Connect with us

ರಾಜಕೀಯ

ಅವರ ಬಲೂನು ಹೆಚ್ಚು ಕಾಲ ಉಳಿಯಲಾರದು

Published

on

ಪ್ರೀತಿಯ ಸ್ನೇಹಿತರೇ

ಈ ಫಲಿತಾಂಶ Writing on the wall ಆಗಿತ್ತು. ಅನಿರೀಕ್ಷಿತವಲ್ಲ. ‘ಹಾಗಿರಲಿಲ್ಲ, ವಿರೋಧ ಪಕ್ಷಗಳು ಸ್ವಲ್ಪ ಎಡವಿದವು, ಪುಲ್ವಾಮಾ ಅಟ್ಯಾಕ್ನಿಂದ ಎಲ್ಲವೂ ಬದಲಾಯಿತು. ಸ್ವಲ್ಪ ಬೇರೆ ರೀತಿ ಮಾಡಿದ್ದರೆ ಸನ್ನಿವೇಶವೇ ಬೇರೆ ರೀತಿ ಇರುತ್ತಿತ್ತು’ ಎಂದು ಯಾರಾದರೂ ಹೇಳಿದರೆ, ನಾವಿನ್ನೂ ಭ್ರಮೆಯಿಂದ ಹೊರಬಂದಿಲ್ಲ ಎಂದಷ್ಟೇ ಅರ್ಥ. ಏಕೆಂದರೆ, ಅವರದ್ದೊಂದು ಪರಿಣಾಮಕಾರಿ ಕಂಪ್ಲೀಟ್ ಪ್ಯಾಕೇಜ್.

ಕೇಂದ್ರೀಕೃತವಾದ ವ್ಯವಸ್ಥಿತ ಪ್ಲಾನಿಂಗ್ ಮತ್ತು ಅಷ್ಟೇ ವ್ಯವಸ್ಥಿತವಾಗಿ ವಿಕೇಂದ್ರೀಕೃತ ಇಂಪ್ಲಿಮೆಂಟೇಷನ್. ಆಗುತ್ತಿರುವುದು ಇಷ್ಟೇ. ನಾವೊಂದು ಹೊಸ ಕಾಲದಲ್ಲಿ ಬದುಕುತ್ತಿದ್ದೇವೆ. ಆ ಹೊಸ ಕಾಲಕ್ಕೆ ಅವರು ಚೆನ್ನಾಗಿ ಹೊಂದಿಕೊಂಡಿದ್ದಾರೆಂದರೆ ತಪ್ಪಾಗುತ್ತದೆ. ಹೊಸ ಕಾಲವನ್ನು ನಿರ್ಮಿಸುವುದರಲ್ಲೂ ಅವರು ಪಾತ್ರ ವಹಿಸುತ್ತಿದ್ದಾರೆ. ಅದನ್ನು ನಿರ್ಮಿಸಲು ಅವರಿಗೇ ಬಿಟ್ಟರೆ ದ್ವೇಷ, ತಾರತಮ್ಯ ಮತ್ತು ಪರಿಸರನಾಶದ ಆಧಾರದ ಮೇಲೆ ಅಸಹನೀಯವಾದುದನ್ನು ಕಟ್ಟಿಬಿಡುತ್ತಾರೆ. ಅಪ್ರಜಾತಾಂತ್ರಿಕತೆಯು ಇನ್ನಷ್ಟು ನಾರ್ಮಲ್ ಆಗುತ್ತದೆ.

ಆದರೆ, ಪ್ರಪಂಚ ಮುಳುಗಿ ಹೋಗಿಲ್ಲ. ಅವರ ಬಲೂನೂ ಹೆಚ್ಚು ಕಾಲ ಉಳಿಯಲಾರದು. ಸರಿಯಾದ ಪರ್ಯಾಯವನ್ನು ಕಟ್ಟಿ ನಿಲ್ಲಿಸಿದರೆ ಮಾತ್ರ ಆ ಬಲೂನು ಒಡೆದು ಹೋಗುತ್ತದೆ. ಪರ್ಯಾಯವೆಂಬುದು ಕೇವಲ ಪರ್ಯಾಯ ರಾಜಕೀಯ ಪಕ್ಷವಲ್ಲ, ‘ಸಾಂಪ್ರದಾಯಿಕ ರೀತಿಯ’ ಚಳವಳಿಯೂ ಅಲ್ಲ.
ಹೊಸ ಕಾಲದ ಸಂಸ್ಕೃತಿ, ಮೌಲ್ಯ, ಆರ್ಥಿಕತೆ ಮತ್ತು ರಾಜಕಾರಣವನ್ನು ನಿರ್ಮಿಸುವ ಇನಿಷಿಯೇಟಿವ್ ನಾವು ತೆಗೆದುಕೊಳ್ಳಬೇಕು. ಪ್ರತಿಯೊಂದು ಆಯಾಮದಲ್ಲೂ ಹೊಸತು ಮತ್ತು ಒಳಿತು ಇರುವಂತೆ ಮಾಡಬೇಕು. ಇದರ ಬಗ್ಗೆ ನನಗಿರುವ ವಿಶ್ವಾಸ ಇದು – ಆ ಕೆಲಸಕ್ಕೆ ಇಳಿದಾಗ, ಅದನ್ನು ನಾವೆಷ್ಟು ಸೊಗಸಾಗಿ ಮಾಡಬಲ್ಲವೆಂಬುದು ನಮಗೇ ಆಶ್ಚರ್ಯ ತರಿಸಲಿದೆ.

ಹಿಂದಿನೆಲ್ಲಾ ಅನುಭವಗಳು, ದರ್ಶನಗಳು, ಆಂದೋಲನದ ಒಳ್ಳೆಯ ಮತ್ತು ಸೋಲಿನ ಪಾಠಗಳು ನಮ್ಮ ಜೊತೆಗಿದ್ದೇ ಇವೆ. ಅವು ಅಡ್ಡಿಯಾಗದಂತಷ್ಟೇ ನೋಡಿಕೊಳ್ಳಬೇಕು ಅಷ್ಟೇ. ಇವೆಲ್ಲದರೊಂದಿಗೆ ನಾವು ಶುರು ಮಾಡಿಯೇ ಬಿಟ್ಟರೆ, ಬಹಳ ಬೇಗ – ಅಂದರೆ 8ರಿಂದ 10 ವರ್ಷಗಳಲ್ಲಿ – ನಾವು ಹೊಸ ಭಾರತವನ್ನು ಕಟ್ಟುವಲ್ಲಿ ಮಹತ್ವದ ತಿರುವಿಗೆ ಕಾರಣವಾಗುತ್ತೇವೆ. ಇದರಲ್ಲಿ ಸಂಶಯವೇ ಇಲ್ಲ. ಹೇಗೆಂಬುದರ ಚರ್ಚೆ ಶುರು ಮಾಡಿದರೆ, ನೀವೆಲ್ಲರೂ ಬಹಳಷ್ಟನ್ನು ಅದಕ್ಕೆ ಸೇರಿಸುತ್ತೀರೆಂಬ ವಿಶ್ವಾಸ ನನಗಿದೆ.

ಕಡೆಯ ಮಾತು ಓದುವುದು ನಿಮಗೆ ಕಷ್ಟವಾಗಬಹುದು. ಆದರೆ, ಅದರಿಂದ ಒಳ್ಳೆಯದಾಗುತ್ತದೆ. ನರೇಂದ್ರ ಮೋದಿ, ಅಮಿತ್ಷಾ ಮತ್ತು ಅವರ ಪರಿವಾರಕ್ಕೆ ಅಭಿನಂದನೆಗಳನ್ನು ಹೇಳುವುದರ ಮೂಲಕ ನಮ್ಮ ಕೆಲಸವನ್ನು ಆರಂಭಿಸೋಣ. ಹೊಸ ಭಾರತ ನಿರ್ಮಾಣದಲ್ಲಿ ಗೆಲ್ಲುವ ಸವಾಲು ಸ್ವೀಕರಿಸಿ ಕಣಕ್ಕಿಳಿಯೋಣ.

To all ‘Minority friends’, We are all together in this fight. Even now we are majority. Let’s join hands. We belong to this nation and this nation belongs to us. And we shall build a new India.

ವಾಸು ಹೆಚ್.ವಿ
ಕರ್ನಾಟಕ ಜನಶಕ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆರ್ ಎಸ್ ಎಸ್ ಗೇ ತಿರುಗೇಟು ಕೊಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್ ! : ಕೇರಳ ಮಾದರಿ ಅಂದ ಸುರೇಶ್ ಕುಮಾರ್ ರಾಜೀನಾಮೆಗೆ ಪಕ್ಷ-ಸಂಘಟನೆಯಲ್ಲಿ ಒತ್ತಾಯ ?

Published

on

  • ಅರುಣ್ ಕುಮಾರ್, ಪತ್ರಕರ್ತರು

ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೂ, ಆರ್ ಎಸ್ಎಸ್, ಬಿಜೆಪಿಗೂ ಶೀತಲ ಸಮರ ನಡೆಯುತ್ತಿದ್ದು ಯಾವಾಗ ಬೇಕಾದರೂ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬಹುದು ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಸುರೇಶ್ ಕುಮಾರ್ ರವರು ಕೇರಳ ಸರ್ಕಾರವನ್ನು ಮಾದರಿಯಾಗಿ ತೆಗೆದುಕೊಂಡಿರೋದು ! ಇದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ (ಸಂತೋಷ್ ಜೀ)ಯವರನ್ನು ಕೆರಳಿಸಿದೆ. ಆರ್ ಎಸ್ ಎಸ್, ಹಿಂದೂ ಸಂಘಟನೆಗಳು, ಬಿಜೆಪಿ ಇಡೀ ದೇಶದಾದ್ಯಂತ ಕೇರಳ ವಿರೋಧಿ ನಿಲುವನ್ನು ತಳೆದಿರುವಾಗ ಸುರೇಶ್ ಕುಮಾರ್ ಮಾತ್ರ ಕೇರಳ ಶಿಕ್ಷಣ ವ್ಯವಸ್ಥೆಯನ್ನು ಹೊಗಳಿರೋದು ಅವರಿಗೆ ಕಂಟಕವಾಗಿದೆ.

ಕೇರಳದ ಮಾದರಿ ಎಂದು ಜಗತ್ತಿನಲ್ಲಿಯೇ ಕೇರಳವನ್ನು ಹೊಗಳುತ್ತಿರುವಾಗ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮಾತ್ರ ಕೇರಳ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಎಂದು ಸಾರುತ್ತಲೇ ಬರುತ್ತಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಂತೂ ಬಹಿರಂಗವಾಗಿ ಕೇರಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಬಿ ಎಲ್ ಸಂತೋಷ್ ಗೆ ಮುಜುಗರ ಆಗೋ ರೀತಿಯಲ್ಲಿ ಸುರೇಶ್ ಕುಮಾರ್ ಕೇರಳದ ಶಿಕ್ಷಣ ವ್ಯವಸ್ಥೆಯನ್ನು ಫೇಸ್ ಬುಕ್ ನಲ್ಲಿ ಹೊಗಳಿದ್ದಾರೆ. ಇದು ಸಂತೋಷ್ ಜೀ ಆಕ್ರೋಶಕ್ಕೆ ಕಾರಣವಾಗಿದ್ದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಫೇಸ್‌ಬುಕ್‌ ಪೋಸ್ಟ್

ಸಂಘಪರಿವಾರಕ್ಕೂ ಕಮ್ಯೂನಿಷ್ಟರಿಗೂ ನೇರ ಯುದ್ದವೇನಾದರೂ ಇದ್ದರೆ ಅದು ಕೇರಳದಲ್ಲಿ. ಮಚ್ಚು ಕತ್ತಿಗಳು ಮಾತ್ರವಲ್ಲದೇ ಬಾಂಬ್ ಗಳ ಮೂಲಕವೂ ಎರಡೂ ಸಂಘಟನೆಗಳು ಪರಸ್ಪರ ದಾಳಿ ಮಾಡುತ್ತದೆ. ನೂರಾರು ಆರ್ ಎಸ್ ಎಸ್ ಕಾರ್ಯಕರ್ತರನ್ನು ಕೇರಳದಲ್ಲಿ ಕಳೆದುಕೊಳ್ಳಲಾಗಿದೆ. ಪಿನರಾಯಿ ವಿಜಯನ್ ಸರ್ಕಾರ ಸಂಘಪರಿವಾರದ ಮುಖಂಡರನ್ನು ಹತ್ಯೆ ಮಾಡುತ್ತಿದೆ ಎಂದು ನಿರಂತರ ಅಭಿಯಾನವನ್ನು ಆರ್ ಎಸ್ ಎಸ್ ಮಾಡುತ್ತಿದೆ.

ಇದೀಗ ಅದೇ ಕೇರಳವನ್ನು ಕರ್ನಾಟಕದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೊಗಳಿದ್ದು ಕೇರಳದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. “ನಾವಿಲ್ಲಿ ಸಂಘಟನೆಗಾಗಿ ಪ್ರಾಣ ಬಿಡುತ್ತಿದ್ದರೆ ಅಧಿಕಾರ ಪಡೆದುಕೊಂಡ ಬಿಜೆಪಿಗ ಸುರೇಶ್ ಕುಮಾರ್ ನಮ್ಮ ಶತ್ರುಗಳ ಜೊತೆ ನಿಂತಿದ್ದಾರೆ” ಎಂದು ಹಿಂದೂ ಸಂಘಟನೆಗಳು ಪ್ರತಿಕ್ರಿಯಿಸಿದ್ದರೆ, ಈಗ ಕರ್ನಾಟಕದ ಸಚಿವರೇ ಕೇರಳ ಮಾದರಿ ಎಂದಿರೋದ್ರಿಂದ ಆರ್ ಎಸ್ ಎಸ್, ಸಂತೋಷ್ ಜೀ ಏನಂತಾರೆ? ಎಂದು ಎಡಪಂಥೀಯರು ಟ್ವೀಟ್ ಅಭಿಯಾನ ಶುರು ಮಾಡಿದ್ದಾರೆ.

ಸುರೇಶ್ ಕುಮಾರ್ ರವರು ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿ ಇಡೀ ದೇಶಕ್ಕೆ ಮಾದರಿ ಮಾಡಬೇಕಿತ್ತು. ಅದನ್ನು ಮಾಡಲಾಗದೇ ಇನ್ನೊಂದು ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಹೊಗಳೋ ಅವಶ್ಯಕತೆ ಏನಿದೆ ? ಬೇರೆ ರಾಜ್ಯಗಳಿಗಿಂತ ಉತ್ತಮ ವ್ಯವಸ್ಥೆಯನ್ನು ನೀವು ಮಾಡಬೇಕು.‌ ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಬಿಜೆಪಿಗರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಮುಖ್ಯಮಂತ್ರಿಗಳು, ಹಿಂದೂ ಸಂಘಟನೆಗಳು, ಆರ್ ಎಸ್ ಎಸ್ ಆಕ್ರೋಶಕ್ಕೆ ತುತ್ತಾಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆಗೆ ಒತ್ತಡಗಳು ಜಾಸ್ತಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ : ಹೊಸ ವಿದ್ಯುತ್ ಮಸೂದೆ ಖಂಡಿಸಿ ರೈತರಿಂದ ಸಚಿವರಿಗೆ ಮುತ್ತಿಗೆ

Published

on

ಸುದ್ದಿದಿನ,ದಾವಣಗೆರೆ : ಕೋವಿಡ್ ಸಂದರ್ಭ ದುರುಪಯೋಗ ಮಾಡಿಕೊಂಡು ಕೋವಿಡ್ 19 ಬಿಕ್ಕಟ್ಟಿನ ಮಧ್ಯೆ ಕೇಂದ್ರವು ಹೊಸ ವಿದ್ಯುತ್ ಮಸೂದೆಯನ್ನ ಜಾರಿಗೊಳಿಸುತ್ತಿರುವುದನ್ನ ಖಂಡಿಸಿ ಕರ್ನಾಟಕ ಕಿಸಾನ್ ಕಾಂಗ್ರೆಸ್ ಮಂಗಳವಾರ ಸಚಿವ ಭೈರತಿ ಬಸವರಾಜ್ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ದಾವಣಗೆರೆ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ದಾವಣಗೆರೆ ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆ ಸಚಿವರಿಗೆ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ ವಿದ್ಯುತ್ ಉದ್ಯಮಿ ಗೌತಮ್ ಅದಾನಿ ಇತರರಿಗೆ ಲಾಬಿ ಮಾಡಿಕೊಳ್ಳಲು ಹುನ್ನಾರ ಇದರಲ್ಲಿದೆ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಆರೋಪಿಸಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಸಚಿವರ ಸಭೆಗೆ ಕಾರ್ಪೊರೇಟರ್ ಗಿಲ್ಲ ಆಹ್ವಾನ : ಸಚಿವರಿಗೆ ತರಾಟೆ

Published

on

ಸುದ್ದಿದಿನ,ದಾವಣಗೆರೆ : ನಗರಾಭಿವೃದ್ದಿ ಸಚಿವರ ಸಭೆಗೆ ಕಾರ್ಪೋರೇಟರ್ ಗಿಲ್ಲ ಆಹ್ವಾನ ಇಲ್ಲವೆಂದು ಸಚಿವರಿಗೆ ತರಾಟೆ ತಗೆದುಕೊಂಡ ಘಟನೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ನಡೆದಿದೆ.

ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧ್ಯಕ್ಷತೆಯಲ್ಲಿ ಪಾಲಿಕೆಯಲ್ಲಿ ಸಭೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿತ್ತು. ಈ ವೇಳೆ
ವಿರೋಧ ಪಕ್ಷ, ಆಡಳಿತ ಪಕ್ಷದವರಿಗೂ ಆಹ್ವಾನ ನೀಡಿರಲಿಲ್ಲ, ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ಸಚಿವರಿಗೆ ತರಾಟೆ ತಗೆದುಕೊಂಡಿದ್ದಾರೆ.

ನಗರದಲ್ಲಿ ಕೊರೊನಾ ಆರ್ಭಟ ಹಿನ್ನಲೆ ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದ ಸಭೆಗೆ ಆಹ್ವಾ ನೀಡದೆ ಇದ್ದುದ್ದಕ್ಕೆ ತರಾಟೆ ತಗೆಸುಕೊಂಡು ಪಾಲಿಕೆ ಮುಂದೆ ಪ್ರತಿಭಟನೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 hours ago

‘ಅಲಾಯನ್ಸ್ ಏರ್’ ನಿಂದ ವಿಮಾನಯಾನ ಸಂಚಾರ ಪುನರಾರಂಭ

ಸುದ್ದಿದಿನ,ಕಲಬುರಗಿ: ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ತನ್ನ ವಿಮಾನ ಸಂಚಾರ ಸೇವೆ ನಿಲ್ಲಿಸಿದ ಅಲಾಯನ್ಸ್ ಏರ್ ವಿಮಾನ ಸಂಸ್ಥೆಯು ಲಾಕ್‍ಡೌನ್ 4.0 ಸಡಿಲಿಕೆಯ ಕಾರಣ...

ದಿನದ ಸುದ್ದಿ2 hours ago

ಬುದ್ಧ ಹುಟ್ಟಿದ ನಾಡು ಭಾರತ ಅರ್ಥಾತ್ ಜಂಬೂ ದ್ವೀಪ

ಶಿವಸ್ವಾಮಿ ಬೌದ್ಧ ಉಪಾಸಕರು “India is the Land of Buddha ” “Buddhism is Future religion in the world” ಬೌದ್ಧ ಧಮ್ಮವು ವಿಶ್ವದ...

ದಿನದ ಸುದ್ದಿ2 hours ago

ದಾವಣಗೆರೆ | ವಿಶ್ವ ತಂಬಾಕುರಹಿತ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆ

ಸುದ್ದಿದಿನ,ದಾವಣಗೆರೆ: ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಯೋಜಿಸಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತದೆ. ಈ ವರ್ಷ...

ದಿನದ ಸುದ್ದಿ2 hours ago

ನಿತ್ಯ ಭವಿಷ್ಯ | ಒಂದೇ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು : ಕರೆಮಾಡಿ

ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಾದ ವಿದ್ಯೆ,...

ದಿನದ ಸುದ್ದಿ2 hours ago

ಈ ಭೂಮಿಯ ನೆಲಮಾಳಿಗೆಯಲ್ಲಿ ಬುದ್ಧನಿದ್ದಾನೆ..!

ರಾಣಪ್ಪ ಡಿ ಪಾಳಾ ದೇವಾಲಯದ ಕೆಳಗೆ ಚಿನ್ನವನ್ನು, ಬೌದ್ಧ ನಾಗರಿಕತೆಯನ್ನು ನೆಲದ ಕೆಳಗೆ ಮರೆಮಾಡಲಾಗಿದೆ..! ಬೌದ್ಧ ವಿಹಾರಗಳಲ್ಲಿ ಚಿನ್ನ ಎಂದಿಗೂ ಸಿಗುವುದಿಲ್ಲ. ಪ್ರಾರ್ಥನಾ ಸ್ಥಳಗಳಲ್ಲಿ ಚಿನ್ನ ಮತ್ತು...

ದಿನದ ಸುದ್ದಿ3 hours ago

ಮಹಾರಾಷ್ಟ್ರದಲ್ಲಿ ಬೀದಿವ್ಯಾಪಾರ ಮಾಡುತ್ತಿದ್ದ ಹಾವೇರಿಯ ನಾಲ್ವರಿಗೆ ಕೊರೋನಾ ಸೋಂಕು

ಸುದ್ದಿದಿನ,ಹಾವೇರಿ: ಮಾಹಾರಾಷ್ಟ್ರ ರಾಜ್ಯದಿಂದ ಸೇವಾ ಸಿಂಧು ಪಾಸ್ ಪಡೆದು ಹಾವೇರಿ ಜಿಲ್ಲೆಗೆ ಆಗಮಿಸಿದ್ದ ತುಮ್ಮಿನಕಟ್ಟೆ ಮೂಲದ ನಾಲ್ವರಿಗೆ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ...

ದಿನದ ಸುದ್ದಿ3 hours ago

ದಾವಣಗೆರೆ | ಆಸ್ತಿ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ಲಾಕ್‍ಡೌನ್ ಅವಧಿ ವಿಸ್ತರಣೆಗೊಂಡಿರುವ ಹಿನ್ನೆಲೆ ಸರ್ಕಾರದ ಆದೇಶದಂತೆ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮೇಲಿನ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಪಾವತಿಸಲು ಶೇ.5 ರ ರಿಯಾಯಿತಿಯ...

ದಿನದ ಸುದ್ದಿ3 hours ago

ಯಡವನಾಡು ಬಳಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆ

ಸುದ್ದಿದಿನ,ಮಡಿಕೇರಿ : ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಬಳಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆಯಾಗಿದೆ. ಯಡವನಾಡುವಿನ ಅರಣ್ಯದಲ್ಲಿ ಸ್ಥಳ ಪರಿಶೀಲನೆಗೆ ತೆರಳಿದಾಗ ಕ್ರಿ.ಶ. 15-16ನೇ ಶತಮಾನಕ್ಕೆ ಸೇರಿದ...

ದಿನದ ಸುದ್ದಿ3 hours ago

ದಾವಣಗೆರೆ | ರಾತ್ರಿ 12ರ ವರೆಗೆ ‘ಅನ್‍ಲೈನ್‍ ಫುಡ್ ಪಾರ್ಸಲ್‍’ಗೆ ಅವಕಾಶ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಜ್ಯೋಮಾಟೋ, (zomato ) ಸ್ವಿಗ್ಗಿ, (swiggy), ಈ ರೀತಿಯ ಅನ್‍ಲೈನ್ ಫುಡ್ ಪಾರ್ಸಲ್ ವ್ಯವಸ್ಥೆಯನ್ನು ರಾತ್ರಿ 12 ರವರೆಗೆ ಮಾಡಲು ಅವಕಾಶವಿದೆ ಸಂಸ್ಥೆಯವರು...

ದಿನದ ಸುದ್ದಿ3 hours ago

ಹೆಚ್ಚು ಶುಲ್ಕ ವಿಧಿಸಿದರೆ ‘ಕೇಬಲ್ ಟಿವಿ’ ವಿರುದ್ಧ ದೂರು ನೀಡಿ

ಸುದ್ದಿದಿನ,ಕಲಬುರಗಿ: ಕೇಬಲ್ ಟೆಲಿವಿಷನ್ ನೆಟ್‍ವರ್ಕ್ (ರೆಗ್ಯುಲೇಷನ್) ಅಧಿನಿಯಮ-1995ರ ವ್ಯಾಪ್ತಿಗೊಳಪಡುವ ಕಾರ್ಯಕ್ರಮ ಸಂಕೇತ ಹಾಗೂ ಜಾಹೀರಾತು ಸಂಕೇತದ ಉಲ್ಲಂಘನಾ ಪ್ರಕರಣಗಳು, ಅಕ್ಷೇಪಾರ್ಹ ಅಂಶಗಳು, ಕೇಬಲ್ ಟಿ.ವಿ.ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ...

Trending