Connect with us

ಲೈಫ್ ಸ್ಟೈಲ್

ಬಣ್ಣ ಬಣ್ಣದ ಮದರಂಗಿಯ ಮಾಯಾಲೋಕದಲ್ಲಿ..!

Published

on

ಮನ ಮೋಹಕ ಈ ‘ ಶ್ವೇತ ‘ಮದರಂಗಿ

ಮೆಹೆಂದಿ ಮೋಹ ಯಾವ ಹೆಣ್ಣಿಗೆ ತಾನೇ ಇಲ್ಲ. ಪ್ರತಿ ಹೆಣ್ಣು ತನ್ನ ಕೈಗಳ ಮೇಲೆ ಮದರಂಗಿ ಯ ರಂಗು ಬಿಡಿಸಲು ಉತ್ಸುಕಳಾಗಿರುತ್ತಾಳೆ. ಹಿಂದಿನಿಂದಲೇ ಮದರಂಗಿ ಭಾರತೀಯ ಸಂಸ್ಕೃತಿ ಭಾಗವಾಗಿ ಹೋಗಿದೆ. ಸೌಂದರ್ಯ ದ ಜೊತೆಗೆ ಆರೋಗ್ಯ ದಾಯಕವೂ ಆಗಿರುವ ಮೆಹೆಂದಿ ಎಲ್ಲಾ ವಯೋಮಾನದವರಿಗೂ ಪ್ರೀತಿಪಾತ್ರದ್ಗಾಗಿದೆ.

ಹಬ್ಬ -ಮದುವೆ-ನಾಮಕರಣ ದಂತಹ ವಿಶೇಷ ಸಮಾರಂಭದಲ್ಲಿ, ಶುಭ ಸಂಕೇತ  ಮೆಹಂದಿ ಅತ್ಯಗತ್ಯ. ಮದುವೆ ಯ ಹಲವಾರು ಪ್ರಮುಖ ಶಾಸ್ತ್ರ ಗಳಲ್ಲಿ ಮೆಹಂದಿ ಶಾಸ್ತ್ರವೂ  ಒಂದು.

ಹಲವಾರೂ ವಿನ್ಯಾಸ ದ ಮೆಹಂದಿ ಡಿಸೈನ್ಗಳು ರೂಪಗೊಂಡಿದ್ದು, ಪ್ರತಿ ಸಮಾರಂಭಕ್ಕೆ ಹೊಂದುವ ವಿನ್ಯಾಸ ಗಳು ಕೈಗಳನ್ನು ಅಲಂಕರಿಸುತ್ತವೆ. ಬ್ರೈಡಲ್, ಅರೇಬಿಕ್, ಆಫ್ರಿಕನ್, ಟ್ರೈಬಲ್…ಹೀಗೆ ಹಲವಾರೂ ವಿನ್ಯಾಸ ದ ಮೆಹಂದಿ ಡಿಸೈನ್ ಲಭ್ಯವಿದೆ.

ವೈರಲ್ ಆಯ್ತು ವೈಟ್ ಮೆಹಂದಿ ಟ್ರೆಂಡ್!

ಸಾಮಾನ್ಯ ವಾಗಿ ಮೆಹಂದಿ ಅಂದ ಕೂಡಲೇ ಕಣ್ಣು ಮುಂದೆ ಬರುವುದು ಫಾಡವಾದ ಕೆಂಪು ಬಣ್ಣ. ಕೆಲವೊಮ್ಮೆ ಬಣ್ಣ ಸರಿಯಾಗಿ ಬರದಿದ್ದಾಗ ಕೇಸರಿ ಬಣ್ಗಕ್ಕೆ ತೃಪ್ತ ರಾಗಬೇಕಾಗುತ್ತದೆ. ಆದರೆ ಇದ್ದೆಲ್ಲಕ್ಕೂ ವಿಭಿನ್ನ ಎಂಬಂತೆ “ವೈಟ್ ಮೆಹಂದಿ” ಸದ್ದು ಮಾಡುತ್ತಿದೆ. ಇದೇನಿದು “ವೈಟ್ ಮೆಹಂದಿ “ಎನ್ನುತ್ತೀರಾ… ಹೌದು, ಈಗ ಶ್ವೇತ ಮೆಹಂದಿ ಕಾಲ!

ಜನ ತಮ್ಮ ಕೈಗಳ ಮೇಲೆ ಈ ಬಿಳಿ ಮೆಹಂದಿ ಡಿಸೈನ್ ಬಿಡಿಸಿ ಸಂಭ್ರಮಿಸುತ್ತಿದ್ದಾರೆ. ಕೇವಲ ಭಾರತದಲ್ಲಿ ಮಾತ್ರ ಅಲ್ಲ, ಇಡೀ ವಿಶ್ವದಲ್ಲಿ ಸದ್ದು ಮಾಡುತ್ತಿದೆ ‘ವೈಟ್ ಮೆಹಂದಿ’. ವೆಡ್ಡಿಂಗ್ ಫೋಟೋ ಶೂಟ್, ಫ್ಯಾಷನ್ ಶೋ, ರಾಂಪ್ ಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

ಗ್ಲಾಮರಸ್  ಗೋಲ್ಡನ್ ಮೆಹಂದಿ!

ಈ ಗ್ಲಾಮರಸ್ ಗೋಲ್ಡನ್ ಮೆಹಂದಿಯನ್ನು    ಮದುವೆಯ  ಮೆಹಂದಿ ಶಾಸ್ತ್ರ ದಲ್ಲಿ ..ಮದುಮಗಳ ಬ್ರೈಡಲ್ ಮೆಹಂದಿ ಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಫೋಟೋ ಶೂಟ್ ಗೆ ಹೇಳಿಮಾಡಿಸಿದಂತಿದೆ ಗೋಲ್ಡನ್ ಮೆಹಂದಿ ಕಮಾಲ್.

ಕುಂದನ್ ಮೆಹಂದಿ ಕಮಾಲ್ !

ಈಗಂತೂ ಬ್ರೈಡಲ್ ಮೆಹಂದಿ ಎಂದ ಕೂಡಲೇ ಹಲವಾರು ಡಿಸೈನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳಲ್ಲಿ ಕುಂದನ್ ಮೆಹಂದಿ ಡಿಸೈನ್ ಕೂಡಾ ಇತ್ತೀಚೆಗೆ ಗಮನ ಸೆಳೆದಿದೆ. ಹಿಂದಿನ ಸಾಂಪ್ರದಾಯಿಕ ಮೆಹಂದಿ ಗೆ ಕುಂದನ್ ಹರಳುಗಳನ್ನು ಅಂಟಿಸಲಾಗುತ್ತದೆ. ಮೆಹಂದಿ ಜಿವಲೆರಿ ಎಂದು ಹೆಸರಾಗಿರುವ ಈ ಕಲೆ ಮಹಿಳೆಯರ ಮನ ಗೆದ್ದಿದೆ.

ಗಮನಿಸಬೇಕಾದ ಅಂಶಗಳು

  • ಕಳಪೆ ದರ್ಜೆಯ ಮೆಹಂದಿ ಯಿಂದ ದೂರವಿರಿ.
  • ಮೆಹಂದಿ ಕೋನ್ ಕೊಳ್ಳುವಾಗ ತಯಾರಿಸುವ ದಿನಾಂಕ ಹಾಗೂ ಅದರ ಎಕ್ಸ್ಪೈರೀ ದಿನಾಂಕ ದ ಮೇಲೆ ಗಮನ ವಿರಲಿ.
  • ಕೈ ಚರ್ಮಕ್ಕೆ  ಸ್ವಲ್ಪ ವ್ಯತಿರಕ್ತ ಎನಿಸಿದರೂ ಕೂಡಲೇ ನೀರಿನಿಂದ ತೊಳೆದು ಬಿಡಿ.
  • ಯಾವುದೇ ಬಣ್ಣದ ಮೆಹಂದಿ ಆಗಿರಲಿ ನಿಮ್ಮ ಚರ್ಮಕ್ಕೆ ಹೊಂದಿಕೊಂಡರೆ ಮಾತ್ರ ಬಳಸಿ.
  • ಸಾಧ್ಯವಾದಷ್ಟು ಮದರಂಗಿ ಯನ್ನು ನೀವೇ  ತಯಾರಿಸುವುದು ಉತ್ತಮ.

ಲೈಫ್ ಸ್ಟೈಲ್

ಕಿವಿಯಲ್ಲಿ ಫ್ಲವರ್ ; ಟ್ಯಾಟೂ ಜಿವಲ್ಲೆರೀ ಟ್ರೆಂಡಿಂಗ್..!

Published

on

ತ್ತೀಚಿನ ಗ್ಲಾಮರ್ ಯುಗದಲ್ಲಿ,  ಇಂಸ್ಟಂಟ್ ಮತ್ತು ಅಚ್ಚರಿ ಹುಟ್ಟಿಸುವಂತಹ ಚಿತ್ರ ವಿಚಿತ್ರ ಟ್ರೆಂಡ್ ಗಳು ಇಂಸ್ಟಾಗ್ರಾಂ ಟ್ವಿಟ್ಟರ್, ಗಳಲ್ಲಿ ಸುದ್ದಿ ಮಾಡುತ್ತಿದೆ. ಹೆಣ್ಣು ಮಕ್ಕಳ ಆಭರಣ ಪ್ರೇಮ ಇಂದು ನಿನ್ನೆಯದಲ್ಲ. ಆಭರಣಕ್ಕೆ ಪರ್ಯಾಯ ಪದವೇ ಹೆಣ್ಣು ಅನ್ನುವಷ್ಟರ ಮಟ್ಟಿಗೆ ಹೆಂಗಳೆಯರ ಆಭರಣ ಪ್ರೀತಿ ಲೋಕಾರೂಢಿಯಲ್ಲಿ ಕಂಡು ಬರುತ್ತದೆ.

ಆದರೆ ಇತ್ತೀಚೆಗೆ ಕಂಡು ಬರುತ್ತಿರುವ ಫ್ಯಾಷನ್ ಟ್ರೆಂಡ್ ಗಳು ಈ ಲೋಕಾರೂಢಿಯ ನಾನ್ನುಡಿಯನ್ನು ಸುಳ್ಳಾಗಿಸಿದೆ. ಆಧುನಿಕ ಫ್ಯಾಷನ್ ಯುಗದಲ್ಲಿ, ಟ್ಯಾಟೂ ಕ್ರೇಜ್ ಹೆಚ್ಚಿದ್ದು, ದುಬಾರಿ
ಆಭರಣಗಳನ್ನು ಸೈಡಿಗೆ ಸೇರಿಸಿದೆ.

ಟ್ಯಾಟೂ ಜಿವಲ್ಲೆರೀ, ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಹಾಗೂ ಟ್ರೆಂಡ್ ಸೆಟ್ಟರ್ ಆಗಿ ಮಿಂಚುತ್ತಿದೆ. ಚಿನ್ನ ಬೆಳ್ಳಿ ವಜ್ರದ ಆಭರಣಗಳಿಗೆ ಸೆಡ್ಡು ಹೊಡೆದು ನಿಂತಿದೆ ಈ ನೂತನ ಟ್ಯಾಟೂ ಜಿವಲ್ಲೆರೀ ಟ್ರೆಂಡ್ !

ಕಿವಿಯಲ್ಲಿ ಮಿಂಚುವ ಕಿವಿ ಓಲೆಗಳು ಈ ಟ್ರೆಂಡ್ ಗೆ ವಾಶ್ ಔಟ್ ಆಗಿವೆ! ಕಿವಿಯ ಮೇಲೆ ಸುಂದರ ವಾಗಿ ಮೂಡಿ ಬರುತ್ತಿದೆ ಕಲರ್ಫುಲ್ ಫ್ಲವರ್ ಟ್ಯಾಟೂ.. ಬಣ್ಣದ ಹೂಗಳು, ಚಿಟ್ಟೆ, ಎಲೆ-ಬಳ್ಳಿ ಗಳು ಟ್ಯಾಟೂ ಇಯರ್ ಖಫ್ ಮತ್ತು ಇಯರ್ ರಿಂಗ್ ಗಳನ್ನು ರೀಪ್ಲೇಸ್ ಮಾಡಿರುವುದಂತೂ ಸತ್ಯ.

ಅಂತೆಯೇ, ಮೇಲ್ಕುತ್ತಿಗೆ, ಕೈ ತೋಳು, ಕಾಲ್ಗೆಜ್ಜೆ, ಕೈ ಬಳೆ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಯುವಪೀಳಿಗೆ ಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಬೇಲಿ ಚಟಕ

Published

on

ಫೋಟೋ : ಭಗವತಿ‌ ಎಂ.ಅರ್ / ಗಂಡು ಬೇಲಿ ಚಟಕ

ಬೇಲಿ ಚಟಕವು (Pied Bush chat) ಗುಬ್ಬಚ್ಚಿಯಂತೆಯೇ ಸಣ್ಣ ಗಾತ್ರದ ಪಕ್ಷಿ. ಸಾಮಾನ್ಯವಾಗಿ ಬೇಲಿಗಳಲ್ಲಿ ಕುರುಚಲು ಗಿಡಗಳಿರುವ ಕಡೆ, ಬಾಲ ಕುಣಿಸುತ್ತಾ ಓಡಾಡುತ್ತಿರುತ್ತವೆ. ಮುಳ್ಳುಗಿಡಗಳ ತುದಿಯಲ್ಲಿ, ವಿರಳ ರೆಂಬೆಗಳಿರುವ ಗಿಡದ ತುದಿಯಲ್ಲಿ ಕೂತು ಬಾಲ ಕುಣಿಸುತ್ತಾ ಅತ್ತೀಂದಿತ್ತ ತಲೆಯನ್ನು ಅಲ್ಲಾಡಿಸುತ್ತಾ ಚಿಟಗುಡುತ್ತದೆ. ಸದಾ ಟುವಟಿಕೆಯಿಂದಿರುವ ಹಕ್ಕಿ ಇದು. ಇವೂ ಕೂಡ ಕೀಟಾಹಾರಿ ಹಕ್ಕಿಗಳ ಸಾಲಿಗೆ ಸೇರುತ್ತವೆ. ಹಾಗಾಗಿಯೇ ಪೊದೆಗಳಿರುವಲ್ಲಿ, ಹೆಚ್ಚಾಗಿ ನೆಲದ ಮೇಲೆ ಆಹಾರ ಹುಡುಕುತ್ತಾ ಇರುತ್ತವೆ.

ಹೆಣ್ಣು ಬೇಲಿ ಚಟಕ

ಗಂಡು ಬೇಲಿಚಟಕದ ಮೈಯ ಹೆಚ್ಚು ಭಾಗ ಕಪ್ಪು ಬಣ್ಣದಾಗಿದ್ದು, ರೆಕ್ಕೆಯ ಮೇಲೆ, ಕೆಳ ಹೊಟ್ಟೆಯ ಭಾಗ ಬಿಳಿಯ ಬಣ್ಣದಾಗಿರುತ್ತವೆ. ನೋಡಲು ಸಪೂರವಾಗಿದ್ದು, ಮೋಟು ಬಾಲ ಹೊಂದಿದೆ. ಪಕ್ಷಿ ಲೋಕದಲ್ಲಿ ಸಾಮಾನ್ಯವಾಗಿ ಗಂಡುಗಳೇ ಹೆಚ್ಚು ಸುಂದರ. ಆದರೆ ಹೆಣ್ಣು ಬೇಲಿಚಟಕವು ಗಂಡಿಗಿಂತ ನೋಡಲು ಮುದ್ದಾಗಿರುತ್ತವೆ.ಮೈ ಪೂರಾ ಕಂದು ಬಣ್ಣದಾಗಿದ್ದು, ಬಾಲದ ಭಾಗ ಇಟ್ಟಿಗೆಯ ಬಣ್ಣವಿರುತ್ತದೆ. ಸಾಮಾನ್ಯವಾಗಿ ಸಿಗುವ ಈ ಹಕ್ಕಿ ಎನ್ನುವ ಕಾರಣಕ್ಕೆ ಬಹುತೇಕರ, ಛಾಯಾಗ್ರಾಹಕರ ಅವಜ್ಞೆಗೆ ಗುರಿಯಾಗಿರುವ ಇವು ತನ್ನ ಪಾಡಿಗೆ ಊರೂರು ತಿರುಗುತ್ತಾ ಇರುತ್ತವೆ!

ಭಗವತಿ ಎಂ.ಆರ್
ಛಾಯಾಗ್ರಾಹಕಿ, ಕವಯಿತ್ರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗಣೇಶ ಬಂದ ನೈಲ್ ಆರ್ಟ್ ಅಲ್ಲೂ ಕ್ರಿಯೇಟಿವಿಟಿ ಕಂಡ..!

Published

on

ಗಣೇಶ ಹಬ್ಬದ ಸಡಗರದಲ್ಲಿ ಮೈಮರೆತಿರರುವ ಹೆಂಗಳೆಯರ ಸಂಭ್ರಮ ಕ್ಕೆ ಸಾಥ್ ನೀಡಲು ಈ ಬಾರಿ ವಿಶೇಷ ನೈಲ್ ಆರ್ಟ್ ಒಂದು ಗರಿಗೆದರಿದೆ. ಗಣೇಶ ಹಬ್ಬದ ಸಂಭ್ರಮಾಚರಣೆ ಮತ್ತಷ್ಟು ರಂಗು ತುಂಬಲು”ಗಣೇಶ ನೈಲ್ ಆರ್ಟ್” ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಹೊಸ ಟ್ರೆಂಡ್ ಸೃಷ್ಟಿಸುವ ನೈಲ್ ಆರ್ಟ್ ತಗ್ಙರು, ಗಣೇಶ ಸ್ಟಿಕರ್ ಬಳಸಿ ಹೊಸಾ ನೈಲ್ ಆರ್ಟ್ ಟ್ರೆಂಡ್ ಮಾಡಿದ್ದಾರೆ.

ಮಕ್ಕಳು, ಕಾಲೇಜು ಕನ್ಯೆಯರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಒಪ್ಪುವಂತಿದ್ದು, ಮಾರುಕಟ್ಟೆಯಲ್ಲಿ ಈ ಗಣೇಶ ನೈಲ್ ಆರ್ಟ್ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ. ನಿಮ್ಮ ಫೇವರಿಟ್ ನೈಲ್ ಕಲರ್ಗೆ ಮ್ಯಾಚ್ ಆಗುವ ಗಣೇಶ ಸ್ಟಿಕರ್ ಬಳಸಿ ಗಣೇಶ ಚತುರ್ಥಿ ಸಂಭ್ರಮ ಕ್ಕೆ ನಿಮ್ಮ ಕ್ರಿಯಾತ್ಮಕತೆಯ ಲೇಪನ ನೀಡಿ.

ಕೇವಲ ಸ್ಟಿಕರ್ಗಷ್ಟೇ ಸೀಮಿತವಾಗಿರದೆ, ನೈಲ್ ಆರ್ಟ್ ಪೆನ್ ಮೂಲಕ, ವಿಫ್ನ ನಿವಾರಕ  ಗಣೇಶನ ಹಲವಾರು ಭಂಗಿಗಳಲನ್ನು ಕಣ್ಣು ಕೋರೈಸುವ ರೀತಿಯಲ್ಲಿ ರಚಿಸಲಾಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending