Connect with us

ಲೈಫ್ ಸ್ಟೈಲ್

ಬೇಲಿಯಲ್ಲಿ ಬೆಳೋ ತೊಂಡೆಕಾಯಿ ಮಹಿಮೆ ನಿಮಗೆ ಗೊತ್ತಾ?

Published

on

ಸುದ್ದಿದಿನ ಡೆಸ್ಕ್:  ತೊಂಡೆಕಾಯಿ ಸದಾ ಲಭ್ಯವಿರುವ ತರಕಾರಿ. ಇದನ್ನು ಪಲ್ಯ, ಸಾರು, ಹಿಂಡಿ ವಿವಿಧ ಬಗೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಬಹುದು. ತೊಂಡೆಕಾಯಿ ಹೊಲ, ಮನೆ ಹಿಂದೆ, ರಸ್ತೆ ಬದಿಯ ಬೇಲಿಗಳಲ್ಲಿ ಬೆಳೆಯಬಹುದಾದ ಕಾಯಿಪಲ್ಯಯಾಗಿದೆ. ಇದಿಷ್ಟೇ ಅಲ್ಲ ಇದರ ಉಪಯೋಗ. ತೊಂಡೆಕಾಯಿ ಔಷಧ ಗುಣ ಹೊಂದಿದ್ದು, ಚರ್ಮ ಮೃದುವಾಗಲು, ಕಜ್ಜೆಯಂತಹ ತುರಿಕೆ ಸಮಸ್ಯೆಗಳು ನಿವಾರಣೆಯಾಗಲು ಸಹಕಾರಿಯಾಗಿದೆ. ತೊಂಡೆಕಾಯಿ ಮತ್ತು ಅದರ ಎಲೆಗಳಿಂದ ತಯಾರಿಸಿ ಕೊಳ್ಳಬಹುದಾದ ಮನೆಮದ್ದುಗಳ ವಿವರ ಇಲ್ಲಿದೆ ಓದಿ…

  • ತೊಂಡೆಕಾಯಿ ಎಲೆಯ ರಸ ಸೇವನೆ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ತೊಂಡೆಕಾಯಿ ಎಲೆಯ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ ಮೂರು ಸಲ ಕುಡಿದರೆ ದೇಹದ ಹೆಚ್ಚಾಗುತ್ತಿರುವ ಉಷ್ಣತೆ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ.

ತೊಂಡೆಕಾಯಿ ಸೇವನೆಯಿಂದ ಚರ್ಮ ಒರಟಾಗುವುದನ್ನು ತಡೆಯಬಹುದು. ಬಿಸಿಲಿನಿಂದ ಮುಖವು ಬಾಡಿದಂತೆ, ಒಣಗಿದಂತಾಗುತ್ತದೆ. ಇದನ್ನು ತಪ್ಪಿಸಲು ಪ್ರತಿ ಎರಡು ಹಸಿ ತೊಂಡೆಕಾಯಿ ತಿಂದರೆ ಚರ್ಮ ಒಣಗಿದಂತಾಗುವುದನ್ನು ತಡೆಯಬಹುದು.

  • ದೇಹದಲ್ಲಿ ಚರ್ಮ ಸಮಸ್ಯೆಗಳಾದ ಕಜ್ಜೆ, ಗಂದೆಗಳು ಉಂಟಾಗಿದ್ದರೆ ತೊಂಡೆಕಾಯಿಯಿಂದ ತಯಾರಿಸಿದ ಔಷಧ ರಾಮಬಾಣವಾಗಿ ಕೆಲಸ ಮಾಡುತ್ತದೆ. ದೇಹದಲ್ಲಿ ಉಂಟಾದ ಕಜ್ಜೆ, ಗಂದೆಗಳಾದ ಜಾಗದಲ್ಲಿ ತೊಂಡೆಕಾಯಿ ಜಜ್ಜಿ ಪೇಸ್ಟ್ ಮಾಡಿ ಗಂದೆ, ಕಜ್ಜೆಗಳು ವಾಸಿಯಾಗುತ್ತವೆ.

ಬೀಸಿಲು ಸೇರಿದಂತೆ ವಿವಿಧ ಕಾರಣಗಳಿಂದ ಕಣ್ಣಿನ ಉರಿ ಕಾಣಿಸಿಕೊಳ್ಳುವುದು ಕಡಿಮೆ ಆಗುತ್ತದೆ. ಒಂದು ಲೋಟ ನೀರಿಗೆ ತೊಂಡೆಕಾಯಿ ಎಲೆ ರಸ ಬೆರೆಸಿ ಕುಡಿದರೆ ಕಣ್ಣುರಿ ಬರುವುದು ಕಡಿಮೆಯಾಗುತ್ತದೆ.

  • ತೊಂಡೆಕಾಯಿ ಬಳ್ಳಿಯ ಕಾಂಡದ ರಸ ಬೊಜ್ಜು ಕರಗಲು ಲಕ್ಷ್ಮಣ ರೇಖೆಯಾಗಿದೆ. ಆಸೆ ಪಟ್ಟು ತಿಂದು ಹೊಟ್ಟೆ ಬೆಳೆಸಿಕೊಂಡವರಿಗೆ ಬೊಜ್ಜು ಕರಗಿಸಲು ಕಷ್ಟ ಪಡುತ್ತಾರೆ. ಬೊಜ್ಜು ಕರಗಿಸಲು ಲಕ್ಷ್ಮಣ ರೇಖೆಯಾಗಿದೆ. ತೊಂಡೆಕಾಯಿ ಬಳ್ಳಿಯ ಕಾಂಡದ ಎರಡು ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ಕುಡಿದರೆ ದೇಹದ ಅನಗತ್ಯ ಕೊಬ್ಬು ಕರಗುತ್ತದೆ.

ಸಂಧಿಗಳ ಸಮಸ್ಯೆಗಳಿಗೆ ತೊಂಡೆಕಾಯಿ ಎಲೆ ರಸ ನೋವು ನಿವಾರಕ ಶಕ್ತಿ ಹೊಂದಿದೆ. ಸಂದಿ ಊತ ಕಾಣಿಸಿಕೊಂಡ ಕಡೆಗೆ ತೊಂಡೆ ಬಳ್ಳಿಯ ಎಲೆಗಳನ್ನು ಬೇವಿನ ಎಣ್ಣೆಯಲ್ಲಿ ಚೆನ್ನಾಗಿ ನೆನೆಸಿ ಪೈಸ್ಟ್ ಮಾಡಿ ಊತ ಇರುವ ಜಾಗದಲ್ಲಿ ಲೇಪನ ಮಾಡಿದರೆ ಊತ ಕಡಿಮೆಯಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೈಫ್ ಸ್ಟೈಲ್

‘ತುಳಸಿ’ ಮನೆ ಮದ್ದು..!

Published

on

ಸುದ್ದಿದಿನ ಡೆಸ್ಕ್ : ತುಳಸಿ ಎಂದರೆ ನಮಗೆ ಅದು ಪೂಜೆಯಲ್ಲಿ ಅಥವಾ ಆಯುರ್ವೇದದಲ್ಲಿ ಮಾತ್ರ ಬಳಸುತ್ತಾರೆ ಅಂದುಕೊಂಡಿದ್ದೇವೆ.ಅದರೆ, ತುಳಸಿಯನ್ನು ದೊಡ್ಡ ದೊಡ್ಡ ಕಂಪನಿಗಳು ಅವರು ತಯಾರಿಸುವ ಸೋಪ್, ಕ್ರೀಮ್ ಗಳಲ್ಲಿ ಬಳಸುತ್ತಾರೆ. ನಾವು ಅದನ್ನು ಪೂಜೆಗೆ ಮಾತ್ರ ಬಳಸುತ್ತೀವಿ. ಅದರಿಂದ ಅಗುವ ಮನೆ ಮದ್ದಿನ ಬಗ್ಗೆ ತಿಳಿದರೆ ಅದನ್ನು ನಮ್ಮ ಮನೆಯಲ್ಲಿ ಹೆಚ್ಚಾಗಿ ಬೆಳೆಸಿ ಉಪಯೋಗಿಸ ಬಹುದು.

ಉಪಯೋಗಗಳು

  1. ತುಳಸಿ ಗಿಡದ ಕಾಂಡದಿಂದ ಹುಳುಕಡ್ಡಿಯ ಭಾಗವನ್ನು ಚೆನ್ನಾಗಿ ಕೆರೆದು ಅನಂತರ ತುಳಸಿ ಸೊಪ್ಪಿನ ಕಷಾಯ ಮಾಡಿಕೊಂಡು ಅದರಿಂದ ಹುಳುಕಡ್ಡಿಯ ಸ್ಥಾನವನ್ನು ತೊಳೆಯಬೇಕು. ಅದಾದ ನಂತರ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದ ಹುಳುಕಡ್ಡಿಯ ಭಾಗಕ್ಕೆ ಲೇಪಿಸುವುದರಿಂದ ಶೀಘ್ರವೇ ಗುಣ ಕಂಡುಬರುವುದು.
  2. ತುಳಸಿ ಗಿಡದ ಹಸಿ ಬೇರಿನಿಂದ ಗಂಧವನ್ನು ತೆಗೆದು ಚೇಳು ಕುಟುಕಿದ ಸ್ಥಾನಕ್ಕೆ ಲೇಪಿಸುವುದರಿಂದ ಚೇಳಿನ ವಿಷ ಇಳಿದು ಹೋಗುವುದು.
  3. ಕಿವಿಯೊಳಗೆ ಹುಣ್ಣಾಗಿದ್ದರೆ ತುಳಸಿ ಎಲೆಯ ರಸವನ್ನು ತೆಗೆದು ಒಂದೆರಡು ತೊಟ್ಟು ರಸವನ್ನು ಕಿವಿಗೆ ಹಾಕುವುದಿಲ್ಲ ಶೀಘ್ರವೇ ಗುಣ ಕಂಡು ಬರುವುದು.
  4. ಕಿವಿಯಲ್ಲಿ ನೋವಿದ್ದರೆ ತುಳಸಿ ಎಲೆಗಳ ರಸವನ್ನು ಕಿವಿಗೆ ಹಿಂಡುತ್ತಿದ್ದರೆ ನೋವು ಮಾಯವಾಗುವುದು.
  5. ನೆಗಡಿ ವಾಸಿಯಾಗಲು ತುಳಸಿ ಸೊಪ್ಪಿನ ಕಷಾಯವನ್ನು ತಯಾರಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಬೇಕು.
  6. ಅತಿಯಾದ ಕೆಮ್ಮು ನಿವಾರಣೆಗೆ ಶ್ರೀತುಳಸಿ ರಸ, ಬೆಳ್ಳುಳ್ಳಿ ರಸ ಹಾಗೂ ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಮಾಡಿಕೊಂಡ ಮೂರು ಗಂಟೆಗಳಿಗೆ ಒಂದು ಸಾರಿ ಒಂದು ಟೀ ಚಮಚದಷ್ಟು ಸೇವಿಸುತ್ತಿದ್ದರೆ ಕೆಮ್ಮು ನಿಂತು ಹೋಗುವುದು.
  7. ಜ್ವರದಿಂದ ಕೂಡಿದ ಕೆಮ್ಮಿಗೆ ತುಳಸಿ ರಸದಲ್ಲಿ ಕಾಳುಮೆಣಸಿನ ಚೂರ್ಣವನ್ನು ಕಲಸಿ ಸೇವಿಸುವುದರಿಂದ ಗುಣ ಕಂಡುಬರುತ್ತದೆ.
  8. ಕಫ ನಿವಾರಣೆಗೆ ತುಳಸಿ ಹೂವುಗಳನ್ನು ಈರುಳ್ಳಿ ರಸ, ಶುಂಠಿ ರಸ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.
  9. ಮಲೇರಿಯಾ ಜ್ವರಕ್ಕೆ ಕೃಷ್ಣ ತುಳಸಿ ಸೊಪ್ಪಿನ ರಸವನ್ನು ತೆಗೆದು ಮೈಗೆ ತಿಕ್ಕಿ ಮಾಲೀಷ್ ಮಾಡುವುದರಿಂದ ಛಳಿ ನಿಲ್ಲುವುದು ಹಾಗೂ ತುಳಸಿ ರಸದೊಂದಿಗೆ ಕಾಳು ಮೆಣಸಿನ ಪುಡಿ ಸೇವಿಸುವುದರಿಂದ ಜ್ವರ ಗುಣವಾಗುವುದು.
  10. ಶ್ರೀತುಳಸಿ ಕಷಾಯವನ್ನು ತಯಾರಿಸಿ ಒಂದು ಟೀ ಚಮಚದಷ್ಟು ರಸವನ್ನು ದಿನಕ್ಕೆ ಮೂರು ಬಾರಿಯಂತೆ ನಾಲ್ಕೈದು ದಿನಗಳ ಕಾಲ ಸೇವಿಸುತ್ತಿದ್ದರೆ ಶ್ವಾಸನಳಿಕಾ ದಾಹ ಗುಣವಾಗುತ್ತದೆ.
  11. ಒಂದು ಟೀ ಚಮಚ ತುಳಸಿ ರಸವನ್ನು ದಿನಕ್ಕೆ ಎರಡು ಬಾರಿಯಂತೆ ಎರಡು ಮೂರು ದಿನಗಳ ಕಾಲ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುವುದು.
  12. ಶ್ರೀತುಳಸಿ ಸೊಪ್ಪಿನ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಬೆಳಗ್ಗೆ ಎದ್ದಾಗ ಉಂಟಾಗುವ ಅಸ್ವಸ್ಥತೆ ದೂರವಾಗುವುದು.
  13. ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಉಪಶಮನವಾಗುತ್ತದೆ.
  14. ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ 6 ತಿಂಗಳು ತೆಗೆದುಕೊಂಡಲ್ಲಿ ಮೂತ್ರದಲ್ಲಿನ ಕಲ್ಲಿನ ಬಾಧೆ ಕಡಿಮೆಯಾಗುತ್ತದೆ.
  15. ತುಳಸಿಯ ಎಲೆಗಳು ನಮ್ಮ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ ಹಾಗೂ ಉದರ ಬಾಧೆಗಳನ್ನು ನಿವಾರಿಸಿ ಶಕ್ತಿ ಕೊಡುತ್ತದೆ.

ಸುದ್ದಿದಿನ|ವಾಟ್ಸಾಪ್|9986715401

Continue Reading

ಲೈಫ್ ಸ್ಟೈಲ್

ವೀರ್ಯಾಣು ವೃದ್ಧಿಸೋ ‘ಮಾವಿನ ಹಣ್ಣಿನ’ ಉಪಯೋಗಗಳಿಷ್ಟು..!

Published

on

ಸುದ್ದಿದಿನ ಡೆಸ್ಕ್ : ಮಾವಿನ ಹಣ್ಣು, ಮಾವಿನ ಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ನೋಡಿದರೆ ಅಥವಾ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಅದನ್ನು ಹಾಗೆ ತಿನ್ನುವುದರ ಜೋತೆಗೆ ಅದರ ಉಪಯೋಗಗಳನ್ನು ತಿಳಿದರೆ ಇನ್ನೂ ಸವಿಯಲು ರುಚಿಯಾಗಿರುತ್ತದೆ. ಮಾವಿನಿಂದ ಯಾವ ಯಾವ ರೀತಿ ಉಪಯೋಗವಿದೆ ಸ್ವಲ್ಪ ತಿಳಿಯೋಣ.

ಉಪಯೋಗಗಳು

  1. ಮಾವಿನ ಕಾಯಿಯನ್ನು ತಿನ್ನುವುದರಿಂದ ಕಾಲರಾ, ಆಮಶಂಕೆ ರೋಗಗಳು ನಿರೋಧಿಸಲ್ಪಡುವುವು.
  2. ಮಾವಿನ ಕಾಯಿಯಲ್ಲಿ ‘ಸಿ’ ಜೀವಸತ್ವ ಸಾಕಷ್ಟು ಇರುವುದು. ಅದನ್ನು ಪ್ರತಿದಿನ ತಿನ್ನುವುದರಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ. ಹೃದಯ ದೌರ್ಬಲ್ಯ ತಗ್ಗಿ ನರಗಳ ರ್ದುಬಲತೆ ದೂರವಾಗುವುದು.
  3. ಉಪ್ಪಿನೊಡನೆ ಮಾವಿನಕಾಯಿಯನ್ನು ನಂಚಿಕೊಂಡು ತಿಂದರೆ ಬಾಯಾರಿಕೆ ಬಳಲಿಕೆ ಪರಿಹಾರವಾಗುತ್ತದೆ.
  4. ಉಪ್ಪು ಮತ್ತು ಜೇನುತುಪ್ಪವನ್ನು ನಂಚಿಕೊಂಡು ಹೀಚು ಮಾವಿನಕಾಯಿ ತಿಂದರೆ ಮಲಬದ್ಧತೆ, ಅಜೀರ್ಣ ರೋಗಗಳಲ್ಲಿ ಗುಣಕಂಡು ಬರುವುದು.
  5. ಜೇನುತುಪ್ಪ ಮತ್ತು ಕಾಳು ಮೆಣಸಿನೊಂದಿಗೆ ಮಾವಿನಕಾಯಿಯನ್ನು ತಿನ್ನುವುದರಿಂದ ಅರಿಶಿನ ಕಾಮಾಲೆ ಕಾಯಿಲೆ ಸಂಭವಿಸುವ ಸಾಧ್ಯತೆ ಇರುವುದಿಲ್ಲ.
  6. ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿ ಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುತ್ತದೆ.
  7. ಮಾವಿನಕಾಯಿಯ ಸಿಪ್ಪೆಯನ್ನು ಹುರಿದು ತಿನ್ನುವುದರಿಂದ ಋತುಸ್ರಾವದಲ್ಲಿ ಗಣನೀಯ ಪ್ರಮಾಣದಲ್ಲಿ ರಕ್ತ ಹೀನತೆ ಆಗುವುದನ್ನು ತಡೆಯಬಹುದು.
  8. ಮಾವಿನ ಹಣ್ಣನ್ನು ಸೇವಿಸುವುದರಿಂದ ವೀರ್ಯ ವೃದ್ಧಿಯಾಗುತ್ತದೆ.
  9. ಶರೀರದ ಬಣ್ಣ ಉತ್ತಮಗೊಳ್ಳತ್ತದೆ.
  10. ಮಾವಿನ ಹಣ್ಣು ಹಿತಮಿತವಾಗಿ ತಿಂದರೆ ವಾಯುವನ್ನು ಶಮನಗೊಳಿಸುತ್ತದೆ.
  11. ಮಾವಿನಕಾಯಿಯನ್ನು ತಿನ್ನುವುದರಿಂದ ವಾತ-ಪಿತ್ತ ನಾಶಗೊಳಿಸಿ ಹೃದಯಕ್ಕೆ ಅತ್ಯಂತ ಹಿತವನ್ನುಂಟು ಮಾಡುತ್ತದೆ.
  12. ಮಾವಿನಕಾಯಿಯ ಸಿಪ್ಪೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯಲ್ಲಿ ಕದಡಿ ದಿನಕ್ಕೆ ಎರಡು ಬಾರಿ ತೆಗೆದುಕೊಂಡರೆ ಅತಿಸಾರ ಮತ್ತು ಆಮಶಂಕೆ ರೋಗಿಗಳು ನಿವಾರಣೆಯಾಗುತ್ತದೆ.
  13. ಬಲಿತ ಮಾವಿನ ಕಾಯಿಗಳ ಉಪ್ಪಿನ ಕಾಯಿಯನ್ನು ಮಜ್ಜಿಗೆ ಅನ್ನದ ಜೊತೆಗೆ ನಂಚಿಕೊಂಡು ತಿನ್ನುವುದರಿಂದ ಚೆನ್ನಾಗಿ ಹಸಿವು ಆಗುವುದು.
  14. ಆಗ ತಾನೇ ಮಾವಿನಕಾಯಿಗಳನ್ನು ಕಿತ್ತಾಗ ಅದರ ತೊಟ್ಟು ಮುರಿದರೆ ಒಂದು ರೀತಿಯ ಬಿಳಿಯ ಅಂಟುದ್ರವ ಸುರಿಯುವುದು. ಅದನ್ನು ಹೆಚ್ಚಿದರೆ ಹುಳಕಡ್ಡಿ ಮತ್ತು ಇಸುಬು ರೋಗಗಳು ದೂರವಾಗುವುದು.
  15. ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ಆಹಾರ ಚೆನ್ನಾಗಿ ಜೀರ್ಣಿಸುವುದು. ಜೊತೆಗೆ ಹೃದ್ರೋಗಕ್ಕೆ ಇದು ಅತ್ಯಂತ ದಿವ್ಯ ಔಷಧಿಯಂತೆ.
  16. ಮಾವಿನ ಹಣ್ಣಿನ ಸೀಕರಣೆ ಮಾಡಿಕೊಂಡ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಶ್ರವಣಶಕ್ತಿ ಅಧಿಕವಾಗುವುದು.
  17. ಕಣ್ಣಿನ ಆರೋಗ್ಯ ರಕ್ಷಣೆಗೆ ಬಹು ಒಳ್ಳೆಯದು.
  18. ಒಣಗಿದ ಜಾತಿಯ ಮಾವಿನ ಹಣ್ಣುಗಳನ್ನು ಊಟವಾದ ನಂತರ ತಿಂದರೆ ಹಸಿವು ಹೆಚ್ಚುತ್ತದೆ. ದೈಹಿಕ ಚಟುವಟಿಕೆ ಅಧಿಕವಾಗುತ್ತದೆ.
  19. ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
  20. ಮಾವಿನ ಹಣ್ಣನ್ನು ಕತ್ತರಿಸಿ ಅದರ ಚಿಕ್ಕ ತುಂಡನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ ನಂತರ ಸ್ನಾನ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು.

ಇದನ್ನೂ ಓದಿ

ಕೊಬ್ಬು ಕರಗಿಸೋ ‘ಬೆಟ್ಟದ ನೆಲ್ಲಿಕಾಯಿ’ ಬಗ್ಗೆ ನಿಮಗೆಷ್ಟು ಗೊತ್ತು..?

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಲೈಫ್ ಸ್ಟೈಲ್

ಕಹಿ‌ ಸಂಜೀವಿನಿ ‘ಬೇವಿ’ನಿಂದ‌ ಇಷ್ಟೆಲ್ಲಾ ಖಾಯಿಲೆಗಳು ವಾಸಿಯಾಗುತ್ತವೆ ಗೊತ್ತಾ..!?

Published

on

ಬೇವು ಎಂದ ತಕ್ಷಣ ನಮ್ಮಗೆ ನೆನಪಾಗೋದು ಯುಗಾದಿ ಹಬ್ಬ. ಆ ದಿನ ಎರಡು ಬೇವಿನ ಎಲೆ ತಿಂದರೆ ಮುಗಿಯಿತು. ಮತ್ತೆ ಅದು ಮುಂದಿನ ಯುಗಾದಿಗೆನೆ ತಿನ್ನುವುದು. ಅದರ ಉಪಯೋಗಿಸುವ ಹಾಗು ಉಪಯೋಗಗಳನ್ನು ತಿಳಿದರೆ, ನಮ್ಮಗೆ ಬೇಕಾದಾಗ ಬಳಸಿಕೊಳ್ಳಬಹುದು.

ಉಪಯೋಗಗಳು

  1. ಆಗ ತಾನೇ ಕಿತ್ತು ತಂದ ಬೇವಿನ ಎಲೆಗಳನ್ನು ಮೊಸರಿನಲ್ಲಿ ಅರೆದು ಹುಳಕಡ್ಡಿಯ ಮೇಲೆ ಲೇಪಿಸುವುದರಿಂದ ಕೆಲವೇ ದಿನಗಳಲ್ಲಿ ಗುಣ ಕಂಡುಬರುವುದು.
  2. ಬೇವಿನ ಎಣ್ಣೆಯನ್ನು ರೋಗಗ್ರಸ್ತ ಚರ್ಮದ ಮೇಲೆ ಹಚ್ಚಿ ಮಾಲೀಷ್ ಮಾಡುವುದರಿಂದ ಚರ್ಮರೋಗಗಳು ನಿವಾರಣೆಯಾಗುತ್ತದೆ.
  3. ಬೇವಿನ ಮರದ ತೊಗಟೆಯನ್ನು ಕಲ್ಲಿನ ಮೇಲೆ ತೇದು ಗಂಧವನ್ನು ತೆಗೆದು ಗಾಯವನ್ನು ಬೇವಿನ ಸೊಪ್ಪಿನ ಕಷಾಯದಿಂದ ತೊಳೆದು ಈ ಗಂಧವನ್ನು ನಾಲ್ಕು ದಿನಗಳ ಕಾಲ ದಿನಕ್ಕೆ ಒಂದೆರಡು ಬಾರಿಯಂತೆ ಲೇಪಿಸುತ್ತಿದ್ದರೆ ಗಾಯ ವಾಸಿಯಾಗುವುದು.
  4. ಬೇವಿನ ಸೊಪ್ಪಿನ ಕಷಾಯದಿಂದ ಆಗಾಗ್ಗೆ ತಲೆ ತೊಳೆಯುತ್ತಿದ್ದರೆ ಕೂದಲು ಉದರುವುದು ನಿಲ್ಲುವುದು ಹಾಗೂ ಬಹಳ ಸಮಯದವರೆಗೆ ಕೂದಲು ನೆರೆಯುವುದಿಲ್ಲ.
  5. ಬೇವಿನ ಬೀಜಗಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಅದನ್ನು ಕೂದಲಿಗೆ ಹಚ್ಚಿ ಏಳೆಂಟು ಗಂಟೆಗಳ ನಂತರ ಬೇವಿನ ಸೊಪ್ಪಿನ ಕಷಾಯದಿಂದ ತಲೆಯನ್ನು ಆಗಾಗ್ಗೆ ತೊಳೆದುಕೊಳ್ಳುತ್ತಿದ್ದರೆ ತಲೆಯಲ್ಲಿನ ಹೇನುಗಳು ನಿವಾರಣೆಯಾಗುತ್ತದೆ.
  6. ಬೇವಿನ ಹಸಿರೆಲೆಗಳನ್ನು ಕುಟ್ಟಿ ರಸ ತೆಗೆದು ಅದನ್ನು ಶೋಧಿಸಿ ಆಗಾಗ್ಗೆ ಕಣ್ಣಿಗೆ ತೊಟ್ಟು ತೊಟ್ಟಾಗಿ ಹಾಕುತ್ತಿದ್ದರೆ ಕಣ್ಣು ಮಂಜಾಗುವಿಕೆಯು ನಿವಾರಣೆಯಾಗುತ್ತದೆ.
  7. ಬೇವಿನ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ಹಬೆ ಹೊರಡುತ್ತಿರುವಾಗ ಆ ಹಬೆಯನ್ನು ಕಿವಿಗೆ ಹಾಯಿಸಿದರೆ ಕಿವಿ ನೋವು ಕಡಿಮೆಯಾಗುತ್ತದೆ.
  8. ಬೇವಿನ ಸೊಪ್ಪಿನ ಒಂದು ಟೀ ಚಮಚ ಸರಕಾರಿ ಒಂದು ಚಿಟಿಕೆ ಉಪ್ಪನ ಪುಡಿಯನ್ನು ಸೇರಿಸಿ ಅದನ್ನು ಬಿಸಿ ಮಾಡಿ ತೊಟ್ಟು ತೊಟ್ಟಾಗಿ ಕಿವಿಗೆ ಬಿಡುವುದರಿಂದ ಕಿವಿಯಲ್ಲಿ ಹೊಕ್ಕಿರುವ ಕೀಟ ಸಾಯುವುದು.
  9. ಬೇವಿನ ಎಲೆಗಳ ರಸವನ್ನು ಹನಿಹನಿಯಾಗಿ ಮೂಗಿನ ಹೊಳ್ಳೆಗಳಿಗೆ ಬಿಡುವುದರಿಂದ ಮೂಗಿನಿಂದ ರಕ್ತ ಸುರಿಯುವುದನ್ನು ತಡೆಗಟ್ಟಬಹುದು.
  10. ಹೊಸದಾಗಿ ಕಿತ್ತು ತಂದ ಬೇವಿನ ಸೊಪ್ಪಿನ ರಸ ತೆಗೆದು ಮೂಗಿನ ಹೊಳ್ಳೆಗಳಿಗೆ ನಾಲ್ಕೈದು ತೊಟ್ಟುಗಳನ್ನು ಬಿಡುತ್ತಿದ್ದರೆ ಅತಿಯಾದ ಸೀನುವಿಕೆ ನಿಲ್ಲುವುದು.
  11. ಬೇವಿನ ಸೊಪ್ಪಿನ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಬಿಸಿ ಮಾಡಿ ಗಂಟಲಿಗೆ ಹಾಕಿಕೊಂಡು ಬಾಯಿ ಮುಕ್ಕಳಿಸುತ್ತಿದ್ದರೆ ಗಂಟಲು ಹುಣ್ಣು ವಾಸಿಯಾಗುವುದು.
  12. ಹಸಿ ಬೇವಿನಕಡ್ಡಿಯನ್ನು ಬ್ರಷ್ ನಂತೆ ಮಾಡಿಕೊಂಡು ಹಲ್ಲು ಉಜ್ಜುತ್ತಿದ್ದರೆ ಹಲ್ಲು ನೋವು ನಿವಾರಣೆಯಾಗುತ್ತದೆ ,ಹಲ್ಲುಗಳು ಶುಭ್ರವಾಗುವುದು.
  13. ಬೇವಿನ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸುತ್ತಿದ್ದರೆ ವಸಡಿನ ಬೇನೆಗಳು ದೂರವಾಗುವುದು.
  14. ನವಿರಾದ ಬೇವಿನ ಎಲೆಗಳನ್ನು ಕುಟ್ಟಿ ರಸ ತೆಗೆದು ಒಂದೆರಡು ಟೀ ಚಮಚದಷ್ಟು ಸೇವಿಸುತ್ತಿದ್ದರೆ ತಲೆನೋವು ದೂರವಾಗುವುದು.
  15. ಬೇವಿನ ಮರದ ತೊಗಟೆಗಳ ಒಳಪದರವನ್ನು ಕೆತ್ತಿ ತೆಗೆದುಕೊಂಡು ಕುದಿಯುವ ನೀರಿಗೆ ಹಾಕಿ ಮಂದವಾದ ಕಷಾಯ ತಯಾರಿಸಿ ಜ್ವರ ಬಂದವರಿಗೆ ಪ್ರತಿದಿನ ಬೆಳಿಗ್ಗೆ ಕುಡಿಸುತ್ತಿದ್ದರೆ ಜ್ವರ ಬಿಟ್ಟು ಹೋಗುವುದು.
  16. ಬೇವಿನ ಸೊಪ್ಪನ್ನು ಜಜ್ಜಿ ರಸ ತೆಗೆದು ಅದಕ್ಕೆ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಹನಿಹನಿಯಾಗಿ ಚೀಪುತ್ತಿದ್ದರೆ ವಾಕರಿಕೆ ಶಮನವಾಗುವುದು.
  17. ಮರದಿಂದ ಉದುರಿದ ಬೇವಿನ ಹಣ್ಣುಗಳಿಂದ ಬೀಜಗಳನ್ನು ತೆಗೆದು ಚೆನ್ನಾಗಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡಿದ್ದು ಪ್ರತಿದಿನ ಬೆಳಿಗ್ಗೆ ಅರ್ಧ ಟೀ ಚಮಚ ಚೂರ್ಣವನ್ನು ಜೇನುತುಪ್ಪದಲ್ಲಿ ಕಲೆಸಿ ಸೇವಿಸುತ್ತಿದ್ದರೆ ಮೂಲವ್ಯಾಧಿಯಲ್ಲಿ ಗುಣ ಕಂಡು ಬರುವುದು.
  18. ಬೇವಿನ ಹೂಗಳನ್ನು ತೆಗೆದುಕೊಂಡು ಅಷ್ಟೇ ಪ್ರಮಾಣದ ಕಲ್ಲು ಸಕ್ಕರೆಯನ್ನು ಜಾಡಿಯಲ್ಲಿ ತುಂಬಿ ಒಂದು ತಿಂಗಳ ಕಾಲ ಜಾಡಿಯನ್ನು ಬಿಸಿಲಿಗಿಡುತ್ತಿದ್ದರೆ ಅದು ಜಾಮ್ ರೀತಿ ಆಗುವುದು. ಒಂದು ಟೀ ಚಮಚ ಜಾಮ್ ಅನ್ನು ಬರೀ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸುವುದರಿಂದ ಮೂಲವ್ಯಾಧಿಯು ಗುಣವಾಗುತ್ತದೆ.
  19. ಹೊಸದಾಗಿ ಕಿತ್ತು ತಂದ ಬೇವಿನ ಹೂಗಳನ್ನು ಒಂದು ದಿನವಿಡೀ ನೀರಿನಲ್ಲಿ ನೆನೆಸಿ ಮಾರನೇ ದಿನ ಅದನ್ನು ಕಿವುಚಿ ಶೋಧಿಸಿದ ನೀರನ್ನು ಮೂರು ಗಂಟೆಗಳಿಗೊಮ್ಮೆ ಸೇವಿಸುವುದರಿಂದ ಅಂಗಾಲು-ಅಂಗೈ ಉರಿ ನಿವಾರಣೆಯಾಗುತ್ತದೆ.
  20. ಬೇವಿನ ಸೊಪ್ಪಿನ ಕಷಾಯ ತಯಾರಿಸಿ ಉಗುರು ಬೆಚ್ಚಗಿರುವ ಕಷಾಯದಿಂದ ಯೋನಿಯನ್ನು ಆಗಾಗ್ಗೆ ತೊಳೆಯುತ್ತಿದ್ದರೆ ಯೋನಿಯು ರೋಗಾಣು ರಹಿತವಾಗಿರುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending