Connect with us

ಲೈಫ್ ಸ್ಟೈಲ್

ಇದು ಪರಿಸರ ಸ್ನೇಹಿ ಪಟಾಕಿ..!

Published

on

ಸುದ್ದಿದಿನ ಡೆಸ್ಕ್ : ಇಡೀ ವಿಶ್ವದಾದ್ಯಂತ ಭಾರತೀಯರ ದೀಪಾವಳಿ  ಹಬ್ಬದ ತಯಾರಿ ಜೋರಾಗಿಯೇ ಸಾಗಿದೆ. ಮೂರು ದಿನಗಳ ಬೆಳಕಿನ  ಸಂಭ್ರಮಕ್ಕೆ ಸಾಕ್ಷಿ ಆಗಲಿದೆ ಭೂಮಿ. ಭಾರತೀಯ ಸಂಸ್ಕೃತಿ ಯಲ್ಲಿ ಬಹಳ ವಿಶೇಷ ಅನಿಸಿಕೊಂಡಿರುವ ಈ ಹಬ್ಬ ಜೀವನದ ಕತ್ತಲು-ಬೆಳಕಿನಾಟಕ್ಕೆ ಸಾಕ್ಷಿಯಾಗಲಿದೆ.

ದೀಪಾವಳಿ ಹಬ್ಬದಲ್ಲಿ ನಡೆಯುವ ಲಕ್ಷ್ಮಿ ಪೂಜೆ, ಹಣತೆಯ ಆರಾಧನೆ, ಸ್ವಾದಿಷ್ಟ ಭೋಜನ,  ಹೊಸ ಬಟ್ಟೆ ಯ ಸಡಗರ, ಪಟಾಕಿ ಯ ಅಬ್ಬರ.. ಪಟಾಕಿ ಎಂದೊಡನೆ ತಟ್ಟನೆ ನೆನಪಾಗೋದು ಬಿಜಲೀ, ಲಕ್ಷ್ಮಿ ಬಾಂಬ್, ಹೈಡ್ರೋಜನ್ ಬಾಂಬ್! ಸುರಸುರ ಬತ್ತಿ, ರಾಕೆಟ್… ಅರರೆ..  ಸುಮ್ಮನೆ ಯಾಕೆ ನೆನಪಿಸಿ ಹೊಟ್ಟೆ ಉರಿಸುತ್ತೀರಾ.. ಈ ಬಾರಿಯ ಸುಪ್ರೀಂಕೋರ್ಟ್ ಆದೇಶ ದ ಮೇರೆಗೆ ಪಟಾಕಿ ಹೊಡೆಯದೆ ಹಾಗಿಲ್ಲ ಅಂತ ಬೇಸರಗೊಂಡಿರುವವರಿಗೆ, ಇದೋ ಸಿಹಿ ಸುದ್ದಿ.

ನಿಮ್ಮ ಮನಸೋತಿದ್ದ ಇಚ್ಛೆ, ನಿಮ್ಮ ಫೇವರಿಟ್ ಪಟಾಕಿ ಯನ್ನು ನೀವು ಸಿಡಿಸಬಹುದು… ಆದರೆ… ಕಿವಿಯಲ್ಲಿ ಪುಟ್ಟ ರೊಂದು ಟ್ವಿಸ್ಟ್… ಈ ಪಟಾಕಿ ನಿಮ್ಮ ಬಾಯಲ್ಲಿ ಸಿಡಿಯುತ್ತದಷ್ಟೇ..

 

ಈ ಬಾರಿಯ ದೀಪಾವಳಿಯ ವಿಶೇಷ ಎಂದರೇ … #DiwaliCrackersChocolate ಪಟಾಕಿ ಯ ಚಾಕಲೇಟ್.. ನೋಡೋಕೆ ಅಚ್ಚು ಪಟಾಕಿ ಅಂತೆಯೇ ಕಾಣುವ ಈ ಚಾಕಲೇಟ್ ಗಳ ಬೇಡಿಕೆ ಹೆಚ್ಚಿದೆ.

 

ದೀಪಾವಳಿ ಸಂದರ್ಭದಲ್ಲಿ ಸ್ನೇಹಿತರು-ಸಂಬಂಧಿಕರಲ್ಲಿ ಸಿಹಿ ಹಂಚುವುದು ಸಾಮಾನ್ಯ. ಈಗಿನ ಆಧುನಿಕತೆಯ ಅಬ್ಬರದಲ್ಲಿ ಗಿಫ್ಟ್ ಗಳ ಕಾರುಬಾರು ಬಲು ಜೋರು.. ಈಗಂತೂ ಬಹಳ ಡಿಫರೆಂಟ್ ಆದ ದೀಪಾವಳಿ ಗಿಫ್ಟ್ ಮತ್ತು ಸ್ವೀಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

 

ಹಾಗಾದ್ರೆ ಈ ಬಾರಿಯ ದೀಪಾವಳಿ ಗೆ ನಿಮ್ಮ ಫ್ರೆಂಡ್ಸ್ ಮತ್ತು ಕುಟುಂಬಸ್ಥರೊಂದಿಗೆ ಈ ವಿಶೇಷ #Diwalicrackerschocolate ಪಟಾಕಿ ಚಾಕಲೇಟ್ ಸವಿಯುತ್ತಾ ದೀಪಗಳ ಹಬ್ಬವನ್ನ ಸಂಭ್ರಮದಿಂದ  ಆಚರಿಸಿ. ಪರಿಸರ ಸ್ನೇಹಿ ದೀಪಾವಳಿ ನಿಮ್ಮ ದಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೈಫ್ ಸ್ಟೈಲ್

ಚಿಕನ್ ಪಕೋಡ ಮಾಡೋದು ಹೇಗೆ ಗೊತ್ತಾ..?

Published

on

ಚಿಕನ್ ಪಕೋಡ ರೆಸಿಪಿ

ಅರ್ಧ ಕೇಜಿ ಮೂಳೆಯಿಲ್ಲದ (bone less) ಚಿಕನ್ನನ್ನು ಉಪ್ಪು ಹಾಕಿ ತೊಳೆದು ಕೊಂಡು ಸಣ್ಣದಾಗಿ ತುಂಡು ಮಾಡಿಕೊಳ್ಳಿ. (ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಕೊಳ್ಳೋ ತರ)

ಪಾಯಸಕ್ಕೆ ಉಪಯೋಗಿಸುವ ಶಾವಿಗೆಯನ್ನು ಬಿಸಿ ನೀರಲ್ಲಿ ಬೇಯಿಸಿಕೊಳ್ಳಬೇಕು. ನೀರು ಕುದಿ ಬಂದ ಕೂಡಲೇ ಒಲೆ ಆಫ್ ಮಾಡಿ, ನಂತರ ಶಾವಿಗೆಯನ್ನು ಬಿಸಿನೀರಿನಿಂದ ಬಸಿದು, ತಕ್ಷಣ ತಣ್ಣೀರು ಹಾಕಿ ಬಸಿದುಕೊಳ್ಳಿ.

ನಂತರ ಒಂದು ಬಟ್ಟಲಲ್ಲಿ ತುಂಡು ಮಾಡಿದ ಚಿಕನ್, ಬೇಯಿಸಿದ ಶಾವಿಗೆ, ನಾಲ್ಕು ಚಮಚೆ ಕಾರ್ನ್ ಫ್ಲೋರ್, ಉಪ್ಪು, ಕರಿಮೆಣಸು ಪುಡಿ, ಕಾರದ ಪುಡಿ, ಜೀರಿಗೆ, ಶುಂಟಿ ಬೆಳ್ಳುಳ್ಳಿ ಪೇಸ್ಟ್. ಚೂರು ನಿಂಬೆ ರಸ ಇಷ್ಟನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ ಕಲಸಿದ ಮಿಶ್ರಣಕ್ಕೆ ಸ್ವಲ್ಪವೇ ನೀರು ಬೆರೆಸಿ ಮಿಶ್ರಣವನ್ನು ಪಕೋಡ ತರ ಎಣ್ಣೆಯಲ್ಲಿ ಬಿಡಿ. ಎಣ್ಣೆ ಬಿಸಿಯಾದ ನಂತರ ಸಣ್ಣ ಉರಿಯಲ್ಲೇ ನಿಧಾನವಾಗಿ ಪಕೋಡಗಳನ್ನು ಬೇಯಿಸಬೇಕು. ಟಮೋಟೋ ಚಟ್ನಿಯೊಂದಿಗಿನ ಈ ಪಕೋಡ ಮಕ್ಕಳಿಗಂತೂ ತುಂಬಾ ಇಷ್ಟವಾಗುತ್ತೆ.

Continue Reading

ಲೈಫ್ ಸ್ಟೈಲ್

‘ಗುಲ್ಕನ್’ ಮಹಿಮೆ ಅಪಾರ..!

Published

on

ಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್. ಗುಲ್ಕನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಉತ್ತಮ ಪ್ರಯೋಜನ ಪಡೆಯಬಹುದು.ಇದರಲ್ಲಿ ವಿವಿಧ ಬಗ್ಗೆಯ ಗುಲ್ಕನ್ ಇದೇ.

ಗುಲ್ಕನ್ ಅನ್ನು ಹಲವು ರೀತಿಯಲ್ಲಿ ಬಳಸಬಹುದು

  • ಕೆಲವರು ಇದನ್ನು ಬಾಯಿಯ ಅಲ್ಸರ್ ನಿವಾರಿಸಲು ಬಳಸುತ್ತಾರೆ.
  • ರಕ್ತ ಶುದ್ಧಿ ಮಾಡಿ, ಚರ್ಮದಲ್ಲಿ ಸುಕ್ಕು, ಮೊಡವೆ ಮತ್ತು ಕಪ್ಪು ಕಲೆಗಳು ಮೂಡದ ಹಾಗೆ ನೋಡಿಕೊಳ್ಳುತ್ತೆ.
  • ಆರಿಸಿದ ತಾಜಾ ಗುಲಾಬಿ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಬೆಲ್ಲ ಇಲ್ಲವೇ ಸಕ್ಕರೆ ಸೇರಿಸುತ್ತಾರೆ. ಗುಲ್ಕನ್ ತಯಾರಿಕೆಯಲ್ಲಿ ಶುಂಠಿಯನ್ನು ಬಳಸುತ್ತಾರೆ.
  • ಇಂತಹ ಗುಲ್ಕನ್ ಅನ್ನು ಪ್ರತಿನಿತ್ಯ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು. ಜೊತೆಗೆ ದೇಹವನ್ನು ತಂಪಾಗಿಸುತ್ತದೆ.
  • ಇದೊಂದು ಒಳ್ಳೆ ಆಂಟಿಆಕ್ಸಿಡೆಂಟ್. ಹಾಗಾಗಿ ನಮ್ಮ ದೇಹದಲ್ಲಿ ಶಕ್ತಿ ಉತ್ಪತ್ತಿ ಮಾಡೋಕೆ ಸಹಾಯ ಮಾಡುತ್ತದೆ.
  • ಗುಲ್ಕನ್ ಶೀತ ಪದಾರ್ಥ, ಆದುದರಿಂದ ಇದು ಕೈಕಾಲು ಉರಿ,ನಿಶ್ಯಕ್ತಿ, ಇತರೆ ನೋವನ್ನು ಕಮ್ಮಿ ಮಾಡುತ್ತೆ.
  • ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆನೋವನ್ನು ಶಮನ ಮಾಡುತ್ತದೆ. ಗರ್ಭಿಣಿಯರು ಗುಲ್ಕನ್ ಸೇವಿಸಿದರೆ ಹೆಚ್ಚು ಉತ್ತಮ.
  • ಗುಲ್ಕನ್ ದೇಹದ ರಕ್ತವನ್ನು ಶುದ್ದೀಕರಿಸುತ್ತದೆ. ನಿಶಕ್ತಿಯನ್ನು ದೂರ ಮಾಡುವ ಗುಣ ಹೊಂದಿರುವ ಗುಲ್ಕನ್ ದೇಹದಲ್ಲಿನ ಅನಗತ್ಯ ಅಂಶಗಳನ್ನು ಹೊರಹಾಕುತ್ತದೆ.
  • ಬೇಸಿಗೆ ಕಾಲದಲ್ಲಿ ಗುಲ್ಕನ್ ಅನ್ನು ಹೆಚ್ಚಾಗಿ ಸೇವಿಸುವುದರಿಂದ ಉಷ್ಣಾಘಾತ ಮತ್ತು ಮೂಗಿನಲ್ಲಿ ರಕ್ತ ಬರುವುದನ್ನು ತಡೆಗಟ್ಟುತ್ತದೆ.
  • ಫೈಬರ್ ಅಂಶ ಹೆಚ್ಚು ಪ್ರಮಾಣದಲ್ಲಿ ಹೊಂದಿರುವ ಗುಲ್ಕನ್ ಅನ್ನು ಮಕ್ಕಳಿಗೆ ಪ್ರತಿನಿತ್ಯ ನೀಡುವುದರಿಂದ ಮಲಬದ್ಧತೆ ದೂರಾಗುತ್ತದೆ.
  • ನರಮಂಡಲಾನ ಒಳ್ಳೆಯ ಸ್ಥಿತೀಲಿಟ್ಟು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
  • ಮನೆಯಿಂದ ಹೊರಗೆ ಹೋಗುವ ಮುಂಚೆ 2 ಚಮಚ ಗುಲ್ಕನ್ ತಿಂದು ಹೊರಟರೆ ಸನ್ ಸ್ಟ್ರೋಕ್ ಆಗೋದನ್ನೂ ತಪ್ಪಿಸಬಹುದು.

ಒಟ್ಟಿನಲ್ಲಿ ದೇಹವನ್ನು ತಂಪಾಗಿಡುವ ಗುಲ್ಕನ್ ಹಲವು ರೀತಿಯಲ್ಲಿ ಆರೋಗ್ಯಕ್ಕೆ‌‌‌‌ ಉಪಯೋಗವಾಗಿದೆ.

ಬೇಕಾಗುವ ಸಾಮಾಗ್ರಿಗಳು: 500 ಗ್ರಾಂ ಒಣಗಿದ ಗುಲಾಬಿಯ ಪಕಳೆಗಳು 500 ಗ್ರಾಂ ನಟ್ಸ್, ಅಂಜೂರ (ಫಿಗ್), ಒಣಗಿದ ಕರ್ಜೂರ * 500 ಗ್ರಾಂ ಸಕ್ಕರೆ ಮತ್ತು 1/2 ಲೋಟ ನೀರು (100ml)

ತಯಾರಿಸುವ ವಿಧಾನ

  • ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಸಕ್ಕರೆ ನೀರು ಗಟ್ಟಿಯಾಗುವರೆಗೆ ಕುದಿಸಬೇಕು.
  • ನಂತರ ಈ ಸಕ್ಕರೆ ಪಾನಕವನ್ನು ತಣ್ಣಗಾಗಲು ಬಿಡಬೇಕು. ನಂತರ ಉಳಿದ ಸಾಮಾಗ್ರಿಗಳನ್ನು ಅದರಲ್ಲಿ ಹಾಕಿ ಮಿಶ್ರ ಮಾಡಬೇಕು. 
  • ಈ ಗುಲ್ಕನ್ ತುಂಬಾ ಗಟ್ಟಿಯಾಗುವುದನ್ನು ತಡೆಯಲು ಫ್ರಿಜ್‌ನಲ್ಲಿ ಇಡಬಾರದು. ಇದನ್ನು ಡಬ್ಬಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು.

ಪ್ರತಿದಿನ ಹಾಗೇ ತಿನ್ನಬಹುದು, ದೋಸೆ ,ಚಪಾತಿ,ರೋಟಿ, ಮುಖ್ಯವಾಗಿ ಬ್ರೆಡ್, ಬನ್ ಗಳಿಗೆ ಬೆಣ್ಣೆ ಗುಲ್ಕನ್ ಸೇರಿಸಿ ಜೊತೆ ತಿನ್ನಬಹುದು ಅಥವಾ ಹಾಲಿನಲ್ಲಿ ಮಿಶ್ರ ಮಾಡಿ ಕುಡಿಯಬಹುದು.

ಸೌಮ್ಯ ಅಶೋಕ್
ಬೆಂಗಳೂರು

Continue Reading

ಲೈಫ್ ಸ್ಟೈಲ್

ಸೌತೆಕಾಯಿ‌ ತಿನ್ನಿ ‘ಆಲ್ ಈಸ್ ವೆಲ್’ ಎನ್ನಿ..!

Published

on

ಕ್ಷಿಣ ಏಷಿಯಾ ಮೂಲದಿಂದ ಬಂದ ಸೌತೆಕಾಯಿ ಈಗ ವಿಶ್ವವ್ಯಾಪಿ. ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ. ಸಂಪೂರ್ಣ ಆರೋಗ್ಯಕ್ಕೆ ಅದರ ಸೇವನೆ ಬಹು ಮುಖ್ಯ. ನಾವು ಈ ಸೌತೆಕಾಯಿ ಯನ್ನು ನಮ್ಮ ಮನೆ ಹಿಂಬದಿ ಇಲ್ಲವೆ ಟೆರಸ್ ಮೇಲೋ ಸೌವತೆ ಬಳ್ಳಿಯನ್ನು ಬೆಳೆಯಬಹುದು. ಸೌತೆಕಾಯಿಯನ್ನು ಸೃಷ್ಟಿಯ ಪೊರಕೆ ಎಂದೂ ಕೂಡ ಕರೆಯುತ್ತಾರೆ.

ಸೌತೆಕಾಯಿಯ ಉಪಯೋಗಗಳು

  • ಅದು ಶರೀರದಲ್ಲಿನ ಅನುಪಯುಕ್ತ ಹಾಗು ವಿಷಕಾರಕ ವಸ್ತುಗಳನ್ನು ಗುಡಿಸಿ ಹೊರಹಾಕುತ್ತದೆ.
  • ನಿತ್ಯ ಸೇವನೆಯಿಂದ ಮೂತ್ರ ಪಿಂಡದಲ್ಲಿನ ಕಲ್ಲುಗಳು ಕರಗುತ್ತವೆ.
  • ಎದೆ, ಗರ್ಭಾಶಯ, ಅಂಡಾಶಯ, ಪ್ರಾಸ್ಟೇಟ ಮುಂತಾದ ಕ್ಯಾನ್ಸರ್‌ ಗಳನ್ನು ತಪ್ಪಿಸುತ್ತದೆ.
  • ನಿಮ್ಮ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
  • ಸೌತೆಕಾಯಿಯಲ್ಲಿನ ಹೆಚ್ಚು ನೀರಿನ ಪ್ರಮಾಣ ಹಾಗು ಕಡಿಮೆ ಕ್ಯಾಲೋರಿಯಿಂದಾಗಿ ಅದು ಪಚನ ಕ್ರಿಯೆಗೆ ತುಂಬ ಅನಕೂಲಕರ. ಅದರಲ್ಲಿನ ನಾರಿನ ಅಂಶ ಮಲಬದ್ಧತೆಯಿಂದ ಬಳಲುವವರಿಗೆ ವರವಾಗಿದೆ.
  • ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಅದು ಅತ್ಯಂತ ಉಪಯುಕ್ತ ಆಹಾರ. ಸೌತೆಕಾಯಿ ರಸ ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಗೆ ಸಹಾಯ ಮಾಡುತ್ತದೆ.
  • ಜೊತೆಗೆ ಅದು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಲು ತುಂಬ ಸಹಕಾರಿ. ಇದರಲ್ಲಿ ಪೊಟ್ಯಾಸಿಯಂ ಹಾಗು ಮ್ಯಾಗ್ನೇಸಿಯಂ ಇರುವದರಿಂದ ರಕ್ತದ ಒತ್ತಡವನ್ನು ಅದು ನಿಯಂತ್ರಿಸುತ್ತದೆ.
  • ಅದರಲ್ಲಿ ಇರುವ ಸಕ್ಕರೆ, ಬಿ ಜೀವನಸತ್ವ, ಎಲೆಕ್ಟ್ರೋಲೈಟ ಮುಂತಾದವುಗಳು ನಮ್ಮ ದೇಹಕ್ಕೆ ಅವಶ್ಯ ಇರುವ ಪೋಷಕಾಂಶಗಳನ್ನು ಒದಗಿಸತ್ತದೆ.
  • ಚರ್ಮದ ಉರಿ ಹಾಗು ಸನ್‌ಬರ್ನ್ಸಗಳಲ್ಲಿ ಸೌತೆಕಾಯಿ ರಸ ತುಂಬ ಪ್ರಯೋಜನಕ್ಕೆ ಬರುತ್ತದೆ.
  • ಕಣ್ಣುಗಳ ಉರಿತ/ನೋವು ಇದ್ದರೆ ಕಣ್ಣು ಮುಚ್ಚಿ, ಕಣ್ಣಿನ ರೆಪ್ಪೆಯ ಮೇಲೆ ಸೌತೆಕಾಯಿಯ ಹೋಳುಗಳನ್ನು ಇಟ್ಟರೆ ಅದು ನಮ್ಮ ತೊಂದರೆಯನ್ನು ನಿವಾರಿಸುತ್ತದೆ.
  • ಸೌವತೆಕಾಯಲ್ಲಿರುವ ಸಿಲಿಕಾನ್ ಹಾಗು ಸಲ್ಫರ್ ಇರುವುದರಿಂದ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಹಾಗೇ ಬರೀ ಆರೋಗ್ಯದ ವಿಷಯದಲ್ಲಿ ಮಾತ್ರ ಅಲ್ಲ ಬೇರೆ ವಿಷಯದಲ್ಲೂ ಸೌತೆಕಾಯಿಂದ ಪ್ರಯೋಜನ ಪಡೆಯಬಹುದು. ನಮ್ಮ ಮನೆಯ ಕನ್ನಡಿ ಕಲೆಗಳಿಂದ ಮಂಕಾಗಿದ್ದರೆ, ಅದನ್ನು ಸೌತೆಕಾಯಿ ಹೋಳುಗಳಿಂದ ತಿಕ್ಕಿ ಸ್ವಚ್ಛಗೊಳಿಸಬಹುದು. ಮನೆಯ ಬಾಗಿಲು-ಕಿಡಕಿಗಳ ಹಿಂಜಿಸ್‌ಗಳು, ಮುಚ್ಚುವಾಗ ತೆರೆಯುವಾಗ ಕರ್ಣಕಠೋರವಾದ ಕೀಜಲು ಸ್ವರವನ್ನು ಹೊರಡಿಸುತ್ತಿದ್ದರೆ; ಸೌತೆಕಾಯಿ ಅದಕ್ಕೂ ಪರಿಹಾರ ನೀಡಬಲ್ಲದು. .

ಸೌತೆಕಾಯಿಯನ್ನು ಅಡುಗೆಯಲ್ಲಿ ಹೀಗೆಲ್ಲ ಬಳಸಬಹುದು

  • ಸೌತೆಕಾಯಿ ಕೊಸಂಬರಿ
  • ಸೌತೆಕಾಯಿ ಅವಲಕ್ಕಿ
  • ಸೌತೆಕಾಯಿ ರೊಟ್ಟಿ
  • ಸೌತೆಕಾಯಿ ಜ್ಯೂಸ್
  • ಸೌತೆಕಾಯಿ ಮೊಸರು ಬಜ್ಜಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending