ್ರಯತ್ನಗಳು, ದೇಶದ ಆಹಾರ ಪದ್ಧತಿಗಳ ಮೇಲೆ ಆದಂತಹ ಹಲ್ಲೆಗಳು, ಸಂವಿಧಾನವನ್ನು ನಿಕಶಕ್ಕೆ ಒಡ್ಡುವುದು, ಇನ್ನೂ ಮುಂತಾದವು ಕೇವಲ stray incidents ಅಲ್ಲ.

ಈಗ ಮೋದಿಯವರ “ಯಶಸ್ವೀ” ಪಾತ್ರವೂ ಕೊನೆಯ ಹಂತದಲ್ಲಿರುವಾಗ ಹಿಂದುತ್ವವಾದವನ್ನು ಅವರಿಗಿಂತ ಹೆಚ್ಚು ಭಾವೋದ್ವೇಗದಿಂದ ಹೇರುವ, ನಾಟಿಸುವ ತಲೆಮಾರಿನ ಅವಶ್ಯಕತೆ ಪರಿವಾರಕ್ಕೆ ಇದೆ. ಈ ಹಂತದಲ್ಲಿ ಬೌದ್ಧಿಕ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಾಮರ್ಥ್ಯದ ಅಗತ್ಯವಿದೆ. ಒಂದು ರೀತಿಯ ಮಿಲಿಟೆನ್ಸಿಯ ಅಗತ್ಯವೂ ಇದೆ. ಹೀಗಾಗಿಯೇ ಯಾರೂ ಊಹಿಸದ, ಆದರೆ ಅಂಥಾ ಉದ್ದೇಶಕ್ಕಾಗಿಯೇ ತರಬೇತಾಗಿರುವ ಯೋಗಿ, ಮಣಿಪುರ ಮತ್ತು ತ್ರಿಪುರಾದ ಮುಖ್ಯಮಂತ್ರಿಗಳು ಮುನ್ನೆಲೆಗೆ ಬಂದಿದ್ದು. ಅವರ ಕಾಲಾಳುಗಳಾಗಿ ದೇಶದ ತುಂಬಾ ಲಕ್ಷಾಂತರ ಯುವಕರು ತಯಾರಾಗಿದ್ದಾರೆ.

ಅವರಲ್ಲಿನ ಅನೇಕ ಮುಂದಾಳುಗಳಲ್ಲಿ ಒಬ್ಬ ಸೂರ್ಯ. ಆತನಿಗೆ ಇಂದು ಪ್ರವೇಶ ದೊರೆತಿದೆ. ಅದೇ ಪ್ರಕ್ರಿಯೆಯ ಭಾಗವಾಗಿಯೇ ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಕೂಡ ತರಲಾಗಿದೆ. ಒಂದು ವೇಳೆ ಇಂದು ಅನಂತಕುಮಾರ್ ಬದುಕಿದ್ದು, ಅವರನ್ನೂ ಈ ಚುನಾವಣೆಯಲ್ಲಿ ಬದಿಗೆ ಸರಿಸಿದ್ದರೂ ಕೂಡ ಆಶ್ಚರ್ಯವಾಗುತ್ತಿರಲಿಲ್ಲ. ಅದು ಕೂಡ ಆ ಕಾರ್ಯಕ್ರಮದ ಭಾಗವೇ ಆಗಿರುತ್ತಿತ್ತು. ಒಂದೆರಡು ದಿನಗಳ ಪ್ರತಿರೋಧದ ನಂತರ ಪರಿವಾರದೊಳಗೆ ಎಲ್ಲವೂ ತಣ್ಣಗಾಗುತ್ತಿತ್ತು. ಬಹುಶಃ ಈ ಚುನಾವಣೆಯಲ್ಲೇ ಹಾಗಾಗುತ್ತಿರಲಿಲ್ಲ ಎಂದುಕೊಳ್ಳುವುದು ಅವರ ಹತ್ತಿರದವರಿಗೆ ಸಮಾಧಾನ ತರಬಹುದು.

ಬಲಪಂಥೀಯತೆಯನ್ನು ಇಷ್ಟು ಕರಾರುವಾಕ್ಕಾಗಿ ಪಸರಿಸುತ್ತಿರುವ ಈ ಧೀರ್ಘಕಾಲೀನ ಕಾರ್ಯಕ್ರಮಕ್ಕೆ ತತ್ಸಮವಾಗಿ ಎದುರು ನಿಲ್ಲುವಂಥಾ ಮಾನವೀಯ ಕಾರ್ಯಕ್ರಮವೊಂದು ನಮ್ಮ ದೇಶದಲ್ಲಿ ಇನ್ನೂ ಗಟ್ಟಿಗೊಳ್ಳದಿರುವುದು ಶೋಚನೀಯ. ನಮ್ಮ ಯುವಪೀಳಿಗೆಗೆ ಇದನ್ನು ಮನದಟ್ಟು ಮಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಕೇಸರಿ ಹರವು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ಈ ದಾಖಲೆಗಳಿದ್ದಲ್ಲಿ ಮತದಾನ ಮಾಡಬಹುದು

Published

on

ಸುದ್ದಿದಿನ,ಧಾರವಾಡ : ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಏಪ್ರಿಲ್ 23 ರಂದು ಮತದಾನ ನಡೆಯಲಿದೆ. ಚುನಾವಣಾ ಆಯೋಗ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ಪರ್ಯಾಯವಾಗಿ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಏಪ್ರಿಲ್ 23ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆಯವರೆಗೆ ನಡೆಯಲಿರುವ ಮತದಾನದಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದ ಪಕ್ಷದಲ್ಲಿ, ಈ ಕೆಳಕಂಡಂತೆ ಪರ್ಯಾಯ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಬ್ಲಿಕ್ ಕಂಪನಿಗಳು ನೀಡಿರುವ ನೌಕರರ ಫೋಟೋ ಇರುವ ಗುರುತಿನ ಸೇವಾ ಕಾರ್ಡ್, ಸರ್ಕಾರಿ ವಲಯದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಿಂದ ನೀಡಲಾದ ಫೋಟೋ ಇರುವ ಪಾಸ್‌ಬುಕ್, ಆದಾಯ ತೆರಿಗೆ ಗುರುತಿನ ಚೀಟಿ(ಪ್ಯಾನ್ ಕಾರ್ಡ್), ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಇಲಾಖೆ (ಆರ್.ಜಿ.ಐ).ಯಿಂದ ನೀಡಲಾದ ಸ್ಮಾರ್ಟ್ ಕಾರ್ಡ್, ನರೇಗಾ ಜಾಬ್‌ಕಾರ್ಡ್, ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ಜೀವವಿಮೆ ಸ್ಮಾರ್ಟ್ ಕಾರ್ಡ್, ಪೆನ್ಷನ್ ದಾಖಲಾತಿ (ಫೋಟೋ ಇರುವ) ಮಾಜಿ ಸೈನಿಕ ಪಿಂಚಣಿ ಪುಸ್ತಕ ಪಿಂಚಣಿ ಪಾವತಿ ಆದೇಶ, ಮಾಜಿ ಸೈನಿಕರ, ವಿಧವೆ,ಅವಲಂಬಿತರ ದೃಢೀಕರಣ ಪತ್ರ, ವೃದ್ಧಾಪ್ಯ ವಿರಾಮ ವೇತನ ಆದೇಶ, ವಿಧವಾ ವೇತನ ಆದೇಶ, ಸ್ವಾತಂತ್ರ‍್ಯ ಯೋಧರ ಭಾವಚಿತ್ರವಿರುವ ಗುರುತಿನ ಚೀಟಿ, ಎಂ.ಪಿ., ಎಂ.ಎಲ್.ಎ., ಎಂ.ಎಲ್.ಸಿ. ಗಳಿಗೆ ಸರ್ಕಾರದಿಂದ ನೀಡಿರುವ ಅಧಿಕೃತ ಗುರುತಿನ ಚೀಟಿ ಮತ್ತು ಆಧಾರ್‌ಕಾರ್ಡ್ ಇದರಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಮತದಾರರು ತಪ್ಪದೇ ಏಪ್ರಿಲ್ 23 ರಂದು ಮತದಾನ ಮಾಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ)ಗಳು ಸಂಬಂಧಿಸಿದ ಮತಗಟ್ಟೆಯ ಮತದಾರರ ಭಾವಚಿತ್ರವಿರುವ ಮತದಾರ ಚೀಟಿಗಳನ್ನು (ಓಟರ್ ಸ್ಲಿಪ್) ಮತದಾರರ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಓಟರ್ ಸ್ಲಿಪ್‌ಗಳನ್ನು ಬಿ.ಎಲ್.ಓ. ಗಳಿಂದ ಪಡೆದು ಏಪ್ರಿಲ್ 23 ರಂದು ಮತದಾನ ಮಾಡಬಹುದಾಗಿದೆ.

ಆದರೆ ಮತದಾರರ ಗುರುತಿನ ಚೀಟಿ ಅಥವಾ ಪರ್ಯಾಯ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸುವುದು ಕಡ್ಡಾಯವಾಗಿದೆ. ಮತಗಟ್ಟೆಯೊಳಗೆ ಮತದಾರರು ಮೊಬೈಲ್, ಕ್ಯಾಮರಾ, ಲೇಸರ್ ಉಪಕರಣ ಇತ್ಯಾದಿ ಯಾವುದೇ ತರಹದ ಎಲೆಕ್ಟಾçನಿಕ್ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ, ದೂರುಗಳಿಗೆ ಉಚಿತ ಸಹಾಯವಾಣಿ ಸಂಖ್ಯೆ.1950 ನ್ನು ಸಂಪರ್ಕಿಸಬಹುದಾಗಿದೆ. ಮತ್ತು ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾದಲ್ಲಿ ಸಿ.ವಿಜಲ್ ಮೊಬೈಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ರಾಜಕೀಯ

ದಾವಣಗೆರೆ ಮತದಾರ ಹೊಸ ಮುಖ ಬಯಸಿದ್ರೆ ‘ಹೊನ್ನಾಳಿ ಹೊಡೆತ’ ಗ್ಯಾರೆಂಟಿ.. !

Published

on

ಸುದ್ದಿದಿನ,ದಾವಣಗೆರೆ: ನಿರಂತರ ಮೂರು ಸೋಲು, ಮೂರು ಗೆಲುವಿಗೆ ವೇದಿಕೆಯಾದ ದಾವಣಗೆರೆ ಲೋಕಸಭಾ ಕ್ಷೇತ್ರ, ಇದೀಗ ಹೊಸ ಮುಖ ಬಯಸಿದರೆ ರಾಜ್ಯದ ಜನತೆಗೆ ‘ಹೊನ್ನಾಳಿ ಹೊಡೆತ’ ಇನ್ನಷ್ಟು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು, ಇದೀಗ ನಾಲ್ಕನೇ ಬಾರಿಗೆ ಆಯ್ಕೆ ಬಯಸಿರುವ ಜಿಎಂ ಸಿದ್ದೇಶ್ವರ್ ಅವರಿಗೆ ಸಾಂಪ್ರದಾಯಿಕ ಎದುರಾಳಿ ಎಸ್ ಎಸ್ ಮಲ್ಲಿಕಾರ್ಜನ್ ಕಣದಲ್ಲಿ ಇಲ್ಲ. ಕಳೆದ ಮೂರು ಭಾರಿ ಆಯ್ಕೆಯಲ್ಲೂ ಅಲೆಗಳ ಮೇಲೆ ಗೆದ್ದವರು ಎನ್ನುವುದು ಜನಜನಿತ. ಒಮ್ಮೆ ತಂದೆಯ ಸಾವಿನ ಅನುಕಂಪದ ಅಲೆ, ಇನ್ನೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂಪ್ಪ ಅವರ ಅಲೆ ಹಾಗೂ ಮೂರನೇ ಬಾರಿ ಪ್ರಧಾನಿ ಮೋದಿಯವರ ಅಬ್ಬರದ ಅಲೆಯಲ್ಲಿ ಹ್ಯಾಟ್ರಿಕ್ ಮಾಡಿದರು. ಅಲ್ಲದೆ ಕೇಂದ್ರ ಸಚಿವರು ಆಗಿದ್ದರು. ಅಷ್ಟೇ ಬೇಗ ಸ್ಥಾನವನ್ನೂ ಕಳೆದುಕೊಂಡರು ಎನ್ನುವುದು ಈಗ ಇತಿಹಾಸ.‌ ಆದರೆ, ಇದೀಗ ನಾಲ್ಕನೇ ಬಾರಿಯೂ ಜನ ಕೈ ಹಿಡಿಯುವ ಸಾಧ್ಯತೆ ಕಡಿಮೆ ಎನ್ನುವ ಉದ್ದೇಶದಿಂದ ಹಳ್ಳಿ ಸುತ್ತಿದ್ದಾರೆ. ಅಬ್ಬರದ ಪ್ರಚಾರವೂ ಕೈಗೊಂಡಿದ್ದಾರೆ.

ಎಸ್. ಎಸ್. ಮಲ್ಲಿಕಾರ್ಜುನ್ ಕಣದಿಂದ ಹಿಂದಕ್ಕೆ

ಮೂರು ಬಾರಿ ಹ್ಯಾಟ್ರಿಕ್ ಸೋಲಿಂದ ಧೃತಿಗೆಡದೆ ಕೊನೆ ಪ್ರಯತ್ನಕ್ಕೆ ಮುಂದಾದ ಎಸ್ ಎಸ್ ಎಂ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ, ಅವರ ಆಪ್ತ ಎಚ್ ಬಿ ಮಂಜಪ್ಪ ಅವರನ್ನು ಕಣಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇತ್ತ ಸಿದ್ದೇಶ್ವರ್ ನನಗೆ ಪೈಪೋಟಿ ನೀಡುವ ಎದುರಾಳಿ ಇಲ್ಲ, ಎಸ್ ಎಸ್ ಎಂ ಎದುರಾಳಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಊರು ಸುತ್ತಿದ್ದು ನಷ್ಟವಾಯಿತು ಎನ್ನುವಂತ ಸ್ಥಿತಿಗೆ ಬಂದಿದ್ದು ಸುಳ್ಳಲ್ಲ.

ಹೊನ್ನಾಳಿ ಹೊಡೆತ ?

ಅತಿಯಾದ ಆತ್ಮವಿಶ್ವಾಸದಿಂದ ಒಂದು ಹಂತದಲ್ಲಿ ಸುತ್ತಾಟ ಕಡಿಮೆ ಮಾಡಿದ ಬಿಜೆಪಿ ಅಭ್ಯರ್ಥಿಗೆ ಎಚ್ ಬಿ ಮಂಜಪ್ಪ ಸುತ್ತಾಟ, ಅವರ ತಂತ್ರ, ಮೈತ್ರಿ ಧರ್ಮ, ಅಹಿಂದ ಸಂಘಟನೆ ರಾಜಕೀಯ ವಿಶ್ಲೇಷಕರು, ಇಂಟಲಿಜೆನ್ಸ್ ವರದಿಗಳು ಹೊನ್ನಾಳಿ ಹೊಡೆತದ ಸೂಚನೆ ನೀಡಿದ್ದು ಮತ್ತೆ ಪ್ರಚಾರ ಚುರುಕುಗೊಳಿಸುವಂತೆ ಮಾಡಿದೆ.

ಮಂಜಪ್ಪ ಕಡಿಮೆ ಅವಧಿಯಲ್ಲಿ ಜಿಲ್ಲಾದ್ಯಂತ ಪ್ರವಾಸ ಮಾಡುವುದನ್ನೆ ಸವಾಲಾಗಿ ಸ್ವೀಕರಿದ್ದಾರೆ. ಇನ್ನು ಟಿಕೆಟ್ ಘೋಷಣೆ ಆರಂಭದಿಂದಲೇ ಹಣ ಬಲದ ವಿರುದ್ಧ ಬಡವನ ಹೋರಾಟ, ಅಹಿಂದ, ಮೈತ್ರಿ ತಂತ್ರದಡಿ ಅಲ್ಪಸಂಖ್ಯಾತ, ಹಿಂದುಳಿದ ದಲಿತ ಸಮುದಾಯಗಳ ವಿಶ್ವಾಸಕ್ಕೆ ಪಡೆಯುವ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಹರಿಹರದಲ್ಲಿ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್, ಹಾಲಿ ಶಾಸಕ ರಾಮಪ್ಪ ಒಂದೇ ವೇದಿಕೆಯಲ್ಲಿ ಸುತ್ತಾಡುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಜೆಡಿಎಸ್ ಮುಖಂಡ ಕೊಟ್ರೇಶ್, ದಿ. ಎಂಪಿ ರವೀಂದ್ರ ಅಭಿಮಾನಿಗಳು, ಜಗಳೂರಲ್ಲಿ ಎಚ್ ಪಿ ರಾಜೇಶ್, ಮೈತ್ರಿ ಟೀಮ್, ಚನ್ನಗಿರಿಯಲ್ಲಿ ವದ್ದಿಗೆರೆ ರಮೇಶ್, ವಡ್ನಾಳ್ ರಾಜಣ್ಣ, ಮಯಕೊಂಡದಲ್ಲಿ ಬಸವಂತಪ್ಪ, ಹೊನ್ನಾಳಿಯಲ್ಲಿ ಶಾಂತನಗೌಡ್ರು ಹಾಗೂ ಮೈತ್ರಿ ಟೀಮ್ ಹಾಗೂ ಸ್ಥಳೀಯ ಎನ್ನುವ ತಂತ್ರ ಪ್ರಯೋಗ ಮಾಡಲಾಗುತ್ತಿದೆ. ಸಿದ್ದೇಶ್ವರ್ ಹೊರಗಿನವರು, ಮಂಜಪ್ಪ ಸ್ಥಳೀಯ ಎನ್ನುವ ವಿಷಯ ಮುನ್ನೆಲೆಗೆ ಬಂದಿದೆ. ಸಿದ್ದೇಶ್ವರ್ ಗೆ ೧೫ ವರ್ಷ ಅಧಿಕಾರ ಕೊಟ್ಟಿದ್ದೀರಿ. ಈ ಬಾರಿ ಸ್ಥಳೀಯ ಮಂಜಪ್ಪನಿಗೆ ಅವಕಾಶ ಮಾಡಿಕೊಡುವಂತೆ ಒತ್ತಿ ಒತ್ತಿ ಪ್ರಚಾರ ಮಾಡಲಾಗುತ್ತಿದೆ.

ಮಂಜಪ್ಪ ಸಹಿತ ಮೈತ್ರಿ ತಂಡ ತಾಲೂಕುವಾರು ಸುತ್ತಾಟ ಮಾಡುತ್ತಿದ್ದರೆ, ಇತ್ತ ಎಸ್ ಎಸ್ ಎಂ, ಎಸ್ಎಸ್ ದಾವಣಗೆರೆ ನಗರದಲ್ಲಿ ಆಯ್ದ ಗ್ರಾಮಗಳಲ್ಲೂ ರೋಡ್ ಶೋ ಮಾಡುತ್ತಿದ್ದಾರೆ. ಕಾರ್ಮಿಕ ಮುಖಂಡ ಎಚ್ ಕೆ ರಾಮಚಂದ್ರಪ್ಪ, ಜೆಡಿಎಸ್ ಗುಡ್ಡಪ್ಪ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಅಹಿಂದ ಮುಖಂಡರು ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರು ವಾರ್ಡವಾರು, ತಮ್ಮ ಭೂತ್ ಮಟ್ಟದಲ್ಲಿ ಸಕ್ರಿಯವಾಗಿರುವುದು ಎದುರಾಳಿ ನಿದ್ದೆ ಕೆಡಿಸುವಂತಾಗಿದೆ.

ಮತದಾರರೇ ಹಣ ಕೊಟ್ರು…!

ಮಂಜಪ್ಪ ಊರು ಸುತ್ತಲು ವಾಹನ ವ್ಯವಸ್ಥೆ, ಚುನಾವಣಾ ಖರ್ಚಿಗೆ ಮತದಾರರೇ ಹಣ ನೀಡುತ್ತಿರುವುದು ಇನ್ನೊಂದು ವಿಶೇಷವಾಗಿದ್ದು, ಬಿಜೆಪಿಯಲ್ಲಿ ಹಣದ ಕೊರತೆ ಇಲ್ಲ, ಆದರೆ, ದೂರವಿದ್ದ ನಾಯಕರು ಮುನ್ನೆಲೆಗೆ ಬಂದಿದ್ದಾರೆ. ಮಂಜಪ್ಪ ಅಭ್ಯರ್ಥಿ ಆದ ಕೂಡಲೇ ಅದೇ ಸಮಾಜ ಹಾಗೂ ಅಹಿಂದ ಮುಖಂಡರಾದ ಬಿ ಎಂ ಸತೀಶ್, ಜಯಪ್ರಕಾಶ್, ಲಿಂಗರಾಜ್, ಶಿವಕುಮಾರ್ ರಂಥ ಆನೇಕರು ಮುನ್ನೆಲೆಗೆ ಬರುತ್ತಿದ್ದಾರೆ. ಒಟ್ಟಾರೆ ಏಕಮುಖವಾದ ಕಣ ಇದೀಗ ನೇರ ಹಣಾಹಣಿಯಾಗಿದೆ. ಬಿಜೆಪಿ, ಕಾಂಗ್ರೆಸ್ ಯಾರೇ ಗೆದ್ದರೂ ಅಲ್ಪ ಅಂತರವಷ್ಟೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending