Connect with us

ಲೈಫ್ ಸ್ಟೈಲ್

ರಂಗೇರಿದೆ ಸಾಂಪ್ರದಾಯಿಕ ರಂಜಾನ್ ಫ್ಯಾಷನ್..!

Published

on

ಲಾಂ ಮಾಲಿಕುಂ,ಶುಭ ಶುಕ್ರವಾರ ದ ನಮಾಜ್ ಮುಗಿಸಿ, ಪವಿತ್ರ ರಂಜಾನ್ ಹಬ್ಬಕ್ಕೆ ಇಡೀ ಜಗತ್ತು ಸಿದ್ಧ ಗೊಂಡಿದೆ. ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಗೆ ಫ್ಯಾಷನ್ ಲೋಕದಲ್ಲಿ ಹಸಿರು ಅಲೆ ಸೃಷ್ಟಿ ಆಗಿದೆ.ಹಬ್ಬಕ್ಕೆ ಫ್ಯಾಷನ್ ಶಾಪಿಂಗ್ ಕಳೆ ಕಟ್ಟಿದೆ. ಮುಸ್ಲಿಂ ಮಹಿಳೆಯರು ತಮ್ಮ  ಸಾಂಪ್ರದಾಯಿಕ ಹಾಗು ಸಾಂಸ್ಕೃತಿಕ ವೇಶ-ಭೂಷಣ  ದಿಂದ ಫ್ಯಾಷನ್ ಲೋಕಕ್ಕೆ ಕಿಚ್ಚು ಹಚ್ಚಿದ್ದಾರೆ. ಪ್ರಕೃತಿ ಯ  ಪಚ್ಚೆ ಹಸಿರಿನ ಸೊಬಗ ಸಾರುವ ಸುಂದರ ಲೆಹೆಂಗಾ, ಶಹಾರಾ, ಸೀರೆ, ಸಲ್ವಾರ್, ಅನಾರ್ಕಲೀ ಉದ್ದನೆಯ ಗೌನ್ಗಳುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ .

ಈ ಬಾರಿಯ ರಂಜಾನ್ ಫ್ಯಾಷನ್ ಏನು?

ಕುಂದನ್, ಜರತಾರಿ, ಹರಳು,ಮುತ್ತು ಗಳಿಂದ ವಿಜೃಂಭಿಸುತ್ತಿದೆ ಭಾರೀ ಲೆಹೆಂಗಾ, ಘಾಗ್ರ, ಕುರ್ತ-ಸ್ಕರ್ಟ್ , ಕುಪ್ಪಸಗಳು. ಮಾರುಕಟ್ಟೆಯಲ್ಲಿ ಈ ಬಾರಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿದೆ ಶಹಾರಾ ಮತ್ತು.. ಫಲಾಝೋ-ಕುರ್ತ ಗಳು.. ಹಸಿರು, ಕೆಂಪು, ನೀಲಿ,ಸುವರ್ಣ, ಬಣ್ಣದ ಮಿರುಗುವ ರಂಜಿಸುವ ಫ್ಯಾಷನ್ ಮಹಿಳೆಯರ ಸೆಳೆಯುತ್ತಿದೆ.

ಏನನ್ನುತ್ತಾರೆ ಫರೀದಾ ತಾಜ್

ಪ್ರತಿಷ್ಠಿತ   ಫ್ಯಾಷನ್  ಡಿಸೈನರ್ ಫಿದಾ ತಾಜ್ ರ ಪ್ರಕಾರ ಈ ಬಾರಿಯ ರಂಜಾನ್ ಗೆ ಶರಾರ ಮತ್ತು ಝೂಮರ್ ವೈರಲ್ ಆಗಿದೆ. ಬಾಲಿವುಡ್ ಇಂಫ್ಲುಎಂಸ್ಡ್ ಫ್ಯಾಷನ್ ಸದ್ಯ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಕುಂದನ್ ಜಿವಲೆರಿ ಹಾಗೂ ರಂಜಾನ್ ಸ್ಪೆಷಲ್ ಮೆಹಂದಿಯೊಂದಿಗೆ ಹಬ್ಬದ  ರಂಗೇರಿದೆ ಎನ್ನುತ್ತಾರೆ ಫರೀದಾ ತಾಜ್. ಇವರಿಗೆ ಹಬ್ಬಕ್ಕೆ ಸಾಂಪ್ರದಾಯಿಕ ಶೈಲಿಯ ಉಡುಪು-ಆಭರಣಗಳಿಗೆ ಇಷ್ಟ ವಂತೆ. ನೀಲಿ ಮತ್ತು ಸುವರ್ಣ ಬಣ್ಣದ ಶಹಾರಾ ಇವರ ರಂಜಾನ್ ಸ್ಟೈಲ್ ಸ್ಟೇಟ್ ಮೆಂಟ್.

ಧೂಳೆಬ್ಬಿಸಿವೆ ಝೂಮರ್ ಫ್ಯಾಷನ್…

ಬಜೀರಾವ್ ಮಸ್ತಾನಿ ಯ ದೀಪಕಾ, ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ, ಸೋಹಾ ಅಲಿ ಖಾನ್, ಕರೀಷ್ಮ ಕಪೂರ್ ಖಾನ್… ಹೀಗೆ ಹಲವಾರು ಸೆಲಿಬ್ರಿಟಿ ತಾರೆಯರು ಮೊಬೈಲ್ ಸ್ಟೈಲ್ ಸ್ಟೇಟ್ ಮೆಂಟ್ ಈ ಬಾರಿಯ ರಂಜಾನ್ ಫ್ಯಾಷನ್ ಗೆ ಸೇರ್ಪಡೆ ಆಗಿದೆ.ಬೈತಲೆ ಯ ಪಕ್ಕಕ್ಕೆ ಹಾಕುವ ಈ ಝೂಮರ್  ಮುತ್ತು ಮೂಗಿನ ಬುಲಾಕು ಫೇಮಸ್.

ಈದ್ ಮುಬಾರಕ್ ಎನ್ನುತ್ತಿದೆ ಮದರಂಗಿ..

ಕೈಗಳ ಮೇಲೆ ರಂಗೇರುವ ಮದರಂಗಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..ಪವಿತ್ರ ರಂಜಾನ್ ಸಂಭ್ರಮ ವನ್ನು ದುಪ್ಪಟ್ಟು ಗೊಳಿಸುತ್ತದೆ ರಂಜಾನ್ ಮೆಹಂದಿ. ಈದ್ ಮುಬಾರಕ್ ಎಂಬ ಸಂದೇಶವನ್ನು ಸಾರುವ ಈ ಸುಂದರ ವಿನ್ಯಾಸಗಳು ಈಗ ಎಲ್ಲೆಡೆ ವೈರಲ್ ಆಗಿದೆ.

ಸಾಂಪ್ರದಾಯಿಕ ಉಡುಪುಗಳ ಸಡಗರ

ಯಾವುದೇ ಮಾರ್ಡನ್ ಫ್ಯಾಷನ್ ಬಂದರೂ ಸಾಂಪ್ರದಾಯಿಕ ಸೀರೆ, ಲೆಹೆಂಗಾ ಗಳು ಮಾತ್ರ ಎಂದಿಗೂ ಕಳೆ ಕುಂದುವುದಿಲ್ಲ. ಕೈಗೆ ಮದರಂಗಿ, ಕೈ ತುಂಬಾ ಬಣ್ಣದ ಬೆಳೆಗಳು, ಜಾಗಿ ಜಿಗಿ ಮಿರುಗುವ ದೊಡ್ಡ ಗಾತ್ರದ ಝುಮಕಿ, ಕುತ್ತಿಗೆ ದೊಡ್ಡ ಹಾರ.. ತಲೆಯ ತುಂಬಾ ಮಲ್ಲಿಗೆ…ಕಾಲಲ್ಲಿ ಲವ್ ಎನ್ನುವ ಗೆಜ್ಜೆ ದನಿ… ಇವೆಲ್ಲವೂ ಈ ಬಾರಿಯ ರಂಜಾನ್ ಫ್ಯಾಷನ್ ನ ಒಂದು ತುಣುಕು..

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೈಫ್ ಸ್ಟೈಲ್

ಸ್ವಾವಲಂಬಿ ಜೀವನಕ್ಕೆ ಆಧಾರವಾದ ಅಣಬೆ

Published

on

ಕೋಲಾರ ಜಿಲ್ಲೆಯು ಬರಪೀಡಿತ ಜಿಲ್ಲೆಯಾಗಿದ್ದು ನೀರಿನ ಸಮಸ್ಯೆ ಇದ್ದರೂ ಸಹ ರೈತರು ಇರುವ ನೀರನ್ನು ಸಮರ್ಪವಾಗಿ ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ. ಅವರಲ್ಲಿ ಮುಳಬಾಗಿಲು ತಾಲ್ಲೂಕಿನ ಚಾಮರೆಡ್ಡಿಹಳ್ಳಿ ಗ್ರಾಮದ ರೈತರಾದ ಸೀತಮ್ಮ ಅವರು ಅಣಬೆ ಬೇಸಾಯದ ಮೂಲಕ ಆದಾಯ ಮೂಲವನ್ನು ಕಂಡು ಕೊಂಡಿದ್ದಾರೆ.

ಅವರು ಸ್ತ್ರೀ ಶಕ್ತಿ ಸಂಘದ ಸಹಯೋಗದೊಂದಿಗೆ “ಸಮೃದ್ಧಿ” ಅಣಬೆ ಬೇಸಾಯ ಘಟಕವನ್ನು ನಿರ್ಮಿಸಿಕೊಂಡು, ಅಣಬೆ ಉತ್ಪಾದನೆಯನ್ನು ಮಾಡುತ್ತಿದ್ದಾರೆ. ಇವರು ಹುಳಿಮಾವು ಕ್ಷೇತ್ರದಿಂದ ಅಣಬೆ ಬೇಸಾಯದ ಬಗ್ಗೆ ತರಬೇತಿಯನ್ನು ಪಡೆದುಕೊಳ್ಳುವುದರ ಜೊತೆಗೆ ತೋಟಗಾರಿಕೆ ಇಲಾಖೆ ವತಿಯಿಂದ ತಾಂತ್ರಿಕ ಮಾಹಿತಿ, ಸಲಹೆಗಳು ಮತ್ತು ಆರ್ಥಿಕ ನೆರವು ಸಹಾಯಧನದ ವಿವರಗಳನ್ನು ಪಡೆದುಕೊಂಡು ಅದರಂತೆ ಕಾರ್ಯೋನ್ಮುಕರಾಗಿದ್ದಾರೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಘಟಕಕ್ಕೆ ಕೊಯ್ಲೋತ್ತರ ತಾಂತ್ರಿಕತೆ ಅಭಿವೃದ್ಧಿ ಕಾರ್ಯಕ್ರಮದಡಿ, ಇಲಾಖೆಯ ವತಿಯಿಂದ ಅಣಬೆ ಬೇಸಾಯ 2017-18 ನೇ ಸಾಲಿನಲ್ಲಿ ಶೇ. 40 ರಷ್ಟು ಸಹಾಯಧನವನ್ನು ಪಡೆದುಕೊಂಡು. ಆಯಿಸ್ಡರ್ ಮತ್ತು ಮಿಲ್ಕಿ ಅಣಬೆಯ್ನನು ಉತ್ಪಾದನೆಯನ್ನು ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಆಯಿಸ್ಡರ್ ಅಣಬೆಗೆ ಹೆಚ್ಚಿನ ಬೇಡಿಕೆ ಇದ್ದು ವಾರದಲ್ಲಿ 3 ದಿನಕ್ಕೆ 30 ರಿಂದ 40 ಕೆ.ಜಿ ಯಂತೆ ಉತ್ಪಾದನೆ ಮಾಡುತ್ತಾರೆ. ಈ ಅಣಬೆಗೆ ಪ್ರತಿ ಕೆ.ಜಿಗೆ 200 ರೂನಂತೆ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಅದೇ ರೀತಿ ಮಿಲ್ಕಿ ಅಣಬೆಯು ದಿನಕ್ಕೆ 20 ರಿಂದ 25 ಕೆ.ಜಿ ಉತ್ಪಾದನೆಯಾಗುತ್ತಿದೆ. ಇದಕ್ಕೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಸಿಗುತ್ತಿದ್ದು ಪ್ರತಿ ಕೆ.ಜಿಗೆ 200 ರೂನಂತೆ ಮಾರಾಟ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅಂತೆಯೇ ಕೃಷಿ ಕ್ಷೇತ್ರದಲ್ಲಿಯೂ ಸಹ ತನ್ನದೇ ಸಾಧನೆಯನ್ನು ಮಾಡಿ ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಅಣಬೆ ಬೇಸಾಯದ ಮೂಲಕ ಆರ್ಥಿಕ ಸ್ವಾವಲಂಬಿಯಾಗಿ ಸುತ್ತಮುತ್ತಲಿನ ಗ್ರಾಮದ ರೈತರಿಗೆ ಮಾದರಿಯಾಗಿರುವ ಸೀತಮ್ಮ ತಮ್ಮಂತೆ ಇತರರೂ ಅಣಬೆ ಬೇಸಾಯವನ್ನು ಮಾಡಿ ಸ್ವಯಂ-ಉದ್ಯೋಗಿಗಳಾಗಿ ಆರ್ಥಿಕ ಸ್ವಾವಲಂಬಿಗಳಾಗಲು ಪ್ರೇರಣೆಯಾಗಿದ್ದಾರೆ.

-ಸುಪ್ರಿಯ.ಕೆ
ಅಪ್ರೆಂಟಿಸ್
ವಾರ್ತಾ ಮತ್ತು ಸಂಪರ್ಕ ಇಲಾಖೆ ಕೋಲಾರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಕೊಂಚ್ ರಿಮೂವಲ್ | ಕಿವಿ ಹರಿದು ಹೊಲೆಯುವ ಹೂಸ ಟ್ರೆಂಡ್..!

Published

on

  • ಚಿತ್ರಶ್ರೀ ಹರ್ಷ

ಫ್ಯಾಷನ್ ಗೋಲ ತಿರುಗಿದಂತೆಲ್ಲಾ ಒಂದೊಂದು ಹೊಸ ಟ್ರೆಂಡ್ ಸೃಷ್ಟಿ ಆಗುತ್ತಲೇ ಇದೆ.ದಿನೇ ದಿನೇ ಹೆಚ್ಚುತ್ತಿರುವ ಫ್ಯಾಷನ್ ಕ್ರೇಜ್, ಸ್ಟೈಲ್ ಸ್ಟೇಟ್ ಮೆಂಟ್ ನ ಹ್ಯಾಂಗೋವರ್, “ಫ್ಯಾಷನ್ ” ಅಂಗಳದಲ್ಲಿ ಭಾರೀ ಕ್ರಾಂತಿ ಹುಟ್ಟು ಹಾಕಿದೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.instagram.com/p/BSbYlplghre/?igshid=av42bccf90qw

ಸ್ತ್ರೀ – ಪುರುಷರು ಕಿವಿಗೆ ಓಲೆ ಹಾಕುವುದು ಸಹಜ. ಒಂದಲ್ಲ ಎರಡೆಲ್ಲ ಕಿವಿ ತುಂಬ ರಂಧ್ರಗೊಳಿಸಿ ಓಲೆ ಧರಿಸುವುದೂ ಈಗ ಸಾಮಾನ್ಯ. ಆದರೆ ಕಿವಿಯನ್ನು ಹರಿದು, ದೊಡ್ಡ ತೂತು ಮಾಡಿ, ಹೊಲಿಗೆಹಾಕುವ ಬಾಡಿಮಾಡಿಫಿಕೇಷನ್ ಟ್ರೆಂಡ್ ಈಗ ಚಾಲ್ತಿಯಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ 2019 ರ ಮಾರ್ಚ್ ನಿಂದ ಚಾಲ್ತಿಯಲ್ಲಿರುವ ಈ ವಿಚಿತ್ರ ಅಸಹಜ ಟ್ರೆಂಡ್ ಯುವಪೀಳಿಗೆಯನ್ನು ಆಕರ್ಷಿಸುತ್ತಿರುವುದು ಆಶ್ಚರ್ಯಕರವಾಗಿದೆ. ಸದ್ಯ ಭಾರತಕ್ಕೆ ಇನ್ನು ಕಾಲಿಡದ ಈ ಕಿವಿ ತೂತು ಮಾಡುವ ಫ್ಯಾಷನ್ ಪಾಶ್ಚಾತ್ಯ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಇನ್ನು ವೈದ್ಯಕೀಯ ರಂಗದಲ್ಲಿ ಭಾರೀ ಚರ್ಚೆ ಗೆ ಎಡೆಮಾಡಿರುವ ಈ #conchremoval ಕೊಂಚ್ ರಿಮೂವಲ್  ಟ್ರೆಂಡ್,  ಇಂಸ್ಟಾಗ್ರಾಂನಲ್ಲಿ ಸಖತ್ ವೈರಲ್ ಆಗಿದೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.instagram.com/p/B7BKFQ1AHmV/?igshid=1j4ycpyqq0hdw

ಕೇವಲ ಗಂಡು ಹೈಕಳಷ್ಟೇ ಅಲ್ಲದೆ, ಹೆಂಗಳೆಯರೂ ಈ ವಿಚಿತ್ರ ಅಸಹಜ ಟ್ರೆಂಡ್ ಗೆ ಮಾರುಹೋಗುತ್ತಿರುವುದು ಫ್ಯಾಷನ್ ಲೋಕದಲ್ಲಿ ಕೌತುಕ ಸೃಷ್ಟಿಸಿದೆ. ಇದರ ಪರ – ವಿರೋಧ ಚರ್ಚೆ ನಡೆಯುತ್ತಿದ್ದು, ಸ್ಟೈಲ್ ಹೆಸರಲ್ಲಿ ಇನ್ನೇನ್ನೇನು ಹರಿದು ಹೊಲಿಗೆಹಾಕುವ ಪರಿ ಹುಟ್ಟಿಕೊಳ್ಳುತ್ತದೆಯೋ ಕಾದು ನೋಡಬೇಕಿದೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.instagram.com/p/BrADALLnUY5/?igshid=11yhgaidepc1c

ಈ ರೀತಿ ಕಿವಿ ಹರಿದು ಹೊಲಿಗೆಹಾಕುವುದರಿಂದ ಕಿವಿಯನ್ನು ಶ್ರಾವಣ ಶಕ್ತಿ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂದು ವಾದಿಸುವ ,ಬಾಡಿ ಮಾಡಿಫಿಕೇಷನ್ ಗೀಳು ಅಂಟಿಸಿಕೊಂಡಿರುವ ಫ್ಯಾಷನ್ ಪ್ರಿಯರು,  ಈ ಟ್ರೆಂಡ್ ಗೆ ಫುಲ್ ಫಿದಾ ಆಗಿದ್ದಾರೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.instagram.com/p/BqXIo85hbH8/?igshid=196b7e4s3koyn

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ದರ್ಜಿಹಕ್ಕಿ

Published

on

ಫೋಟೋ : ಭಗವತಿ‌ ಎಂ.ಅರ್
  • ಭಗವತಿ ಎಂ.ಆರ್

“ಟುವ್ವಿ! ಟುವ್ವಿ! ಟುವ್ವಿ! ಟುವ್ವಿ!
ಎಂದು ಹಕ್ಕಿ ಕೂಗಿತು
ಅದರ ಹಾಡು ಬಂದು
ಎನ್ನ ಎದೆಯ ಗೂಡು ತಾಗಿತು” ಕುವೆಂಪುರವರ ಟುವ್ವಿಹಕ್ಕಿಯ ಬಗೆಗಿನ ಕವನ ಪ್ರಸಿದ್ದವಾಗಿದೆ.

ಸದಾ ಚಟುವಟಿಕೆಯ ಹಕ್ಕಿಗಳಲ್ಲಿ ಈ ಸಿಂಪಿಗ ಕೂಡಾ ಒಂದು. ಇದರ ಇನ್ನೊಂದು ಹೆಸರು ದರ್ಜಿಹಕ್ಕಿ. ಕೆಂಪು ಕಣ್ಣು, ಕೆಂಪಿನ ಸುತ್ತ ಕಪ್ಪು ಉಂಗುರ ಮತ್ತು ಬಾಲ ಮತ್ತು ಬೆನ್ನಿನ ಭಾಗ ನಸು ಹಳದಿ, ಅಥವ ಪಾಚಿಯ ಬಣ್ಣ ಎಂದರೆ ಹೆಚ್ಚು ಸೂಕ್ತವಾದೀತು. ಹತ್ತಿರದಿಂದ ನೋಡಿದಾಗ ಇದು ದರ್ಜಿ ಹಕ್ಕಿ ಅಂತ ಕೂಡಲೇ ಗುರುತಿಸಬಹುದು.

ಇಲ್ಲವಾದರೆ ಅದು ಹಾರುವಾಗ, ಓಡಾಡುವಾಗ ಹೆಚ್ಚುಕಮ್ಮಿ ಸುವ್ವಿಯ (Ashy Prinia) ತರವೇ ಕಾಣುತ್ತದೆ. ದೂರದಿಂದ ನೋಡಿದಾಗ ಚಿಟ್ಟೆಯೊಂದು ಹಾರಾಡಿದಂತೆಯೇ ಕಾಣುತ್ತದೆ.  ಇದು ಎಲೆಗಳನ್ನು ಹೊಲಿದು ಜೋಳಿಗೆಯಂತೆ ಮಾಡಿ ಅದರೊಳಗೆ ಗೂಡು ಕಟ್ಟುತ್ತದೆ. ಗೂಡಿನ ಮೆತ್ತನೆಯ ಗಾದಿಯ ಮೇಲೆ ಸಮುದ್ರ ನೀಲಿಯ ಬಣ್ಣದ ಮೇಲೆ ಅಲ್ಲಲ್ಲಿ ಕಪ್ಪು ಕಲೆಗಳಂಥ ಮೊಟ್ಟೆಗಳನಿಡುತ್ತವೆ.

ಬಹು ಸಂಕೋಚದ ಹಕ್ಕಿ ಇದು. ಪೊದೆಗಳ, ಎಲೆಗಳ ನಡುವೆ ಸೇರಿಕೊಂಡರೆ ಕಾಣುವುದು ಕಷ್ಟ. ಹತ್ತಿರದಲ್ಲಿದ್ದಾಗ ಅದರ ದೇಹದ ಕಾಲುಭಾಗ ಮಾತ್ರ ಕಾಣುವುದು. ಎಲೆ ಅಲುಗಾಡಿದಂತಾದಾಗ ನೋಡುವಷ್ಟರಲ್ಲಿ ಹಾರಿ ಹೋಗಿರುತ್ತದೆ. ಮನುಷ್ಯ ಇದನ್ನು ನೋಡಿಯೇ ಹೊಲಿಗೆ ಕಲಿತಿರಬೇಕು.

ದರ್ಜಿಹಕ್ಕಿಯೆಂಬುದು ಇದರ ಅನ್ವರ್ಥನಾಮ. ಸಾಮಾನ್ಯವಾಗಿ ಜನವಸತಿ ಇರುವ ಕಡೆ, ಪೊದೆಗಳಲ್ಲಿ, ಉದ್ಯಾನವನಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. “ಸಂತೆಯೊಳಗೊಂದು ಮನೆಯ ಮಾಡಿ” ಅಕ್ಕಮಹಾದೇವಿಯ ವಚನವನ್ನು ನೆನೆಪಿಸುತ್ತದೆ ಈ ಪುಟ್ಟಹಕ್ಕಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending