Connect with us

ಲೈಫ್ ಸ್ಟೈಲ್

ಹಬ್ಬಗಳ ಮಾಸಕ್ಕೆ ಮಾನಿನಿಯರ ಬೆನ್ನೇರಿದ ದೇವಾನುದೇವತೆಗಳು..!

Published

on

ಷಾಢದ ಗಾಳಿ ಕಳೆದು ಮುಂಗಾರು ಮಳೆಯ ಹನಿಗಳ ನಡುವೆ ಶ್ರಾವಣ ಸಡಗರ ಮನೆ-ಮನಗಳ ಬಾಗಿಲು ತಟ್ಟುತ್ತಿದೆ. ಶ್ರಾವಣ ಮಾಸಕ್ಕೆ ಮಾಲು-ಮಳಿಗೆಗಳಲ್ಲಿ ಖರೀದಿಯೂ ಜೋರಾಗಿಯೇ  ಸಾಗಿದೆ.

ಶ್ರಾವಣ ಮಾಸದ ಲಕ್ಷ್ಮಿ ಪೂಜೆ, ಕೃಷ್ಣನ ಆರಾಧನೆ, ಇದರ ಬೆನ್ನಲೇ ಬರುವ ಭಾದ್ರಪದದ ಮಂಗಳ ಗೌರಿ ವ್ರತ, ಸಂಕಷ್ಟಹರ ಗಣಪನ ಹಬ್ಬ. ಸಾಲುಗಟ್ಟಿ ನಿಂತಿರುವ ಹಬ್ಬಗಳ ಸೀಸನ್ ನಲ್ಲಿ,ಮಹಿಳೆಯರ ಸೀರೆ ಶಾಪಿಂಗ್ ಗೆ ಅಂತ್ಯವೇ ಇಲ್ಲ.

ಈಗ, ಹಬ್ಬಕ್ಕೆ ಜರತಾರಿ  ಸೀರೆ ಏನೋ ರೆಡಿ, ಅದಕ್ಕೆ ಒಪ್ಪುವ ರವಿಕೆಯದ್ದೇ ಪಜೀತಿ ,ಎಂದು ಗೊಣಗುವಷ್ಟಿಲ್ಲ. ಈಗಿನ ಫ್ಯಾಷನ್ ಲೋಕದಲ್ಲಿ ರೆಡಿಮೇಡ್ ಸ್ಟಿಚ್ಡ್ ಬ್ಲೌಸ್ ಗಳು ತರಾವರಿ ಬಣ್ಣ-ವಿನ್ಯಾಸದಲ್ಲಿ ದೊರೆಯುತ್ತಿದೆ.

ಬೆನ್ನೇರಿದ ದೇವಾನುದೇವತೆಗಳು

ಸಾಮಾನ್ಯವಾಗಿ ರವಿಕೆಗಳನ್ನ ಮುತ್ತು, ರತ್ನ ಹರಳಿನ ಎಂಬರಾಯ್ಡರೀ ಗಳಿಂದ ಸಿಂಗರಿಸುವುದು; ಕುಚ್ಚು ಮತ್ತು ಹರಳಿನ  ಆಭರಣಗಳನ್ನು ಇಟ್ಟು ಹೊಲಿಯುವುದು ನೋಡಿರುತ್ತೀರಿ. ಆದರೆ ಇದೆಲ್ಲದಕ್ಕೂ ವಿಭಿನ್ನ ಎಂಬಂತೆ ಮಹಿಳೆಯರ  ರವಿಕೆಯ ಬೆನ್ನ ಮೇಲೆ ದೇವಾನುದೇವತೆಗಳೇ ನಲಿದಾಡುತ್ತಿದ್ದಾರೆ.

ಬೆನ್ನ ಮೇಲೆ, ರವಿಕೆಯ ಕೈ ತೋಳುಗಳ ಮೇಲೆ ಲಕ್ಷ್ಮಿ, ವೆಂಕಟೇಶ್ವರ, ಕೃಷ್ಣ, ಗಣಪ, ಶಿವ-ಪಾರ್ವತಿ, ಅಲಮೇಲಮ್ಮ, ಸರಸ್ವತಿ..ಹೀಗೆ ದೇವಾನುದೇವತೆಗಳೆಲ್ಲಾ ದೇವಾಲಯಗಳಿಂದ ಮಹಿಳೆಯರ ರವಿಕಯ ಬೆನ್ನೇರಿದ್ದಾರೆ.

ವಿಶೇಷ ಅಂದರೆ ಹಬ್ಬಕ್ಕೆ ತಕ್ಕಂತೆ ದೇವರ ಎಂಬರಾಯ್ಡರೀ ಡಿಸೈನರ್ ಬ್ಲೌಸ್ ಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ.

ಲಕ್ಷ್ಮಿಕಾಸಿನ ಕುಪ್ಪಸದಲ್ಲಿ ಕಂಗೊಳಿಸಿರಿ

ಲಕ್ಷ್ಮಿ ಕಾಸಿನ ಒಡವೆಗಳು ಹಿಂದಿನಿಂದಲೂ ಮಹಿಳೆಯರ ಫೇವರಿಟ್ ಆಗಿವೆ. ಈಗ ಇದೇ ಲಕ್ಷ್ಮಿ ಕಾಸನ್ನ ಸೀರೆಯ ರವಿಕೆಗಳ ಮೇಲೆ ಪೋಣಿಸಿ ಹೊಲಿಯಲಾಗುತ್ತಿದೆ. 2018 ರ ಲೇಟೆಸ್ಟ್ ಟ್ರೆಂಡ್ ಕಲೆಕ್ಷನ್ ಆಗಿರುವ ಲಕ್ಷ್ಮಿ ಕಾಸಿನ ಡಿಸೈನರ್ ಬ್ಲೌಸ್ ಈ ಬಾರಿಯ ಶ್ರಾವಣ ಸಂಭ್ರಮದ ಮೆರಗು ಹೆಚ್ಚಿಸಿದೆ. ಕುಪ್ಪಸದ ತೋಳು, ಬೆನ್ನಿನ ಹಿಂಬದಿ, ಕತ್ತು ಸುುತ್ತಲೂ ಈ ಲಕ್ಷ್ಮಿ. ಲಕ್ಷ್ಮಿ ಎಂಬರಾಯ್ಡರೀ ರವಿಕೆಗಳು ವರಮಹಾಲಕ್ಷ್ಮಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿವೆ.

ಕೃಷ್ಣಾವತಾರ

ಮುದ್ದು ಕೃಷ್ಣ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.ಈ ಮುದ್ದು ಬೆಣ್ಣೆ ಕಳ್ಳನಿಗೆ ಮನಸೋಲದ ಜೀವಿಯೇ ಇಲ್ಲ. ಕೃಷ್ಣ ನ ಪ್ರಿಂಟ್ ಇರುವ ಸೀರೆಗಳನ್ನ ನೀವು ನೋಡಿರಬಹುದು., ಆದರೇ ಕೃಷ್ಣ-ರಾಧೆಯ ಎಂಬರಾಯ್ಡರೀ ಬ್ಲೌಸ್ ಗಳು  ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್! ರವಿಕೆಯ ಬೆನ್ನು ಮತ್ತು ತೋಳುಗಳಲ್ಲಿ ತುಂಟ ಕೃಷ್ಣನ ಕೃಷ್ಣ ಲೀಲೆ ಜೋರಾಗಿದೆ!

ಗಣಪಮಯ

ಇನ್ನು ಭಾದ್ರಪದದ ಗಣೇಶ ಚತುರ್ಥಿ ಹಾಗೂ ಗೌರಿ ಹಬ್ಬಕ್ಕೆ ಗಣೇಶ-ಗೌರಿಯರ ಎಂಬರಾಯ್ಡರೀ ಬ್ಲೌಸ್ ಗಳು ಮಹಿಳೆಯರನ್ನ  ಮಂತ್ರಮುಗ್ಧರಾಗಿಸಿದೆ. ಈ ರೀತಿಯ ಗಣಪನ ಎಂಬರಾಯ್ಡರೀ ರವಿಕೆಗಳನ್ನ ಗೃಹಪ್ರವೇಶ, ವಿವಾಹದಂತಹ ಶುಭ ಸಂದರ್ಭದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಹಬ್ಬಕ್ಕೆ ಗಣಪತಿಯನ್ನು ಬೆನ್ನಿಗೇರಿಸಿದ ಸಂತೋಷದಲ್ಲಿದೆ ಮಹಿಳಾಲೋಕ.

ನೋಡೋಕೆ ಬಹಳ ಕಲರ್ಫುಲ್ ಹಾಗೂ ಆಕರ್ಷಕ ವಾಗಿ ಕಾಣುವ ಗಣಪನ ಎಂಬರಾಯ್ಡರೀ ರವಿಕೆಗಳು ಈ ಬಾರಿಯ ಗಣೇಶ ಚತುರ್ಥಿಯ ವಿಶೇಷ.

ನಮೋ ವೆಂಕಟೇಶ

ಇನ್ನು ಸೊನಾಲಿ ಬೇಂದ್ರೆ ಅವರ ವೆಂಕಟೇಶ್ವರನ ಎಂಬರಾಯ್ಡರೀ ರವಿಕೆ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. ಹೀಗೆ ದೇವಾನುದೇವತೆಗಳು ಮಹಿಳೆಯರ ರವಿಕೆಗಳಲ್ಲಿ ಪ್ರಕಟವಾಗುತ್ತಿದ್ದು ನಾರಿಯರ ಸ್ಯಾರಿ ಕ್ರೇಜ್ ಗೆ ಕನ್ನಡಿ ಹಿಡಿದಂತಿದೆ.

ಹಾಗಾದರೆ ತಡ ಯಾಕೆ? ಹಬ್ಬಕ್ಕೆ ಸೀರೆ ಕೊಳ್ಳುವ ಸಡಗರದಲ್ಲಿರುವ ಮಹಿಳಾಮಣಿಯರೇ.. ನಿಮ್ಮ ಸೀರೆಗೆ ಮ್ಯಾಚಿಂಗ್ ರವಿಕೆಗಳನ್ನ ನಿಮ್ಮ ಇಷ್ಟ ದೇವರನ್ನು ನೆನೆಯಿರಿ. ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಗೊಳಿಸಿಕೊಳ್ಳಿ.

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಬೇಲಿ ಚಟಕ

Published

on

ಫೋಟೋ : ಭಗವತಿ‌ ಎಂ.ಅರ್ / ಗಂಡು ಬೇಲಿ ಚಟಕ

ಬೇಲಿ ಚಟಕವು (Pied Bush chat) ಗುಬ್ಬಚ್ಚಿಯಂತೆಯೇ ಸಣ್ಣ ಗಾತ್ರದ ಪಕ್ಷಿ. ಸಾಮಾನ್ಯವಾಗಿ ಬೇಲಿಗಳಲ್ಲಿ ಕುರುಚಲು ಗಿಡಗಳಿರುವ ಕಡೆ, ಬಾಲ ಕುಣಿಸುತ್ತಾ ಓಡಾಡುತ್ತಿರುತ್ತವೆ. ಮುಳ್ಳುಗಿಡಗಳ ತುದಿಯಲ್ಲಿ, ವಿರಳ ರೆಂಬೆಗಳಿರುವ ಗಿಡದ ತುದಿಯಲ್ಲಿ ಕೂತು ಬಾಲ ಕುಣಿಸುತ್ತಾ ಅತ್ತೀಂದಿತ್ತ ತಲೆಯನ್ನು ಅಲ್ಲಾಡಿಸುತ್ತಾ ಚಿಟಗುಡುತ್ತದೆ. ಸದಾ ಟುವಟಿಕೆಯಿಂದಿರುವ ಹಕ್ಕಿ ಇದು. ಇವೂ ಕೂಡ ಕೀಟಾಹಾರಿ ಹಕ್ಕಿಗಳ ಸಾಲಿಗೆ ಸೇರುತ್ತವೆ. ಹಾಗಾಗಿಯೇ ಪೊದೆಗಳಿರುವಲ್ಲಿ, ಹೆಚ್ಚಾಗಿ ನೆಲದ ಮೇಲೆ ಆಹಾರ ಹುಡುಕುತ್ತಾ ಇರುತ್ತವೆ.

ಹೆಣ್ಣು ಬೇಲಿ ಚಟಕ

ಗಂಡು ಬೇಲಿಚಟಕದ ಮೈಯ ಹೆಚ್ಚು ಭಾಗ ಕಪ್ಪು ಬಣ್ಣದಾಗಿದ್ದು, ರೆಕ್ಕೆಯ ಮೇಲೆ, ಕೆಳ ಹೊಟ್ಟೆಯ ಭಾಗ ಬಿಳಿಯ ಬಣ್ಣದಾಗಿರುತ್ತವೆ. ನೋಡಲು ಸಪೂರವಾಗಿದ್ದು, ಮೋಟು ಬಾಲ ಹೊಂದಿದೆ. ಪಕ್ಷಿ ಲೋಕದಲ್ಲಿ ಸಾಮಾನ್ಯವಾಗಿ ಗಂಡುಗಳೇ ಹೆಚ್ಚು ಸುಂದರ. ಆದರೆ ಹೆಣ್ಣು ಬೇಲಿಚಟಕವು ಗಂಡಿಗಿಂತ ನೋಡಲು ಮುದ್ದಾಗಿರುತ್ತವೆ.ಮೈ ಪೂರಾ ಕಂದು ಬಣ್ಣದಾಗಿದ್ದು, ಬಾಲದ ಭಾಗ ಇಟ್ಟಿಗೆಯ ಬಣ್ಣವಿರುತ್ತದೆ. ಸಾಮಾನ್ಯವಾಗಿ ಸಿಗುವ ಈ ಹಕ್ಕಿ ಎನ್ನುವ ಕಾರಣಕ್ಕೆ ಬಹುತೇಕರ, ಛಾಯಾಗ್ರಾಹಕರ ಅವಜ್ಞೆಗೆ ಗುರಿಯಾಗಿರುವ ಇವು ತನ್ನ ಪಾಡಿಗೆ ಊರೂರು ತಿರುಗುತ್ತಾ ಇರುತ್ತವೆ!

ಭಗವತಿ ಎಂ.ಆರ್
ಛಾಯಾಗ್ರಾಹಕಿ, ಕವಯಿತ್ರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗಣೇಶ ಬಂದ ನೈಲ್ ಆರ್ಟ್ ಅಲ್ಲೂ ಕ್ರಿಯೇಟಿವಿಟಿ ಕಂಡ..!

Published

on

ಗಣೇಶ ಹಬ್ಬದ ಸಡಗರದಲ್ಲಿ ಮೈಮರೆತಿರರುವ ಹೆಂಗಳೆಯರ ಸಂಭ್ರಮ ಕ್ಕೆ ಸಾಥ್ ನೀಡಲು ಈ ಬಾರಿ ವಿಶೇಷ ನೈಲ್ ಆರ್ಟ್ ಒಂದು ಗರಿಗೆದರಿದೆ. ಗಣೇಶ ಹಬ್ಬದ ಸಂಭ್ರಮಾಚರಣೆ ಮತ್ತಷ್ಟು ರಂಗು ತುಂಬಲು”ಗಣೇಶ ನೈಲ್ ಆರ್ಟ್” ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಹೊಸ ಟ್ರೆಂಡ್ ಸೃಷ್ಟಿಸುವ ನೈಲ್ ಆರ್ಟ್ ತಗ್ಙರು, ಗಣೇಶ ಸ್ಟಿಕರ್ ಬಳಸಿ ಹೊಸಾ ನೈಲ್ ಆರ್ಟ್ ಟ್ರೆಂಡ್ ಮಾಡಿದ್ದಾರೆ.

ಮಕ್ಕಳು, ಕಾಲೇಜು ಕನ್ಯೆಯರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಒಪ್ಪುವಂತಿದ್ದು, ಮಾರುಕಟ್ಟೆಯಲ್ಲಿ ಈ ಗಣೇಶ ನೈಲ್ ಆರ್ಟ್ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ. ನಿಮ್ಮ ಫೇವರಿಟ್ ನೈಲ್ ಕಲರ್ಗೆ ಮ್ಯಾಚ್ ಆಗುವ ಗಣೇಶ ಸ್ಟಿಕರ್ ಬಳಸಿ ಗಣೇಶ ಚತುರ್ಥಿ ಸಂಭ್ರಮ ಕ್ಕೆ ನಿಮ್ಮ ಕ್ರಿಯಾತ್ಮಕತೆಯ ಲೇಪನ ನೀಡಿ.

ಕೇವಲ ಸ್ಟಿಕರ್ಗಷ್ಟೇ ಸೀಮಿತವಾಗಿರದೆ, ನೈಲ್ ಆರ್ಟ್ ಪೆನ್ ಮೂಲಕ, ವಿಫ್ನ ನಿವಾರಕ  ಗಣೇಶನ ಹಲವಾರು ಭಂಗಿಗಳಲನ್ನು ಕಣ್ಣು ಕೋರೈಸುವ ರೀತಿಯಲ್ಲಿ ರಚಿಸಲಾಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಕ್ಷಮೆಯ ಹಬ್ಬ- ಪರ್ಯುಶನ್ ಪರ್ವ

Published

on

ಯಾರೂ ಪರಿಪೂರ್ಣರಲ್ಲ” ಎಂಬುದು ಬಹಳ ಹಳೆಯ ಮಾತು ಮತ್ತು ಈ ಭೂಮಿಯಲ್ಲಿರುವ ಎಲ್ಲರಿಗೂ ಅನ್ವಯಿಸುತ್ತದೆ. ಪ್ರತಿಯೊಂದು ಪ್ರಾಣಿಯು ಕೆಲವು ತಪ್ಪುಗಳನ್ನು ಮಾಡುತ್ತದೆ ಆದರೆ, ಅವರನ್ನು ಕ್ಷಮಿಸುವ ಒಂದು ಮಹಾಶಕ್ತಿ ಬೇಕು, ಅದು ಅವರ ಜೀವನವನ್ನು ಸರಿಯಾದ ಹಾದಿಯಲ್ಲಿ ಸಾಗಿಸಲು ಮತ್ತೊಂದು ಅವಕಾಶವನ್ನು ನೀಡುತ್ತದೆ. ನಾವು, ಮಾನವರು ತಪ್ಪುಗಳನ್ನು ಮಾಡುವ ಸಾಧ್ಯತೆ ಹೆಚ್ಚು. ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಿಂದ ನಾವು ಇತರರನ್ನು ನೋಯಿಸುತ್ತೇವೆ. ನಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗಿನ ವಿವಾದಗಳಿಗೆ ಕಾರಣವಾಗುವ ಮತ್ತೊಂದು ಕಾರಣವೆಂದರೆ ಸ್ವಯಂ ಪ್ರಜ್ಞೆ. ಸ್ವಯಂ ಪ್ರಜ್ಞೆಯು ಕ್ಷಮೆಯನ್ನು ಕೇಳುವುದರಿಂದ ಮತ್ತು ಇತರರನ್ನು ಕ್ಷಮಿಸುವುದರಿಂದ ನಮ್ಮನ್ನು ಹಿಡಿದಿಡುತ್ತದೆ.

ಪರ್ಯುಶನ್ ಪರ್ವವನ್ನು ಪ್ರತಿವರ್ಷ ಜೈನ ಸಮುದಾಯದ ಸದಸ್ಯರು ಆಧ್ಯಾತ್ಮಿಕ ಉನ್ನತಿ ಮತ್ತು ಸ್ವಯಂ ಶುದ್ಧೀಕರಣಕ್ಕಾಗಿ ಆಚರಿಸುತ್ತಾರೆ. ಈ ಹಬ್ಬವು ಅವರ ಇಡೀ ವರ್ಷದ ಅತ್ಯಂತ ಪವಿತ್ರ ಹಬ್ಬವಾಗಿದೆ. ಇನ್ನಷ್ಟು ತಿಳಿಯಲು ಮುಂದೆ ಓದಿ.

*“ಸಂವತ್ಸರಿ”* ಎಂಬುದು ಕ್ಷಮೆಯ ಹಬ್ಬವಾಗಿದೆ, ಇದನ್ನು ಜೈನರು ಪರ್ಯೂಷನ ಕೊನೆಯ ದಿನದಂದು ಆಚರಿಸುತ್ತಾರೆ. ಈ ದಿನವು ‘ಸಂವತ್ಸರ್ / ಪರಿಯುಶನ್’ ಧಾರ್ಮಿಕ ಅವಧಿಯ ನಂತರ ಬರುತ್ತದೆ. ‘ಸಂವತ್ಸರ್’ ಅವಧಿಯು 50 ದಿನಗಳ ನಂತರ ಮತ್ತು ಚತುರ್ಮಾಸ್ [ನಾಲ್ಕು ತಿಂಗಳ] ಅವಧಿ ಮುಗಿಯುವ 70 ದಿನಗಳ ಮೊದಲು ಬರುತ್ತದೆ. ಕೆಲವೊಮ್ಮೆ ‘ಸಂವತ್ಸರ್’ 49 ದಿನಗಳ ನಂತರ ಮತ್ತು ‘ಚತುರ್ಮಾಸ್’ ಮುಚ್ಚುವ 71 ದಿನಗಳ ಮೊದಲು ಬದಲಾಗಬಹುದು.

ಶ್ವೇತಾಂಬರ್ ಜೈನರು ಎಂಟು ದಿನಗಳ ಅವಧಿಯಲ್ಲಿ ಪರಿಯುಶನ್ ಪರ್ವವನ್ನು ಆಚರಿಸುತ್ತಾರೆ ಮತ್ತು ಕೊನೆಯ ದಿನವನ್ನು “ಸಂವತ್ಸರಿ” ಎಂದು ಆಚರಿಸಲಾಗುತ್ತದೆ. ಜೈನರು ಈ ಶುಭ ದಿನದಂದು ವಿಶ್ವದ ಎಲ್ಲಾ ಜೀವಿಗಳಿಂದ ಕ್ಷಮೆ ಕೋರುತ್ತಾರೆ, ಅವರ ಆಲೋಚನೆಗಳಿಂದಾಗಲಿ, ಪದಗಳು ಅಥವಾ ಕ್ರಿಯೆಗಳಿಂದ ಆದ ತಪ್ಪುಗಳಿಗೆ *“ಮಿಚಾಮಿ ದುಕ್ಕಡಮ್”* ಎಂಬ ಮಾತನ್ನು ಉಚ್ಚರಿಸುವ ಮೂಲಕ ಕ್ಷಮೆ ಕೋರುತ್ತಾರೆ . “ಮಿಚಾಮಿ ದುಕ್ಕಡಮ್” ಎಂಬುದು ಪ್ರಾಚೀನ ಪ್ರಕೃತಿ ನುಡಿಗಟ್ಟು, ಇದರ ಅರ್ಥ “ನಾನು ನಿಮ್ಮ ಕ್ಷಮೆ ಯಾಚಿಸುತ್ತೇನೆ”. ಜನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡಿ “ಮಿಚಾಮಿ ದುಕ್ಕಡಮ್” ಹೇಳುತ್ತಾರೆ ಮತ್ತು “ಸಂವತ್ಸರಿ” ಯ ಈ ದಿನವನ್ನು ಯಾವುದೇ ಖಾಸಗಿ ವಿವಾದ ಅಥವಾ ಜಗಳವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ.

ಭಗವಾನ್ ಮಹಾವೀರರು ಹೇಳಿದ್ದಾರೆ

*खामेमि सव्वे जीवा, सव्वे जीवा खमंतु मे।*
*मित्तिमे सव्व भुएस्‌ वैरं ममझं न केणई।*

– ಅಂದರೆ, ನನಗೆ ಎಲ್ಲ ಜೀವಿಗಳೊಂದಿಗೆ ಸ್ನೇಹವಿದೆ, ನಾನು ಯಾರನ್ನೂ ದ್ವೇಷಿಸುವುದಿಲ್ಲ. ಈ ವಾಕ್ಯ ಸಹಜವಾಗಿ ಸಾಂಪ್ರದಾಯಿಕವಾಗಿದೆ, ಆದರೆ ವಿಶೇಷ ಉದ್ದೇಶವನ್ನು ಹೊಂದಿದೆ. ಇದರ ಪ್ರಕಾರ, ಕ್ಷಮೆಯಾಚಿಸುವುದಕ್ಕಿಂತ ಕ್ಷಮೆ ಮುಖ್ಯವಾಗಿದೆ.
ಕೊನೆಯಲ್ಲಿ ನಾನು-

‘ಜೈನ ಸಂವತ್ಸರಿಯ ಈ ಧಾರ್ಮಿಕ ಘಟನೆಯ ಕುರಿತು, ನನ್ನ ಕ್ರಿಯೆ, ನನ್ನ ಮಾತು ಅಥವಾ ನನ್ನ ಆಲೋಚನೆಯಿಂದ ನಾನು ನಿಮಗೆ ಯಾವುದೇ ರೀತಿಯಲ್ಲಿ ತಿಳಿದಿದ್ದು ಅಥವಾ ತಿಳಿಯದೆ ನೋಯಿಸಿದ್ದರೆ ನಾನು ಎಲ್ಲದಕ್ಕೂ ಕ್ಷಮೆಯಾಚಿಸುತ್ತೇನೆ – ಮಿಚಾಮಿ ದುಕ್ಕಡಮ್’.

ಮನನ್ ಜೈನ್
ಸರ್ ಎಂ.ವಿ. ಪಿಯು ಕಾಲೇಜು
ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending