Connect with us

ರಾಜಕೀಯ

ಆಪರೇಷನ್ ‘ಹಸ್ತ’..?

Published

on

ಸುದ್ದಿದಿನ, ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಕುದುರೆ ವ್ಯಾಪಾರ ನಡೆಯುವ ಲಕ್ಷಣಗಳು ಕಾಣುತ್ತಿದ್ದು, ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸಲು ತೀರ್ಮಾನಿಸಿದೆ.

ಇದಕ್ಕಾಗಿ ‘ಸೂಸೈಡ್ ಸ್ಕಾಡ್‌ ಅನ್ನು ಆರಂಭಿಸಿರುವ ಕಾಂಗ್ರೆಸ್, ಕಮಲ ಪಾಳಯದ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯಲು ರಣತಂತ್ರ ಹೆಣೆದಿದೆ. ಸದ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಈ ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ಈ ಆಪರೇಷನ್ ಹಸ್ತಕ್ಕೆ ಜೆಡಿಎಸ್ ಸಹಕಾರ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಉತ್ತರ ಕರ್ನಾಟಕದ ಬಿಜೆಪಿ ಶಾಸಕರಿಗೆ ಬಲಿ ಬೀಸಿದ್ದು, ಅದಲ್ಲಿ ಹೊಳಲ್ಕೆರೆ ಶಾಸಕ ಗೂಳಿಹಟ್ಟಿ ಶೇಖರ್, ಜಗಳೂರು ಶಾಸಕ ರಾಮಚಂದ್ರಪ್ಪ ಸೇರಿ ಹಲವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಳ್ಳಲು ಸಚಿವ ಡಿ.ಕೆ. ಶಿವಕುಮಾರ್ ತಂತ್ರ ಹೆಣೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ಸಚಿವ ಡಿ.ಕೆ. ಶಿವಕುಮಾರ್, ಬಿಜೆಪಿ ಶಾಸಕರೇ ನಮ್ಮ ವಶದಲ್ಲಿದ್ದಾರೆ. ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟರೆ ಏನು ಮಾಡಬೇಕೆಂಬುದು ನಮಗೆ ಗೊತ್ತು ಎಂದು ಹೇಳಿರುವುದು ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಸಿಎಂ ಕುಮಾರಸ್ವಾಮಿ ಸಹ ನಮಗೆ ಜತೆಗೆ ಬಿಜೆಪಿಯ 6 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ‘ಸೂಸೈಡ್ ಸ್ಕ್ವಾಡ್ ಆಪರೇಷನ್ ಹಸ್ತ ಆರಂಭಿಸಿರುವುದು ಸ್ಪಷ್ಟವಾಗಿದೆ.

ರಾಜಕೀಯ

ದೇವರಾಜ್ ಅರಸು ‘ಕನಸು ನನಸು ಮಾಡಿದರು ಸಿದ್ದರಾಮಯ್ಯ’ : ದಿನೇಶ್ ಗುಂಡೂರಾವ್

Published

on

ಸುದ್ದಿದಿನ ಡೆಸ್ಕ್ : ಅರಸು ಅವರ ಅನೇಕ ಕನಸುಗಳನ್ನು ನನಸು ಮಾಡಿದವರು ಮಾಜಿ ಸಿಎಂ‌ ಸಿದ್ದರಾಮಯ್ಯ. ಇಂತಹ ಸಂದರ್ಭದಲ್ಲಿ‌ ನಾವು ಸುಳ್ಳು ವದಂತಿ, ಪ್ರಚಾರಕ್ಕೆ ಓಳಗಾಗಬಾರದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿಯವರು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ.‌ಬೋಪೋರ್ಸ್ ಹಗರಣದ ಬಗ್ಗೆ ಮಾತಾಡ್ತಿದ್ರು ಆದ್ರೆ ಈಗ ತಮ್ಮ ರೆಫೆಲ್ ಹಗರಣದ ಬಗ್ಗೆ ಏನು ಮಾತಾಡಲ್ಲ.ಸುಪ್ರೀಂ ಕೋರ್ಟ್ ಇದೆಲ್ಲವನ್ನೂ ಗಮನಿಸುತ್ತಿದೆ. ಮೋದಿ ಪ್ರಧಾನಿ ಆದಮೇಲೆ ಏನೋ ಕೆಲಸ ಮಾಡ್ತಾರೆ ಅಂತಾ ನಾವು ಅಂದುಕೊಂಡಿದ್ವಿ, ಆದ್ರೆ ಆಡಳಿತ ನೋಡಿದ್ರೆ ಏನು ಮಾಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸಿಬಿಐ ಅಧಿಕಾರಿಗಳನ್ನು ರಾತ್ರೋರಾತ್ರಿ ಟ್ರಾನ್ಸ್ ಫರ್ ಮಾಡ್ತಾರೆ ಅಂದ್ರೆ ಏನು ಅರ್ಥ?
ಸ್ವಾಯತ್ತ ಸಂಸ್ಥೆಗಳನ್ನು ತಮಗೆ ಇಷ್ಟ ಬಂದಂತೆ ಬಳಸಿಕೊಳ್ಳುತ್ತಾರೆ.ಮೋದಿ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿರುವ ಮೋದಿ ಫ್ಯಾಸಿಸ್ಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಯಾವೊಂದು ಜನಪರ ಕೆಲಸ ಮಾಡಲಿಲ್ಲ, ಆದರೆ ಬರೀ ಹೆಡ್ ಲೈನ್ ಮಾತ್ರ ಇದೆ. ಮೋದಿ ಅವರನ್ನು ನಾವು ಮುಂದಿನ ದಿನಗಳಲ್ಲಿ ತಗಿಯದೇ ಹೋದ್ರೆ ಈ ದೇಶ ಉಳಿಯಲ್ಲ.ಈ ದೇಶ ಉಳಿಸಲು ನಾವೆಲ್ಲ ಒಂದಾಗಬೇಕು. ಕೇಂದ್ರ ಸರ್ಕಾರವು ಮಾಧ್ಯಮ, ಕೋರ್ಟ್, ಅಧಿಕಾರಿಗಳನ್ನು ಕಂಟ್ರೋಲ್ ಮಾಡ್ತಿದ್ದಾರೆ ಎಂದು ದೂರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ರಾಜಕೀಯ

ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ : ಬಿಎಸ್‌ವೈ

Published

on

ಸುದ್ದಿದಿನ, ಬೆಂಗಳೂರು : ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ರೈತ ಮಹಿಳೆ ಅವಹೇಳನಕಾರಿ ಹೇಳಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ‌ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕು ಘಟಕಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಇಂದು ಸಂಜೆ ಕೋರ್ ಕಮಿಟಿ ಸಭೆ ನಡೆಸ್ತೇವೆ.ಬೆಳಗಾವಿ ಅಧಿವೇಶನದಲ್ಲಿ ಒಳಗೆ, ಹೊರಗೆ ರೈತರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಬಿಎಸ್‌ವೈ ಹೇಳಿದ್ದಾರೆ.

ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ 200 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ‌ಮಾಡ್ಕೊಂಡಿದ್ದಾರೆ.ಮಾತೆತ್ತಿದ್ರೇ ಸಾಲ ಮನ್ನ ಸಾಲ ಮನ್ನ ಅಂತೀರಾ,ಎಷ್ಟು ಸಾಲ ಮನ್ನ ಮಾಡಿದ್ದೀರಾ? ಇದರಿಂದ ಸಹಕಾರ ಕ್ಷೇತ್ರ ದಿವಾಳಿಯಾಗಿದೆ ಎಂದು ಅವರು ಕೆಂಡಾ ಮಂಡಲವಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ರಾಜಕೀಯ

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ‘ಪುಷ್ಪಾ ಅಮರನಾಥ್ ಅಧಿಕಾರ ಸ್ವೀಕಾರ’

Published

on

ಸುದ್ದಿದಿನ ಡೆಸ್ಕ್ : ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪುಷ್ಪಾ ಅಮರನಾಥ್ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗಣ್ಯಾತಿಗಣ್ಯರಾದ
ಕಾಂಗ್ರೆಸ್ ಸಂಸದೀಯ ನಾಯಕಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ದಿನೇಶ್,‌ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ,ಸಂಸದ ಧೃವನಾರಾಯಣ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಆಂಜನೇಯ,‌ವೀರಣ್ಣ ಮತ್ತೀಕಟ್ಟಿ,ಶಾಸಕರು,ಎಂಎಲ್ಸಿಗಳು ಉಪಸ್ಥಿತರಿದ್ದರು.

Continue Reading
Advertisement

Trending